– 2019ರಲ್ಲೇ ಸಿನೆಮಾ ಮಾದರಿಯಲ್ಲಿ ಚಿನ್ನ ಕಳ್ಳತನದ ಪ್ಲಾನ್ ಮಾಡಿದ್ದ ಕಿರಾತಕ
ಬಳ್ಳಾರಿ: ಕೇರಳದ (Kerala) ಶಬರಿಮಲೆಯಲ್ಲಿ ಚಿನ್ನ ಕಳ್ಳತನ ಪ್ರಕರಣಕ್ಕೆ (Sabarimala Gold Theft Case) ಸಂಬಂಧಿಸಿದಂತೆ ದಿನಕ್ಕೊಂದು ಸತ್ಯ ಹೊರಬರುತ್ತಿದೆ. ನಾಲ್ಕೂವರೆ ಕೆಜಿ ಚಿನ್ನ ಕಳ್ಳತನದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಸಿನಿಮಾ ಮಾದರಿಯಲ್ಲಿ ಪಕ್ಕಾ ಪ್ಲಾನ್ ಮಾಡಿದ್ದ ಅನ್ನೋದು ಎಸ್‌ಐಟಿ (SIT) ತನಿಖೆ ವೇಳೆ ಬಯಲಾಗಿದೆ.
ಉನ್ನಿಕೃಷ್ಣನ್ ಖತರ್ನಾಕ್ ಪ್ಲಾನ್‌ಗೆ ಸ್ವತಃ ಕೇರಳ ಎಸ್‌ಐಟಿ ತಂಡವೇ ಶಾಕ್ ಆಗಿದೆ. 2019ರಲ್ಲೇ ಖತರ್ನಾಕ್ ಪ್ಲಾನ್ ಮಾಡಿದ್ದ ಉನ್ನಿಕೃಷ್ಣನ್, ಬಳ್ಳಾರಿ, ಬೆಂಗಳೂರು ಹಾಗೂ ತಮಿಳುನಾಡು ಸೇರಿ ಒಟ್ಟು 3 ಕಡೆ ಶಬರಿಮಲೆ ದೇವಸ್ಥಾನಕ್ಕೆ ಚಿನ್ನ ಲೇಪಿತ ಬಾಗಿಲು ಮಾಡಿಸಿದ್ದ. 2 ಕಡೆ ಮಾತ್ರ ನಿಜವಾದ ಚಿನ್ನದ ಬಾಗಿಲು ಮಾಡಿಸಿದ್ರೆ, ಇನ್ನೊಂದು ಕಡೆ ತಾಮ್ರ ಹೆಚ್ಚಿರುವ ಬಾಗಿಲು ರೆಡಿ ಮಾಡಿಸಿದ್ದ. ಕೊನೆಗೆ ಅಪ್ಪಟ ಚಿನ್ನದ ಬಾಗಿಲುಗಳನ್ನ ತಾನೇ ಇಟ್ಟುಕೊಂಡಿದ್ದ. ಬಳಿಕ ತಾಮ್ರದ ಬಾಗಿಲನ್ನು ದೇಗುಲಕ್ಕೆ ಕೊಟ್ಟು ತನಗೇನೂ ಗೊತ್ತಿಲ್ಲ ಎಂಬಂತೆ ಅಮಾಯಕನ ರೀತಿ ಇದ್ದ. ಈ ಸತ್ಯ ಇದೀಗ ಎಸ್‌ಐಟಿ ತನಿಖೆಯಲ್ಲಿ ಬಟಾಬಯಲಾಗಿದೆ. ಇದನ್ನೂ ಓದಿ: ಆರೋಪಿ ಉನ್ನಿಕೃಷ್ಣನ್ ಚಿನ್ನ ಕೊಟ್ಟಿದ್ದು ನಿಜ – ಸತ್ಯ ಒಪ್ಪಿಕೊಂಡ ಜ್ಯುವೆಲ್ಲರಿ ಶಾಪ್ ಮಾಲೀಕ ಗೋವರ್ಧನ್
ಬಳ್ಳಾರಿಯ ಚಿನ್ನದ ಉದ್ಯಮಿ, ರೊದ್ದಂ ಗೋಲ್ಡ್ ಜ್ಯುವೆಲ್ಲರಿ ಮಾಲೀಕ ಗೋವರ್ಧನ್ ಅವರು 2019ರಲ್ಲಿ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಚಿನ್ನದ ಬಾಗಿಲು ರೆಡಿ ಮಾಡಿಕೊಟ್ಟಿದ್ದರು. ಅದು ಬಳ್ಳಾರಿಯಲ್ಲಿಯೇ ಚಿನ್ನದ ಬಾಗಿಲು ರೆಡಿಯಾಗಿತ್ತು. ಉನ್ನಿಕೃಷ್ಣನ್ ಕೇಳಿದ್ದ ಹಿನ್ನೆಲೆಯಲ್ಲಿ ಈ ಚಿನ್ನದ ಉದ್ಯಮಿ ಗೋವರ್ಧನ್ ಚಿನ್ನದ ಬಾಗಿಲು ದಾನ ಮಾಡಿದ್ದರು. ಆದರೆ ಅಸಲಿ ಚಿನ್ನದ ಬಾಗಿಲು ಬದಲಾಗಿದ್ದೇಗೆ ಅನ್ನೋದೆ ಸಸ್ಪೆನ್ಸ್ ಆಗಿ ಉಳಿದಿತ್ತು. ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಳ್ಳಾರಿಯ ಚಿನ್ನದ ಉದ್ಯಮಿ ಗೋವರ್ಧನ್, ನಾನು 2019ರಲ್ಲಿ ಚಿನ್ನದ ಬಾಗಿಲು ರೆಡಿ ಮಾಡಿ ಕೊಟ್ಟಿದ್ದು ನಿಜ. ಆದ್ರೆ ಅದು ಆಮೇಲೆ ಹೇಗೆ ಬದಲಾಯ್ತು ಅನ್ನೋದು ಗೊತ್ತಿಲ್ಲ. ನಾನು ಅಯ್ಯಪ್ಪಸ್ವಾಮಿ ಭಕ್ತ ಆಗಿದ್ರಿಂದ 2019ರಿಂದಲೇ ನನಗೆ ಉನ್ನಿಕೃಷ್ಣನ್ ಪರಿಚಯ ಆಗಿತ್ತು. ದೇವರ ಚಿನ್ನ ಕದ್ದವರು ಯಾರೇ ಆಗಿದ್ರೂ ಶಿಕ್ಷೆ ಆಗುತ್ತೆ. ನನ್ನ ಮೇಲೂ 475 ಗ್ರಾಂ ಚಿನ್ನ ಖರೀದಿಯ ಆರೋಪವಿದ್ದು, ಎಲ್ಲವನ್ನೂ ಎಸ್‌ಐಟಿಗೆ ಹಿಂದಿರುಗಿಸಿ ತನಿಖೆಗೆ ಸಹಕಾರ ಕೊಟ್ಟಿದ್ದೇನೆ. ಆದರೆ ಉನ್ನಿಕೃಷ್ಣನ್ ಇತ್ತೀಚೆಗೆ ಕೊಟ್ಟಿದ್ದು ದೇವರ ಚಿನ್ನ ಅನ್ನೋದು ಗೊತ್ತಿರಲಿಲ್ಲ ಎಂದು ಹೇಳುವ ಮೂಲಕ ಉನ್ನಿಕೃಷ್ಣನ್ ಚಿನ್ನ ಕೊಟ್ಟಿದ್ದ ಅಸಲಿ ಸತ್ಯವನ್ನ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಶಬರಿಮಲೆಯಲ್ಲಿ ಚಿನ್ನ ನಾಪತ್ತೆ ಪ್ರಕರಣಕ್ಕೆ ಬೆಂಗಳೂರು ಲಿಂಕ್ – ಬಳ್ಳಾರಿಯಲ್ಲಿ ಚಿನ್ನ ಮಾರಾಟ ಮಾಡಿರೋ ಶಂಕೆ
ಇನ್ನೂ ಶಬರಿಮಲೆ ಅಯ್ಯಪ್ಪ ಸ್ವಾಮಿ ಚಿನ್ನ ಕದ್ದ ಆರೋಪಿ ಉನ್ನಿಕೃಷ್ಣನ್ ಈಗಾಗಲೇ ಕಂಬಿ ಹಿಂದೆ ತಳ್ಳಲ್ಪಟ್ಟಿದ್ದಾನೆ. ಆದ್ರೆ ಈ ಪ್ರಕರಣದಲ್ಲಿ ಉನ್ನಿಕೃಷ್ಣನ್ ನಂಬಿ ಚಿನ್ನ ಖರೀದಿ ಮಾಡಿದವರ ಪಾಡು ಕಾಗೆಯಂತಾಗಿದೆ. ಇನ್ನೆರಡು ದಿನಗಳಲ್ಲಿ ಕೇರಳ ಎಸ್‌ಐಟಿ ತಂಡ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಲಿದ್ದು, ಇನ್ನಷ್ಟು ಕರಾಳ ಸತ್ಯ ಬಯಲಾಗಲಿದೆ.
ತಿರುವನಂತಪುರಂ: ಕೇರಳ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರು ಶಬರಿಮಲೆಗೆ (Sabarimala) ಭೇಟಿ ನೀಡಿ, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.
ಇರುಮುಡಿ ಕಟ್ಟು ಹೊತ್ತು ಶಬರಿಮಲೆಗೆ ಭೇಟಿ ನೀಡಿದ ದ್ರೌಪದಿ ಮುರ್ಮು ಅವರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಈ ಮೂಲಕ ಶಬರಿಮಲೆಗೆ ಭೇಟಿ ನೀಡಿದ ಮೊದಲ ಹಾಲಿ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಸೋಮವಾರದಿಂದ ಸಂಜೆ 6:20ರ ಸುಮಾರಿಗೆ ತಿರುವನಂತಪುರಂಕ್ಕೆ ಆಗಮಿಸಿದ ಮುರ್ಮು ಅವರಿಂದು ಹೆಲಿಕಾಪ್ಟರ್ ಮೂಲಕ ಕೇರಳದ ಪ್ರಮಾಡಂ ಇನ್‌ಡೋರ್ ಸ್ಟೇಡಿಯಂಗೆ ಬಂದಿಳಿದರು, ಈ ವೇಳೆ ಹೆಲಿಕಾಪ್ಟರ್ ಟೈರ್ ಕಾಂಕ್ರೀಟ್‌ನಲ್ಲಿ ಹೂತುಹೋಯಿತು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಹೆಲಿಕಾಪ್ಟರ್‌ನ್ನು ತಳ್ಳಿ ಬದಿಸರಿಸಿದರು. ನಂತರ ಅಲ್ಲಿಂದ ಶಬರಿಮಲೆಗೆ ತೆರಳಿ ತುಲಾ ಮಾಸ ಪೂಜೆಯ ಕೊನೆಯ ದಿನದಂದು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.
ಬಳಿಕ ಅ.23ರಂದು ತಿರುವನಂತಪುರದ ರಾಜಭವನದಲ್ಲಿ ಮಾಜಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ನಂತರ ವರ್ಕಲಾದ ಶಿವಗಿರಿ ಮಠದಲ್ಲಿ ಶ್ರೀ ನಾರಾಯಣ ಗುರುಗಳ ಮಹಾಸಮಾಧಿಯ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ಅದೇ ದಿನ ಪಲೈನಲ್ಲಿರುವ ಸೇಂಟ್ ಥಾಮಸ್ ಕಾಲೇಜಿನ ಪ್ಲಾಟಿನಂ ಜುಬಿಲಿ ಸಮಾರೋಪ ಸಮಾರಂಭದಲ್ಲಿಯೂ ಭಾಗಿಯಾಗಲಿದ್ದಾರೆ. ಅ.24ರಂದು ಎರ್ನಾಕುಲಂನ ಸೇಂಟ್ ತೆರೇಸಾ ಕಾಲೇಜಿನ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಅ.22ರಂದು ತಿರುವನಂತಪುರದಿಂದ ಹೆಲಿಕಾಪ್ಟರ್ ಮೂಲಕ ನೀಲಕ್ಕಲ್‌ಗೆ ಆಗಮಿಸಿ ಬಳಿಕ ರಸ್ತೆ ಮಾರ್ಗದಲ್ಲಿ ಪಂಪಾಗೆ ಆಗಮಿಸಲಿದ್ದಾರೆ. ಬಳಿಕ ಪಂಪಾದಿಂದ ಗೂರ್ಖಾ ಫೋರ್ಸ್ ವಾಹನದಲ್ಲಿ ದೇವಾಲಯಕ್ಕೆ ಆಗಮಿಸಲಿದ್ದಾರೆ. ತುಲಾ ಮಾಸ ಪೂಜೆಯ ಕೊನೆಯ ದಿನದಂದು ಶಬರಿಮಲೆಗೆ ತೆರಳಿ, ಮಧ್ಯಾಹ್ನ 12:20 ರಿಂದ 1 ಗಂಟೆಯ ಅಯ್ಯಪ್ಪ ಸ್ವಾಮಿಯ ವಿಶೇಷ ದರ್ಶನ ಪಡೆದು, ಆರತಿ ನೆರವೇರಿಸಲಿದ್ದಾರೆ. ಈ ಮೂಲಕ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದ ಭಾರತದ ಮೊದಲ ಹಾಲಿ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಬಳಿಕ ಅ.23ರಂದು ತಿರುವನಂತಪುರದ ರಾಜಭವನದಲ್ಲಿ ಮಾಜಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ನಂತರ ವರ್ಕಲಾದ ಶಿವಗಿರಿ ಮಠದಲ್ಲಿ ಶ್ರೀ ನಾರಾಯಣ ಗುರುಗಳ ಮಹಾಸಮಾಧಿಯ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ಅದೇ ದಿನ ಪಲೈನಲ್ಲಿರುವ ಸೇಂಟ್ ಥಾಮಸ್ ಕಾಲೇಜಿನ ಪ್ಲಾಟಿನಂ ಜುಬಿಲಿ ಸಮಾರೋಪ ಸಮಾರಂಭದಲ್ಲಿಯೂ ಭಾಗಿಯಾಗಲಿದ್ದಾರೆ. ಅ.24ರಂದು ಎರ್ನಾಕುಲಂನ ಸೇಂಟ್ ತೆರೇಸಾ ಕಾಲೇಜಿನ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ತಿರುವನಂತಪುರಂ: ಆಯುರ್ವೇದ ಚಿಕಿತ್ಸೆಗೆಂದು ಕೇರಳಕ್ಕೆ ಬಂದಿದ್ದ ಕೀನ್ಯಾ (Kenya) ಮಾಜಿ ಪ್ರಧಾನಿ ರೈಲಾ ಒಡಿಂಗಾ (Raila Odinga) ಹೃದಯಸ್ತಂಭನದಿಂದ (Cardiac Arrest) ಇಂದು ಮುಂಜಾನೆ ನಿಧನರಾಗಿದ್ದಾರೆ.
