Tag: ಕೇವಿನ್ ಪಿಟರ್ಸನ್

  • ಕೊಹ್ಲಿಯನ್ನು ಹಾಡಿಹೊಗಳಿದ ಕೇವಿನ್ ಪೀಟರ್ಸನ್

    ಕೊಹ್ಲಿಯನ್ನು ಹಾಡಿಹೊಗಳಿದ ಕೇವಿನ್ ಪೀಟರ್ಸನ್

    ಮುಂಬೈ: ಈ ಬಾರಿಯ ಐಪಿಎಲ್‍ನಲ್ಲಿ ಆರ್​ಸಿಬಿ ತಂಡದ ನಿರ್ವಹಣೆ ಕಂಡು ಸಂತೋಷಗೊಂಡಿರುವ ಇಂಗ್ಲೆಂಡ್‍ನ ಮಾಜಿ ಆಟಗಾರ ಕೇವಿನ್ ಪೀಟರ್ಸನ್ ಆರ್​ಸಿಬಿ ಕಪ್ತಾನ ವಿರಾಟ್ ಕೊಹ್ಲಿಯನ್ನು ಹಾಡಿಹೊಗಳಿದ್ದಾರೆ.

    ನಿಜಕ್ಕೂ 14ನೇ ಆವೃತ್ತಿ ಐಪಿಎಲ್‍ನಲ್ಲಿ ಆರ್​ಸಿಬಿ ತಂಡದ ನಿರ್ವಹಣೆ ಕಂಡು ಅಚ್ಚರಿಯಾಗಿದೆ. ಅದರಲ್ಲೂ ಬೌಲಿಂಗ್ ಸೈಡ್ ಅಂತೂ ತುಂಬಾನೆ ಬದಲಾವಣೆಯೊಂದಿಗೆ ಬಲಿಷ್ಠವಾಗಿ ಗೋಚರಿಸುತ್ತಿದೆ. ಹಾಗಾಗಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಈ ಕುರಿತು ಮಾಧ್ಯಮವೊಂದರ ಚರ್ಚೆಯಲ್ಲಿ ಭಾಗವಹಿಸಿದ ಪೀರ್ಟಸನ್, ಆರ್​ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ತಂಡದ ನಾಯಕನಾಗಿ ತಂಡವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದು, ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡು ಮುನ್ನುಗುತ್ತಿದ್ದಾರೆ ಹಾಗಾಗಿ ಆಡಿದ ನಾಲ್ಕು ಪಂದ್ಯವನ್ನು ಗೆದ್ದುಕೊಂಡು 8 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ ಎಂದು ಕೊಹ್ಲಿಯ ಪರ ಹೊಗಳಿಕೆಯ ಮಾತನಾಡಿದ್ದಾರೆ.

    ಆರ್​ಸಿಬಿ ತಂಡ ಡೆತ್ ಓವರ್‍ ಗಳಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಎದುರಾಳಿ ತಂಡವನ್ನು ಬಗ್ಗಬಡಿಯುತ್ತಿದೆ. ಪ್ರತಿ ಸೀಸನ್‍ನ್ನು ಗಮನಿಸಿದರು ಕೂಡ ಆರ್​ಸಿಬಿ ತಂಡದ ಬ್ಯಾಟಿಂಗ್ ಲೈನ್ ಅಪ್ ತುಂಬಾ ಬಲಿಷ್ಠವಾಗಿ ಗೋಚರಿಸುತ್ತಿತ್ತು. ಆದರೆ ಈ ಬಾರಿ ಆರ್​ಸಿಬಿ ಬೌಲರ್‍ ಗಳು ಉತ್ತಮ ಪ್ರದರ್ಶನದಿಂದ ಸದ್ದು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಆರ್​ಸಿಬಿ ತಂಡದ ಯುವ ಬೌಲರ್ ಮೊಹಮ್ಮದ್ ಸಿರಾಜ್ ಬಗ್ಗೆ ಮಾತನಾಡಿರುವ ಪೀಟರ್ಸನ್, ಸಿರಾಜ್ ಒಬ್ಬ ವಿಶಿಷ್ಟವಾದ ಬೌಲರ್. ಆವರಿಗೆ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಸಿಕ್ಕಿರುವ ಅನುಭವವನ್ನು ಇದೀಗ ಐಪಿಎಲ್‍ನಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಇವರಿಗೆ ಕೈಲ್ ಜೇಮಿಸನ್ ಉತ್ತಮ ಸಹಾಯಕ ಬೌಲರ್ ಆಗಿದ್ದು, ಹರ್ಷಲ್ ಪಟೇಲ್ ಡೆತ್ ಓವರ್‍ ಗಳಲ್ಲಿ ಮ್ಯಾಜಿಕ್ ಮಾಡುತ್ತಿದ್ದಾರೆ. ಇವರೊಂದಿಗೆ ವಾಷಿಂಗ್ಟನ್ ಸುಂದರ್ ಮತ್ತು ಶಹಬಾಜ್ ಅಹ್ಮದ್ ಕೂಡ ಉತ್ತಮ ಲಯದಲ್ಲಿದ್ದಾರೆ ಎಂದು ಅಭಿಪ್ರಾಯ ಹಂಚಿಕೊಂಡರು.

