Tag: ಕೆ.ಪಿ.ಶ್ರೀಕಾಂತ್

  • ಉಪೇಂದ್ರ ನಿರ್ದೇಶನದ ಹೊಸ ಚಿತ್ರಕ್ಕೆ ಜೂ.3 ರಂದು ಮುಹೂರ್ತ

    ಉಪೇಂದ್ರ ನಿರ್ದೇಶನದ ಹೊಸ ಚಿತ್ರಕ್ಕೆ ಜೂ.3 ರಂದು ಮುಹೂರ್ತ

    ಪ್ಪಿ 2 ಸಿನಿಮಾದ ನಂತರ ನಟ, ನಿರ್ದೇಶಕ ಉಪೇಂದ್ರ ಕೈಗೆತ್ತಿಕೊಂಡಿರುವ ಹೊಸ ಸಿನಿಮಾದ ಅಪ್ ಡೇಟ್ ಸಿಕ್ಕಿದೆ. ಈಗಾಗಲೇ ಹೊಸ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ರಿಲೀಸ್ ಮಾಡಿ, ಜನರ ತಲೆಗೆ ಹುಳು ಬಿಟ್ಟಿರುವ ಉಪೇಂದ್ರ ಅವರು ತಮ್ಮ ನಿರ್ದೇಶನದ ಹೊಸ ಸಿನಿಮಾದ ಮುಹೂರ್ತವನ್ನು ಜೂ.3ಕ್ಕೆ ಫಿಕ್ಸ್ ಮಾಡಿದ್ದಾರೆ. ಇದನ್ನೂ ಓದಿ : ‘ಧಾಕಡ್’ ಸೋಲಿಗೆ ಕಂಗೆಟ್ಟ ಕಂಗನಾ ರಣಾವತ್ : ವೀಕೆಂಡ್ ನಲ್ಲೂ ವೀಕ್ ಕಲೆಕ್ಷನ್

    ಈ ಹಿಂದೆ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿ, ಅದರಲ್ಲಿ ಟೈಟಲ್ ಕೂಡ ಅನಾವರಣಗೊಳಿಸಿದ್ದರು. ಅದರಲ್ಲಿ ಒಂದು ಟೈಟಲ್ ಕೂಡ ಬರೆದಿದ್ದರು. ಆದರೆ, ಆ ಟೈಟಲ್ ಏನು ಎನ್ನುವುದೇ ಒಂದು ನಿಗೂಢ ಚಿತ್ರಕಥೆಯಂತಿತ್ತು. ಈ ಹೊಸ ಸಿನಿಮಾದ ಟೈಟಲ್, ಕುದುರೆ ಲಾಳ ಎನ್ನಬೇಕೆ? ಮೂರು ನಾಮ ಎಂದು ತಿಳಿದುಕೊಳ್ಳಬೇಕೆ? ಅಥವಾ ಉಗುರಿನ ಮೇಲೆ ಮತದಾನದ ಇಂಕು ಹತ್ತಿರವ ಗುರುತು ಎಂದು ಕರೆಯಬೇಕೋ? ನಾವು ಏನು ಅಂದುಕೊಳ್ಳುತ್ತೆವೆಯೋ ಅದೇ ಸಿನಿಮಾದ ಟೈಟಲ್ ಎನ್ನುವಂತೆ ಶೀರ್ಷಿಕೆ ಇಟ್ಟಿದ್ದರು. ಇದನ್ನೂ ಓದಿ : ಶೀಘ್ರದಲ್ಲೇ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಸಿನಿಮಾ ಶುರು : ಯೋಗರಾಜ್ ಭಟ್ ನಿರ್ದೇಶಕ

