Tag: ಕೆ. ಎಸ್‌ ರವಿಕುಮಾರ್‌

  • ಯಶ್‍ ಸಿನಿಮಾಗಾಗಿ ನನ್ನ ಬಳಿ ಕಥೆ ಇದೆ : ತಮಿಳು ಖ್ಯಾತ ನಿರ್ದೇಶಕ ಮಾತು

    ಯಶ್‍ ಸಿನಿಮಾಗಾಗಿ ನನ್ನ ಬಳಿ ಕಥೆ ಇದೆ : ತಮಿಳು ಖ್ಯಾತ ನಿರ್ದೇಶಕ ಮಾತು

    ಜನಿಕಾಂತ್ ಸೇರಿದಂತೆ ಸಾಕಷ್ಟು ಸ್ಟಾರ್ ನಟರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ಕೆ.ಎಸ್ ರವಿಕುಮಾರ್ ಕುಮಾರ್‍, ಇದೀಗ ಯಶ್ ಸಿನಿಮಾ ಕುರಿತಂತೆ ಮಾತನಾಡಿದ್ದಾರೆ. ಯಶ್ ಗೆ ಒಪ್ಪುವಂಥ ಕಥೆಯು ನನ್ನ ಬಳಿ ಇದ್ದು, ಅವರು ಒಪ್ಪಿದೆ ಅವರಿಗಾಗಿ ಸಿನಿಮಾ ಮಾಡುವುದಾಗಿ ಅವರು ಹೇಳಿದ್ದಾರೆ. ಈ ವಿಷಯ ಯಶ್ ಕಿವಿಗೆ ಬಿದ್ದು, ರವಿಕುಮಾರ್ (KS Ravikumar) ಮತ್ತು ಯಶ್ ಮೀಟ್ ಮಾಡ್ತಾರಾ ಕಾದು ನೋಡಬೇಕು.

    ಯಶ್ ಸದ್ಯ ಟಾಕ್ಸಿಕ್ (Toxic) ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಕುರಿತಂತೆ ದಿನಕ್ಕೊಂದು ಸುದ್ದಿ ಬರುತ್ತಿವೆ. ಟಾಕ್ಸಿಕ್ ಸಿನಿಮಾಗೆ ಮತ್ತೋರ್ವ ಸ್ಟಾರ್ ನಟಿ ಎಂಟ್ರಿ ಆಗಲಿದೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ನಯನತಾರಾ (Nayanthara) ಅವರು ಎರಡನೇ ಬಾರಿ ಕನ್ನಡ ಸಿನಿಮಾ ರಂಗಕ್ಕೆ ಬರಲಿದ್ದಾರೆ. ಈ ಹಿಂದೆ ಅವರು ಉಪೇಂದ್ರ ನಟನೆಯ ಚಿತ್ರದಲ್ಲಿ ನಟಿಸಿದ್ದರು. ಇದೀಗ ಟಾಕ್ಸಿಕ್ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ.

    ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ (Kareena Kapoor) ನಟಿಸಲಿದ್ದಾರೆ ಎಂದು ಸುದ್ದಿ ಆಗಿತ್ತು. ಯಶ್ ಈ ಸಿನಿಮಾದ ನಾಯಕ, ಗೀತಾ ಮೋಹನ್ ದಾಸ್ ನಿರ್ದೇಶಕಿ, ಯಶ್ ಮತ್ತು ಕೆವಿಎನ್ ಪ್ರೊಡಕ್ಷನ್ ನಿರ್ಮಾಪಕರು ಎನ್ನುವ ವಿಷಯದ ಹೊರತಾಗಿ  ಮತ್ತೊಂದು ಮಾಹಿತಿಯನ್ನೂ ಚಿತ್ರತಂಡ ಹಂಚಿಕೊಂಡಿರಲಿಲ್ಲ. ಆದರೂ, ಹಲವು ವಿಷಯಗಳು ಹರಿದಾಡುತ್ತಲೇ ಇದ್ದವು.

