Tag: ಕೇರಳ ಪೊಲೀಸ್

  • 20 ವರ್ಷಗಳಿಂದ ಪಾಳುಬಿದ್ದಿದ್ದ ಮನೆಯ ಫ್ರಿಡ್ಜ್‌ನಲ್ಲಿತ್ತು ಮಾನವನ ತಲೆಬುರುಡೆ, ಅಸ್ಥಿಪಂಜರ!

    20 ವರ್ಷಗಳಿಂದ ಪಾಳುಬಿದ್ದಿದ್ದ ಮನೆಯ ಫ್ರಿಡ್ಜ್‌ನಲ್ಲಿತ್ತು ಮಾನವನ ತಲೆಬುರುಡೆ, ಅಸ್ಥಿಪಂಜರ!

    ತಿರುವನಂತಪುರಂ: ಕಳೆದ 20 ವರ್ಷಗಳಿಂದ ಪಾಳುಬಿದ್ದಿದ್ದ ಮನೆಯೊಂದರ ಫ್ರಿಡ್ಜ್ ನಲ್ಲಿ ಮಾನವ ತಲೆಬುರುಡೆ ಮತ್ತು ಅಸ್ಥಿಪಂಜರ ಪತ್ತೆಯಾಗಿರುವ ಘಟನೆ ಕೇರಳದಲ್ಲಿ (Kerala) ನಡೆದಿದೆ. ಸದ್ಯ ಚೊಟ್ಟನಿಕ್ಕಾರ ಪೊಲೀಸರು (Chottanikkara Police) ಕೊಲೆ ಶಂಕೆ ವ್ಯಕ್ತಪಡಿಸಿದ್ದು, ತನಿಖೆ ಆರಂಭಿಸಿದ್ದಾರೆ.

    ಈ ಅಸ್ತಿಯನ್ನು ಮಾನವನ ಮೂಳೆಗಳು (Human Skeleton) ಎಂದು ಗುರುತಿಸಲಾಗಿದೆ. ಫೋರೆನ್ಸಿಕ್ ವಿಶ್ಲೇಷಣೆಯ ಮೂಲಕ ನಿಖರವಾದ ವಯಸ್ಸನ್ನು ಪರಿಶೀಲಿಸಬೇಕಾಗಿದೆ ಎಂದಿರುವ ಪೊಲೀಸರು ಇದನ್ನು ಶೈಕ್ಷಣಿಕ ಉದ್ದೇಶಗಳಿಗಾಗಿಯೂ ಬಳಸಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತಿರುಪತಿಯಲ್ಲಿ ದುರಂತ – ಕಾಲ್ತುಳಿತಕ್ಕೆ ಮೂಲ ಕಾರಣ ಏನು? ದಿಢೀರ್‌ ಗೇಟ್‌ ಓಪನ್‌ ಮಾಡಿದ್ದು ಯಾಕೆ?

    ವಿಧಿವಿಜ್ಞಾನ ತಂಡವು ತಲೆಬುರುಡೆ ಮತ್ತು ಅಸ್ಥಿಪಂಜರದ ಭಾಗಗಳನ್ನು ಪರೀಕ್ಷಿಸಿ, ಮರಣೋತ್ತರ ಪರೀಕ್ಷೆಗೆ ಒಳಪಡಿಸಿದೆ. ಅವುಗಳನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸಿರುವ ಸಾಧ್ಯತೆ ಇದೆ. ಅಸ್ಥಿಪಂಜರ, ತಲೆಬುರುಡೆ ಮಹಿಳೆಯರದ್ದು, ಆದರೆ ಅವುಗಳು ಒಬ್ಬರದ್ದಲ್ಲ. ಅವುಗಳ ವಯಸ್ಸು ಮತ್ತು ಮೂಲವನ್ನು ಪತ್ತೆ ಹಚ್ಚುವುದು ಕಠಿಣವಾದರೂ ಈ ಬಗ್ಗೆ ಕೂಡ ಪರಿಶೀಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ತಿರುಪತಿ ಕಾಲ್ತುಳಿತದಲ್ಲಿ ಬಳ್ಳಾರಿ ಮೂಲದ ಮಹಿಳೆ ದುರ್ಮರಣ

    ಎರುವೇಲಿ ಪೂರ್ವದ ಚೊಟ್ಟಣಿಕ್ಕರ ಅರಮನೆ ಚೌಕದಲ್ಲಿರುವ 12 ಎಕರೆ ಜಾಗದಲ್ಲಿ ಪಾಳು ಬಿದ್ದ ಮನೆಯಿದೆ. ಈ ಆಸ್ತಿ ವೈದ್ಯ ಮಂಗಳಶ್ಶೇರಿ ಫಿಲಿಪ್ ಜಾನ್ ಅವರಿಗೆ ಸೇರಿದ್ದಾಗಿದೆ. ಕಳೆದ 20 ವರ್ಷಗಳಿಂದ ಮನೆಯಲ್ಲಿ ಯಾರೂ ವಾಸವಿರಲಿಲ್ಲ. ಆದರೂ ಮನೆಗೆ ಮೂಳೆಗಳು ಹೇಗೆ ಬಂದಿವೆ? ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಮನೆಯ ಮಾಲೀಕರು, ವೈದ್ಯರು ಮತ್ತು ನೆರೆಹೊರೆಯವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 6 ತಿಂಗಳ ಬಳಿಕ ಮುಖಾಮುಖಿಯಾಗಲಿದ್ದಾರೆ ದರ್ಶನ್‌- ಪವಿತ್ರಾ ಗೌಡ

    ಪಾಳು ಬಿದ್ದ ಮನೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಸ್ಥಳೀಯ ಪಾಲಿಕೆ ಸದಸ್ಯೆ ಇಂದಿರಾ ಧರ್ಮರಾಜನ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿದ್ದಾರೆ. ಮೂಳೆಗಳು ಪತ್ತೆಯಾದ ನಂತರ ಚೊಟ್ಟನಿಕ್ಕರ ಪೊಲೀಸರು ಬಿಎನ್ಎಸ್ ಕಾಯ್ದೆಯಡಿಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ.

  • ಕೇರಳದಲ್ಲಿ ಪಂದ್ಯದ ವೇಳೆಯೇ ಆಫ್ರಿಕನ್ ಫುಟ್ಬಾಲ್ ಆಟಗಾರನ ಮೇಲೆ ಹಲ್ಲೆ – ಜನಾಂಗೀಯ ನಿಂದನೆ ಆರೋಪ

    ಕೇರಳದಲ್ಲಿ ಪಂದ್ಯದ ವೇಳೆಯೇ ಆಫ್ರಿಕನ್ ಫುಟ್ಬಾಲ್ ಆಟಗಾರನ ಮೇಲೆ ಹಲ್ಲೆ – ಜನಾಂಗೀಯ ನಿಂದನೆ ಆರೋಪ

    ತಿರುವನಂತಪುರಂ: ಕೇರಳದ (Kerala) ಮಲಪ್ಪುರಂ (Malappuram) ಜಿಲ್ಲೆಯಲ್ಲಿ ನಡೆದ ಫುಟ್‍ಬಾಲ್ ಪಂದ್ಯಾವಳಿಯ ವೇಳೆ ಆಫ್ರಿಕಾದ ಫುಟ್‍ಬಾಲ್ ಆಟಗಾರನನ್ನು (African footballer) ಪ್ರೇಕ್ಷಕರು ಹಿಂಬಾಲಿಸಿ ಥಳಿಸಿದ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವೈರಲ್ ಆಗಿರುವ ವಿಡಿಯೋದಲ್ಲಿ, ನೀಲಿ ಟೀ ಶರ್ಟ್ ಧರಿಸಿದ್ದ ಆಫ್ರಿಕಾದ, ದೈರ್ರಾಸೌಬ ಹಾಸನ್ ಜೂನಿಯರ್ ಎಂಬ ವ್ಯಕ್ತಿಯನ್ನು ಅರೀಕೋಡ್‍ನ ಮೈದಾನದಲ್ಲಿ ಜನರ ಗುಂಪು ಅಟ್ಟಾಡಿಸಿದ್ದಾರೆ. ಬಳಿಕ ಆಟಗಾರನನ್ನು ಜನರು ಹಿಡಿದು ಥಳಿಸಿರುವುದು ದಾಖಲಾಗಿದೆ. ಜನರ ಗುಂಪು ತನ್ನನ್ನು ಜನಾಂಗೀಯ ನಿಂದನೆ (Racially Abused) ಮಾಡಿ, ಹಲ್ಲೆ ನಡೆಸಿದೆ ಎಂದು ದೈರ್ರಾಸೌಬ ಹಾಸನ್ ಆರೋಪಿಸಿದ್ದಾರೆ. ಇದನ್ನೂ ಓದಿ: ಅಶ್ಲೀಲ, ಅಸಭ್ಯ ಕಂಟೆಂಟ್‌ ಪ್ರಸಾರ; 18 ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರ ನಿರ್ಬಂಧ

    ಈ ಬಗ್ಗೆ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಫುಟ್ಬಾಲ್ ಆಟಗಾರನು ತನ್ನ ತಂಡಕ್ಕೆ ಕಾರ್ನರ್ ಕಿಕ್ ಸಿಕ್ಕಿತು ಮತ್ತು ಅವನು ತನ್ನ ಸ್ಥಾನವನ್ನು ಪಡೆದುಕೊಳ್ಳಲು ಮುಂದಾದಾಗ, ಪ್ರೇಕ್ಷಕರು ತನ್ನನ್ನು ಜನಾಂಗೀಯ ನಿಂದನೆ ಮಾಡಿದರು. ಗುಂಪು ತನ್ನ ಮೇಲೆ ಕಲ್ಲು ತೂರಾಟ ನಡೆಸಿದೆ ಎಂದೂ ಆರೋಪಿಸಿದ್ದಾರೆ.

    ಸೆವೆನ್ಸ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಜವಾಹರ್ ಮಾವೂರ್ ಎಂಬ ಫುಟ್ಬಾಲ್ ಕ್ಲಬ್‍ನ್ನು ಹಾಸನ್ ಜೂನಿಯರ್ ಪ್ರತಿನಿಧಿಸುತ್ತಿದ್ದರು. ಸೆವೆನ್ಸ್ ಫುಟ್ಬಾಲ್ ಮಲಪ್ಪುರಂನಲ್ಲಿ ಪ್ರಸಿದ್ಧ ಕ್ರೀಡಾಕೂಟವಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಹಾಡಹಗಲೇ ಚಿನ್ನದಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ

  • ಲಂಚಕ್ಕೆ ಬೇಡಿಕೆಯಿಟ್ಟು ಕೇರಳದಲ್ಲಿ ಅರೆಸ್ಟ್‌ ಆಗಿರುವ ಬೆಂಗಳೂರು ನಾಲ್ವರು ಪೊಲೀಸರು ಸಸ್ಪೆಂಡ್‌

    ಲಂಚಕ್ಕೆ ಬೇಡಿಕೆಯಿಟ್ಟು ಕೇರಳದಲ್ಲಿ ಅರೆಸ್ಟ್‌ ಆಗಿರುವ ಬೆಂಗಳೂರು ನಾಲ್ವರು ಪೊಲೀಸರು ಸಸ್ಪೆಂಡ್‌

    ಬೆಂಗಳೂರು: ವಂಚನೆ ಪ್ರಕರಣದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟು ಕೇರಳ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಬೆಂಗಳೂರಿನ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

