ಚೆನ್ನೈ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಸಚಿವ ಕೆ ಪೊನ್ಮುಡಿಗೆ (K Pondmudy) ಮದ್ರಾಸ್ ಹೈಕೋರ್ಟ್ (Madras Highcourt) ಗುರುವಾರ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಪ್ರಕಟಿಸಿದೆ.
1.75 ಕೋಟಿ ರೂ. ಅಕ್ರಮ ಆಸ್ತಿ ಪ್ರಕರಣದಲ್ಲಿ ಡಿಎಂಕೆ ನಾಯಕ ಮತ್ತು ಅವರ ಪತ್ನಿಯನ್ನು ದೋಷಿಗಳು ಎಂದು ಮದ್ರಾಸ್ ಹೈಕೋರ್ಟ್ ಎರಡು ದಿನಗಳ ಹಿಂದೆ ತೀರ್ಪು ನೀಡಿ ಇಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಿದೆ. ಈ ಆದೇಶದಿಂದ ತಮಿಳುನಾಡು ಸಿಎಂ ಸ್ಟಾಲಿನ್ (Stalin) ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ.
ಶಿಕ್ಷೆಯ ಜೊತೆಗೆ ದಂಪತಿಗೆ ತಲಾ 50 ಲಕ್ಷ ದಂಡವನ್ನೂ ವಿಧಿಸಲಾಗಿದೆ. ಸದ್ಯ ಪೊನ್ಮುಡಿಯ ಉನ್ನತ ಶಿಕ್ಷಣ ಖಾತೆಯನ್ನು ಅವರ ಸಹೋದ್ಯೋಗಿಗಳಿಗೆ ಹಸ್ತಾಂತರಿಸುವ ಸಾಧ್ಯತೆಗಳಿವೆ. ಕಾನೂನಿನಡಿಯಲ್ಲಿ, ಶಾಸಕಾಂಗ ವ್ಯವಸ್ಥೆಯ ಸದಸ್ಯರು ತಪ್ಪಿತಸ್ಥರಾದರೆ ಸಂಸತ್ತು ಅಥವಾ ವಿಧಾನಸಭೆಯಿಂದ ಅವರು ಅನರ್ಹರಾಗುತ್ತಾರೆ.
ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದ ಮರುದಿನವೇ ಪೊನ್ಮುಡಿಯವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ಮುಚ್ಚಿಡಲು ಏನೂ ಇಲ್ಲ, ಸಮನ್ಸ್ ರಾಜಕೀಯ ಪ್ರೇರಿತ: ಕೇಜ್ರಿವಾಲ್
1996ರಿಂದ 2001ರ ವರೆಗಿನ ಡಿಎಂಕೆ ಸರ್ಕಾರದಲ್ಲಿ ಪೊನ್ಮುಡಿ ಅವರು ರಾಜ್ಯ ಸಾರಿಗೆ ಸಚಿವರಾಗಿದ್ದ ಸಂದರ್ಭ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಪೊನ್ಮುಡಿ ಪ್ರಕರಣವು ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷವನ್ನು ಹೆಚ್ಚಿಸಿತ್ತು.
ನವದೆಹಲಿ: ಸನಾತನ ಧರ್ಮದ (Sanatana Dharma Row) ತತ್ವಗಳ ವಿರುದ್ಧ ಹೋರಾಡಲು ಇಂಡಿಯಾ (I.N.D.I.A) ಒಕ್ಕೂಟ ರಚಿಸಿದೆ. ನಮ್ಮ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಸನಾತನ ಧರ್ಮದ ವಿರುದ್ಧದ ಹೋರಾಟದಲ್ಲಿ 26 ಪಕ್ಷಗಳು ಒಂದಾಗಿವೆ. ಸನಾತನ ಧರ್ಮದ ವಿರುದ್ಧ ಹೋರಾಡಲು ರಾಜಕೀಯ ಶಕ್ತಿ ಬೇಕು. ಅದಕ್ಕಾಗಿ ಐಎನ್‌ಡಿಐಎ ಒಕ್ಕೂಟ ರಚಿಸಿದೆ ಎಂದು ಡಿಎಂಕೆ ಸರ್ಕಾರದ ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಡಿ (K.Ponmudy) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸನಾತನ ಧರ್ಮದ ವಿರುದ್ಧ ಡಿಎಂಕೆ ನಾಯಕರಾದ ಉದಯನಿಧಿ ಸ್ಟಾಲಿನ್, ಎ. ರಾಜಾ ನೀಡಿರುವ ಹೇಳಿಕೆಯಿಂದ ಐಎನ್‌ಡಿಐಎ ಒಕ್ಕೂಟದ ನಾಯಕರು ಅಂತರ ಕಾಯ್ದುಕೊಳ್ಳುತ್ತಿರುವ ಹೊತ್ತಲ್ಲಿ ಕೆ. ಪೊನ್ಮುಡಿ ಐಎನ್‌ಡಿಐಎ ಒಕ್ಕೂಟವನ್ನು ವಿವಾದದ ಒಳಗೆ ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ.