80 ವರ್ಷದ ರೈಲಾ ಒಡಿಂಗಾ ಆಯುರ್ವೇದ ಚಿಕಿತ್ಸೆಗಾಗಿ (Ayurvedic Treatment) ಕೇರಳದ ಎರ್ನಾಕುಲಂ (Ernakulam) ಜಿಲ್ಲೆಯ ಕೂಥಾಟುಕುಳಂಗೆ ಬಂದಿದ್ದರು. ಇಂದು ಮುಂಜಾನೆ ವಾಕಿಂಗ್ ಮಾಡುತ್ತಿದ್ದ ಸಂದರ್ಭ ಹಠಾತ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಕೂಥಾಟುಕುಳಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಬೆಳಗ್ಗೆ 9:25ರ ಸುಮಾರಿಗೆ ರೈಲಾ ಒಡಿಂಗಾ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬೀದರ್ | 45 ಲಕ್ಷ ಮೌಲ್ಯದ ಮಾದಕ ವಸ್ತು ಸೀಜ್ – ಇಬ್ಬರು ಅರೆಸ್ಟ್
ಸದ್ಯ ರೈಲಾ ಒಡಿಂಗಾ ಅವರ ಮೃತದೇಹವನ್ನು ಆಸ್ಪತ್ರೆಯಲ್ಲೇ ಇರಿಸಲಾಗಿದೆ. ಮೃತದೇಹ ಹಸ್ತಾಂತರ ಸೇರಿದಂತೆ ಮುಂದಿನ ಪ್ರಕ್ರಿಯೆಗಾಗಿ ಪ್ರಾದೇಶಿಕ ನೋಂದಣಿ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹಂಪಿಗೆ ಭೇಟಿ ನೀಡಿದ ನಿರ್ಮಲಾ ಸೀತಾರಾಮನ್ – ದೇಶದ ಹೆಸರಲ್ಲಿ ಪೂಜೆ
ರೈಲಾ ಒಡಿಂಗಾ ಕುಟುಂಬ ಇದಕ್ಕೂ ಮೊದಲು ಈ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಹಿಂದೆ ರೈಲಾ ಒಡಿಂಗಾ ಅವರ ಪುತ್ರಿ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕಣ್ಣಿನ ದೃಷ್ಟಿ ಮರಳಿ ಪಡೆದಿದ್ದರು. ಇದನ್ನೂ ಓದಿ: ಹೃದಯಸ್ತಂಭನ – ಗೋವಾ ಸಚಿವ, ಮಾಜಿ ಸಿಎಂ ರವಿ ನಾಯ್ಕ್ ನಿಧನ
ಕೇರಳದಲ್ಲೂ ಕಾಂತಾರ ಚಾಪ್ಟರ್ 1 (Kantara Chapter 1) ಸಿನಿಮಾ ಕಮಾಲ್ ಮಾಡುತ್ತಿದೆ. ರಾಜ್ಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ 2ನೇ ಕನ್ನಡ ಸಿನಿಮಾ ಎಂಬ ದಾಖಲೆಯನ್ನು ಕಾಂತಾರ ಬರೆದಿದೆ.
ಕೇರಳದಿಂದ 20 ಕೋಟಿ ರೂ. ದಾಟಿದ ಎರಡನೇ ಕನ್ನಡ ಚಿತ್ರ ಎಂಬ ದಾಖಲೆಯನ್ನೂ ಕಾಂತಾರ ಬರೆಯಲಿದೆ. ರಾಜ್ಯದಲ್ಲಿ ವರ್ಷದ ಅತಿ ದೊಡ್ಡ ಕನ್ನಡ ಗಳಿಕೆ ಸಿನಿಮಾವಾಗಿ ಹೊರಹೊಮ್ಮಿದೆ.
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಾಪ್ಟರ್ 1 ಸಿನಿಮಾ ಇದೇ ಅ.2 ರಂದು ವಿಶ್ವದಾದ್ಯಂತ ತೆರೆ ಕಂಡಿತು. ಕನ್ನಡ, ತೆಲುಗು, ಮಲಯಾಳಂ ಸೇರಿ ಹಲವು ಭಾಷೆಗಳಲ್ಲಿ ತೆರೆಗೆ ಬಂದಿದೆ. ರಿಷಬ್ ಶೆಟ್ಟಿ ನಟನೆ, ಸಿನಿಮಾ ಮೇಕಿಂಗ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದೊಂದು ಬ್ಲಾಕ್‌ಬಸ್ಟರ್ ಮೂವಿ ಎಂದು ಹಾಡಿಹೊಗಳಿದ್ದಾರೆ. ಇದನ್ನೂ ಓದಿ: ‘ಕಾಂತಾರ’ಗೆ ಟಿಕೆಟ್ ಸಿಗದ ಕಾರ್ಯಕರ್ತರಿಗೆ ಸೋಮವಾರ ವ್ಯವಸ್ಥೆ ಮಾಡುತ್ತೇನೆ: ಪ್ರತಾಪ್ ಸಿಂಹ
ರಿಲೀಸ್ ಆದ ಮೂರೇ ದಿನದಲ್ಲಿ ಕಾಂತಾರ ಸಿನಿಮಾ 160 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿದೆ. ಥಿಯೇಟರ್‌ಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ.