     

    ಬಾಲಿವುಡ್ ನ ಬಹುಬೇಡಿಕೆ ನಟಿ ಈ ಸಿನಿಮಾದ ನಾಯಕಿಯಾಗಲಿದ್ದಾರೆ ಎನ್ನುವುದರ ಜೊತೆಗೆ ಕರೀನಾ ಕಪೂರ್ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂದು ಬಿಟೌನ್ ಮಾತನಾಡಿಕೊಂಡಿತ್ತು. ಇದ್ಯಾವುದೋ ಅಧಿಕೃತ ಮಾಹಿತಿ ಆಗಿರಲಿಲ್ಲ. ಆದರೂ, ಸುದ್ದಿಯಂತೂ ಭರ್ಜರಿ ಸೇಲ್ ಆಗಿತ್ತು. ಈಗ ಕರೀನಾ ಸಿನಿಮಾದಲ್ಲಿ ಇರಲ್ಲ ಎನ್ನುವ ಮತ್ತೊಂದು ಸುದ್ದಿ ಇದೆ. ಯಶ್ ಅವರ ಸಹೋದರಿಯಾಗಿ ಈ ಸಿನಿಮಾದಲ್ಲಿ ಕರೀನಾ ನಟಿಸಬೇಕಿತ್ತು. ಆದರೆ, ಡೇಟ್ ಹೊಂದಾಣಿಕೆಯ ಕಾರಣದಿಂದಾಗಿ ಅವರು ಚಿತ್ರದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ. ಒಡಹುಟ್ಟಿದವರ ಕಥೆಯನ್ನು ಇದು ಒಳಗೊಂಡಿದ್ದರಿಂದ ಯಶ್ ಅವರ ಸರಿಸಮಾನಾಗಿ ಡೇಟ್ ಬೇಕಿತ್ತಂತೆ. ಆದರೆ, ಅಷ್ಟೊಂದು ಸಮಯ ಕರೀನಾ ಬಳಿ ಇಲ್ಲವಂತೆ.

  • ಶಿವಣ್ಣ-ಗಣೇಶ್ ನಟನೆಯ ಚಿತ್ರಕ್ಕೆ ಸ್ಟಾರ್ ನಿರ್ದೇಶಕನ ಎಂಟ್ರಿ

    ಶಿವಣ್ಣ-ಗಣೇಶ್ ನಟನೆಯ ಚಿತ್ರಕ್ಕೆ ಸ್ಟಾರ್ ನಿರ್ದೇಶಕನ ಎಂಟ್ರಿ

    ನ್ನಡದಲ್ಲಿ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ ಸದ್ದಿಲ್ಲದೇ ರೂಪುಗೊಳ್ಳುತ್ತಿದೆ. ಮೊನ್ನೆಯಷ್ಟೇ ಶಿವರಾಜ್ ಕುಮಾರ್ (Shivaraj Kumar) ಮತ್ತು ಗಣೇಶ್ (Ganesh) ಕಾಂಬಿನೇಷನ್ ಸಿನಿಮಾ ಬಗ್ಗೆ ಪಬ್ಲಿಕ್ ಟಿವಿ ಡಿಜಿಟಲ್ ಎಕ್ಸ್ ಕ್ಲೂಸಿವ್ ಸುದ್ದಿ ನೀಡಿತ್ತು. ಇದೀಗ ಆ ಚಿತ್ರಕ್ಕೆ ಸ್ಟಾರ್ ನಿರ್ದೇಶಕರೊಬ್ಬರ ಎಂಟ್ರಿಯಾಗಿದೆ. ಈಗಾಗಲೇ ಆ ನಿರ್ದೇಶಕರು ಇಬ್ಬರೂ ನಟರನ್ನು ಭೇಟಿ ಮಾಡಿ ಮಾತುಕತೆ ಕೂಡ ನಡೆಸಿದ್ದಾರೆ ಎನ್ನುವುದಕ್ಕೆ ಫೋಟೋವೊಂದು ಸಾಕ್ಷಿಯಾಗಿದೆ.

    ಶಿವರಾಜ್ ಕುಮಾರ್ ಜೊತೆ ಈಗಾಗಲೇ ಹಲವು ಸ್ಟಾರ್ ಗಳು ನಟಿಸಿದ್ದಾರೆ. ಉಪೇಂದ್ರ, ಸುದೀಪ್, ರವಿಚಂದ್ರನ್ ಸೇರಿದಂತೆ ಹಲವು ಕಲಾವಿದರು ತೆರೆ ಹಂಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಶಿವಣ್ಣ ಜೊತೆ ಗಣೇಶ್ ಸೇರಿಕೊಂಡಿದ್ದಾರೆ. ಹೀಗಾಗಿ ಈ ಚಿತ್ರಕ್ಕೆ ಮಹತ್ವ ಬಂದಿದೆ. ಅಲ್ಲದೇ ಈ ಸಿನಿಮಾಗೆ ನಿರ್ದೇಶಕರು ಯಾರಿರಬಹುದು ಎನ್ನುವ ಕುತೂಹಲ ಕೂಡ ಮೂಡಿದೆ. ಇದೀಗ ಕುತೂಹಲಕ್ಕೆ ತೆರೆ ಬಿದ್ದಿದೆ. ಇದನ್ನೂ ಓದಿ: ಪಾಕಿಸ್ತಾನದ ಡಿಸೈನರ್ ವಿನ್ಯಾಸ ಮಾಡಿದ ಲೆಹೆಂಗಾದಲ್ಲಿ ಕಂಗೊಳಿಸಿದ ಸ್ವರಾ ಭಾಸ್ಕರ್

    ತಮಿಳಿನಲ್ಲಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿರುವ ಮತ್ತು ರಜನಿಕಾಂತ್ ಜೊತೆ ಹಲವಾರು ಸಿನಿಮಾಗಳನ್ನು ಮಾಡಿರುವ ಕೆ.ಎಸ್.ರವಿಕುಮಾರ್ (KS Ravikumar) ಮತ್ತೆ ಕನ್ನಡ ಸಿನಿಮಾ ರಂಗಕ್ಕೆ ಬರುತ್ತಿದ್ದಾರೆ. ಈ ಹಿಂದೆ ಅವರು ಸುದೀಪ್ ನಟನೆಯ ಕೋಟಿಗೊಬ್ಬ 2 ಸಿನಿಮಾಗೆ ನಿರ್ದೇಶನವನ್ನು ಮಾಡಿದ್ದರು. ಇದೀಗ ಶಿವಣ್ಣ ಮತ್ತು ಗಣೇಶ್ ಕಾಂಬಿನೇಷನ್ ಚಿತ್ರಕ್ಕೆ ಇವರೇ ನಿರ್ದೇಶಕರು ಎಂದು ಹೇಳಲಾಗುತ್ತಿದೆ.

    ನಿರ್ಮಾಪಕ ಸೂರಪ್ಪ ಬಾಬು (Surappa Babu) ಜೊತೆ ಶಿವರಾಜ್ ಕುಮಾರ್, ಗಣೇಶ್ ಮತ್ತು ರವಿಕುಮಾರ್ ಕಾಣಿಸಿಕೊಂಡ ಫೋಟೋ ವೈರಲ್ ಆಗಿದ್ದು, ಇವರೇ ಈ ಸಿನಿಮಾದ ನಿರ್ದೇಶಕರು ಎಂದು ಹೇಳಲಾಗುತ್ತಿದೆ. ಚಿತ್ರತಂಡ ಅಧಿಕೃತವಾಗಿ ಯಾವುದೇ ಮಾಹಿತಿ ನೀಡದೇ ಇದ್ದರು, ವೈರಲ್ ಆಗಿರುವ ಫೋಟೋ ಎಲ್ಲವನ್ನೂ ಹೇಳುವಂತಿದೆ.

  • ‌Exclusive:ಮತ್ತೊಂದು ಮಲ್ಟಿಸ್ಟಾರ್‌ ಸಿನಿಮಾದಲ್ಲಿ ಹ್ಯಾಟ್ರಿಕ್‌ ಹೀರೋ

    ‌Exclusive:ಮತ್ತೊಂದು ಮಲ್ಟಿಸ್ಟಾರ್‌ ಸಿನಿಮಾದಲ್ಲಿ ಹ್ಯಾಟ್ರಿಕ್‌ ಹೀರೋ

    ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ (Shivarajkumar) ದಿನದಿಂದ ದಿನಕ್ಕೆ ಅವರ ಡಿಮ್ಯಾಂಡ್ ಹೆಚ್ಚಾಗುತ್ತಲೇ ಇದೆ. `ಕಬ್ಜ’ (Kabzaa) ಮಲ್ಟಿಸ್ಟಾರ್ ಸಿನಿಮಾ (Multistar Film) ರಿಲೀಸ್‌ಗೆ ಇರುವ ಬೆನ್ನಲ್ಲೇ ಮತ್ತೊಂದು ಹೊಸ ಮಲ್ಟಿಸ್ಟಾರ್ ಮೂವಿಗೆ ಶಿವಣ್ಣ ಗ್ರೀನ್ ಸಿಗ್ನಲ್ ನೀಡಿದ್ದಾರೆ. ʻಕಬ್ಜʼಗಾಗಿ ಕಾಯುತ್ತಿದ್ದ ಫ್ಯಾನ್ಸ್‌ಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಕಂಗೊಳಿಸಿದ ದೀಪಿಕಾ ಪಡುಕೋಣೆ

    ವಯಸ್ಸು 60 ಆದರೂ ಶಿವಣ್ಣ ಅವರ ಎನರ್ಜಿಯನ್ನ ಮೀರಿಸುವವರು ಯಾರಿಲ್ಲ. ಸದಾ ಸಿನಿಮಾಗಳ ಮೂಲಕ ಸೌಂಡ್ ಮಾಡುವ ಶಿವಣ್ಣ, ಇತ್ತೀಚಿಗೆ ಉಪ್ಪಿ- ಕಿಚ್ಚ ಸುದೀಪ್ (Kiccha Sudeep) ಜೊತೆ `ಕಬ್ಜ’ (Kabzaa) ಎಂಬ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ತೆರೆಗೆ ಬರುವ ಮುನ್ನವೇ ಹೊಸ ಸಿನಿಮಾ ಮೂಲಕ ಶಿವಣ್ಣ ಸೌಂಡ್ ಮಾಡ್ತಿದ್ದಾರೆ.

    ನಟ ಶಿವಣ್ಣ ಇದೀಗ ಕನ್ನಡದಲ್ಲಿ ಮಾತ್ರವಲ್ಲ ಪರಭಾಷೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸೌತ್ ಸಿನಿಮಾಗಳಲ್ಲಿಯೂ ಕೂಡ ಬ್ಯುಸಿಯಿರುವ ಶಿವಣ್ಣ, ಈಗ ಗೋಲ್ಡನ್ ಸ್ಟಾರ್ ಜೊತೆ ಕೈಜೋಡಿಸಿದ್ದಾರೆ. ಹೌದು.. ನಟ ಗಣೇಶ್ – ಶಿವಣ್ಣ ಕಾಂಬಿನೇಷನ್‌ನಲ್ಲಿ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ ತಯಾರಾಗುತ್ತಿದೆ.

    ತಮಿಳಿನ (Tamil) ನಿರ್ದೇಶಕ ಕೆ.ಎಸ್ ರವಿಕುಮಾರ್ (K.s Ravikumar) ಅವರು ಗಣಿ- ಶಿವಣ್ಣ ಅವರಿಗೆ ನಿರ್ದೇಶನ ಮಾಡ್ತಿದ್ದಾರೆ. ವಿಭಿನ್ನ ಕಥೆಯಲ್ಲಿ ಈ ಇಬ್ಬರು ಸ್ಟಾರ್ಸ್ ತೆರೆಹಂಚಿಕೊಳ್ತಿದ್ದಾರೆ. ಸೂರಪ್ಪ ಬಾಬು ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ. ಇದು ದೊಡ್ಡ ಬಜೆಟ್‌ನಲ್ಲಿ ಚಿತ್ರ ನಿರ್ಮಾಣವಾಗ್ತಿದೆ. ಜುಲೈನಲ್ಲಿ ಸಿನಿಮಾ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ.

    ಶೃತಿ ರಿಪ್ಪನ್‌ಪೇಟೆ, ಪಬ್ಲಿಕ್‌ ಟಿವಿ ಡಿಜಿಟಲ್‌