Tag: ಕೇರಳ

  • 3 ವರ್ಷಗಳ ಬಳಿಕ ಮತ್ತೆ ವಕ್ಕರಿಸಿದ ಕೊರೊನಾ – ದೇಶದ ಹಲವು ರಾಜ್ಯಗಳಲ್ಲಿ JN1 ಎಂಟ್ರಿ

    3 ವರ್ಷಗಳ ಬಳಿಕ ಮತ್ತೆ ವಕ್ಕರಿಸಿದ ಕೊರೊನಾ – ದೇಶದ ಹಲವು ರಾಜ್ಯಗಳಲ್ಲಿ JN1 ಎಂಟ್ರಿ

    – ದೇಶಾದ್ಯಂತ 398 ಕೇಸ್, ಕೇರಳವೊಂದರಲ್ಲೇ 273 ಪ್ರಕರಣ ದಾಖಲು
    – ಬೆಳಗಾವಿಯಲ್ಲಿ 25 ವರ್ಷದ ಗರ್ಭಿಣಿಗೆ ಸೋಂಕು

    ಬೆಂಗಳೂರು/ನವದೆಹಲಿ: 2020-2022ರ ಅವಧಿಯಲ್ಲಿ ಇಡೀ ಮನುಕುಲವನ್ನೇ ಅಲ್ಲೋಲ ಕಲ್ಲೋಲ ಮಾಡಿ ಮರಣ ಮೃದಂಗ ಬಾರಿಸಿದ್ದ ಕೊರೊನಾ ಸೋಂಕು ಮೂರು ವರ್ಷಗಳ ಮತ್ತೆ ದೇಶಕ್ಕೆ ಕಾಲಿಟ್ಟಿದೆ. ಇಡೀ ವಿಶ್ವವನ್ನೇ ತತ್ತರಿಸುವಂತೆ ಮಾಡಿದ್ದ ಕಣ್ಣಿಗೆ ಕಾಣದ ವೈರಸ್ ಮತ್ತೆ ದಾಂಗುಡಿ ಇಡ್ತಿದೆ. 2022ರಲ್ಲಿ ಕೊನೇದಾಗಿ ಕಾಣಿಸಿಕೊಂಡಿದ್ದ ಒಮಿಕ್ರಾನ್ ತಳಿಯ ಜೆಎನ್.1 ಪ್ರಭೇದ ಹೊಸ ಇನ್ನಿಂಗ್ಸ್ ಶುರು ಮಾಡಿದೆ.

    ಜೆಎನ್1 ಉಪ ತಳಿಗಳಾದ ಎನ್‌ಬಿ.1.8.1 ಮತ್ತು ಎಲ್‌ಎಫ್.7 ತಳಿಗಳ ಕಾಟ ಶುರು ಹಚ್ಚಿಕೊಂಡಿದೆ. ಸಿಂಗಪೂರ್‌, ಹಾಂಕಾಂಗ್, ಥೈಲ್ಯಾಂಡ್‌ ಸೇರಿ ದಕ್ಷಿಣ ಏಷ್ಯಾದಲ್ಲಿ ಕಾಣಿಸಿಕೊಂಡಿರುವ ವೈರಾಣು ಭಾರತಕ್ಕೂ ಎಂಟ್ರಿ ಕೊಟ್ಟಿದೆ. ದೇಶದ ಹಲವು ರಾಜ್ಯಗಳಲ್ಲಿ ನಿಧಾನಗತಿಯಲ್ಲಿ ಏರುತ್ತಿದೆ. ಕರ್ನಾಟಕದಲ್ಲಿ ಒಟ್ಟು 35 ಕೋವಿಡ್ ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನಲ್ಲೇ 32 ಆ್ಯಕ್ಟಿವ್ ಕೇಸ್ ಇವೆ. 9 ತಿಂಗಳ ಮಗು ಸೇರಿ 3 ಮಕ್ಕಳಿಗೆ ಪಾಸಿಟಿವ್ ಪತ್ತೆಯಾಗಿದೆ. ಇದರಿಂದ ಮತ್ತೆ ಟೆಸ್ಟಿಂಗ್.. ಮಾಸ್ಕ್, ಐಸೋಲೇಷನ್ ಇತರ ಕೋವಿಡ್‌ ನಿಯಮಗಳು ಶುರುವಾಗಿದೆ.

    ದೇಶದಲ್ಲಿ ಕೋವಿಡ್ ಪ್ರಕರಣ ಮತ್ತೆ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ ಕೂಡ ಅಲರ್ಟ್ ಆಗಿದೆ. ಜನಸಂದಣಿ ಪ್ರದೇಶಗಳಲ್ಲಿ ಮಾಸ್ಕ್ ಧರಿಸಲು ಸೂಚನೆ ನೀಡಿದೆ. ಸೋಮವಾರದಿಂದ ಕೋವಿಡ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಜೊತೆಗೆ ಆತಂಕ ಬೇಡ, ಎಚ್ಚರಿಕೆ ಇರಲಿ ಎಂದು ಸಾರ್ವಜನಿಕರಿಗೆ ಅಭಯ ನೀಡಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮಾಸ್ಕ್ ಧರಿಸಿಯೇ ಜನತಾ ದರ್ಶನ ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯದೆಲ್ಲೆಡೆ ಮೇ 24ರಿಂದ 28ರವೆರೆಗೆ ಭಾರೀ ಮಳೆ ಎಚ್ಚರಿಕೆ

    ಇದೀಗ ಓಮಿಕ್ರಾನ್‌ ತಳಿಯ ಜೆಎನ್‌1 ಪ್ರಭೇಡ ಕಾಣಿಸಿಕೊಂಡಿದ್ದು, ಎನ್‌ಬಿ.1.8.1 & ಎಲ್‌ಎಫ್.7 ಇದರ ಉಪತಳಿ ಆಗಿದೆ. ಕಳೆದ ಏಪ್ರಿಲ್‌ನಲ್ಲಿ ಎನ್‌ಬಿ.1.8.1 ತಮಿಳುನಾಡಿನಲ್ಲಿ ಪತ್ತೆಯಾಗಿತ್ತು. ಗುಜರಾತ್‌ನಲ್ಲಿ 4 ಎಲ್‌ಎಫ್.7 ಇದೇ ಮೇ ತಿಂಗಳಲ್ಲಿ ಪತ್ತೆಯಾಗಿತ್ತು. ಇದನ್ನೂ ಓದಿ: ಸಾವಿರ ಕೋಟಿ ಲಾಭ ಮಾಡೋ ಉದ್ದೇಶವಿದೆ – ತಮನ್ನಾ ಆಯ್ಕೆಗೆ ಪ್ರಿಯಾಂಕ್‌ ಖರ್ಗೆ ಸಮರ್ಥನೆ

    ಲಕ್ಷಣಗಳೇನು?
    ಜ್ವರ, ನೆಗಡಿ, ಕೆಮ್ಮು, ಆಯಾಸ, ತಲೆನೋವು, ಕೆಲವರಿಗೆ ಉಸಿರಾಟದ ತೊಂದರೆ. ಇದನ್ನೂ ಓದಿ: ವಿಧಾನಸೌಧ ಗೈಡೆಡ್ ಟೂರ್‌ಗೆ ಭಾನುವಾರ ಚಾಲನೆ – ಜೂ.1ರಿಂದ ಸಾರ್ವಜನಿಕರಿಗೆ ಪ್ರವೇಶ, ಶುಲ್ಕ ಪ್ರಕಟ

    ಭಾನುವಾರದಿಂದಲೇ ರಾಜ್ಯದಲ್ಲಿ ಕೊವಿಡ್ ಟೆಸ್ಟ್ ಶುರು:
    ಕೋವಿಡ್‌ ಕಾಣಿಸಿಕೊಂಡ ಹಿನ್ನೆಲೆ ಅಲರ್ಟ್‌ ಆಗಿರುವ ರಾಜ್ಯ ಸರ್ಕಾರ ವೈದ್ಯಕೀಯ ಕಾಲೇಜು ಜಿಲ್ಲಾಸ್ಪತ್ರೆಗಳಲ್ಲಿ ಭಾನುವಾರದಿಂದಲೇ ಟೆಸ್ಟಿಂಗ್‌ ಶುರು ಮಾಡಲು ಮುಂದಾಗಿದೆ. ಜೊತೆಗೆ 8 RTPCR ಟೆಸ್ಟಿಂಗ್‌ ಲ್ಯಾಬ್‌ ತೆರೆಯಲು ನಿರ್ಧರಿಸಿದೆ. ಜನದಟ್ಟಣೆ ಪ್ರದೇಶದಲ್ಲಿ ಜನರು, ಗರ್ಭಿಣಿಯರು, ಕಾಯಿಲೆ ಇರೋರು ಮಾಸ್ಕ್ ಧರಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ. ಐಎಲ್‌ಐ, ಸ್ಯಾರಿ ಲಕ್ಷಣ ಇದ್ದವ್ರು ಸೂಕ್ತ ಚಿಕಿತ್ಸೆ ಪಡೆಯುವಂತೆ ಸೂಚನೆ ನೀಡಿದ್ದು, ಸ್ಯಾನಿಟೈಸರ್‌ ಬಳಸುವಂತೆ ಎಚ್ಚರಿಕೆ ನೀಢಿದೆ. ಇದನ್ನೂ ಓದಿ: 25,000 ರೂ.ಗೆ ಜೀತಕ್ಕಿರಿಸಿದ್ದ ಮಗ ಸಾವು – ರಹಸ್ಯವಾಗಿ ಸಮಾಧಿಯಲ್ಲಿ ಹೂತಿಟ್ಟಿದ್ದ ಮಾಲೀಕ ಅರೆಸ್ಟ್‌

    ಬೆಳಗಾವಿಯಲ್ಲಿ ಗರ್ಭಿಣಿಗೆ ಕೊರೊನಾ:
    ರಾಜ್ಯದ ಬೆಳಗಾವಿ ಜಿಲ್ಲೆಗೂ ಕೊರೊನಾ ಕಾಲಿಟ್ಟಿದ್ದು, 25 ವರ್ಷದ ಗರ್ಭಿಣಿಯಲ್ಲಿ ವೈರಸ್ ಕಾಣಿಸಿಕೊಂಡಿದೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಗರ್ಭಿಣಿಯನ್ನ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ ಅಂತ ಬೆಳಗಾವಿ ಡಿಎಚ್‌ಒ ಡಾ.ಈಶ್ವರ್ ಗಡಾದಿ ಮಾಹಿತಿ ನೀಡಿದ್ದಾರೆ. ಇನ್ನು ಕೊರೊನಾ ಕಾಣಿಸಿಕೊಂಡ ಹಿನ್ನೆಲೆ ಬಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ಪ್ರತ್ಯೇಕ 10 ಬೆಡ್‌ಗಳ ವಾರ್ಡ್ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಮವಾರದಿಂದ ಕೋವಿಡ್ ಪರೀಕ್ಷೆ ಆರಂಭಿಸಲು ಮುಂದಾಗಿದ್ದಾರೆ.

    ಕೇರಳದಲ್ಲಿ ಅತಿಹೆಚ್ಚು 273 ಕೇಸ್‌ ಪತ್ತೆ:
    ದಕ್ಷಿಣ ಏಷ್ಯಾದ ದೇಶಗಳಲ್ಲಿ ಕೊರೊನಾ ವೈರಸ್‌ನ ಉಪತಳಿ ಪತ್ತೆಯಾಗಿದ್ದು, ವೈರಾಣು ಭಾರತಕ್ಕೂ ಲಗ್ಗೆ ಇಟ್ಟಿದೆ. ದೇಶಾದ್ಯಂತ 398 ಕೇಸ್ ದಾಖಲಾಗಿದೆ. ಕೇರಳ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಹೆಚ್ಚು ಕೇಸ್ ಪತ್ತೆ ಆಗ್ತಿವೆ. ಪಕ್ಕದ ಕೇರಳದಲ್ಲಿ ಅತಿಹೆಚ್ಚು 273 ಪ್ರಕರಣಗಳು ಪತ್ತೆ ಆಗಿವೆ. ರಾಷ್ಟ್ರ ರಾಜಧಾನಿ ದೆಹಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಅಲರ್ಟ್ ಆಗಿವೆ. ಹೊಸ ವೇರಿಯಂಟ್ ಎದುರಿಸಲು ಮುಂಜಾಗ್ರತಾ ಕ್ರಮ ವಹಿಸಲು ಸಜ್ಜಾಗ್ತಿವೆ. ಕೇಂದ್ರ ಆರೋಗ್ಯ ಸಚಿವಾಲಯ ಪರಿಸ್ಥಿತಿ ಮೇಲೆ ನಿಗಾ ಇಟ್ಟಿದೆ. ಆಂಧ್ರಪ್ರದೇಶ, ದೆಹಲಿ ಸರ್ಕಾರ ಆಸ್ಪತ್ರೆಗಳಲ್ಲಿ ಬೆಡ್ ಸಜ್ಜುಗೊಳಿಸುವಂತೆ ಸೂಚಿಸಿದೆ.

  • ಈ ಬಾರಿ 1 ವಾರ ಮೊದಲೇ ರಾಜ್ಯಕ್ಕೆ ಮುಂಗಾರು ಪ್ರವೇಶ?

    ಈ ಬಾರಿ 1 ವಾರ ಮೊದಲೇ ರಾಜ್ಯಕ್ಕೆ ಮುಂಗಾರು ಪ್ರವೇಶ?

    ಬೆಂಗಳೂರು: 16 ವರ್ಷದಲ್ಲೇ ಮೊದಲ ಬಾರಿಗೆ ಅವಧಿಗೂ ಮುನ್ನ ಮುಂಗಾರು ಮಳೆ (Mansoon Rain) ರಾಜ್ಯವನ್ನು ಪ್ರವೇಶಿಸಲಿದೆ. ಈ ಬಾರಿ ಐದಾರು ದಿನ ಮುಂಚೆಯೇ ಅಂದರೆ ಮೇ 27ಕ್ಕೆ ಕೇರಳಕ್ಕೆ (Kerala) ಮುಂಗಾರು ಪ್ರವೇಶಿಸಲಿದ್ದು, ಕರ್ನಾಟಕಕ್ಕೆ (Karnataka) ಮೇ 30 ಅಥವಾ 31ಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಈ ಮೊದಲು 2009ರಲ್ಲಿ ಮೇ 23 ರಂದು ಮುಂಗಾರು ಮಾರುತಗಳು ಕೇರಳ ಪ್ರವೇಶಿಸಿತ್ತು. ಅದಾಗಿ 16 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಈ ಬಾರಿ ಮೇ 27ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ. ಮುಂಗಾರು ಸಾಮಾನ್ಯವಾಗಿ ಜೂನ್ 1ರ ಬಳಿಕ ಕೇರಳಕ್ಕೆ ಆಗಮಿಸುತ್ತಿತ್ತು. ಈ ಬಾರಿ ಅದಕ್ಕಿಂತಲೂ ನಾಲ್ಕು ದಿನ ಮುಂಚಿತವಾಗಿ ಎಂಟ್ರಿ ಕೊಡಲಿದೆ. ಹೀಗಾಗಿ ಈ ಸಲದ ಖಾರಿಫ್ ಬಿತ್ತನೆಯ ಋತುವಿನ ಮೇಲೆ ಒಳ್ಳೆಯ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. 2024ರಲ್ಲಿ ಕರ್ನಾಟಕಕ್ಕೆ ಜೂನ್ 4ರಂದು ಮುಂಗಾರು ಪ್ರವೇಶ ಆಗಿತ್ತು. ಈ ಬಾರಿ ಕೇರಳಕ್ಕೆ ಮೇ 27ಕ್ಕೆ ಆಗಮಿಸುತ್ತಿದ್ದು, ಕರ್ನಾಟಕಕ್ಕೆ ಮೇ 30 ಅಥವಾ 31ಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಕನ್ನಡದ ಸಾಹಿತಿ ಬಾನು ಮುಷ್ತಾಕ್‌ ಅವರ ಕೃತಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ

    2009ರಲ್ಲಿ ಮುಂಗಾರು ಪ್ರವೇಶ ಅತ್ಯಂತ ವೇಗವಾಗಿ ಬಂದ ಮಾನ್ಸೂನ್ ಆಗಿತ್ತು. ಅಲ್ಲದೇ ಆ ವರ್ಷ ಕರ್ನಾಟಕದಲ್ಲಿ ಉತ್ತಮ ಮಳೆಯಾಗಿತ್ತು. ಈ ಬಾರಿಯೂ ಶೀಘ್ರ ಮುಂಗಾರು ಪ್ರವೇಶಿಸಲಿದ್ದು, ಈ ಸಲವೂ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ವಾಡಿಕೆ ಅವಧಿಗಿಂತ ಮೊದಲೇ ಬೇಗ ಮುಂಗಾರು ಆಗಮನವಾದರೆ ಅತ್ಯಧಿಕ ಮಳೆ ದಾಖಲಾಗುವ ಸಂಭವವಿದೆ. ಈ ಬಾರಿಯೂ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: BBMP ವ್ಯಾಪ್ತಿಯಲ್ಲಿನ ಕಾಮಗಾರಿಗಳ ಹಣ ಬಿಡುಗಡೆಗೆ ಆದೇಶ

    ಈ ಬಾರಿ ಹಿಂದಿನ ವರ್ಷಗಳಿಗಿಂತ ಮಳೆಯ ಅಬ್ಬರ ಹೆಚ್ಚಿರಲಿದೆ. ಜೂನ್-ಸೆಪ್ಟೆಂಬರ್‌ವರೆಗೆ ನಾಲ್ಕು ತಿಂಗಳು ಮುಂಗಾರು ಋತುವಿನಲ್ಲಿ ಹೆಚ್ಚಿನ ಮಳೆಯಾಗಲಿದೆ. ಈ ಬಾರಿ ಸರಾಸರಿ 87 ಸೆಂ.ಮೀ. ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ತಿಳಿಸಿದೆ. ಇದನ್ನೂ ಓದಿ: IPL 2025 | ಮೋದಿ ಸ್ಟೇಡಿಯಂನಲ್ಲೇ ಫೈನಲ್‌ ಮ್ಯಾಚ್‌

  • Wayanad | ರೆಸಾರ್ಟ್‌ನಲ್ಲಿ ತಾತ್ಕಾಲಿಕ ಟೆಂಟ್ ಕುಸಿದು ಟೂರಿಸ್ಟ್ ಯುವತಿ ಸಾವು

    Wayanad | ರೆಸಾರ್ಟ್‌ನಲ್ಲಿ ತಾತ್ಕಾಲಿಕ ಟೆಂಟ್ ಕುಸಿದು ಟೂರಿಸ್ಟ್ ಯುವತಿ ಸಾವು

    – ಮೂವರು ಪ್ರವಾಸಿಗರಿಗೆ ಗಾಯ

    ತಿರುವನಂತಪುರ: ತಾತ್ಕಾಲಿಕ ಟೆಂಟ್ (Makeshift Tent) ಕುಸಿದು 24 ವರ್ಷದ ಯುವತಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಕೇರಳದ (Kerala) ವಯನಾಡ್ (Wayanad) ಜಿಲ್ಲೆಯ ಜನಪ್ರಿಯ ರೆಸಾರ್ಟ್‌ವೊಂದರಲ್ಲಿ ನಡೆದಿದೆ.

    ಮೆಪ್ಪಾಡಿಯಲ್ಲಿರುವ 900 ಕಂಡಿ ಇಕೋಪಾರ್ಕ್ ಎಂಬ ರೆಸಾರ್ಟ್‌ನಲ್ಲಿ ಬುಧವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಮೃತ ಯುವತಿಯನ್ನು ಮಲಪ್ಪುರಂ ಜಿಲ್ಲೆಯ ನಿಲಂಬೂರ್ ಬಳಿಯ ಅಕಂಪಡಂ ಮೂಲದ ನಿಶ್ಮಾ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಮಂಗಳೂರಿನಿಂದ ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಸರಕು ಹಡಗು ಮುಳುಗಡೆ – 6 ಮಂದಿ ರಕ್ಷಣೆ

    ಮರದ ಕಂಬಗಳು ಮತ್ತು ಒಣ ಹುಲ್ಲನ್ನು ಬಳಸಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಟೆಂಟ್ ನಾಲ್ವರು ಪ್ರವಾಸಿಗರ ಮೇಲೆ ಬಿದ್ದಿದೆ. ಘಟನೆಯಲ್ಲಿ ಯುವತಿ ನಿಶ್ಮಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಗಾಯಗೊಂಡ ಮೂವರು ಪ್ರವಾಸಿಗರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.‌ ಇದನ್ನೂ ಓದಿ: ಮೊದಲು ಉಗ್ರರನ್ನು ಹಸ್ತಾಂತರಿಸಿ – ಪಾಕ್‌ನ ಸಿಂಧೂ ನದಿ ಒಪ್ಪಂದ ಮನವಿಗೆ ಜೈಶಂಕರ್‌ ಮಾತು

  • ಶಬರಿಮಲೆಗೆ ಭೇಟಿ ನೀಡಲಿದ್ದಾರೆ ರಾಷ್ಟ್ರಪತಿ ದ್ರೌಪದಿ ಮುರ್ಮು

    ಶಬರಿಮಲೆಗೆ ಭೇಟಿ ನೀಡಲಿದ್ದಾರೆ ರಾಷ್ಟ್ರಪತಿ ದ್ರೌಪದಿ ಮುರ್ಮು

    – ರಾಷ್ಟ್ರಪತಿಯೊಬ್ಬರು ಶಬರಿಮಲೆಗೆ ಭೇಟಿ ನೀಡುತ್ತಿರುವುದು ಇದೇ ಮೊದಲು

    ತಿರುವನಂತಪುರ: ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಅವರು ಮೇ 19ರಂದು ಕೇರಳದಲ್ಲಿರುವ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ(Sabarimala Ayyappa Temple) ಭೇಟಿ ನೀಡುವ ಮೂಲಕ ಭಾರತದ ಮೊದಲ ಹಾಲಿ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

    ಮೇ 18ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕೇರಳಕ್ಕೆ(Kerala) ಆಗಮಿಸಲಿದ್ದು, ಬಳಿಕ ಕೊಟ್ಟಾಯಂ ಜಿಲ್ಲೆಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 19ರಂದು ಬೆಳಗ್ಗೆ ಶಬರಿಮಲೆಯ ಬಳಿಯಿರುವ ನೀಲಕ್ಕಲ್ ಹೆಲಿಪ್ಯಾಡ್‌ಗೆ ಬಂದಿಳಿಯಲಿದ್ದು, ಬಳಿಕ ಪಂಪಾ ಬೇಸ್ ಕ್ಯಾಂಪ್‌ಗೆ ತೆರಳಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನ 33 ಜಡ್ಜ್‌ ಪೈಕಿ 21 ಮಂದಿಯ ಆಸ್ತಿ ಬಹಿರಂಗ

