Tag: ಕೇಂದ್ರ ಹವಾಮಾನ ಇಲಾಖೆ

  • ಇಂದಿನಿಂದ 5 ದಿನ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ – ಹವಾಮಾನ ಇಲಾಖೆ

    ಇಂದಿನಿಂದ 5 ದಿನ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ – ಹವಾಮಾನ ಇಲಾಖೆ

    ನವದೆಹಲಿ: ರಾಜ್ಯದಲ್ಲಿ ಮುಂದಿನ ಐದು ದಿನಗಳವರೆಗೆ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.

    ಕರ್ನಾಟಕ ಸೇರಿದಂತೆ ಕೇರಳ, ಪುದುಚೇರಿ, ಗೋವಾ ರಾಜ್ಯಗಳಲ್ಲಿ ಮಳೆಯ ಆರ್ಭಟ ಜೋರಾಗಲಿದ್ದು, ಜೂನ್ 13ರ ವರೆಗೂ ಹಲವು ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: ವಸ್ತ್ರಾಪಹರಣ ದೃಶ್ಯಕ್ಕೆ ದ್ರೌಪದಿ ಬದಲು ಸೀತಾದೇವಿ ಹೆಸರು ಹೇಳಿದ ರಣದೀಪ್ ಸುರ್ಜೆವಾಲಾ: ವೀಡಿಯೋ ವೈರಲ್

    ಜೂನ್ 9 ರಿಂದ 13ರ ವರೆಗೆ ಈಶಾನ್ಯ ರಾಜ್ಯಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿದ್ದು, ಜೂನ್ 10 ರಿಂದ 13ರ ವರೆಗೆ ಗೋವಾದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

  • ಸೂರ್ಯನ ಕೆಂಗಣ್ಣು – ದೆಹಲಿಯಲ್ಲಿ ದಾಖಲೆ ಪ್ರಮಾಣದ ತಾಪಮಾನ ದಾಖಲು

    ಸೂರ್ಯನ ಕೆಂಗಣ್ಣು – ದೆಹಲಿಯಲ್ಲಿ ದಾಖಲೆ ಪ್ರಮಾಣದ ತಾಪಮಾನ ದಾಖಲು

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೂರ್ಯನ ಕೆಂಗಣ್ಣಿಗೆ ಗುರಿಯಾಗಿದ್ದು, ಇಂದಿನಿಂದ ಮೇ 2 ವರೆಗೂ ಬಾರಿ ಬಿಸಿಲು ಕಂಡು ಬರಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಹೇಳಿದೆ.

    Weather

    ಇಂದು 43 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದ್ದು, ಇದು 46-47 ಡಿಗ್ರಿ ಸೆಲ್ಸಿಯಸ್ ತಲುಪಬಹುದು ಎಂದು ಭವಿಷ್ಯ ನುಡಿಸಿದೆ. ವಾತಾವರಣದಲ್ಲಿ ಯಾವುದೇ ಅಡೆತಡೆಗಳಿಲ್ಲ ಕಾರಣ ಗಂಟೆಗೆ 25-35 ಕಿಲೋಮೀಟರ್ ವೇಗದಲ್ಲಿ ಬಿಸಿ ಗಾಳಿ ಬೀಸುತ್ತಿದ್ದು, ಇದು ಪರಿಸರದಲ್ಲಿ ಹೆಚ್ಚಿನ ತಾಪಮಾನ ಸೃಷ್ಟಿ ಮಾಡಲಿದೆ. ದೆಹಲಿಯ ಜೊತೆಗೆ ಪಂಜಾಬ್, ಹರಿಯಾಣ, ಚಂಡಿಗಢದಲ್ಲೂ ಇಂತಹದೇ ಪರಿಸ್ಥಿತಿ ಕಂಡು ಬರಲಿದೆ ಎಂದು ಐಎಂಡಿ ಹೇಳಿದೆ. ಇದನ್ನೂ ಓದಿ: ಪೊಲೀಸ್ ಠಾಣೆ ಮುಂಭಾಗದಲ್ಲೇ ಏರ್‌ ಫೈರ್ – ವೆಬ್ ಡಿಸೈನರ್ ಕಿಡ್ನಾಪ್

    weather

    ಈವರೆಗೂ 44.3 ಡಿಗ್ರಿ ಸೆ. ಗರಿಷ್ಠ ತಾಪಮಾನ ದಾಖಲಾಗಿದ್ದು, ಇದು ಏಪ್ರಿಲ್‍ನ ಸಾಮಾನ್ಯ ವರ್ಷಕ್ಕಿಂತ 3ಸೆ. ಹೆಚ್ಚಾಗಿದೆ. ನಿನ್ನೆ ಪೂರ್ವ ದೆಹಲಿಯ ಕ್ರೀಡಾ ಸಂಕೀರ್ಣದಲ್ಲಿರುವ ಹವಾಮಾನ ಕೇಂದ್ರವು ಬುಧವಾರ ನಗರದಲ್ಲಿ ಗರಿಷ್ಠ ತಾಪಮಾನ 44.2 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ. ಮುಂಗೇಶ್‍ಪುರದಲ್ಲಿ 44.1 ಡಿಗ್ರಿ, ನಜಾಫ್‍ಗಢದಲ್ಲಿ 43.7 ಡಿಗ್ರಿ ಮತ್ತು ರಿಡ್ಜ್‌ನಲ್ಲಿ 43.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬುಧವಾರ ಗುಗಾರ್ಂವ್‍ನಲ್ಲಿ ಗರಿಷ್ಠ ತಾಪಮಾನ 44 ಡಿಗ್ರಿ ಸೆಲ್ಸಿಯಸ್‍ನಷ್ಟಿತ್ತು ಎಂದು ಐಎಂಡಿ ತಿಳಿಸಿದೆ. ಇದನ್ನೂ ಓದಿ: ಗುತ್ತಿಗೆದಾರನ ಸೂಪರ್‌ವೈಸರ್ ನೇಣುಬಿಗಿದು ಆತ್ಮಹತ್ಯೆಗೆ ಶರಣು

    weather

    ಮುಂದಿನ ಎರಡು ದಿನಗಳಲ್ಲಿ ಗರಿಷ್ಠ ತಾಪಮಾನವು ವಾಯುವ್ಯ ಭಾರತದ ಮೇಲೆ ಎರಡು ಡಿಗ್ರಿ ಸೆಲ್ಸಿಯಸ್‍ಗಳಷ್ಟು ಏರಿಕೆಯಾಗಲಿದೆ. ಬಳಿಕ ಐಎಂಡಿ ಮುನ್ಸೂಚನೆಯಂತೆ ಎರಡು ಡಿಗ್ರಿಗಳಷ್ಟು ಇಳಿಕೆಯಾಗಲಿದೆ. ದೆಹಲಿಯಲ್ಲಿ ಶುಕ್ರವಾರ ಗರಿಷ್ಠ ತಾಪಮಾನವು ಸುಮಾರು 44 ಡಿಗ್ರಿ ಸೆಲ್ಸಿಯಸ್‍ಗೆ ಏರಬಹುದು ಮತ್ತು ಮೇ 4ರ ವೇಳೆಗೆ 41 ಡಿಗ್ರಿಗಳಿಗೆ ಇಳಿಯಬಹುದು ಎಂದು ಮುನ್ಸೂಚನೆ ಸೂಚಿಸುತ್ತದೆ.