Tag: ಕೇಂದ್ರ ಸಚಿವ ಡಿವಿ ಸದಾನಂದ ಗೌಡ

  • ರಾಜ್ಯಕ್ಕೆ ಸಚಿವರ ಕೊಡುಗೆ ಬಗ್ಗೆ ಆರ್‌ಟಿಐನಲ್ಲಿಲ್ಲ- ಕಾಂಗ್ರೆಸ್‍ಗೆ ಡಿವಿಎಸ್ ಬಹಿರಂಗ ಸವಾಲು

    ರಾಜ್ಯಕ್ಕೆ ಸಚಿವರ ಕೊಡುಗೆ ಬಗ್ಗೆ ಆರ್‌ಟಿಐನಲ್ಲಿಲ್ಲ- ಕಾಂಗ್ರೆಸ್‍ಗೆ ಡಿವಿಎಸ್ ಬಹಿರಂಗ ಸವಾಲು

    ಬೆಂಗಳೂರು: ಕೇಂದ್ರ ಸಚಿವ ಡಿವಿ ಸದಾನಂದ ಗೌಡರು ರಾಜ್ಯಕ್ಕೆ ನೀಡಿದ ಕೊಡುಗೆಯ ಬಗ್ಗೆ ಆರ್‌ಟಿಐನಲ್ಲಿ ಮಾಹಿತಿ ಇಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸ್ವತಃ ಡಿವಿಎಸ್ ಅವರೇ ಈ ಬಗ್ಗೆ ರಾಜ್ಯ ಕಾಂಗ್ರೆಸ್ಸಿಗೆ ಚಾಲೆಂಜ್ ಹಾಕಿದ್ದಾರೆ.

    ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ. ನಾನು ಎಲ್ಲ ದಾಖಲೆಯೊಂದಿಗೆ ಬರುತ್ತೇನೆ. ನೀವು ಹರಡುತ್ತಿರುವ ಸುಳ್ಳನ್ನು ಸಾಬೀತು ಪಡಿಸುವಲ್ಲಿ ನೀವು ವಿಫಲರಾದರೆ ನಿಮ್ಮ ರಾಷ್ಟ್ರೀಯ ಅಧ್ಯಕ್ಷರು ಬೆಂಗಳೂರು ಉತ್ತರ ಕ್ಷೇತ್ರದ ಮತದಾರರ ಬಳಿ ಕ್ಷಮೆ ಕೇಳಬೇಕು ಎಂದು ಡಿವಿಎಸ್ ಟ್ವಿಟ್ಟರ್ ನಲ್ಲಿ ಬಹಿರಂಗ ಸವಾಲು ಎಸೆದಿದ್ದಾರೆ.

    ಕಾಂಗ್ರೆಸ್ ಟ್ವೀಟ್‍ನಲ್ಲಿ ಏನಿತ್ತು?
    ಕಳೆದ 5 ವರ್ಷಗಳಿಂದ ಸಚಿವ ಡಿವಿ ಸದಾನಂದ ಗೌಡರು ಅವರ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು ಆರ್‌ಟಿಐ ಮಾಹಿತಿ ನೀಡಿದೆ. ಸದಾ ನಗುತ್ತಿರುವ ಬಿಜೆಪಿ ಮುಖಂಡರು ಸಾಮಾನ್ಯ ಜನರ ಮುಖದಲ್ಲಿ ಸಂತೋಷ ಮೂಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬರೆದುಕೊಂಡು ಡಿವಿಎಸ್‍ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿತ್ತು.

    ಆರ್‍ಟಿಇಐ ನೀಡಿದ ಮಾಹಿತಿಯೇನು..?
    5 ವರ್ಷ ಮೋದಿ ಸರ್ಕಾರದಲ್ಲಿ ಆರಂಭದಲ್ಲಿ ರೈಲ್ವೇ ಸಚಿವರಾಗಿ ಬಳಿಕ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆಯ ಸಚಿವರಾಗಿರುವ ಡಿವಿ ಸದಾನಂದ ಗೌಡರು ಐದು ವರ್ಷದ ಅವಧಿಯಲ್ಲಿ ರಾಜ್ಯಕ್ಕೆ ಮಾಡಿದ ಕೆಲಸಗಳೇನು ಎಂದು ಮಾಹಿತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಈ ಪ್ರಶ್ನೆಗೆ ಪಬ್ಲಿಕ್ ಡೊಮೇನ್ ನಲ್ಲಿ ನೋಡಿ ಅಥವಾ ಇಂಟರ್ ನೆಟ್‍ನಲ್ಲಿ ನೋಡಿ ಎನ್ನುವ ಉತ್ತರ ಬಂದಿದೆ ಎಂದು ಆರ್‌ಟಿಐ ಕಾರ್ಯಕರ್ತ ಶಿವ ಮಂಜೇಶ್ ಹೇಳಿದ್ದರು.

    ಡಿ.ವಿ ಸದಾನಂದ ಗೌಡರ ಕ್ಷೇತ್ರದಡಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಆ ಕ್ಷೇತ್ರಗಳಲ್ಲಿ ಸಂಸದರ ನಿಧಿಯಿಂದ ಏನು ಕೆಲಸ ಮಾಡಿದ್ದಾರೆ ಎಂದರು ಯಾವುದೇ ಮಾಹಿತಿ ಇಲ್ಲ. ಅಲ್ಲದೇ ಎಸ್‍ಸಿ, ಎಸ್ಟಿ ವರ್ಗದವರಿಗೂ ಶೇ.1ರಷ್ಟು ಕೆಲಸ ಕಾರ್ಯಗಳನ್ನು ಮಾಡಿಲ್ಲ ಎಂದು ಶಿವ ಮಂಜೇಶ್ ಆರೋಪಿಸಿದ್ದರು. ಈ ಕುರಿತು ಪಬ್ಲಿಕ್ ಟಿವಿ ಸುದ್ದಿ ಮಾಡಿದ್ದು, ಇದನ್ನು ಕಾಂಗ್ರೆಸ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರೀಟ್ವೀಟ್ ಮಾಡಿ ನಂತರ ಸದಾನಂದ ಗೌಡರಿಗೆ ಪ್ರಶ್ನೆ ಹಾಕಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv