Tag: ಕೆ. ರಾಜು

  • ದಾರಿ ಮಧ್ಯೆ ಸಚಿವರ ಕಾರು ತಡೆದು ದೂರು ಕೊಟ್ಟ ಸನ್ಯಾಸಿನಿ- ವಿಡಿಯೋ ವೈರಲ್

    ದಾರಿ ಮಧ್ಯೆ ಸಚಿವರ ಕಾರು ತಡೆದು ದೂರು ಕೊಟ್ಟ ಸನ್ಯಾಸಿನಿ- ವಿಡಿಯೋ ವೈರಲ್

    ತಿರುವನಂತಪುರಂ: ಕ್ಯಾಥೋಲಿಕ್ ಸನ್ಯಾಸಿನಿಯೊಬ್ಬರು ಕೇರಳದ ಅರಣ್ಯ ಸಚಿವ ಕೆ. ರಾಜುರವರ ಕಾರನ್ನು ದಾರಿಯ ಮಧ್ಯದಲ್ಲೇ ಅಡ್ಡ ನಿಲ್ಲಿಸಿ ದೂರು ನೀಡಿದ್ದಾರೆ.

    ಪಾಲಕ್ಕಾಡು ಜಿಲ್ಲೆಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮಕ್ಕೆಂದು ಅರಣ್ಯ ಸಚಿವರಾದ ಕೆ. ರಾಜು ರವರು ಕಾರಿನಲ್ಲಿ ಹೋಗುತ್ತಿದ್ದರು. ಅವರೊಂದಿಗೆ ಹಲವು ಕಾರು ಮತ್ತು ಪೊಲೀಸ್ ವಾಹನಗಳು ತೆರಳುತಿತ್ತು. ಈ ವಾಹನಗಳ ಪೈಕಿ ಸಚಿವರ ಕಾರು ಬರುತ್ತಿದ್ದಂತೆ ಅಡ್ಡಗಟ್ಟಿದ್ದ ಸನ್ಯಾಸಿನಿ ದೂರು ನೀಡಿದ್ದಾರೆ.

    ಉತ್ತರ ಪಲಾಕ್ಕಾಡ್‍ನಲ್ಲಿರುವ ಕಾನ್ವೆಂಟ್ ಕ್ಯಾಂಪಸ್ ಆನೆಗಳ ದಾಳಿಯಿಂದ ನಾಶವಾಗಿದೆ ನೀವು ಕಾರಿನಿಂದ ಇಳಿದು ಬಂದು ನೋಡಬೇಕು. ಇವುಗಳ ದಾಳಿಯಿಂದ ನಮಗೆ ಬದುಕಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಏನಾದರೂ ಕ್ರಮಕೈಗೊಳ್ಳಬೇಕು ಎಂದು ಸಿಸ್ಟರ್ ಅರಣ್ಯ ಸಚಿವರಲ್ಲಿ ಮನವಿ ಮಾಡಿಕೊಂಡರು.

    ಈ ವೇಳೆ ಕಾರ್ಯಕ್ರಮದ ಉಸ್ತುವಾರಿಯನ್ನು ಹೊತ್ತ ವ್ಯಕ್ತಿಗಳು ಮತ್ತು ಪೊಲೀಸರು ಆಕೆಯನ್ನು ತಡೆದು ಕಾರ್ಯಕ್ರಮಕ್ಕೆ ಸಚಿವರು ಹಾಜರಾಗಬೇಕಿದೆ. ಬಳಿಕ ಸಮಸ್ಯೆ ಪರಿಹಾರ ನಡೆಸಲು ಕ್ರಮ ಕೈಗೊಳ್ಳುತ್ತಾರೆ ಎಂದು ಭರವಸೆ ನೀಡಿ ಆಕೆಯನ್ನು ಕಳುಹಿಸಿದ್ದಾರೆ. ಸದ್ಯ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://www.facebook.com/Attappady.in/videos/1992187084149072/