    ಈಗಾಗಲೇ ಈ ಹೊಸ ಸಿನಿಮಾಗಾಗಿ ಒಂದಿಷ್ಟು ಆಡಿಷನ್ ಕೂಡ ನಡೆಸಿದ್ದು,  ಪಾತ್ರಗಳ ಆಯ್ಕೆಯನ್ನೂ ಮಾಡಿದ್ದಾರೆ. ಚಿಕ್ಕವರಿಂದ ವಯಸ್ಸಾದ ವ್ಯಕ್ತಿಗಳು ಈ ಸಿನಿಮಾಗಾಗಿ ಬೇಕಾಗಿದ್ದರಿಂದ ಹದಿನೈದು ದಿನಗಳ ಕಾಲ ಆಡಿಷನ್ ಮಾಡಿದ್ದಾರಂತೆ ನಿರ್ದೇಶಕರು. ನಟನೆಯ ಚಿತ್ರ ನಿರ್ದೇಶನವನ್ನೂ ಉಪೇಂದ್ರ ಅವರೇ ಮಾಡುತ್ತಿದ್ದು, ನಾಯಕಿ ಯಾರು ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಈಗಾಗಲೇ ನಾಯಕಿಯ ಆಯ್ಕೆ ಕೂಡ ಆಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ವೀಲ್‍ಚೇರ್ ರೋಮಿಯೋಗೆ ಮಯೂರಿ ಜೂಲಿಯಟ್ – ‘ಆ’ ಸವಾಲಿನ ಪಾತ್ರ ಒಪ್ಪಿಕೊಂಡಿದ್ದರ ಹಿಂದಿದೆ ಒಂದು ಕಥಾನಕ!

    ಲಹರಿ ಸಂಸ್ಥೆ ಮತ್ತು ಕೆ.ಪಿ.ಶ್ರೀಕಾಂತ್ ಈ ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದು, ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್ ಹೀಗೆ ಏಳು ಭಾಷೆಗಳಲ್ಲಿ ಈ ಚಿತ್ರ ಮೂಡಿ ಬರಲಿದೆ.

  • ಯಶ್ ನಟನೆಯ `ಕೆಜಿಎಫ್ 2′ ಚಿತ್ರ ನೋಡಲಿರುವ ಸೆಂಚ್ಯೂರಿ ಸ್ಟಾರ್ ಶಿವಣ್ಣ

    ಯಶ್ ನಟನೆಯ `ಕೆಜಿಎಫ್ 2′ ಚಿತ್ರ ನೋಡಲಿರುವ ಸೆಂಚ್ಯೂರಿ ಸ್ಟಾರ್ ಶಿವಣ್ಣ

    ವಿಶ್ವದೆಲ್ಲಡೆ ಸೌಂಡ್ ಮಾಡ್ತಿರೋ `ಕೆಜಿಎಫ್ 2′ ದಿನದಿಂದ ದಿನಕ್ಕೆ ಬಾಕ್ಸಾಫೀಸ್ ಕಲೆಕ್ಷನ್ ಜೋರಾಗಿದೆ. ಸಿನಿರಸಿಕರು ಮಾತ್ರ ಮೆಚ್ಚಿಕೊಂಡಿರೋದಲ್ಲ ಸೂಪರ್ ಸ್ಟಾರ್‌ಗಳು ಕೂಡ ಸಿನಿಮಾ ನೋಡಿ ಕೆಜಿಎಫ್ 2ಗೆಭೇಷ್ ಅಂದಿದ್ದಾರೆ.ಈಗ ರಾಕಿಭಾಯ್ ಚಿತ್ರ ನೋಡಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಥ್ ನೀಡಲಿದ್ದಾರೆ.

    ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಮತ್ತು ಯಶ್ ಡೆಡ್ಲಿ ಕಾಂಬಿನೇಷನ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇಡೀ ದೇಶವೇ ಹೊಗಳಿ ರಾಕಿಭಾಯ್‌ನ ಆರಾಧಿಸುತ್ತಿದ್ದಾರೆ. ಹೀಗಿರುವಾಗ ಸಿನಿಮಾಗಳ ಮಧ್ಯೆ ಸ್ವಲ್ಪ ಬಿಡಿವು ಮಾಡಿಕೊಂಡು ಇಂದು ಯಶ್ ಚಿತ್ರ ನೋಡ್ತಿದ್ದಾರೆ. ಇದನ್ನೂ ಓದಿ: ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಒಟ್ಟು ಆಸ್ತಿ 2300 ಕೋಟಿ: ಸಲ್ಲು ಅರಮನೆಯಲ್ಲಿ ಮಹಾರಾಣಿಯೇ ಇಲ್ಲ

