Tag: ಕೆ.ಎಸ್ ಆಶ್ವಥ್

  • ಹಿರಿಯ ನಟ ಕೆ.ಎಸ್ ಅಶ್ವಥ್ 10ನೇ ಪುಣ್ಯಸ್ಮರಣೆಯಲ್ಲಿ ಕಣ್ಣೀರಿಟ್ಟ ಶಿವಣ್ಣ

    ಹಿರಿಯ ನಟ ಕೆ.ಎಸ್ ಅಶ್ವಥ್ 10ನೇ ಪುಣ್ಯಸ್ಮರಣೆಯಲ್ಲಿ ಕಣ್ಣೀರಿಟ್ಟ ಶಿವಣ್ಣ

    ಬೆಂಗಳೂರು: ಹಿರಿಯ ನಟ ದಿವಂಗತ ಕೆ.ಎಸ್ ಅಶ್ವಥ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಕಣ್ಣೀರು ಹಾಕಿದ್ದಾರೆ.

    ಚಾಮರಾಜಪೇಟೆಯ ಕಲಾವಿದರ ಸಂಘದ ವತಿಯಿಂದ 10ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಿರಿಯ ನಟರಾದ ಶ್ರೀನಾಥ್, ಅಶೋಕ್ ಮತ್ತು ಶಿವರಾಜ್ ಕುಮಾರ್ ಭಾಗವಹಿಸಿದ್ರು. ಈ ವೇಳೆ ನಟ ಶಿವರಾಜ್ ಕುಮಾರ್ ಹಿರಿಯ ನಟ ದಿವಂಗತ ಕೆ.ಎಸ್ ಅಶ್ವಥ್ ಅವರ ನೆನೆದು ಭಾವುಕರಾಗಿ ಕಣ್ಣೀರು ಇಟ್ಟಿದ್ದಾರೆ.

    ವೇದಿಕೆ ಮೇಲೆ ಕೆ.ಎಸ್ ಅಶ್ವಥ್ ಮತ್ತು ಶಿವರಾಜ್ ಕುಮಾರ್ ನಟನೆಯ ಮೋಡದ ಮರೆಯಲ್ಲಿ ಕ್ಲಿಪಿಂಗ್ ಹಾಕಲಾಗಿತ್ತು. ಇಬ್ಬರು ನಟನೆಯ ದೃಶ್ಯ ಕಂಡು ಶಿವರಾಜ್ ಕುಮಾರ್ ಕಣ್ಣೀರು ಹಾಕಿದರು. ಮೋಡದ ಮರೆಯಲ್ಲಿ ಚಿತ್ರದಲ್ಲಿ ನನ್ನ ನಟನೆ ಬಗ್ಗೆ ಕೆ.ಎಸ್ ಅಶ್ವಥ್ ಅವರು ನನ್ನ ಹೊಗಳಿದ್ದರು. ಅದನ್ನ ನನ್ನ ತಂದೆ ತಾಯಿಗೆ ಹೇಳೋಣ ಅಂದರೆ ಇವತ್ತು ನನ್ನ ತಂದೆ ತಾಯಿನೂ ಬದುಕಿಲ್ಲ. ಮನಸ್ಸಿಗೆ ತುಂಬಾ ನೋವಾಗುತ್ತೆ ಎಂದು ಭಾವುಕರಾದರು.

    ನಮ್ಮ ಮನೆಗೆ ಅಶ್ವಥ್ ಸರ್ ಬರುತ್ತಿದ್ದರು ನಮ್ಮ ಜೊತೆ ಕ್ರಿಕೆಟ್ ಆಡುತ್ತಿದ್ದರು. ಅ ನೆನಪುಗಳನ್ನ ಮರೆಯೊದಕ್ಕೆ ಆಗಲ್ಲ. ಅವರ ನಟನೆ ನಮಗೆ ಸ್ಪೂರ್ತಿ ಎಂದು ಕಣ್ಣೀರು ಹಾಕಿ ಅವರು ಎಲ್ಲು ಹೋಗಿಲ್ಲ ನಮ್ಮಗಳ ಮಧ್ಯೆದಲ್ಲೆ ಇದ್ದಾರೆ ಎಂದು ತಿಳಿಸಿದರು.