ನವದೆಹಲಿ: ಟಿ.ವಿ ವಾಹಿನಿಯೊಂದರ ಚರ್ಚೆಯಲ್ಲಿ ಬಿಜೆಪಿಯ ಮಾಧ್ಯಮ ವಕ್ತಾರರೊಬ್ಬರು ‘ರಾಹುಲ್ ಗಾಂಧಿಯ ಎದೆಗೆ ಗುಂಡಿಕ್ಕಬೇಕು’ ಎಂಬ ಹೇಳಿಕೆಗೆ ಕಾಂಗ್ರೆಸ್ (Congress) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್, ರಾಹುಲ್ ಗಾಂಧಿಯ (Rahul Gandhi) ಎದೆಗೆ ಗುಂಡು ಹಾರಿಸಲಾಗುವುದು ಎಂದು ಕೇರಳ ಬಿಜೆಪಿ ವಕ್ತಾರ ಪಿಂಟು ಮಹಾದೇವ್ ಅವರು ಹೇಳಿದ್ದು, ಈ ಕುರಿತು ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಇದನ್ನೂ ಓದಿ: ಬರೇಲಿಯ ‘ಐ ಲವ್ ಮುಹಮ್ಮದ್’ ಪ್ರತಿಭಟನೆಯಲ್ಲಿ ಹಿಂಸಾಚಾರ – ಮಾಸ್ಟರ್ ಮೈಂಡ್ ನದೀಮ್ ಅರೆಸ್ಟ್
ಪಕ್ಷದ ತಳಹಂತದ ಪದಾಧಿಕಾರಿಯೊಬ್ಬರು ನೀಡಿರುವ ಕ್ಷುಲ್ಲಕ ಹೇಳಿಕೆ ಇದು ಎಂದು ಅಸಡ್ಡೆ ತೋರಬಾರದು. ಲೋಕಸಭೆಯ ವಿರೋಧ ಪಕ್ಷದ ನಾಯಕನನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ನೀಡಿರುವ ದ್ವೇಷದ ಹೇಳಿಕೆ ಇದಾಗಿದೆ’ ಎಂದಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಕೇಸ್ | ನನ್ಗೆ ಪ್ರಧಾನಿ ಗೊತ್ತು – ಪೊಲೀಸರಿಗೇ ಬೆದರಿಕೆ ಹಾಕಿದ ಸ್ವಾಮಿ ಚೈತನ್ಯಾನಂದ ಸರಸ್ವತಿ
‘ಬಿಜೆಪಿಯ ಮಾಧ್ಯಮ ವಕ್ತಾರರಾಗಿ ಟಿ.ವಿ. ವಾಹಿನಿಗಳ ಚರ್ಚೆಯಲ್ಲಿ ಭಾಗವಹಿಸುವ ಎಬಿವಿಪಿಯ ಮಾಜಿ ಕಾರ್ಯಕರ್ತ ಪಿಂಟು ಮಹಾದೇವ್ ಹೇಳಿಕೆಯನ್ನು ನಿರ್ಲಕ್ಷ್ಯದಿಂದ ನೋಡಬಾರದು. ಅದು ಜೀವ ಬೆದರಿಕೆ’ ಎಂದಿರುವ ವೇಣುಗೋಪಾಲ್, ಆತನ ವಿರುದ್ಧ ತ್ವರಿತವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹಿರಿಯ ರಂಗಕರ್ಮಿ ಯಶವಂತ್ ಸರದೇಶಪಾಂಡೆ ಹೃದಯಾಘಾತದಿಂದ ನಿಧನ
ರಾಜಕೀಯ ಭಿನ್ನಾಭಿಪ್ರಾಯಗಳನ್ನು ಸಾಂವಿಧಾನಿಕ ಚೌಕಟ್ಟಿನೊಳಗೆ ಪರಿಹರಿಸಿಕೊಳ್ಳಬೇಕು. ಆದರೆ ಬಿಜೆಪಿ ನಾಯಕರು ತಮ್ಮ ವಿರೋಧಿಗಳಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: RBI ಉಪ ಗವರ್ನರ್ ಆಗಿ ಶಿರೀಶ್ ಚಂದ್ರ ಮುರ್ಮು ನೇಮಕ
ವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಹೊಸ ಸಂಶೋಧನೆಗಳು ಅಚ್ಚರಿ ಮೂಡಿಸುತ್ತಿದ್ದರೆ, ಹೊಸ ಮಾದರಿಯ ವೈರಸ್‌ಗಳು (Virus) ವಿಶ್ವದಾದ್ಯಂತ ಜನರ ನಿದ್ದೆಗೆಡಿಸಿವೆ. ಕೆಲ ದಿನಗಳ ಹಿಂದೆ ಚೀನಾದಲ್ಲಿ (China) ಪತ್ತೆಯಾಗಿದ್ದ ನ್ಯುಮೋನಿಯಾ ಮಾದರಿಯ ವೈರಸ್ ವಿಶ್ವವನ್ನೇ ಆತಂಕಕ್ಕೆ ದೂಡಿತ್ತು. ನಿರ್ಲಕ್ಷ್ಯ ವಹಿಸಿದ್ರೆ ಭಾರತಕ್ಕೂ ಇದರಿಂದ ಸಂಕಷ್ಟ ಕಟ್ಟಿಟ್ಟಬುತ್ತಿ ಎಂದು ಸಾಂಕ್ರಾಮಿಕ ರೋಗತಜ್ಞರು ಎಚ್ಚರಿಸಿದ್ದರು. ಅದಕ್ಕಿಂತಲೂ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಕಾಣಿಸಿಕೊಂಡಿರುವ ಮೆದುಳು ತಿನ್ನುವ ಅಮೀಬಾ ಸೋಂಕು ಜನರ ನಿದ್ದೆಗೆಡಿಸಿದೆ.
1962ರಲ್ಲಿ ಕಾಣಿಸಿಕೊಂಡಿದ್ದ ಈ ಸೋಂಕು ಭಾರತದಲ್ಲಿ (India) ಮೊದಲು ಕಾಣಿಸಿಕೊಂಡಿದ್ದು, ಹರಿಯಾಣದ ರೋಹ್ಟಕ್‌ನಲ್ಲಿ. ಆದ್ರೆ ಇತ್ತೀಚಿನ ದಿನಗಳಲ್ಲಿ ನದಿ, ತೊರೆಗಳು ಹೆಚ್ಚಾಗಿರುವ ಕೇರಳದಲ್ಲಿ ವೈರಸ್ ಕಾಣಿಸಿಕೊಂಡಿದ್ದು, ಇದೇ ವರ್ಷ 19 ಜನರನ್ನ ಬಲಿ ಪಡೆದುಕೊಂಡಿದೆ. ಈ ವರ್ಷ 3 ತಿಂಗಳ ಶಿಶುವಿನಿಂದ 91 ವರ್ಷದ ವರೆಗಿನ ವೃದ್ಧನಲ್ಲಿಯೂ ಸೇರಿ ಒಟ್ಟು 61 ಪ್ರಕರಣಗಳು ವರದಿಯಾಗಿದ್ದು, 19 ಜನರನ್ನ ಬಲಿ ಪಡೆದಿದೆ. ಈ ಸಂಬಂಧ ರಾಜ್ಯ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಿದೆ. ಸಾವಿನ ಸಂಖ್ಯೆ ಹೆಚ್ಚಳ ಆತಂಕಕ್ಕೆ ಕಾರಣವಾಗಿದ್ದು, ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ಕೊಳ, ಕೆರೆ, ತೊರೆಗಳಲ್ಲಿ ಸ್ನಾನ ಮಾಡದಂತೆ ಜನಕ್ಕೆ ಎಚ್ಚರಿಕೆ ನೀಡಿದ್ದು, ತಲೆನೋವು ಕಂಡುಬಂದರೆ ತಕ್ಷಣ ವೈದ್ಯರನ್ನ ಸಂಪರ್ಕಿಸಲು ತಿಳಿಸಲಾಗಿದೆ.
ಅಷ್ಟಕ್ಕೂ ಈ ಮೆದುಳು ತಿನ್ನುವ ಅಮೀಬಾ (Brain Eating Amoeba) ಎಂದರೇನು? ಮನುಷ್ಯರಿಗೆ ಇದು ಹೇಗೆ ಹರಡುತ್ತೆ? ಆರೋಗ್ಯದ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತೆ? ಇದರ ಮರಣ ಪ್ರಮಾಣ ಎಷ್ಟಿದೆ? ಎಂಬುದಕ್ಕೆಲ್ಲ ಉತ್ತರ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ… ಅದಕ್ಕೂ ಈ ವೈರಸ್‌ಗಳಿಗೆ ಏಕೆ ಸಾವಿಲ್ಲ ಎಂಬುದ್ನ ತಿಳಿಯೋಣ,..
