Tag: ಕೇದಾರನಾಥ ದೇವಾಲಯ

  • ಕೇದಾರನಾಥ್‌ ರೋಪ್‌ವೇಗೆ ಕೇಂದ್ರ ಅಸ್ತು – ಈ ರೋಪ್‌ವೇಯ ವಿಶೇಷತೆಯೇನು?

    ಕೇದಾರನಾಥ್‌ ರೋಪ್‌ವೇಗೆ ಕೇಂದ್ರ ಅಸ್ತು – ಈ ರೋಪ್‌ವೇಯ ವಿಶೇಷತೆಯೇನು?

    ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಉತ್ತರಾಖಂಡದಲ್ಲಿ 6,811 ಕೋಟಿ ರೂ. ವೆಚ್ಚದಲ್ಲಿ 2 ಹೊಸ ರೋಪ್‌ವೇ ಯೋಜನೆಗಳಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸೋನ್‌ಪ್ರಯಾಗ್‌- ಕೇದಾರನಾಥ್‌ ಮತ್ತು ಹೇಮಕುಂಡ್‌ ಸಾಹಿಬ್‌- ಗೋವಿಂದಘಾಟ್‌ ನಡುವಿನ ರೋಪ್ವೇಗಳು ಮುಂದಿನ 4ರಿಂದ 6 ವರ್ಷಗಳೊಳಗೆ ಪೂರ್ಣಗೊಳಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

    ಸೋನ್‌ಪ್ರಯಾಗ್-ಕೇದಾರನಾಥ್ 12.9 ಕಿ.ಮೀ.ವರೆಗಿನ ಮತ್ತು ಹೇಮಕುಂಡ್ ಸಾಹಿಬ್-ಗೋವಿಂದಘಾಟ್ 12.4 ಕಿ.ಮೀ. ನಡುವೆ ರೋಪ್‌ವೇ ನಿರ್ಮಿಸಲಾಗುತ್ತದೆ. ಇದರಿಂದಾಗಿ 8 ಗಂಟೆ ಬೇಕಾಗಿದ್ದ ಪ್ರಯಾಣದ ಅವಧಿ ಕೇವಲ 40 ನಿಮಿಷಕ್ಕೆ ಇಳಿಯಲಿದೆ. ಈ ರೋಪ್‌ವೇಯು ಭಾರತದ ಉದ್ದ ರೋಪ್ ವೇ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

    ಕೇದಾರನಾಥ್‌ನಿಂದ ಸೋನ್‌ಪ್ರಯಾಗ್‌ ನಡುವಿನ ರೋಪ್‌ವೇ ಅನ್ನು 4,081 ಕೋಟಿ ರೂ. ವೆಚ್ಚದಲ್ಲಿ, ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತದೆ. ಅತ್ಯಾಧುನಿಕ ಟ್ರೈಕೇಬಲ್‌ ಡಿಟ್ಯಾಚೇಬಲ್‌ ಗೊಂಡೋಲ (3ಎಸ್‌) ತಂತ್ರಜ್ಞಾನ ಬಳಸಿ ಇದರ ನಿರ್ಮಾಣವಾಗುತ್ತದೆ. ಪ್ರತಿ ಗಂಟೆಗೆ 1800 ಪ್ರಯಾಣಿಕರು, ಪ್ರತಿ ದಿನ ಸುಮಾರು 18,000 ಪ್ರಯಾಣಿಕರನ್ನು ಈ ಕೇಬಲ್‌ ಕಾರ್ ಹೊತ್ತೊಯ್ಯಲಿದೆ. ಹೇಮಕುಂಡ್‌ ಸಾಹಿಬ್‌ ಜಿ ಮತ್ತು ಗೋವಿಂದಘಾಟ್‌ ನಡುವಿನ ರೋಪ್‌ವೇ 2,730 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

    ರೋಪ್‌ವೇನ ವಿಶೇಷತೆ ಏನು?

    ಈ ರೋಪ್‌ವೇ 10 ಆಸನಗಳ ಕ್ಯಾಬಿನ್‌ಗಳನ್ನು ಒಳಗೊಂಡಿರುತ್ತದೆ. ಎಲ್ಲಾ ಕ್ಯಾಬಿನ್‌ಗಳನ್ನು ಮುಚ್ಚಿರುತ್ತದೆ. ಸ್ವಯಂಚಾಲಿತ ತೆರೆಯುವ ಮತ್ತು ಮುಚ್ಚುವ ಬಾಗಿಲುಗಳನ್ನು ಹೊಂದಿರುತ್ತದೆ. ಇವು ಒಂದು ಗಂಟೆಯಲ್ಲಿ 1,800 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಈ ರೋಪ್‌ವೇ ವರ್ಷವಿಡೀ ಕಾರ್ಯನಿರ್ವಹಿಸುತ್ತದೆ. ಮಳೆಗಾಲ, ಬೇಸಿಗೆ ಕಾಲದ ಸಮಯದಲ್ಲೂ ಕಾರ್ಯನಿರ್ವಹಿಸುತ್ತದೆ.

