Tag: ಕೆ.ಎಸ್.ಈಶ್ವರಪ್ಪ

  • ಕುರುಬ ಸಮುದಾಯವನ್ನ ಎಸ್ಟಿಗೆ ಸೇರ್ಪಡೆ ಮಾಡಬೇಕು: ಕೆ.ಎಸ್.ಈಶ್ವರಪ್ಪ

    ಕುರುಬ ಸಮುದಾಯವನ್ನ ಎಸ್ಟಿಗೆ ಸೇರ್ಪಡೆ ಮಾಡಬೇಕು: ಕೆ.ಎಸ್.ಈಶ್ವರಪ್ಪ

    ಬೆಂಗಳೂರು: ಕುರುಬ ಸಮುದಾಯವನ್ನ (Kuruba Community) ಎಸ್ಟಿಗೆ (ST) ಸೇರ್ಪಡೆ ಮಾಡಬೇಕು ಎಂದು ಮಾಜಿ ಡಿಸಿಎಂ ಈಶ್ವರಪ್ಪ (K.S.Eshwarappa) ಒತ್ತಾಯಿಸಿದರು.

    ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬ ಸಮುದಾಯ ತೀರಾ ಬಡ ಸಮುದಾಯ. ಕುಲ ಶಾಸ್ತ್ರೀಯ ಅಧ್ಯಯನವೂ ಇದನ್ನ ಹೇಳಿದೆ. ನಮ್ಮ ಮೀಸಲಾತಿಗಾಗಿ ಈ ಹಿಂದೆ ದೊಡ್ಡ ಹೋರಾಟ ಮಾಡಿದ್ದೇವೆ. ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ನಾವು ಹೋರಾಟ ಮಾಡಿದ್ವಿ. ಅದರ ಫಲವಾಗಿ ಅಂದಿದ್ದ ಬೊಮ್ಮಾಯಿ ಮತ್ತು ಈಗಿರೋ ಸಿದ್ದರಾಮಯ್ಯ ಸರ್ಕಾರ ಈ ಶಿಫಾರಸನ್ನ ಕೇಂದ್ರಕ್ಕೆ ಕಳುಹಿಸಿದ್ರು. ಕೇಂದ್ರ ಏನು ಮಾಡುತ್ತೆ ಅನ್ನೋದು ಈಗ ವಿಚಾರ. ಅವರು ಇದಕ್ಕೆ ಗಮನ ಕೊಡಬೇಕು ಅಂತ ಬಯಸುತ್ತಿದ್ದೇವೆ ಎಂದರು. ಇದನ್ನೂ ಓದಿ: ಛಲವಾದಿ, ಈಶ್ವರಪ್ಪಗೆ ನೀಡಿದ್ದ ಭದ್ರತೆ ವಾಪಸ್ ಪಡೆದ ಸರ್ಕಾರ

    ನಮ್ಮ ಬೇಡಿಕೆ ಹೊಸದಲ್ಲ. ಬಿಟ್ಟು ಹೋಗಿರುವ ನಮ್ಮ ಸಮುದಾಯವನ್ನ ಸೇರಿಸಿ ಅನ್ನೋದು ಮನವಿ. ದೆಹಲಿಯಲ್ಲಿ ನಮ್ಮ ಸ್ವಾಮೀಜಿಗಳ ಜೊತೆ ತೆರಳಿ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೆವು. ಈಗಲೂ ಅದೇ ಮನವಿ ಮಾಡುತ್ತೇವೆ. ಅ.24 ರಂದು ವಿಜಯಪುರದಲ್ಲಿ ಸಭೆ ನಡೆಸಲಿದ್ದೇವೆ. ಸಮುದಾಯದ ಪ್ರಮುಖರು ಅದರಲ್ಲಿ ಭಾಗವಹಿಸಿ ಉಳಿದ ತೀರ್ಮಾನ ತೆಗೆದುಕೊಳ್ತೇವೆ ಎಂದು ತಿಳಿಸಿದರು.

    ನಾನು ಎಸ್‌ಟಿ ಹೋರಾಟಕ್ಕೆ ಬೆಂಬಲ ಕೊಡ್ತೀನಿ ಅಥವಾ ಇಲ್ಲ ಅನ್ನೋದನ್ನ ಸಿದ್ದರಾಮಯ್ಯ ಹೇಳಲಿ. ವಿಚಾರದ ಸ್ಪಷ್ಟತೆ ಮುಖ್ಯ. ಕುರುಬ ಸಮುದಾಯ ಇಲ್ಲದಿದ್ದಿದ್ರೆ ಅವರು ಆ ಸ್ಥಾನಕ್ಕೆ ಬರ್ತಿರಲಿಲ್ಲ. ಅವರು 2021 ರಲ್ಲೇ ನಮ್ಮ ಸಮುದಾಯದ ಸ್ವಾಮಿಗಳು ಕರೆದಾಗಲೇ ಹೋರಾಟಕ್ಕೆ ಬರಲ್ಲ ಅಂದಿದ್ರು. ಸಮುದಾಯದ ಜನ ಸಭೆಯಲ್ಲಿ ಭಾಗವಹಿಸುವಂತೆ ಅಪೇಕ್ಷೆ ಮಾಡಿದ್ದಾರೆ. ಮೊನ್ನೆ ಮೊನ್ನೆ ಕಾರ್ಯಕ್ರಮ ಒಂದರಲ್ಲಿ ನಾನು ಕುರುಬ ಮೀಸಲಾತಿ ಹೋರಾಟ ಮಾಡಿಲ್ಲ. ಹೋರಾಟ ಮಾಡಿದ್ದು, ಈಶ್ವರಪ್ಪ ಅಂದ್ರು. ಅವರು ಯಾಕೆ ಹೀಗಂದ್ರು ಅನ್ನೋದನ್ನ ಅವರೇ ಹೇಳಬೇಕು. ಸಿದ್ದರಾಮಯ್ಯ ಈ ಬಗ್ಗೆ ಸ್ಪಷ್ಟತೆ ಕೊಡಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಡಿ.ಕೆ.ಶಿವಕುಮಾರ್‌ಗೆ ಸ್ವಲ್ಪ ದಿನವಾದ್ರೂ ಕಾಂಗ್ರೆಸ್ ಹೈಕಮಾಂಡ್ ಸಿಎಂ ಸ್ಥಾನ ಕೊಡಬೇಕು: ಹೆಚ್.ವಿಶ್ವನಾಥ್

    ಮಾಜಿ ಸಚಿವ ಹೆಚ್.ವಿಶ್ವನಾಥ ಮಾತಾಡಿ, ಮೀಸಲಾತಿ ದೇಶ ಹಾಗೂ ರಾಜ್ಯದಲ್ಲಿ ದೊಡ್ಡ ಸಮಸ್ಯೆ ರೀತಿ ಆಗಿದೆ. ಎಲ್ಲರೂ ಮೀಸಲಾತಿ ಕೇಳುವ ಸ್ಥಿತಿ ಎದುರಾಗಿದೆ. ಬ್ರಿಟಿಷರ ಕಾಲದಿಂದಲೂ ಮೀಸಲಾತಿ ಹಲವು ರೀತಿ ಸಿಗುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಕುರುಬ ಸಮುದಾಯದ ನಾವೂ ಮೀಸಲಾತಿಗೆ ಆಗ್ರಹಿಸುತ್ತಿದ್ದೇವೆ. ನಮ್ಮ ಸಮುದಾಯದ ಹಿಂದಿನ ಸ್ಥಿತಿಗತಿಗಳನ್ನ ಈಗಾಗಲೇ ಗುರುತಿಸಲಾಗಿದೆ. ಕೊಡಗಿನಲ್ಲಿ ಕುರುಬರಿಗೆ ಮೀಸಲಾತಿ ದೊರೆಯುತ್ತಿದೆ. ಇದಕ್ಕೆ ಮಿತಿಯನ್ನ ಹಾಕಲಾಗಿದೆ. ಈ ಮಿತಿಯನ್ನ ತೆಗೆದು ರಾಜ್ಯಾದ್ಯಂತ ವಿಸ್ತರಿಸಲು ಮನವಿ ಮಾಡ್ತಿದ್ದೇವೆ ಎಂದು ಹೇಳಿದರು.

  • ಕುಟುಂಬ ರಾಜಕಾರಣದ ಬಗ್ಗೆ ಮಾತಾಡಿದ್ದು ಮುಗೀತು, ನನ್ನ ಜೀವ ಇರೋದೇ ಬಿಜೆಪಿಯಲ್ಲಿ, ಮತ್ತೆ ಹೋಗ್ತೀನಿ: ಈಶ್ವರಪ್ಪ

    ಕುಟುಂಬ ರಾಜಕಾರಣದ ಬಗ್ಗೆ ಮಾತಾಡಿದ್ದು ಮುಗೀತು, ನನ್ನ ಜೀವ ಇರೋದೇ ಬಿಜೆಪಿಯಲ್ಲಿ, ಮತ್ತೆ ಹೋಗ್ತೀನಿ: ಈಶ್ವರಪ್ಪ

    – ಸಿದ್ದರಾಮಯ್ಯ ಸಂಪುಟದಿಂದ ಕಾಂಗ್ರೆಸ್‌ ಸೇರ್ಪಡೆಗೆ ಆಫರ್‌ ಬಂದಿತ್ತು; ಮಾಜಿ ಡಿಸಿಎಂ
    – ಯಡಿಯೂರಪ್ಪ ಕುಟುಂಬದ ಬಗ್ಗೆ ಈಶ್ವರಪ್ಪ ಸಾಫ್ಟ್‌ ಕಾರ್ನರ್

    ಬಳ್ಳಾರಿ: ಬಿಜೆಪಿ ಬಿಟ್ಟು ಬೇರೆ ಯಾವ ಪಕ್ಷಕ್ಕೂ ಹೋಗಲ್ಲ, ಬಿಜೆಪಿಗೆ ಹೋಗೇ ಹೋಗ್ತೇನೆ ಎಂದು ಬಳ್ಳಾರಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (KS Eshwarappa) ಹೇಳಿದ್ರು.

    ನಿನ್ನೆ ನಡೆದ ಕುರುಬ ಸಮುದಾಯದ ಬಿಜೆಪಿ ನಾಯಕರ (BJP Leaders) ಸಭೆಯಲ್ಲಿನ ಒತ್ತಾಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಜೀವ ಇರೋದೇ ಬಿಜೆಪಿಯಲ್ಲಿ. ನೊಡೋಣ, ಕೆಲವರು ಹಿರಿಯರಲ್ಲಿ ಮಾತಮಾಡಬೇಕು. ಕುಳಿತು ಚರ್ಚೆ ಮಾಡೋಣ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ಕುರುಬ ಸಮುದಾಯದ ನಾಯಕರ ಸಭೆ; ವಿಜಯೇಂದ್ರ‌ ಪರ ಬ್ಯಾಟಿಂಗ್ – ಈಶ್ವರಪ್ಪ ಘರ್ ವಾಪ್ಸಿ ಬಗ್ಗೆ ಚರ್ಚೆ

    ಬೇರೆ ಪಕ್ಷದಿಂದ ಆಫರ್ ಬಂದಿತ್ತು. ಸಿದ್ದರಾಮಯ್ಯ (Siddaramaiah) ಸಚಿವ ಸಂಪುಟದ ಸಚಿವರು ಕರೆದಿದ್ರು. ನಿಮಗೆ, ನಿಮ್ಮ ಮಗನಿಗೆ ಸ್ಥಾನ ಮಾನ ಕೊಡ್ತೇವೆ ಎಂದ್ರು. ಅಖಿಲೇಶ್ ಯಾದವ್ ಕೂಡ ಕರೆದಿದ್ರು. ನಾನು ಹಿಂದುತ್ವ, ಸತ್ರೂ ಹಿಂದುತ್ವ. ಬಿಜೆಪಿ ಇವತ್ತು ನಿನ್ನೆಯ ಪಕ್ಷ ಅಲ್ಲ. ಯಡಿಯೂರಪ್ಪ (BS Yediyurappa), ಅನಂತ್ ಕುಮಾರ್ ನಾನು ಸೇರಿ ಹಲವು ಹಿರಿಯರು ರಾಜ್ಯದಲ್ಲಿ ಪಕ್ಷ ಕಟ್ಟಿದ್ವಿ. ಅದಕ್ಕೂ ಮುಂಚೆ ಹಲವರು ರಕ್ತ ಸುರಿಸಿ ಪಕ್ಷ ಕಟ್ಟಿದ್ದಾರೆ. ಗ್ರಾಮ ಪಂಚಾಯ್ತಿ, ಕಾರ್ಪೋರೇಷನ್ ಎಲೆಕ್ಷನ್ ಮಾಡೋದಕ್ಕೂ ಜನ ಇರಲಿಲ್ಲ. ಅಂತ ಸಂದರ್ಭದಲ್ಲಿ ಪಕ್ಷ ಕಟ್ಟಿದ್ದೇವೆ ಎಂದು ಬಿಜೆಪಿ ಗುಣಗಾನ ಮಾಡಿದರು.

    ಪಕ್ಷಕ್ಕೆ ನನ್ನನ್ನು ಯಾರೋ ಕರೀಬೇಕು, ಕರೀಬಾರದು ಅಂತಾ ಅಲ್ಲ ಹಿರಿಯರು ಚರ್ಚೆ ಮಾಡ್ತಾರೆ. ನನ್ನ ಪಕ್ಷಕ್ಕೆ ಕರೆದುಕೊಳ್ಳುವಲ್ಲಿ ಬಿಜೆಪಿ ಯಾಕೆ ಎಚ್ಚೆತ್ತುಕೊಂಡಿಲ್ಲ ಅಂತಾ ನಾನು ಹೇಳಲ್ಲ ಎಂದ ಅವರು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದು ಮುಗಿತು. ಅದರ ಬಗ್ಗೆ ನಾನು ಇನ್ನು ಮೇಲೆ ಮಾತಾಡೋದಿಲ್ಲ ಎಂದರು. ಇದನ್ನೂ ಓದಿ: ರೈಲ್ವೆ ಯೋಜನೆಗಳಿಗೆ ಹಣ ಕೊಡದ ರಾಜ್ಯ ಸರ್ಕಾರ – ಬಿಜೆಪಿ ನಾಯಕರಿಂದ ತೀವ್ರ ಟೀಕೆ

    ಈಗ ಕರ್ನಾಟಕದಲ್ಲಿ ಪಾರ್ಟಿ ಸ್ವಲ್ಪ ಕುಸಿದಿದ್ದು, ಪಕ್ಷ ಕಟ್ಟಬೇಕಿದೆ ಎಂದು ಯಡಿಯೂರಪ್ಪ ಕುಟುಂಬದ ಬಗ್ಗೆ ಸಾಫ್ಟ್‌ ಕಾರ್ನರ್ ತೋರಿಸಿದ್ರು. ಇದನ್ನೂ ಓದಿ: ಪುರಿ ಕಾಲ್ತುಳಿತದಲ್ಲಿ ಮೂವರ ಸಾವು ಪ್ರಕರಣ – ಸಂತ್ರಸ್ತರ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ

  • ಆಪರೇಷನ್ ಸಿಂಧೂರದ ಬಗ್ಗೆ ಟೀಕೆ ಮಾಡುವವರಿಗೆ ಗುಂಡು ಹೊಡಿಬೇಕು: ಕೆ.ಎಸ್ ಈಶ್ವರಪ್ಪ

    ಆಪರೇಷನ್ ಸಿಂಧೂರದ ಬಗ್ಗೆ ಟೀಕೆ ಮಾಡುವವರಿಗೆ ಗುಂಡು ಹೊಡಿಬೇಕು: ಕೆ.ಎಸ್ ಈಶ್ವರಪ್ಪ

    – ಪಾಕಿಸ್ತಾನದ ಪರ ಮರಿ ಖರ್ಗೆ ಇದ್ದಾರೆ

    ವಿಜಯಪುರ: ಆಪರೇಷನ್ ಸಿಂಧೂರದ(OPeration Sindoor) ಬಗ್ಗೆ ಟೀಕೆ ಮಾಡುವವರಿಗೆ ಗುಂಡು ಹೊಡಿಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್  ಈಶ್ವರಪ್ಪ(K S Eshwarappa) ಕಿಡಿಕಾರಿದರು.

    ವಿಜಯಪುರದಲ್ಲಿ(Vijayapura) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ(Priyank Kharge), ಸಂತೋಷ್ ಲಾಡ್, ಕೊತ್ತೂರು ಮಂಜುನಾಥ್, ದಿನೇಶ್ ಗುಂಡೂರಾವ್‌ಗೆ ಗುಂಡು ಹೊಡೆಯಬೇಕು. ಇವರಿಗೆಲ್ಲಾ ಗುಂಡು ಹಾಕಿದರೆ ಮಾತ್ರ ಸರಿ ಹೋಗುತ್ತದೆ. ಇವರೆಲ್ಲಾ ದೇಶದ್ರೋಹಿಗಳು, ಇಂತಹ ದೇಶದ್ರೋಹಿಗಳಿಗೆ ಗುಂಡು ಹಾಕಬೇಕು. ಎಷ್ಟು ವಿಮಾನ ಪತನ ಆದವು ಎಂದು ಯುದ್ಧದ ಬಗ್ಗೆ ಸಾಕ್ಷಿ ಕೇಳ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಾಧನಾ ಸಮಾವೇಶಕ್ಕೆ ಮಳೆಯ ಭೀತಿ

    ಜೂನಿಯರ್ ಕಾಂಗ್ರೆಸ್(Congress) ನಾಯಕರು ಮಾತ್ರ ಟೀಕೆ ಮಾಡುತ್ತಿದ್ದಾರೆ. ಸೀನಿಯರ್ ಖರ್ಗೆ ವಿಧಿ ಇಲ್ಲದೆ ಅಲ್ಲೊಂದು ಇಲ್ಲೊಂದು ಮಾತನಾಡುತ್ತಾರೆ. ಆದ್ರೆ ಪಾಕಿಸ್ತಾನ ಪರವಾಗಿ ಮರಿ ಖರ್ಗೆ ಇದ್ದಾರೆ. ಹರಿಪ್ರಸಾದ್, ಸಂತೋಷ್ ಲಾಡ್, ದಿನೇಶ್ ಗುಂಡೂರಾವ್ ಅವರಂತಹ ಕೆಲವರಿಗೆ ಮಾತ್ರ ಎಲ್ಲಿ ಇದ್ದೇವೆ. ಏನು ಮಾಡುತ್ತಿದ್ದೇವೆ. ಕಾಂಗ್ರೆಸ್ ನಾಯಕರು ಹೌದೋ, ಅಲ್ವೋ ಎಂದೇ ಗೊತ್ತಾಗುತ್ತಿಲ್ಲ. ಇವರ ಬಗ್ಗೆ ಕಾಂಗ್ರೆಸ್‌ನವರಿಂದಲೇ ಟೀಕೆ ಕೇಳಿಬರುತ್ತಿದೆ ಎಂದರು. ಇದನ್ನೂ ಓದಿ: ಹೊಸೂರು ರಸ್ತೆಯಲ್ಲಿ ‘ಸ್ವಿಮ್ಮಿಂಗ್ ಪೂಲ್’ – ವಾಹನ ಸಂಚಾರ ಬಂದ್

    ಪ್ರೂಫ್ ಕೇಳೋಕೆ ಪ್ರಿಯಾಂಕ್ ಹಾಗೂ ಲಾಡ್ ಯಾರು? ಇವರಿಗೆ ಆಪರೇಷನ್ ಸಿಂಧೂರದ ಬಗ್ಗೆ ಏನು ಪ್ರೂಫ್ ಕೊಡಬೇಕು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು, ಎಲ್ಲಾ ಪಕ್ಷದ ಸಭೆಗೆ ಹೋಗಿದ್ದಾರೆ. ಅವರನ್ನೇ ಕೇಳಲಿ ಇವರು. ಅವರು ಸಾಕ್ಷಿ ಕೊಟ್ಟೇ ಕೊಡ್ತಾರೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: Belagavi | 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ – ಅಪ್ರಾಪ್ತ ಸೇರಿ ಇಬ್ಬರ ಬಂಧನ

    ಕಾಂಗ್ರೆಸ್ ಸಾಧನಾ ಸಮಾವೇಶ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿಯ ರಸ್ತೆಯ ಒಂದು ಗುಂಡಿ ಕೂಡ ಮುಚ್ಚಿಲ್ಲ. ಒಂದು ಅಭಿವೃದ್ಧಿ ಕೆಲಸ ಮಾಡಿಲ್ಲ. ಇಂತಹದ್ರಲ್ಲಿ ಸಾಧನಾ ಸಮಾವೇಶ ಮಾಡೋದು ಸರಿಯಲ್ಲ ಎಂದು ಕಿಡಿಕಾರಿದರು.

    ಬಜೆಟ್‌ನಲ್ಲಿ ಜಾತಿ ಜನಗಣತಿ ಮಾಡೇ ಬಿಡ್ತೇವೆ ಅಂತಾ ಹೇಳಿದ್ರು. ಇವರಿಗೆ ಸಿಎಂ ಸ್ಥಾನ ಉಳಿಸಿಕೊಳ್ಳಬೇಕು ಅಷ್ಟೇ. ಇವರಿಗೆ ಯಾವ ಜಾತಿ ಜನಗಣತಿ ಬೇಡ. ಸಿಎಂ ಸ್ಥಾನ ಉಳಿಸಿಕೊಳ್ಳಲು ಲಿಂಗಾಯತರನ್ನ ಉಳಿಸಿಕೊಳ್ಳಬೇಕು ಅಂತಾ ಮಾಡ್ತಿದ್ದಾರೆ. ಬೇರೆ ಏನು ಸಾಧನೆ ಇದೆ ಇವರದು ಎಂದು ವಾಗ್ದಾಳಿ ನಡೆಸಿದರು.

  • ಕರ್ನಾಟಕದಲ್ಲಿ ರಾಜಕಾರಣ ಗಬ್ಬೆದ್ದು ಹೋಗಿದೆ: ಕೆ.ಎಸ್ ಈಶ್ವರಪ್ಪ

    ಕರ್ನಾಟಕದಲ್ಲಿ ರಾಜಕಾರಣ ಗಬ್ಬೆದ್ದು ಹೋಗಿದೆ: ಕೆ.ಎಸ್ ಈಶ್ವರಪ್ಪ

    ವಿಜಯಪುರ: ಕರ್ನಾಟಕದಲ್ಲಿ ರಾಜಕಾರಣ ಗಬ್ಬೆದ್ದು ಹೋಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (KS Eshwarappa) ಅಸಮಾಧಾನ ವ್ಯಕ್ತಪಡಿಸಿದರು.

    ವಿಜಯಪುರದಲ್ಲಿ (Vijayapura) ಮಾಧ್ಯಮಗಳೊಂದಿಗೆ ಮಾತನಾಡಿ, ಆ ಪಕ್ಷ ಈ ಪಕ್ಷ ಅಲ್ಲ, ಎಲ್ಲ ಪಕ್ಷಗಳು ಇದೆ ರೀತಿ ಆಗಿದೆ. ಎಲ್ಲ ಕಡೆ ಗುಂಪುಗಾರಿಕೆ ನಡೆದಿದೆ. ಹೈಕಮಾಂಡ್ ಏನು ಮಾಡುತ್ತಿದೆ ಗೊತ್ತಿಲ್ಲ. ಬಿಜೆಪಿ ಏನು ಮಾಡುತ್ತಿದೆ. ಹಿಂದುತ್ವದ ಅಡಿಯಲ್ಲಿ ಸಾಗಿತ್ತು. ಆದರೆ ಈಗ ಎಲ್ಲ ಜಾತಿ ಮೇಲೆ ನಡೆದಿದೆ. ಬಿಜೆಪಿ ಕಟ್ಟಿದ ಹಿರಿಯ ನಾಯಕರು ಈಗ ಸೈಡ್ ಲೈನ್ ಆಗಿದ್ದಾರೆ ಎಂದು ದೂರಿದರು.ಇದನ್ನೂ ಓದಿ: ಲೋಕಾಯುಕ್ತ ಡಿವೈಎಸ್ಪಿ ಸೋಗಿನಲ್ಲಿ ವಂಚನೆ – 57 ಕೇಸ್‌ನಲ್ಲಿ ಬೇಕಾಗಿದ್ದ ಆರೋಪಿ ಅಂದರ್

    ಕಾಂಗ್ರೆಸ್‌ನಲ್ಲಿ ಕೂಡ ಗುಂಪುಗಾರಿಕೆ ಇದೆ. ಒಂದು ಕಡೆ ಸಿದ್ದರಾಮಯ್ಯ, ಇನ್ನೊಂದೆಡೆ ಡಿಕೆಶಿಯವರ ಗುಂಪುಗಳಿವೆ. ಡಿಕೆಶಿಗೆ ಪಕ್ಷದಲ್ಲಿ ಯಾವುದೆ ಬೆಲೆ ಇಲ್ಲ ಎಂದರು.

    ಗಂಗೆಯಲ್ಲಿ ಮುಳುಗುವುದರಿಂದ ಬಡತನ ಹೋಗುವುದಿಲ್ಲ ಎಂಬ ಮಲ್ಲಿಕಾರ್ಜುನ ಹೇಳಿಕೆಗೆ ಪ್ರತಿಕ್ರಿಯಿಸಿ, 144 ವರ್ಷದ ನಂತರ ಮಹಾ ಕುಂಭಮೇಳದಲ್ಲಿ ನಡೆದಿದೆ. ಖರ್ಗೆಯವರೇ ಯಾಕೆ ಹಿಂದುಗಳ ಮನಸ್ಸು ನೋಯಿಸುತ್ತೀರಿ. ಹಿಂದು ಸಮಾಜವನ್ನು ಕೆಣಕಬೇಡಿ. ಕಾಂಗ್ರೆಸ್‌ನಿಂದ ಯಾರೆಲ್ಲ ಕುಂಭಮೇಳಕ್ಕೆ ಹೋಗಿದ್ದಾರೆ ಅವರನ್ನು ಕಿತ್ತು ಹಾಕಿ. ಖರ್ಗೆಯವರೇ ಬಾಯಿ ಮುಚ್ಕೊಂಡು ಇರಿ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಕೇಂದ್ರದಿಂದ ಬೋಗಸ್ ಬಜೆಟ್, ಕನ್ನಡಿಗರು ಎಚ್ಚೆತ್ತುಕೊಳ್ಳುವ ಕಾಲ ಹತ್ತಿರ ಬಂದಿದೆ: ಡಿಕೆ ಸುರೇಶ್

     

  • ಮುಸ್ಲಿಮರು ಅನ್ನ ತಿಂದ ಮನೆಗೆ ಕನ್ನ ಹಾಕುವವರು: ಬಾಂಗ್ಲಾ ಸ್ಥಿತಿಗೆ ಈಶ್ವರಪ್ಪ ಕಿಡಿ

    ಮುಸ್ಲಿಮರು ಅನ್ನ ತಿಂದ ಮನೆಗೆ ಕನ್ನ ಹಾಕುವವರು: ಬಾಂಗ್ಲಾ ಸ್ಥಿತಿಗೆ ಈಶ್ವರಪ್ಪ ಕಿಡಿ

    ಶಿವಮೊಗ್ಗ: ಬಾಂಗ್ಲಾದೇಶದ (Bangladesh) ಸ್ಥಿತಿ ನೋಡಿದ್ರೆ ಮುಸ್ಲಿಮರು (Muslim) ಅನ್ನ ತಿಂದ ಮನೆಗೆ ಕನ್ನ ಹಾಕುವವರು ಎಂಬುದು ಗೊತ್ತಾಗುತ್ತದೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (K.S Eshwarappa) ಹೇಳಿದ್ದಾರೆ.

    ನಗರದಲ್ಲಿ (Shivamogga) ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ ಬಾಂಗ್ಲಾದೇಶಕ್ಕೆ ತಿನ್ನಲು ಅನ್ನ ಇರಲಿಲ್ಲ. ಚಿನ್ಮಯ್ ದಾಸ್ ಅವರು ಎಲ್ಲರಿಗೂ ಅನ್ನ ಹಾಕುತ್ತಿದ್ದರು. ಚಿನ್ಮಯ್ ದಾಸ್ ಪರವಾಗಿ ಒಬ್ಬರು ವಕೀಲರು ವಕಾಲತ್ತು ಹಾಕಲು ಹೊರಟ್ಟಿದ್ದರು. ಮುಸ್ಲಿಮರು ಆ ವಕೀಲರ ಮೇಲೆ ಹಲ್ಲೆ ನಡೆಸಿದ್ದಾರೆ. ಆ ವಕೀಲರು ಸಾಯುವ ಸ್ಥಿತಿಯಲ್ಲಿ ಇದ್ದಾರೆ ಎಂದು ಕಿಡಿಕಾರಿದ್ದಾರೆ.

    ಭಾರತದ ಹಿಂದೂಗಳು (Hindu) ಈ ದೇಶದ ಮುಸ್ಲಿಮರಿಗೆ ಸಿಕ್ಕ ಸಿಕ್ಕ ಕಡೆ ಹೊಡೆದರೆ ಮುಸ್ಲಿಮರು ಉಳಿಯುತ್ತಾರಾ? ಮುಸ್ಲಿಮರು ಹಿಂದೂ ಯುವತಿಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ. ಆದರೆ ಒಬ್ಬ ಹಿಂದೂ ಸಹ ಮಸೀದಿ ಧ್ವಂಸ ಮಾಡಲು ಹೋಗಿಲ್ಲ. ರಾಮ ಮಂದಿರ ನಿರ್ಮಾಣ ಮಾಡಲು ಬಾಬ್ರಿ ಮಸೀದಿ ಧ್ವಂಸ ಮಾಡಿದ್ದು ಬಿಟ್ಟರೆ ಬೇರೆ ಮಸೀದಿ ಧ್ವಂಸ ಮಾಡಿಲ್ಲ. ಹಿಂದೂಗಳು ಶಾಂತಿಪ್ರಿಯರು ಎಂದಿದ್ದಾರೆ.

    ಇವತ್ತೂ ಸಹ ಬಾಂಗ್ಲದಲ್ಲಿ ಹಿಂದೂ ದೇವಸ್ಥಾನ ಧ್ವಂಸ ಮಾಡಿದ್ದಾರೆ. ಇದೇ ರೀತಿ ಮುಂದುವರೆದರೆ ಬಾಂಗ್ಲಾದೇಶ, ಪಾಕಿಸ್ತಾನ ಮುಂದೊಂದು ದಿನ ಇರಲ್ಲ. ಅದು ಅಖಂಡ ಭಾರತ ಆಗುತ್ತದೆ. ಇಂದು ಸಾಧು ಸಂತರು ಹೋರಾಟಕ್ಕೆ ಬಂದಿದ್ದಾರೆ. ಅಖಂಡ ಭಾರತದ ನಿರ್ಮಾಣಕ್ಕೆ ಸಾಧು ಸಂತರ ನೇತೃತ್ವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

    ಚಂದ್ರಶೇಖರ ಸ್ವಾಮೀಜಿ ಮುಸ್ಲಿಮರಿಗೆ ಮತದಾನದ ಹಕ್ಕು ಕೊಡಬಾರದು ಎಂದಿದ್ದರು. ಬಳಿಕ ನನ್ನ ಮಾತನ್ನು ವಾಪಸ್ ಪಡೆದಿದ್ದರು. ಹಿಂದೂ ದೇವಸ್ಥಾನ ಧ್ವಂಸ, ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೂ ಸುಮ್ಮನಿದ್ದೇವೆ ಎಂದು ಕಿಡಿಕಾರಿದ್ದಾರೆ.

  • ಮುಸ್ಲಿಂ ಸಮುದಾಯದ ಕುರಿತು ಪ್ರಚೋದನಕಾರಿ ಹೇಳಿಕೆ – ಈಶ್ವರಪ್ಪ ವಿರುದ್ಧ ಸುಮೋಟೋ ಕೇಸ್

    ಮುಸ್ಲಿಂ ಸಮುದಾಯದ ಕುರಿತು ಪ್ರಚೋದನಕಾರಿ ಹೇಳಿಕೆ – ಈಶ್ವರಪ್ಪ ವಿರುದ್ಧ ಸುಮೋಟೋ ಕೇಸ್

    ಶಿವಮೊಗ್ಗ: ಸುದ್ದಿಗೋಷ್ಠಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (K.S Eshwarappa) ವಿರುದ್ಧ ಜಯನಗರ ಪೊಲೀಸ್ (Police) ಠಾಣೆಯಲ್ಲಿ ಸುಮೋಟೋ ಕೇಸ್ (ಸ್ವಯಂಪ್ರೇರಿತ ಪ್ರಕರಣ) ದಾಖಲಾಗಿದೆ.

    ರೈತರಿಗೆ ವಕ್ಫ್ ಬೋರ್ಡ್ (Waqf Board) ನೋಟಿಸ್ ನೀಡಿದ್ದ ವಿವಾದದ ಬಗ್ಗೆ ನಗರದಲ್ಲಿ (Shivamogga) ನ.13 ರಂದು ಅವರು ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ, ಮುಸ್ಲಿಮರ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದ್ದರು. ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳಬೇಕಾಗುತ್ತದೆ. ಹೇಗೆ ಆದರೆ ಮುಸಲ್ಮಾನರಿಗೆ ರಸ್ತೆಯಲ್ಲಿ ಹುಡುಕಿ ಹುಡುಕಿ ಹೊಡೆಯುತ್ತಾರೆ. ಮುಸ್ಲಿಮರನ್ನು ಕೊಲ್ಲುವಂತಹ ದಿನ ಬರುತ್ತದೆ ಎಂದು ಹೇಳಿದ್ದರು.

    ಇದೇ ವೇಳೆ, ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ವಿಚಾರವಾಗಿ ಮಾತನಾಡಿ, ಮೀಸಲಾತಿ ಕೊಡುತ್ತೇವೆ ಎನ್ನುತ್ತಾರೆ. ಹಿಂದೂಸ್ಥಾನ ಏನು ಪಾಕಿಸ್ತಾನ ಮಾಡಲು ಹೊರಟ್ಟಿದ್ದೀರಾ? ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳುತ್ತಾರೆ. ಬಾಂಗ್ಲಾದೇಶದಲ್ಲಿ ಹಲ್ಲೆ, ಕೊಲೆ ಆಯ್ತು. ಬಾಂಗ್ಲಾದೇಶದ ಪ್ರಧಾನಿಗೆ ಭಾರತದಲ್ಲಿ ರಕ್ಷಣೆ ಕೊಟ್ಟು ಇಟ್ಟಿದ್ದೇವೆ. ಪಾಕಿಸ್ತಾನದಲ್ಲಿ ಹಿಂದೂಗಳ ಹತ್ಯೆಯಾಯ್ತು. ಭಾರತದಲ್ಲಿಯೂ ಮುಸ್ಲಿಮರು ಈ ರೀತಿ ಮಾಡಲು ಹೊರಟ್ಟಿದ್ದಾರೆ ಎಂದು ಕಿಡಿಕಾರಿದ್ದರು.

    ಕಾಂಗ್ರೆಸ್‍ನವರು ವೋಟಿಗಾಗಿ ಭಾರತವನ್ನೇ ಮತಾಂತರ ಮಾಡಲು ಹೊರಟ್ಟಿದ್ದಾರೆ. ನೇರಾ ನೇರ ಖಂಡನೆ ಮಾಡಬೇಕು. ಹಿಂದೂಗಳಿಗೆ ಅಪಮಾನ ಮಾಡುತ್ತಿದ್ದಾರೆ. ಅವರ ಮೀಸಲಾತಿ ಕಿತ್ತುಕೊಳ್ಳಲು ಹೊರಟ್ಟಿದ್ದಾರೆ. ಹಿಂದೂ ಸಮಾಜ ದಂಗೆ ಎದ್ದರೆ ಈ ಸರ್ಕಾರ, ನೀವೇ ಕಾರಣರಾಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದರು.

    ಅವರ ಈ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆ ಎಂಬ ಕಾರಣದಿಂದ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.

  • ಹಿಂದೂಗಳ ಪರವಾಗಿರುವವರಿಗೆ ಮತ ಹಾಕಿ, ಇಲ್ಲದಿದ್ದರೆ ಪಾಕಿಸ್ತಾನ, ಬಾಂಗ್ಲಾದೇಶದ ಸ್ಥಿತಿ ಬರುತ್ತೆ – ಈಶ್ವರಪ್ಪ

    ಹಿಂದೂಗಳ ಪರವಾಗಿರುವವರಿಗೆ ಮತ ಹಾಕಿ, ಇಲ್ಲದಿದ್ದರೆ ಪಾಕಿಸ್ತಾನ, ಬಾಂಗ್ಲಾದೇಶದ ಸ್ಥಿತಿ ಬರುತ್ತೆ – ಈಶ್ವರಪ್ಪ

    ಶಿವಮೊಗ್ಗ: ಹಿಂದೂಗಳ ಪರವಾಗಿ ಇರುವವರಿಗೆ ಮತ ಹಾಕಿ ಇಲ್ಲದಿದ್ದರೆ ಪಾಕಿಸ್ತಾನ, ಬಾಂಗ್ಲಾದೇಶದ ಪರಿಸ್ಥಿತಿ ಬರುತ್ತದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿದ್ದಾರೆ.

    ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಸ್ಲಿಮರು ಮಾಡುತ್ತಿರುವ ಅಚಾತುರ್ಯ ಗಮನಿಸಿ ಕಾಂಗ್ರೆಸ್‌ನವರು ಮೌನವಾಗಿದ್ದಾರೆ. ಪ್ರತಿನಿತ್ಯ ಮುಸ್ಲಿಮರ ಒಂದಲ್ಲ ಒಂದು ಅನ್ಯಾಯ ಕಾಣುತ್ತಿದೆ. ರೈತರು, ದೇವಸ್ಥಾನ, ಸಾಧು ಸಂತರು, ಪುರಾತತ್ವ ಇಲಾಖೆ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಮಾಡಿಕೊಂಡಿದ್ದಾರೆ. ವಕ್ಫ್ ಆಸ್ತಿ ಆಗಲು ಬಿಡಲ್ಲ ಎಂದು ಒಬ್ಬ ಕಾಂಗ್ರೆಸ್‌ನವರ (Congress) ಬಾಯಲ್ಲಿ ಬರಲಿಲ್ಲ. ಹಿಂದೂಗಳ ಪರವಾಗಿ ಇರುವವರಿಗೆ ಮತ ಹಾಕಿ ಇಲ್ಲದಿದ್ದರೆ ಪಾಕಿಸ್ತಾನ, ಬಾಂಗ್ಲಾದೇಶದ ಪರಿಸ್ಥಿತಿ ಬರುತ್ತದೆ ಎಂದರು. ಇದನ್ನೂ ಓದಿ: ನ.25, 26 ರಂದು ನಡೆಯಲಿದೆ ಪ್ರಸಿದ್ಧ ಬಸವನಗುಡಿ ಕಡಲೇಕಾಯಿ ಪರಿಷೆ

    ವಕ್ಫ್ ನೋಟಿಸ್ (Waqf) ವಾಪಸ್ ತೆಗೆದುಗೊಂಡಿದ್ದೇವೆ ಎಂದು ಹೇಳುತ್ತಾರೆ ಆದರೆ ಸಿಎಂ, ಡಿಸಿಎಂ ಈ ಬಗ್ಗೆ ನ್ಯಾಯ ಕೊಡಿಸುತ್ತೇವೆ ಎಂದು ಹೇಳುವುದಿಲ್ಲ. ವಿಪಕ್ಷಗಳು ರಾಜಕಾರಣ ಮಾಡುತ್ತೇವೆ ಎಂದು ಹೇಳಿ ರಾಜಕಾರಣ ಮಾಡುತ್ತಿದ್ದಾರೆ. ಅಂಬೇಡ್ಕರ್ ಇಸ್ಲಾಂ ಧರ್ಮ ಸ್ವೀಕಾರ ಮಾಡಲು ಸಿದ್ಧರಿದ್ದರು ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾನೆ. ಆದರೆ ಈ ಬಗ್ಗೆ ಒಬ್ಬ ಕಾಂಗ್ರೆಸ್ ನಾಯಕನೂ ಖಂಡಿಸಲಿಲ್ಲ ಎಂದು ಕಿಡಿಕಾರಿದರು.

    ಇದೇ ವೇಳೆ ಮುಸ್ಲಿಂರಿಗೆ ಗುತ್ತಿಗೆಯಲ್ಲಿ ಮೀಸಲಾತಿ ವಿಚಾರವಾಗಿ ಮಾತನಾಡಿ, ಮೀಸಲಾತಿ ಕೊಡುತ್ತೇವೆ ಎನ್ನುತ್ತಾರೆ. ಹಿಂದೂಸ್ಥಾನ ಏನು ಪಾಕಿಸ್ತಾನ ಮಾಡಲು ಹೊರಟ್ಟಿದ್ದೀರಾ? ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳುತ್ತಾರೆ. ಬಾಂಗ್ಲಾದೇಶದಲ್ಲಿ ಹಲ್ಲೆ, ಕೊಲೆ ಆಯ್ತು. ಬಾಂಗ್ಲಾದೇಶದ ಪ್ರಧಾನಿಗೆ ಭಾರತದಲ್ಲಿ ರಕ್ಷಣೆ ಕೊಟ್ಟು ಇಟ್ಟಿದ್ದೇವೆ. ಪಾಕಿಸ್ತಾನದಲ್ಲಿ ಹಿಂದೂಗಳ ಹತ್ಯೆಯಾಯ್ತು. ಭಾರತದಲ್ಲಿಯೂ ಮುಸ್ಲಿಂರು ಈ ರೀತಿ ಮಾಡಲು ಹೊರಟ್ಟಿದ್ದಾರೆ. ಕಾಂಗ್ರೆಸ್‌ನವರು ವೋಟಿಗಾಗಿ ಭಾರತವನ್ನೇ ಮತಾಂತರ ಮಾಡಲು ಹೊರಟ್ಟಿದ್ದಾರೆ. ನೇರಾ ನೇರ ಖಂಡನೆ ಮಾಡಬೇಕು. ಹಿಂದೂಗಳಿಗೆ ಅಪಮಾನ ಮಾಡುತ್ತಿದ್ದಾರೆ. ಅವರ ಮೀಸಲಾತಿ ಕಿತ್ತುಕೊಳ್ಳಲು ಹೊರಟ್ಟಿದ್ದಾರೆ. ಹಿಂದೂ ಸಮಾಜ ದಂಗೆ ಎದ್ದರೆ ಈ ಸರ್ಕಾರ, ನೀವೇ ಕಾರಣರಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.ಇದನ್ನೂ ಓದಿ: ಉಪಚುನಾವಣೆಯಲ್ಲಿಯೂ ಪಕ್ಷದ ದಂಗಲ್ – ಪಕ್ಷದ ಗುರುತಿಗೆ ಶಾಲು ಧರಿಸಿದ ಮುಖಂಡರು

  • ಜಮೀರ್ ಬಾಲ ಹಿಡ್ಕೊಂಡ್ ಹೋದ್ರೆ ಸಿಎಂ ಸ್ಥಾನ ಕಳೆದ್ಕೊಳ್ತೀರಿ – ಸಿದ್ದರಾಮಯ್ಯಗೆ ಈಶ್ವರಪ್ಪ ಎಚ್ಚರಿಕೆ

    ಜಮೀರ್ ಬಾಲ ಹಿಡ್ಕೊಂಡ್ ಹೋದ್ರೆ ಸಿಎಂ ಸ್ಥಾನ ಕಳೆದ್ಕೊಳ್ತೀರಿ – ಸಿದ್ದರಾಮಯ್ಯಗೆ ಈಶ್ವರಪ್ಪ ಎಚ್ಚರಿಕೆ

    – ರಕ್ತ ಕ್ರಾಂತಿಯ ಎಚ್ಚರಿಕೆ ಕೊಟ್ಟ ಮಾಜಿ ಡಿಸಿಎಂ
    – ಸಚಿವ ಸಂಪುಟದಲ್ಲಿ ರಾಜಣ್ಣ ಒಬ್ಬರೇ ಗಂಡು

    ಶಿವಮೊಗ್ಗ: ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಹಿಂದೂಗಳು, ರೈತರು ಹಾಗೂ ಈ ನಾಡಿನ ಮಣ್ಣಿನ ಮೇಲೆ ಗೌರವ ಇದ್ದರೆ ವಕ್ಫ್ (Waqf Board) ಹೆಸರು ಬಂದಿರುವ ಪಹಣಿಯನ್ನು ರದ್ದು ಮಾಡಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (K.S Eshwarappa) ಆಗ್ರಹಿಸಿದ್ದಾರೆ.

    ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಆಸ್ತಿ ವಿಚಾರದಲ್ಲಿ ಮುಸ್ಲಿಮರ ಧೋರಣೆಯಿಂದ ಅವರ ಸಮಾಜ ಅಧೋಗತಿಗೆ ಹೋಗಲಿದೆ. ಕೇವಲ ನಮ್ಮ ರಾಜ್ಯ ಅಷ್ಟೇ ಅಲ್ಲದೇ ಇತರೆ ರಾಜ್ಯದಲ್ಲಿ ಇದೇ ಬೆಳವಣಿಗೆಯಾಗುತ್ತಿದೆ. ಮುಸ್ಲಿಮರಿಗೆ ಕೇಡುಗಾಲ ಬಂದಿದೆ. ಅದಕ್ಕಾಗಿ ಇಡೀ ಹಿಂದೂ ಸಮಾಜಕ್ಕೆ ದ್ರೋಹ ಬಗೆಯುತ್ತಿದ್ದಾರೆ. ವಕ್ಫ್ ಆಸ್ತಿ ವಿವಾದದಿಂದ ಮಠ ಮಂದಿರಗಳಿಗೆ, ರೈತರಿಗೆ, ದಲಿತರಿಗೆ ಅನ್ಯಾಯ ಆಗಿದೆ ಎಂದು ಕಿಡಿಕಾರಿದ್ದಾರೆ.

    ಸಾಧು ಸಂತರು ಮೊದಲ ಬಾರಿಗೆ ಹಿಂದೂಗಳ ಆಸ್ತಿ ಉಳಿಸಬೇಕು ಎಂದು ಹೇಳಿಕೆ ಕೊಡುತ್ತಿದ್ದಾರೆ. ವಕ್ಫ್ ಆಸ್ತಿ ವಿವಾದದ ಬಗ್ಗೆ ಸಾಧು ಸಂತರು ಜಾಗೃತಿಯಾಗಿರೋದು ತುಂಬಾ ಸಂತೋಷದ ವಿಷಯ. ಸಾಧು ಸಂತರ ಆಹ್ವಾನದ ಮೇರೆಗೆ ಆಸ್ತಿ ಪರಿಶೀಲನೆಗೆ ಹೋಗುತ್ತಿದ್ದೇನೆ. 1.10 ಲಕ್ಷ ಎಕರೆ ವಕ್ಪ್ ಆಸ್ತಿ ಆಗಿದೆ ಎಂದು ಜಮೀರ್ ವಿಧಾನಸೌಧದಲ್ಲಿ ಹೇಳಿದ್ದಾರೆ. ಇದರ ವಿರುದ್ಧ ಜನ ಯಾವುದೇ ಕೋರ್ಟ್‍ಗೆ ಹೋಗುವ ಹಾಗೆ ಇಲ್ಲ. ಮುಸ್ಲಿಮರು ಇಲ್ಲದ ಕಡೆ ಹಾಗೂ ಶಾಲಾ ಆಸ್ತಿಯನ್ನು ವಕ್ಫ್ ಆಸ್ತಿ ಎನ್ನುತ್ತಿದ್ದಾರೆ. ವಕ್ಫ್ ಆಸ್ತಿ ಎಂದು ಇರುವ ಪಹಣಿಯನ್ನು ತಕ್ಷಣ ರದ್ದು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ಕೆ.ಎನ್. ರಾಜಣ್ಣನಂತಹ ಗಂಡು ಒಬ್ಬ ಸಚಿವ ಸಂಪುಟದಲ್ಲಿ ಇದ್ದಾರೆ. ಜಮೀರ್ (Zameer Ahmed) ಅವರ ಹೇಳಿಕೆಯನ್ನು ರಾಜಣ್ಣ ಒಬ್ಬರೇ ವಿರೋಧಿಸಿದ್ದು. ಜಮೀರ್ ಬಾಲ ಹಿಡಿದುಕೊಂಡು ಹೋದರೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತೀರಿ. ಸಾಧು ಸಂತರು ದೇವರ ಶಾಪಕ್ಕೆ ಗುರಿ ಆಗ್ತೀರಿ. ಬೀರಲಿಂಗೇಶ್ವರ ದೇವರ ಆಸ್ತಿ ವಕ್ಫ್ ಆಸ್ತಿ ಎಂದು ಘೋಷಣೆ ಮಾಡಿದ್ದಾರೆ. ಬೀರಲಿಂಗೇಶ್ವರ ದೇವರು, ಕುರುಬರ ಶಾಪ ನಿಮಗೆ ತಟ್ಟುತ್ತದೆ. ಪಹಣಿ ರದ್ದು ಮಾಡದಿದ್ದರೆ, ರಾಜ್ಯದಲ್ಲಿ ಸಾಧು ಸಂತರ ನೇತೃತ್ವದಲ್ಲಿ ರಕ್ತ ಕ್ರಾಂತಿ ಆಗುತ್ತದೆ. ಸಾಧು ಸಂತರ ಸಮಾಜ ಸುಮ್ಮನೆ ಕೂರುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

    ವಕ್ಪ್ ಆಸ್ತಿ ಬಗ್ಗೆ ಮಾಜಿ ಸಿಎಂ ಬೊಮ್ಮಾಯಿ ಹೇಳಿಕೆಯ ವಿಡಿಯೋ ವಿಚಾರವಾಗಿ, ಬೊಮ್ಮಾಯಿ ಏನು ಮೇಲಿಂದ ಇಳಿದು ಬಂದಿದ್ದಾನಾ? ಮುಸ್ಲಿಮರ ಓಟು ಪಡೆಯಲು ಯಾರು ಯಾವಾಗ ಏನು ಬೇಕಾದರೂ ಹೇಳಿಕೆ ಕೊಡಬಹುದು ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

    ಪ್ರಧಾನಮಂತ್ರಿಯವರು ಈ ಬಗ್ಗೆ ಗಮನಿಸಿ ತಕ್ಷಣ ಪಾರ್ಲಿಮೆಂಟ್‍ನಲ್ಲಿ ವಕ್ಫ್ ಬಿಲ್ ಪಾಸ್ ಮಾಡಬೇಕು. ಮೋದಿ ಅವರ ಬಗ್ಗೆ ಸಿದ್ದರಾಮಯ್ಯ ಅಗೌರವವಾಗಿ, ಹಗುರವಾಗಿ ಮಾತನಾಡಿದ್ದಾರೆ. ಇದು ನಿಮ್ಮ ಯೋಗ್ಯತೆಗೆ ತಕ್ಕದ್ದಲ್ಲ. ಮೋದಿಯವರ ಬಗ್ಗೆ ಮಾತನಾಡಬೇಕಾದರೆ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಸಿಎಂ ಮೋದಿಯವರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

  • ಹಿಂದೂಗಳ ಶ್ರದ್ಧೆಗೆ ಭಂಗ, ಜಗನ್ ಮೋಹನ್ ರೆಡ್ಡಿಯನ್ನು ಬಂಧಿಸಬೇಕು: ಈಶ್ವರಪ್ಪ ಆಗ್ರಹ

    ಹಿಂದೂಗಳ ಶ್ರದ್ಧೆಗೆ ಭಂಗ, ಜಗನ್ ಮೋಹನ್ ರೆಡ್ಡಿಯನ್ನು ಬಂಧಿಸಬೇಕು: ಈಶ್ವರಪ್ಪ ಆಗ್ರಹ

    ವಿಜಯಪುರ: ಜಗನ್ ಮೋಹನ್ ರೆಡ್ಡಿ (Jagan Mohan Reddy) ಅವರು ಸಿಎಂ ಆದ ಸಂದರ್ಭದಲ್ಲಿ ಇಡೀ ಪ್ರಪಂಚಕ್ಕೆ ಮಾಡಿದ್ದು ಮೋಸ. ಜಗನ್ ಮೋಹನ್ ರೆಡ್ಡಿಯನ್ನು ಬಂಧಿಸುವ ಕೆಲಸವಾಗಬೇಕು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ( K S Eshwarappa) ವಿಜಯಪುರದಲ್ಲಿ (Vijayapura) ಹೇಳಿದರು.

    ತಿರುಪತಿ ಲಡ್ಡುವಿನಲ್ಲಿ ಪ್ರಾಣಿಕೊಬ್ಬು ಬಳಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿದೇಶಿ ಕ್ರಿಸ್ಚಿಯನ್ ಮಷಿನರಿಗಳಿಂದ ಈ ತರಹ ನಡೆದಿದೆ. ಹಿಂದುತ್ವ ಪ್ರತಿಪಾದಕರಿಗೆ, ಹಿಂದೂಗಳ ಶ್ರದ್ಧೆಗೆ ಭಂಗ ತರುವ ಕೆಲಸ ಮಾಡಿದ್ದಾರೆ. ಈಗಲೂ ನಾವು ಮಾಡಿಲ್ಲ ಎಂದು ಹೇಳುತ್ತಾರೆ. ಲ್ಯಾಬ್ ರಿಪೋರ್ಟ್ ಬಗ್ಗೆ ಇವರಿಗೆ ನಂಬಿಕೆ ಇಲ್ಲವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಆಡಳಿತ ಯಂತ್ರದ ಮೇಲೆ ಹದ್ದಿನ ಕಣ್ಣು – ಅನಗತ್ಯ ಸಿಬ್ಬಂದಿಗೆ ಗೇಟ್‌ಪಾಸ್‌ ಕೊಡಲು ಸರ್ಕಾರ ಪ್ಲ್ಯಾನ್!‌

    ನಮ್ಮ ಶ್ರದ್ಧೆ ಹಾಗೂ ಶ್ರದ್ಧಾಕೇಂದ್ರಕ್ಕೆ ಅಪಮಾನ ಮಾಡುವವರಿಗೆ ಇದು ಅಂತ್ಯವಾಗಬೇಕು. ಇದರಲ್ಲಿ ವಿದೇಶಿ ಸಂಚಿದೆ, ಈ ಪ್ರಕರಣ ಸಿಬಿಐಗೆ (CBI) ತನಿಖೆಗೆ ಕೊಡಬೇಕು. ದೇವರ ದಯೆಯಿಂದ ಇಡೀ ದೇಶದ ಎಲ್ಲ ಪಕ್ಷದ ನಾಯಕರು ಇದನ್ನು ಖಂಡಿಸಿದ್ದಾರೆ. ಇದು ಯಾವುದೇ ಕಾರಣಕ್ಕೂ ಸಹಿಸಲ್ಲ ಎಂದು ಹೇಳಿದ್ದಾರೆ. ತಿರುಪತಿ ತಿಮ್ಮಪ್ಪನ ಬಗ್ಗೆ ಇರುವ ಶ್ರದ್ಧೆಯಿಂದ ಎಲ್ಲರೂ ಇದನ್ನು ಖಂಡಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: Quad Summit | ಮೋದಿ ದ್ವಿಪಕ್ಷೀಯ ಮಾತುಕತೆ – MQ-9B ಡ್ರೋನ್ ಖರೀದಿ, ರಕ್ಷಣಾತ್ಮಕ ವಿಚಾರಗಳ ಕುರಿತು ಚರ್ಚೆ

    ಬಿಜೆಪಿ (BJP) ಪಕ್ಷ ನನ್ನ ತಾಯಿ ಇದ್ದ ಹಾಗೆ. ಆ ತಾಯಿ ಬಿಟ್ಟು ನಾನು ಬೇರೆ ಯಾವ ಪಕ್ಷಕ್ಕೂ ಹೋಗಲ್ಲ. ಈ ಪಕ್ಷದಲ್ಲಿ ಶುದ್ಧೀಕರಣವಾಗಲಿ ಎಂಬ ಕಾರಣಕ್ಕೆ ನಾನು ಪಕ್ಷದಿಂದ ದೂರ ಇದ್ದೇನೆ. ಇವತ್ತಲ್ಲ ನಾಳೆ ಈ ವಿಚಾರವಾಗಿ ಹೈಕಮಾಂಡ್‌ನವರು ಚಿಂತಿಸಿ ಮಾತನಾಡುವ ನಂಬಿಕೆ ಇದೆ. ಆಗ ನಾನು ಕೂಡಾ ಬಿಜೆಪಿಗೆ ಸೇರುವ ವಿಚಾರವಾಗಿ ತೀರ್ಮಾನ ಮಾಡುವೆ ಎಂದರು. ಇದನ್ನೂ ಓದಿ: ನಾಗಮಂಗಲ ಗಲಭೆ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್‌ – ಚಿಕ್ಕಬಳ್ಳಾಪುರದಲ್ಲಿ ಗಣೇಶ ವಿಸರ್ಜನೆಗೆ 600 ಪೊಲೀಸರ ಭದ್ರತೆ

    ಈಶ್ವರಪ್ಪನವರನ್ನು ಬಿಜೆಪಿಗೆ ಕರೆ ತಂದು ಸಿಎಂ ಮಾಡುತ್ತೇವೆ ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯತ್ನಾಳ್ ಓರ್ವ ಹಿಂದುತ್ವದ ಹುಲಿ. ಅವರ ಪ್ರೀತಿಯ ಮಾತಿಗೆ ನಾನು ಅಭಿನಂದಿಸುವೆ. ಬಿಜೆಪಿಯಲ್ಲಿನ ಅವ್ಯವಸ್ಥೆಯಿಂದ ನಾನು ಪಕ್ಷ ಬಿಟ್ಟೆ. ಬಿಜೆಪಿಯಲ್ಲಿ ಹೊಂದಾಣಿಕೆ ರಾಜಕಾರಣ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ನಾನು ಬಿಜೆಪಿ ಬಿಟ್ಟೆ ಎಂದು ತಿಳಿಸಿದರು. ಇದನ್ನೂ ಓದಿ: 2ನೇ ಬಾರಿಗೆ ತುಂಗಭದ್ರಾ ಜಲಾಶಯ ಭರ್ತಿ – ಇಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆ

    ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಪೋಲಿಸ್‌ನವರು ರಾಷ್ಟ್ರದೋಹಿ ಚಟುವಟಿಕೆಗಳ ವಿರುದ್ಧ ಎಪ್‌ಐಆರ್ ಹಾಕಿದ್ದು ಅಭಿನಂದನಾರ್ಹ. ದಾವಣಗೆರೆ ಎಸ್ಪಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಲ್ಲದೇ ಪೊಲೀಸ್ ಇಲಾಖೆಯ ಬಗ್ಗೆ ಭಯ ಹುಟ್ಟಿಸಿದ್ದಕ್ಕೆ ಅಭಿನಂದನೆಗಳು. ಮಾನ್ಯ ಗೃಹ ಸಚಿವರು ಇಂತಹ ಪೋಲಿಸರಿಗೆ ಬೆಂಬಲ, ಪ್ರಶಸ್ತಿ ಕೊಡಬೇಕು. ಗಲಭೆ ಮಾಡಲು ಬಿಡಲ್ಲ ಎಂದು ದಾವಣಗೆರೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಅಭಿನಂದನೆ. ಇಡೀ ರಾಜ್ಯದಲ್ಲಿ ಈ ತರಹ ಪೋಲಿಸರು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಕಾರವಾರದಲ್ಲಿ ಬೆಳ್ಳಂಬೆಳಗ್ಗೆ ಹರಿದ ನೆತ್ತರು – ಉದ್ಯಮಿಯ ಬರ್ಬರ ಹತ್ಯೆ, ಮಚ್ಚಿನೇಟಿಂದ ಪತ್ನಿ ಗಂಭೀರ

  • ಸಿದ್ದರಾಮಯ್ಯ ಕಾನೂನುಬದ್ಧವಾಗಿ ಹೋರಾಟ ಮಾಡಿ ಕ್ಲೀನ್‌ಚಿಟ್ ಸಿಕ್ಕಿ ಯಶಸ್ವಿಯಾಗಿ ಹೊರಬರಲಿ: ಈಶ್ವರಪ್ಪ

    ಸಿದ್ದರಾಮಯ್ಯ ಕಾನೂನುಬದ್ಧವಾಗಿ ಹೋರಾಟ ಮಾಡಿ ಕ್ಲೀನ್‌ಚಿಟ್ ಸಿಕ್ಕಿ ಯಶಸ್ವಿಯಾಗಿ ಹೊರಬರಲಿ: ಈಶ್ವರಪ್ಪ

    – ಸಿಎಂ ಪತ್ನಿ ಗೌರಮ್ಮ ರೀತಿ ಇದ್ದವರು; ಅವರ ಮೇಲೆ ಆಪಾದನೆ ಬಾರದಿರಲಿ
    – ಸಿದ್ದರಾಮಯ್ಯ ಪರ ಈಶ್ವರಪ್ಪ ಬ್ಯಾಟಿಂಗ್

    ಶಿವಮೊಗ್ಗ: ಸಿದ್ದರಾಮಯ್ಯ (Siddaramaiha) ಕಾನೂನುಬದ್ಧವಾಗಿ ಹೋರಾಟ ಮಾಡಿ ಕ್ಲೀನ್‌ಚಿಟ್ ಸಿಕ್ಕಿ ಯಶಸ್ವಿಯಾಗಿ ಹೊರಗೆ ಬರಲಿ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ( K S Eshwarappa) ಹೇಳಿಕೆ ನೀಡಿದ್ದಾರೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ವಿಚಾರವಾಗಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಸಿಎಂ ಮೇಲೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಕಾನೂನಿಗೆ ಗೌರವ ಕೊಡಬೇಕು ಎಂದು ಹೇಳಿದರು.  ಇದನ್ನೂ ಓದಿ : ಧೈರ್ಯವಾಗಿರಿ, ನಿಮ್ಮ ಜೊತೆ ನಾವಿದ್ದೇವೆ: ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಹೈಕಮಾಂಡ್

    ನನ್ನ ಮೇಲೆ ಆಪಾದನೆ ಬಂದಾಗ ನಾನು ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ಕೊಟ್ಟಿದ್ದೇನೆ. ಅವರು ಕೂಡ ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ಕೊಡುತ್ತಾರೆ ಎಂಬ ವಿಶ್ವಾಸ ನನಗಿದೆ. ಆದರೆ ಅವರ ಶ್ರೀಮತಿಯವರನ್ನು ಎಲ್ಲಿ ಇದರಲ್ಲಿ ಸೇರಿಸಿಬಿಡುತ್ತಾರೋ ಎಂಬ ಅನುಮಾನವಿದೆ. ಪಾಪ ಅವರು ಗೌರಮ್ಮ ರೀತಿ ಇದ್ದವರು. ಅವರ ಮೇಲೆ ಅಂತಹ ಆಪಾದನೆ ಬಾರದೇ ಇರಲಿ ಎಂದು ಬೇಡಿಕೊಳ್ಳುತ್ತೇನೆ ಎಂದರು. ಇದನ್ನೂ ಓದಿ : ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ – ಸಿಎಂ ಮುಂದಿರುವ ಆಯ್ಕೆ ಏನು?