    ಬೆಂಗಳೂರಿನ ಓರಾಯನ್ ಮಾಲ್‌ನಲ್ಲಿ ಇಂದು ಮಧ್ಯಾಹ್ನ `ಕೆಜಿಎಫ್ 2′ ಚಿತ್ರವನ್ನು ಥಿಯೇಟರ್‌ನಲ್ಲಿ ಪತ್ನಿ ಗೀತಾ ಜತೆ ಶಿವಣ್ಣ ನೋಡಲಿದ್ದಾರೆ. ಶಿವಣ್ಣ ದಂಪತಿಯ ಜೊತೆ ನಿರ್ಮಾಪಕ ಶ್ರೀಕಾಂತ್ ಸಾಥ್ ನೀಡಲಿದ್ದಾರೆ.

  • ಮಾರಿಗುಡ್ಡದ ಗಡ್ಡಧಾರಿಗೆ ಖಳನಟನೇ ನಾಯಕ

    ಮಾರಿಗುಡ್ಡದ ಗಡ್ಡಧಾರಿಗೆ ಖಳನಟನೇ ನಾಯಕ

    ನ್ನಡದ ಪ್ರತಿಭಾವಂತ ತಂಡವೊಂದು ’ಮಾರಿಗುಡ್ಡದ ಗಡ್ಡಧಾರಿಗಳು’ ಎನ್ನುವ ಚಿತ್ರವನ್ನು ಸಿದ್ದಪಡಿಸುತ್ತಿದ್ದಾರೆ. ಆದರೆ ರಾಜೀವ್‌ ಚಂದ್ರಕಾಂತ್ ಈ ಹಿಂದೆ ನಾಗಭರಣ ಅವರಲ್ಲಿ ಕೆಲಸ ಕಲಿತುಕೊಂಡು, ನಂತರ 75ಕ್ಕೂ ಹೆಚ್ಚು ಚಿತ್ರಗಳಿಗೆ ಪೋಸ್ಟರ್ ಡಿಸೈನ್ ಮಾಡಿದ ಅನುಭವ ಇದೆ. ಇದರಿಂದಲೇ ಸಿನಿಮಾಕ್ಕೆ ರಚನೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎಲ್ಲರೂ ನಾಯಕನಿಗೆ ಕಥೆ ಬರೆದರೆ, ಇವರು ಖಳನಾಯಕನ ಮೇಲೆ ಕಥೆಯನ್ನು ಬರೆದಿರುವುದು ವಿಶೇಷ. ’ಸಲಗ’ದಲ್ಲಿ ಸೂರಿಯಣ್ಣ ಪಾತ್ರ ನಿರ್ವಹಿಸಿ ಗುರುತಿಸಿಕೊಂಡಿದ್ದ ದಿನೇಶ್‌ಕುಮಾರ್.ಡಿ ಖತರ್‌ನಾಕ್ ಖಳನಾಯಕನಾಗಿ ಹುಲಿಯಾ ಹೆಸರಿನಲ್ಲಿ ಕಾಣಿಸಿಕೊಳ್ಳುವ ಜತೆಗೆ ಡಿಜೆ ಪ್ರಕಾಶ್ ಸಿನಿ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಇದನ್ನೂ ಓದಿ:  ಕೊನೆಗೂ ಮದುವೆಯ ವಿಚಾರ ಖಚಿತಪಡಿಸಿದ ಆಲಿಯಾ!

