Tag: ಕೆ.ಸತ್ಯನಾರಾಯಣ

  • ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣಗೆ ಶ್ರದ್ಧಾಂಜಲಿ

    ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣಗೆ ಶ್ರದ್ಧಾಂಜಲಿ

    ಬೆಂಗಳೂರು: ಇಲ್ಲಿನ ಪ್ರೆಸ್‌ ಕ್ಲಬ್‌ ಸಭಾಂಗಣದಲ್ಲಿ ಹಿರಿಯ ಪತ್ರಕರ್ತರಾದ ಕೆ.ಸತ್ಯನಾರಾಯಣ (K.Sathyanarayana) ಅವರಿಗೆ ಶನಿವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶ್ರದ್ಧಾಂಜಲಿ ಸಭೆಯಲ್ಲಿ ಸಹದ್ಯೋಗಿಗಳು, ಹಿರಿಯ ಪತ್ರಕರ್ತರು, ಕುಟುಂಬದ ಸದಸ್ಯರು ಸತ್ಯನಾರಾಯಣ ಅವರನ್ನು ಸ್ಮರಿಸಿದರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ಪ್ರೆಸ್‌ ಕ್ಲಬ್‌ (Press Club Bengaluru), ಕರ್ನಾಟಕ ಮಾಧ್ಯಮ ಅಕಾಡೆಮಿ (Karnataka Media Academy), ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ಹಾಗೂ ಕೆ.ಸತ್ಯನಾರಾಯಣ ಅವರ ಅಭಿಮಾನಿಗಳ ಬಳಗ ಸಹಯೋಗದಲ್ಲಿ ಕೆ.ಸತ್ಯನಾರಾಯಣ ಅವರಿಗೆ ನುಡಿ ನಮನ ಸಲ್ಲಿಸಲಾಯಿತು. ಇದನ್ನೂ ಓದಿ: ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ನಿಧನಕ್ಕೆ ಗಣ್ಯರ ಸಂತಾಪ

    ಈ ವೇಳೆ ಮಾತನಾಡಿದ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಸತ್ಯನಾರಾಯಣ ಅವರನ್ನು ಇಳಿವಯಸ್ಸಿನಲ್ಲಿ ಶಿಷ್ಯ ವರ್ಗ ಪ್ರೀತಿಯಿಂದ ನೋಡಿಕೊಂಡಿದೆ ಎಂದು ನೆನಪಿಸಿಕೊಂಡರು.

    ನಮ್ಮನ್ನು ಅಗಲಿದ 40 ಹಿರಿಯ ಪತ್ರಕರ್ತರ ಬಗ್ಗೆ ಪುಸ್ತಕಗಳನ್ನು ಹೊರತರುತ್ತಿದ್ದೇವೆ. ಮುಂದಿನ ತಿಂಗಳು ಪುಸ್ತಕ ಬಿಡುಗಡೆ ಮಾಡಲಾಗುವುದು. ಸತ್ಯನಾರಾಯಣ ಅವರ ಜೀವನ ಚರಿತ್ರೆ ಪುಸ್ತಕವನ್ನು ಹೊರತರುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

    ಸತ್ಯನಾರಾಯಣ ಅವರ ಪುತ್ರಿ ಅಪೂರ್ವ ತಮ್ಮ ತಂದೆಯ ವ್ಯಕ್ತಿತ್ವ ಕುರಿತು ಮಾತನಾಡಿದರು. ಈಗಿನ ಮಕ್ಕಳು, ನಮ್ಮಪ್ಪ ನನಗೆ ಸೈಕಲ್‌ ತುಳಿಯುವುದನ್ನು ಹೇಳಿಕೊಟ್ರು. ಬೈಕ್‌ ಓಡಿಸೋದನ್ನು ಕಲಿಸಿಕೊಟ್ರು ಅಂತಾ ಹೇಳ್ತಾರೆ. ಆದರೆ ನಮ್ಮ ತಂದೆ ಬಜೆಟ್‌ ಕುರಿತು ಪ್ರಬಂಧ ಬರೆಯುವಾಗ, “ನೀನು ಬರಿ ಬಜೆಟ್‌ ನೋಡಿದರೆ ಸಾಲದು. ಆರ್ಥಿಕ ಸಮೀಕ್ಷೆಯನ್ನೂ ನೋಡಿಕೊಳ್ಳಬೇಕೆಂದು” ಸಲಹೆ ನೀಡಿದ್ದರು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಇದನ್ನೂ ಓದಿ: ಪಂಚಭೂತಗಳಲ್ಲಿ ಲೀನವಾದ ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ

    ಹಿರಿಯ ಪತ್ರಕರ್ತ ಡಿ.ಉಮಾಪತಿ ಮಾತನಾಡಿ, ಸತ್ಯ ಅವರು ಅಧಿಕಾರ ಕೇಂದ್ರಗಳಿಂದ ದೂರ ಇದ್ದವರು. ಅಧಿಕಾರ ಕೇಂದ್ರಗಳನ್ನು ಅತ್ಯಂತ ಅಸಡ್ಡೆಯಿಂದ ನೋಡಿದವರು. ಈಗ ಅಂತಹವರು ಬೆರಳೆಣಿಕೆಯಷ್ಟು ಮಂದಿ ಇದ್ದಾರೆ. ಅಧಿಕಾರ ಕೇಂದ್ರಗಳ ಕಣ್ಣು ಕೋರೈಸುವ ಪ್ರಭೆಯ ಮುಂದೆ ಪತ್ರಕರ್ತರಾದ ನಾವು ಕುರುಡಾಗಿದ್ದೇವೆ ಎಂದು ಹೇಳಿದರು.

    ನನ್ನ ಕೆಲಸ ಮುಗಿತಪ್ಪ ಅಂತಾ ಹೆಗಲಿಗೆ ಚೀಲ ಹಾಕಿಕೊಂಡು ಸತ್ಯನಾರಾಯಣ ಅವರು ಹೊರಟು ಹೋಗಿದ್ದಾರೆ. ಪತ್ರಿಕೆಗಳಲ್ಲಿ ಕೆಲಸ ಮಾಡುವುದೆಂದರೆ ಬೇರೆ ಉದ್ಯೋಗಗಳಂತೆ ಅಲ್ಲ ಎಂಬ ಪಾಠವನ್ನು ಅವರು ನಮಗೆ ಹೇಳಿಕೊಟ್ಟಿದ್ದಾರೆ ಎಂದು ಸ್ಮರಿಸಿದರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸತ್ಯನಾರಾಯಣರಂಥ ಹಿರಿಯರು ಸುದ್ದಿಮನೆಯಲ್ಲಿ ಹಾಕಿದ ಆದರ್ಶವನ್ನು ಕಾಪಿಟ್ಟುಕೊಂಡು ಹೋದರೆ ನಮಗೆ ಗೌರವ. ಸತ್ಯನಾರಾಯಣ ಅವರು ಆದರ್ಶದ ಬದುಕನ್ನು ಜೀವಿಸಿದ್ದಾರೆ ಎಂದು ಮಾತನಾಡಿದರು.

    ಬೆಂಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಆರ್‌.ಶ್ರೀಧರ್ ಮಾತನಾಡಿ, ಸತ್ಯನಾರಾಯಣ ಅವರು ಬರೆದ ವರದಿಗಳು, ಲೇಖನ ವಿರುದ್ಧವಾಗಿ ಯಾವ ಮಾತುಗಳು ಸಹ ಬರುತ್ತಿರಲಿಲ್ಲ. ಏಕೆಂದರೆ ಅವರು ಎಂದೂ ಅಸತ್ಯ ಬರೆದಿರಲಿಲ್ಲ. ಸತ್ಯವನ್ನು ಬರೆಯುತ್ತಾ ಪತ್ರಕರ್ತರಾಗಿದ್ದರು ಎಂದು ಬಣ್ಣಿಸಿದರು. ಇದನ್ನೂ ಓದಿ: ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ನಿಧನ

    ʼಪಬ್ಲಿಕ್‌ ಟಿವಿʼ ಮುಖ್ಯಸ್ಥರಾದ ಹೆಚ್‌.ಆರ್‌.ರಂಗನಾಥ್‌, ಕನ್ನಡಪ್ರಭ ಪತ್ರಿಕೆ ಸಂಪಾದಕರಾದ ರವಿ ಹೆಗಡೆ, ಹಿರಿಯ ಪತ್ರಕರ್ತ ಇಮ್ರಾನ್‌ ಕುರೇಶಿ,‌ ಬೆಂಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಆರ್‌.ಶ್ರೀಧರ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯಾಯ, ಹಿರಿಯ ಪತ್ರಕರ್ತರಾದ ನಾಗಮಣಿ, ಟಿ.ರಾಮಯ್ಯ, ಹಿರಿಯ ಸಾಹಿತಿ ವಿಜಯಮ್ಮ ಅವರು ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಂಚಭೂತಗಳಲ್ಲಿ ಲೀನವಾದ ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ

    ಪಂಚಭೂತಗಳಲ್ಲಿ ಲೀನವಾದ ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ

    ಬೆಂಗಳೂರು: ಹಿರಿಯ ಪತ್ರಕರ್ತ (Senior Journalist), ಕನ್ನಡಪ್ರಭ ಪತ್ರಿಕೆಯ ಮಾಜಿ ಸಂಪಾದಕರಾಗಿದ್ದ ಕೆ. ಸತ್ಯನಾರಾಯಣ (K Sathyanarayana) ಅವರ ಅಂತ್ಯಕ್ರಿಯೆ ಬೆಂಗಳೂರಿನ ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ಭಾನುವಾರ ನೆರವೇರಿತು.

    ಶ್ರೀಯುತರ ಪಾರ್ಥೀವ ಶರೀರವನ್ನು ಜಯನಗರ ನಿವಾಸದಿಂದ ಚಾಮರಾಜಪೇಟೆ ರುದ್ರಭೂಮಿಗೆ ತರಲಾಯ್ತು. ಬ್ರಾಹ್ಮಣ ಸಂಪ್ರದಾಯದಂತೆ ಸತ್ಯನಾರಾಯಣ ಅವರ ಅಣ್ಣನ ಮಗ ವಾಸುದೇವ್ ಅಂತಿಮ ವಿಧಿವಿಧಾನಗಳನ್ನ ನೆರವೇರಿಸಿದ್ರು. ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಸತ್ಯನಾರಾಯಣ ಅವ್ರು ಪಂಚಭೂತಗಳಲ್ಲಿ ಲೀನವಾದ್ರು. ಇದನ್ನೂ ಓದಿ: ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ನಿಧನಕ್ಕೆ ಗಣ್ಯರ ಸಂತಾಪ

    ಇದಕ್ಕೂ ಮುನ್ನ ಸಕಲ ಪೊಲೀಸ್ ಗೌರವಗಳೊಂದಿಗೆ ಶ್ರೀಯುತರಿಗೆ ಗೌರವ ಸಮರ್ಪಣೆ ಮಾಡಲಾಯ್ತು. ಸತ್ಯನಾರಾಯಣ ಅವರ ಪತ್ನಿ, ಮಗಳು, ಕುಟುಂಬಸ್ಥರು, ಶಿಷ್ಯಂದಿರು ಹಾಗೂ ಅಪಾರ ಪ್ರಮಾಣದ ಓದುಗ ಬಳಗವನ್ನ ಬಿಟ್ಟು ಇಹಲೋಕ ತ್ಯಜಿಸಿದ್ದಾರೆ. ಇದನ್ನೂ ಓದಿ: ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ನಿಧನ

    ಕೆ. ಸತ್ಯನಾರಾಯಣ ಅವರು ಭಾನುವಾರ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಜಯನಗರದ ಅದೇ ರೆಡ್ ಆಕ್ಸೈಡ್ ನೆಲವಿರುವ ಮನೆಯಲ್ಲಿ ವಾಸವಿದ್ದ ಅವರು ಆದರ್ಶ ಜೀವನ ನಡೆಸುತ್ತಿದ್ದರು. ಇಳಿವಯಸ್ಸಿನಲ್ಲೂ ವೆಂಕಮ್ಮ, ಸತ್ಯನಾರಾಯಣ ದಂಪತಿ ಸರಳ ಸಜ್ಜನಿಕೆಯಲ್ಲಿ ಆದರ್ಶಪ್ರಾಯವಾದ ಬದುಕು ಬದುಕುತ್ತಿದ್ದರು. ಕನ್ನಡದ ಹಲವು ಹೆಸರಾಂತ ಪತ್ರಕರ್ತರನ್ನ ಸತ್ಯನಾರಾಯಣ ಅವರು ಬೆಳೆಸಿದ್ದರು. ಸತ್ಯನಾರಾಯಣ ಅವರ ಮನೆಯಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪತ್ನಿ ವೆಂಕಮ್ಮ, ಮಗಳು ಅಪೂರ್ವರನ್ನು ಅಗಲಿದ್ದಾರೆ. ಸಾವಿನಲ್ಲೂ ನೇತ್ರದಾನ ಮಾಡುವ ಮೂಲಕ ಇಬ್ಬರ ಬಾಳಿಗೆ ಬೆಳಕಾಗಿದ್ದಾರೆ.

    ಶ್ರೀಯುತರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಪಬ್ಲಿಕ್ ಟಿ.ವಿ (Public TV) ಮುಖ್ಯಸ್ಥರಾದ ಹೆಚ್.ಆರ್. ರಂಗನಾಥ್ (HR Ranganath) ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • VIDEO: ಹಿರಿಯ ಪತ್ರಕರ್ತ ಸತ್ಯನಾರಾಯಣ ನಿಧನಕ್ಕೆ ʼಪಬ್ಲಿಕ್‌ ಟಿವಿʼ ಹೆಚ್‌.ಆರ್.ರಂಗನಾಥ್‌ ಸಂತಾಪ

    VIDEO: ಹಿರಿಯ ಪತ್ರಕರ್ತ ಸತ್ಯನಾರಾಯಣ ನಿಧನಕ್ಕೆ ʼಪಬ್ಲಿಕ್‌ ಟಿವಿʼ ಹೆಚ್‌.ಆರ್.ರಂಗನಾಥ್‌ ಸಂತಾಪ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ನಿಧನಕ್ಕೆ ಗಣ್ಯರ ಸಂತಾಪ

    ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ನಿಧನಕ್ಕೆ ಗಣ್ಯರ ಸಂತಾಪ

    ಬೆಂಗಳೂರು: ಕನ್ನಡಪ್ರಭ ದಿನಪತ್ರಿಕೆಯ ಸಂಪಾದಕರಾಗಿದ್ದ ಕೆ.ಸತ್ಯನಾರಾಯಣ (K Sathyanarayana) ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹಾಗೂ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

    ಸತ್ಯನಾರಾಯಣ ಅವರು ತಾಯಿನಾಡು ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿರಿಸಿ ಕನ್ನಡಪ್ರಭ ಪತ್ರಿಕೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ್ದರು. ಸತ್ಯನಾರಾಯಣ ಅವರು ಇಳಿವಯಸ್ಸಿನಲ್ಲೂ ಬರೆಯುತ್ತಿದ್ದ ಅಂಕಣಗಳ ಮೂಲಕ ಸಮಕಾಲೀನ ರಾಜಕೀಯ, ವಾಣಿಜ್ಯ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಿದ್ದರು. ಮೌಲ್ಯಾಧಾರಿತ ಪತ್ರಿಕೋದ್ಯಮದ ಸಂಕೇತವಾಗಿದ್ದ ಅವರು ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆಗಾಗಿ ಟಿ.ಎಸ್.ಆರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅವರ ನಿಧನ ಕನ್ನಡ ಪತ್ರಿಕೋದ್ಯಮಕ್ಕೆ ದೊಡ್ಡ ನಷ್ಟವಾಗಿದ್ದು, ಹಳೆ ತಲೆಮಾರಿನ ಪತ್ರಿಕೋದ್ಯಮದ ಕೊಂಡಿಯೊಂದು ಕಳಚಿಕೊಂಡತಾಗಿದೆ. ಶ್ರೀಯುತರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಪರಮಾತ್ಮ ಅವರ ಕುಟುಂಬದ ಸದಸ್ಯರಿಗೆ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ನಿಧನ

    ಪ್ರತಿಭೆ, ಬದ್ಧತೆ ಮತ್ತು ಕಸಬುಗಾರಿಕೆಗೆ ಹೆಸರಾದ ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ಅವರ ನಿಧನದಿಂದ ಬಹುಕಾಲದ ಆತ್ಮೀಯ ಸ್ನೇಹಿತರನ್ನು ಕಳೆದುಕೊಂಡಿದ್ದೇನೆ. ಸತ್ಯನಾರಾಯಣ ಅವರ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ‌ ಕೋರುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

    ಕನ್ನಡದ ಹಿರಿಯ ಪತ್ರಕರ್ತ (Senior Journalist) ಕೆ. ಸತ್ಯನಾರಾಯಣ ಅವರು ಭಾನುವಾರ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಇದನ್ನೂ ಓದಿ: 6ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ನಿಧನ

    ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ನಿಧನ

    ಬೆಂಗಳೂರು: ಕನ್ನಡದ ಹಿರಿಯ ಪತ್ರಕರ್ತ (Senior Journalist) ಕೆ. ಸತ್ಯನಾರಾಯಣ (K Sathyanarayana) ಅವರು ಭಾನುವಾರ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ.

    ಕನ್ನಡಪ್ರಭ ಪತ್ರಿಕೆಯ ಮಾಜಿ ಸಂಪಾದಕರಾಗಿದ್ದ ಕೆ. ಸತ್ಯನಾರಾಯಣ ಭಾನುವಾರ ಬೆಳಗ್ಗೆ ಜಯನಗರದ ಎಲ್‍ಐಸಿ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ತಾಯ್ನಾಡು ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿರಿಸಿದ ಅವರು, ಕನ್ನಡಪ್ರಭ ಪತ್ರಿಕೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಸುದೀರ್ಘ ಅವಧಿಗೆ ನಾನಾ ಹಂತದಲ್ಲಿ ದುಡಿದಿದ್ದಾರೆ. ತಮ್ಮ ಬದುಕನ್ನು ಸುದ್ದಿ ಮನೆಗೆ ಸಮರ್ಪಣೆ ಮಾಡಿದ ಹಿರಿಯ ಚೇತನ. ಇಳಿವಯಸ್ಸಿನಲ್ಲೂ ಅಂಕಣ ಬರೆಯುತ್ತಾ ತಮ್ಮೊಳಗಿನ ಪತ್ರಕರ್ತನನ್ನು ಜಾಗೃತವಾಗಿ ಕಾಪಿಟ್ಟುಕೊಂಡಿದ್ದರು. ಇದನ್ನೂ ಓದಿ: ಇಂದು ಕೂಡಲಸಂಗಮ, ಗೋಕರ್ಣದಲ್ಲಿ ಸಿದ್ದೇಶ್ವರ ಶ್ರೀ ಅಸ್ಥಿ ವಿಸರ್ಜನೆ

    ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುಲಲಿತ, ಸರಳವಾಗಿ ಬರೆಯುತ್ತಿದ್ದ ಅವರು ವಾಣಿಜ್ಯ, ವ್ಯವಹಾರ ವರದಿಗಾರಿಕೆಯಲ್ಲಿ ಪರಿಣಿತರಾಗಿದ್ದರು. ಬಜೆಟ್ ವರದಿಗಾರಿಕೆಯಲ್ಲಿ ಸತ್ಯನಾರಾಯಣ ಎತ್ತಿದ ಕೈ. ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿಯೂ ವರದಿಗಾರರಾಗಿ ಕೆಲಸ ಮಾಡಿದ್ರು. ಕನ್ನಡಪ್ರಭದಲ್ಲಿ ನಗರಪ್ರದಕ್ಷಿಣೆ, ವ್ಯಕ್ತಿ ವಿಚಾರ ಎಂಬ ಅಂಕಣ ಬರೆಯುತ್ತ ಜನಮನ ಗೆದ್ದಿದ್ದರು.

    ಜಯನಗರದ ಅದೇ ರೆಡ್ ಆಕ್ಸೈಡ್ ನೆಲವಿರುವ ಮನೆಯಲ್ಲಿ ವಾಸವಿದ್ದ ಅವರು ಆದರ್ಶ ಜೀವನ ನಡೆಸುತ್ತಿದ್ದರು. ಇಳಿವಯಸ್ಸಿನಲ್ಲೂ ವೆಂಕಮ್ಮ, ಸತ್ಯನಾರಾಯಣ ದಂಪತಿ ಸರಳ ಸಜ್ಜನಿಕೆಯಲ್ಲಿ ಆದರ್ಶಪ್ರಾಯವಾದ ಬದುಕು ಬದುಕುತ್ತಿದ್ದರು. ಕನ್ನಡದ ಹಲವು ಹೆಸರಾಂತ ಪತ್ರಕರ್ತರನ್ನು ಸತ್ಯನಾರಾಯಣ ಅವರು ಬೆಳೆಸಿದ್ದರು. ಸತ್ಯನಾರಾಯಣ ಅವರ ಮನೆಯಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಪತ್ನಿ ವೆಂಕಮ್ಮ, ಮಗಳು ಅಪೂರ್ವರನ್ನು ಅಗಲಿದ್ದಾರೆ. ಸಾವಿನಲ್ಲೂ ನೇತ್ರದಾನ ಮಾಡುವ ಮೂಲಕ ಇಬ್ಬರ ಬಾಳಿಗೆ ಬೆಳಕಾಗಿದ್ದಾರೆ.  ಇದನ್ನೂ ಓದಿ: ರಾಜಕೀಯದಲ್ಲಿ ರಾಡಿ ಎಬ್ಬಿಸಿದ ಸ್ಯಾಂಟ್ರೋ ರವಿ ಯಾರು? ಮಂಡ್ಯ ಟು ಬೆಂಗಳೂರು ಜರ್ನಿಯ ರೋಚಕ ಕಹಾನಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k