    ಕೇವಿನ್ ಪೀಟರ್ಸನ್ ಈ ಹಿಂದೆ ಐಪಿಎಲ್‍ನಲ್ಲಿ ಆರ್​ಸಿಬಿ ತಂಡದ ಪರ ಆಟವಾಡಿದ್ದರು. ಹಾಗಾಗಿ ಆರ್​ಸಿಬಿ ತಂಡದ ಕುರಿತು ಸರಿಯಾದ ಮಾಹಿತಿ ಹೊಂದಿರುವ ಪೀಟರ್ಸನ್ ಈ ಬಾರಿಯ ಅವರ ಆಟದ ಕುರಿತು ಮೆಚ್ಚುಗೆ ಸೂಚಿಸಿದ್ದಾರೆ.

  • 250 ರನ್ ಟಾರ್ಗೆಟ್ ಟೀಂ ಇಂಡಿಯಾಗೆ ಕಷ್ಟಸಾಧ್ಯ: ಮೆಕಲಮ್

    250 ರನ್ ಟಾರ್ಗೆಟ್ ಟೀಂ ಇಂಡಿಯಾಗೆ ಕಷ್ಟಸಾಧ್ಯ: ಮೆಕಲಮ್

    ಲಂಡನ್: 2019ರ ವಿಶ್ವಕಪ್ ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಗೆಲ್ಲುವ ಅವಕಾಶ ಹೆಚ್ಚಾಗಿದ್ದು, ಮಳೆಯಿಂದ ಪಂದ್ಯ ಮುಂದೂಡಿರುವ ಪರಿಣಾಮ ಭಾರತಕ್ಕೆ 250 ರನ್ ಗಳ ಗುರಿ ಸಿಗಲಿದೆ ಎಂದು ಕಿವೀಸ್ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ಅಭಿಪ್ರಾಯ ಪಟ್ಟಿದ್ದಾರೆ.

    ಇತ್ತಂಡಗಳ ನಡುವೆ ನಡೆಯುವ ಪಂದ್ಯಗಳಲ್ಲಿ 250 ರನ್ ಗುರಿ ಸಾಧಾರಣ. ಆದರೆ ವಿಶ್ವಕಪ್ ನಂತರ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಈ ಟಾರ್ಗೆಟ್ ಸವಾಲಿನಿಂದ ಇರಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿ ಕೇವಿನ್ ಪೀಟರ್ಸನ್ ಇನ್ನು 250 ರನ್ ಆಗಲಿಲ್ಲ ಎಂದು ಹೇಳಿದ್ದರು.

    https://twitter.com/Bazmccullum/status/1148692701681819651

    ಪೀಟರ್ಸನ್ ಅವರ ಟ್ವೀಟ್ ಮರುಪ್ರತಿಕ್ರಿಯೆ ನೀಡಿರುವ ಮೆಕಲಮ್, ಈ ಬಾರಿಯ ಟೂರ್ನಿಯಲ್ಲಿ ಎರಡು ತಂಡಗಳು (ಭಾರತ, ಬಾಂಗ್ಲಾದೇಶ) ಮಾತ್ರ 250 ಪ್ಲಸ್ ರನ್ ಗುರಿಯನ್ನು ಬೆನ್ನತ್ತಲು ಯಶಸ್ವಿಯಾಗಿದ್ದಾರೆ. ಈ ಎರಡು ತಂಡಗಳಿಗೆ ಆಗ ಸೆಮಿಫೈನಲ್ ಒತ್ತಡ ಇರಲಿಲ್ಲ ಎಂದು ತಂಡಕ್ಕೆ ಬೆಂಬಲ ನೀಡಿದ್ದಾರೆ.

    https://twitter.com/Bazmccullum/status/1148729916650688512

    ಅಂದಹಾಗೇ ಲೀಗ್ ಹಂತದಲ್ಲಿ ಭಾರತ ಮತ್ತು ಬಾಂಗ್ಲಾದೇಶ 250 ಪ್ಲಸ್ ರನ್‍ಗಳನ್ನು ಗುರು ಬೆನ್ನತ್ತಲು ಯಶಸ್ವಿಯಾಗಿದ್ದರು. ವೆಸ್ಟ್ ಇಂಡೀಸ್ ವಿರುದ್ಧ 322 ರನ್ ಹಾಗೂ ಶ್ರೀಲಂಕಾ ತಂಡದ ವಿರುದ್ಧ ಭಾರತ 265 ರನ್ ಳನು ಬೆನತ್ತಿ ಗೆಲುವು ಪಡೆದಿದ್ದರು. ಸದ್ಯ ಮೆಕಲಮ್ ಅಭಿಪ್ರಾಯಕ್ಕೆ ಕೆಲ ವಿಶ್ಲೇಷಕರು ಪ್ರತಿಕ್ರಿಯೆ ನೀಡಿದ್ದು, ಭೌರತಕ್ಕೆ 240 ಪ್ಲಸ್ ರನ್ ಟಾರ್ಗೆಟ್ ಲಭಿಸಿದರೆ ಗುರಿ ಬೆನ್ನಟ್ಟುವುದು ಕಷ್ಟಸಾಧ್ಯ ಎಂದಿದ್ದಾರೆ.