    ರೋಪ್‌ವೇ ನಿರ್ಮಾಣದ ಲಾಭವೇನು?
    ಹೇಮಕುಂಡ್‌ ಹಾಗೂ ಕೇದಾರನಾಥ ದೇವಸ್ಥಾನಕ್ಕೆ ತೆರಳುವ ದಾರಿ ಕಲ್ಲು ಬಂಡೆಗಳಿಂದ ಕೂಡಿದ್ದು, ಜನ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು. ವೃದ್ಧರನ್ನು ಕುದುರೆಗಳ ಮೇಲೆ ಕೂರಿಸಿಕೊಂಡು ಅಥವಾ ಹೊತ್ತುಕೊಂಡು ಹೋಗಲಾಗುತ್ತಿತ್ತು. ಭೂಕುಸಿತ ಸಂಭವಿಸಿದಾಗ ಪರಿಸ್ಥಿತಿ ಇನ್ನೂ ಹದಗೆಟ್ಟಿತ್ತು. ಈ ರೋಪ್ ವೇಯು ಯಾತ್ರಾರ್ಥಿಗಳ ಪ್ರಯಾಣವನ್ನು ಸುಖಕರಗೊಳಿಸಲು ಹಾಗೂ ಎಲ್ಲಾ ಹವಾಮಾನದಲ್ಲೂ ಓಡಾಡಲು ಅನುಕೂಲವಾಗುತ್ತದೆ. ಇದು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯಾಗಿದ್ದರಿಂದ ಪ್ರಯಾಣದ ಸಮಯವೂ ಕಡಿಮೆಯಾಗಲಿದೆ.

    ವಿಶ್ವ ಪ್ರಸಿದ್ಧ ತೀರ್ಥ ಕ್ಷೇತ್ರಗಳಲ್ಲಿ ಒಂದಾದ ಕೇದಾರನಾಥ ದೇವಾಲಯಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥಕ್ಕೆ 20 ಲಕ್ಷ ಯಾತ್ರಾಧಿಗಳು ಭೇಟಿ ನೀಡುತ್ತಾರೆ. ಇದೀಗ ಈ ದೇವಾಲಯಕ್ಕೆ ತೆರಳಲು ರೋಪ್ ವೇ ನಿರ್ಮಾಣ ಮಾಡುತ್ತಿರುವುದರಿಂದ ಭಕ್ತಾಧಿಗಳು ದುರ್ಗಮ ಹಾದಿಯಲ್ಲಿ ತೆರಳುವುದನ್ನು ತಪ್ಪಿಸುತ್ತದೆ.

    ಭಾರತದ ಮೊದಲ ರೋಪ್‌ವೇ

    1960ರಲ್ಲಿ ಭಾರತದ ಮೊದಲ ಆಧುನಿಕ ರೋಪ್‌ವೇ ಅನ್ನು ರಾಜ್‌ಗೀರ್‌ನಲ್ಲಿ ನಿರ್ಮಿಸಲಾಗಿತ್ತು. ಇದನ್ನು ಪ್ರಸಿದ್ಧ ಜಪಾನಿನ ಬೌದ್ಧ ಸನ್ಯಾಸಿ ಫ್ಯೂಜಿ ಅವರು ರಾಜ್‌ಗೀರ್‌ನ ವಿಶ್ವ ಶಾಂತಿ ಸ್ತೂಪಕ್ಕೆ ಉಡುಗೊರೆಯಾಗಿ ನೀಡಿದ್ದರು ಎಂದು ಕೆಲವು ಮೂಲಗಳು ತಿಳಿಸಿವೆ.

    ಅರುಣಾಚಲದ ತವಾಂಗ್ ಬೌದ್ಧ ಧಾರ್ಮಿಕ ಸ್ಥಳದ ರೋಪ್‌ವೇಯನ್ನು ಸಮುದ್ರ ಮಟ್ಟದಿಂದ 11,000 ಅಡಿ ಎತ್ತರದಲ್ಲಿ 2010ರಲ್ಲಿ ನಿರ್ಮಿಸಲಾಗಿದೆ. ಇದು ವಿಶ್ವದ ಅತಿ ಎತ್ತರದ ರೋಪ್‌ವೇಗಳಲ್ಲಿ ಒಂದಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿರುವ ಗುಲ್ಮಾರ್ಗ್‌ ರೋಪ್‌ವೇಯು ವಿಶ್ವದ 2 ನೇ ಅತಿ ಎತ್ತರದ ಕೇಬಲ್ ಕಾರನ್ನು ಹೊಂದಿದೆ. ಏಷ್ಯಾದ ಅತಿ ಎತ್ತರದ ಮತ್ತು ಉದ್ದವಾದ ಕೇಬಲ್ ಕಾರನ್ನು ಹೊಂದಿದೆ.