    ರಾಮಾಪುರ ಎಂಬ ಊರು, ಮಜ್ಜೇನಹಳ್ಳಿ ಎನ್ನುವ ಪಟ್ಟಣದಲ್ಲಿ 1990ರಂದು ನಡೆಯುವ ಕಾಲ್ಪನಿಕ ಘಟನೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಎಂಟು ಗಡ್ಡಧಾರಿಗಳ ಸುತ್ತ ಸಾಗುವ ಪಯಣದಲ್ಲಿ ಏರುಪೇರು ಉಂಟಾಗುತ್ತದೆ. ಅದು ಏನೆಂಬುದನ್ನು ಕುತೂಹಲದ ಮೂಲಕ ತೋರಿಸಲಾಗುವುದು. ಇದನ್ನೂ ಓದಿ: ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾ

    ತಾರಗಣದಲ್ಲಿ ಪ್ರವೀಣ್, ನಂಜುಂಡ, ಗೌಡನಾಗಿ ಅವಿನಾಶ್, ನಾಯಕನ ತಂದೆಯಾಗಿ ರಮೇಶ್‌ಭಟ್, ಇನ್ಸ್‌ಪೆಕ್ಟರ್ ಆಗಿ ಗಣೇಶ್‌ರಾವ್, ಬೆನಕ ನಂಜಪ್ಪ, ಪ್ರಶಾಂತ್‌ಸಿದ್ದಿ ಮುಂತಾದವರು ಅಭಿನಯಿಸುತ್ತಿದ್ದಾರೆ. ನಾಯಕಿ ಸದ್ಯದಲ್ಲೆ ಆಯ್ಕೆಯಾಗಲಿದ್ದಾರೆ. ನಾಲ್ಕು ಹಾಡುಗಳಿಗೆ ಸಂಗೀತ ಕೆ.ಎಂ.ಇಂದ್ರ, ಛಾಯಾಗ್ರಹಣ ವೀರೇಶ್, ಸಾಹಸ ಪಳನಿ, ನೃತ್ಯ ಮೋಹನ್ ಅವರದಾಗಿದೆ. ಏಪ್ರಿಲ್ 10ರಿಂದ ಕೋಲಾರ, ಕೆಜಿಎಫ್ ಸ್ಥಳಗಳಲ್ಲಿ 35 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ. ಬಂಡಿ ಕಾಳಮ್ಮ ದೇವಸ್ಥಾನದಲ್ಲಿ ನಡೆದ ಮಹೂರ್ತ ಸಮಾರಂಭದಲ್ಲಿ ’ಟಗರು”ಸಲಗ’ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಉಪಸ್ಥಿತರಿದ್ದರು.

  • ಉಪೇಂದ್ರ ಹೊಸ ಸಿನಿಮಾ ಮಾಡಲು ಸ್ಟಾರ್ ನಟಿ ನಯನತಾರಾ ಕಾರಣ : ಏನಿದು ಅಸಲಿ ಗುಟ್ಟು?

    ಉಪೇಂದ್ರ ಹೊಸ ಸಿನಿಮಾ ಮಾಡಲು ಸ್ಟಾರ್ ನಟಿ ನಯನತಾರಾ ಕಾರಣ : ಏನಿದು ಅಸಲಿ ಗುಟ್ಟು?

    ನೆನ್ನೆಯಷ್ಟೇ ಹೊಸ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿ, ಸ್ಯಾಂಡಲ್ ವುಡ್ ಪ್ರತಿಭಾನ್ವಿತ ತಲೆಗಳಿಗೆ ಹುಳ ಬಿಟ್ಟಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ. ಬಿಡುಗಡೆ ಆಗಿರುವ ಪೋಸ್ಟರ್ ಚಂದನವನದಲ್ಲಿ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪೋಸ್ಟರ್ ಕುರಿತು ಹೇಳುತ್ತಿದ್ದಾರೆ. ಆದರೆ, ಉಪ್ಪಿ ಮಾತ್ರ ತಲೆ ಕೆಡಿಸಿಕೊಂಡಿಲ್ಲ. ತಮ್ಮ ಪಾಡಿಗೆ ತಾವು ನಗ್ತಾ ಸಿನಿಮಾದ ಶೂಟಿಂಗೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ : ಸಮಂತಾ ಯಾಕಿಂಗ್ ಆದೆ? ಗರಂ ಆದ ಅಭಿಮಾನಿಗಳು

