Tag: ಕೇರಳ

  • PublicTV Explainer: ಆಗಸದಲ್ಲೂ ಹಾರುತ್ತೆ, ನೀರಲ್ಲೂ ಲ್ಯಾಂಡ್‌ ಆಗುತ್ತೆ; ಏನಿದು ಸೀ ಪ್ಲೇನ್? – ಕರ್ನಾಟಕಕ್ಕೂ ಜಲ ವಿಮಾನ ಬರುತ್ತಾ?

    PublicTV Explainer: ಆಗಸದಲ್ಲೂ ಹಾರುತ್ತೆ, ನೀರಲ್ಲೂ ಲ್ಯಾಂಡ್‌ ಆಗುತ್ತೆ; ಏನಿದು ಸೀ ಪ್ಲೇನ್? – ಕರ್ನಾಟಕಕ್ಕೂ ಜಲ ವಿಮಾನ ಬರುತ್ತಾ?

    – ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಸೀ ಪ್ಲೇನ್ ಹಾರಾಟ

    ಪ್ರವಾಸೋದ್ಯಮ ಉತ್ತೇಜಿಸಲು ಮತ್ತು ಪ್ರಯಾಣಿಕರಿಗೆ ವಿಶೇಷ ಪ್ರಯಾಣದ ಅನುಭವದ ಜೊತೆಗೆ ಇನ್ನಿತರ ತುರ್ತು ಸಾರಿಗೆ ಸೇವೆಗಳ ಉದ್ದೇಶ ಹೊಂದಿರುವ ‘ಸೀ ಪ್ಲೇನ್ ಯೋಜನೆ’ (Sea Plane) ದಕ್ಷಿಣ ಭಾರತಕ್ಕೂ ಕಾಲಿಟ್ಟಿದೆ. ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಕೇರಳದಲ್ಲಿ ಜಲ ವಿಮಾನ ಸೇವೆಯನ್ನು ಆರಂಭಿಸಲಾಗಿದೆ. ಈ ವಿಶೇಷ ವಿಮಾನದಲ್ಲಿ ಹಾರಾಟ ನಡೆಸಿ ಪ್ರಯಾಣಿಕರು ಖುಷಿಪಟ್ಟಿದ್ದಾರೆ. ನಿಜಕ್ಕೂ ಜನರಿಗೆ ಇದೊಂದು ವಿಶೇಷ ಪ್ರಯಾಣದ ಅನುಭವ ಒದಗಿಸುತ್ತದೆ.

    ಆರ್‌ಸಿಎಸ್-ಉಡಾನ್ ಯೋಜನೆಯಡಿಯಲ್ಲಿ ಪ್ರಾದೇಶಿಕ ವಾಯು ಸಂಪರ್ಕ ಹೆಚ್ಚಿಸಿ, ಜಲ-ಆಧಾರಿತ ವಾಯುಯಾನದ ಮೂಲಕ ಪ್ರವಾಸೋದ್ಯಮ ಉತ್ತೇಜಿಸಲು ಕೇಂದ್ರ ಸರ್ಕಾರ ಭಾರತದಲ್ಲಿ ಸೀ ಪ್ಲೇನ್ ಯೋಜನೆ ಜಾರಿಗೆ ತಂದಿತು. 2020ರಲ್ಲಿ ಗುಜರಾತ್‌ನ ನರ್ಮದಾ ಜಿಲ್ಲೆಯ ಸಬರಮತಿ ನದಿಯಲ್ಲಿ ಮೊದಲನೇ ಸೀ ಪ್ಲೇನ್ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಕೇರಳದಲ್ಲೂ ಈಗ ಯೋಜನೆಯನ್ನು ಯಶಸ್ವಿಯಾಗಿ ಪರಿಚಯಿಸಲಾಗಿದೆ.

    ಏನಿದು ಸೀ ಪ್ಲೇನ್? ಇದರ ವಿಶೇಷತೆ ಏನು? ಪ್ರಯಾಣಿಕರಿಗೆ ಇದರಿಂದಾಗುವ ಅನುಕೂಲಗಳೇನು? ಕೇರಳದಂತೆಯೇ ಕರ್ನಾಟಕದಲ್ಲೂ ಯೋಜನೆ ಶೀಘ್ರ ಜಾರಿಯಾಗುತ್ತಾ ಎಂಬ ಅನೇಕ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

    ಕೇರಳದಲ್ಲಿ ಸೀ ಪ್ಲೇನ್ ಟೇಕಾಫ್!
    ಕೇರಳದ ಮಹತ್ವಾಕಾಂಕ್ಷೆಯ ಸೀ ಪ್ಲೇನ್ (ಜಲ ವಿಮಾನ) ಯೋಜನೆಯು ಟೇಕಾಫ್ ಆಗಿದೆ. ಮೊದಲ ಸೀಪ್ಲೇನ್ ನ.10 ರಂದು ಮಧ್ಯಾಹ್ನ 2:30ಕ್ಕೆ ಕೊಚ್ಚಿಯ ಬೋಲ್ಗಟ್ಟಿ ಹಿನ್ನೀರಿನಲ್ಲಿ ಇಳಿಯಿತು. ಪ್ರವಾಸೋದ್ಯಮ ಸಚಿವ ಪಿ.ಎ. ಮುಹಮ್ಮದ್ ರಿಯಾಸ್ ಅವರು ನ.11 ಬೆಳಗ್ಗೆ 9:30 ಕ್ಕೆ ಬೋಲ್ಗಟ್ಟಿಯಿಂದ ಮುನ್ನಾರ್ ಬಳಿಯ ಮಟ್ಟುಪೆಟ್ಟಿ ಜಲಾಶಯಕ್ಕೆ ಪ್ರಾಯೋಗಿಕ ಸೀ ಪ್ಲೇನ್ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಿದರು.

    ಸೀ ಪ್ಲೇನ್ ಎಂದರೇನು?
    ನೀರಿನ ಮೇಲಿನಿಂದಲೇ ಹಾರಾಟ ನಡೆಸುವ ಮತ್ತು ನೀರಿನ ಮೇಲೆಯೇ ಇಳಿಯುವ ವಿಮಾನ ಸಾರಿಗೆ ವ್ಯವಸ್ಥೆಯೇ ಸೀ ಪ್ಲೇನ್.

    ವಿಶೇಷತೆ ಏನು?
    ಇದೊಂದು ಉಭಯಚರ ವಿಮಾನ. ಭೂಮಿ ಮತ್ತು ನೀರು ಎರಡರಲ್ಲೂ ಟೇಕಾಫ್ ಮತ್ತು ಲ್ಯಾಂಡಿಂಗ್ ಸಾಮರ್ಥ್ಯ ಹೊಂದಿದೆ.

    ಉದ್ಘಾಟನೆಯಾಗಿದ್ದೆಲ್ಲಿ?
    ಕೇರಳ ರಾಜ್ಯದಲ್ಲಿ ಜಲ ವಿಮಾನಕ್ಕೆ ಪ್ರಾಯೋಗಿಕ ಚಾಲನೆ ನೀಡಲಾಯಿತು.

    ಎಷ್ಟು ಜನ ಪ್ರಯಾಣಿಸಬಹುದು?
    ವಿಮಾನದಲ್ಲಿ ಒಮ್ಮೆ 9 ಮಂದಿ ಪ್ರಯಾಣಿಸಬಹುದು.

    ಕೊಚ್ಚಿಯಿಂದ ಮನ್ನಾರ್‌ಗೆ ಕೇವಲ 25 ನಿಮಿಷ?
    * ಕೇವಲ 25 ನಿಮಿಷಗಳಲ್ಲಿ ಕೊಚ್ಚಿಯಿಂದ ಮನ್ನಾರ್‌ಗೆ ಪ್ರಯಾಣಿಸಬಹುದು. (ರಸ್ತೆಯ ಮೂಲಕ ಮನ್ನಾರ್ ತಲುಪಲು ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 3 ಗಂಟೆಗಳು ಮತ್ತು ಎರ್ನಾಕುಲಂ ರೈಲು ನಿಲ್ದಾಣದಿಂದ 3.5 ಗಂಟೆಗಳು ತೆಗೆದುಕೊಳ್ಳುತ್ತದೆ)
    * ವೈದ್ಯಕೀಯ ಸಾರಿಗೆ, ತುರ್ತು ಸ್ಥಳಾಂತರಿಸುವಿಕೆ, ವಿಐಪಿ ಟ್ರಾವೆಲ್ಸ್ ವಲಯಗಳನ್ನು ಉತ್ತೇಜಿಸುತ್ತದೆ.

    ರಮಣೀಯ ಸ್ಥಳಗಳ ವೀಕ್ಷಣೆ
    ಜಲ ವಿಮಾನಗಳು ದೊಡ್ಡ ಕಿಟಕಿಗಳ ಮೂಲಕ ಬೆರಗುಗೊಳಿಸುವ ವೈಮಾನಿಕ ವೀಕ್ಷಣೆಯ ಪ್ರಯೋಜನವನ್ನು ನೀಡುತ್ತವೆ. ಪ್ರಯಾಣಿಕರಿಗೆ ಕೇರಳದ ರಮಣೀಯ ಭೂದೃಶ್ಯಗಳು, ವಿಶೇಷವಾಗಿ ಪಶ್ಚಿಮ ಘಟ್ಟಗಳು ಮತ್ತು ಮುನ್ನಾರ್‌ಗಳ ಮೇಲೆ ಅನನ್ಯ ಅನುಭವವನ್ನು ನೀಡುತ್ತದೆ.

    ಮಟ್ಟುಪೆಟ್ಟಿ, ಮಲಂಪುಳ, ವೆಂಬನಾಡು, ಅಷ್ಟಮುಡಿಕ್ಕಯಲ್, ಚಂದ್ರಗಿರಿಪುಳ ಮತ್ತು ಕೋವಲಂ ಸೇರಿದಂತೆ ರಾಜ್ಯದಾದ್ಯಂತ ಪ್ರಮುಖ ಜಲಮೂಲಗಳು ಮತ್ತು ವಿಮಾನ ನಿಲ್ದಾಣಗಳನ್ನು ಸಂಪರ್ಕಿಸುವ ಸೀ ಪ್ಲೇನ್ ಪ್ರವಾಸೋದ್ಯಮ ಸರ್ಕ್ಯೂಟ್ ಅನ್ನು ಅಭಿವೃದ್ಧಿಪಡಿಸಲು ಸರ್ಕಾರ ಯೋಜಿಸಿದೆ.

    ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಿದರೆ ಪ್ರವಾಸ ಕಂಪನಿಗಳು ಮನ್ನಾರ್ ಮತ್ತು ಹತ್ತಿರದ ಪ್ರದೇಶಗಳಿಗೆ ಹೆಚ್ಚಿನ ಅಂತರರಾಷ್ಟ್ರೀಯ ಪ್ರವಾಸಿಗರನ್ನು ಕರೆತರುತ್ತವೆ. ಅಲ್ಲದೆ, ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಸೇವೆಗಾಗಿ ರೋಗಿಗಳನ್ನು ಸಾಗಿಸಬಹುದು. ಕಾಂತಲ್ಲೂರು ಮತ್ತು ಮರಯೂರಿನಲ್ಲಿರುವ ಸಮೀಪದ ಕುಗ್ರಾಮಗಳ ಜನರಿಗೆ ಇದು ಪ್ರಯೋಜನವನ್ನು ನೀಡುತ್ತದೆ.

    ಟಿಕೆಟ್ ದರ ಎಷ್ಟು?
    ಕೊಚ್ಚಿ-ಮುನ್ನಾರ್ ಸೀ ಪ್ಲೇನ್ ಟಿಕೆಟ್ ಶುಲ್ಕವನ್ನು ಅಧಿಕಾರಿಗಳು ಇನ್ನೂ ಘೋಷಿಸಿಲ್ಲ. ಏಕೆಂದರೆ, ಇದು ಪ್ರಾಯೋಗಿಕ ಹಂತದಲ್ಲಿದೆ. ಆದಾಗ್ಯೂ, ಈ ಹಿಂದೆ ಉಡಾನ್ ಯೋಜನೆಯಡಿಯಲ್ಲಿ ಈಗ ನಿಷ್ಕ್ರಿಯವಾಗಿರುವ ಗುರುಗ್ರಾಮ್‌ನಿಂದ ಸ್ಟ್ಯಾಚ್ಯು ಆಫ್ ಲಿಬರ್ಟಿ ಸೇವೆಗಳಿಗೆ ವಿಧಿಸಲಾದ ಶುಲ್ಕಗಳನ್ನು ಪರಿಗಣಿಸಿದರೆ, ಒಂದು ಮಾರ್ಗದ ದರಗಳು 1,500 ರೂ. ರಿಂದ 5,000 ರೂ. ವರೆಗೆ ವಿಧಿಸುವ ಸಾಧ್ಯತೆ ಇದೆ.

    ಯಾವ ಸಮಯದಲ್ಲಿ ಹಾರಾಟ?
    ಜಲ ವಿಮಾನಗಳು ಸಾಮಾನ್ಯವಾಗಿ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಹಗಲಿನ ಸಮಯದಲ್ಲಿ ಮಾತ್ರ ಹಾರಾಟ ನಡೆಸುತ್ತವೆ. ವಿಮಾನ ಹಾರಾಟ ನಡೆಸುವ ಮಾರ್ಗದಲ್ಲಿ ಹೆಚ್ಚಿನ ಭಾಗ ಅರಣ್ಯದಿಂದ ಕೂಡಿರುತ್ತದೆ. ಹೀಗಾಗಿ, ರಾತ್ರಿ ಸಮಯದ ಹಾರಾಟ ದುರ್ಗಮವಾಗಿರುತ್ತದೆ.

    ಲಗೇಜ್ ಸಾಗಿಸಬಹುದೇ?
    ಸೀ ಪ್ಲೇನ್‌ಗಳಲ್ಲಿ 25 ಕೆಜಿ ತೂಕದ ವರೆಗಿನ ಲಗೇಜ್‌ಗಳಿಗೆ ಅನುಮತಿ ಇರುತ್ತದೆ. 20 ಚೆಕ್-ಇನ್ ಬ್ಯಾಗೇಜ್ ಮತ್ತು 5 ಕೆಜಿ ಕ್ಯಾಬಿನ್ ಬ್ಯಾಗೇಜ್ ಸಾಗಿಸಬಹುದು.

    ಸೀ ಪ್ಲೇನ್‌ಗಳಿಂದ ಆನೆಗಳ ಸಂಚಾರಕ್ಕೆ ಅಡ್ಡಿ?
    ಸೀ ಪ್ಲೇನ್ ಶಬ್ದದಿಂದ ಮಟ್ಟುಪೆಟ್ಟಿಯಲ್ಲಿ ಆನೆಗಳ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಅರಣ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಇಲ್ಲಿನ ಅರಣ್ಯ ಪ್ರದೇಶದಲ್ಲಿ ಹತ್ತು ಕಾಡಾನೆಗಳಿವೆ. ನೀರು ಕುಡಿಯಲು ಮಟ್ಟುಪೆಟ್ಟಿ ಅಣೆಕಟ್ಟು ಮತ್ತು ಸಮೀಪದ ಪ್ರದೇಶಗಳಿಗೆ ಆಗಾಗ್ಗೆ ಬರುತ್ತಾರೆ. ಸೀ ಪ್ಲೇನ್ ಪ್ರೊಪೆಲ್ಲರ್‌ನ ವಿಝಿಂಗ್ ಶಬ್ದವು ಆನೆಗಳನ್ನು ಹೆದರಿಸಬಹುದು. ಹಾಗಾಗಿ, ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಕೆಎಸ್‌ಇಬಿ, ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಟ್ಟುಪೆಟ್ಟಿ ಜಲಾಶಯಕ್ಕೆ ಸೀಪ್ಲೇನ್ ಇಳಿಸುವ ಕ್ರಮವನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ. ಆರಂಭದಲ್ಲಿ ಇಡುಕ್ಕಿ ಅಣೆಕಟ್ಟಿನಲ್ಲಿ ಇಳಿಯಲು ಯೋಜಿಸಲಾಗಿದ್ದ ಸೀ ಪ್ಲೇನ್ ಅರಣ್ಯ ಇಲಾಖೆಯ ಆಕ್ಷೇಪಣೆಯಿಂದಾಗಿ ನಂತರ ಮಟ್ಟುಪೆಟ್ಟಿಗೆ ಸ್ಥಳಾಂತರಿಸಲಾಯಿತು.

    ಕರ್ನಾಟಕಕ್ಕೂ ಬರುತ್ತಾ ಸೀ ಪ್ಲೇನ್?
    ರಾಜ್ಯದಲ್ಲೂ ಜಲ ವಿಮಾನ ಪ್ರಾಯೋಗಿಕ ಹಾರಾಟ ನಡೆಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ‌ ಎನ್ನಲಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆಯ ಹಿನ್ನೀರಿನ ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿ ಸ್ಥಳ ನಿಗದಿಪಡಿಸಲಾಗಿದೆ. 12 ಪ್ರವಾಸಿಗರನ್ನು ಹೊತ್ತು ಸೀ ಪ್ಲೇನ್ ಕೆಆರ್‌ಎಸ್ ಹಿನ್ನೀರಿನಲ್ಲಿ ಹಾರಾಟ ನಡೆಸುವ ಸಾಧ್ಯತೆ ಇದೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣವನ್ನು ಸಾರಿಗೆ ಕೇಂದ್ರವಾಗಿ ಬಳಸಲಿವೆ ಎಂಬ ಮಾಹಿತಿ ಇದೆ.

  • ಹಿಂದೂ ವಾಟ್ಸಪ್‌ ಗ್ರೂಪ್‌ ರಚನೆ, ಹಿರಿಯ ಅಧಿಕಾರಿ ನಿಂದನೆ ಆರೋಪ – ಇಬ್ಬರು IAS ಅಧಿಕಾರಿಗಳು ಅಮಾನತು

    ಹಿಂದೂ ವಾಟ್ಸಪ್‌ ಗ್ರೂಪ್‌ ರಚನೆ, ಹಿರಿಯ ಅಧಿಕಾರಿ ನಿಂದನೆ ಆರೋಪ – ಇಬ್ಬರು IAS ಅಧಿಕಾರಿಗಳು ಅಮಾನತು

    ತಿರುವನಂತಪುರಂ: ಧರ್ಮ ಆಧಾರಿತ ವಾಟ್ಸಪ್‌ ಗ್ರೂಪ್‌ ರಚನೆ, ಹಿರಿಯ ಅಧಿಕಾರಿ ವಿರುದ್ಧ ಟೀಕೆ ಆರೋಪದ ಮೇಲೆ ಇಬ್ಬರು ಐಎಎಸ್‌ ಅಧಿಕಾರಿಗಳನ್ನು (IAS Officers) ಕೇರಳ ಸರ್ಕಾರ ಅಮಾನತು ಮಾಡಿದೆ.

    ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶಕರಾದ ಕೆ. ಗೋಪಾಲಕೃಷ್ಣನ್ ಅವರು ಸರ್ಕಾರಿ ಅಧಿಕಾರಿಗಳೊಂದಿಗೆ ಧರ್ಮ ಆಧಾರಿತ ವಾಟ್ಸಾಪ್ ಗ್ರೂಪ್‌ ಮಾಡಿದ್ದರು. ಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣ ಇಲಾಖೆಯ ವಿಶೇಷ ಕಾರ್ಯದರ್ಶಿ ಎನ್.ಪ್ರಶಾಂತ್ ಅವರು ಹಿರಿಯ ಅಧಿಕಾರಿಯ ವಿರುದ್ಧ ಟೀಕೆ ಮತ್ತು ಗಂಭೀರ ಆರೋಪ ಮಾಡಿದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ: ಏರ್ ಇಂಡಿಯಾದೊಂದಿಗೆ ವಿಸ್ತಾರ ವಿಲೀನ – ದೋಹಾದಿಂದ ಮುಂಬೈಗೆ ಮೊದಲ ವಿಮಾನ ಹಾರಾಟ

    ಮುಖ್ಯ ಕಾರ್ಯದರ್ಶಿ ಶಾರದಾ ಮುರಳೀಧರನ್ ಅವರ ವರದಿಯ ಮೇರೆಗೆ ಮುಖ್ಯಮಂತ್ರಿಗಳು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಕಳೆದ ತಿಂಗಳು ‘ಮಲ್ಲು ಹಿಂದೂ ಆಫೀಸರ್ಸ್’ ಎಂಬ ಹೆಸರಿನ ವಾಟ್ಸಪ್ ಗ್ರೂಪ್ ಅನ್ನು ರಚಿಸಿದ್ದಕ್ಕಾಗಿ 2013ರ ಬ್ಯಾಚ್ ಅಧಿಕಾರಿ ಗೋಪಾಲಕೃಷ್ಣನ್ ಅವರನ್ನು ಅಮಾನತುಗೊಳಿಸಲಾಗಿದೆ. ಐಎಎಸ್ ಅಧಿಕಾರಿ ತನ್ನ ಫೋನ್ ಹ್ಯಾಕ್ ಆಗಿದೆ ಎಂದು ಹೇಳಿಕೊಂಡಿದ್ದರು. ಅಧಿಕಾರಿಗಳ ಪ್ರಕಾರ, ಫೋನ್‌ನ ಫೊರೆನ್ಸಿಕ್ ಪರೀಕ್ಷೆಯು ಅದನ್ನು ಹ್ಯಾಕ್ ಮಾಡಲಾಗಿದೆ ಎಂದು ದೃಢಪಡಿಸಲಿಲ್ಲ.

    2007 ರ ಬ್ಯಾಚ್ ಅಧಿಕಾರಿ ಎನ್.ಪ್ರಶಾಂತ್ ಪ್ರಕರಣದಲ್ಲಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎ. ಜಯತಿಲಕ್ ವಿರುದ್ಧ ಫೇಸ್‌ಬುಕ್ ಪೋಸ್ಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ. ಹಿರಿಯ ಅಧಿಕಾರಿ ತಮ್ಮ ವಿರುದ್ಧ ಆಧಾರ ರಹಿತ ಸುದ್ದಿ ವರದಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಜಯತಿಲಕ್ ಅವರು ಆಧಾರರಹಿತ ಆರೋಪಗಳನ್ನು ಹರಡುವ ಮೂಲಕ ತಮ್ಮನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಾಂತ್ ಆರೋಪಿಸಿದ್ದರು. ಹಿರಿಯ ಅಧಿಕಾರಿಯನ್ನು ‘ಸೈಕೋಪಾತ್’ ಎಂದು ಟೀಕಿಸಿದ್ದರು. ಇದನ್ನೂ ಓದಿ: ಉತ್ತರಾಖಂಡ್ ಹೋಟೆಲ್‌ನಲ್ಲಿ ಕತ್ತು ಸೀಳಿ ಜಾದವ್‌ಪುರ ವಿವಿ ಪ್ರೊಫೆಸರ್ ಹತ್ಯೆ

    ಕೇರಳದ ಕಂದಾಯ ಸಚಿವ ಕೆ.ರಾಜನ್, ಸರ್ಕಾರಿ ಅಧಿಕಾರಿಗಳು ಸೇವೆಯಲ್ಲಿದ್ದಾಗ ಶಿಸ್ತನ್ನು ಅನುಸರಿಸಬೇಕು. ಯಾರಾದರೂ ಅದನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಈ ಹಿಂದೆ ಎಚ್ಚರಿಸಿದ್ದರು.

  • ಜಮಾತ್-ಎ-ಇಸ್ಲಾಮಿ ಬೆಂಬಲದೊಂದಿಗೆ ಪ್ರಿಯಾಂಕಾ ವಯನಾಡಿನಲ್ಲಿ ಸ್ಪರ್ಧೆ – ಪಿಣರಾಯಿ ವಿಜಯನ್‌

    ಜಮಾತ್-ಎ-ಇಸ್ಲಾಮಿ ಬೆಂಬಲದೊಂದಿಗೆ ಪ್ರಿಯಾಂಕಾ ವಯನಾಡಿನಲ್ಲಿ ಸ್ಪರ್ಧೆ – ಪಿಣರಾಯಿ ವಿಜಯನ್‌

    – ಕಾಂಗ್ರೆಸ್‌ನ ಜಾತ್ಯತೀತ ಮುಖವಾಡ ಬಯಲಾಗಿದೆ ಎಂದ ಸಿಎಂ

    ತಿರುವನಂತಪುರಂ: ವಯನಾಡ್ ಲೋಕಸಭಾ ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಜಮಾತ್-ಎ-ಇಸ್ಲಾಮಿ ಬೆಂಬಲದೊಂದಿಗೆ ಸ್ಪರ್ಧಿಸುತ್ತಿದ್ದಾರೆ ಎಂದು ಸಿಎಂ ಪಿಣರಾಯಿ ವಿಜಯನ್ (Pinarayi Vijayan) ಆರೋಪಿಸಿದ್ದಾರೆ.

    ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಕೇರಳ ಸಿಎಂ, ಕಾಂಗ್ರೆಸ್‌ನ ಜಾತ್ಯತೀತ ಮುಖವಾಡ ಈಗ ಬಯಲಾಗಿದೆ ಎಂದು ಟೀಕಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಜಮಾತ್-ಎ-ಇಸ್ಲಾಮಿ (Jamaat-E-Islami) ಬೆಂಬಲದೊಂದಿಗೆ ಸ್ಪರ್ಧೆ ಮಾಡ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ನಿಲುವೇನು? ಅವರ ಸಿದ್ಧಾಂತ ಪ್ರಜಾಪ್ರಭುತ್ವದ ಜೊತೆ ಹೊಂದಾಣಿಕೆ ಆಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.

    ಜಮಾತ್-ಎ-ಇಸ್ಲಾಮಿ ದೇಶ ಅಥವಾ ಪ್ರಜಾಪ್ರಭುತ್ವವನ್ನು ಗೌರವಿಸುವುದಿಲ್ಲ, ರಾಷ್ಟ್ರದ ಆಡಳಿತ ರಚನೆಯನ್ನು ಕಡೆಗಣಿಸುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಹಳ ಹಿಂದಿನಿಂದಲೂ ಚುನಾವಣೆಗಳನ್ನು ವಿರೋಧಿಸುತ್ತಾ ಬಂದಿದೆ. ಹಿಂದೆ ಕಾಶ್ಮೀರದಲ್ಲಿ (Kashmir) ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು ಎಂದು ದೂರಿದ್ದಾರೆ.

    ವಯನಾಡಿನಲ್ಲಿರುವ ಜಮಾತ್-ಎ-ಇಸ್ಲಾಮಿ ಜಮ್ಮು-ಕಾಶ್ಮೀರದಲ್ಲಿರುವ ಸಂಘಟನೆಗಿಂತ ಭಿನ್ನ ಎಂದು ಹೇಳಿಕೊಳ್ಳುತ್ತೆ. ಆದ್ರೆ ಸಿದ್ಧಾಂತ ಒಂದೇ ಅಲ್ಲವೇ ಅಂತ ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಲಿಗಢ ಮುಸ್ಲಿಂ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ಕೇಸ್‌ – ವಿವಿ ಯಾರು ಸ್ಥಾಪಿಸಿದ್ರು ಅನ್ನೋದರ ಮೇಲೆ ನಿರ್ಧರಿಸಲಾಗುತ್ತೆ: ಸುಪ್ರೀಂ

    ಜಾತ್ಯತೀತತೆ ಪರವಾಗಿ ನಿಲ್ಲುವವರು ಎಲ್ಲಾ ರೀತಿಯ ಮತೀಯತೆಯನ್ನು ವಿರೋಧಿಸಬೇಕಲ್ಲವೇ? ಆದ್ರೆ ಕಾಂಗ್ರೆಸ್‌ನಿಂದ ಜಮಾತ್‌ ಎ ಇಸ್ಲಾಮಿಯನ್ನು ವಿರೋಧಿಸಲು ಸಾಧ್ಯವಿಲ್ಲ. ಏಕೆಂದರೆ ಅದರ ಬೆಂಬಲದೊಂದಿಗೆ ಕಾಂಗ್ರೆಸ್‌ ಸ್ಪರ್ಧೆ ಮಾಡುತ್ತಿದೆ. ಅದಕ್ಕಾಗಿ ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳು ಇಸ್ಲಾಮಿಯೊಂದಿಗೆ ಮೈತ್ರಿ ಉಳಿಸಿಕೊಳ್ಳಲು ತ್ಯಾಗ ಮಾಡುತ್ತಿರುವಂತೆ ತೋರುತ್ತದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ವಿವಾದಕ್ಕೆ ಕಾರಣವಾದ ರಾಗಾ `ರೆಡ್‌ ಬುಕ್’ – ಸಂವಿಧಾನ ಪ್ರತಿ ಎಂದ ಪುಸ್ತಕದಲ್ಲಿ ಖಾಲಿ ಹಾಳೆ: ಫಡ್ನವಿಸ್‌ ಕೌಂಟರ್‌

    ಈ ಮಧ್ಯೆ, ವಯನಾಡ್ ಭೂಕುಸಿತದ ವೇಳೆ ಕೇರಳಕ್ಕೆ ಕರ್ನಾಟಕ ಕಾಂಗ್ರೆಸ್ ಕೂಡ ಸಾಕಷ್ಟು ರೇಷನ್ ಕಿಟ್‌ಗಳನ್ನು ಕಳಿಸಿಕೊಟ್ಟಿತ್ತು. ಅದರಲ್ಲಿ ಉಳಿದಿದ್ದ ಕೆಲವು ರೇಷನ್ ಕಿಟ್‌ಗಳನ್ನು ಈಗ ಉಪಚುನಾವಣೆಗೆ ಬಳಸಲಾಗ್ತಿದೆ ಅಂತ ಆರೋಪ ಬಂದಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ಸಿದ್ದರಾಮಯ್ಯ, ಡಿಕೆಶಿ ಚಿತ್ರವಿರುವ ಫುಡ್‌ಕಿಟ್‌ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ವಯನಾಡಿನ ತೊಲ್ಪೆಟ್ಟಿಯಲ್ಲಿ ಫುಡ್ ಕಿಟ್ ಸಂಗ್ರಹಿಸಿದ್ದ ಮನೆ ಮೇಲೆ ದಾಳಿ ಮಾಡಲಾಗಿದೆ. ಇದನ್ನೂ ಓದಿ: Waqf Amendment Bill | ವಿಪಕ್ಷ ನಾಯಕರಿಂದ ಜೆಪಿಸಿ ರಾಜ್ಯ ಪ್ರವಾಸ ಬಹಿಷ್ಕಾರ

  • ರಾಜ್ಯಕ್ಕೆ ಎಂಟ್ರಿಯಾಗ್ತಿದೆ ಕೇರಳ ತ್ಯಾಜ್ಯ – ವಾಹನಗಳನ್ನು ಹಿಡಿದ ಗಡಿಜಿಲ್ಲೆಯ ಜನರು

    ರಾಜ್ಯಕ್ಕೆ ಎಂಟ್ರಿಯಾಗ್ತಿದೆ ಕೇರಳ ತ್ಯಾಜ್ಯ – ವಾಹನಗಳನ್ನು ಹಿಡಿದ ಗಡಿಜಿಲ್ಲೆಯ ಜನರು

    -ತ್ಯಾಜ್ಯ ಹೊತ್ತು ತಂದ ಐದು ಲಾರಿ ಸೀಜ್, ಐವರ ವಿರುದ್ಧ ಎಫ್‌ಐಆರ್

    ಚಾಮರಾಜನಗರ: ಗಡಿಜಿಲ್ಲೆ ಚಾಮರಾಜನಗರಕ್ಕೆ (Chamarajangar) ಮತ್ತೇ ಮತ್ತೇ ಕೇರಳದಿಂದ ಕಸ ಬರುತ್ತಿದೆ. ಜಿಲ್ಲೆಯ ಗುಂಡ್ಲುಪೇಟೆ ಕೇರಳದ ತ್ಯಾಜ್ಯ ಸುರಿಯುವ ಕಸದ ತೊಟ್ಟಿಯಾಗಿದೆ.

    ಕೇರಳಿಗರು ತಮ್ಮ ರಾಜ್ಯದಿಂದ ನಾನಾ ರೀತೀಯ ತ್ಯಾಜ್ಯವನ್ನು ಗುಂಡ್ಲುಪೇಟೆ ತಾಲೂಕಿನ ನಿರ್ಜನ ಪ್ರದೇಶಗಳಲ್ಲಿ ಸುರಿದು ಹೋಗುತ್ತಿದ್ದು, ಜಿಲ್ಲಾಡಳಿತ ಮೌನವಹಿಸಿದೆ. ಹೀಗೆ ನಿತ್ಯ ಇಲ್ಲಿಗೆ ಬಂದು ತ್ಯಾಜ್ಯ ಸುರಿದು ಹೋಗುತ್ತಿರುವುದರಿಂದ ಪರಿಸರ ಮಾಲಿನ್ಯ ಉಂಟಾಗಿ ರೋಗರುಜಿನಗಳು ಹರಡುವ ಆತಂಕ ಎದುರಾಗಿದೆ.ಇದನ್ನೂ ಓದಿ: ಎಡನೀರು ಮಠದ ಶ್ರೀಗಳ ಕಾರಿನ ಮೇಲೆ ಅನ್ಯ ಕೋಮಿನ ಯುವಕರಿಂದ ದಾಳಿ

    ರಾಷ್ಟ್ರೀಯ ಹೆದ್ದಾರಿ 766ರ ಮೂಲಕ ಕೇರಳದಿಂದ ಮೆಡಿಕಲ್ ವೇಸ್ಟ್, ಚಪ್ಪಲಿ, ಮಾಂಸ, ಕೊಳೆತ ತರಕಾರಿ, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ತಂದು ಗಡಿಭಾಗದ ನಿರ್ಜನ ಪ್ರದೇಶಗಳಲ್ಲಿ ಸುರಿದು ಹೋಗುವುದು ಅಥವಾ ಗುಂಡ್ಲುಪೇಟೆ ಮೂಲಕ ಬೇರೆ ಜಿಲ್ಲೆಗಳಿಗೆ ಸಾಗಣೆ ಮಾಡುವುದು ನಿರಂತರವಾಗಿ ನಡೆಯುತ್ತಲೇ ಇದೆ. ಇಷ್ಟೆಲ್ಲಾ ಆಗುತ್ತಿದ್ದರೂ ಕರ್ನಾಟಕ ಗಡಿಭಾಗದ ಚೆಕ್‌ಪೋಸ್ಟ್ನಲ್ಲಿ ಯಾವುದೇ ತಪಾಸಣೆ ನಡೆಯದೆ ಕೇವಲ ಗ್ರೀನ್ ಟ್ಯಾಕ್ಸ್ ವಸೂಲಿಗಷ್ಟೇ ಸೀಮಿತವಾಗಿದೆ.

    ನೆರೆಯ ಕೇರಳಿಗರು ಎಗ್ಗಿಲ್ಲದೇ ಚೆಕ್‌ಪೋಸ್ಟ್ ದಾಟಿ ಲಾರಿ ಮತ್ತು ಟೆಂಪೋಗಳಲ್ಲಿ ಕರ್ನಾಟಕಕ್ಕೆ ಕಸ ಸಾಗಣೆ ಮಾಡುತ್ತಿದ್ದಾರೆ. ಚೆಕ್‌ಪೋಸ್ಟ್ನಲ್ಲಿರುವ ಪೊಲೀಸ್ ಹಾಗು ಅರಣ್ಯ ಇಲಾಖೆ ಸಿಬ್ಬಂದಿ ಇದರಲ್ಲಿ ಶಾಮೀಲಾಗಿದ್ದಾರೆ ಎಂಬ ಗಂಭೀರ ಆರೋಪವು ಇದೆ.

    ಇನ್ನೂ ಕೇರಳದಿಂದ ಕರ್ನಾಟಕಕ್ಕೆ ಕಸ ನಿರಂತರವಾಗಿ ಸಾಗಣೆಯಾಗುತ್ತಿದ್ದರೂ ಕೂಡ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ. ಇದರಿಂದ ಬೇಸತ್ತ ಕನ್ನಡಪರ ಸಂಘಟನೆಗಳು ಕೇರಳದಿಂದ ತ್ಯಾಜ್ಯ ತುಂಬಿಕೊಂಡು ಬಂದ 5 ಲಾರಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಕೇರಳದ ಐವರು ಲಾರಿ ಚಾಲಕರ ವಿರುದ್ಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.

    ಚೆಕ್‌ಪೋಸ್ಟ್ನಲ್ಲಿ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸುವ ಕೆಲಸಕ್ಕೆ ಅರಣ್ಯ ಇಲಾಖೆ ಹಾಗು ಪೊಲೀಸ್ ಇಲಾಖೆ ಮುಂದಾಗಬೇಕಿದೆ. ಇದರ ಜೊತೆಗೆ ಕೇರಳ ಸರ್ಕಾರದೊಂದಿಗೆ ರಾಜ್ಯ ಸರ್ಕಾರ ಮಾತುಕತೆ ನಡೆಸಿ ತ್ಯಾಜ್ಯ ಸಾಗಾಣಿಕೆಗೆ ಕಡಿವಾಣ ಹಾಕಬೇಕಿದೆ.ಇದನ್ನೂ ಓದಿ: ಅಥಣಿ | ಅಂತರರಾಜ್ಯ ಕಳ್ಳರ ಸೆರೆ : 40 ಲಕ್ಷ ರೂ. ಚಿನ್ನಾಭರಣ ವಶಕ್ಕೆ

  • ಉತ್ತರ ಪ್ರದೇಶ, ಕೇರಳ, ಪಂಜಾಬ್ ಉಪಚುನಾವಣೆ ದಿನಾಂಕ ಬದಲು – ನ.20ರಂದು ಮತದಾನ

    ಉತ್ತರ ಪ್ರದೇಶ, ಕೇರಳ, ಪಂಜಾಬ್ ಉಪಚುನಾವಣೆ ದಿನಾಂಕ ಬದಲು – ನ.20ರಂದು ಮತದಾನ

    ನವದೆಹಲಿ: ಹಲವಾರು ರಾಜಕೀಯ ಪಕ್ಷಗಳ ಮನವಿಯನ್ನು ಪರಿಗಣಿಸಿ ಭಾರತದ ಚುನಾವಣಾ ಆಯೋಗವು (Election Commission of India) ಕೇರಳ (Kerala), ಪಂಜಾಬ್ (Punjab) ಮತ್ತು ಉತ್ತರ ಪ್ರದೇಶದ (Uttar Pradesh) 14 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ (Bypolls) ಮತದಾನದ ದಿನಾಂಕವನ್ನು ಬದಲಾಯಿಸಿದೆ.

    ಈ ಹಿಂದೆ ನ.13 ರಂದು ಚುನಾವಣೆ ಘೋಷಿಸಲಾಗಿತ್ತು. ಈಗ ನ.20ಕ್ಕೆ ಚುನಾವಣೆ ಮುಂದೂಡಿಕೆಯಾಗಿದೆ. ನ.23 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇದನ್ನೂ ಓದಿ: US Election 2024 | 7 ಕೋಟಿಗೂ ಹೆಚ್ಚು ಜನರಿಂದ ಮೊದಲೇ ಮತದಾನ – Swing ರಾಜ್ಯಗಳಲ್ಲಿ ಟ್ರಂಪ್‌ ಮುನ್ನಡೆ

    ಕಲ್ಪಾಠಿ ರಥೋತ್ಸವ (ನವೆಂಬರ್ 13-15), ಕಾರ್ತಿಕ ಪೂರ್ಣಿಮಾ (ನವೆಂಬರ್ 15) ಮತ್ತು ಶ್ರೀ ಗುರುನಾನಕ್ ದೇವ್ ಅವರ ಪ್ರಕಾಶ್ ಪರ್ವ (ನವೆಂಬರ್ 15) ದಂತಹ ಹಬ್ಬಗಳನ್ನು ಉಲ್ಲೇಖಿಸಿ ರಾಜಕೀಯ ಪಕ್ಷಗಳು ಮತದಾನದ ದಿನಾಂಕವನ್ನು ಬದಲಾಯಿಸಲು ಮನವಿ ಮಾಡಿದ್ದವು. ಅಲ್ಲದೇ ಈ ಹಬ್ಬಗಳು ಈ ರಾಜ್ಯಗಳಲ್ಲಿನ ಮತದಾರರ ಮತದಾನದ ಮೇಲೆ ಪರಿಣಾಮ ಬೀರಬಹುದು ಎಂದು ಪಕ್ಷಗಳು ಹೇಳಿದ್ದವು. ಇದರಿಂದಾಗಿ ದಿನಾಂಕ ಬದಲಾವಣೆ ಮಾಡಲಾಗಿದೆ ಎಂದು ಚುನಾವಣಾ ಸಮಿತಿಯ ಮೂಲಗಳು ತಿಳಿಸಿವೆ.

