Tag: ಕೆ.ಸಿ ವೇಣು ಗೋಪಾಲ್

  • ಕೆಪಿಸಿಸಿ ಕಚೇರಿಯಲ್ಲಿ ಇಣುಕಿದ ರೌಡಿಶೀಟರ್ – ಇಸ್ತಿಯಾಕ್ ಜೊತೆ ವೇಣುಗೋಪಾಲ್ ಚರ್ಚೆ

    ಕೆಪಿಸಿಸಿ ಕಚೇರಿಯಲ್ಲಿ ಇಣುಕಿದ ರೌಡಿಶೀಟರ್ – ಇಸ್ತಿಯಾಕ್ ಜೊತೆ ವೇಣುಗೋಪಾಲ್ ಚರ್ಚೆ

    – ಉಪಚುನಾವಣೆಗಾಗಿ ರೌಡಿಶೀಟರ್ ಮೊರೆ ಹೋಯ್ತಾ ಕಾಂಗ್ರೆಸ್?

    ಬೆಂಗಳೂರು: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ರೌಡಿಶೀಟರ್ ಯಶಸ್ವಿನಿ ಸನ್ಮಾನ ಮಾಡಿದ್ರೆ, ಇತ್ತ ಕಾಂಗ್ರೆಸ್ ಕಚೇರಿಯಲ್ಲಿ ರೌಡಿಶೀಟರ್ ಕಾಣಿಸಿಕೊಂಡಿದ್ದಾನೆ.

    ಹೌದು. ಐಎಂಎ ಪ್ರಕರಣದಲ್ಲಿಯೂ ಆರೋಪಿಯಾಗಿರುವ ರೌಡಿ ಶೀಟರ್ ಇಸ್ತಿಯಾಕ್ ಪೈಲ್ವಾನ್ ಇಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಭೇಟಿ ಮಾಡಿದ್ದಾನೆ. ಅಲ್ಲದೆ ಕೆಲ ಹೊತ್ತು ಮಾತುಕತೆ ಕೂಡ ನಡೆಸಿದ್ದಾನೆ. ಈ ಮೂಲಕ ಕಾಂಗ್ರೆಸ್ ನಾಯಕರು ಶಿವಾಜಿನಗರ ಉಪಚುನಾವಣೆ ಕುರಿತು ಚರ್ಚೆಗೆ ಇಸ್ತಿಯಾಕ್ ಕರೆಸಿಕೊಂಡ್ರಾ ಅನ್ನೋ ಅನುಮಾನ ಮೂಡಿದೆ.

    ಯಾರು ಈ ಇಸ್ತಿಯಾಕ್?
    ಇಸ್ತಿಯಾಕ್ ಪೈಲ್ವಾನ್ ವಿರುದ್ಧ ಕೊಲೆ, ಬೆದರಿಕೆ, ಕೊಲೆಯತ್ನ ಸೇರಿ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಇತ್ತೀಚೆಗೆ ಗಲಾಟೆ ಕೇಸ್ ಕೂಡ ದಾಖಲಾಗಿದೆ. ಐಎಂಎ ಕೇಸ್ ನಲ್ಲಿ ಕಿಕ್ ಬ್ಯಾಕ್ ಪಡೆದ ಆರೋಪ ಈತನ ಮೇಲಿದ್ದು, ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಇಸ್ತಿಯಾಕ್ ಪತ್ನಿ ಫರೀದಾ ಇಸ್ತಿಯಾಕ್ ಹಾಲಿ ಕಾರ್ಪೊರೇಟರ್ ಆಗಿದ್ದು, ಇಸ್ತಿಯಾಕ್ ಸ್ಥಳೀಯ ಕಾಂಗ್ರೆಸ್ ಮುಖಂಡನಾಗಿದ್ದಾನೆ.

    ಕಮಿಷನರ್‍ಗೆ ಸನ್ಮಾನ:
    ಇತ್ತ ಮೀಟರ್ ಬಡ್ಡಿ ದುಡ್ಡಿಗೆ ಅಮಾಯಕರ ಪ್ರಾಣ ತೆಗೆದಿದ್ದು ಅಲ್ಲದೆ ಹಣ ಕೊಡಲಿಲ್ಲ ಅಂದರೆ ಚಪ್ಪಲಿ ಕಾಲಿನಲ್ಲೇ ಒದೀತಿದ್ದಾಕೆ ಇದೀಗ ಸಾಮಾಜಿಕ ಕಾರ್ಯಕರ್ತೆ ವೇಷ ಹಾಕಿ ಈಗ ಕಮಿಷನರ್ ಅವರಿಗೇ ಸನ್ಮಾನ ಮಾಡಿರುವುದು ಬೆಳಕಿಗೆ ಬಂದಿದೆ. ರೌಡಿ ಯಶಸ್ವಿನಿ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್‍ಗೆ ಸನ್ಮಾನ ಮಾಡಿದ್ದಾರೆ. ಶ್ರೀರಾಮಸೇನೆಯ ಮುತಾಲಿಕ್ ಜೊತೆ ನಿಂತು ಭಾಸ್ಕರ್ ರಾವ್ ಅವರಿಗೆ ಶಾಲು ಹೊದಿಸಿ, ಗಂಧದ ಹಾರ ಹಾಕಿದ್ದಾರೆ. ಯಶಶ್ವಿನಿ ಮತ್ತು ಈಕೆಯ ಪತಿ ದಡಿಯಾ ಮಹೇಶ್ ಅವರ ಸನ್ಮಾನವನ್ನು ನಗುಮೊಗದಿಂದಲೇ ಭಾಸ್ಕರ್ ರಾವ್ ಸ್ವೀಕರಿಸಿದ್ದಾರೆ.

    ಸದ್ಯ ಶ್ರೀ ರಾಮಸೇನೆಯಲ್ಲಿ ಗುರುತಿಸಿಕೊಂಡಿರುವ ಯಶಸ್ವಿನಿ, ಈಗ ಕಮಿಷನರ್ ಗೆ ಸನ್ಮಾನ ಮಾಡಿದ ಫೊಟೊಗಳು ವೈರಲ್ ಆಗುತ್ತಿವೆ. ರೌಡಿಗಳಿಂದ ಸನ್ಮಾನ ಮಾಡಿಸಿಕೊಂಡ ಕಮೀಷನರ್ ಭಾಸ್ಕರ್ ರಾವ್ ನಡೆಗೆ ಆಕ್ರೋಶ ವ್ಯಕ್ತವಾಗಿದೆ.

  • ಮಾಜಿ ಸಚಿವ ಅಂಬರೀಶ್‍ಗೆ ಕೆ.ಸಿ ವೇಣುಗೋಪಾಲ್ ಖಡಕ್ ಸೂಚನೆ!

    ಮಾಜಿ ಸಚಿವ ಅಂಬರೀಶ್‍ಗೆ ಕೆ.ಸಿ ವೇಣುಗೋಪಾಲ್ ಖಡಕ್ ಸೂಚನೆ!

    ಬೆಂಗಳೂರು: ಮಾಜಿ ಸಚಿವ ಅಂಬರೀಶ್ ಅವರ ವರ್ತನೆಗೆ ಬ್ರೇಕ್ ಹಾಕಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಾತಿಗೂ ಸಿಗದೆ, ತಮ್ಮ ಅಭಿಪ್ರಾಯವನ್ನು ತಿಳಿಸದೆ ಸತಾಯಿಸುತ್ತಿರುವ ಅಂಬರೀಶ್ ವರ್ತನೆಯಿಂದ ಬೇಸತ್ತ ಕೆಪಿಸಿಸಿ ನಾಯಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಂಬರೀಶ್ ಅವರನ್ನ ಸಂಪರ್ಕ ಮಾಡಿದ ಕೆ.ಸಿ.ವೇಣುಗೋಪಾಲ್ ಭಾನುವಾರ ಸಂಜೆ ಒಳಗೆ ತಮ್ಮ ನಿರ್ಧಾರ ತಿಳಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಗೆ ಕಗ್ಗಂಟಾದ ಅಂಬರೀಶ್ ಮೌನ- `ಕೈ’ ಬಿಡ್ತಾರಾ ಮಂಡ್ಯದ ಗಂಡು!

    ಮಂಡ್ಯದಿಂದ ಸ್ಪರ್ಧೆ ಮಾಡುವುದಾದರೆ ಪಕ್ಷ ನಿಮಗೆ ಟಿಕೆಟ್ ನೀಡಲಿದೆ. ತಮಗೆ ಇಷ್ಟ ಇಲ್ಲದಿದ್ದರೆ ಬೇರೆ ಅಭ್ಯರ್ಥಿ ಆಯ್ಕೆಯನ್ನು ಪಕ್ಷ ಮಾಡಲಿದೆ. ಏಪ್ರಿಲ್ 9 ರಂದು ರಾಜ್ಯ ಕಾಂಗ್ರೆಸ್ ಚುನಾವಣಾ ಸಮಿತಿಯ ಕೊನೆಯ ಸಭೆ ನಡೆಯಲಿದೆ. ಅಷ್ಟರೊಳಗೆ ನಿಮ್ಮ ನಿರ್ಧಾರ ನಮಗೆ ತಿಳಿಸಿ. ನಿಮ್ಮ ಬದಲಿಗೆ ನೀವು ಸೂಚಿಸುವ ನಿಮ್ಮ ಆಪ್ತರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ. ನಿಮ್ಮನ್ನು ಬಿಟ್ಟು ಬೇರೆ ಯಾರಿಗೆ ಟಿಕೆಟ್ ನೀಡುವುದಾದರು ಜಿಲ್ಲೆಯ ಪಕ್ಷದ ಮುಖಂಡರುಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತೆ. ಆದ್ದರಿಂದ ತಮ್ಮ ಅಭಿಪ್ರಾಯವನ್ನ ನೇರವಾಗಿ ನನ್ನ ಬಳಿಯೆ ಹಂಚಿಕೊಳ್ಳಿ ಅಂತ ವೇಣುಗೋಪಾಲ್ ತಿಳಿಸಿದ್ದಾರೆಂದು ಹೇಳಲಾಗಿದೆ.

    ಭಾನುವಾರ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಅವರ ಬೃಹತ್ ಸಮಾವೇಶವಿದೆ. ಎರಡು ದಿನಗಳ ಕಾಲ ನಾನು ಬೆಂಗಳೂರಿನಲ್ಲಿ ಇರುತ್ತೇನೆ. ತಮ್ಮದು ಏನೇ ಅಭಿಪ್ರಾಯ ಇದ್ದರೂ, ಬಂದು ನನ್ನೊಂದಿಗೆ ಚರ್ಚಿಸಿ, ತೀರ್ಮಾನ ತಿಳಿಸಬೇಕು ಎಂದು ಖಡಕ್ ಸೂಚನೆ ನೀಡಿದ್ದು, ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷರಿಗೂ ಮಂಡ್ಯ ಜಿಲ್ಲಾ ನಾಯಕರ ಅಭಿಪ್ರಾಯ ಸಂಗ್ರಹಿಸಿ ವರದಿ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.