Tag: ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

  • ಬೆಂಗಳೂರು ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಕೋವಿಡ್ ಮಾರ್ಗಸೂಚಿ ಪ್ರಕಟ

    ಬೆಂಗಳೂರು ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಕೋವಿಡ್ ಮಾರ್ಗಸೂಚಿ ಪ್ರಕಟ

    ಚಿಕ್ಕಬಳ್ಳಾಪುರ: ನೆರೆಯ ಚೀನಾ ಸೇರಿ ವಿದೇಶಗಳಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಪ್ರಯಾಣಿಕರಿಗೆ ಕೋವಿಡ್ ಮಾರ್ಗಸೂಚಿ ಪ್ರಕಟಿಸಲಾಗಿದೆ.

    ದೇಶಾದ್ಯಂತ ಕೋವಿಡ್‌ (Covid) ಭೀತಿ ಆವರಿಸಿದೆ. ಪೊಲೀಸ್ (Police) ಇಲಾಖೆಯಲ್ಲೂ ಆತಂಕ ಶುರುವಾಗಿದೆ. ಈ ನಡುವೆ ಹೊಸವರ್ಷ ಕೂಡ ಹತ್ತಿರವಾಗ್ತಿದೆ. ಹೀಗಾಗಿ ಪೊಲೀಸ್ ಇಲಾಖೆ ಹೊಸ ರೂಲ್ಸ್ ಬೇಕಾ ಬೇಡ್ವಾ ಅನ್ನೋ ಗೊಂದಲದಲ್ಲಿದೆ. ಈ ವೇಳೆ ಬೆಂಗಳೂರು ಏರ್‌ಪೋರ್ಟ್‌ ಬರುವ ಪ್ರಯಾಣಿಕರಿಗೆ ಕೆಲವು ಮುನ್ನೆಚ್ಚರಿಕೆ ಮಾರ್ಗಸೂಚಿ ಕ್ರಮಗಳ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಚೀನಾದಲ್ಲಿ ಒಂದೇ ದಿನ 3.7 ಕೋಟಿ ಮಂದಿಗೆ ಸೋಂಕು

    ಮಾರ್ಗಸೂಚಿಯಲ್ಲಿ ಏನಿದೆ?: ವಿಮಾನ ನಿಲ್ದಾಣಕ್ಕೆ ಬರುವ ಎಲ್ಲಾ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿದೆ. ಶೇ. 2ರಷ್ಟು ಪ್ರಯಾಣಿಕರಿಗೆ ರ‍್ಯಾಂಡಮ್ ಕೋವಿಡ್‌ ಟೆಸ್ಟ್ (ಗಂಟಲು ದ್ರವ ನೀಡಿ ಏರ್ಪೋರ್ಟ್‌ನಿಂದ ಹೊರಗೆ ಬರತಕ್ಕದ್ದು) ಮಾಡಲಾಗಿದೆ. ರೋಗ ಲಕ್ಷಣಗಳು ಕಂಡುಬರುವ ಪ್ರಯಾಣಿಕರು ತತ್‌ಕ್ಷಣ ಐಸೋಲೇಷನ್ ಆಗಬೇಕು. 12 ವರ್ಷದ ಒಳಗಿನ ಮಕ್ಕಳಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಅಲ್ಲ. ರೋಗ ಗುಣ ಲಕ್ಷಣಗಳು ಇದ್ದರೆ ಮಾತ್ರ ಟೆಸ್ಟಿಂಗ್ ಮಾಡಿಸಿಕೊಳ್ಳಬೇಕು. ರೋಗ ಲಕ್ಷಣಗಳಿಲ್ಲದ ಪ್ರಯಾಣಿಕರು ಸ್ವಯಂ ನಿಗಾವಹಿಸಲು ಸೂಚಿಸಲಾಗಿದೆ. ಇದನ್ನೂ ಓದಿ: ಕೊರೊನಾ ಭೀತಿ – ಪೊಲೀಸ್ ಇಲಾಖೆಗೆ ಹೆಚ್ಚಿದ ಟೆನ್ಶನ್

    Live Tv
    [brid partner=56869869 player=32851 video=960834 autoplay=true]

  • ಅಭ್ಯರ್ಥಿ ರವಿ ಮದ್ದು ಗುಂಡೇಟು ತಿಂದವ್ರೆ: ಡಿಕೆಶಿ

    ಅಭ್ಯರ್ಥಿ ರವಿ ಮದ್ದು ಗುಂಡೇಟು ತಿಂದವ್ರೆ: ಡಿಕೆಶಿ

    ಚಿಕ್ಕಬಳ್ಳಾಪುರ: ಅಭ್ಯರ್ಥಿ ರವಿ ಮದ್ದು ಗುಂಡೇಟು ತಿಂದವ್ರೆ, ಬತ್ತಳಿಕೆ ಅವರೇ ಮಾಡಿಕೊಂಡವ್ರೆ ನಾನು ಕೇವಲ ಮತದಾರ ಅಷ್ಟೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್ ಚುನಾವಣೆ ಫಲಿತಾಂಶ ನಮಗೆ ಸಮಾಧಾನ ತಂದಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ರವಿ ಕಣಕ್ಕಿಳಿಸಿದ್ದೇವು. ರವಿಗೆ ಎಲ್ಲಾ ಪಕ್ಷದ ಅಭ್ಯರ್ಥಿಗಳು ಮತ ಹಾಕಿದ್ದಾರೆ. ಕೇವಲ ಕಾಂಗ್ರೆಸ್ ಪಕ್ಷದವರು ಮಾತ್ರ ವೋಟು ಹಾಕಿಲ್ಲ. ಪಕ್ಷೇತರ ಬಿಜೆಪಿ ಜನತಾದಳದವರು ವೋಟು ಹಾಕಿ ರವಿ ಗೆಲುವು ಸಾಧಿಸಿದ್ದಾರೆ. ಇದರಿಂದ ಭಾರೀ ಅಂತರದಿಂದ ರವಿ ಗೆಲುವು ಸಾಧಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಕಳೆದ ಬಾರಿ ಸೋತ ಕಡೆ ಈ ಬಾರಿ ನಾವು ಗೆದ್ದಿದ್ದೇವೆ: ಡಿಕೆಶಿ

    ರಾಜ್ಯದಲ್ಲಿ 11 ಸ್ಥಾನ ಗೆದ್ದಿದ್ದೇವೆ. ಡಬಲ್ ಡಿಜಿಟ್ ಕ್ರಾಸ್ ಮಾಡುವುದಾಗಿ ನಾನು ಹೇಳಿದ್ದೆ. ಇನ್ನೂ ಮೂರು ಸೀಟು ಗೆಲ್ಲುವ ಎಲ್ಲಾ ಸಾಧ್ಯತೆ ಇತ್ತು. ನಮ್ಮ ಲೆಕ್ಕಾಚಾರ ತಪ್ಪಿರುವುದರಿಂದ ಮೂರು ಸೀಟು ಕಳೆದುಕೊಂಡಿದ್ದೇವೆ. ಚಿಕ್ಕ ಅಂತರದಿಂದ ಗುಲ್ಬರ್ಗ ಚಿಕ್ಕ ಮಗಳೂರು ಕೊಡಗು ಕಳೆದುಕೊಂಡಿದ್ದೇವೆ. 12-13 ಅಂತ ನೀರೀಕ್ಷೆ ಇತ್ತು. ಆದರೂ 11 ಸಮಾಧಾನಕಾರ ತಂದಿದೆ. ಹಳೇ ಮೈಸೂರು ಭಾಗದ ಫಲಿತಾಂಶದ ಬಗ್ಗೆ ವಿಶ್ಲೇಷಣೆ ಬೇಡ. ಮಂಡ್ಯದಲ್ಲಿ ಸಹ ಎಲ್ಲಾ ಪಕ್ಷದವರು ನಮಗೆ ಸಹಾಯ ಮಾಡಿದ್ದಾರೆ. ಚುನಾವಣೆಯಲ್ಲಿ ಮತ ಹಾಕಿದವರು ನಾಯಕರು, ಜನ ಪ್ರತಿನಿಧಿಗಳು ಕಾಂಗ್ರೆಸ್ ಪಕ್ಷ ಬರಲಿ ಅಂತ ಇಷ್ಟು ಸೀಟು ಕೊಟ್ಟಿದ್ದಾರೆ. ಇದು ರಾಜ್ಯಕ್ಕೆ ಯಾವ ದಿಕ್ಕಿನಲ್ಲಿ ಜನ ಸಾಗುತ್ತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಪರೋಕ್ಷವಾಗಿ ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದರು. ಇದನ್ನೂ ಓದಿ:  ನಾನು ಹೇಳಿದ್ದು ನಿಜವಾಗಿದೆ, ಬೊಮ್ಮಾಯಿ ನಾಯಕತ್ವಕ್ಕೆ ಬೆಂಬಲ: ಬಿಎಸ್‌ವೈ