ಒಮ್ಮೆ ಬಂದ ವೈರಸ್ ಸಾಯುವುದಿಲ್ಲ ಏಕೆ?
ವೈರಸ್ ಅಂದ್ರೆ ಪರಾವಲಂಬಿಯಾಗಿರುವ ಅತ್ಯಂತ ಸೂಕ್ಷ್ಮಾಣು ಜೀವಿ. ಮೆದುಳು ತಿನ್ನುವ ಅಮೀಬಾ ಸೋಂಕು ಕೂಡ ಇತರ ಜೀವಿಗಳಂತೆ ಒಂದು. ವೈದ್ಯಕೀಯ ಕ್ಷೇತ್ರದಲ್ಲಿ ತಜ್ಞರು ಗುರುತಿಸಿರುವಂತೆ ಸುಮಾರು 1 ಸಾವಿರ ವೈರಸ್‌ಗಳು ಕಂಡುಬಂದಿವೆ. ಆದ್ರೆ ಅದರಲ್ಲಿ ಸಬ್ ವೇರಿಯಂಟ್‌ಗಳು (ರೂಪಾಂತರಿ) ಸಾಕಷ್ಟು ಇವೆ. ಅವುಗಳು ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತವೆ. ಸಾವಿನ ಪ್ರಮಾಣದ ತೀವ್ರತೆ ಎಷ್ಟಿರುತ್ತದೆ ಎಂಬುದನ್ನು ಗಮನಿಸಿ ಅದಕ್ಕೆ ಹೆಸರುಗಳನ್ನ ಕೊಡುತ್ತಾರೆ. ನಂತರ ಈ ವೈರಸ್ ಬಂದ್ರೆ ಹೊಸದಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳುತ್ತಾರೆ. ಆದರೆ, ಒಂದು ವೈರಸ್ ಬಂದ ನಂತರ ಅವು ಮತ್ತೆ ಸಾಯುವುದಿಲ್ಲ. ಬದುಕುವುದಕ್ಕಾಗಿ ಹೊಸ ಹೊಸ ರೂಪಗಳನ್ನ ಪಡೆದುಕೊಳ್ಳುತ್ತವೆ. ಅವು ಮಾನವನ ಜೀವಕೋಶಗಳ ಮೇಲೆ ಅವಲಂಬಿತವಾಗುತ್ತವೆ. ನಮ್ಮ ಜೀವಕಣಗಳಲ್ಲಿ ರೋಗನಿರೋಧಕ ಶಕ್ತಿ ಉತ್ಪತ್ತಿಯಾದ್ರೆ ಯಾವುದೇ ಸಮಸ್ಯೆ ಕಂಡುಬರುವುದಿಲ್ಲ. ಇಲ್ಲದಿದ್ದರೇ ಪ್ರಾಣಾಪಾಯ ಉಂಟುಮಾಡುತ್ತದೆ ಎನ್ನುತ್ತಾರೆ ಸಾಂಕ್ರಾಮಿಕ ರೋಗ ತಜ್ಞ ಹಾಗೂ ಚಾಮರಾಜನಗರ ಜಿಲ್ಲಾ ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ ಡಾ.ಚಿದಂಬರ.
ನೆಗ್ಲೇರಿಯಾ ಫೌಲೆರಿ ಅಂದ್ರೇನು?
ಇನ್ನೂ ಈ ಮೆದುಳು ತಿನ್ನುವ ಅಮೀಬಾ ಬಗ್ಗೆ ನೋಡೋದಾದ್ರೆ ಇದನ್ನ ನೆಗ್ಲೇರಿಯಾ ಫೌಲೆರಿ (Naegleria fowleri) ಎಂಬ ಹೆಸರಿನಿಂದ ಕರೆಯುತ್ತಾರೆ. ನೇಗ್ಲೇರಿಯಾ ಫೌಲೆರಿ ಎಂಬುದು ಒಂದು ಬಗೆಯ ಅಮೀಬಾ ರೀತಿಯ ಜೀವಿ. ಇವು ಸಾಮಾನ್ಯವಾಗಿ ಕೊಳಗಳು, ನದಿಗಳು, ಕೆರೆಗಳಂತಹ ನೀರಿನ ಪ್ರದೇಶ ಹಾಗೂ ಮಣ್ಣಿನಲ್ಲಿಯೂ ಕಂಡುಬರುತ್ತವೆ.
ನೆಗ್ಲೇರಿಯಾ ಫೌಲೆರಿ ಹರಡೋದು ಹೇಗೆ?
ಈ ಜೀವಿಗಳಿರುವ ನೀರು ಮನುಷ್ಯನ ಮೂಗಿನಲ್ಲಿ ಸೇರಿಕೊಂಡರೆ, ಆತ ಸೋಂಕಿಗೆ ಒಳಗಾಗುತ್ತಾನೆ. ಇದು ಮೂಗಿನ ಮೂಲಕ ಮೆದುಳನ್ನು ಪ್ರವೇಶ ಮಾಡಿ, ಮೆದುಳಿಗೆ ಹಾನಿಮಾಡಲು ಪ್ರಾರಂಭಿಸುತ್ತದೆ. ಇದು ಮೆದುಳಿನ ಅಂಗಾಂಶಗಳನ್ನು ನಾಶಪಡಿಸುವುದರಿಂದ ಇದಕ್ಕೆ ಮೆದುಳು ತಿನ್ನುವ ಅಮೀಬಾ ಎಂದು ಕರೆಯಲಾಗುತ್ತದೆ.
ರೋಗದ ಲಕ್ಷಣವೇನು?
ನೆಗ್ಲೇರಿಯಾ ಫೌಲೆರಿ ಬಾಧಿತರು ತೀವ್ರವಾದ ತೆಲೆನೋವು, ವಾಂತಿ, ಗಂಟಲಿನಲ್ಲಿ ಬಿಗಿತ ಹಾಗೂ ಮಂದಗೊಂಡ ಮಾತಿನ ಲಕ್ಷಣಗಳನ್ನು ಹೊಂದುತ್ತಾರೆ. ಮನುಷ್ಯನಿಗೆ ಸೋಂಕು ತಗುಲಿದ 1-12 ದಿನಗಳಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ರೋಗದ ಲಕ್ಷಣ ತೀವ್ರವಾಗಿ ಮನುಷ್ಯನಿಗೆ ಜ್ವರ ಬರುವ ಸಾಧ್ಯತೆಯೂ ಇರುತ್ತದೆ. ಇದು ಮುಂದುವರಿದಂತೆ ವ್ಯಕ್ತಿಯಲ್ಲಿ ಸ್ನಾಯು ಸೆಳೆತಗಳು, ಭ್ರಾಂತಿ, ಕೋಮಾಗೂ ಹೋಗುವ ಸಾಧ್ಯತೆಯಿರುತ್ತದೆ. ಇದರ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗಿ ವ್ಯಕ್ತಿ 5 ದಿನಗಳಲ್ಲಿ ಸಾವನ್ನಪ್ಪುತ್ತಾನೆ ಎನ್ನಲಾಗಿದೆ.
ಭಾರತದಲ್ಲಿ ಭೀತಿ
ವರದಿಗಳ ಪ್ರಕಾರ 1962ರಲ್ಲಿ ಕಂಡುಬಂದ ಈ ವೈರಸ್ ವಿದೇಶಗಳಲ್ಲೂ ಆತಂಕ ಹುಟ್ಟಿಸಿದೆ. 2015 ರಲ್ಲಿ ಪ್ರಕಟವಾದ ಸಂಶೋಧನಾ ಅಧ್ಯಯನವೊಂದರ ಪ್ರಕಾರ, ಈ ಅಮೀಬಾ ಹರಿಯಾಣ ರಾಜ್ಯದ ರೋಹ್ಟಕ್ ಹಾಗೂ ಝಜ್ಜರ್ ಜಿಲ್ಲೆಯಲ್ಲಿರುವ ನೀರಿನ ಪ್ರದೇಶಗಳಲ್ಲಿ ಕಂಡುಬಂದಿತ್ತು. ಬಳಿಕ ನದಿ, ಕೆರೆ, ತೊರೆಗಳು ಹೆಚ್ಚಾಗಿರುವ ಕೇರಳದಲ್ಲಿ ಕಂಡುಬಂದಿದೆ.
ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು?
* ಅಮೀಬಾ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಬದಲಿಗೆ ನೀರಿನ ಮೂಲಗಳಿಂದ ಹರಡುವ ಸಾಧ್ಯತೆಯಿದೆ. ಮೂಗಿನ ಮೂಲಕ ಸೋಂಕು ಮನುಷ್ಯನ ದೇಹ ಪ್ರವೇಶಿಸುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸೋಂಕು ವರದಿಯಾದ ಪ್ರದೇಶಗಳಲ್ಲಿ ನೀರಿನಲ್ಲಿ ಈಜಾಡದಂತೆ ಸೂಚಿಸಲಾಗುತ್ತದೆ.
* ಕೊಳ, ಕೆರೆ ಮತ್ತು ನಿಂತಿರುವ ನೀರಿನಲ್ಲಿ ಸ್ನಾನ ಮಾಡಲು, ಈಜಲು ಹೋಗಬೇಡಿ
* ಶುದ್ಧ ನೀರಿನಲ್ಲಿ ಈಜುವಾಗಲೂ ಮೂಗಿಗೆ ಕ್ಲಿಪ್‌ಗಳನ್ನು ಬಳಸಿ
* ಬಾವಿ ಮತ್ತು ನೀರಿನ ಟ್ಯಾಂಕ್‌ಗಳನ್ನು ನಿಯಮಿತವಾಗಿ ಕ್ಲೋರಿನ್ ಬಳಸಿ ಸ್ವಚ್ಛಗೊಳಿಸುವುದು ಉತ್ತಮ
* ಒಂದೊಮ್ಮೆ ನಿಂತ ನೀರಿನ ಸಂಪರ್ಕಕ್ಕೆ ಬಂದ ನಂತರ ಜ್ವರ ಅಥವಾ ತಲೆನೋವಿನಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಚಿಕಿತ್ಸೆ ಏನು?
ವೈದ್ಯಕೀಯ ಲೋಕ ಬೆಳೆದಂತೆ ವೈರಾಣುಗಳಿಗೆ ಲಸಿಕೆಗಳು, ಔಷಧಗಳನ್ನು ಕಂಡುಹಿಡಿಯಲಾಗುತ್ತಿದೆ. ಆದ್ರೆ ಈವರೆಗೂ ಯಾವೊಂದು ವೈರಸ್‌ಗಳನ್ನ ಸಂಪೂರ್ಣವಾಗಿ ನಿಯಂತ್ರಣ ಮಾಡುವ ಯಾವುದೇ ಔಷಧವನ್ನೂ ಕಂಡುಹಿಡಿಯಲಾಗಿಲ್ಲ. ಆದಾಗ್ಯೂ ಸದ್ಯ ಜನರನ್ನ ಕಾಡುತ್ತಿರುವ ಮೆದುಳು ತಿನ್ನುವ ಅಮೀಬಾದಿಂದ ಮರಣ ಪ್ರಮಾಣ ಕೊಂಚ ತಡೆಯುವ ಪ್ರಯತ್ನದ ಭಾಗವಾಗಿ ಕೇರಳ ಆರೋಗ್ಯ ಇಲಾಖೆ ಔಷಧವೊಂದನ್ನು ಕಂಡುಕೊಂಡಿದೆ.
ಕೇರಳದಲ್ಲಿ ಪತ್ತೆಯಾದ 69 ಪ್ರಕರಣಗಳ ಪೈಕಿ 19 ಮಂದಿ ಸಾವನ್ನಪ್ಪಿದ್ದಾರೆ. ಆದ್ರೆ ಗಮನಾರ್ಹವೆಂದ್ರೆ ಬದುಕುಳಿಯುವ ಪ್ರಮಾಣ 24% ನಷ್ಟು ಹೆಚ್ಚಾಗಿದೆ ಅನ್ನೋದು ಸಮಾಧಾನಕರ. ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (PAM) ಚಿಕಿತ್ಸೆ ಭಾಗವಾಗಿ ಮಿಲ್ಟೆಫೋಸಿನ್ ಬಳಸುತ್ತಿರುವುದೇ ಈ ಬೆಳವಣಿಗೆಗೆ ಕಾರಣ ಎಂದು ಹೇಳಲಾಗ್ತಿದೆ. ಇದು ಪೂರ್ಣ ಪ್ರಮಾಣದಲ್ಲಿ ವೈರಸ್ ಅನ್ನು ಕೊಲ್ಲುವಂತೆ ಮಾಡದಿದ್ದರೂ 5-10 ದಿನಗಳಲ್ಲಿ ಸಂಭವಿಸುವ ಮರಣದಿಂದ ಪಾರು ಮಾಡುತ್ತದೆ. ಅದಕ್ಕಾಗಿ ಕೇರಳ ಆರೋಗ್ಯ ಇಲಾಖೆ ಆಂಫೊಟೆರಿಸಿನ್-ಬಿ ಚಿಕಿತ್ಸೆ ಜೊತೆಗೆ ಮಿಲ್ಟೆಫೋಸಿನ್ ಅನ್ನೂ ನೀಡಲಾಗುತ್ತಿದೆ. ಮೂಲತಃ ಕ್ಯಾನ್ಸರ್‌ಗಾಗಿ ಇದನ್ನ ಅಭಿವೃದ್ಧಿಪಡಿಸಲಾಗಿಗಿದೆ. ಆ ಬಳಿಕ ಲೀಶ್ಮೇನಿಯಾಸಿಸ್‌ಗೆ ಮರುಬಳಕೆ ಮಾಡಲಾಯಿತು. ಅಂದ್ರೆ ಪರಾವಲಂಬಿ ಜೀವಿಗಳಿಂದ ಉಂಟಾಗುವ ರೋಗವನ್ನು ತಡೆಯಲು ಮಿಲ್ಟೆಫೋಸಿನ್ ಚಿಕಿತ್ಸೆ ನೀಡಲಾಗುತ್ತದೆ. ಸಂಶೋಧನೆ ವರದಿಗಳನ್ನು ಪಡೆದ ಬಳಿಕ ಕೇರಳ ಈ ಚಿಕಿತ್ಸೆ ನೀಡುತ್ತಾ ಬರುತ್ತಿದೆ.
ಸದ್ಯ ಮರಣ ಪ್ರಮಾಣ ತಡೆಯಲು ಮುಂದಾಗಿರುವ ಕೇರಳ ಆರೋಗ್ಯ ಇಲಾಖೆಯು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ (ಎನ್‌ಸಿಡಿಸಿ) ಸಹಯೋಗದೊಂದಿಗೆ ಪರಿಸರ ಮಾದರಿಗಳನ್ನು ಸಂಗ್ರಹಿಸಿ, ಸೋಂಕಿನ ಮೂಲವನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದೆ.
ತಿರುವನಂತಪುರಂ: ಮೆದುಳು ತಿನ್ನುವ ಅಮೀಬಾ (Brain Eating Amoeba) ಎನ್ನಲಾಗುವ ಸೋಂಕು ಕೋವಿಡ್ ಬಳಿಕ ಜನರಲ್ಲಿ ಭಾರಿ ಆತಂಕ ಮೂಡಿಸಿದೆ. ನೆಗ್ಲೇರಿಯಾ ಫೌಲೆರಿ (Naegleria fowleri) ಹೆಸರಿನ ಈ ರೋಗಕ್ಕೆ ದಕ್ಷಿಣ ಕೋರಿಯಾದಲ್ಲಿ ಮೊದಲ ಬಲಿ ವರದಿಯಾಗಿತ್ತು. ಇದೀಗ ನೆರೆಯ ಕೇರಳಕ್ಕೂ ವ್ಯಾಪಿಸಿದ್ದು, ಇದೇ ವರ್ಷ 19 ಮಂದಿ ಬಲಿಯಾಗಿದ್ದಾರೆ.
ಮೊದಲಿಗೆ ಕೋಝಿಕ್ಕೋಡ್ ಮತ್ತು ಮಲಪ್ಪುರಂನಂತಹ ಜಿಲ್ಲೆಗಳ ಕ್ಲಸ್ಟರ್ ನಲ್ಲಿ ಕಾಣಿಸಿಕೊಂಡಿದ್ದ ಸೋಂಕು ಬಳಿಕ ರಾಜ್ಯದ ವಿವಿಧೆಡೆ ವ್ಯಾಪಿಸಿದೆ. ಮೂರು ತಿಂಗಳ ಹಸುಗೂಸಿನಿಂದ 91 ವರ್ಷದ ವೃದ್ಧನವರೆಗೂ ಈ ಕಾಯಿಲೆ ಕಾಣಿಸಿಕೊಂಡಿದೆ. ಹೀಗಾಗಿ ಕೇರಳ ಈಗ ಗಂಭೀರ ಆರೋಗ್ಯ ಸವಾಲನ್ನು ಎದುರಿಸುತ್ತಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಇದನ್ನೂ ಓದಿ: ಮಗನ ಪ್ರತಿಷ್ಠೆಗೆ ಧಕ್ಕೆ| ವಿಮಾನ ದುರಂತದ ಬಗ್ಗೆ ಮತ್ತೊಂದು ತನಿಖೆ ಮಾಡಿ: ಕ್ಯಾಪ್ಟನ್ ತಂದೆ ಒತ್ತಾಯ
ಹಾಗಿದ್ರೆ ಏನಿದು ಮೆದುಳು ತಿನ್ನುವ ಅಮೀಬಾ? ಮನುಷ್ಯರಿಗೆ ಇದು ಹೇಗೆ ಹರಡುತ್ತೆ? ಆರೋಗ್ಯದ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತೆ? ಎಂಬುದನ್ನ ತಿಳಿಯಬೇಕಿದ್ರೆ ಮುಂದೆ ಓದಿ…
ನೆಗ್ಲೇರಿಯಾ ಫೌಲೆರಿ ಅಂದ್ರೇನು?
ವರದಿಗಳ ಪ್ರಕಾರ 1962 ರಿಂದ ಇಲ್ಲಿಯವರೆಗೆ 154 ಜನರಲ್ಲಿ ಈ ಸೋಂಕು ಪತ್ತೆಯಾಗಿದೆ. ನೇಗ್ಲೇರಿಯಾ ಫೌಲೆರಿ ಎಂಬುದು ಒಂದು ಬಗೆಯ ಅಮೀಬಾ ರೀತಿಯ ಜೀವಿ. ಇವು ಸಾಮಾನ್ಯವಾಗಿ ಕೊಳಗಳು, ನದಿಗಳು, ಕೆರೆಗಳಂತಹ ನೀರಿನ ಪ್ರದೇಶ ಹಾಗೂ ಮಣ್ಣಿನಲ್ಲಿಯೂ ಕಂಡುಬರುತ್ತವೆ. ಇದನ್ನೂ ಓದಿ:ಪ್ರಧಾನಿ ಮೋದಿಗೆ ದೊರಕಿದ 1,300ಕ್ಕೂ ಹೆಚ್ಚು ಉಡುಗೊರೆಗಳ ಇ-ಹರಾಜು
ನೆಗ್ಲೇರಿಯಾ ಫೌಲೆರಿ ಹರಡೋದು ಹೇಗೆ?
ಈ ಜೀವಿಗಳಿರುವ ನೀರು ಮನುಷ್ಯನ ಮೂಗಿನಲ್ಲಿ ಸೇರಿಕೊಂಡರೆ, ಆತ ಸೋಂಕಿಗೆ ಒಳಗಾಗುತ್ತಾನೆ. ಇದು ಮೂಗಿನ ಮೂಲಕ ಮೆದುಳನ್ನು ಪ್ರವೇಶ ಮಾಡಿ, ಮೆದುಳಿಗೆ ಹಾನಿಮಾಡಲು ಪ್ರಾರಂಭಿಸುತ್ತದೆ. ಇದು ಮೆದುಳಿನ ಅಂಗಾಂಶಗಳನ್ನು ನಾಶಪಡಿಸುವುದರಿಂದ ಇದಕ್ಕೆ ಮೆದುಳು ತಿನ್ನುವ ಅಮೀಬಾ ಎಂದು ಕರೆಯಲಾಗುತ್ತದೆ.
ರೋಗದ ಲಕ್ಷಣವೇನು?
ನೆಗ್ಲೇರಿಯಾ ಫೌಲೆರಿ ಬಾಧಿತರು ತೀವ್ರವಾದ ತೆಲೆನೋವು, ವಾಂತಿ, ಗಂಟಲಿನಲ್ಲಿ ಬಿಗಿತ ಹಾಗೂ ಮಂದಗೊಂಡ ಮಾತಿನ ಲಕ್ಷಣಗಳನ್ನು ಹೊಂದುತ್ತಾರೆ. ಮನುಷ್ಯನಿಗೆ ಸೋಂಕು ತಗುಲಿದ 1-12 ದಿನಗಳಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ರೋಗದ ಲಕ್ಷಣ ತೀವ್ರವಾಗಿ ಮನುಷ್ಯನಿಗೆ ಜ್ವರ ಬರುವ ಸಾಧ್ಯತೆಯೂ ಇರುತ್ತದೆ. ಇದು ಮುಂದುವರಿದಂತೆ ವ್ಯಕ್ತಿಯಲ್ಲಿ ಸ್ನಾಯು ಸೆಳೆತಗಳು, ಭ್ರಾಂತಿ, ಕೋಮಾಗೂ ಹೋಗುವ ಸಾಧ್ಯತೆಯಿರುತ್ತದೆ. ಇದರ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗಿ ವ್ಯಕ್ತಿ 5 ದಿನಗಳಲ್ಲಿ ಸಾವನ್ನಪ್ಪುತ್ತಾನೆ ಎನ್ನಲಾಗಿದೆ.
ಮಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಆರೋಪ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಪ್ರಕರಣದಲ್ಲಿರುವ ಗ್ಯಾಂಗ್ ಕೇರಳದ ಕಮ್ಯುನಿಸ್ಟ್ ಪಕ್ಷದ ಸಂಸದನ ಮುಂದೆ ಬುರುಡೆ ಇಟ್ಟಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.
ಆರೋಪಿ ಚಿನ್ನಯ್ಯ ಹಾಗೂ ಗಿರೀಶ್ ಮಟ್ಟಣ್ಣನವರ್, ಜಯಂತ್.ಟಿ ಅವರು ಕೇರಳಕ್ಕೆ ಭೇಟಿ ನೀಡಿದ್ದರು. ಕೇರಳ ಸಂಸದ ಸಂತೋಷ್ ಕುಮಾರ್ ಅವರನ್ನು ಭೇಟಿಯಾಗಿದ್ದರು. ಬುರುಡೆಯನ್ನು ಅವರ ಬಳಿ ತೆಗೆದುಕೊಂಡು ಹೋಗಿದ್ದರು ಎಂಬ ವಿಚಾರ ಎಸ್‌ಐಟಿ ತನಿಖೆ ವೇಳೆ ಬಹಿರಂಗವಾಗಿದೆ.
ಜುಲೈನಲ್ಲೇ ಯೂಟ್ಯೂಬರ್‌ವೊಬ್ಬ ಕೇರಳ ಸಂಸದನ ಸಂದರ್ಶನ ಮಾಡಿದ್ದ. ಎಂಪಿ ಸಂತೋಷ್, ಧರ್ಮಸ್ಥಳ ಪ್ರಕರಣದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದರು. ಕೇಸನ್ನು ಸರ್ಕಾರ ಎಸ್‌ಐಟಿಗೆ ಕೊಡುವ ಮೊದಲೇ ಸಂದರ್ಶನ ನಡೆಸಲಾಗಿತ್ತು.
ಕೇರಳದಲ್ಲಿ ಸಂಸದನನ್ನು ಬುರುಡೆ ಗ್ಯಾಂಗ್ ಭೇಟಿಯಾದ ವೇಳೆ ಸಂದರ್ಶನ ನೀಡಿರುವ ಸಾಧ್ಯತೆ ಇದೆ. ಪ್ರಕರಣದ ಬಗ್ಗೆ ಸಂದರ್ಶನದಲ್ಲಿ ವಿವರವಾಗಿ ಸಂತೋಷ್ ವಿವರವಾಗಿ ಮಾತನಾಡಿದ್ದರು.
ಬಿಗ್ ಬಾಸ್ ಸ್ಪರ್ಧಿಯೊಬ್ಬರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ವಿಚಾರ ದೇಶದಾದ್ಯಂತ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಪವಿತ್ರ ಕೊಳದಲ್ಲಿ ಕಾಲು ತೊಳೆದುಕೊಂಡಿದ್ದ ಆ ಬಿಗ್ ಬಾಸ್ ಸ್ಪರ್ಧಿ, ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದೇ ನೀರಿನಿಂದಲೇ ದೇವರಿಗೆ ಪೂಜೆ ಸಲ್ಲಿಸಿದ್ದರಿಂದ, ಭಕ್ತರು ಮತ್ತು ಪೂಜಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇರಳದ ಸುಪ್ರಸಿದ್ಧ ದೇವಾಲಯ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಮಲಯಾಳಂ ಬಿಗ್ ಬಾಸ್ ಸ್ಪರ್ಧಿ ಹಾಗೂ ಯೂಟ್ಯೂಬರ್ ಆಗಿರುವ ಜಾಸ್ಮಿನ್ ಜಾಫರ್ (Jasmin Jaffar) ಭೇಟಿ ಕೊಟ್ಟಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿರುವ ಪವಿತ್ರ ಕೊಳದಲ್ಲಿ ಕಾಲು ತೊಳೆದುಕೊಂಡಿದ್ದಾರೆ. ಅದನ್ನು ವಿಡಿಯೋ ಕೂಡ ಮಾಡಿದ್ದಾರೆ. ವಿಡಿಯೋ ಮಾಡಿ ಆರು ದಿನಗಳ ನಂತರ ಆ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋ ಕಂಡು ಭಕ್ತರು ಆಘಾತಗೊಂಡಿದ್ದಾರೆ. ಇದನ್ನೂ ಓದಿ: ಸುದೀಪ್ ಹುಟ್ಟುಹಬ್ಬಕ್ಕೆ `ಬಿಗ್’ ಸರ್‌ಪ್ರೈಸ್
ಆ ಜಾಗದಲ್ಲಿ ಹಿಂದೂಯೇತರರು ಹೋಗುವಂತಿಲ್ಲವಂತೆ. ಫೋಟೋಗ್ರಫಿ ಮಾಡುವಂತಿಲ್ಲ. ಈ ಎಲ್ಲ ನಿಯಮವನ್ನು ಜಾಸ್ಮಿನ್ ಉಲ್ಲಂಘನೆ ಮಾಡಿದ್ದಾರೆ. ಜೊತೆಗೆ ಜಾಸ್ಮಿನ್ ಕಾಲು ತೊಳೆದುಕೊಂಡ ಕೊಳದಿಂದಲೇ ದೇವರ ಪೂಜೆಗೆ ನೀರು ತಗೆದುಕೊಂಡು ಹೋಗಲಾಗಿದೆಯಂತೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ದೇವಸ್ಥಾನ ಮಂಡಳಿಯು ಜಾಸ್ಮಿನ್ ವಿರುದ್ಧ ದೂರು ದಾಖಲಿಸಿದೆ. ಇದನ್ನೂ ಓದಿ: ರಿಷಿಕೇಶದಲ್ಲಿ ಗಂಗಾರತಿ ಮಾಡಿದ ಫರ‍್ಹಾ ಖಾನ್
ವಿಷಯ ತಿಳಿಯುತ್ತಿದ್ದಂತೆಯೇ ಜಾಸ್ಮಿನ್ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ನನಗೆ ತಿಳಿಯದೇ ಆಗಿರುವಂಥ ಪ್ರಮಾದವಿದು. ಹಾಗಾಗಿ ಕ್ಷಮೆ ಕೇಳುತ್ತೇನೆ ಅಂತ ಹೇಳಿದ್ದಾರೆ. ಆದರೆ, ಭಕ್ತರ ಆಕ್ರೋಶವಂತೂ ನಿಲ್ಲುತ್ತಲೇ ಇಲ್ಲ.