    ಪಂಪಾ ಬೇಸ್ ಕ್ಯಾಂಪ್‌ನಿಂದ ದೇವಾಲಯಕ್ಕೆ ತೆರಳುವ ಪ್ರಯಾಣ ವಿಧಾನದ ಕುರಿತು ಅಂತಿಮ ನಿರ್ಧಾರವನ್ನು ಭದ್ರತಾ ವ್ಯವಸ್ಥೆಯ ವಿಶೇಷ ರಕ್ಷಣಾ ಗುಂಪು ತೆಗೆದುಕೊಳ್ಳಲಿದೆ. ರಾಷ್ಟ್ರಪತಿಯೊಬ್ಬರು ಶಬರಿಮಲೆ ದೇಗುಲಕ್ಕೆ ಭೇಟಿ ನೀಡಲು ನಿರ್ಧರಿಸಿದ್ದು ಇದೇ ಮೊದಲು ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ತಿಳಿಸಿದರು. ಇದನ್ನೂ ಓದಿ: ಕಾಶ್ಮೀರದಲ್ಲಿ ಮದ್ದುಗುಂಡುಗಳ ಸಹಿತ ಇಬ್ಬರು ಉಗ್ರರು ಅರೆಸ್ಟ್‌

    ರಾಷ್ಟ್ರಪತಿ ಅವರ ಭೇಟಿಯ ಬಗ್ಗೆ ಕೆಲವು ವಾರಗಳಿಂದ ಗಾಳಿ ಸುದ್ದಿ ಹರಿದಾಡುತ್ತಿದ್ದವು. ಅಧಿಕೃತ ಮಾಹಿತಿ ಬಂದ ನಂತರ ಮುಖ್ಯಮಂತ್ರಿ ಪಿಣರಾಯಿ ವಿಜಯನ್(Pinarayi Vijayan) ಅವರು ಸಭೆಯನ್ನು ಕರೆಯಲಿದ್ದಾರೆ. ಅಲ್ಲದೇ ನಾವು ದೇವಾಲಯಕ್ಕೆ ತೆರಳುವ ರಸ್ತೆಯ ತುರ್ತು ದುರಸ್ತಿ ಹಾಗೂ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ ಎಂದು ರಾಷ್ಟ್ರಪತಿ ಭೇಟಿಯ ಕುರಿತು ಬಹಿರಂಗಪಡಿಸಿದರು.

  • ರೇಬೀಸ್‌ ಲಸಿಕೆ ಪಡೆದರೂ ಬದುಕಲಿಲ್ಲ 7 ವರ್ಷದ ಬಾಲಕಿ

    ರೇಬೀಸ್‌ ಲಸಿಕೆ ಪಡೆದರೂ ಬದುಕಲಿಲ್ಲ 7 ವರ್ಷದ ಬಾಲಕಿ

    ತಿರುವನಂತಪುರಂ: ರೇಬೀಸ್ (Rabies) ಲಸಿಕೆ ಪಡೆದರೂ ಚಿಕಿತ್ಸೆ ಪಡೆಯುತ್ತಿದ್ದ ಏಳು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಕೇರಳದಲ್ಲಿ  (Kerala) ನಡೆದಿದೆ.

    ಕೊಲ್ಲಂನ ಕುನ್ನಿಕೋಡ್‌ನ ನಿಯಾ ಫೈಸಲ್‌ ಮೃತ ಬಾಲಕಿ. ರೇಬೀಸ್‌ ಪತ್ತೆಯಾದ ಬಳಿಕ ಆಕೆಯನ್ನು ವೆಂಟಿಲೇಟರ್‌ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಈ ಸಾವಿನೊಂದಿಗೆ ಕಳೆದ ಒಂದು ತಿಂಗಳೊಳಗೆ ಕೇರಳದಲ್ಲಿ ರೇಬೀಸ್ ಸೋಂಕಿನಿಂದ ಸಾವನ್ನಪ್ಪಿದ ಮಕ್ಕಳ ಸಂಖ್ಯೆ ಮೂರಕ್ಕೆ ಏರಿದೆ.

    ಏಪ್ರಿಲ್ 8 ರಂದು ಬಾಲಕಿ ಅಂಗಳದಲ್ಲಿ ಆಟವಾಡುತ್ತಿದ್ದಾಗ ಬೀದಿ ನಾಯಿ ಕಚ್ಚಿತ್ತು. ಅಂಗಳದಲ್ಲಿದ್ದ ಬಾತುಕೋಳಿ ಮೇಲೆ ದಾಳಿ ಮಾಡಲು ಮುಂದಾಗಿದ್ದಾಗ ಬಾಲಕಿ ರಕ್ಷಿಸಲು ಹೋಗಿದ್ದಳು. ಈ ವೇಳೆ ನಾಯಿ ಬಾಲಕಿಯ ಮೊಣಕೈಗೆ ಕಚ್ಚಿತ್ತು. ಇದನ್ನೂ ಓದಿ: ಆರ್ಮಿಗೆ ಸೇರೋಕಾಗಿಲ್ಲ ಅಂತ 30ಕ್ಕೂ ಹೆಚ್ಚು ಶ್ವಾನಗಳನ್ನು ದೇಶ ಸೇವೆಗೆ ನೀಡಿದ ಅಧಿಕಾರಿ!

     

    ಬಾಲಕಿಯನ್ನು ಕೂಡಲೇ ವಿಲಕ್ಕುಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ರೇಬೀಸ್ ಲಸಿಕೆಯ (Vaccine) ಮೊದಲ ಡೋಸ್ ನೀಡಲಾಯಿತು. ನಂತರ ಏ.11 ಮತ್ತು 15 ರಂದು ಕ್ರಮವಾಗಿ ಎರಡನೇ ಮತ್ತು ಮೂರನೇ ಡೋಸ್ ನೀಡಲಾಯಿತು. ಅಂತಿಮ ಡೋಸ್ ಅನ್ನು ಮೇ 6 ರಂದು ನೀಡಲು ನಿಗದಿಪಡಿಸಲಾಗಿತ್ತು. ಇದನ್ನೂ ಓದಿ: ಉಗ್ರರಿಗೆ ಆಹಾರ, ಆಶ್ರಯ ನೀಡಿದ್ದ ವ್ಯಕ್ತಿ ನದಿಗೆ ಹಾರಿ ನೀರಿನಲ್ಲಿ ಮುಳುಗಿ ಸಾವು

    ಎರಡನೇ ಡೋಸ್‌ ಪಡೆದ ಕೆಲ ದಿನಗಳಲ್ಲಿ ಆಕೆಗೆ ಜ್ವರ ಬಂದಿದೆ. ನಾಯಿ ಕಚ್ಚಿದ ಮೊಣಕೈಯಲ್ಲಿ ನೋವು ಅನುಭವಿಸಲು ಪ್ರಾರಂಭಿಸಿದಳು. ನಂತರ ಆಕೆಯನ್ನು ಪುನಲೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ವಿಶೇಷ ಆರೈಕೆಗಾಗಿ SAT ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

    ಬಾಲಕಿಯನ್ನು ಕಚ್ಚಿದ್ದ ನಾಯಿಯನ್ನು ಸ್ಥಳೀಯ ನಿವಾಸಿಗಳು ಓಡಿಸಿದ್ದರೂ ಮರುದಿನ ಹತ್ತಿರದ ಹೊಲದಲ್ಲಿ ಅದು ಶವವಾಗಿ ಪತ್ತೆಯಾಗಿತ್ತು.

     

  • ಭಾರತದ ಮೊದಲ ಟ್ರಾನ್ಸ್‌ಶಿಪ್‌ಮೆಂಟ್ ಹಬ್‌ಗೆ ಪ್ರಧಾನಿ ಮೋದಿ ಚಾಲನೆ

    ಭಾರತದ ಮೊದಲ ಟ್ರಾನ್ಸ್‌ಶಿಪ್‌ಮೆಂಟ್ ಹಬ್‌ಗೆ ಪ್ರಧಾನಿ ಮೋದಿ ಚಾಲನೆ

    ತಿರುವನಂತಪುರಂ: ಕೇರಳದ ವಿಳಿಂಜಂ ಬಂದರಿನಲ್ಲಿ ಭಾರತದ ಮೊದಲ ಅಂತಾರಾಷ್ಟ್ರೀಯ ಟ್ರಾನ್ಸ್‌ಶಿಪ್‌ಮೆಂಟ್ ಹಬ್ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಉದ್ಘಾಟಿಸಿದರು.

    ಇದು ಭಾರತದ ಕಡಲ ಉದ್ಯಮಗಳಲ್ಲಿ ಒಂದು ಮೈಲಿಗಲ್ಲಾಗಿದ್ದು, ತಿರುವನಂತಪುರಂನಲ್ಲಿರುವ ಈ ಆಳಸಮುದ್ರದ ಬಂದರು ಭಾರತದ ಮೊದಲ ಮೀಸಲಾದ ಕಂಟೇನರ್ ಟ್ರಾನ್ಸ್‌ಶಿಪ್‌ಮೆಂಟ್ ಕೇಂದ್ರವಾಗಿದೆ. ಇದು ದಕ್ಷಿಣ ರಾಜ್ಯಗಳನ್ನು ಜಾಗತಿಕ ನೌಕಾ ನಕ್ಷೆಯಲ್ಲಿ ಇರಿಸುತ್ತದೆ. ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್ ಸುಮಾರು 8,867 ಕೋಟಿ ರೂ. ವೆಚ್ಚದಲ್ಲಿ, ಸಾರ್ವಜನಿಕ-ಖಾಸಗಿ ಮಾದರಿಯ ಅಡಿಯಲ್ಲಿ ಸರ್ಕಾರದ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದೆ. ಇದು ಜಾಗತಿಕ ಹಡಗು ಮತ್ತು ವ್ಯಾಪಾರ ಮಾರ್ಗಗಳಲ್ಲಿ ಭಾರತದ ಉಪಸ್ಥಿತಿಯನ್ನು ಗಮನಾರ್ಹವಾಗಿ ಹೆಚ್ಚಿಸುವ ನಿರೀಕ್ಷೆಯಿದೆ.ಇದನ್ನೂ ಓದಿ: ಕನ್ನಡಿಗರೇನು ಭಯೋತ್ಪಾದಕರಾ?: ಸೋನು ನಿಗಮ್ ಹೇಳಿಕೆಗೆ ಸಾರಾ ಗೋವಿಂದು ಕಿಡಿ

    ಟ್ರಾನ್ಸ್‌ಶಿಪ್‌ಮೆಂಟ್ ಹಬ್ ಒಂದು ಪ್ರಮುಖ ಬಂದರು, ಅಲ್ಲಿ ಸರಕು ಕಂಟೇನರ್‌ಗಳನ್ನು ಒಂದು ಹಡಗಿನಿಂದ ಇನ್ನೊಂದಕ್ಕೆ ವರ್ಗಾಯಿಸಲಾಗುತ್ತದೆ, ಸಾಮಾನ್ಯವಾಗಿ ಅವುಗಳ ಅಂತಿಮ ಗಮ್ಯಸ್ಥಾನಕ್ಕೆ ಹೋಗುವ ದಾರಿಯಲ್ಲಿ, ದೊಡ್ಡ ಹಡಗುಗಳು ಈ ಆಳವಾದ ನೀರಿನ ಬಂದರುಗಳಲ್ಲಿ ಕಂಟೇನರ್‌ಗಳನ್ನು ಇಳಿಸುತ್ತವೆ ಮತ್ತು ನಂತರ ಸರಕುಗಳನ್ನು ಸಣ್ಣ ಫೀಡರ್ ಹಡಗುಗಳಿಗೆ ಸಾಗಿಸಲಾಗುತ್ತದೆ, ಅವುಗಳನ್ನು ದೊಡ್ಡ ಹಡಗುಗಳನ್ನು ಅಳವಡಿಸಲು ಸಾಧ್ಯವಾಗದ ಪ್ರಾದೇಶಿಕ ಬಂದರುಗಳಿಗೆ ಸಾಗಿಸಲಾಗುತ್ತದೆ.

    ವಿಳಿಂಜಂ ಬಂದರಿನ ಪ್ರಮುಖ ಲಕ್ಷಣಗಳು:
    ಗಾತ್ರ ಮತ್ತು ಸಾಮರ್ಥ್ಯ: 20 ಮೀಟರ್ ಆಳದ ಈ ಬಂದರು ವಿಶ್ವದ ಅತಿದೊಡ್ಡ ಕಂಟೈನರ್ ಹಡಗುಗಳಿಗೆ ಸೇವೆ ಸಲ್ಲಿಸಬಲ್ಲದು. ಮೊದಲ ಹಂತದಲ್ಲಿ 1 ಮಿಲಿಯನ್ ಟಿಇಯು(ಟ್ವೆಂಟಿ-ಫೂಟ್ ಈಕ್ವಿವೆಲೆಂಟ್ ಯೂನಿಟ್) ಸಾಮರ್ಥ್ಯವನ್ನು ಹೊಂದಿದ್ದು, ಪೂರ್ಣಗೊಂಡಾಗ 6.2 ಮಿಲಿಯನ್ ಟಿಇಯು ಸಾಮರ್ಥ್ಯಕ್ಕೆ ಏರಲಿದೆ.

    ಸ್ಥಳದ ಪ್ರಯೋಜನ: ಕೊಲಂಬೋ ಮತ್ತು ಸಿಂಗಾಪುರದಂತಹ ಪ್ರಮುಖ ಟ್ರಾನ್ಸ್ಶಿಪ್‌ಮೆಂಟ್ ಕೇಂದ್ರಗಳಿಗೆ ಸಮೀಪವಿರುವ ವಿಳಿಂಜಂ ಬಂದರು ಜಾಗತಿಕ ವಾಣಿಜ್ಯ ಮಾರ್ಗಗಳಿಗೆ ಸಂಪರ್ಕ ಕಲ್ಪಿಸುತ್ತದೆ.

    ತಾಂತ್ರಿಕ ಸೌಲಭ್ಯ: ಸ್ವಯಂಚಾಲಿತ ಕ್ರೇನ್‌ಗಳು, ಆಧುನಿಕ ಕಂಟೈನರ್ ನಿರ್ವಹಣಾ ವ್ಯವಸ್ಥೆಗಳು ಮತ್ತು ಪರಿಸರಸ್ನೇಹಿ ತಂತ್ರಜ್ಞಾನಗಳನ್ನು ಒಳಗೊಂಡಿದೆ.

    ಪರಿಸರ ಸಂರಕ್ಷಣೆ: ಕರಾವಳಿ ಕೊರತೆ ಮತ್ತು ಸಮುದ್ರ ಪರಿಸರವನ್ನು ರಕ್ಷಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ.

    ಬಂದರಿನ ಮಹತ್ವ:ವಿಳಿಂಜಂ ಬಂದರು ಭಾರತದ ಸಮುದ್ರ ವಾಣಿಜ್ಯಕ್ಕೆ ಒಂದು ದಿಟ್ಟ ಹೆಜ್ಜೆಯಾಗಿದೆ

    ಆರ್ಥಿಕ ಉತ್ತೇಜನ: ಈ ಬಂದರು 2.5 ಲಕ್ಷಕ್ಕೂ ಅಧಿಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಅಂದಾಜಿಸಲಾಗಿದೆ. ಕೇರಳದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡಲಿದೆ.

    ವಿದೇಶಿ ಟ್ರಾನ್ಸ್ಶಿಪ್‌ಮೆಂಟ್ ಕಡಿಮೆ: ಭಾರತದ 75% ಕಂಟೈನರ್‌ಗಳು ಕೊಲಂಬೋ, ಸಿಂಗಾಪುರ ಅಥವಾ ದುಬೈನಂತಹ ವಿದೇಶೀ ಬಂದರಿನಲ್ಲಿ ಟ್ರಾನ್ಸ್‌ಶಿಪ್‌ಮೆಂಟ್‌ಗೆ ಒಳಗಾಗುತ್ತವೆ. ವಿಳಿಂಜಂ ಬಂದರು ಈ ಅವಲಂಬನೆಯನ್ನು ಕಡಿಮೆ ಮಾಡಿ, ವೆಚ್ಚ ಮತ್ತು ಸಮಯವನ್ನು ಉಳಿಸಲಿದೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಿಳಿಂಜಂ ಬಂದರು ಕೇವಲ ಕೇರಳಕ್ಕೆ ಮಾತ್ರವಲ್ಲ, ಇಡೀ ಭಾರತಕ್ಕೆ ಒಂದು ಆರ್ಥಿಕ ಶಕ್ತಿ ಕೇಂದ್ರವಾಗಲಿದೆ. ಇದು ಆತ್ಮನಿರ್ಭರ ಭಾರತದ ದಿಶೆಯಲ್ಲಿ ಒಂದು ಪ್ರಮುಖ ಹೆಜ್ಜೆ ಎಂದು ಹೇಳಿದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಈ ಯೋಜನೆಯ ಯಶಸ್ಸಿಗೆ ಕೇಂದ್ರ ಸರ್ಕಾರದ ಬೆಂಬಲವನ್ನು ಶ್ಲಾಘಿಸಿದರು.

    ಬಂದರಿನ ಎರಡನೇ ಮತ್ತು ಮೂರನೇ ಹಂತದ ಕಾಮಗಾರಿಗಳು ಶೀಘ್ರದಲ್ಲೇ ಆರಂಭವಾಗಲಿದ್ದು, 2030ರ ವೇಳೆಗೆ ಬಂದರು ತನ್ನ ಪೂರ್ಣ ಸಾಮರ್ಥ್ಯವನ್ನು ತಲುಪಲಿದೆ. ಇದರ ಜೊತೆಗೆ, ಬಂದರಿನ ಸುತ್ತಮುತ್ತ ಔದ್ಯೋಗಿಕ ಕಾರಿಡಾರ್ ಮತ್ತು ಲಾಜಿಸ್ಟಿಕ್ಸ್ ಹಬ್‌ಗಳನ್ನು ಅಭಿವೃದ್ಧಿಪಡಿಸುವ ಯೋಜನೆಯೂ ಇದೆ. ವಿಳಿಂಜಂ ಬಂದರು ಭಾರತದ ಸಮುದ್ರ ವಾಣಿಜ್ಯದ ಭವಿಷ್ಯವನ್ನು ಮರುವ್ಯಾಖ್ಯಾನಿಸಲಿದೆ ಎಂಬ ನಂಬಿಕೆಯೊಂದಿಗೆ, ಈ ಯೋಜನೆ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.ಇದನ್ನೂ ಓದಿ: SSLC ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ ಟಾಪರ್ಸ್‌ ಇವರೇ..

  • ಹಾವೇರಿಯಿಂದ ಶಬರಿಮಲೆಗೆ ತೆರಳುತ್ತಿದ್ದ ಮಿನಿ ಬಸ್ ಪಲ್ಟಿ – ಗುರುಸ್ವಾಮಿ ಸಾವು, 10ಕ್ಕೂ ಅಧಿಕ ಮಂದಿಗೆ ಗಾಯ

    ಹಾವೇರಿಯಿಂದ ಶಬರಿಮಲೆಗೆ ತೆರಳುತ್ತಿದ್ದ ಮಿನಿ ಬಸ್ ಪಲ್ಟಿ – ಗುರುಸ್ವಾಮಿ ಸಾವು, 10ಕ್ಕೂ ಅಧಿಕ ಮಂದಿಗೆ ಗಾಯ

    ಹಾವೇರಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ತೆರಳುತ್ತಿದ್ದ ಮಿನಿ ಬಸ್ ಪಲ್ಟಿಯಾಗಿ ಗುರುಸ್ವಾಮಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಕೇರಳದ (Kerala) ಎರಿಮಲೈನಲ್ಲಿ ನಡೆದಿದೆ.

    ಹಾವೇರಿಯ (Haveri) ಹಾನಗಲ್ (Hanagal) ಪಟ್ಟಣದ ನಿವಾಸಿ ಮಾರುತಿ ಎಂ ಹರಿಹರ(51) ಮೃತ ಗುರುಸ್ವಾಮಿ. ಇದನ್ನೂ ಓದಿ: ಮಲ್ಪೆಯ ಟಾಯ್ಲೆಟ್‌ನಲ್ಲಿ ನವಜಾತ ಶಿಶುವಿನ ಶವ ಪತ್ತೆ

    ಹಿರೇಕಣಗಿ ಸೇರಿ ಹಾನಗಲ್ ತಾಲೂಕಿನ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಮಿನಿ ಬಸ್ ಮಾಡಿಕೊಂಡು ತೆರಳಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಮಿನಿ ಬಸ್ ಪಲ್ಟಿಯಾಗಿದೆ. ಪರಿಣಾಮ ಓರ್ವ ಗುರುಸ್ವಾಮಿ ಮೃತಪಟ್ಟಿದ್ದಾರೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 20 ಜನರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಯುವಕನೊಂದಿಗೆ ಆಂಟಿ ಲವ್ವಿಡವ್ವಿ – ರೀಲ್ಸ್‌ ಪ್ರಿಯನಿಗಾಗಿ ಗಂಡನಿಗೇ ಚಟ್ಟ ಕಟ್ಟಿದ ಪತ್ನಿ

    ರಾಜ್ಯ ಸರ್ಕಾರವು ಕೇರಳ ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿದೆ. ಅಲ್ಲದೇ ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಅವರು ರಾಜ್ಯ ಸರ್ಕಾರದೊಂದಿಗೆ ಮಾತನಾಡಿ, ಮೃತದೇಹವನ್ನು ತರುವ ವ್ಯವಸ್ಥೆ ಮಾಡಿದ್ದಾರೆ.