    ಹೊಸ ಸಿನಿಮಾದ ಟೈಟಲ್ ಇಂಥದ್ದೇ ಅಂತ ಹೇಳುವುದು ಕಷ್ಟವಾದರೂ, ಸದ್ಯಕ್ಕೆ ‘ಯುಐ’ ಎಂದು ಹೇಳುವ ಆ ಸಿನಿಮಾ ಹುಟ್ಟಿಗೆ ಕಾರಣ ದಕ್ಷಿಣದ ಖ್ಯಾತ ನಟಿ ನಯನತಾರಾ ಎನ್ನುವುದು ವಿಶೇಷ. ಉಪೇಂದ್ರ ಜತೆ ಉಪ್ಪಿ 2 ಚಿತ್ರದಲ್ಲಿ ನಟಿಸಿದ್ದ ನಯನತಾರಾ, ಇಂಥದ್ದೊಂದು ಸಿನಿಮಾ ಹುಟ್ಟಿಗೆ ಕಾರಣವಾಗಿದ್ದನ್ನು ಸ್ವತಃ ಉಪೇಂದ್ರ ಅವರೇ ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಸಿನಿಮಾ: ಕ್ಷಮೆ ಕೋರಿದ ಪ್ರಕಾಶ್ ಬೆಳವಾಡಿ

    “ಸಿನಿಮಾದ ಎಳೆ ನನ್ನನ್ನು ತುಂಬಾ ಕಾಡುತ್ತಿತ್ತು. ಉಪ್ಪಿ 2 ಸಿನಿಮಾದ ಶೂಟಿಂಗ್ ವೇಳೆ ಅದನ್ನು ನಯನತಾರಾ ಅವರ ಬಳಿ ಹೇಳಿಕೊಂಡೆ. ಇಂತಹ ಥಾಟ್ಸ್ ನಿಮ್ಮಲ್ಲಿಯೇ ಉಳಿಯಬಾರದು, ಅದನ್ನು ಜನರಿಗೂ ನೀವು ಹೇಳಬೇಕು ಅಂತ ಒತ್ತಾಯಿಸಿದರು. ಅಲ್ಲಿಂದಲೇ ಈ ಎಳೆಯ ಮೇಲೆ ಸೀರಿಯಸ್ ಆಗಿ ವರ್ಕ್ ಮಾಡೋಕೆ ಶುರು ಮಾಡಿದೆ’ ಎಂದಿದ್ದಾರೆ ಉಪೇಂದ್ರ. ಇದನ್ನೂ ಓದಿ : ‘ಪುಷ್ಪ ಪಾರ್ಟ್ 10’ ಸಿನಿಮಾಗೆ ನಟ ಮಾಸ್ಟರ್ ಆನಂದ್ ಮಗಳು ಹೀರೋಯಿನ್

    ಉಪೇಂದ್ರ ಮತ್ತು ನಯನತಾರ ಒಂದೇ ರೀತಿಯಲ್ಲಿ ಯೋಚಿಸುವಂಥವರು. ಈ ಜೋಡಿಯ ಸಿನಿಮಾ ಕೂಡ ಸಾಕಷ್ಟು ಸದ್ದು ಮಾಡಿತ್ತು. ಹಾಗಾಗಿ ಹೊಸ ಸಿನಿಮಾದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಮೇ ತಿಂಗಳಲ್ಲಿ ಈ ಸಿನಿಮಾದ ಶೂಟಿಂಗ್ ಶುರುವಾಗಲಿದ್ದು, ಅಷ್ಟರಲ್ಲಿ ಕಲಾವಿದರ ಆಯ್ಕೆಯನ್ನೂ ಮಾಡಿಕೊಳ್ಳುತ್ತಾರಂತೆ ಉಪೇಂದ್ರ. ಇದನ್ನೂ ಓದಿ : ಪುನೀತ್ ಹುಟ್ಟುಹಬ್ಬಕ್ಕೆ ಹೊಸ ಸಾಂಗ್: ಒಂದಾಯಿತು ‘ಗೊಂಬೆ ಹೇಳತೈತೆ’ ಕಾಂಬಿನೇಷನ್

    ಲಹರಿ ಫಿಲ್ಮ್ಸ್ ಲಾಂಛನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಕೆ.ಪಿ.ಶ್ರೀಕಾಂತ್ ಕೂಡ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

  • ಕಿಕ್ ಕೊಡ್ತಿದೆ ‘ಸೂರಿ ಅಣ್ಣನ’ ಹಾಡು

    ಕಿಕ್ ಕೊಡ್ತಿದೆ ‘ಸೂರಿ ಅಣ್ಣನ’ ಹಾಡು

    ಸ್ಯಾಂಡಲ್‍ವುಡ್ ನಲ್ಲಿ ಸಖತ್ ಕ್ರೇಜ್ ಹುಟ್ಟಿಸಿರೋ ಸಿನಿಮಾ ಸಲಗ. ದುನಿಯಾ ವಿಜಿ ನಿರ್ದೇಶಿಸಿ ನಟಿಸುತ್ತಿರುವ ಈ ಚಿತ್ರದ ಫಸ್ಟ್ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಂಗ್ ರಿಲೀಸ್ ಮಾಡಿದ್ದಾರೆ. ಸದ್ಯ ‘ಸೂರಿ ಅಣ್ಣ’ ಹಾಡು ಸೆನ್ಸೇಷನಲ್ ಕ್ರಿಯೇಟ್ ಮಾಡಿದ್ದು ಸಖತ್ ಕಿಕ್ ಕೊಡುತ್ತಿದೆ. ಟಗರು ಚಿತ್ರದ ಟೈಟಲ್ ಟ್ರ್ಯಾಕ್ ಹಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಆಂಟೋನಿ ದಾಸ್ ‘ಸೂರಿ ಅಣ್ಣ’ ಸಾಂಗ್ ಗೆ ಧ್ವನಿಯಾಗಿ ಮತ್ತೆ ಸ್ಯಾಂಡಲ್‍ವುಡ್ ನಲ್ಲಿ ಮನೆ ಮಾತಾಗಿದ್ದಾರೆ.

    ಟಗರು ಖ್ಯಾತಿಯ ಚರಣ್ ರಾಜ್ ಮಾಸ್ ಮ್ಯೂಸಿಕ್ ಮತ್ತೆ ಮ್ಯಾಜಿಕ್ ಕ್ರಿಯೇಟ್. ಅಲ್ಲದೇ ಚರಣ್ ರಾಜ್ ಹಾಗೂ ಆಂಟೋನಿ ದಾಸ್ ಕಾಂಬಿನೇಷನ್ ಮತ್ತೊಂದು ಹಿಟ್ ಸಾಂಗ್ ನೀಡುವಲ್ಲಿ ಯಶಸ್ವಿಯಾಗಿದೆ.

    ‘ಸಲಗ’ ಮೂಲಕ ನಿರ್ದೇಶಕನಾಗಿ ಬಡ್ತಿ ಹೊಂದಿರುವ ಬ್ಲ್ಯಾಕ್ ಕೋಬ್ರಾ ಮೇಕಿಂಗ್ ನಲ್ಲಿ ತಮ್ಮ ನಿರ್ದೇಶನದ ಝಲಕ್ ತೋರಿಸಿದ್ರು. ಈಗ ಚಿತ್ರದ ಹಾಡು ಕೂಡ ಹಿಟ್ ಆಗಿದ್ದು ಮೊದಲ ನಿರ್ದೇಶನದಲ್ಲೆ ಜಯಭೇರಿ ಬಾರಿಸೋ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಒಟ್ನಲ್ಲಿ ಚಿತ್ರಕ್ಕೆ ಹುಟ್ಟಿರೋ ಕ್ರೇಜ್ ನೋಡಿ ವಿಜಿ ಅಭಿಮಾನಿಗಳು ಹಾಗೂ ಚಿತ್ರತಂಡ ಸಖತ್ ಥ್ರಿಲ್ ಆಗಿದ್ದಾರೆ.

    ಟಗರು ಖ್ಯಾತಿಯ ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಸಂಜನಾ ಆನಂದ್ ನಾಯಕಿಯಾಗಿ ವಿಜಿ ಜೊತೆ ಸ್ಕೀನ್ ಶೇರ್ ಮಾಡಿದ್ದಾರೆ. ಫಸ್ಟ್ ಲುಕ್, ಮೇಕಿಂಗ್ ಮತ್ತು ಹಾಡುಗಳು ಮೂಲಕ ಬಝ್ ಕ್ರಿಯೇಟ್ ಮಾಡಿರೋ ಸಲಗ ಸದ್ಯದಲ್ಲೆ ಟೀಸರ್, ಟ್ರೇಲರ್ ಮೂಲಕ ಮಾಸ್ ಪ್ರಿಯರ ಮನತಣಿಸಲಿದೆ.

  • ಘೀಳಿಡಲು ಸಜ್ಜಾದ ಸಲಗ ಗೆಲ್ಲುವ ಸೂಚನೆ!

    ಘೀಳಿಡಲು ಸಜ್ಜಾದ ಸಲಗ ಗೆಲ್ಲುವ ಸೂಚನೆ!

    ಬೆಂಗಳೂರು: ದುನಿಯಾ ವಿಜಯ್ ಅಭಿನಯಿಸಿ ನಿರ್ದೇಶನವನ್ನೂ ಮಾಡುತ್ತಿರೋ ಚಿತ್ರ ಸಲಗ. ಬಂಡಿಮಾಕಾಳಮ್ಮ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನಡೆಯೋ ಮೂಲಕ ಈ ಸಿನಿಮಾಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಸಲಗ ಎಂಬುದೇ ಪಕ್ಕಾ ಮಾಸ್ ಟೈಟಲ್. ದುನಿಯಾ ವಿಜಯ್ ಮೊದಲ ಹೆಜ್ಜೆಯಲ್ಲಿ ನಿರ್ದೇಶಕರಾಗಿ ಈ ಚಿತ್ರವನ್ನ ಹೇಗೆ ಸಂಭಾಳಿಸಲಿದ್ದಾರೆ, ಇದರ ಕಥೆ ಎಂಥಾದ್ದೆಂಬುದೂ ಸೇರಿದಂತೆ ಪ್ರೇಕ್ಷಕರಲ್ಲಿರೋ ಕುತೂಹಲ ಒಂದೆರಡಲ್ಲ. ಸಲಗ ಪ್ರೇಕ್ಷಕರ ನಡುವೆ ಈ ಪಾಟಿ ಘೀಳಿಟ್ಟು ಸದ್ದು ಮಾಡುತ್ತಿರೋದಕ್ಕೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರೋದು ಕೆ.ಪಿ ಶ್ರೀಕಾಂತ್ ಅನ್ನೋದೂ ಕೂಡಾ ಕಾರಣ!

    ಕೆಪಿ ಶ್ರೀಕಾಂತ್ ಹಿಟ್ ಸಿನಿಮಾ ನಿರ್ಮಾಪಕರೆಂದೇ ಖ್ಯಾತರಾಗಿರುವವರು. ಸಿನಿಮಾವನ್ನು ವ್ಯವಹಾರದಾಚೆಗೆ ಪ್ರೀತಿಸುವ ಅವರು ಕಥೆಗೆ ಎಲ್ಲ ಕೋನದಿಂದಲೂ ಕಸುವಿದೆ ಅಂತ ಗೊತ್ತಾಗದೆ ಯಾವ ಚಿತ್ರವನ್ನೂ ನಿರ್ಮಾಣ ಮಾಡಲು ಮುಂದಾಗುವವರಲ್ಲ. ಹೆಚ್ಚೂಕಮ್ಮಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಚಿತ್ರರಂಗದ ಭಾಗವಾಗಿರುವ ಶ್ರೀಕಾಂತ್ ಬತ್ತಳಿಕೆಯಲ್ಲಿ ಈ ಮಾತಿಗೆ ಪೂರಕವಾದ ವಿಚಾರಗಳೇ ಇವೆ. ಇಂಥಾ ಶ್ರೀಕಾಂತ್ ಮತ್ತು ದುನಿಯಾ ವಿಜಯ್ ಸಲಗದ ಮೂಲಕ ಭಾರೀ ಯಶಸ್ಸೊಂದನ್ನು ತಮ್ಮದಾಗಿಸಿಕೊಳ್ಳಲಿದ್ದಾರೆಂಬ ಸೂಚನೆಗಳೇ ಎಲ್ಲ ದಿಕ್ಕಿನಿಂದಲೂ ಕಾಣಿಸುತ್ತಿವೆ.

    ಸಲಗ ಆರಂಭದಲ್ಲಿಯೇ ಎಂಥಾ ಸೆನ್ಸೇಷನ್ ಕ್ರಿಯೇಟ್ ಮಾಡಿದೆ ಅನ್ನೋದಕ್ಕೆ ಚಿತ್ರರಂಗದ ಗಣ್ಯರ ಪ್ರತಿಕ್ರಿಯೆಗಳಿಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಯುವ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿರೋ ವಿಜಯ್ ಸೇರಿದಂತೆ ಇಡೀ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ. ತರುಣ್ ಸುಧೀರ್ ಕೂಡಾ ತಮ್ಮ ಬಹುಕಾಲದ ಗೆಳೆಯನ ಈ ಸಾಹಸಕ್ಕೆ ಶುಭ ಕೋರಿದ್ದಾರೆ. ಕಾರ್ತಿಕ್ ಗೌಡ, ರಿಯಲ್ ಸ್ಟಾರ್ ಉಪೇಂದ್ರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕರು ಸಲಗಕ್ಕೆ ಶುಭ ಕೋರಿದ್ದಾರೆ.

    ಇದು ಸಲಗ ಚಿತ್ರದ ಬಗ್ಗೆ ತಾನೇ ತಾನಾಗಿ ಹುಟ್ಟಿಕೊಂಡಿರೋ ಪಾಸಿಟಿವ್ ವಾತಾವರಣ. ದುನಿಯಾ ವಿಜಯ್ ಅವರೇನು ಏಕಾಏಕಿ ನಿರ್ದೇಶಕರಾಗಿ ಅವತರಿಸಿಲ್ಲ. ನಿರ್ದೇಶನಕ್ಕೆ ಬೇಕಾಗುವಂಥಾ ಎಲ್ಲ ಪಟ್ಟುಗಳನ್ನೂ ಕರಗತ ಮಾಡಿಕೊಂಡು ಎಲ್ಲದರಲ್ಲಿಯೂ ಪಕ್ಕಾ ಅನ್ನಿಸಿದ ನಂತರವಷ್ಟೇ ಅಖಾಡಕ್ಕಿಳಿದಿದ್ದಾರೆ. ವಿಜಯ್ ಅವರ ಇಂಥಾ ಶ್ರದ್ಧೆಯ ಯಾನಕ್ಕೆ ನಿರ್ಮಾಪಕ ಕೆ ಪಿ ಶ್ರೀಕಾಂತ್ ಕೂಡಾ ಸಾಥ್ ನೀಡಿದ್ದಾರೆ. ಇವರಿಬ್ಬರ ಕಾಂಬಿನೇಷನ್ನಿನಲ್ಲಿ ಕನ್ನಡ ಚಿತ್ರರಂಗದಲ್ಲೊಂದು ಮೈಲಿಗಲ್ಲೆನ್ನಬಹುದಾದ ಕಮಾಲ್ ನಡೆಯೋ ಲಕ್ಷಣಗಳೇ ಎಲ್ಲೆಡೆ ದಟ್ಟೈಸಿದೆ.