    ಇದೇ ವೇಳೆ ಕುಮಾರಸ್ವಾಮಿ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,ಕುಮಾರಸ್ವಾಮಿ ನಂಬಿಕೆ ಅವರ ನಂಬಿಕೆ ಅವರದ್ದು, ನಮ್ಮ ನಂಬಿಕೆ ನಮ್ಮದು. ಕುಮಾರಸ್ವಾಮಿ ಅವರಿಗೆ ಓಳ್ಳೆಯದಾಗಲಿ ಎಂದು ಹೇಳಿದ್ದಾರೆ.

     

  • ಕೆಐಎಬಿ ಏರ್‌ಪೋರ್ಟ್ ವಿಮಾನಗಳ ಹಾರಾಟದಲ್ಲಿ ಭಾರೀ ವ್ಯತ್ಯಯ..!

    ಕೆಐಎಬಿ ಏರ್‌ಪೋರ್ಟ್ ವಿಮಾನಗಳ ಹಾರಾಟದಲ್ಲಿ ಭಾರೀ ವ್ಯತ್ಯಯ..!

    – ಮಾಧ್ಯಮ ಪ್ರಕಟಣೆ ಹೊರಡಿಸಿದ ಕೆಐಎಬಿ

    ಬೆಂಗಳೂರು/ಚಿಕ್ಕಬಳ್ಳಾಪುರ: ಏರೋ ಇಂಡಿಯಾ ಏರ್ ಶೋ 2021 ಹಿನ್ನೆಲೆಯಲ್ಲಿ ಬೆಂಗಳೂರು ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟದಲ್ಲಿ ಭಾರೀ ವ್ಯತ್ಯಯ ಆಗಲಿದೆ ಎಂದು ಕೆಐಎಬಿ ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿದೆ.

    ಯಲಹಂಕದ ವಾಯುನೆಲೆಯಲ್ಲಿ ಫೆಬ್ರವರಿ 3 ರಿಂದ ಫೆಬ್ರವರಿ 5ರವರೆಗೆ ಏರ್ ಶೋ ನಡೆಯಲಿದೆ. ಹೀಗಾಗಿ ಏರ್ ಶೋ ಬೆಂಬಲಿಸುವ ಹಾಗೂ ಲೋಹದ ಹಕ್ಕಿಗಳ ಪೂರ್ವಾಭ್ಯಾಸ ತಾಲೀಮಿಗೆ ಸಹಕಾರ ನೀಡುವ ಉದ್ದೇಶದಿಂದ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟದಲ್ಲಿ ಬದಲಾವಣೆ ಆಗಲಿದೆ. ಜನವರಿ 30 ಮತ್ತು 31 ರಂದು ಮಧ್ಯಾಹ್ನ 1.30 ರಿಂದ ಸಂಜೆ 4 ರವರೆಗೆ ರನ್ ವೇ ಬಂದ್ ಆಗಲಿದ್ದು ಈ ಸಮಯದಲ್ಲಿ ವಿಮಾನಗಳ ಹಾರಾಟ ಇರುವುದಿಲ್ಲ.

    ಫೆಬ್ರವರಿ 1ರ ಬೆಳಗ್ಗೆ 10 ರಿಂದ 12 ಹಾಗೂ ಮಧ್ಯಾಹ್ನ 2 ರಿಂದ 5 ರವರೆಗೂ ವಿಮಾನ ಹಾರಾಟ ಇರುವುದಿಲ್ಲ. ಫೆಬ್ರವರಿ 2 ಮತ್ತು 3 ರಂದು ಬೆಳಗ್ಗೆ 9 ರಿಂದ 12 ಹಾಗೂ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ವಿಮಾನಗಳ ಹಾರಾಟ ಸಂಪೂರ್ಣ ಬಂದ್ ಆಗಲಿದೆ. ಫೆಬ್ರವರಿ 4 ಮತ್ತು 5 ರಂದು ಸಹ ಬೆಳಗ್ಗೆ 10 ರಿಂದ 12 ಹಾಗೂ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ಲೋಹದ ಹಕ್ಕಿಗಳ ಹಾರಾಟ ಇರುವುದಿಲ್ಲ. ಏರೋ ಇಂಡಿಯಾ 2021 ಪೂರ್ವಭ್ಯಾಸ ಹಾಗೂ ಪ್ರದರ್ಶನಕ್ಕೆ ಬೆಂಬಲ ನೀಡುವ ಸಲುವಾಗಿ ಕೆಐಎಬಿ ಈ ನಿರ್ಧಾರ ಕೈಗೊಂಡಿದೆ.

  • ಕ್ವಾರಂಟೈನ್ ಬೇಡ ಮನೆಗೆ ಕಳುಹಿಸಿ- ಜಕಾರ್ತದಿಂದ ಬಂದವರ ಕಿರಿಕ್

    ಕ್ವಾರಂಟೈನ್ ಬೇಡ ಮನೆಗೆ ಕಳುಹಿಸಿ- ಜಕಾರ್ತದಿಂದ ಬಂದವರ ಕಿರಿಕ್

    ಬೆಂಗಳೂರು: ತಡರಾತ್ರಿ ಇಂಡೋನೇಷ್ಯಾದ ಜಕಾರ್ತದಿಂದ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 50 ಮಂದಿ ತಮಗೆ ಹೋಟೆಲ್ ಕ್ವಾರಂಟೈನ್ ಬೇಡ ಅಂತ ಕಿರಿಕ್ ನಡೆಸಿರುವ ಘಟನೆ ನಡೆದಿದೆ.

    ತಡರಾತ್ರಿ 1.40ಕ್ಕೆ ಎಐ-1311 ವಿಮಾನದಲ್ಲಿ 214 ಮಂದಿ ಆಗಮಿಸಿದ್ದಾರೆ. ಇವರಲ್ಲಿ ಬಹುತೇಕರು ಆರೋಗ್ಯ ತಪಾಸಣೆ ನಂತರ ಹೋಟೆಲ್ ಕ್ವಾರಂಟೈನ್‍ಗೆ ಒಳಗಾಗಿದ್ದರು. ಆದರೆ ಇವರಲ್ಲಿ 50 ಮಂದಿ ಮಾತ್ರ ನಮ್ಮ ಬಳಿ ದುಡ್ಡಿಲ್ಲ ಹೋಟೆಲ್ ಕ್ವಾರಂಟೈನ್ ಮಾಡಬೇಡಿ. ನಮ್ಮನ್ನು ಮನೆಗೆ ಕಳುಹಿಸಿ ಅಂತ ಪಟ್ಟುಹಿಡಿದಿದ್ದಾರೆ.

    ಕೊನೆಗೆ ಇಡೀ ರಾತ್ರಿ ವಿಮಾನ ನಿಲ್ದಾಣದಲ್ಲೇ ಹಠ ಹಿಡಿದು ಕುಳಿತಿದ್ದ 50 ಮಂದಿಯನ್ನು ಅಧಿಕಾರಿಗಳು ಮನವೊಲಿಸಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬೆಂಗಳೂರಿನ ಹಜ್ ಭವನದಲ್ಲಿ ಕ್ವಾರಂಟೈನ್ ಮಾಡಲು ಶಿಫ್ಟ್ ಮಾಡಿದ್ದಾರೆ.