    ಇನ್‌ಸ್ಪೆಕ್ಟರ್‌ ಶಿವಪ್ರಕಾಶ್‌, ಹೆಡ್‌ ಕಾನ್‌ಸ್ಟೇಬಲ್‌ಗಳಾದ ವಿಜಯ್‌ ಕುಮಾರ್‌, ಶಿವಾನಿ, ಕಾನ್‌ಸ್ಟೇಬಲ್‌ ಸಂದೇಶ್‌ ಅಮಾನತುಗೊಂಡಿದ್ದಾರೆ. ಎಸಿಪಿ ವರದಿ ಆಧರಿಸಿ ಈ ನಾಲ್ವರನ್ನೂ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ದಯಾನಂದ್‌ ಅಮಾನತುಗೊಳಿಸಿದ್ದಾರೆ. ಇದನ್ನೂ ಓದಿ: ಕೇರಳದ ಕೊಚ್ಚಿಯಲ್ಲಿ ಕರ್ನಾಟಕ ಪೊಲೀಸರ ಅರೆಸ್ಟ್‌ – ಲಂಚಕ್ಕೆ ಬೇಡಿಕೆಯಿಟ್ಟು ಲಾಕ್‌ ಆದ ಬೆಂಗಳೂರು ಪೊಲೀಸರು

    ಏನಿದು ಪ್ರಕರಣ?
    ಕೇರಳದಲ್ಲಿ ಕರ್ನಾಟಕದ ಇನ್‌ಸ್ಪೆಕ್ಟರ್‌ ಶಿವಪ್ರಕಾಶ್‌ ಸೇರಿದಂತೆ ನಾಲ್ವರು ಪೊಲೀಸರನ್ನು ಬಂಧಿಸಲಾಗಿತ್ತು. ಆರೋಪಿಯನ್ನು ಬಂಧನ ಮಾಡದೇ ಇರಲು 4 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ಕರ್ನಾಟಕದ ಪೊಲೀಸರನ್ನು ಕೇರಳದ ಕೊಚ್ಚಿಯಲ್ಲಿ ಅರೆಸ್ಟ್‌ ಮಾಡಲಾಗಿತ್ತು.

    ಬಂಧಿತರು ಬೆಂಗಳೂರು ವೈಟ್‌ ಫೀಲ್ಡ್‌ ಸೆನ್‌ ಪೊಲೀಸರಾಗಿದ್ದಾರೆ. ಇವರನ್ನು ಕೊಚ್ಚಿಯ ಕಲಂಚೇರಿ ಪೊಲೀಸರು ಬಂಧಿಸಿದ್ದಾರೆ. ಆನ್‌ಲೈನ್‌ ವಂಚನೆ ಕೇಸ್‌ ರಿಕವರಿಗೆ ಹೋಗಿದ್ದಾಗ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ. ಇದನ್ನೂ ಓದಿ: ಕೇದಾರನಾಥ ಮಾರ್ಗದಲ್ಲಿ ಭಾರಿ ಭೂಕುಸಿತ – ಹಲವರ ಸಮಾಧಿ ಶಂಕೆ

    ಉದ್ಯೋಗ ಕೊಡಿಸುವುದಾಗಿ ಸಾಫ್ಟ್‌ವೇರ್ ಇಂಜಿನಿಯರ್‌ಗೆ ಮೋಸವಾಗಿತ್ತು. ಚಂದಕ್ ಶ್ರೀಕಾಂತ್ ಎಂಬಾತ ಈ ಸಂಬಂಧ ದೂರು ಕೊಟ್ಟಿದ್ದ. ಆನ್‌ಲೈನ್ ಮೂಲಕ 26 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದ. ಈ ಪ್ರಕರಣ ತನಿಖೆಯನ್ನು ವೈಟ್ ಫೀಲ್ಡ್ ಸಿಇಎನ್ ಪೊಲೀಸರು ನಡೆಸುತ್ತಿದ್ದರು. ಮೊದಲಿಗೆ ಮಡಿಕೇರಿಯ ಐಸಾಕ್ ಬಗ್ಗೆ ಸುಳಿವು ಸಿಕ್ಕಿತ್ತು. ಅಲ್ಲಿ ಹೋಗಿ ಪರಿಶೀಲನೆ ನಡೆಸಿದಾಗ ಐಸಾಕ್ ಅಕೌಂಟ್‌ನಲ್ಲಿ 2 ಕೋಟಿ ವರ್ಗಾವಣೆಯಾಗಿರುವುದು ಪತ್ತೆಯಾಯಿತು. ಇದರ ಜಾಡು ಹಿಡಿದು ವೈಟ್ ಫೀಲ್ಡ್ ಸಿಇಎನ್ ಇನ್‌ಸ್ಪೆಕ್ಟರ್‌ ಶಿವಪ್ರಕಾಶ್ ಮತ್ತು ತಂಡ ಕೇರಳಕ್ಕೆ ಹೊರಟಿತ್ತು.

    ನೌಶಾದ್ ಎಂಬವನಿಂದ ಆನ್‌ಲೈನ್ ಫ್ರಾಡ್ ಬಗ್ಗೆ ಸಾಕ್ಷಿ ಸಿಕ್ಕಿತ್ತು. ಅರೆಸ್ಟ್ ಮಾಡಲು ತೆರಳಿದ್ದ ವೈಟ್ ಫೀಲ್ಡ್ ಸಿಇಎನ್ ಪೊಲೀಸರು, ಬಂಧಿಸದೇ ಇರಲು 3 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ನೌಶಾದ್‌ ಕಲ್ಲಂಚೇರಿ ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣದಲ್ಲಿ ತನಿಖೆಗೆ ಎಂದು ಬಂದಿರುವುದಾಗಿ ಬೆಂಗಳೂರು ಪೊಲೀಸರು ತಿಳಿಸಿದ್ದರು. ಆದರೂ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ಎಫ್‌ಐಆರ್‌ ದಾಖಲಿಸಲಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಿಳಾ ವಿಮಾ ಏಜೆಂಟ್ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್ – ಸ್ನೇಹಿತನಿಂದ ಹೊರಬಂತು ಸತ್ಯ

    ಮಹಿಳಾ ವಿಮಾ ಏಜೆಂಟ್ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್ – ಸ್ನೇಹಿತನಿಂದ ಹೊರಬಂತು ಸತ್ಯ

    ತಿರುವನಂತಪುರಂ: ಕೇರಳದ ಕಡಕ್ಕಾವೂರ್‍ನಲ್ಲಿ ಮಹಿಳಾ ವಿಮಾ ಏಜೆಂಟ್ ನಿಗೂಢ ಸಾವು ಪ್ರಕರಣಕ್ಕೆ ತಿರುವು ಸಿಕ್ಕಿದೆ. ಆಕೆ ತನ್ನ ಸ್ನೇಹಿತನಿಂದಲೇ ಕೊಲೆಯಾಗಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

    ಜೆಸ್ಸಿ (54) ಕೊಲೆಯಾದ ಮಹಿಳೆ. ಹತ್ತು ದಿನಗಳ ಹಿಂದೆ ಈ ಮಹಿಳೆ ಮೃತದೇಹವು ರೈಲು ಹಳಿಗಳ ಮೇಲೆ ಪತ್ತೆಯಾಗಿತ್ತು. ಸೂಕ್ತ ಸಾಕ್ಷ್ಯಾಧಾರ ಸಿಗದ ಕಾರಣ ಆರಂಭದಲ್ಲಿ ಪೊಲೀಸರು ಇದನ್ನು ಆತ್ಮಹತ್ಯೆ ಪ್ರಕರಣ ಎಂದು ಪರಿಗಣಿಸಿದ್ದರು. ಆದರೆ ಮೃತಳ ಸಂಬಂಧಿಕರು ಆಕೆ ಧರಿಸಿದ್ದ ಚಿನ್ನಾಭರಣಗಳು ನಾಪತ್ತೆಯಾಗಿರುವ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಈ ಕುರಿತು ತನಿಖೆ ಆರಂಭಿಸಿದ ಪೊಲೀಸರು ಕೊನೆಗೂ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ:  ಹಗಲು ಹೊತ್ತಿನಲ್ಲೇ ಬ್ಯಾಂಕ್ ದರೋಡೆ – ಸಿಬ್ಬಂದಿ ಹತ್ಯೆ

    ವಿಧವೆಯಾಗಿದ್ದ ಜೆಸ್ಸಿಯೊಂದಿಗೆ ಆಕೆಯ ಸ್ನೇಹಿತ ಕಡಕ್ಕಾವೂರು ಸಮೀಪದ ಭಜನಮಾಡಂ ನಿವಾಸಿ ಮೋಹನನ್ ಸಂಬಂಧ ಹೊಂದಿದ್ದ. ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಲು ಮೋಹನನ್, ಜೆಸ್ಸಿಯಿಂದ ಹಣಕಾಸಿನ ನೆರವು ಕೋರಿದ್ದ. ಆದರೆ ಜೆಸ್ಸಿ ಅವನ ಮನವಿಯನ್ನು ನಿರಾಕರಿಸಿದ್ದಳು. ಇದಾದ ಬಳಿಕ ಆರೋಪಿಯು ಸೀರೆಯಿಂದ ಜೆಸ್ಸಿ ಕತ್ತು ಹಿಸುಕಿ ಕೊಲೆ ಮಾಡಿ ಆಭರಣಗಳನ್ನು ದೋಚಿದ್ದಾನೆ. ಆರೋಪಿಯು ಮಹಿಳೆಯನ್ನು ಕೊಲೆ ಮಾಡಿ, ಶವವನ್ನು ರೈಲು ಹಳಿ ಮೇಲೆ ಹಾಕಿದ್ದ ಎಂದು ವಿಚಾರಣೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಯಾರಿಗೆ ಬೇಕು?: ಹೆಚ್.ಡಿ.ದೇವೇಗೌಡ

  • ಕೊರೊನಾ ಜಾಗೃತಿಗೆ ಪೊಲೀಸರ ಸಾಂಗ್- ವೀಡಿಯೋ ವೈರಲ್

    ಕೊರೊನಾ ಜಾಗೃತಿಗೆ ಪೊಲೀಸರ ಸಾಂಗ್- ವೀಡಿಯೋ ವೈರಲ್

    ತಿರುವನಂತಪುರಂ: ಕೊರೊನಾ ಜಾಗೃತಿಯನ್ನು ಮೂಡಿಸಲು ಪೊಲೀಸರು ವಿಭಿನ್ನವಾದ ಪ್ರಯತ್ನವನ್ನು ಮಾಡಿದ್ದಾರೆ. ಹಾಡೊಂದಕ್ಕೆ ಹೆಜ್ಜೆ ಹಾಕುವ ಮೂಲಕವಾಗಿ ಜಾಗೃತಿಯನ್ನು ಮೂಡಿಸಿದ್ದಾರೆ.

    ಕೇರಳದ ಪೊಲೀಸರು ಡಾನ್ಸ್ ಮಾಡಿರುವ ವೀಡಿಯೋ ಕೇರಳದ ರಾಜ್ಯ ಪೊಲೀಸ್ ಮಾಧ್ಯಮ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದು ಎಲ್ಲರ ಗಮನ ಸೇಳೆಯುತ್ತಿದೆ. ಈ ಹಾಡಿನಲ್ಲಿ ಸಾಮಾಜಿ ಅಂತರ ಕಾಯ್ದುಕೊಳ್ಳಿ, ಕೈ ತೊಳೆಯುತ್ತೀರಿ, ಮಾಸ್ಕ್ ಧರಿಸಿ ಎನ್ನುವ ಸಾಲುಗಳಿವೆ. ತಮಿಳಿನ ಎಂಜಾಯ್ ಎಂಜಾಮಿ ಹಾಡಿಗೆ ಜಾಗೃತಿ ಮೂಡಿಸುವ ಸಂದೇಶವನ್ನು ಸೇರಿಸಿ ನೃತ್ಯ ಮಾಡಿದ್ದಾರೆ.

     

    ಎಲ್ಲರೂ ಕೊರೊನಾ ವಿರುದ್ಧವಾಗಿ ಹೋರಾಟ ಮಾಡೋಣ. ನಿಮ್ಮ ಜೊತೆಗೆ ಕೇರಳ ಪೊಲೀಸ್ ಇದೆ ಎಂದು ಬರೆದುಕೊಂಡು ಈ ವೀಡಿಯೋವನ್ನು ಶೇರ್ ಮಾಡಲಾಗಿದೆ. 3.5 ಲಕ್ಷ ವೀಕ್ಷಣೆಯಾಗಿದ್ದು, 14,000 ಬಾರಿ ಶೇರ್ ಆಗಿದೆ. 36,000 ಲೈಕ್ ಪಡೆದುಕೊಂಡಿದೆ. ಕೊರೊನಾ ಜಾಗೃತಿಯ ಸಂದೇಶವನ್ನೊಳಗೊಂಡ ಈ ಹಾಡನ್ನು ಹಲವರು ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚಿ ಹಂಚಿಕೊಂಡಿದ್ದಾರೆ.

  • ನೆಗೆಟಿವ್ ಬಂದ್ರು ಕನ್ನಡಿಗರಿಗಿಲ್ಲ ಅಯ್ಯಪ್ಪನ ದರ್ಶನ ಭಾಗ್ಯ

    ನೆಗೆಟಿವ್ ಬಂದ್ರು ಕನ್ನಡಿಗರಿಗಿಲ್ಲ ಅಯ್ಯಪ್ಪನ ದರ್ಶನ ಭಾಗ್ಯ

    – ಕೇರಳ ಪೊಲೀಸ ದೌರ್ಜನ್ಯಕ್ಕೆ ಕರ್ನಾಟಕ ಭಕ್ತರು ಕಂಗಾಲು

    ಬೆಂಗಳೂರು: ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಮಾಲೆ ಧರಿಸಿ ತಮ್ಮ ಕಷ್ಟ ಕಾರ್ಪಣ್ಯವನ್ನು ನೀಗಿಸು ತಂದೆ ಎಂದು ಕೇರಳದ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇವರ ದರ್ಶನ ಮಾಡುವ ಕನ್ನಡದ ಭಕ್ತರಿಗೆ ಕೊರೊನಾ ವಿಚಾರದಲ್ಲಿ ಸಮಸ್ಯೆ ಎದುರಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕೆಲ ಸ್ವಾಮಿ ಭಕ್ತರು ಶಬರಿಮಲೆಯ ಅಯ್ಯಪ್ಪನನ್ನು ನೋಡಲು ಹೋದ ವೇಳೆ ಅಲ್ಲಿನ ಪೊಲೀಸರು ತಡೆ ಹಿಡಿದಿದ್ದಾರೆ. ಜೊತೆಗೆ ಕೊರೊನಾ ವರದಿ ನೆಗೆಟಿವ್ ಬಂದರೂ, ಅಯ್ಯಪ್ಪನ ಬೆಟ್ಟಕ್ಕೆ ಹೋಗಲು ಬಿಟ್ಟಿಲ್ಲ. ಜೊತೆಗೆ ತಲಾ 625 ರೂ. ಪಡೆದು ನೆಗೆಟಿವ್ ರಿಪೋರ್ಟ್ ನೀಡುವ ಪೋಲಿಸರ ವಿರುದ್ಧ ಭಕ್ತರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಕೇರಳ ಪೊಲೀಸರ ಈ ವರ್ತನೆಯಿಂದ ಕರ್ನಾಟಕ ಭಕ್ತರು ಕಂಗಾಲಾಗಿದ್ದು, ಅಲ್ಲಿನ ಡಾಕ್ಟರ್ ಈ ವರದಿ ಆಗುತ್ತೆ ಅಂದರೂ ಪೊಲೀಸರು ಮಾತ್ರ ಆಗಲ್ಲ ಎಂದು ಕಿರಿಕಿರಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯದ ಉನ್ನತ ಅಧಿಕಾರಿಗಳು ಪ್ರವಾಸೋದ್ಯಮ ಹಾಗೂ ಮುಜರಾಯಿ ಸಚಿವರು ಕೇರಳ ರಾಜ್ಯದ ಅಧಿಕಾರಿಗಳ ಜೊತೆಗೆ ಮಾತನಾಡಿ ಕನ್ನಡದ ಭಕ್ತರಿಗೆ ಆಗುತ್ತಿರುವ ಕಿರಿಕಿರಿಯನ್ನು ಹಾಗೂ ತೊಂದರೆಯನ್ನು ತಪ್ಪಿಸಬೇಕು ಎಂದು ಭಕ್ತರು ಮನವಿ ಮಾಡಿದ್ದಾರೆ.