Tag: ಕೇಂದ್ರ ಸಚಿವ ಸಂಪುಟ

  • ವಾರಂತ್ಯಕ್ಕೆ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನರ್ ರಚನೆ?

    ವಾರಂತ್ಯಕ್ಕೆ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನರ್ ರಚನೆ?

    – ಬಿಜೆಪಿಗೆ ಹೊಸ ಅಧ್ಯಕ್ಷರ ನೇಮಕ ಸಾಧ್ಯತೆ

    ನವದೆಹಲಿ: ಈ ವಾರಂತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನರ್‌ ರಚನೆ (Modi Cabinet Expansion) ಸಾಧ್ಯತೆ ಇದೆ.

    ಏ.19 ಕ್ಕೆ ಪ್ರಧಾನಿ ಮೋದಿ ಅವರು ಜಮ್ಮು-ಕಾಶ್ಮೀರ ಪ್ರವಾಸ ರದ್ದು ಮಾಡಿದ್ದಾರೆ. ನಿನ್ನೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಭೇಟಿಯಾಗಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ತಾಲಿಬಾನ್‌ ಜೊತೆ ಪಾಕಿಸ್ತಾನ ಡಬಲ್‌ ಗೇಮ್‌ ಆಡುತ್ತಿದೆ: ಜೈಶಂಕರ್‌

    ಮೋದಿ ಭೇಟಿ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಭೇಟಿಯಾಗಿ ಚರ್ಚೆ ನಡೆಸಿದರು. ರಾಷ್ಟ್ರಪತಿಗಳನ್ನು ಕೇಂದ್ರ ಸಚಿವರು ಭೇಟಿಯಾಗಿದ್ದಾರೆ.

    ಬಿಹಾರ ಚುನಾವಣೆ ಹೊತ್ತಲ್ಲೇ ಸಂಪುಟದಲ್ಲಿ ಬದಲಾವಣೆ ಸುದ್ದಿ ಕೇಳಿಬಂದಿದೆ. ತಮಿಳುನಾಡು, ಪಶ್ಚಿಮ ಬಂಗಾಳ ಚುನಾವಣೆ ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ಪುನರ್ ರಚನೆ ಸಾಧ್ಯತೆ ಇದೆ. ಇದನ್ನೂ ಓದಿ: ತಾಲಿಬಾನ್‌ ಜೊತೆ ಪಾಕಿಸ್ತಾನ ಡಬಲ್‌ ಗೇಮ್‌ ಆಡುತ್ತಿದೆ: ಜೈಶಂಕರ್‌

  • PM ವಿಶ್ವಕರ್ಮ ಯೋಜನೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ- 5% ಬಡ್ಡಿಯಲ್ಲಿ ಸಾಲ

    PM ವಿಶ್ವಕರ್ಮ ಯೋಜನೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ- 5% ಬಡ್ಡಿಯಲ್ಲಿ ಸಾಲ

    ನವದೆಹಲಿ: ಸಾಂಪ್ರದಾಯಿಕ ಕೌಶಲ್ಯಗಳಲ್ಲಿ ತೊಡಗಿರುವ ಜನರಿಗೆ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸುವ ‘ಪಿಎಂ ವಿಶ್ವಕರ್ಮ’ ಯೋಜನೆಗೆ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ ಎಂದು ಕೇಂದ್ರ ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಹೇಳಿದ್ದಾರೆ.

    ಸಚಿವ ಸಂಪುಟದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modi) ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ವಿಶ್ವಕರ್ಮ ಯೋಜನೆಯನ್ನು(Vishwakarma Yojana) ಘೋಷಿಸಿದ ಒಂದು ದಿನದ ನಂತರ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿದೆ ಎಂದು ತಿಳಿಸಿದರು.

    ಪ್ರಧಾನಿ ವಿಶ್ವಕರ್ಮ ಯೋಜನೆಯಡಿ ಕುಶಲಕರ್ಮಿಗಳಿಗೆ 5% ಬಡ್ಡಿಯಲ್ಲಿ ರೂ. 1 ಲಕ್ಷದವರೆಗೆ (ಮೊದಲ ಕಂತಿನಲ್ಲಿ) ಸಾಲವನ್ನು ನೀಡಲಾಗುತ್ತದೆ. ಎರಡನೇ ಕಂತಿನಲ್ಲಿ ರೂ 2 ಲಕ್ಷದವರೆಗೆ ಸಾಲದ ಬೆಂಬಲವನ್ನು ನೀಡಲಾಗುತ್ತದೆ, ಇದೂ ಕೂಡಾ 5% ರಷ್ಟು ರಿಯಾಯಿತಿ ಬಡ್ಡಿದರದಲ್ಲಿ ಇರಲಿದೆ ಎಂದು ಸಚಿವರು ಹೇಳಿದರು. ಇದನ್ನೂ ಓದಿ: ಚಂದ್ರನ ಅಂತಿಮ ಕಕ್ಷೆ ಪ್ರವೇಶಿಸಿದ ಚಂದ್ರಯಾನ ನೌಕೆ

    ಈ ಯೋಜನೆಯು ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳಿಗೆ ಆರ್ಥಿಕ ಬೆಂಬಲವನ್ನು ನೀಡುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದಲ್ಲದೆ ಸುಧಾರಿತ ಕೌಶಲ್ಯ ತರಬೇತಿಯನ್ನು ನೀಡುತ್ತದೆ. ಕೌಶಲ್ಯ ತರಬೇತಿಗೆ ರೂ.500 ಸ್ಟೈಫಂಡ್ ಮತ್ತು ಆಧುನಿಕ ಉಪಕರಣಗಳನ್ನು ಖರೀದಿಸಲು ರೂ.1,500 ನೀಡಲಾಗುವುದು.

    ಉದಾರ ನಿಯಮಗಳು, ಕೌಶಲ್ಯ ಉನ್ನತೀಕರಣ, ಟೂಲ್ಕಿಟ್ ಪ್ರೋತ್ಸಾಹ, ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹ ಮತ್ತು ಮಾರುಕಟ್ಟೆ ಬೆಂಬಲದ ಮೇಲೆ ಸಾಲಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಸಾಂಪ್ರದಾಯಿಕ ಕಾರ್ಮಿಕರಿಗೆ ಸಮಗ್ರ ಸಾಂಸ್ಥಿಕ ಬೆಂಬಲವನ್ನು ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದು ಹೇಳಿದರು.

    ವಿಶ್ವಕರ್ಮ ಯೋಜನೆಯಿಂದ 30 ಲಕ್ಷ ಕುಟುಂಬಗಳು ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ಯೋಜನೆಗೆ ನೋಂದಣಿಯನ್ನು ಗ್ರಾಮಗಳ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಮಾಡಬಹುದು, ಯೋಜನೆಗೆ ಸಂಪೂರ್ಣ ಹಣವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ, ಆದರೂ ರಾಜ್ಯ ಸರ್ಕಾರಗಳ ಬೆಂಬಲದ ಅಗತ್ಯವಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಚಿವ ಸ್ಥಾನ ಯಾರಿಗೆ ಕೊಟ್ರೂ ನನಗೆ ಕೊಟ್ಟಷ್ಟೇ ಸಂತೋಷ: ಶಿವಕುಮಾರ್ ಉದಾಸಿ

    ಸಚಿವ ಸ್ಥಾನ ಯಾರಿಗೆ ಕೊಟ್ರೂ ನನಗೆ ಕೊಟ್ಟಷ್ಟೇ ಸಂತೋಷ: ಶಿವಕುಮಾರ್ ಉದಾಸಿ

    ಹಾವೇರಿ: ಕೇಂದ್ರ ಸಚಿವ ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನ ನೀಡುವುದು ಅದು ಪ್ರಧಾನ ಮಂತ್ರಿಗಳ ಪವರ್. ಸಚಿವ ಸ್ಥಾನ ಯಾರಿಗೆ ಕೊಟ್ಟರೂ ನನಗೆ ಕೊಟ್ಟಷ್ಟೇ ಸಂತೋಷ ಆಗುತ್ತದೆ ಎಂದು ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಯಾರಿಗೆ ಕೊಟ್ಟರೂ ನನಗೆ ಕೊಟ್ಟಷ್ಟೇ ಸಂತೋಷ ಆಗುತ್ತದೆ ಎಂದು ಹೇಳುವ ಮೂಲಕ ಶಿವಕುಮಾರ ಉದಾಸಿ ಕೈ ಮುಗಿದರು. ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ಬಿ.ವೈ ವಿಜಯೇಂದ್ರ ಹೆಸರು ಕೇಳಿಬಂದಿರೋ ವಿಚಾರಕ್ಕೆ ಸಂಬಂಧಿಸಿದಂತೆ ನನಗೆ ಮಾಹಿತಿ ಇಲ್ಲ ಎಂದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲು ಸಹಮತವಿದೆ: ಆರ್.ಅಶೋಕ್

    ನಮ್ಮ ಅಪ್ಪ ತೀರಿಕೊಂಡು ಇಪ್ಪತ್ತು ದಿವಸ ಆಗೈತಿ. ಹೀಗಾಗಿ ನಾನು ಉಪಚುನಾವಣೆ ಬಗ್ಗೆ ಆಲೋಚನೆ ಮಾಡಿಲ್ಲ. ನನ್ನ ಪಾಡಿಗೆ ನಾನು ಎಂಪಿ ಕೆಲಸ ಮಾಡ್ತಿದ್ದೇನೆ. ಸದ್ಯ ನಾನು ಎಂಪಿ ಕೆಲಸ ಮಾಡುತ್ತಿದ್ದೇನೆ ಎಂದು ಶಿವಕುಮಾರ್ ಉದಾಸಿ ಹೇಳಿದ್ದಾರೆ.

  • 2 ರೂ.ಗೆ ಗೋಧಿ, 3 ರೂ.ಗೆ ಅಕ್ಕಿ, 80 ಕೋಟಿ ಜನರಿಗೆ ಪಡಿತರ – ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವ ನಿರ್ಣಯ

    2 ರೂ.ಗೆ ಗೋಧಿ, 3 ರೂ.ಗೆ ಅಕ್ಕಿ, 80 ಕೋಟಿ ಜನರಿಗೆ ಪಡಿತರ – ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವ ನಿರ್ಣಯ

    ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಭಾರತ ಬಂದ್ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಿರ್ಧಾರ ಸರಿಯಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವೇಡ್ಕರ್ ಪ್ರತಿಕ್ರಿಸಿದ್ದಾರೆ.

    ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ದೇಶದ ಹಿತ ದೃಷ್ಟಿಯಿಂದ ಈ ನಿರ್ಧಾರ ಸರಿಯಾಗಿದೆ. ಅಲ್ಲದೇ ಸಾಮಾಜಿಕ ಸಂಪರ್ಕದಿಂದ ಅಂತರ ಕಾಯ್ದುಕೊಳ್ಳುವುದು ಅತಿ ಮುಖ್ಯ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾರತ ಬಂದ್ ಮಾಡಿರುವ ಬಗ್ಗೆ ಮಹತ್ವದ ಚರ್ಚೆ ನಡೆದಿದೆ. ದೇಶದ 80 ಕೋಟಿ ಜನರಿಗೆ ಪಡಿತರ ನೀಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡಲಿದೆ ಎಂದು ಜಾವೇಡ್ಕರ್ ಹೇಳಿದರು.