  • ಬೀದಿ ಕಾಮಣ್ಣ ಎಸ್ಕೇಪ್‌ ಆಗಿದ್ದರ ಹಿಂದಿದೆ ಲವ್‌ ಕಹಾನಿ – ಆರೋಪಿಗೆ ಹೋಮ್‌ ಗಾರ್ಡ್ ಪ್ರೇಯಸಿ ಸಾಥ್

    ಬೀದಿ ಕಾಮಣ್ಣ ಎಸ್ಕೇಪ್‌ ಆಗಿದ್ದರ ಹಿಂದಿದೆ ಲವ್‌ ಕಹಾನಿ – ಆರೋಪಿಗೆ ಹೋಮ್‌ ಗಾರ್ಡ್ ಪ್ರೇಯಸಿ ಸಾಥ್

    ಬೆಂಗಳೂರು: ಯುವತಿಯನ್ನ ತಬ್ಬಿಕೊಂಡು ಅಸಭ್ಯ ವರ್ತನೆ ತೋರಿ ಎಸ್ಕೇಪ್‌ ಆಗಿದ್ದ ಆರೋಪಿಯನ್ನು 10 ದಿನಗಳ ನಂತರ ಸುದ್ದಗುಂಟೆಪಾಳ್ಯ ಪೊಲೀಸರು (Suddagunte Palya Police) ಕೇರಳದಲ್ಲಿ ಬಂಧಿಸಿದ್ದಾರೆ. ಆದ್ರೆ ಕೃತ್ಯ ಎಸಗಿದ ಬಳಿಕ ಆರೋಪಿ ಕೇರಳಕ್ಕೆ (Kerala) ಹೋಗೋದಕ್ಕೆ ಆತನ ಪ್ರೇಯಸಿ ಹೋಮ್‌ ಗಾರ್ಡ್‌ ಸಾಥ್‌ ನೀಡಿದ್ದಾಳೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

    ಹೌದು. ಭಾನುವಾರ (ಏ.13) ಕೇರಳದ ಹಳ್ಳಿಯೊಂದರಲ್ಲಿ ಆರೋಪಿ ಸಂತೋಷ್ ಡೇನಿಯಲ್‌ನನ್ನು ಬಂಧಿಸಿದ್ದ ಪೊಲೀಸರು ಬೆಳಗ್ಗೆ ಬೆಂಗಳೂರಿಗೆ ಕರೆತಂದಿದ್ದರು. ಕೋರ್ಟ್‌ಗೆ ಹಾಜರುಪಡಿಸುವುದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಆರೋಪಿ ಕೃತ್ಯ ಎಸಗಿದ್ದು ತಾನೇ ಎಂಬುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಆರೋಪಿ ಸಂತೋಷ್ ಮೇಲೆ ಜಯನಗರ ಪೊಲೀಸ್ ಠಾಣೆಯಲ್ಲಿ (Jayanagara Police Station) ಈ ಹಿಂದೆ ದಾಖಲಾಗಿದ್ದ ಕಳ್ಳತನ ಕೇಸ್ ಪತ್ತೆ ಮಾಡಿ ಫೋನ್ ನಂಬರ್ ಟ್ರ್ಯಾಕ್ ಮಾಡೋಕೆ ಶುರುಮಾಡಿದ್ದಾರೆ. ದನ್ನೂ ಓದಿ: ಯುವತಿಯನ್ನ ತಬ್ಬಿಕೊಂಡು ಅಸಭ್ಯ ವರ್ತನೆ ಪ್ರಕರಣ – 10 ದಿನಗಳ ಬಳಿಕ ಬೀದಿ ಕಾಮಣ್ಣ ಅರೆಸ್ಟ್‌

    ಕೃತ್ಯ ಎಸಗಿದ ಬಳಿಕ ಆರೋಪಿ ಕೇರಳದಲ್ಲಿರುವ ತನ್ನ ಸ್ನೇಹಿತನ ಮನೆಗೆ ಹೋಗಿದ್ದನಂತೆ. ಬೆಂಗಳೂರಲ್ಲಿ ಡ್ರೈವಿಂಗ್ ಕೆಲಸ (Driving Work) ಮಾಡುತ್ತಿದ್ದಾಗ ಪರಿಚಯವಾಗಿದ್ದ ಸ್ನೇಹಿತ‌‌ ಮನೆಗೆ ಹೋಗಿ ಆಶ್ರಯ ಪಡೆದುಕೊಂಡಿದ್ದನಂತೆ. ಅಲ್ಲದೇ ಆರೋಪಿ ಎಸ್ಕೇಪ್ ಆಗಿದ್ದರ ಹಿಂದೆ ಲವ್ ಸ್ಟೋರಿಯ ಮಾತುಗಳು ಕೇಳಿಬರ್ತಿವೆ. ಪ್ರಕರಣ ದಾಖಲಿಸಿದಾಗಿನಿಂದ ಪೊಲೀಸರ ಹುಡುಕಾಟದ ಇಂಚಿಚೂ ಮಾಹಿತಿಯನ್ನ ಸಂತೋಷ್‌ನ ಹೋಮ್‌ ಗಾರ್ಡ್ ಪ್ರೇಯಸಿ ನೀಡಿದ್ದಾಳೆ. ಟಿವಿ ನೋಡಿಕೊಂಡು ಆರೋಪಿ‌ ತಪ್ಪಿಸಿಕೊಳ್ಳಲು ಹೋಮ್‌ ಗಾರ್ಡ್ ಪ್ರೇಯಸಿ ಸಹಾಯ ಮಾಡಿದ್ದಾಳೆ. ಪೊಲೀಸರು ನಿನ್ನನ್ನ ಹುಡುಕುತ್ತಿದ್ದಾರೆ ಹುಷಾರು ಅಂತ ಅಲರ್ಟ್‌ ಮಾಡಿದ್ದಾಳೆ. 2 ದಿನದ ಬಳಿಕ ಹೊಸ ಸಿಮ್ ಖರೀದಿ ಮಾಡಿ ಪ್ರಿಯಕರ ಸಂತೋಷನಿಗೆ ಪ್ರೇಯಸಿ ನೀಡಿದ್ದಾಳೆ. ಸಂತೋಷ್ ಜೊತೆಯೇ ಬಸ್ ಹಿಡಿದು ಕೇರಳಕ್ಕೆ ಕೂಡ ಹೋಗಿದ್ದಾಳೆ. ಹೊಸ ಸಿಮ್‌ನಲ್ಲಿ ತಾಯಿಗೆ ಕರೆ ಮಾಡಿ ಕೇರಳದಲ್ಲಿರೋದಾಗಿ ಸಂತೋಷ್ ತಿಳಿಸಿದ್ದಾನೆ‌. ದನ್ನೂ ಓದಿ: ಶಿವಮೊಗ್ಗದ ಲಾಡ್ಜ್‌ನಲ್ಲಿ ಹುಬ್ಬಳ್ಳಿ ಮೂಲದ ಉದ್ಯಮಿ ಅನುಮಾನಾಸ್ಪದ ಸಾವು

    ಮಾಹಿತಿ ಆಧರಿಸಿ ಆರೋಪಿ ಮೊಬೈಲ್ ನಂಬರ್ ಟ್ರೇಸ್ ಮಾಡಿ ಲೊಕೆಷನ್‌ ಪಡೆದಿಕೊಂಡ ಪೊಲೀಸರು ಕೇರಳದ ಕೋಝಿಕೋಡ್‌ನ ಲಾಡ್ಜ್‌ನಲ್ಲಿದ್ದಾಗ ಇಬ್ಬರನ್ನೂ ಬಂಧಿಸಿದ್ದಾರೆ. ದನ್ನೂ ಓದಿ:  ಗುಜರಾತ್‌ ಕರಾವಳಿಯಲ್ಲಿ ಭರ್ಜರಿ ಬೇಟೆ – 1,800 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ

  • ಕಟೀಲ್‌ಗೆ ಮತ್ತೆ ರಾಜಕೀಯ ಸ್ಥಾನಮಾನ ಸಿಗಲಿ: ಮಧೂರು ದೇವಸ್ಥಾನದಲ್ಲಿ ಡಿಕೆಶಿ ಪ್ರಾರ್ಥನೆ

    ಕಟೀಲ್‌ಗೆ ಮತ್ತೆ ರಾಜಕೀಯ ಸ್ಥಾನಮಾನ ಸಿಗಲಿ: ಮಧೂರು ದೇವಸ್ಥಾನದಲ್ಲಿ ಡಿಕೆಶಿ ಪ್ರಾರ್ಥನೆ

    ಮಂಗಳೂರು/ಕಾಸರಗೋಡು: ನಳಿನ್ ಕುಮಾರ್ ಕಟೀಲ್‌ಗೆ (Nalin Kumar Kateel) ಮತ್ತೆ ರಾಜಕೀಯ ಸ್ಥಾನಮಾನ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಮಧೂರು ದೇವಸ್ಥಾನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಪ್ರಾರ್ಥಿಸಿದ್ದಾರೆ.

    ಕೇರಳ (Kerala) ರಾಜ್ಯದ ಕಾಸರಗೋಡಿನ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ (Madhur Temple) ಬ್ರಹ್ಮಕಲಶೋತ್ಸವದ ಹಿನ್ನೆಲೆ ಡಿಕೆ ಶಿವಕುಮಾರ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನಳಿನ್ ಕುಮಾರ್ ಕಟೀಲ್ ಹಾಗೂ ಡಿಕೆ ಶಿವಕುಮಾರ್ ಒಂದೇ ವೇದಿಕೆಯಲ್ಲಿ ಜೊತೆಯಾಗಿದ್ದರು. ಈ ವೇಳೆ ನಳಿನ್ ಕುಮಾರ್ ಪರ ಡಿಕೆಶಿ ಬ್ಯಾಟಿಂಗ್ ಮಾಡಿದ್ದಾರೆ. ಇದನ್ನೂ ಓದಿ: ಮೈಸೂರು| ಗನ್‌ ಹಿಡಿದು ವೀಡಿಯೋ ಹಂಚಿಕೊಂಡ ಯುವಕ – ಸರ್ಕಾರಿ ವಾಹನದಲ್ಲಿ ಕುಳಿತು ಪೋಸ್‌

    ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಡಿಕೆಶಿ, ನನ್ನ ಮಿತ್ರ, ಮಾಜಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಇದ್ದಾರೆ. ಅವರು ಮಾಜಿ ಅಂದುಕೊಳ್ಳೋದು ಬೇಡ, ರಾಜಕಾರಣದಲ್ಲಿ ಯಾವುದೂ ಶಾಶ್ವತ ಅಲ್ಲ. ಹೀರೋ ಝೀರೋ ಆಗುತ್ತಾನೆ, ಝೀರೋ ಹೀರೋ ಆಗುತ್ತಾನೆ. ನಾನು ಮತ್ತು ನೀವು ಒಂದೇ ವೇದಿಕೆಯಲ್ಲಿ ದೇವರನ್ನ ಪ್ರಾರ್ಥನೆ ಮಾಡಿದ್ದೇವೆ. ಭಗವಂತ ನಿಮ್ಮ ಎಲ್ಲಾ ವಿಘ್ನ ನಿವಾರಣೆ ಮಾಡಿ ಮತ್ತೆ ಈ ರಾಜ್ಯದಲ್ಲಿ ಸೇವೆ ಮಾಡುವ ಅವಕಾಶ ಕೊಡಲಿ. ಮತ್ತೆ ನಿಮಗೆ ಅವಕಾಶ ಸಿಗಲಿ ಅಂತ ನಾನೂ ಕೂಡ ಪ್ರಾರ್ಥನೆ ಮಾಡುತ್ತೇನೆ ಎಂದರು. ಇದನ್ನೂ ಓದಿ: ರಾಮನವಮಿ | 50 ಲಕ್ಷ ಭಕ್ತರಿಂದ ಅಯೋಧ್ಯೆ ಶ್ರೀರಾಮನ ದರ್ಶನ ಸಾಧ್ಯತೆ

  • ಕೇರಳದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ – ದಾಸನಿಗೆ ಸಾಥ್ ನೀಡಿದ ಕೊಲೆ ಆರೋಪಿ ಪ್ರಜ್ವಲ್ ರೈ

    ಕೇರಳದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ – ದಾಸನಿಗೆ ಸಾಥ್ ನೀಡಿದ ಕೊಲೆ ಆರೋಪಿ ಪ್ರಜ್ವಲ್ ರೈ

    ಶನಿವಾರ ನಟ ದರ್ಶನ್ (Actor Darshan) ಕೇರಳದ (Kerala) ಕಣ್ಣೂರಿನ (Kannur) ಭಗವತಿ ದೇವಾಲಯದಲ್ಲಿ ಶತ್ರು ಸಂಹಾರ ಹೋಮ ಮಾಡಿಸಿದ್ದಾರೆ. ಈ ವೇಳೆ ದಾಸನ ಜೊತೆ ಕೊಲೆ ಆರೋಪಿ ಪ್ರಜ್ವಲ್ ರೈ (Prajwal Rai) ಕಾಣಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.ಇದನ್ನೂ ಓದಿ:ನಾರಿಮಣಿಯರಿಗೆ ಸಮ್ಮರ್ ಫ್ಯಾಷನ್ ಟಿಪ್ಸ್

    ಹೌದು, ಪುತ್ತೂರಿನ (Puttur) ಕಾಂಗ್ರೆಸ್ (Congress) ಮುಖಂಡ ಸವಣೂರು ಪ್ರಜ್ವಲ್ ರೈ ಎಂಬಾತ ನಟ ದರ್ಶನ್ ಅನ್ನು ಈ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಶತ್ರು ಸಂಹಾರ ಪೂಜೆ ಮಾಡಿಸಿದ್ದಾನೆ. ಆದರೆ ಪ್ರಜ್ವಲ್ ರೈ ಓರ್ವ ಕೊಲೆ ಆರೋಪಿ. 2017ರಲ್ಲಿ ಕರಾವಳಿ ಭಾಗದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಕರೋಪಾಡಿ ಅಬ್ದುಲ್ ಜಲೀಲ್ ಕೊಲೆ ಪ್ರಕರಣದಲ್ಲಿ ಪ್ರಜ್ವಲ್ ರೈ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರಗಿದ್ದಾನೆ. ಸದ್ಯ ಈ ಆರೋಪಿ, ದರ್ಶನ್ ಜೊತೆ ಕಾಣಿಸಿಕೊಂಡಿರುವುದು ಚರ್ಚೆಗೆ ಆಸ್ಪದ ನೀಡಿದೆ.

    ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಆರೋಪಿಯಾಗಿರುವ ದರ್ಶನ್, ಸಂಕಷ್ಟ ನಿವಾರಣೆಗಾಗಿ ಕೇರಳದ ಕಣ್ಣೂರಿನ ಮಾಡಾಯಿಕಾವು ಶ್ರೀ ಭಗವತಿ ದೇವಸ್ಥಾನಕ್ಕೆ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಹಾಗೂ ನಟ ಧನ್ವೀರ್ ಜೊತೆ ತೆರಳಿ ಶತ್ರು ಸಂಹಾರ ಪೂಜೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಕೊಲೆ ಆರೋಪಿ ಪ್ರಜ್ವಲ್ ರೈ ಕೂಡ ಕಾಣಿಸಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಇದನ್ನೂ ಓದಿ:ಇಶಾನ್ ಕಿಶನ್ ಸ್ಫೋಟಕ ಶತಕ – ರಾಜಸ್ಥಾನ ವಿರುದ್ಧ ಹೈದರಾಬಾದ್‌ಗೆ 44 ರನ್‌ಗಳ ಭರ್ಜರಿ ಜಯ