    ಈ ಉಪಚುನಾವಣೆಯಲ್ಲಿ ಉತ್ತರ ಪ್ರದೇಶದ 9, ಪಂಜಾಬ್‌ನಲ್ಲಿ 4 ಮತ್ತು ಕೇರಳದ 1 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಇದನ್ನೂ ಓದಿ: Uttarakhand | ಕಮರಿಗೆ ಉರುಳಿದ ಬಸ್‌, ಸಾವಿನ ಸಂಖ್ಯೆ 36ಕ್ಕೆ ಏರಿಕೆ, 19 ಮಂದಿಗೆ ಗಾಯ

  • ಕೇರಳದಲ್ಲೂ ವಕ್ಫ್ ವಿವಾದ – ಒಂದೇ ಗ್ರಾಮದ 610 ಕುಟುಂಬಗಳಿಗೆ ಆಸ್ತಿ ಕಳೆದುಕೊಳ್ಳುವ ಭೀತಿ

    ಕೇರಳದಲ್ಲೂ ವಕ್ಫ್ ವಿವಾದ – ಒಂದೇ ಗ್ರಾಮದ 610 ಕುಟುಂಬಗಳಿಗೆ ಆಸ್ತಿ ಕಳೆದುಕೊಳ್ಳುವ ಭೀತಿ

    ತಿರುವನಂತಪುರ: ಕರ್ನಾಟಕದಲ್ಲಿ ವಕ್ಫ್ ವಿವಾದ ತೀವ್ರಗೊಂಡ ಬೆನ್ನಲ್ಲೇ ನೆರೆಯ ಕೇರಳದ ಕೊಚ್ಚಿ ಸಮೀಪದ ಇಡೀ ಗ್ರಾಮವೊಂದರ 610 ಕುಟುಂಬಗಳು ಕೂಡ ವಕ್ಫ್ ಮಂಡಳಿಯಿಂದಾಗಿ (Waqf Board) ತಮ್ಮ 464 ಎಕರೆಯಷ್ಟು ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿವೆ. ಹೀಗಾಗಿ ಮುನಂಬಂ (Munambam) ಹಾಗೂ ಅಕ್ಕಪಕ್ಕದ ಕೆಲ ಗ್ರಾಮಗಳ 600ಕ್ಕೂ ಹೆಚ್ಚು ಕುಟುಂಬಗಳು ಬೀದಿಗಿಳಿದು ಹೋರಾಟ ಆರಂಭಿಸಿವೆ. ಈ ವಿಷಯ ಇದೀಗ ವಯನಾಡು ಚುನಾವಣೆ (Wayanad Election) ವೇಳೆಯೂ ಪ್ರತಿಧ್ವನಿಸಿದೆ.

    ವಿವಾದಿತ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿರುವ ಕೇರಳದ ಆಡಳಿತಾರೂಢ ಎಡಪಕ್ಷಗಳ ಎಲ್‌ಡಿಎಫ್ ಮೈತ್ರಿಕೂಟ ಮತ್ತು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಯುಡಿಎಫ್ ಮೈತ್ರಿಕೂಟ, ವಿವಾದಿತ ಜಮೀನು ವಕ್ಫ್ ಮಂಡಳಿಗೆ ಸೇರಿಲ್ಲವೆಂದು ಹೇಳುತ್ತಿವೆಯಾದರೂ ನೇರವಾಗಿ ಜನರ ಪ್ರತಿಭಟನೆಗೆ ಕೈಜೋಡಿಸದೇ ದೂರ ಉಳಿದು ಜಾಣತನ ಪ್ರದರ್ಶಿಸಿವೆ. ಮತ್ತೊಂದೆಡೆ ಜಮೀನು ಕಳೆದುಕೊಳ್ಳುವ ಭೀತಿಯಲ್ಲಿರುವ ಕ್ರೈಸ್ತ ಸಮುದಾಯದ ನೆರವಿಗೆ ಧಾವಿಸಿರುವ ಸ್ಥಳೀಯ ಚರ್ಚ್ಗಳು, ಜನರ ಹೋರಾಟಕ್ಕೆ ಬೆಂಬಲ ನೀಡಿದ್ದು ಕೇಂದ್ರದ ವಕ್ಫ್ ಮಂಡಳಿ ತಿದ್ದುಪಡಿ ಬೆಂಬಲಿಸಿವೆ. ಇದನ್ನೂ ಓದಿ: ವಕ್ಫ್‌ ಆಸ್ತಿ ವಿವಾದದ ಕಿಚ್ಚು – ರಾಜ್ಯಾದ್ಯಂತ ಇಂದು ಬಿಜೆಪಿ ಪ್ರತಿಭಟನೆ

    ಏನಿದು ವಿವಾದ?
    1902ರಲ್ಲಿ ತಿರುವಾಂಕೂರು ರಾಜ, ಮೀನುಗಾರಿಕೆಗಾಗಿ ಗುಜರಾತ್‌ನಿಂದ ಕೇರಳಕ್ಕೆ ಬಂದಿದ್ದ ಅಬ್ದುಲ್ ಸತ್ತಾರ್ ಮೂಸಾ ಎಂಬುವವರಿಗೆ 464 ಎಕರೆ ಜಾಗ ನೀಡಿದ್ದರು. ಈ ನಡುವೆ 4 ದಶಕಗಳ ಅವಧಿಯಲ್ಲಿ ರಾಜ ನೀಡಿದ್ದ ಜಾಗದ ಪೈಕಿ ಸಾಕಷ್ಟು ಸಮುದ್ರ ಕೊರೆತದಿಂದ ನಾಶವಾಗಿತ್ತು. 1948ರಲ್ಲಿ ಸತ್ತಾರ್ ಅವರ ಉತ್ತರಾಧಿಕಾರಿ ಸಿದ್ಧಿಕಿ ಸೇಠ್, ಈ ಜಾಗವನ್ನು ನೋಂದಣಿ ಮಾಡಿಸಿದ ವೇಳೆ ಸ್ಥಳೀಯ ಮೀನುಗಾರರ ಜಮೀನು ಕೂಡಾ ಅದರಲ್ಲಿ ಸೇರಿಕೊಂಡಿತ್ತು. ಜೊತೆಗೆ ನೋಂದಣಿ ವೇಳೆ ಅದು ಹೇಗೋ ವಕ್ಫ್ ಎಂಬ ಪದ ಕೂಡಾ ಸೇರಿಬಿಟ್ಟಿತ್ತು. ಈ ನಡುವೆ 1950ರಲ್ಲಿ ಸಿದ್ಧಿಕಿ ಈ ಜಾಗವನ್ನು ಫಾರೂಖ್ ಕಾಲೇಜು ನಿರ್ಮಾಣಕ್ಕೆ ದಾನವಾಗಿ ನೀಡಿದರು. ಈ ವೇಳೆ ಅದನ್ನು ಬೇರಾವ ಉದ್ದೇಶಕ್ಕೂ ಬಳಸದಂತೆ, ಬಳಸಿದರೆ ಅದು ಮೂಲ ಮಾಲೀಕರಿಗೆ ಹೋಗಲಿದೆ ಎಂದು ಷರತ್ತು ಹಾಕಲಾಗಿತ್ತು. ಇದಾದ 3 ವರ್ಷದಲ್ಲಿ ರಾಜ್ಯದಲ್ಲಿ ಹೊಸ ವಕ್ಫ್ ಕಾಯ್ದೆ ಜಾರಿಗೆ ಬಂದಿತ್ತು. ಇದನ್ನೂ ಓದಿ: ಉಡುಪಿ| ಮಗುವಿನ ಮೇಲೆ ಹಲ್ಲೆ ನಡೆಸಿದ್ದ ತಾಯಿ, ಆಕೆಯ ಪ್ರಿಯಕರನಿಗೆ ನ್ಯಾಯಾಂಗ ಬಂಧನ

    ಈ ಕಾಯ್ದೆ ಜಾರಿಗೂ ಮೊದಲೇ ಕಾಲೇಜು ಆಡಳಿತ ಮಂಡಳಿಯಿಂದ ನೂರಾರು ಕುಟುಂಬಗಳು ಹಣ ಕೊಟ್ಟು ಜಾಗ ಖರೀದಿ ಮಾಡಿ ದಾಖಲೆ ಪತ್ರ ಪಡೆದುಕೊಂಡಿದ್ದರು. ಈ ನಡುವೆ 2019ರಲ್ಲಿ ಮುನಂಬಂ ಗ್ರಾಮ ತನಗೆ ಸೇರಿದ್ದು ಎಂದು ವಕ್ಫ್ ಮಂಡಳಿ ಘೋಷಿಸಿತು. ಆದಾದ ಬಳಿಕ ನಿಯಮದ ಅನ್ವಯ, ಪಂಚಾಯತ್ ವ್ಯಾಪ್ತಿಯಲ್ಲಿ ಜನರಿಂದ ಆಸ್ತಿ ತೆರಿಗೆ ಸಂಗ್ರಹಿಸಿದಂತೆ ತಡೆಯಾಜ್ಞೆಯನ್ನೂ ತಂತು. ಪರಿಣಾಮ, ಇದುವರೆಗೂ ಜನತೆ ತಮ್ಮ ಆಸ್ತಿಗೆ ತಾವು ತೆರಿಗೆಯನ್ನೂ ಕಟ್ಟಲಾಗದೇ ಯಾವುದೇ ಸಮಯದಲ್ಲಿ ಆಸ್ತಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹೀಗಾಗಿ, ಈಗ ಇರುವ ವಕ್ಫ್ ಕಾಯ್ದೆ ರದ್ದುಪಡಿಸಿ ಕಾನೂನು ಬದ್ಧವಾಗಿ ತಾವು ಖರೀದಿಸಿದ ಆಸ್ತಿಯನ್ನು ತಮಗೆ ಉಳಿಸಿಕೊಡಿ ಎಂದು ಹೋರಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ಪತಿಯ ಮೊದಲ ಹೆಂಡತಿಯೊಂದಿಗೆ ಗಲಾಟೆ ಮಾಡಿ 50 ಬಾರಿ ಚಾಕು ಚುಚ್ಚಿದ ಮಹಿಳೆ!

  • ಹಳಿಯಲ್ಲಿದ್ದ ಕಸ ತೆರವುಗೊಳಿಸುತ್ತಿದ್ದ ವೇಳೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ – ನಾಲ್ವರು ಗುತ್ತಿಗೆ ಕಾರ್ಮಿಕರ ದುರ್ಮರಣ

    ಹಳಿಯಲ್ಲಿದ್ದ ಕಸ ತೆರವುಗೊಳಿಸುತ್ತಿದ್ದ ವೇಳೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ – ನಾಲ್ವರು ಗುತ್ತಿಗೆ ಕಾರ್ಮಿಕರ ದುರ್ಮರಣ

    ತಿರುವನಂತಪುರ: ಹಳಿಯಲ್ಲಿದ್ದ ಕಸ ತೆರವುಗೊಳಿಸುತ್ತಿದ್ದ ವೇಳೆ ಎಕ್ಸ್‌ಪ್ರೆಸ್ ರೈಲು (Express Train) ಡಿಕ್ಕಿ ಹೊಡೆದು ರೈಲ್ವೆ ಇಲಾಖೆಯ ನಾಲ್ವರು ಗುತ್ತಿಗೆ ಕಾರ್ಮಿಕರು (Contract Workers) ಸ್ಥಳದಲ್ಲೇ ಮೃತಪಟ್ಟ ಘಟನೆ ಕೇರಳದ (Kerala) ಪಾಲಕ್ಕಾಡ್ (Palakkad) ಜಿಲ್ಲೆಯ ಶೋರ್ನೂರ್ ಬಳಿ ನಡೆದಿದೆ.

    ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ತಿರುವನಂತಪುರಂ ಕಡೆಗೆ ಹೊರಟಿದ್ದ ಕೇರಳ ಎಕ್ಸ್‌ಪ್ರೆಸ್ ರೈಲು ಕಾರ್ಮಿಕರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರೈಲು ಬರುತ್ತಿರುವುದನ್ನು ಗಮನಿಸದೇ ಅಪಘಾತ ಸಂಭವಿಸಿರಬಹುದು. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಶೋರ್ನೂರ್ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: 10,000 ಹೆಕ್ಟೇರ್ ಬೆಳೆ ಹಾನಿ – ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ, ರೈತರ ಕಣ್ಣಲ್ಲಿ ನೀರು

    ಘಟನಾ ಸ್ಥಳದಿಂದ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೊಂದು ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಹಳಿ ಸಮೀಪದ ಭಾರತಪುಳ ನದಿಗೆ ಮೃತದೇಹ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.‌ ಇದನ್ನೂ ಓದಿ: ಬೆಂಗಳೂರು ಹೊರವಲಯದ ಹೆಮ್ಮಿಗೆಪುರದಲ್ಲಿ ಸ್ಕೈಡೆಕ್ ನಿರ್ಮಾಣಕ್ಕೆ ಜಾಗ ಅಂತಿಮ

  • ಕೇರಳ ಪಾಲಕ್ಕಾಡ್‌ನಲ್ಲಿ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು ನಾಲ್ವರು ಕಾರ್ಮಿಕರು ಸಾವು

    ಕೇರಳ ಪಾಲಕ್ಕಾಡ್‌ನಲ್ಲಿ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು ನಾಲ್ವರು ಕಾರ್ಮಿಕರು ಸಾವು

    ತಿರುವನಂತಪುರ: ಕೇರಳದ (Kerala) ಪಾಲಕ್ಕಾಡ್ (Palakkad) ಜಿಲ್ಲೆಯ ಶೋರನೂರ್‌ನಲ್ಲಿ (Shoranur)  ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.

    ಮೃತರನ್ನು ತಮಿಳುನಾಡು (Tamil Nadu) ಮೂಲದ ವಲ್ಲಿ, ರಾಣಿ, ಲಕ್ಷ್ಮಣ್ ಹಾಗೂ ಇನ್ನೋರ್ವನ ಗುರುತು ಪತ್ತೆಯಾಗಿಲ್ಲ. ಇದನ್ನೂ ಓದಿ: ದೀಪಾವಳಿ ಹಿನ್ನೆಲೆ ಗಾಜನೂರಿಗೆ ಭೇಟಿ ಕೊಟ್ಟ ಹ್ಯಾಟ್ರಿಕ್ ಹೀರೋ ಶಿವಣ್ಣ

    ಘಟನಾ ಸ್ಥಳದಿಂದ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೋರ್ವ ಕಾರ್ಮಿಕ, ಭಾರತಪುಳ ನದಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಆತನನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಡಿವೈಡರ್‌ಗೆ ಕಾರು ಡಿಕ್ಕಿ- ಡಿವೈಡರ್ ಮೇಲೆ ನಿಂತಿದ್ದ ಇಬ್ಬರು ಕಾರ್ಮಿಕರು ಸಾವು

    ಶೊರನೂರ್ ಸೇತುವೆ ಬಳಿ ರೈಲ್ವೆ ಹಳಿಯಿಂದ ಕಸವನ್ನು ತೆರವುಗೊಳಿಸುತ್ತಿದ್ದ ಕಾರ್ಮಿಕರಿಗೆ ಮಧ್ಯಾಹ್ನ 3:05ರ ಸುಮಾರಿಗೆ ನವದೆಹಲಿ-ತಿರುವನಂತಪುರ ರೈಲು ಡಿಕ್ಕಿ ಹೊಡೆದಿದೆ. ಕಾರ್ಮಿಕರು ರೈಲು (Train) ಬರುವುದನ್ನು ಗಮನಿಸದೇ ಇದ್ದುದರಿಂದ ಈ ಘಟನೆ ಸಂಭವಿಸಿರಬಹುದು. ಇದರ ಬಗ್ಗೆ ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಗೃಹಿಣಿ ಆತ್ಮಹತ್ಯೆ

  • ಯೂಟ್ಯೂಬ್‌ನಲ್ಲಿ ಸಕ್ರಿಯವಾಗಿದ್ದ ಕೇರಳ ದಂಪತಿ ಮನೆಯಲ್ಲಿ ಶವವಾಗಿ ಪತ್ತೆ; ಕಾರಣ ನಿಗೂಢ

    ಯೂಟ್ಯೂಬ್‌ನಲ್ಲಿ ಸಕ್ರಿಯವಾಗಿದ್ದ ಕೇರಳ ದಂಪತಿ ಮನೆಯಲ್ಲಿ ಶವವಾಗಿ ಪತ್ತೆ; ಕಾರಣ ನಿಗೂಢ

    ತಿರುವನಂತಪುರಂ: ಯೂಟ್ಯೂಬ್ (YouTube) ಚಾನಲ್‌ನಲ್ಲಿ ಸಕ್ರಿಯವಾಗಿದ್ದ ದಂಪತಿ ಭಾನುವಾರ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಕೇರಳದ (Kerrala) ಪರಸ್ಸಾಲ (Parassala) ಪಟ್ಟಣದಲ್ಲಿ ನಡೆದಿದೆ.

    ಸೆಲ್ವರಾಜ್ (45), ಪ್ರಿಯಾ (40) ಶವವಾಗಿ ಪತ್ತೆಯಾದ ದಂಪತಿ. ಎರಡು ದಿನಗಳಿಂದ ಮನೆಯಿಂದ ಆಚೆ ಬಾರದ ಕಾರಣ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ತೆಗೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸೆಲ್ವರಾಜ್ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಿಯಾ ಮೃತದೇಹ ಹಾಸಿಗೆ ಮೇಲೆ ಪತ್ತೆಯಾಗಿದೆ ಎಂದು ಪರಸ್ಸಾಲ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ಗೆ ನಮ್ಮ ಶಕ್ತಿ ಏನೆಂದು ತೋರಿಸಬೇಕು: ಮತ್ತೆ ಯುದ್ಧದ ಎಚ್ಚರಿಕೆ ನೀಡಿದ ಇರಾನ್‌ ಸುಪ್ರೀಂ ಲೀಡರ್‌

    ಪ್ರಾಥಮಿಕ ತನಿಖೆಯ ಪ್ರಕಾರ, ಎರಡು ದಿನಗಳ ಹಿಂದೆ ಘಟನೆ ಸಂಭವಿಸಿರಬಹುದು ಎಂದು ತಿಳಿದುಬಂದಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಜಾತಿಗಣತಿ ವರದಿ ಆಧಾರದ ಮೇಲೆ ಹಳ್ಳಿಕಾರ್ ಸಮುದಾಯಕ್ಕೆ ನ್ಯಾಯ ಒದಗಿಸುತ್ತೇವೆ: ಸಿದ್ದರಾಮಯ್ಯ

    ಸೆಲ್ವರಾಜ್ ಹಾಗೂ ಪ್ರಿಯಾ ದಂಪತಿ ‘ಸೆಲ್ಲು ಫ್ಯಾಮಿಲಿ’ ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದರು. ಅವರ ಚಾನಲ್ ಸುಮಾರು 18,000 ಫಾಲೋವರ್ಸ್ ಅನ್ನು ಹೊಂದಿದ್ದು, 1,400ಕ್ಕೂ ಹೆಚ್ಚು ವೀಡಿಯೋಗಳನ್ನು ತಮ್ಮ ಚಾನಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೊನೆಯದಾಗಿ ಅ.25ರಂದು (ಶುಕ್ರವಾರ) ತಮ್ಮ ಫ್ಯಾಮಿಲಿ ಫೋಟೋಗಳನ್ನ ಎಡಿಟಿಂಗ್ ಮಾಡಿ 55 ಸೆಕೆಂಡುಗಳ ವೀಡಿಯೋ ಮಾಡಿ ಅಪ್ಲೋಡ್ ಮಾಡಿದ್ದರು. ಇದನ್ನೂ ಓದಿ: ರವೀಂದ್ರ ಸಂಗೀತದ ಬದಲಿಗೆ ಬಂಗಾಳದಲ್ಲಿ ಬಾಂಬ್ ಸದ್ದು ಕೇಳುತ್ತಿದೆ: ದೀದಿ ವಿರುದ್ಧ ಅಮಿತ್ ಶಾ ಕಿಡಿ

  • Kerala | ಕಾರ್ಯಕ್ರಮದಲ್ಲಿ ಬಹಿರಂಗ ಟೀಕೆ- ಒಂದು ದಿನದ ಬಳಿಕ ಶವವಾಗಿ ಪತ್ತೆಯಾದ ಅಧಿಕಾರಿ

    Kerala | ಕಾರ್ಯಕ್ರಮದಲ್ಲಿ ಬಹಿರಂಗ ಟೀಕೆ- ಒಂದು ದಿನದ ಬಳಿಕ ಶವವಾಗಿ ಪತ್ತೆಯಾದ ಅಧಿಕಾರಿ

    ತಿರುವನಂತಪುರಂ: ಕೇರಳದ ಕಣ್ಣೂರು ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ADM) ನವೀನ್ ಬಾಬು (Naveen Babu) ತಮ್ಮ ಪಲ್ಲಿಕುನ್ನುನಲ್ಲಿರುವ ಮನೆಯಲ್ಲಿ ಮಂಗಳವಾರ (ಅ.15) ಶವವಾಗಿ ಪತ್ತೆಯಾಗಿದ್ದಾರೆ.

    ತಮ್ಮ ತವರೂರು ಪತ್ತನಂತಿಟ್ಟದಲ್ಲಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಅಧಿಕಾರ ಸ್ವೀಕರಿಸಬೇಕಿದ್ದ ಹಿಂದಿನ ದಿನ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ – ಜನಜೀವನ ಅಸ್ತವ್ಯಸ್ತ, ಎಲ್ಲಿ ಏನಾಗಿದೆ?

    ಘಟನೆಯ ಹಿಂದಿನ ದಿನ ಮೃತ ನವೀನ್ ಬಾಬು ಅವರಿಗೆ ಸಹೋದ್ಯೋಗಿಗಳು ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು. ಈ ವೇಳೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಹಾಗೂ ಸಿಪಿಎಂ ನಾಯಕಿ ಪಿಪಿ ದಿವ್ಯಾ (PP Divya) ಆಹ್ವಾನವಿಲ್ಲದೇ ದಿಢೀರ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

    ಈ ವೇಳೆ ಮಾತನಾಡಿದ ದಿವ್ಯಾ, ನವೀನ್ ಬಾಬು ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಜೊತೆಗೆ ಹಲವು ತಿಂಗಳುಗಳಿಂದ ಚೆಂಗಲೈ ಪೆಟ್ರೋಲ್ ಪಂಪ್‌ಗೆ ಅನುಮತಿ ನೀಡಲು ಎಡಿಎಮ್ ಅವರು ವಿಳಂಬ ಮಾಡುತ್ತಿದ್ದಾರೆ ಎಂದು ಟೀಕಿಸಿ, ಬಹಿರಂಗವಾಗಿ ಮಾತನಾಡಿದ್ದರು.

    ಎಡಿಎಮ್ ಅವರ ದಿಢೀರ್ ವರ್ಗಾವಣೆ ಹಿಂದಿನ ಕಾರಣ ನನಗೆ ಗೊತ್ತಿದೆ. ಎರಡು ದಿನಗಳ ನಂತರ ಇನ್ನುಳಿದ ಮಾಹಿತಿಯನ್ನು ನೀಡುತ್ತೇನೆ ಎಂದು ಸುಳಿವು ನೀಡಿದ್ದರು. ಇದಾದ ಮಾರನೇ ದಿನ ನೇಣು ಬಿಗಿದ ಸ್ಥಿತಿಯಲ್ಲಿ ನವೀನ್ ಬಾಬು ಅವರ ಶವವಾಗಿ ಪತ್ತೆಯಾಗಿದ್ದು, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

    ಸಿಪಿಎಂ ಸ್ಥಳೀಯ ಮುಖಂಡ ಮಲಯಾಳಪುಳ ಮೋಹನ್ ಸುದ್ದಿಗಾರರೊಂದಿಗೆ ಮಾತನಾಡಿ, ಬಾಬು ಅವರ ಕುಟುಂಬವು ಸಾಂಪ್ರದಾಯಿಕ ಕುಟುಂಬವಾಗಿದ್ದು, ಬಾಬು ಕುರಿತು ನನಗೆ ಬಹಳ ಹಿಂದಿನಿಂದಲೂ ತಿಳಿದಿದೆ. ಬಾಬು ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿದ್ದರು. ದಿವ್ಯಾ ಅವರ ಬಹಿರಂಗ ಟೀಕೆಯು ಬಾಬು ಅವರ ಸಾವಿಗೆ ಕಾರಣವಾಗಿದ್ದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.ಇದನ್ನೂ ಓದಿ: ಸೈನ್ಯಕ್ಕೆ ಪ್ರಬಲ ಅಸ್ತ್ರ – ಅಮೆರಿಕದ MQ-9B ಪ್ರಿಡೆಟರ್ ಡ್ರೋನ್ ಒಪ್ಪಂದಕ್ಕೆ ಸಹಿ ಹಾಕಿದ ಭಾರತ

    ಸದ್ಯ ಈ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ.