Tag: ಕೇರಳ

  • ಯೆಮೆನ್‌ನಲ್ಲಿ ಕೇರಳದ ನರ್ಸ್ ನಿಮಿಷ ಪ್ರಿಯಾಗೆ ಮರಣದಂಡನೆ ರದ್ದು?

    ಯೆಮೆನ್‌ನಲ್ಲಿ ಕೇರಳದ ನರ್ಸ್ ನಿಮಿಷ ಪ್ರಿಯಾಗೆ ಮರಣದಂಡನೆ ರದ್ದು?

    – ಎಕ್ಸ್‌ನಲ್ಲಿ ವೀಡಿಯೋ ಹಂಚಿಕೊಂಡ ಕೆಎ ಪೌಲ್

    ಸನಾ: ಯೆಮೆನ್‌ನಲ್ಲಿ (Yemen) ಶಿಕ್ಷೆಗೆ ಗುರಿಯಾಗಿದ್ದ ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ (Nimisha Priya) ವಿಧಿಸಲಾಗಿದ್ದ ಮರಣದಂಡನೆ ರದ್ದಾಗಿದೆ ಎಂದು ಗ್ಲೋಬಲ್ ಪೀಸ್ ಇನಿಶಿಯೇಟಿವ್‌ನ ಸಂಸ್ಥಾಪಕ ಡಾ. ಕೆ.ಎ ಪೌಲ್ (KL Paul) ತಿಳಿಸಿದ್ದಾರೆ.

    ಈ ಕುರಿತು ಭಾರತ ಸರ್ಕಾರ, ನಿಮಿಷ ಪ್ರಿಯಾ ಕುಟುಂಬಸ್ಥರು ಮತ್ತು ಮರಣದಂಡನೆ ಮುಂದೂಡಿಕೆ ಕಾರಣರಾದ ಗ್ರ‍್ಯಾಂಡ್ ಮುಫ್ತಿ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಅವರ ಕಚೇರಿಯಿಂದ ಯಾವುದೇ ಅಧಿಕೃತ ಹೇಳಿಕೆಗಳು ಹೊರಬಂದಿಲ್ಲ.ಇದನ್ನೂ  ಓದಿ: ಜಗದೀಪ್ ಧನಕರ್ ರಾಜೀನಾಮೆ ಸುತ್ತ ಅನುಮಾನದ ಹುತ್ತ- ದಿಢೀರ್‌ ರಿಸೈನ್‌ ಮಾಡಿದ್ದು ಯಾಕೆ?

    ಸೋಮವಾರ ರಾತ್ರಿ ಯೆಮೆನನ್ ಸನಾದಿಂದ ಬಿಡುಗಡೆ ಮಾಡಿದ ವಿಡಿಯೋ ಸಂದೇಶದಲ್ಲಿ ಪೌಲ್ ಅವರು, ದೇವರ ದಯೆಯಿಂದ, ನಿಮಿಷ ಪ್ರಿಯಾ ಅವರ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ. ಅವರನ್ನು ಬಿಡುಗಡೆ ಮಾಡಲು ಭಾರತಕ್ಕೆ ಅವಕಾಶ ಕಲ್ಪಿಸಲಾಗಿದೆ. ನಿಮಿಷಾ ಅವರ ಸುರಕ್ಷಿತ ಪ್ರಯಾಣಕ್ಕಾಗಿ ರಾಜತಾಂತ್ರಿಕರನ್ನು ಕಳುಹಿಸಲು ತಯಾರಿ ನಡೆಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ. ನಿಮಿಷಾ ಅವರ ಮರಣದಂಡನೆ ರದ್ದಾಗಿರುವುದನ್ನು ಖಚಿತಪಡಿಸಿ ಈವರೆಗೆ ಯಾವುದೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮುಖ್ಯವಾಹಿನಿ ಮಾಧ್ಯಮಗಳು ವರದಿ ಮಾಡಿಲ್ಲ.

    ಈ ಮೊದಲು ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರು ಯೆಮನ್‌ನಲ್ಲಿ ಜು.16ಕ್ಕೆ ಮರಣದಂಡನೆಗೆ ಗುರಿಯಾಗಬೇಕಿತ್ತು. ಆದರೆ ಇಂಡಿಯನ್ ಗ್ರ‍್ಯಾಂಡ್ ಮುಫ್ತಿ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಅವರ ಮಧ್ಯಪ್ರವೇಶದ ಬಳಿಕ ಈ ಬೆಳವಣಿಗೆ ನಡೆದಿತ್ತು ಎಂದು ಉನ್ನತ ಮೂಲಗಳು ತಿಳಿಸಿದ್ದವು.

    ಏನಿದು ಪ್ರಕರಣ?
    2017ರಲ್ಲಿ ನಿಮಿಷಾ ಪ್ರಿಯಾ ಅವರಿಂದ ತಲಾಲ್ ಅಬ್ದೋ ಮೆಹದಿ ಕೊಲೆಯಾಗಿದ್ದರು. ಪ್ರಕರಣ ಸಂಬಂಧ ಪ್ರಿಯಾಳಿಗೆ ಯೆಮನ್ ರಾಷ್ಟ್ರದ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಈ ಸಂಬಂಧ ಕೊಲೆಯಾದ ವ್ಯಕ್ತಿಯ ಸಹೋದರ ಅಬ್ದೆಲ್ಫತ್ತಾ ಮೆಹದಿ ಪ್ರತಿಕ್ರಿಯಿಸಿದ್ದು, ಈ ಅಪರಾಧಕ್ಕೆ ಕ್ಷಮೆ ನೀಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದರು.ಇದನ್ನೂ  ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವಿಜಯ್ ದೇವರಕೊಂಡ

  • ವಿಶ್ವದ ಅತ್ಯಂತ ದುಬಾರಿ F-35B ವಿಮಾನ ದುರಸ್ತಿ ಪೂರ್ಣ – ಮಂಗಳವಾರ ಯುಕೆಗೆ ವಾಪಸ್

    ವಿಶ್ವದ ಅತ್ಯಂತ ದುಬಾರಿ F-35B ವಿಮಾನ ದುರಸ್ತಿ ಪೂರ್ಣ – ಮಂಗಳವಾರ ಯುಕೆಗೆ ವಾಪಸ್

    ತಿರುವನಂತಪುರಂ: ವಿಶ್ವದ ಅತ್ಯಂತ ದುಬಾರಿ ಬ್ರಿಟಿಷ್ ರಾಯಲ್ ನೌಕಾಪಡೆಯ F-35B ಫೈಟರ್ ಜೆಟ್ ವಿಮಾನವು ಮಂಗಳವಾರ (ಜು.22) ಕೇರಳದಿಂದ (Kerala) ಹೊರಡಲಿದೆ.

    ಕಳೆದ 5 ವಾರಗಳಿಂದ ಕೇರಳದ ತಿರುವನಂತಪುರ ಏರ್‌ಪೋರ್ಟ್‌ನಲ್ಲಿದ್ದ (Thiruvananthapuram International Airport) ವಿಶ್ವದ ಅತ್ಯಂತ ದುಬಾರಿ ಯುದ್ಧ ವಿಮಾನ ಇದೀಗ ಟೇಕ್ ಆಫ್‌ಗೆ ಸಿದ್ಧವಾಗಿದೆ. ಯುದ್ಧ ವಿಮಾನದ ಹೈಡ್ರಾಲಿಕ್ ಸಿಸ್ಟಮ್‌ನಲ್ಲಿದ್ದ ದೋಷವನ್ನು ಬ್ರಿಟನ್ ಎಂಜಿನಿಯರುಗಳು ಸರಿಪಡಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.ಇದನ್ನೂ ಓದಿ: ʻದೃಶ್ಯಂʼ ಸಿನಿಮಾ ಸ್ಟೈಲ್‌ನಲ್ಲಿ ಕೊಲೆ – ಪ್ರಿಯಕರನ ಜೊತೆಗೂಡಿ ಗಂಡನನ್ನ ಕೊಂದು ಟೈಲ್ಸ್‌ ಕೆಳಗೆ ಹೂತಿದ್ದ ಪತ್ನಿ

    ತಾಂತ್ರಿಕ ದೋಷದಿಂದಾಗಿ ಜೂ.14ರಂದು ತಿರುವನಂತಪುರ ಇಂಟರ್ ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲು ಬ್ರಿಟನ್, ಭಾರತದ ಅನುಮತಿ ಕೇಳಿತ್ತು. ಭಾರತವು ತಕ್ಷಣವೇ ಅನುಮತಿ ನೀಡಿದ್ದರಿಂದ ತಿರುವನಂತಪುರ ಏರ್‌ಪೋರ್ಟ್‌ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿತ್ತು. ಆದರೆ, ತಕ್ಷಣಕ್ಕೆ ವಿಮಾನವನ್ನು ರಿಪೇರಿ ಮಾಡಲು ಬ್ರಿಟನ್ ಇಂಜಿನಿಯರ್‌ಗಳಿಗೆ, ತಜ್ಞರಿಗೆ ಸಾಧ್ಯವಾಗಿರಲಿಲ್ಲ. ಒಂದು ತಿಂಗಳಿಗೂ ಹೆಚ್ಚು ಕಾಲ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಇದ್ದ ಯುದ್ಧ ವಿಮಾನದ ದುರಸ್ತಿ ಕಾರ್ಯ ಕೊನೆಗೂ ಯಶಸ್ವಿಯಾಗಿದೆ.

    ಮೂಲಗಳ ಪ್ರಕಾರ, ತಾಂತ್ರಿಕ ದೋಷವನ್ನು ಸದ್ಯ ಸರಿಪಡಿಸಲಾಗಿದ್ದು, ಪ್ರಾಯೋಗಿಕ ಹಾರಾಟಕ್ಕಾಗಿ ಫೈಟರ್ ಜೆಟ್‌ನ್ನು ಹ್ಯಾಂಗರ್‌ನಿಂದ ಹೊರಗೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಈ ಪ್ರಯೋಗದ ಫಲಿತಾಂಶದ ಆಧಾರದ ಮೇಲೆ ನಾಳೆ ಇಂಗ್ಲೆಂಡ್‌ನತ್ತ ಪ್ರಯಾಣ ಬೆಳೆಸಲಿದೆ. ಜುಲೈ ತಿಂಗಳ ಆರಂಭದಲ್ಲಿ ವಿಮಾನದ ದುರಸ್ತಿಗಾಗಿ ಆರ್‌ಎಎಫ್‌ಎ 400ಎಂ ಅಟ್ಲಾಸ್‌ನಲ್ಲಿ ಬಂದ ತಂತ್ರಜ್ಞರ ತಂಡವು ವಿಮಾನವು ಹಾರಾಟಕ್ಕೆ ಅರ್ಹವಾಗಿದೆ ಎಂದು ತಿಳಿಸಿದ್ದರು.

    ಎಫ್-35 ವಿಶ್ವದ ಅತ್ಯಂತ ದುಬಾರಿ ಫೈಟರ್ ಜೆಟ್‌ಗಳಲ್ಲಿ ಒಂದಾಗಿದ್ದು, ಇದರ ಬೆಲೆ 115 ದಶಲಕ್ಷ ಡಾಲರ್‌ಗಿಂತ ಅಧಿಕವಾಗಿದೆ. ಇದನ್ನು ಕಡಿಮೆ ದೂರದ ಟೇಕ್-ಆಫ್ ಹಾಗೂ ಹೆಚ್ಚು ದೂರದ ಲ್ಯಾಂಡಿಂಗ್‌ಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಇದು ನ್ಯಾಟೋ ವಾಯುಪಡೆಯ ಮೂಲಾಧಾರವಾಗಿದೆ.ಇದನ್ನೂ ಓದಿ:  ಪತ್ನಿ ವಿರುದ್ಧ ಅಪಪ್ರಚಾರ ಮಾಡಿದ ವಿಪಕ್ಷಗಳು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು: ಸಿಎಂ

  • ಕೇರಳದ ಮಾಜಿ ಸಿಎಂ, CPI(M) ನಾಯಕ ಅಚ್ಯುತಾನಂದನ್ ನಿಧನ

    ಕೇರಳದ ಮಾಜಿ ಸಿಎಂ, CPI(M) ನಾಯಕ ಅಚ್ಯುತಾನಂದನ್ ನಿಧನ

    ತಿರುವನಂತಪುರಂ: ಕಳೆದ ಕೆಲ ವರ್ಷಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಸಿಪಿಎಂನ ಹಿರಿಯ ನಾಯಕ ವಿ.ಎಸ್‌ ಅಚ್ಯುತಾನಂದನ್ (101) ಇಂದು ಕೊನೆಯುಸಿರೆಳೆದಿದ್ದಾರೆ.

    ಕೆಲವು ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರನ್ನು ಜೂನ್ 23 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಿರುವನಂತಪುರದ ಎಸ್‌ಯುಟಿ ಆಸ್ಪತ್ರೆಯಲ್ಲಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಚ್ಯುತಾನಂದನ್‌ ಇಂದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ; ಎಸ್‌ಐಟಿ ತನಿಖೆ ಕಾಲಮಿತಿಯಲ್ಲಿ ಕಾನೂನು ಬದ್ಧವಾಗಿ ನಡೆಯಲಿ: ಬೊಮ್ಮಾಯಿ

    ಇಂದು ಬೆಳಗ್ಗೆ ಹಾಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ ಗೋವಿಂದನ್ ಆಸ್ಪತ್ರೆಗೆ ಭೇಟಿ ನೀಡಿ, ಅಚ್ಯುತಾನಂದನ್‌ ಅವರ ಆರೋಗ್ಯ ಸ್ಥಿತಿ ವಿಚಾರಿಸಿದ್ದರು. ವೈದ್ಯಕೀಯ ಮಂಡಳಿಯೊಂದಿಗೂ ಚರ್ಚೆ ನಡೆಸಿದ್ದರು. ಆದ್ರೆ ಮಧ್ಯಾಹ್ನದ ಹೊತ್ತಿಗೆ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿತ್ತು. ರಕ್ತದೊತ್ತಡದಲ್ಲಿ ಬದಲಾವಣೆಯಾದ ಬಳಿಕ ಆರೋಗ್ಯ ಸ್ಥಿತಿ ಗಂಭೀರ ಹಂತಕ್ಕೆ ತಲುಪಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ಕೊನೆಯುಸಿರೆಳೆದಿದ್ದಾರೆ ಎಂಬುದಾಗಿ ವೈದ್ಯ ಮೂಲಗಳು ತಿಳಿಸಿವೆ. ವಿಷಯ ತಿಳಿಯುತ್ತಿದ್ದಂತೆ ಹಿರಿಯ ಸಿಪಿಎಂ ನಾಯಕರಾದ ಎಸ್. ರಾಮಚಂದ್ರನ್ ಪಿಳ್ಳೈ, ಎಂ.ವಿ. ಜಯರಾಜನ್, ವೀಣಾ ಜಾರ್ಜ್ ಮತ್ತು ವಿ.ಎಂ. ಸುಧೀರನ್ ಆಸ್ಪತ್ರೆಗೆ ತೆರಳಿದ್ದಾರೆ. ಇದನ್ನೂ ಓದಿ: ಯುಎಇ ಅಪಾರ್ಟ್‌ಮೆಂಟ್‌ನಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆ – ವರದಕ್ಷಿಣೆ ಕಿರುಕುಳ ಆರೋಪ

    ಬುಧವಾರ ಅಂತ್ಯಕ್ರಿಯೆ
    ವಿ.ಎಸ್ ಅವರ ಪಾರ್ಥಿವ ಶರೀರವನ್ನ ತಕ್ಷಣವೇ ಎ.ಕೆ.ಜಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಕ್ಕೆ ಕೊಂಡೊಯ್ಯಲಾಗುವುದು. ಇಂದು ರಾತ್ರಿ ಅಲ್ಲಿ ಸಾರ್ವಜನಿಕ ದರ್ಶನ ಇಡಲಾಗುತ್ತದೆ. ನಾಳೆ (ಜು.22) ಬೆಳಗ್ಗೆ 9 ಗಂಟೆಗೆ ಸಾರ್ವಜನಿಕ ದರ್ಶನಕ್ಕಾಗಿ ದರ್ಬಾರ್ ಹಾಲ್‌ಗೆ ಪಾರ್ಥೀವ ಶರೀರವನ್ನ ಇರಿಸಲಾಗುತ್ತದೆ. ಮಧ್ಯಾಹ್ನ ವಿ.ಎಸ್ ಅವರ ಪಾರ್ಥಿವ ಶರೀರವನ್ನ ರಾಷ್ಟ್ರೀಯ ಹೆದ್ದಾರಿ ಮೂಲಕ ಆಲಪ್ಪುಳದಲ್ಲಿರುವ ಮನೆಗೆ ಕೊಂಡೊಯ್ಯಲಾಗುತ್ತದೆ. ಬುಧವಾರ ಬೆಳಗ್ಗೆ ಆಲಪ್ಪುಳ ಸಿಪಿಎಂ ಜಿಲ್ಲಾ ಸಮಿತಿ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಅಂದು ಮಧ್ಯಾಹ್ನದ ಹೊತ್ತಿಗೆ ಅಲಪ್ಪುಳದ ವಲಿಯ ಚುಡುಕಾಡು ಎಂಬಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ ಗೋವಿಂದನ್ ಮಾಹಿತಿ ನೀಡಿದ್ದಾರೆ.

  • ಯುಎಇ ಅಪಾರ್ಟ್‌ಮೆಂಟ್‌ನಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆ – ವರದಕ್ಷಿಣೆ ಕಿರುಕುಳ ಆರೋಪ

    ಯುಎಇ ಅಪಾರ್ಟ್‌ಮೆಂಟ್‌ನಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆ – ವರದಕ್ಷಿಣೆ ಕಿರುಕುಳ ಆರೋಪ

    ಅಬು ಧಾಬಿ: ಕೇರಳದ ಮಹಿಳೆಯೊಬ್ಬರು (Kerala Woman) ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (UAE) ನಡೆದಿದೆ.

    ಕೇರಳದ ಕೊಲ್ಲಂ (Kollam) ಮೂಲದ ಅತುಲ್ಯ ಶೇಖರ್ (29) ಮೃತ ಮಹಿಳೆ. 2014ರಲ್ಲಿ ಅತುಲ್ಯ ಕೊಲ್ಲಂ ನಿವಾಸಿ ಶೇಖರ್ ಎಂಬವರನ್ನು ಮದುವೆಯಾಗಿ ಶಾರ್ಜಾದ ಅಪಾರ್ಟ್‌ಮೆಂಟ್‌ವೊಂದರಲ್ಲಿ ನೆಲೆಸಿದ್ದರು. ಮದುವೆ ವೇಳೆ ಸತೀಶ್‌ಗೆ 320 ಗ್ರಾಂ ಚಿನ್ನ ಹಾಗೂ ಒಂದು ಬೈಕ್ ಅನ್ನು ವರದಕ್ಷಿಣೆ (Dowry) ರೂಪದಲ್ಲಿ ನೀಡಲಾಗಿತ್ತು. ಆದರೆ ಮದುವೆಯಾದಾಗಿನಿಂದ ಪತಿ ಅತುಲ್ಯಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದ ಪೇದೆಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ – ಸಿಬಿಐ ತನಿಖೆಗೆ ಆದೇಶಿಸಿದ ಸುಪ್ರೀಂ ಕೋರ್ಟ್

    ಜುಲೈ 18 ಮತ್ತು ಜುಲೈ 19ರ ನಡುವೆ ಸತೀಶ್ ಅತುಲ್ಯಳನ್ನು ಉಸಿರುಗಟ್ಟಿಸಿ, ಹೊಟ್ಟೆಗೆ ಒದ್ದು, ತಲೆಗೆ ತಟ್ಟೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಆಕೆಯ ತಾಯಿ ಆರೋಪಿಸಿದ್ದಾರೆ. ಘಟನೆ ಸಂಬಂಧ ಪತಿ ಸತೀಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.  ಇದನ್ನೂ ಓದಿ: ಕಲಬುರಗಿ ಚಿನ್ನದಂಗಡಿ ದರೋಡೆ ಕೇಸ್; ಮೂವರು ಅಂತರರಾಜ್ಯ ದರೋಡೆಕೋರರ ಬಂಧನ

  • ಕೇರಳದಲ್ಲಿ ಭಾರೀ ಮಳೆ – 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

    ಕೇರಳದಲ್ಲಿ ಭಾರೀ ಮಳೆ – 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

    ತಿರುವನಂತಪುರಂ: ಕೇರಳದಲ್ಲಿ (Kerala) ಭಾರೀ ಮಳೆ (Rain) ಸುರಿಯುತ್ತಿರುವ ಪರಿಣಾಮ ನದಿಗಳು ಮತ್ತು ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹವಾಮಾನ ಇಲಾಖೆ (IMD) 9 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.

    ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡುಗಳಿಗೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಉಳಿದ ಐದು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ರಾಜ್ಯಾದ್ಯಂತ ಸಾಧಾರಣ ಮಳೆ ಆಗಲಿದ್ದು, ಗಂಟೆಗೆ 40 ರಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: WTC Final | 2031ರ ವರೆಗೆ ಇಂಗ್ಲೆಂಡ್‌ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ

    ನೀರಾವರಿ ವಿನ್ಯಾಸ ಮತ್ತು ಸಂಶೋಧನಾ ಮಂಡಳಿ, ಪತ್ತನಂತಿಟ್ಟ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿನ ಮಣಿಮಾಲ ಮತ್ತು ಮೊಗ್ರಾಲ್ ನದಿಗಳಲ್ಲಿ ನೀರಿನ ಮಟ್ಟ ಏರಿದ ಕಾರಣ ‘ಅಪಾಯದ ಎಚ್ಚರಿಕೆ’ಗಳನ್ನು ನೀಡಿದೆ. ನೀರಿನ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆ ಪಾಲಕ್ಕಾಡಿನ ಅಣೆಕಟ್ಟುಗಳ ಗೇಟ್‌ಗಳನ್ನು ತೆರೆಯಲಾಗಿದೆ ಎಂದು ಪಾಲಕ್ಕಾಡ್ ಜಿಲ್ಲಾಡಳಿತ ತಿಳಿಸಿದೆ. ಇದನ್ನೂ ಓದಿ: Indonesia | 280 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಡಗಿನಲ್ಲಿ ಬೆಂಕಿ ಅವಘಡ – ಮೂವರು ಸಾವು

    ನದಿ ದಂಡೆಯಲ್ಲಿ ವಾಸಿಸುವ ನಿವಾಸಿಗಳು ಜಾಗರೂಕರಾಗಿರಲು ಮತ್ತು ಅಧಿಕಾರಿಗಳ ಸೂಚನೆಯಂತೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸಿದ್ಧರಾಗಲು ಸೂಚಿಸಲಾಗಿದೆ. ಬಲವಾದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಜುಲೈ 23ರವರೆಗೆ ಕೇರಳ-ಕರ್ನಾಟಕ ಕರಾವಳಿಯಲ್ಲಿ ಮೀನುಗಾರಿಕೆ ನಡೆಸದಂತೆ ಐಎಂಡಿ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಇಸ್ಕಾನ್‌ ರೆಸ್ಟೋರೆಂಟ್‌ಗೆ ಚಿಕನ್‌ ತಂದು ತಿಂದ ವ್ಯಕ್ತಿ – ನೆಟ್ಟಿಗರು ಗರಂ

  • 3 ವರ್ಷದ ಹಿಂದೆ ಕಾಗೆ ಹೊತ್ತೊಯ್ದ ಚಿನ್ನದ ಬಳೆ ಮರಳಿ ಒಡತಿಯ ಕೈಗೆ

    3 ವರ್ಷದ ಹಿಂದೆ ಕಾಗೆ ಹೊತ್ತೊಯ್ದ ಚಿನ್ನದ ಬಳೆ ಮರಳಿ ಒಡತಿಯ ಕೈಗೆ

    ತಿರುವನಂತಪುರಂ: ಮೂರು ವರ್ಷದ ಹಿಂದೆ ಕಾಗೆ (Crow) ಹೊತ್ತೊಯ್ದಿದ್ದ ಚಿನ್ನದ ಬಳೆ (Gold Bangle) ಮರಳಿ ಒಡತಿಯ ಕೈ ಸೇರಿದ ಘಟನೆ ಕೇರಳದ ಮಲಪ್ಪುರಂನ (Malappuram) ತ್ರಿಕ್ಕಲಂಗೋಡ್‌ನಲ್ಲಿ (Trikkalangode) ನಡೆದಿದೆ.

    ಮೂರು ವರ್ಷದ ಹಿಂದೆ ರುಕ್ಮಿಣಿ ಕೆಲಸ ಮಾಡುವ ವೇಳೆ ಒಂದೂವರೆ ಪವನ್ ತೂಕವಿದ್ದ (12 ಗ್ರಾಂ) ಚಿನ್ನದ ಬಳೆಯನ್ನು ಕೈಯಿಂದ ತೆಗೆದಿಟ್ಟಿದ್ದರು. ಕ್ಷಣಾರ್ಧದಲ್ಲಿ ಕಾಗೆಯೊಂದು ಅವರ ಬಳೆಯನ್ನು ಎಗರಿಸಿತ್ತು. ಬಳೆಗಾಗಿ ಸ್ವಲ್ಪ ದಿನ ಹುಡುಕಾಡಿದ ರುಕ್ಮಿಣಿ ಕುಟುಂಬಸ್ಥರು ಬಳಿಕ ಅದರ ಆಸೆ ಕೈಬಿಟ್ಟಿದ್ದರು. ಇದನ್ನೂ ಓದಿ: ನಿತ್ಯ 1.05 ಕೋಟಿ ಲೀಟರ್ ಹಾಲು – KMF ಇತಿಹಾಸದಲ್ಲೇ ಮೊದಲ ಬಾರಿಗೆ ಅತಿಹೆಚ್ಚು ಸಂಗ್ರಹ

    ಮೂರು ತಿಂಗಳ ಹಿಂದೆ ಅನ್ವರ್ ಸಾದತ್ ಎಂಬವರು ತೆಂಗಿನಕಾಯಿ ಕೀಳಲು ಹೋದ ವೇಳೆ ಮಗಳಿಗಾಗಿ ಮಾವು ಕೀಳಲು ಅನುಮತಿ ಪಡೆದು ಮರ ಹತ್ತಿ ಕೊಂಬೆ ಅಲ್ಲಾಡಿಸಿದಾಗ ಹೊಳೆಯುತ್ತಿರುವ ವಸ್ತೊಂದು ಮರದಿಂದ ಕೆಳಗೆ ಬಿದ್ದಿದೆ. ಅದನ್ನು ಪುತ್ರಿ ಫಾತಿಮಾ ಹುದಾ ಗಮನಿಸಿದ್ದಾಳೆ. ಬಳಿಕ ಅದು ಚಿನ್ನವೇ ಎಂದು ಪರಿಶೀಲಿಸಿದಾಗ ಬಳೆ ತುಂಡಾಗಿದ್ದು, ಅಸಲಿ ಚಿನ್ನವೆಂಬುದು ಖಚಿತವಾಗಿದೆ. ರುಕ್ಮಿಣಿ ಮನೆಯಿಂದ ಕೇವಲ 50 ಮೀಟರ್ ದೂರದಲ್ಲೇ ಈ ಚಿನ್ನದ ಬಳೆ ಪತ್ತೆಯಾಗಿದೆ. ಇದನ್ನೂ ಓದಿ: ಕೆ.ಶಿವನಗೌಡ ನಾಯಕ್ ಕೊರಳಲ್ಲಿ ನವಿಲುಗರಿ ಹಾರ – ವಿವಾದದಲ್ಲಿ ಸಿಲುಕಿದ ಮಾಜಿ ಸಚಿವ

    ಅನ್ವರ್ ಸಾದತ್ ಈ ಚಿನ್ನದ ಬಳೆಯನ್ನು ಊರಿನ ಲೈಬ್ರರಿಗೆ ಕೊಟ್ಟು ಮಾಲೀಕರ ಕೈಸೇರಲಿ ಎಂದು ಪ್ರಾಮಾಣಿಕತೆ ಮೆರೆದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪತಿಯೊಂದಿಗೆ ಲೈಬ್ರರಿಗೆ ತೆರಳಿದ ರುಕ್ಮಿಣಿ ಬಳೆ ತನ್ನದೇ ಎಂದು ಖಚಿತಪಡಿಸಿಕೊಂಡಿದ್ದಾರೆ. ಕಳೆದು ಹೋಗಿದ್ದ ಚಿನ್ನದ ಬಳೆ ನೋಡಿ ಒಡತಿ ರುಕ್ಮಿಣಿ ದಿಲ್ ಖುಷ್ ಆಗಿದ್ದಾರೆ. ಪತ್ತೆ ಹಚ್ಚಿದವರ ಕೈಯಿಂದಲೇ ಬಳೆ ಪಡೆಯಬೇಕು ಎಂಬ ಮನವಿ ಮೇರೆಗೆ ಊರಿನವರು ಅನ್ವರ್ ಸಾದತ್ ಕೈಯಿಂದಲೇ ರುಕ್ಮಿಣಿ ಅವರಿಗೆ ಬಳೆಯನ್ನು ಮರಳಿ ಕೊಡಿಸಿದ್ದಾರೆ. ಬಳೆಯನ್ನು ಪಡೆದ ರುಕ್ಮಿಣಿ ಈ ಬಳೆಯನ್ನು ಮರಳಿ ಪಡೆಯುತ್ತೇನೆ ಎಂದು ಭಾವಿಸಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಹೆಣ್ಣು ಅಂತ 7 ವರ್ಷದ ಮಗಳನ್ನು ಕಾಲುವೆಗೆ ತಳ್ಳಿ ಕೊಂದ ಪಾಪಿ ತಂದೆ

  • ಪಾಕ್ ಬೇಹುಗಾರ್ತಿಗೆ ಕೇರಳ ಸರ್ಕಾರ ಧನಸಹಾಯ – ಸರ್ಕಾರದ ಖರ್ಚಿನಲ್ಲಿ ವ್ಲಾಗರ್ ಜ್ಯೋತಿ ಪ್ರವಾಸ

    ಪಾಕ್ ಬೇಹುಗಾರ್ತಿಗೆ ಕೇರಳ ಸರ್ಕಾರ ಧನಸಹಾಯ – ಸರ್ಕಾರದ ಖರ್ಚಿನಲ್ಲಿ ವ್ಲಾಗರ್ ಜ್ಯೋತಿ ಪ್ರವಾಸ

    ನವದೆಹಲಿ: ಪಾಕಿಸ್ತಾನದ ಪರ ಬೇಹುಗಾರಿಕೆ (Pakistan Spy) ಮಾಡಿದ ಆರೋಪ ಎದುರಿಸುತ್ತಿರುವ ಹರಿಯಾಣ ಮೂಲದ ವ್ಲಾಗರ್ ಜ್ಯೋತಿ ಮಲ್ಹೋತ್ರಾ (Jyoti Malhotra) ಕೇರಳ ಸರ್ಕಾರದ ಧನಸಹಾಯದಲ್ಲಿ ಪ್ರವಾಸ ಕೈಗೊಂಡಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

    ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾದ ಅರ್ಜಿಯ ಮೂಲಕ ಒದಗಿಸಲಾದ ದಾಖಲೆಗಳ ಪ್ರಕಾರ, ಜನವರಿ 2024 ಮತ್ತು ಮೇ 2025ರ ನಡುವೆ ಜ್ಯೋತಿ ಮಲ್ಹೋತ್ರಾ ಕೇರಳದ ಕೊಚ್ಚಿ, ತಿರುವನಂತಪುರಂ ಮತ್ತು ಇತರ ಕೆಲವು ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಈ ಭೇಟಿಯನ್ನು ಸಾಂಸ್ಕೃತಿಕ ಅಧ್ಯಯನ ಅಥವಾ ಸಂಶೋಧನೆಯ ಭಾಗವೆಂದು ವರ್ಗೀಕರಿಸಲಾಗಿತ್ತು. ಈ ಭೇಟಿಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಸರ್ಕಾರಿ ಯೋಜನೆಯಡಿ ಭರಿಸಲಾಗಿದೆ. ಆದರೆ, ಈ ಯೋಜನೆಯ ನಿಖರ ಸ್ವರೂಪ ಮತ್ತು ಜ್ಯೋತಿಯ ಚಟುವಟಿಕೆಗಳ ಕುರಿತು ಸ್ಪಷ್ಟ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಇದನ್ನೂ ಓದಿ: ಯಾರ ಕೈಗೂ ಸಿಗದೇ ಸರಳವಾಗಿ ಹುಟ್ಟುಹಬ್ಬ ಆಚರಿಸಿದ ರಿಷಬ್ ಶೆಟ್ಟಿ

    ಇನ್ನೂ ವಿದೇಶಿ ಗೂಢಚರ್ಯೆ ಆರೋಪಿತ ವ್ಯಕ್ತಿಯೊಬ್ಬರು ಸರ್ಕಾರಿ ಧನಸಹಾಯದ ಮೂಲಕ ರಾಜ್ಯಕ್ಕೆ ಭೇಟಿ ನೀಡಿರುವುದು, ಗೂಢಚರ್ಯೆಗೆ ಸಂಬಂಧಿಸಿದ ಶಂಕೆಗಳನ್ನು ಹೆಚ್ಚಿಸಿದೆ. ಕೇರಳದ ಸೂಕ್ಷ್ಮ ಭೌಗೋಳಿಕ ಸ್ಥಾನ ಮತ್ತು ರಾಜಕೀಯ ವಾತಾವರಣವನ್ನು ಗಮನಿಸಿದಾಗ, ಈ ಘಟನೆ ಇನ್ನಷ್ಟು ಗಂಭೀರವಾಗಿದೆ. ಈ ಆರೋಪದ ಕುರಿತು ಸಂಪೂರ್ಣ ತನಿಖೆಗೆ ಒತ್ತಾಯ ಕೇಳಿಬಂದಿದೆ. ಇದನ್ನೂ ಓದಿ: ಶಾಲೆ ಬಳಿ ಇದ್ದ ನೇರಳೆ ತಿಂದು 7 ವಿದ್ಯಾರ್ಥಿಗಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು

  • ವಯನಾಡಿನಲ್ಲಿ ಭಾರೀ ಮಳೆ – ಕಾಡಿನೊಳಗೆ ಭೂಕುಸಿತದ ಆತಂಕ, 12 ಜಿಲ್ಲೆಗಳಿಗೆ ಅಲರ್ಟ್

    ವಯನಾಡಿನಲ್ಲಿ ಭಾರೀ ಮಳೆ – ಕಾಡಿನೊಳಗೆ ಭೂಕುಸಿತದ ಆತಂಕ, 12 ಜಿಲ್ಲೆಗಳಿಗೆ ಅಲರ್ಟ್

    -ವರುಣನ ಅಬ್ಬರಕ್ಕೆ ಕಳೆದ ವರ್ಷದ ದುರಂತ ನೆನಪಿಸಿದ ಅವಶೇಷಗಳು

    ತಿರುವನಂತಪುರಂ: ಕೇರಳದಲ್ಲಿ (Kerala) ಮುಂಗಾರು ಅಬ್ಬರ ಜೋರಾಗಿದ್ದು, ರಾಜ್ಯದ 12 ಜಿಲ್ಲೆಗಳಿಗೆ ಭಾರೀ ಮಳೆ ಅಲರ್ಟ್ ಘೋಷಿಸಲಾಗಿದೆ.

    ರಾಜ್ಯದ ವಯನಾಡು, ಇಡುಕ್ಕಿ, ಪಾಲಕ್ಕಾಡ್, ಮಲಪ್ಪುರಂ ಜಿಲ್ಲೆಗಳಿಗೆ ಬುಧವಾರ ಆರೆಂಜ್ ಅಲರ್ಟ್ ಹಾಗೂ ಪತ್ತನಂತಿಟ್ಟ, ಆಲೆಪ್ಪಿ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಕೋಝಿಕ್ಕೋಡ್, ಕಣ್ಣೂರು, ಕಾಸರಗೋಡು ಜಿಲ್ಲೆಗಳಿಗೆ ಗುರುವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ಇದನ್ನೂ ಓದಿ: ಚಿತ್ರದುರ್ಗ | ಬಾತ್‌ರೂಮಲ್ಲಿ ವ್ಯಕ್ತಿಯ ಬರ್ಬರ ಹತ್ಯೆ – 7 ಆರೋಪಿಗಳ ಬಂಧನ

    ಕಳೆದ ವರ್ಷ ಸುರಿದ ಭಾರೀ ಮಳೆಗೆ ವಯನಾಡು ಅಕ್ಷರಶಃ ಬೆಚ್ಚಿ ಬಿದ್ದು, ಸುಮಾರು 250ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. ಇದೀಗ ಮಂಗಳವಾರ ಸಂಜೆಯಿಂದ ಮತ್ತೆ ಮಳೆ ಆರ್ಭಟ ಜೋರಾಗಿದೆ. ದುರಂತದಲ್ಲಿ ಕೊಚ್ಚಿ ಹೋಗಿದ್ದ ಚೂರಲ್ಮಲ ಸೇರಿದಂತೆ ಹಲವು ಗ್ರಾಮಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಸದ್ಯ ಕಾಡಿನೊಳಗೆ ಭೂಕುಸಿತ ಆಗಿದೆಯಾ ಎಂದು ಪರಿಶೀಲನೆ ನಡೆಸಲಾಗುತ್ತಿದೆ.

    ಸದ್ಯ ಭಾರೀ ಮಳೆಯಿಂದಾಗಿ ಕಳೆದ ವರ್ಷದಲ್ಲಿ ಸಂಭವಿಸಿದ್ದ ದುರಂತದ ಅವಶೇಷಗಳು ತೇಲಿಕೊಂಡು ಬರುತ್ತಿವೆ. ಇನ್ನೂ ವೆಲ್ಲರಿಮಲದ ಪುನ್ನಪುಳ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಲರ್ಟ್ ಘೋಷಿಸಿದೆ.ಇದನ್ನೂ ಓದಿ: ವಾರಕ್ಕೆ 3 ದಿನ ಕಾವೇರಿ ಆರತಿ – 10,000 ಆಸನಗಳ ವ್ಯವಸ್ಥೆ, 70% ಉಚಿತ, 30% ಟಿಕೆಟ್: ಡಿಕೆಶಿ

  • ಮೈದುಂಬಿ ಹರಿಯುತ್ತಿದ್ದಾಳೆ ಕಪಿಲಾ – ಮುಳುಗಡೆಯ ಭೀತಿಯಲ್ಲಿ ನಂಜನಗೂಡಿನ ಸ್ನಾನ ಘಟ್ಟ

    ಮೈದುಂಬಿ ಹರಿಯುತ್ತಿದ್ದಾಳೆ ಕಪಿಲಾ – ಮುಳುಗಡೆಯ ಭೀತಿಯಲ್ಲಿ ನಂಜನಗೂಡಿನ ಸ್ನಾನ ಘಟ್ಟ

    ಮೈಸೂರು: ಕೇರಳದ (Kerala) ವಯನಾಡಿನಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮೈಸೂರಿನ ಕಪಿಲಾ ನದಿ (Kapila River) ಮೈದುಂಬಿ ಹರಿಯುತ್ತಿದೆ.

    ಮಳೆಯ ಪರಿಣಾಮ ಹೆಚ್.ಡಿ ಕೋಟೆಯ (HD Kote) ಕಬಿನಿ ಜಲಾಶಯ ಬಹುಬೇಗ ಭರ್ತಿಯಾಗಿದೆ. ಜಲಾಶಯದ ಭದ್ರತಾ ದೃಷ್ಟಿಯಿಂದ ಹೊರಹರಿವು ಹೆಚ್ಚಿಸಲಾಗುತ್ತಿದ್ದು, ಪರಿಣಾಮ ಕಪಿಲಾ ನದಿ ಮೈದುಂಬಿ ಹರಿಯುತ್ತಿದೆ.ಇದನ್ನೂ ಓದಿ: ನೀನು ಚಪ್ಪಲಿ ಹೊಲಿಯಲು ಯೋಗ್ಯ: ನಿಂದಿಸಿದ್ದ ಮೂವರು ಇಂಡಿಗೋ ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ಕೇಸ್‌

    ಈಗಾಗಲೇ ನಂಜನಗೂಡಿನ ಶ್ರೀನಂಜುಂಡೇಶ್ವರಸ್ವಾಮಿಯ ಸ್ನಾನ ಘಟ್ಟದಲ್ಲಿನ 16 ಕಾಲು ಮಂಟಪಗಳು ಮುಳುಗಡೆಯ ಹಂತಕ್ಕೆ ಬಂದಿವೆ. ಸ್ನಾನಘಟ್ಟದ ಮೆಟ್ಟಿಲುಗಳು ಬಹುತೇಕ ಮುಳುಗಡೆಯಾಗಿವೆ. ಹೀಗಾಗಿ ಧ್ವನಿವರ್ಧಕದ ಮೂಲಕ ನದಿ ಹತ್ತಿರ ಹೋಗದಂತೆ ಜನರಿಗೆ ಎಚ್ಚರಿಕೆ ಸಂದೇಶ ನೀಡಲಾಗುತ್ತಿದೆ.

    ಕಪಿಲಾ ನದಿ ನೋಡಲು ಭಕ್ತಾದಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ನದಿ ಹತ್ತಿರ ಸುಳಿಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.ಇದನ್ನೂ ಓದಿ: ಯಶ್‌ಗೆ ಹಾಲಿವುಡ್‌ನ ಆಸ್ಕರ್ ವಿಜೇತ ಪ್ರೊಡ್ಯೂಸರ್ ಬಲ!

  • ವಯನಾಡಲ್ಲಿ ಮಳೆಯಬ್ಬರ – ಕಬಿನಿ ಜಲಾಶಯಕ್ಕೆ 22 ಸಾವಿರ ಕ್ಯುಸೆಕ್ ಒಳಹರಿವು

    ವಯನಾಡಲ್ಲಿ ಮಳೆಯಬ್ಬರ – ಕಬಿನಿ ಜಲಾಶಯಕ್ಕೆ 22 ಸಾವಿರ ಕ್ಯುಸೆಕ್ ಒಳಹರಿವು

    ಮೈಸೂರು: ಕೇರಳದ (Kerala) ವಯನಾಡಿನಲ್ಲಿ ಮಳೆ ಹೆಚ್ಚಾದ ಹಿನ್ನೆಲೆ ಕಬಿನಿ ಜಲಾಶಯಕ್ಕೆ (Kabini Dam) 22,487 ಕ್ಯುಸೆಕ್ ಒಳಹರಿವು ಹೆಚ್ಚಾಗಿದೆ.ಇದನ್ನೂ ಓದಿ: Air India Plane crash | ಡೇಟಾ ರಿಕವರಿಗಾಗಿ ಬ್ಲ್ಯಾಕ್‌ ಬಾಕ್ಸ್ ಅಮೆರಿಕಕ್ಕೆ ರವಾನೆ

     

    ವರ್ಷಕ್ಕೆ 2 ಬಾರಿ ತುಂಬುವ ರಾಜ್ಯದ ಏಕೈಕ ಜಲಾಶಯವೆಂದರೆ ಅದು ಮೈಸೂರಿನ ಹೆಚ್.ಡಿ ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ. ಮೈಸೂರು, ಬೆಂಗಳೂರು, ಚಾಮರಾಜನಗರ ಜಿಲ್ಲೆಗೆ ನೀರನ್ನು ಇದೇ ಜಲಾಶಯದಿಂದ ಪೊರೈಸಲಾಗುತ್ತದೆ.

    ಇದೀಗ ಕಬಿನಿ ಡ್ಯಾಂಗೆ 22,487 ಕ್ಯುಸೆಕ್ ನೀರು ಹರಿದು ಬರುತ್ತಿದೆ. 2,284 ಅಡಿ ಗರಿಷ್ಠ ಸಾಮರ್ಥ್ಯ ಹೊಂದಿದ್ದು, ಸದ್ಯ 2,280.84 ಅಡಿ ನೀರಿದೆ. ಇನ್ನೂ 19.52 ಟಿಎಂಸಿ ಗರಿಷ್ಠ ಸಾಮರ್ಥ್ಯ ಹೊಂದಿದ್ದು, ಈಗ 17.38 ಟಿಎಂಸಿ ನೀರಿದೆ. 21,000 ಕ್ಯುಸೆಕ್ ಹೊರಹರಿವಿದೆ.ಇದನ್ನೂ ಓದಿ: ಕ್ರೊಯೇಷಿಯಾಗೆ ಮೋದಿ ಭೇಟಿ – ಪ್ರಧಾನಿ ಪ್ಲೆಂಕೋವಿಕ್ ಜೊತೆ ಹಲವು ಒಪ್ಪಂದಗಳಿಗೆ ಸಹಿ