    ಪ್ರತಿ ವ್ಯಕ್ತಿಗೆ ಏಳು ಕೆ.ಜಿ ಪಂಡಿತರ ನೀಡಲು ನಿರ್ಧರಿಸಿದ್ದು, ಗೋಧಿ ಎರಡು ರೂಪಾಯಿ, ಅಕ್ಕಿ ಮೂರು ರೂಪಾಯಿಗೆ ಕೆ.ಜಿಯಂತೆ ವಿತರಣೆ ಮಾಡಲಾಗುವುದು. ಈ ಮೂಲಕ ದೇಶದ ಜನರ ನೆರವಿಗೆ ಕೇಂದ್ರ ಸರ್ಕಾರ ಬರಲಿದೆ. ಹೀಗಾಗಿ ಯಾರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ ಎಂದು ಭರವಸೆ ನೀಡಿದರು.

    ಜನರು ಮನೆಯಲ್ಲಿದ್ದು ಸಹಕಾರ ನೀಡಬೇಕು. ಪ್ರತಿ ಬಾರಿ ಯಾವುದಾದರೂ ಕೆಲಸ ಮಾಡಿದ ಬಳಿಕ ಸಾಬೂನಿನಿಂದ ಕೈ ತೊಳೆಯಬೇಕು. ಗಾಳಿ ಮಾತಿಗೆ ಕಿವಿಗೊಟ್ಟು ಮನೆಯಿಂದ ಆಚೆ ಬಾರಬಾರದು. ಕೆಮ್ಮು ಕಫ, ಜ್ವರ ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವಂತೆ ಅವರು ಸಾರ್ವಜನಿಕಲ್ಲಿ ಮನವಿ ಮಾಡಿಕೊಂಡರು.

    ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಕ್ಯಾಬಿನೆಟ್ ಸಭೆಯಲ್ಲಿ ಸೋಶಿಯಲ್ ಡಿಸ್ಟೇನ್ಸ್ ಫಾಲೋ ಮಾಡುವ ಮೂಲಕ ನುಡಿದಂತೆ ನಡೆದು ತೋರಿಸಿದರು. ಮಂಗಳವಾರ ಭಾಷಣದಲ್ಲಿ ಮಾತನಾಡಿದ್ದ ಅವರು ಪ್ರಧಾನಿನಿಂದ ಸಾಮಾನ್ಯನ ವರೆಗೂ ಎಲ್ಲರೂ ಅಂತರ ಕಾಯ್ದೆಕೊಳ್ಳಬೇಕು ಎಂದಿದ್ದರು.

    ಅದರಂತೆ ಇಂದು ನಡೆದ ಸಭೆಯಲ್ಲಿ ಎಲ್ಲ ಕೇಂದ್ರ ಸಚಿವರು ದೂರದಲ್ಲಿ ಕೂತು ಸಭೆ ನಡೆಸಿದ್ದಾರೆ. ಈ ಮೂಲಕ ದೇಶಕ್ಕೆ ಹೊಸ ಸಂದೇಶ ರವಾನಿಸುವ ಪ್ರಯತ್ನವನ್ನು ಪ್ರಧಾನಿ ಮೋದಿ ಮಾಡಿದರು.

  • ದೇಶದಲ್ಲಿ ಇ-ಸಿಗರೇಟ್ ನಿಷೇಧ – ಮಾರಾಟ ಮಾಡಿದ್ರೆ ಬೀಳುತ್ತೆ ಭಾರೀ ದಂಡ

    ದೇಶದಲ್ಲಿ ಇ-ಸಿಗರೇಟ್ ನಿಷೇಧ – ಮಾರಾಟ ಮಾಡಿದ್ರೆ ಬೀಳುತ್ತೆ ಭಾರೀ ದಂಡ

    ನವದೆಹಲಿ: ದೇಶದಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟ ಇಂದು ತೆಗೆದುಕೊಂಡಿದೆ.

    ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್ (ಇಎನ್‍ಡಿಎಸ್) ಎಂದು ಕರೆಯಲ್ಪಡುವ ಇ-ಸಿಗರೇಟ್‍ಗಳು ದೇಶದಲ್ಲಿ ವ್ಯಾಪಕ ಜನಪ್ರಿಯತೆಯನ್ನು ಗಳಿಸಿದೆ. ಆದರೆ ಇವುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹೀಗಾಗಿ ಇ-ಸಿಗರೇಟ್ ಮೇಲೆ ನಿಷೇಧ ಹೇರಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿ ಬಂದಿತ್ತು.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆ ಬಳಿಕ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಜೊತೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜಂಟಿ ಸುದ್ದಿಗೋಷ್ಠಿ ನಡೆಸಿ, ಸುಗ್ರೀವಾಜ್ಞೆ ಹೊರಡಿಸಿ ಸಂಪುಟದ ತೀರ್ಮಾನಗಳನ್ನು ಪ್ರಕಟಿಸಿದ್ದಾರೆ.

    ಇ-ಸಿಗರೇಟ್ ಬಳಕೆದಾರರಿಗೆ ಅಷ್ಟೇ ಅಲ್ಲದೆ ಉತ್ಪಾದನೆ, ಸಂಗ್ರಹಣೆ, ಮಾರಾಟ ಮಾಡುವವರಿಗೆ ಭಾರೀ ದಂಡ ವಿಧಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಮೊದಲು ಬಾರಿಗೆ ಈ ಪ್ರಕರಣದಲ್ಲಿ ಸಿಕ್ಕಿಬಿದ್ದರೆ 1 ಲಕ್ಷ ರೂ.ದಂಡ ಇಲ್ಲವೇ ಒಂದು ವರ್ಷ ಜೈಲು ಶಿಕ್ಷೆ ಅಥವಾ ಎರಡಕ್ಕೂ ಗುರಿಯಾಗುತ್ತಾರೆ. ಒಂದು ವೇಳೆ ಎರಡನೇ ಬಾರಿಯೂ ಇದೇ ಅಪರಾಧ ಎಸಗಿದರೆ 5 ಲಕ್ಷ ರೂ. ದಂಡ ಇಲ್ಲವೇ 3 ವರ್ಷ ಜೈಲು ಶಿಕ್ಷೆ ಅಥವಾ ಎರಡನ್ನು ಅನುಭವಿಸಬೇಕಾಗುತ್ತದೆ.