    ಕೇಬಲ್ ಲಿಫ್ಟ್ ಅನ್ನು ವಿಶ್ವದಲ್ಲೇ ಮೊದಲ ಬಾರಿಗೆ ಕ್ರೊಯೇಷಿಯಾದ ಪಾಲಿಮ್ಯಾತ್ ಫೌಸ್ಟೊ ವೆರಾಂಜಿಯೊ ನಿರ್ಮಾಣ ಮಾಡಿದ್ದರು. ಮೊದಲ ಕಾರ್ಯಾಚರಣಾ ವೈಮಾನಿಕ ಲಿಪ್ಟ್ ಅನ್ನು 1644 ರಲ್ಲಿ ಪೋಲೆಂಡ್‌ನ ಗ್ಡಾನ್ಸ್ಕ್ ನಲ್ಲಿ ಆಡಮ್ ವೈಬೆ ನಿರ್ಮಿಸಿದ್ದರು. ಇದನ್ನು ಯುರೋಪಿಯನ್ ಇತಿಹಾಸದಲ್ಲಿ ಮೊದಲ ಕೇಬಲ್ ಲಿಫ್ಟ್ ಎಂದು ಕರೆಯಲಾಗಿತ್ತು.

  • ಕೇದಾರನಾಥ ದೇವಾಲಯಕ್ಕೆ ಯೋಗಿ ಆದಿತ್ಯನಾಥ್ ಭೇಟಿ

    ಕೇದಾರನಾಥ ದೇವಾಲಯಕ್ಕೆ ಯೋಗಿ ಆದಿತ್ಯನಾಥ್ ಭೇಟಿ

    ಡೆಹ್ರಾಡೂನ್: ಉತ್ತರಪ್ರದೇಶ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಮೂರು ದಿನಗಳ ಕಾಲ ಉತ್ತರಾಖಂಡ (Uttarakhand) ಪ್ರವಾಸ ಕೈಗೊಂಡಿದ್ದು, ಕೊನೆಯ ದಿನವಾದ ಭಾನುವಾರದಂದು ಕೇದಾರನಾಥ ದೇವಾಲಯಕ್ಕೆ (Kedarnath Temple)  ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

    ಈ ವೇಳೆ ನೆರೆದಿದ್ದ ಜನರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು ಮತ್ತು ಮುಖ್ಯಮಂತ್ರಿಗಳಿಗೆ ಶುಭಾಶಯ ಕೋರಿದರು. ಬದರಿ ಕೇದಾರ ದೇವಸ್ಥಾನ ಸಮಿತಿ ಅಧ್ಯಕ್ಷ ಅಜಯ್ ಅಜಯೇಂದ್ರ ಹಾಗೂ ಇತರ ಗಣ್ಯರು ಕೇದಾರನಾಥ ಹೆಲಿಪ್ಯಾಡ್‌ಗೆ ಆಗಮಿಸಿ ಪುಷ್ಪಗುಚ್ಛ ನೀಡಿ ಯೋಗಿ ಆದಿತ್ಯನಾಥ್ ಅವರನ್ನು ಬರಮಾಡಿಕೊಂಡರು. ಇದನ್ನೂ ಓದಿ: ನನ್ನನ್ನು ಸಾಯಿಸ್ಬೇಡಿ- ಬೇಡಿಕೊಂಡ್ರೂ ಬಿಡದೆ ಯುವತಿ ಅಪಹರಿಸಿದ ಹಮಾಸ್ ಉಗ್ರರು

    ಅರ್ಚಕ ಸಮುದಾಯದವರು ಯೋಗಿ ಆದಿತ್ಯನಾಥ್ ಅವರನ್ನು ಸಾಂಪ್ರದಾಯಿಕ ಮಂತ್ರ ಪಠಣದೊಂದಿಗೆ ಅಭಿನಂದಿಸಿದರು. ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿದ ಯೋಗಿ ಆದಿತ್ಯನಾಥ್ ದೇಶ ಮತ್ತು ರಾಜ್ಯದ ಜನತೆಯ ಒಳಿತಿಗಾಗಿ ಪ್ರಾರ್ಥಿಸಿದರು. ಇದನ್ನೂ ಓದಿ: ಪ್ರತಿನಿತ್ಯ ನೂರು ಸೈಬರ್ ದಾಳಿಗಳ ವಿರುದ್ಧ ಇಸ್ರೋ ಹೋರಾಟ: ಎಸ್.ಸೋಮನಾಥ್

    ಈ ಸಂದರ್ಭ ಉತ್ತರಪ್ರದೇಶ ಮುಖ್ಯ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ, ಪ್ರಧಾನ ಕಾರ್ಯದರ್ಶಿ ಸಂಜಯ್ ಪ್ರಸಾದ್ ಮತ್ತು ಪ್ರವಾಸೋದ್ಯಮ ಪ್ರಧಾನ ಕಾರ್ಯದರ್ಶಿ ಮುಖೇಶ್ ಮೆಶ್ರಾಮ್ ಉಪಸ್ಥಿತರಿದ್ದರು. ಇದನ್ನೂ ಓದಿ: ಕಷ್ಟದ ಸಮಯದಲ್ಲಿ ಇಸ್ರೇಲ್ ಪರ ಒಗ್ಗಟ್ಟಿನಿಂದ ನಿಲ್ಲುತ್ತೇವೆ: ನರೇಂದ್ರ ಮೋದಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೋದಿಗಾಗಿ 30 ಗಂಟೆಯಲ್ಲಿ ಬಂಗಾರದ ಕೇದಾರನಾಥ ದೇವಾಲಯ ನಿರ್ಮಾಣ

    ಮೋದಿಗಾಗಿ 30 ಗಂಟೆಯಲ್ಲಿ ಬಂಗಾರದ ಕೇದಾರನಾಥ ದೇವಾಲಯ ನಿರ್ಮಾಣ

    ಕಾರವಾರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನದಿಂದ ಅಭಿಮಾನಿಯೊಬ್ಬ ಬರೋಬ್ಬರಿ 30 ಗಂಟೆಯಲ್ಲಿ ಬಂಗಾರದ ಕೇದಾರನಾಥ ದೇವಾಲಯವನ್ನು ನಿರ್ಮಿಸಿ ಉಡುಗೊರೆ ನೀಡಲು ತಯಾರಿ ನಡೆಸಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕಡವಾಡದ ನಿವಾಸಿ ಮಿಲಿಂದ ಉದಯಕಾಂತ ಅಣ್ವೇಕರ್ ಕೇದಾರನಾಥ ದೇವಸ್ಥಾನದ ಪ್ರತಿಕೃತಿಯನ್ನು ತಯಾರಿಸಿದ್ದಾರೆ. ಇವರು ಬೆಳ್ಳಿ, ಬಂಗಾರ ಹಾಗೂ ತಾಮ್ರ ಮಿಶ್ರಣ ಮಾಡಿದ 54 ಗ್ರಾಂ ತೂಕದ ಮೂರು ಇಂಚು ಅಗಲ, ಮೂರು ಇಂಚು ಉದ್ದದ ಕೇದಾರನಾಥ ಮಂದಿರ ನಿರ್ಮಾಣ ಮಾಡಿದ್ದು, ಮೋದಿ ಅವರಿಗೆ ಉಡುಗೊರೆ ನೀಡಲು ಮುಂದಾಗಿದ್ದಾರೆ.

    ಅಣ್ವೇಕರ್ 30 ಗಂಟೆಯಲ್ಲಿ ಇದರ ನಿರ್ಮಾಣ ಮಾಡಿದ್ದು, ದೇವಸ್ಥಾನದ ಗರ್ಭ ಗುಡಿಯಲ್ಲಿ 4mm ನ ಅತಿಚಿಕ್ಕ ಬಂಗಾರದ ಶಿವಲಿಂಗ ಸಹ ನಿರ್ಮಿಸಲಾಗಿದೆ. ಮೂಲತಃ ಅಕ್ಕಸಾಲಿಗರಾಗಿರುವ ಇವರು 2013ರಲ್ಲಿ 19.975 ಇಂಚಿನ ಚೈನ್ ತಯಾರಿಸಿ ಲಿಮ್ಕಾ ದಾಖಲೆ ನಿರ್ಮಿಸಿದ್ದರು. ಈ ಬಾರಿ ಮೋದಿಯವರ ಇಷ್ಟ ದೈವ ಕೇದಾರನಾಥ ಮಂದಿರ ನಿರ್ಮಿಸಿ ಉಡುಗೊರೆ ಯಾಗಿ ನೀಡಲು ಬಯಸಿದ್ದಾರೆ. ಹೀಗಾಗಿ ಇದನ್ನು ನಿರ್ಮಿಸಿರುವುದಾಗಿ ಪಬ್ಲಿಕ್ ಟಿ.ವಿ ಗೆ ಮಾಹಿತಿ ನೀಡಿದ್ದಾರೆ.