I.N.D.I Alliance की मुम्बई बैठक के दो दिन बाद उदयनिधि स्टालिन का बयान आना, फिर प्रियांक खड़गे का सनातन पर आघात और आज DMK के मंत्री द्वारा ये स्वीकार करना कि I.N.D.I Alliance का गठन ही सनातन धर्म के विरोध में किया गया था, यह सोनिया गांधी, राहुल और कांग्रेस की एक सोची समझी रणनीति…
ಸನಾತನ ಧರ್ಮ ನಿರ್ಮೂಲನೆ ಕಾರ್ಯಕ್ರದಲ್ಲಿ ಕೆ. ಪೊನ್ಮುಡಿ ಮಾತನಾಡಿರುವ ವೀಡಿಯೋ ವೈರಲ್ ಆಗಿದ್ದು, ವೀಡಿಯೋದಲ್ಲಿ ಈ ಸಮ್ಮೇಳನದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿದ ಸಂಘಟಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಸನಾತನ ಧರ್ಮವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಿ ಎಂದು ಕರೆದಿದ್ದಕ್ಕಾಗಿ ನಾನು ಸಂಘಟಕರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮತ್ತೊಂದು ವಿವಾದ – ಸನಾತನ ಧರ್ಮವನ್ನ HIV, ಕುಷ್ಠರೋಗಕ್ಕೆ ಹೋಲಿಸಿದ ಸಂಸದ ಎ. ರಾಜಾ
ಸನಾತನ ಧರ್ಮ ನಿರ್ಮೂಲನೆ ಮಾಡುವುದು ನಮ್ಮ ಮೊದಲ ಕೆಲಸವಾಗಬೇಕು. ಸನಾತನಂ ಎಂಬ ಹೆಸರು ಸಂಸ್ಕೃತದಿಂದ ಬಂದಿದೆ. ಸನಾತನಂ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಉದಯನಿಧಿ ಸ್ಟಾಲಿನ್ ಮಾತು ಉಲ್ಲೇಖಿಸಿ, ಸನಾತನ ಧರ್ಮವನ್ನು ಅನುಸರಿಸುತ್ತಿರುವ ಜನರ “ಜನಾಂಗೀಯ ಹತ್ಯೆಗೆ ಎಂದಿಗೂ ಕರೆ ನೀಡಲಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಡಿಎಂಕೆ ನಾಯಕನ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (J.P. Nadda) ತಿರುಗೇಟು ನೀಡಿದ್ದಾರೆ. ಐಎನ್‌ಡಿಐಎ ಒಕ್ಕೂಟ ಪಾಲುದಾರಾದ ಉದಯನಿಧಿ ಸ್ಟಾಲಿನ್ (Udayanidhi Stalin), ಪ್ರಿಯಾಂಕಾ ಖರ್ಗೆ (Priyank Kharge) ಹೇಳಿಕೆ ನೀಡಿದರು. ಸತಾತನ ಧರ್ಮದ ವಿರುದ್ಧ ಹೋರಾಡಲು ಒಕ್ಕೂಟ ರಚಿಸಿದೆ ಎಂದು ಕೆ. ಪೊನ್ಮುಡಿ ಹೇಳಿದ್ದಾರೆ. ಇದು ಕಾಂಗ್ರೆಸ್ (Congress), ಸೋನಿಯಾ ಗಾಂಧಿ (Sonia Gandhi), ರಾಹುಲ್ ಗಾಂಧಿ (Rahul Gandhi) ಅವರ ತಂತ್ರದ ಭಾಗವಾಗಿದೆ. ಈ ಹೇಳಿಕೆ ಬಗ್ಗೆ ಕಾಂಗ್ರೆಸ್ ಮತ್ತು ಐಎನ್‌ಡಿಐಎ ಒಕ್ಕೂಟ ತಮ್ಮ ಅಭಿಪ್ರಾಯ ಹೇಳಬೇಕು ಎಂದು ನಡ್ಡಾ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್ ತಲೆ ತಂದವರಿಗೆ 10 ಕೋಟಿ ಬಹುಮಾನ; ಅಯೋಧ್ಯೆಯ ಹಿಂದೂ ಧರ್ಮದರ್ಶಿ ಘೋಷಣೆ
ಯಾವುದೇ ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಲು ಸಂವಿಧಾನದಲ್ಲಿ ಹಕ್ಕು ಇದೆಯೇ ಎಂದು ಅವರಿಗೆ ತಿಳಿಸಬೇಕು. ಐಎನ್‌ಡಿಐಎ ಮೈತ್ರಿಕೂಟ, ಕಾಂಗ್ರೆಸ್, ಸೋನಿಯಾ ಮತ್ತು ರಾಹುಲ್ ಸನಾತನ ಧರ್ಮದ ವಿರುದ್ಧ ದ್ವೇಷದ ಸರಕುಗಳನ್ನು ಪ್ರೀತಿಯ ಅಂಗಡಿಯ ಹೆಸರಿನಲ್ಲಿ ಏಕೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಬೇಕು. ಈ ದ್ವೇಷದ ಮೆಗಾ ಮಾಲ್ ಕೇವಲ ಅಧಿಕಾರಕ್ಕಾಗಿ, ಒಡೆದು ಆಳುವುದಾಗಿದೆ ಎಂದು ಟಾಂಗ್ ಕೊಟ್ಟಿದ್ದಾರೆ.