Tag: ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್

  • ಬೆಂಗಳೂರಲ್ಲಿ ಮಳೆಯಾರ್ಭಟ: ದಿ. ಅಬ್ದುಲ್ ಕಲಾಂ ಸಂಬಂಧಿಕರಿಗೆ ತಟ್ಟಿದ ಜಲ ಕಂಟಕ

    ಬೆಂಗಳೂರಲ್ಲಿ ಮಳೆಯಾರ್ಭಟ: ದಿ. ಅಬ್ದುಲ್ ಕಲಾಂ ಸಂಬಂಧಿಕರಿಗೆ ತಟ್ಟಿದ ಜಲ ಕಂಟಕ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Silicon City) ವರುಣ ಅಬ್ಬರಿಸುತ್ತಿದ್ದು, ದಿವಂಗತ ಅಬ್ದುಲ್ ಕಲಾಂ (Abdul Kalam) ಸಂಬಂಧಿಕರಿಗೆ ಬೆಂಗಳೂರು ಜಲ ಕಂಟಕ ತಟ್ಟಿದೆ.

    ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಂಗಳೂರಿನ ನಗರಗಳು ಜಲಾವೃತಗೊಂಡಿದೆ. ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ (Kendriya Vihar Apartment) ಕೆರೆಯಂತಾಗಿದ್ದು, ಬೋಟಿಂಗ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.ಇದನ್ನೂ ಓದಿ: ಕೆಂಗೇರಿ ಕೆರೆಗೆ ಬಿದ್ದ ಅಣ್ಣ ತಂಗಿ, 3 ಗಂಟೆಗಳಿಂದ ಸತತ ಕಾರ್ಯಾಚರಣೆ – ಅಣ್ಣನ ಮೃತದೇಹ ಪತ್ತೆ

    ಅಪಾರ್ಟ್ಮೆಂಟ್‌ನ ಡಿ.6 ಬ್ಲಾಕ್‌ನಲ್ಲಿ ಮಾಜಿ ದಿವಂಗತ ಅಬ್ದುಲ್ ಕಲಾಂ ಸಂಬಂಧಿಕರು ವಾಸಿಸುತ್ತಿದ್ದು, ಬೆಂಗಳೂರು ಜಲ ಕಂಟಕ ತಟ್ಟಿದೆ. ಅಬ್ದುಲ್ ಕಲಾಂ ಸಂಬಂಧಿ ಹಾಗೂ ಅವರ ಮಗಳು ನಾಗು ರೋಜಾ ಎಂಬುವರು ವಾಸವಾಗಿದ್ದು, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾರೆ. ಸುಮಾರು 80 ವರ್ಷ ಆಗಿರುವುದರಿಂದ ಅಪಾರ್ಟ್ಮೆಂಟ್‌ನಿಂದ ಅಂಬುಲೆನ್ಸ್‌ನಲ್ಲಿ ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ.

    ಅಪಾರ್ಟ್ಮೆಂಟ್‌ನಲ್ಲಿ 2500 ಜನರಿದ್ದು, ಮಹಿಳೆಯರಿಗೆ ಲೈಫ್ ಜಾಕೆಟ್ ಹಾಕಿ ಹೊರತರಲಾಗುತ್ತಿದ್ದು, SDRF, NDRF ತಂಡದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬೆಳಗಿನ ಜಾವ 3 ಗಂಟೆಯಿಂದ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅಪಾರ್ಟ್ಮೆಂಟ್‌ನ ನೀರಿನ ಪ್ರಮಾಣ ಕಡಿಮೆಯಾಗುತ್ತಿಲ್ಲ. ಜನರಿಗೆ ಅಲ್ಲಿಂದ ಬೇರೆ ಕಡೆಗೆ ತೆರಳುವಂತೆ ಸೂಚಿಸಿದ್ದು, 250 ಕುಟುಂಬಗಳು ಬೇರೆ ಕಡೆ ತೆರಳಿದ್ದಾರೆ. ಇನ್ನೂ 2000 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕಿದೆ.

    ಬಿಬಿಎಂಪಿ ಕಮಿಷನರ್ ಆದೇಶದ ಮೇರೆಗೆ ಅಲ್ಲಿಯ ಜನರು ಬೇರೆ ಕಡೆಗೆ ತೆರಳಿದ್ದು, ಬಟ್ಟೆ ಬರೆಯೊಂದಿಗೆ ತಾತ್ಕಾಲಿಕವಾಗಿ ಮನೆ ಖಾಲಿ ಮಾಡುತ್ತಿದ್ದಾರೆ.ಇದನ್ನೂ ಓದಿ: ಲವ್ ಸ್ಟೋರಿ ಶುರು ಮಾಡಿದ್ರೆ, ಮೆಟ್ಟು ತೆಗೆದುಕೊಂಡು ಹೊಡೆಯುತ್ತೇನೆ: ಚೈತ್ರಾ