Tag: ಕೇಕ್ ಕಟ್

  • ತಲ್ವಾರ್‌ನಿಂದ ಕೇಕ್ ಕಟ್ ಮಾಡಿ ಯುವಕನ ಪುಂಡಾಟ

    ತಲ್ವಾರ್‌ನಿಂದ ಕೇಕ್ ಕಟ್ ಮಾಡಿ ಯುವಕನ ಪುಂಡಾಟ

    ವಿಜಯಪುರ: ಭೀಮಾ ತೀರದಲ್ಲಿ ಯುವಕ ತಲ್ವಾರ್‌ನಿಂದ ಕೇಕ್ ಕಟ್ ಮಾಡಿ ಪುಂಡಾಟಿಕೆ ಮೆರೆದಿದ್ದಾನೆ.

    ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಕಾತ್ರಾಳ ಗ್ರಾಮದ ಯುವಕ ಮಹೇಶ್ ಸಾರವಾಡ ತಲ್ವಾರ್‌ನಿಂದ ಕೇಕ್ ಕಟ್ ಮಾಡಿದ್ದಾನೆ. ಕಳೆದ ಎರಡು ದಿನದ ಹಿಂದೆ ಮಹೇಶ್ ಸಾರವಾಡ ಹುಟ್ಟುಹಬ್ಬ ಇತ್ತು. ಹುಟ್ಟುಹಬ್ಬಕ್ಕೆ ಚಾಕುವಿನಿಂದ ಕೇಕ್ ಕಟ್ ಮಾಡುವ ಬದಲು ತಲ್ವಾರ್‍ನಿಂದ ಕಟ್ ಮಾಡುವ ಮೂಲಕ ಆಚರಿಸಿಕೊಂಡಿದ್ದಾನೆ.

    ಮಹೇಶ್ ತಲ್ವಾರ್‌ನಿಂದ ಕೇಕ್ ಕಟ್ ಮಾಡಿದ್ದಲ್ಲದೆ ಆ ಫೋಟೋಗಳನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹರಿಬಿಟ್ಟಿದ್ದಾನೆ. ಈ ಮೂಲಕ ತನ್ನ ಪ್ರಭಾವ ತೋರಿಸಿದರೂ ಕಣ್ಣಿದ್ದು ಪೊಲಿಸ್ ಇಲಾಖೆ ಕುರುಡಾಗಿದೆ.

    ಸದ್ಯ ಮಹೇಶ್ ತಲ್ವಾರ್‌ನಿಂದ ಕೇಕ್ ಕಟ್ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹೇಶ್‍ನ ಈ ವರ್ತನೆಯಿಂದ ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ. ಹೀಗಾಗಿ ಈ ಕೂಡಲೇ ಮಹೇಶ್ ಸಾರವಾಡನನ್ನು ಬಂಧಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv