Tag: ಕೇಂದ್ರೀಯ ಸರಕು ಮತ್ತು ಸಾಗಾಣಿಕೆ ಇಲಾಖೆ

  • 7 ಕೋಟಿ ಮೊತ್ತದ ಅಡಿಕೆಯ ಜೊತೆ 7 ಲಾರಿ ಜಪ್ತಿ – 7 ಮಂದಿ ಅರೆಸ್ಟ್

    7 ಕೋಟಿ ಮೊತ್ತದ ಅಡಿಕೆಯ ಜೊತೆ 7 ಲಾರಿ ಜಪ್ತಿ – 7 ಮಂದಿ ಅರೆಸ್ಟ್

    ಬೆಳಗಾವಿ: ಜಿಎಸ್‍ಟಿ ಇಲ್ಲದೇ ಸಾಗಿಸುತ್ತಿದ್ದ 7 ಕೋಟಿ ಮೊತ್ತದ ಅಡಿಕೆಯನ್ನು ಜಪ್ತಿ ಮಾಡಿ 7 ಜನರನ್ನು ಬಂಧನಕ್ಕೆ ಪಡೆದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ರಾಜ್ಯ ಸರಕು ಸೇವಾ ಇಲಾಖೆಯ ಯಾವ ಕೆಲಸವನ್ನು ಮಾಡಬೇಕೋ ಅದನ್ನು ಕೇಂದ್ರೀಯ ಸರಕು ಮತ್ತು ಸಾಗಾಣಿಕೆ ಇಲಾಖೆ ಮಾಡಿ ತೋರಿಸಿದೆ. ಜಿಎಸ್‍ಟಿ ಇಲ್ಲದೇ ಸಾಗಿಸಲಾಗುತ್ತಿದ್ದ ಸುಮಾರು 7 ಕೋಟಿ ರೂ. ಮೊತ್ತದ ಅಡಿಕೆ ತುಂಬಿದ 7 ಲಾರಿಗಳನ್ನು ಬೆಳಗಾವಿಯ ಕೇಂದ್ರೀಯ ಜಿಎಸ್‍ಟಿ ಮತ್ತು ಕೇಂದ್ರೀಯ ಅಬಕಾರಿ ಆಯುಕ್ತಾಲಯ ಜಪ್ತಿ ಮಾಡಿ 7 ಜನರನ್ನು ಬಂಧಿಸಿದೆ. ಇದನ್ನೂ ಓದಿ: ಅಂಗಾಂಗಗಳನ್ನು ದಾನ ಮಾಡಿ – ಡೆತ್‍ನೋಟ್ ಬರೆದು ಉಡುಪಿಯ ಬಿಜೆಪಿ ನಾಯಕಿ ಆತ್ಮಹತ್ಯೆ

    ಮಂಗಳೂರಿನ ಡಿಜಿಜಿಐ ಅವರು ನೀಡಿದ ಖಚಿತ ಮಾಹಿತಿಯ ಮೇರೆಗೆ ಬೆಳಗಾವಿಯ ಕೇಂದ್ರೀಯ ಜಿಎಸ್‍ಟಿ ಮತ್ತು ಕೇಂದ್ರೀಯ ಅಬಕಾರಿ ಆಯುಕ್ತಾಲಯದ ವತಿಯಿಂದ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ.

    ಮಾಹಿತಿ ಸಿಕ್ಕ ಕೂಡಲೇ ಕಾಯ್ದು ಕುಳಿತಿದ್ದ ಕೇಂದ್ರ ಇಲಾಖೆಯ ಅಧಿಕಾರಿಗಳು ಹುಬ್ಬಳ್ಳಿ ಮತ್ತು ನವಲಗುಂದ ಮಾರ್ಗವಾಗಿ ಸಾಗಿಸಲಾಗುತ್ತಿದ್ದ ಲಾರಿಗಳನ್ನು ತಡೆದಿದ್ದಾರೆ. ಅಡಿಕೆಗೆ ಶೇ.5 ರಷ್ಟು ಜಿಎಸ್‍ಟಿ ನೀಡಬೇಕು. ಆದರೆ ಜಿಎಸ್‍ಟಿಯನ್ನು ತುಂಬದೇ ಬಹುದೊಡ್ಡ ತೆರಿಗೆ ವಂಚನೆ ನಡೆಸುತ್ತಿರುವುದು ಗಮನಕ್ಕೆ ಬಂದಿದ್ದು, ಲಾರಿಯನ್ನು ಪರಿಶೀಲಿಸಿದಾಗ ಸತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅಮ್ಮ ನೀವು ಸೂಪರ್ ವುಮೆನ್ – ಹಾಡಿ ಹೊಗಳಿದ ರಾಧಿಕಾ ಪಂಡಿತ್

    ಕೇಂದ್ರಿಯ ಜಿಎಸ್‍ಟಿ ಇಲಾಖೆಯ ಸಹಾಯಕ ಆಯುಕ್ತ ಅಜಿಂಕ್ಯ ಕಾಟಕರ ಅವರ ನೇತೃತ್ವದ ತಂಡ ನಡೆಸಿದ ಸಿನೀಮಿಯ ರೀತಿಯ ಕಾರ್ಯಾಚರಣೆಯಲ್ಲಿ ರಾಜೀವ್ ಹೆಗ್ಗಡೆ, ರಿಯಾಜ್ ಬೆಳಗಾಂವಕರ್, ಎಸ್‍ಪಿ ನಾಯಿಕ್, ಆಬೀದ್‍ಹುಸೇನ್ ನೇಸರಗಿ, ವಿಶ್ವನಾಥ್ ನಿಡಗುಂದಿ ಇನ್ನುಳಿದವರು ಭಾಗಿಯಾಗಿದ್ದರು. ವರಿಷ್ಠ ಅಧಿಕಾರಿಗಳು ಈ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶಂಸಿದ್ದಾರೆ. ಇದನ್ನೂ ಓದಿ: ರೌಡಿಶೀಟರ್​ನಿಂದ ಪಾನ್ ಶಾಪ್ ಮಾಲೀಕನ ಬರ್ಬರ ಹತ್ಯೆ

    ಶಿವಮೊಗ್ಗದಲ್ಲಿ ಅಡಿಕೆಗಳನ್ನು ಬೆಳೆದು, ದೆಹಲಿ ಮತ್ತು ಅಹಮದಾಬಾದ್‍ಗೆ ಪೂರೈಸಲಾಗುತ್ತದೆ. ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ಅಡಿಕೆಯನ್ನು ಬೆಳೆಯುತ್ತಾರೆ. ಬೆಳಗಾವಿ ವಾಣಿಜ್ಯ ತೆರಿಗೆ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿಜಯಪುರ ಮತ್ತು ದಾವಣಗೆರೆ ಅಧಿಕಾರಿಗಳು ಅಕ್ರಮವನ್ನು ತಡೆಯುವಲ್ಲಿ ವಿಫಲರಾಗಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ. ದಾವಣಗೆರೆ, ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಜಾಣಕುರುಡುತನ ಪ್ರದರ್ಶಿಸಿದ್ದಾರೆ.