    ಇ-ಸಿಗರೇಟ್‍ನ ಉತ್ಪಾದನೆ, ಆಮದು, ರಫ್ತು, ಸಾಗಾಟ, ಮಾರಾಟ, ವಿತರಣೆ, ಸಂಗ್ರಹಣೆ ಹಾಗೂ ಜಾಹೀರಾತು ಎಲ್ಲವನ್ನೂ ನಿಷೇಧಿಸಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಸಮ್ಮತಿ ಸಿಕ್ಕಿದೆ. ಇ-ಸಿಗರೇಟ್‍ನ ಚಟಕ್ಕೆ ಅಂಟಿಕೊಂಡವರಿಗೆ ಅದು ಆಹ್ಲಾದಕರ ಎನಿಸುತ್ತದೆ. ದೇಶದಲ್ಲಿ 400ಕ್ಕೂ ಅಧಿಕ ಇ-ಸಿಗರೇಟ್ ಬ್ರಾಂಡ್‍ಗಳಿವೆ. ಆದರೆ ಯಾವ ಇ-ಸಿಗರೇಟ್ ಕೂಡ ಭಾರತದಲ್ಲಿ ತಯಾರಾಗುತ್ತಿಲ್ಲ. ಸದ್ಯ 150 ಫ್ಲೇವರ್ ನ ಇ-ಸಿಗರೇಟ್‍ಗಳು ಮಾರುಕಟ್ಟೆಯಲ್ಲಿವೆ ಎಂದು ವರದಿಯಾಗಿದೆ.

    ಸರ್ಕಾರ ಮತ್ತು ಆರೋಗ್ಯ ಸಚಿವಾಲಯದ ಪರವಾಗಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯದರ್ಶಿ ಪ್ರೀತಿ ಸುಡಾನ್, ಇ-ಸಿಗರೇಟ್ ವಿಚಾರವಾಗಿ ಹೊರಹೊಮ್ಮುತ್ತಿರುವ ಅಂತರಾಷ್ಟ್ರೀಯ ಸಾಕ್ಷ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಚಿವಾಲಯಕ್ಕೆ ಅನುಸಾರವಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಮಗ್ರ ದಾಖಲೆಗಳನ್ನು ಸಿದ್ಧ ಪಡಿಸಿದೆ. ಈ ಪ್ರಯತ್ನಗಳ ಫಲವಾಗಿ, ಶ್ವೇತಪತ್ರವನ್ನು ಉಲ್ಲೇಖಿಸಿ ಇ-ಸಿಗರೇಟ್ ಮತ್ತು ಇ-ಹುಕ್ಕಾಗಳನ್ನು ನಿಷೇಧಿಸಲು ಸಚಿವಾಲಯ ಶಿಫಾರಸು ಮಾಡಿದೆ. ನಿರ್ಧಾರವು ತಾಂತ್ರಿಕ ಸಲಹಾ ಸಮಿತಿಗಳ ಮೂಲಕ ಸಾಗಿದೆ ಎಂದು ತಿಳಿಸಿದ್ದಾರೆ.

    ಐಸಿಎಂಆರ್ ಮೇ 2019ರಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ಕೆಲವು ಪ್ರಮುಖ ಅಂಶಗಳನ್ನು ತಿಳಿಸಲಾಗಿದೆ. ಇಎನ್‍ಡಿಎಸ್ ಹೆಚ್ಚು ವ್ಯಸನಕಾರಿ ನಿಕೋಟಿನ್ ದ್ರಾವಣವನ್ನು ಮಾತ್ರವಲ್ಲದೆ ಸುವಾಸನೆ ನೀಡುವ ಏಜೆಂಟ್ ಮತ್ತು ಆವಿಯಾಗುವಂತಹ ಇತರ ಅಪಾಯಕಾರಿ ವಸ್ತುಗಳನ್ನು ಸಹ ಒಳಗೊಂಡಿದೆ. ಇಎನ್‍ಡಿಎಸ್ ಉತ್ಪನ್ನಗಳ ಹಾನಿಕಾರಕ ಪರಿಣಾಮಗಳನ್ನು ಪಟ್ಟಿ ಮಾಡುವುದರ ಹೊರತಾಗಿ, ಈ ಉತ್ಪನ್ನಗಳು ತಂಬಾಕು ಚಟಕ್ಕೆ ಒಂದು ಗೇಟ್‍ವೇ ಆಗಿ ಕಾರ್ಯನಿರ್ವಹಿಸುತ್ತವೆ ಅಂತ ತಿಳಿದು ಬಂದಿದೆ ಎಂದು ಪ್ರೀತಿ ಸುಡಾನ್ ಮಾಹಿತಿ ನೀಡಿದ್ದಾರೆ.

  • ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್: ಶೇ.2ರಷ್ಟು ತುಟ್ಟಿಭತ್ಯೆ ಏರಿಕೆ

    ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್: ಶೇ.2ರಷ್ಟು ತುಟ್ಟಿಭತ್ಯೆ ಏರಿಕೆ

    ನವದೆಹಲಿ: ಕೇಂದ್ರ ಸಚಿವ ಸಂಪುಟವು ಬುಧವಾರ ಶೇ.2 ರಷ್ಟು ಹೆಚ್ಚುವರಿಯಾಗಿ ತುಟ್ಟಿಭತ್ಯೆ ನೀಡಲು ನಿರ್ಧರಿಸಿದ್ದು, ಇದರಿಂದ ಒಟ್ಟು 1.1 ಕೋಟಿ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಸಹಾಯವಾಗಲಿದೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ ನಿರ್ಧಾರ ಕೈಗೊಂಡಿದ್ದು, 2018 ಜುಲೈ 1ರಿಂದ ಪೂರ್ವಾನ್ವಯವಾಗುಂತೆ ಜಾರಿಯಾಗಲಿದೆ. ಈಗಾಗಲೇ ಕೇಂದ್ರ ಸರ್ಕಾರಿ ನೌಕರರು ಶೇ.7ರಷ್ಟು ತುಟ್ಟಿಭತ್ಯೆ ಪಡೆಯುತ್ತಿದ್ದು, ಈಗ ಈ ಪ್ರಮಾಣ ಶೇ.9ಕ್ಕೆ ಏರಿಕೆಯಾಗಿದೆ.

    7ನೇ ವೇತನ ಆಯೋಗದ ಶಿಫಾರಸಿನ ಹಿನ್ನೆಲೆಯಲ್ಲಿ ತುಟ್ಟಿಭತ್ಯೆ ಮತ್ತು ಪಿಚಣಿದಾರರ ತುಟ್ಟಿಭತ್ಯೆ ಪರಿಹಾರವನ್ನು(ಡಿಎಆರ್) ಏರಿಕೆ ಮಾಡಿದ್ದು, ಇದರಿಂದಾಗಿ 48.41 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಹಾಗೂ 62.03 ಲಕ್ಷ ನಿವೃತ್ತಿ ವೇತನ ಪಡೆಯುವವರಿಗೆ ಅನುಕೂಲವಾಗಲಿದೆ. 2018-19ರ ಹಣಕಾಸು ವರ್ಷದಲ್ಲಿ ತುಟ್ಟಿಭತ್ಯೆ ಏರಿಕೆಯಿಂದ 6,112.20 ಕೋಟಿ ರೂ. ಮತ್ತು ಡಿಆರ್ ಏರಿಕೆಯಿಂದ 4,074.80 ಕೋಟಿ ರೂ. ಸರ್ಕಾರ ಬೊಕ್ಕಸಕ್ಕೆ ಹೊರೆಯಾಗಲಿದೆ.

    ಸರ್ಕಾರಿ ನೌಕರರು, ಸಾರ್ವಜನಿಕ ವಲಯದ ನೌಕರರು ಹಾಗೂ ಪಿಂಚಣಿದಾರರರಿಗೆ ತುಟ್ಟಿ ಭತ್ಯೆ ಸಿಗಲಿದ್ದು, ಇದು ನೌಕರರ ಮೂಲ ವೇತನದ ಮೇಲೆ ನಿಗದಿಯಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೂತನ ಸಚಿವರಿಗೆ ಯಾವ ಖಾತೆ? ಬದಲಾವಣೆಗೊಂಡ ಖಾತೆ ಯಾರಿಗೆ ಸಿಕ್ಕಿದೆ? ಇಲ್ಲಿದೆ ಪೂರ್ಣ ಮಾಹಿತಿ

    ನೂತನ ಸಚಿವರಿಗೆ ಯಾವ ಖಾತೆ? ಬದಲಾವಣೆಗೊಂಡ ಖಾತೆ ಯಾರಿಗೆ ಸಿಕ್ಕಿದೆ? ಇಲ್ಲಿದೆ ಪೂರ್ಣ ಮಾಹಿತಿ

    ನವದೆಹಲಿ: ಪ್ರಧಾನಿ ಮೋದಿ ಸಂಪುಟ ಪುನಾರಚನೆ ಆಗಿದ್ದು, ರಕ್ಷಣೆಯ ಹೊಣೆ ನಿರ್ಮಲಾ ಸೀತಾರಾಮನ್ ಗೆ ಸಿಕ್ಕಿದರೆ, ಇಂದು ಪ್ರಮಾಣ ವಚನ ಸ್ವೀಕರಿಸಿದ 9 ಮಂದಿ ಸಚಿವರಿಗೆ ರಾಜ್ಯ ಖಾತೆ ಮತ್ತು ಸ್ವತಂತ್ರ ಖಾತೆಯನ್ನು ಮೋದಿ ಹಂಚಿದ್ದಾರೆ.

    ರಾಜ್ಯ ಖಾತೆ:
    ಕರ್ನಾಟಕದ ಅನಂತ್ ಕುಮಾರ್ ಹೆಗಡೆ ಅವರಿಗೆ ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ರಾಜ್ಯ ಖಾತೆ ಸಿಕ್ಕಿದೆ. ಶಿವ ಪ್ರತಾಪ್ ಶುಕ್ಲಾ ಹಣಕಾಸು ಇಲಾಖೆ, ಅಶ್ವಿನಿ ಕುಮಾರ್ ಚೌಬೆ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಡಾ. ವೀರೇಂದ್ರ ಕುಮಾರ್ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಲ್ಪಸಂಖ್ಯಾತ ಖಾತೆ ಸಿಕ್ಕಿದೆ.

    ಸತ್ಯಪಾಲ್ ಸಿಂಗ್ ಅವರಿಗೆ ಮಾನವ ಸಂಪನ್ಮೂಲ, ನೀರಾವರಿ, ಗಂಗಾ ನದಿ ಪುನಶ್ಚೇತನ ಖಾತೆ ಸಿಕ್ಕಿದರೆ, ಗಜೇಂದ್ರ ಸಿಂಗ್ ಶೇಖಾವತ್ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಜವಾಬ್ದಾರಿಯನ್ನು ಮೋದಿ ನೀಡಿದ್ದಾರೆ.

    ಸ್ವತಂತ್ರ ಖಾತೆ:
    ರಾಜ್ ಕುಮಾರ್ ಸಿಂಗ್ ಅವರಿಗೆ ಇಂಧನ(ಸ್ವತಂತ್ರ), ಹೊಸ ಮತ್ತು ನವೀಕರಿಸಬಹುದಾದ ಶಕ್ತಿ ಇಲಾಖೆ, ಹರ್‍ದೀಪ್ ಸಿಂಗ್ ಪುರಿಗೆ ವಸತಿ ಮತ್ತು ನಗರ ವ್ಯವಹಾರ(ಸ್ವತಂತ್ರ), ಅಲ್ಫನ್ಸೋ ಕಣ್ಣನ್ ದಾನಮ್ ಪ್ರವಾಸೋದ್ಯಮ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ(ಸ್ವತಂತ್ರ) ಖಾತೆ ಸಿಕ್ಕಿದೆ.

    ಖಾತೆ ಬದಲಾವಣೆ
    ಇಂಧನ ಸಚಿವರಾಗಿದ್ದ ಪಿಯೂಶ್ ಗೋಯಲ್ ಅವರಿಗೆ ರೈಲ್ವೇ ಖಾತೆ ಸಿಕ್ಕಿದ್ದು, ನಿರ್ಮಲಾ ಸೀತಾರಾಮನ್ ನೋಡಿಕೊಳ್ಳುತ್ತಿದ್ದ ವಾಣಿಜ್ಯ ವ್ಯವಹಾರ ಮತ್ತು ಕೈಗಾರಿಕಾ ಖಾತೆ ಸುರೇಶ್ ಪ್ರಭು ಅವರಿಗೆ ಸಿಕ್ಕಿದೆ. ರೈಲು ದುರಂತಗಳು ಸಂಭವಿಸಿದ ಹಿನ್ನೆಲೆಯಲ್ಲಿ ಸುರೇಶ್ ಪ್ರಭು ಈ ಖಾತೆಗೆ ರಾಜೀನಾಮೆ ನೀಡಲು ಮುಂದಾಗಿದ್ದರು. ಈ ವೇಳೆ ಮೋದಿ ಸ್ವಲ್ಪ ಕಾಯಿರಿ ಎಂದು ತಿಳಿಸಿದ್ದರು.

    ಇಂದು ಕ್ಯಾಬಿನೆಟ್ ಸಚಿವರಾಗಿ ಭಡ್ತಿ ಪಡೆದ ಧರ್ಮೇಂದ್ರ ಪ್ರಧಾನ್ ಅವರಿಗೆ ಪೆಟ್ರೋಲಿಯಂ ಖಾತೆಯ ಜೊತೆಗೆ ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಹೊಣೆಯನ್ನು ನೀಡಲಾಗಿದೆ. 2 ದಿನದ ಹಿಂದೆ ರಾಜೀವ್ ಪ್ರತಾಪ್ ರೂಡಿ ಈ ಖಾತೆಗೆ ರಾಜೀನಾಮೆ ಸಲ್ಲಿಸಿದ್ದರು.

    ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವನ್ನು ನೋಡಿಕೊಳ್ಳುತ್ತಿದ್ದ ನಿತಿನ್ ಗಡ್ಕರಿ ಅವರಿಗೆ ಗಂಗಾ ನದಿ ಪುನಶ್ಚೇತನ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಈ ಇಲಾಖೆಯನ್ನು ನೋಡಿಕೊಳ್ಳುತ್ತಿದ್ದ ಉಮಾ ಭಾರತಿ ಅವರಿಗೆ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆಯನ್ನು ನೀಡಲಾಗಿದೆ.

    ವಿಜಯ್ ಗೋಯಲ್ ನೋಡಿಕೊಳ್ಳುತ್ತಿದ್ದ ಕ್ರೀಡಾ ಸಚಿವಾಲಯ ಈಗ ರಾಜವರ್ಧನ್ ಸಿಂಗ್ ರಾಥೋಡ್‍ಗೆ ಸಿಕ್ಕಿದೆ. ಗೋಯಲ್ ಅವರು ಸಂಸದೀಯ ವ್ಯವಹಾರ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ರಾಜ್ಯ ಖಾತೆಯನ್ನು ಇನ್ನು ಮುಂದೆ ನಿರ್ವಹಿಸಲಿದ್ದಾರೆ.

    ಇದನ್ನೂ ಓದಿ: ಮೋದಿ ಸಂಪುಟ ಸೇರಿದ ಸಚಿವರ ಸಾಧನೆ ಏನು? ಇಷ್ಟೊಂದು ಮಹತ್ವ ಯಾಕೆ?

    ನರೇಂದ್ರ ಮೋದಿ: ಪ್ರಧಾನ ಮಂತ್ರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ,  ಅಣು ಶಕ್ತಿ, ಬಾಹ್ಯಾಕಾಶ ಹಾಗೂ ಇತರ ಹಂಚಿಕೆಯಾಗದ ಖಾತೆಗಳು

    ಸಂಪುಟ ದರ್ಜೆ ಸಚಿವರು:
    1) ರಾಜನಾಥ್ ಸಿಂಗ್: ಗೃಹ
    2) ನಿರ್ಮಲಾ ಸೀತಾರಾಮನ್: ರಕ್ಷಣಾ
    3) ಸುಷ್ಮಾ ಸ್ವರಾಜ್: ವಿದೇಶ ವ್ಯವಹಾರಗಳ
    4) ಅರುಣ್ ಜೇಟ್ಲಿ: ಹಣಕಾಸು ಕಾರ್ಪೊರೇಟ್ ವ್ಯವಹಾರಗಳ

    5) ನಿತಿನ್ ಗಡ್ಕರಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಹಡಗು, ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ನದಿ ಪುನಶ್ಚೇತನ
    6) ಸುರೇಶ್ ಪ್ರಭು: ವಾಣಿಜ್ಯ ಮತ್ತು ಉದ್ಯಮ
    7) ಡಿ.ವಿ. ಸದಾನಂದಗೌಡ: ಅಂಕಿ ಅಂಶ ಮತ್ತು ಯೋಜನೆ ಅನುಷ್ಠಾನ
    8) ಉಮಾ ಭಾರತಿ: ಕುಡಿಯುವ ನೀರು ಮತ್ತು ಒಳಚರಂಡಿ

    9) ರಾಮ್ ವಿಲಾಸ್ ಪಾಸ್ವಾನ್: ಗ್ರಾಹಕ ವ್ಯವಹಾರ, ಆಹಾರ
    10) ಮನೇಕಾ ಗಾಂಧಿ: ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ
    11) ಅನಂತಕುಮಾರ್: ರಾಸಾಯನಿಕ ಮತ್ತು ರಸಗೊಬ್ಬರ, ಸಂಸದೀಯ ವ್ಯವಹಾರ
    12) ರವಿಶಂಕರ್ ಪ್ರಸಾದ್: ಕಾನೂನು ಮತ್ತು ನ್ಯಾಯ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ-ತಂತ್ರಜ್ಞಾನ

    13) ಜೆ.ಪಿ.ನಡ್ಡಾ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ
    14) ಅಶೋಕ್ ಗಜಪತಿ ರಾಜು: ನಾಗರಿಕ ವಿಮಾನಯಾನ
    15) ಅನಂತ್ ಗೀತೆ: ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ
    16) ಹರ್ ಸಿಮ್ರತ್ ಕೌರ್ ಬಾದಲ್: ಆಹಾರ ಸಂಸ್ಕರಣಾ, ಉದ್ಯಮ

    17) ನರೇಂದ್ರ ಸಿಂಗ್ ತೋಮರ್: ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಗಣಿಗಾರಿಕೆ
    18) ಬಿರೇಂದರ್ ಸಿಂಗ್ ಚೌಧರಿ: ಉಕ್ಕು
    19) ಜುವಾಲ್ ಓರಮ್: ಬುಡಕಟ್ಟು ವ್ಯವಹಾರ
    20) ರಾಧಾಮೋಹನ್ ಸಿಂಗ್: ಕೃಷಿ ಮತ್ತು ರೈತರ ಕಲ್ಯಾಣ

    21) ಸ್ಮೃತಿ ಇರಾನಿ: ಜವಳಿ ಖಾತೆ: ಮಾಹಿತಿ ಮತ್ತು ಪ್ರಸರಣ
    22) ಡಾ. ಹರ್ಷ್ ವರ್ಧನ್: ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ
    23) ತಾವರ್ ಚಂದ್ ಗೆಹ್ಲೋಟ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
    24) ಪ್ರಕಾಶ್ ಜಾವಡೇಕರ್: ಮಾನವ ಸಂಪನ್ಮೂಲ ಅಭಿವೃದ್ಧಿ

    25) ಧರ್ಮೇಂದ್ರ ಪ್ರಧಾನ್: ಪೆಟ್ರೋಲಿಯಮ್ ಮತ್ತು ನೈಸರ್ಗಿಕ ಅನಿಲ , ಕೌಶಲ್ಯ ಅಭಿವೃದ್ಧಿ ಮತ್ತು ನವೋದ್ಯಮ
    26) ಪೀಯುಶ್ ಗೋಯಲ್: ರೈಲ್ವೆ, ಕಲ್ಲಿದ್ದಲು
    27) ಮುಕ್ತಾರ್ ಅಬ್ಬಾಸ್ ನಖ್ವಿ: ಅಲ್ಪಸಂಖ್ಯಾತ ವ್ಯವಹಾ

    ರಾಜ್ಯ  ಸ್ವತಂತ್ರ ಖಾತೆ ಸಚಿವರು:
    1) ಇಂದರ್ ಜೀತ್ ಸಿಂಗ್ ರಾವ್: ಯೋಜನಾ, ರಾಸಾಯನಿಕ ಮತ್ತು ರಸಗೊಬ್ಬರ
    2) ಸಂತೋಷ್ ಕುಮಾರ್ ಗಂಗಾವರ್: ಕಾರ್ಮಿಕ ಮತ್ತು ಉದ್ಯೋಗ
    3) ಶ್ರೀಪಾದ್ ನಾಯ್ಕ್: ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ (ಆಯುಶ್)
    4) ಡಾ. ಜಿತೇಂದ್ರ ಸಿಂಗ್: ಈಶಾನ್ಯ ಪ್ರದೇಶ ಅಭಿವೃದ್ಧಿ, ಪ್ರಧಾನಿ ಕಚೇರಿ, ಸಿಬ್ಬಂದಿ, ಸಾರ್ಜನಿಕ ಕುಂದುಕೊರತೆ, ಪಿಂಚಣಿ, ಅಣು ಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆ

    5) ಡಾ. ಮಹೇಶ್ ಶರ್ಮಾ: ಸಂಸ್ಕೃತಿ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ
    6) ಗಿರಿರಾಜ್ ಸಿಂಗ್: ಅತೀ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮ
    7) ಮನೋಜ್ ಸಿನ್ಹಾ: ಸಂವಹನ, ರೈಲ್ವೆ
    8) ಕರ್ನಲ್ ರಾಜವರ್ಧನ್ ಸಿಂಗ್ ರಾಥೋಡ್: ಯುವ ವ್ಯವಹಾರಗಳು ಹಾಗೂ ಕ್ರೀಡೆ, ಮಾಹಿತಿ ಮತ್ತು ಪ್ರಸಾರ

    9) ರಾಜ್ ಕುಮಾರ್ ಸಿಂಗ್: ವಿದ್ಯುತ್,ಹೊಸ ಮತ್ತು ಪುನರ್ ಬಳಕೆ ಇಂಧನ
    10) ಹರದೀಪ್ ಸಿಂಗ್ ಪುರಿ: ವಸತಿ ಮತ್ತು ನಗರ ವ್ಯವಹಾರಗಳ
    11) ಆಲ್ಫೋನ್ಸ್ ಕಣ್ಣಾಂಧಾನಂ: ಪ್ರವಾಸೋದ್ಯಮ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ

    ರಾಜ್ಯ ಖಾತೆ ಸಚಿವರು:
    1) ವಿಜಯ್ ಗೋಯಲ್: ಸಂಸದೀಯ ವ್ಯವಹಾರ, ಅಂಕಿ ಅಂಶ ಮತ್ತು ಯೋಜನೆ ಅನುಷ್ಠಾನ
    2) ಪಿ.ರಾಧಾಕೃಷ್ಣನ್: ಹಣಕಾಸು, ಹಡಗು
    3) ಎಸ್.ಎಸ್.ಅಹ್ಲುವಾಲಿಯಾ: ಕುಡಿಯುವ ನೀರು ಮತ್ತು ನೈರ್ಮಲ್ಯ
    4) ರಮೇಶ್ ಜಿಗಜಿಣಗಿ: ಕುಡಿಯುವ ನೀರು ಮತ್ತು ನೈರ್ಮಲ್ಯ

    5) ರಾಮದಾಸ್ ಅಟಾವಳೆ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
    6) ವಿಷ್ಣು ದೇವೋ: ಉಕ್ಕು
    7) ರಾಮ್ ಕೃಪಾಲ್ ಯಾದವ್: ಗ್ರಾಮೀಣಾಭಿವೃದ್ಧಿ
    8) ಹನ್ಸ್ ರಾಜ್ ಗಂಗಾರಾಮ್ ಆಹಿರ್: ಗೃಹ ವ್ಯವಹಾರಗಳ

    9) ಹರಿಭಾಯ್ ಚೌಧರಿ: ಗಣಿಗಾರಿಕೆ, ಕಲ್ಲಿದ್ದಲು
    10) ರಾಜನ್ ಗೋಹೇನ್: ರೈಲ್ವೇ
    11) ಜನರಲ್ ವಿ.ಕೆ.ಸಿಂಗ್: ವಿದೇಶ ವ್ಯವಹಾರಗಳ
    12) ಪರುಷೋತ್ತಮ್ ರುಪಾಲಾ: ಕೃಷಿ ಮತ್ತು ರೈತರ ಕಲ್ಯಾಣ, ಪಂಚಾಯತ್ ರಾಜ್

    13) ಕೃಷನ್ ಪಾಲ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ
    14) ಜಸ್ವಂತ್’ಸಿನ್ಹ್ ಭಾಬೋರ್: ಬುಡಕಟ್ಟು ವ್ಯವಹಾರಗಳ
    15) ಶಿವಪ್ರತಾಪ್ ಶುಕ್ಲಾ: ಹಣಕಾಸು
    16) ಅಶ್ವಿನಿ ಕುಮಾರ್ ಚೌಬೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ

    17) ಸುದರ್ಶನ್ ಭಗತ್: ಬುಡಕಟ್ಟು ವ್ಯವಹಾರಗಳ
    18) ಉಪೇಂದ್ರ ಕುಶ್ವಾಹಾ: ಮಾನವ ಸಂಪನ್ಮೂಲ ಅಭಿವೃದ್ಧಿ
    19) ಕಿರಣ್ ರಿಜಿಜು: ಗೃಹ ವ್ಯವಹಾರ
    20) ಡಾ. ವಿರೇಂದ್ರ ಕುಮಾರ್: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಲ್ಪಸಂಖ್ಯಾತ ವ್ಯವಹಾರಗಳ

    21) ಅನಂತಕುಮಾರ್ ಹೆಗಡೆ: ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ
    22) ಎಂ.ಜೆ.ಅಕ್ಬರ್: ವಿದೇಶ ವ್ಯವಹಾರಗಳ
    23) ಸಾಧ್ವಿ ನಿರಂಜನ್ ಜ್ಯೋತಿ: ಆಹಾರ ಸಂಸ್ಕರಣ ಉದ್ಯಮಗಳ
    24) ವೈ.ಎಸ್.ಚೌಧರಿ: ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ

    25) ಜಯಂತ್ ಸಿನ್ಹಾ: ನಾಗರಿಕ ವಿಮಾನಯಾನ
    26) ಬಾಬುಲ್ ಸುಪ್ರಿಯೋ: ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ
    27) ವಿಜಯ್ ಸಾಂಪ್ಲಾ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
    28) ಅರ್ಜುನ್ ರಾಮ್ ಮೇಘವಾಲ್: ಸಂಸದೀಯ ವ್ಯವಹಾರ, ಜಲಸಂಪನ್ಮೂಲ ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಯೋಜನೆ

    29) ಅಜಯ್ ತಾಮಟ: ಜವಳಿ
    30) ಕೃಷ್ಣ ರಾಜ್: ಕೃಷಿ ಮತ್ತು ರೈತರ ಕಲ್ಯಾಣ
    31) ಮನ್’ಸುಖ್ ಮಾಂಡವಿಯಾ: ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಹಡಗು ಸಾಗಣೆ, ರಾಸಾಯನಿಕ ಮತ್ತು ರಸಗೊಬ್ಬರ
    32) ಅನುಪ್ರಿಯಾ ಪಟೇಲ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ

    33) ಸಿ.ಆರ್. ಚೌಧರಿ: ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ವಾಣಿಜ್ಯ ಮತ್ತು ಉದ್ಯಮ
    34) ಪಿ.ಪಿ.ಚೌಧರಿ: ಕಾನೂನು ಮತ್ತು ನ್ಯಾಯ, ಕಾರ್ಪೊರೇಟ್ ವ್ಯವಹಾರ
    35) ಡಾ. ಸುಭಾಷ್ ರಾಮರಾವ್ ಭಾಮ್ರೆ: ರಕ್ಷಣಾ
    36) ಗಜೇಂದ್ರ ಸಿಂಗ್ ಶೇಖಾವತ್: ಕೃಷಿ ಮತ್ತು ರೈತರ ಕಲ್ಯಾಣ
    37) ಡಾ. ಸತ್ಯಪಾಲ್ ಸಿಂಗ್: ಮಾನವ ಸಂಪನ್ಮೂಲ ಅಭಿವೃದ್ಧಿ, ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಯೋಜನೆ