Tag: ಕೆ.ಎಸ್.ಆರ್.ಟಿ.ಸಿ

  • KSRTC ಬಸ್ ತಡೆದು ವಿದ್ಯಾರ್ಥಿಗಳು, ಜನರಿಂದ ಪ್ರತಿಭಟನೆ

    KSRTC ಬಸ್ ತಡೆದು ವಿದ್ಯಾರ್ಥಿಗಳು, ಜನರಿಂದ ಪ್ರತಿಭಟನೆ

    – ಬೇಡಿಕೆ ಈಡೇರದಿದ್ದರೆ ಉಗ್ರರೂಪದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ
    – ಬಸ್‍ಗಳು ಸರ್ವಿಸ್ ರಸ್ತೆಯಲ್ಲಿಯೂ ಸಂಚಾರ ಮಾಡಿ ಎಂದು ಮನವಿ

    ನೆಲಮಂಗಲ: ವಿದ್ಯಾರ್ಥಿಗಳು ಹಾಗೂ ಜನರು ಕೆ.ಎಸ್‍.ಆರ್.ಟಿ.ಸಿ  ಬಸ್‍ಗಳನ್ನು ತಡೆದು ನೆಲಮಂಗಲದಲ್ಲಿ ಪ್ರತಿಭಟನೆ ನಡೆಸಿದರು.

    ಕೊರೊನಾ ಆತಂಕದ ನಡುವೆಯೇ ಇತ್ತೀಚೆಗೆ ಶಾಲಾ ಕಾಲೇಜುಗಳನ್ನು ಓಪನ್ ಮಾಡಿದ್ದು, ಪಾಠ ಪ್ರವಚನಗಳು ನಡೆಯುತ್ತಿವೆ. ಆದರೆ ಶಾಲಾ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆಯಿಂದ ಸಾಕಷ್ಟು ಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಸಾರಿಗೆ ಇಲಾಖೆಯ ಅಧಿಕಾರಿಗಳ ವಿರುದ್ಧ, ಕೆ.ಎಸ್‍.ಆರ್.ಟಿ.ಸಿ  ಬಸ್‍ಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.ಇದನ್ನೂ ಓದಿ:ಕೇರಳದ 32 ಮಂದಿಗೆ ಸೋಂಕು, ಕೋಲಾರದ ನರ್ಸಿಂಗ್ ಕಾಲೇಜು ವಿರುದ್ಧ ಕಠಿಣ ಕ್ರಮ: ಸುಧಾಕರ್

    ಬೆಳಗ್ಗೆ ಸಮಯದಲ್ಲಿ ಶಾಲಾ ಕಾಲೇಜುಗಳಿಗೆ ಹೋಗಲು ಬಸ್‍ಗಳು ಸರಿಯಾಗಿ ಬರುತ್ತಿಲ್ಲ. ಬರುವಂತಹ ಎಲ್ಲಾ ಬಸ್‍ಗಳು ಸರ್ವೀಸ್ ರಸ್ತೆಯಲ್ಲಿ ಚಲಿಸದೆ ಹೆದ್ದಾರಿಯಲ್ಲಿ ಸಂಚಾರ ಮಾಡುತ್ತಿವೆ. ಈ ನಿಟ್ಟಿನಲ್ಲಿ ಸಾಕಷ್ಟು ಬಾರಿ ತುಮಕೂರು ಡಿಪೋ ಅಧಿಕಾರಿಗಳಿಗೆ ಲಿಖಿತ ಮೂಲಕ ದೂರು ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಈಗಾಗಲೇ ಪರೀಕ್ಷೆಗಳು ಶುರುವಾಗಿದ್ದು, ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ತೆರಳಲು ಸಾಧ್ಯವಾಗದೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.ಇದನ್ನೂ ಓದಿ:ನಂದಿಬೆಟ್ಟದಿಂದ ಮರಳುತ್ತಿದ್ದಾಗ ಯುವಕ, ಯುವತಿಯನ್ನು ಅಡ್ಡಗಟ್ಟಿ ಸುಲಿಗೆ

    ಈ ಹಿನ್ನೆಲೆಯಲ್ಲಿ ಪೊಷಕರು ಮತ್ತು ವಿದ್ಯಾರ್ಥಿಗಳು ಪ್ರತಿದಿನ ಸರ್ವಿಸ್ ರಸ್ತೆಯಲ್ಲಿ ಬಸ್ಸುಗಳು ಸಂಚಾರ ಮಾಡುವಂತೆ ಪ್ರತಿಭಟನೆ ಮಾಡಿದರು. ಒಂದು ವೇಳೆ ಈ ಬೇಡಿಕೆಯನ್ನು ಸರಿ ಪಡಿಸದಿದ್ದರೆ ಮುಂದೆ ಉಗ್ರರೂಪದ ಪ್ರತಿಭಟನೆ ನಡೆಸುವುದಾಗಿ ಇಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ:ಮೊಹರಂ, ಪೀರದೇವರು ಹಬ್ಬ – ದೇವರ ದರ್ಶನ ಪಡೆಯಲು ಮುಗಿಬಿದ್ದ ಜನ

    ಈ ವೇಳೆ ಬಿಎಂಟಿಸಿ ನಿರ್ದೇಶಕ ಬೃಂಗೇಶ್, ಸ್ಥಳೀಯ ಮುಖಂಡ ಜಗದೀಶ್ ಚೌದರಿ, ರವಿಚಂದ್ರ, ಪಂಚಾಕ್ಷರಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

  • ಟ್ವಿಟ್ಟರಿನಲ್ಲಿ ನೀಡಿದ ದೂರಿಗೆ ಸ್ಪಂದಿಸಿದ ಕೆ.ಎಸ್.ಆರ್.ಟಿ.ಸಿ

    ಟ್ವಿಟ್ಟರಿನಲ್ಲಿ ನೀಡಿದ ದೂರಿಗೆ ಸ್ಪಂದಿಸಿದ ಕೆ.ಎಸ್.ಆರ್.ಟಿ.ಸಿ

    ಬೆಂಗಳೂರು: ನೆಟ್ಟಿಗರೊಬ್ಬರು ಟ್ವಿಟ್ಟರ್ ಮೂಲಕ ನೀಡಿದ ದೂರಿಗೆ ಟ್ವಿಟ್ಟರ್ ನಲ್ಲೇ ಪ್ರತಿಕ್ರಿಯಿಸುವ ಮೂಲಕ ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಸಮಸ್ಯೆಯನ್ನು ಬಗೆಹರಿಸಿದೆ.

    ಬಳಕೆದರಾದ ಸುದರ್ಶನ್ ಡಿ.ಟಿ ಎಂಬವರು ಜನರು ಬಸ್ ಇಲ್ಲದೇ ಲಾರಿ ಮತ್ತು ಕಾರುಗಳನ್ನು ಹಿಡಿದು ಪ್ರಯಾಣ ಬೆಳೆಸುತ್ತಿರುವ ವಿಡಿಯೋವನ್ನು ಹಾಕಿದ್ದರು. ಇದು ಚಿತ್ರದುರ್ಗ ತಾಲೂಕಿನ ಸಿರಿಗೆರೆ ಕ್ರಾಸ್ ಬಳಿಯ ದೃಶ್ಯ. ಚಿತ್ರದುರ್ಗ ಹಾಗೂ ದಾವಣಗೆರೆ ವಿಭಾಗದ ಎಲ್ಲಾ ವೇಗದೂತ ಬಸ್ಸುಗಳು ಇಲ್ಲಿ ನಿಲ್ಲಿಸಿ ಹೋಗಬೇಕು. ಆದರೆ ನಿಲ್ಲಿಸುತ್ತಿಲ್ಲ ಎಂದು ದೂರು ನೀಡಿದ್ದರು.

    https://twitter.com/sudharshana_dt/status/1301011834779041793

    ಮೊದಲೆಲ್ಲ ಸ್ನೇಹಮಯಿ ಬಸ್ಸುಗಳು ಓಡಾಡುತ್ತಿದ್ದವು ಈಗ ಸ್ನೇಹಮಯಿಗಳ ಸಂಖ್ಯೆಗಳನ್ನು 2ಕ್ಕೆ ಇಳಿಸಲಾಗಿದೆ. ಈಗಾಗಲೇ ಬೆಂಗಳೂರಿನಿಂದ ಬರುವ ಎಲ್ಲಾ ಬಸ್ಸುಗಳು ದಾವಣಗೆರೆ ಮೇಲೆಯೇ ಸಂಚಾರ ಮಾಡುತ್ತಿದ್ದು ಅವುಗಳು ವೇಗದೂತ ಬಸ್ ಆಗಿವೆ. ಹಿಂದೆ ಇದ್ದ ಎಲ್ಲಾ ಸ್ನೇಹಮಯಿ ಬಸ್ಸುಗಳನ್ನು ಈಗ ಚಿತ್ರದುರ್ಗ-ದಾವಣಗೆರೆ ನಾನ್ ಸ್ಟಾಪ್ ಆಗಿ ಮಾಡಿದ್ದಾರೆ ಎಂದು ಬರೆದು ಸುದರ್ಶನ್ ಪಬ್ಲಿಕ್ ಟಿವಿ ಮತ್ತು ಕೆ.ಎಸ್.ಆರ್.ಟಿ.ಸಿಯನ್ನು ಟ್ಯಾಗ್ ಮಾಡಿ ತಿಳಿಸಿದ್ದರು.

    ಚಿತ್ರದುರ್ಗ ಬಸ್ ನಿಲ್ದಾಣದಿಂದ ಸಿರಿಗೆರೆ ಕ್ರಾಸ್ ಬಲಿ ಸ್ಟಾಪ್ ಕೇಳಿದರೆ ವೇಗದೂತ ಬಸ್ ನಿರ್ವಾಹಕರು ನಿಯಂತ್ರಕರ ಎದುರೇ ನಿಲ್ಲಿಸುವುದಿಲ್ಲ. ನಿರ್ವಾಹಕರು ಸಹ ಅದನ್ನೇ ಬೆಂಬಲಿಸುತ್ತಾರೆ. ನಿರ್ವಾಹಕರಿಗೆ ಹೆಚ್ಚಿನ ಬಸ್ ಬಿಡಲು ಕೇಳಿಕೊಂಡಾಗ, ಮ್ಯಾನೇಜರ್ ಗಳನ್ನು ದೂರುತ್ತಾರೆ. ಚಿತ್ರದುರ್ಗ ಹಾಗೂ ದಾವಣಗೆರೆ ಇಬ್ಬರು ಡಿಪೋ ಮ್ಯಾನೇಜರ್ ಗಳಿಗೆ ಫೋನ್ ಮಾಡಿ ನಾಲ್ಕೈದು ಬಾರಿ ದೂರು ಕೊಡಲಾಗಿದೆ. ಒಬ್ಬರ ಮೇಲೆ ಒಬ್ಬರು ದೂರುತ್ತಾರೆ. ಜನರು ಲಾರಿ, ಆಟೋಗಳಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ. ಇದರಿಂದ ಜನರ ಜೀವಕ್ಕೆ ಸಮಸ್ಯೆಯಾದರೆ ಯಾರು ಹೊಣೆ ಎಂದು ಖಾರವಾಗಿ ಬರೆದು ಟ್ವೀಟ್ ಮಾಡಿದ್ದರು.

    ಇದಕ್ಕೆ ಉತ್ತರಿಸಿರುವ ಕೆ.ಎಸ್.ಆರ್.ಟಿ.ಸಿ ಕೊರೊನಾ ಕಾರಣದಿಂದ ಆ ಮಾರ್ಗದ ಎಲ್ಲ ಬಸ್ಸುಗಳನ್ನು ನಾನ್ ಸ್ಟಾಪ್ ಆಗಿ ಮಾಡಲಾಗಿದೆ. ಹೀಗಾಗಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ದಾವಣಗೆರೆ ಮತ್ತು ಚಿತ್ರದುರ್ಗ ಬಸ್ ನಿಲ್ದಾಣಕ್ಕೆ ಬೆಳಗ್ಗೆ 7ರಿಂದ ಸಂಜೆ 7.30ರ ವರೆಗೆ ಸ್ನೇಹಮಹಿ ಬಸ್ಸುಗಳನ್ನು ಬಿಡಲಾಗಿದೆ. ಪ್ರಯಾಣಿಕರು ಇದನ್ನು ಉಪಯೋಗಿಸಿಕೊಂಡು ಸಹಕರಿಸಬೇಕು ಎಂದು ಹೇಳಿದೆ.

  • ಪೀಣ್ಯ ಶ್ರೀ ಬಸವೇಶ್ವರ ಬಸ್ ನಿಲ್ದಾಣ ಈಗ ಕೋವಿಡ್ ಕೇರ್ ಸೆಂಟರ್

    ಪೀಣ್ಯ ಶ್ರೀ ಬಸವೇಶ್ವರ ಬಸ್ ನಿಲ್ದಾಣ ಈಗ ಕೋವಿಡ್ ಕೇರ್ ಸೆಂಟರ್

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೋಗದ ಲಕ್ಷಣವೇ ಇಲ್ಲದವಿರಗೆ ಕೊರೊನಾ ಪಾಸಿಟಿವ್ ಬರುತ್ತಿರುವ ಕಾರಣ, ಈ ರೋಗಿಗಳಿಗೆ ಚಿಕಿತ್ಸೆ ನೀಡಿಲು ಪೀಣ್ಯದ ಶ್ರೀ ಬಸವೇಶ್ವರ ಬಸ್ ನಿಲ್ದಾಣವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಾಡು ಮಾಡಲಾಗಿದೆ.

    ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಕೋವಿಡ್-19 ಲಕ್ಷಣಗಳಿಲ್ಲದ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಅವಕಾಶ ಕಲ್ಪಿಸುವುದು ಕಷ್ಟಕರವಾಗುತ್ತಿದೆ. ಸರ್ಕಾರದ ಸಲಹೆಯಂತೆ, ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಲಕ್ಷಣ ರಹಿತ ಮತ್ತು ಸೌಮ್ಯ ಪ್ರಕರಣಗಳನ್ನು ನಿರ್ವಹಿಸಲು ಕೋವಿಡ್ ಆರೈಕೆ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೋವಿಡ್ ಆರೈಕೆ ಕೇಂದ್ರದ ಸ್ಥಾಪನೆಗಾಗಿ ಶ್ರೀ ಬಸವೇಶ್ವರ ಬಸ್ ನಿಲ್ದಾಣ, ಪೀಣ್ಯ ಬೆಂಗಳೂರಿನಲ್ಲಿ ಸ್ಥಳಾವಕಾಶ ಒದಗಿಸಿದೆ ಎಂದು ಕೆ.ಎಸ್.ಆರ್.ಟಿ.ಸಿಯು ಮಾಹಿತಿ ನೀಡಿದೆ.

    ಕೇಂದ್ರವು ಆಗಸ್ಟ್ 6 ರಿಂದ ಕಾರ್ಯಾರಂಭ ಮಾಡಲಿದೆ. ರೋಟರಿ ಅಡ್ವಿಕಾ ಕೇರ್ ಫೌಂಡೇಶನ್ ಮತ್ತು ನಯೋನಿಕಾ ಐ ಟ್ರಸ್ಟ್ ಸಹಯೋಗದೊಂದಿಗೆ ಈ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿರುತ್ತಾರೆ. ಈ ಕೇಂದ್ರವನ್ನು ನಿರ್ವಹಿಸಲು ವೈದ್ಯಕೀಯ ಪಾಲುದಾರರಾಗಿ ಪ್ರಕ್ರಿಯಾ ಆಸ್ವತ್ರೆ, ನಾಗಸಂದ್ರ, ಬೆಂಗಳೂರು ಮತ್ತು ಟೈಟಾನ್ ಸಂಸ್ಥೆ ಪ್ರಮುಖ ಹಣಕಾಸಿನ ಪಾಲುದಾರರಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಕೇಂದ್ರವನ್ನು ಇಂದು ಡಿಸಿಎಂ ಲಕ್ಷಣ ಸವದಿಯವರು ಉದ್ಘಾಟಿಸಿದರು.

    ಕೊವಿಡ್-19 ಗೆ ತುತ್ತಾಗಿ ಗುಣಮುಖರಾದ ಕೆ.ಎಸ್.ಆರ್.ಟಿ.ಸಿ ಚಾಲಕ, ನಿರ್ವಾಹಕ, ಸಿಬ್ಬಂದಿಗಳಿಗೆ ಮಾನ್ಯ ಉಪಮುಖ್ಯಮಂತ್ರಿಗಳು ಹೂ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ಸುಮಾರು ಒಂದು ಸಾವಿರ ಸಿಬ್ಬಂದಿ ಕೊವಿಡ್-19 ಗೆ ತುತ್ತಾಗಿದು 700 ಸಿಬ್ಬಂದಿಗಳು ಗುಣಮುಖರಾಗಿದ್ದಾರೆ. ಅವರುಗಳ ಯೋಗ ಕ್ಷೇಮ ನಮ್ಮ ಪ್ರತಮ ಆದ್ಯತೆಯಾಗಿದ್ದು, ಈ ಕೋವಿಡ್ ಕೇರ್ ಸೆಂಟರ್ ನಲ್ಲಿ ನಮ್ಮ ಸಿಬ್ಬಂದಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಮುಂಜಾಗ್ರತೆ ವಹಿಸಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.

    ಪೀಣ್ಯ ಬಸ್ ನಿಲ್ದಾಣದ ನೆಲಮಹಡಿ ಹಾಗೂ ಮೊದಲನೆ ಮಹಡಿಯಲ್ಲಿ, ಈ ಕೇಂದ್ರವು ಮೊದಲನೆ ಹಂತದಲ್ಲಿ 200 ಹಾಸಿಗೆಗಳನ್ನು ಹೊಂದಿರುತ್ತದೆ. ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಮತ್ತು ಬೇಡಿಕೆ ಹೆಚ್ಚಾದರೆ ಇನ್ನೂ 100 ಹಾಸಿಗೆಗಳನ್ನು ಸೇರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕೇಂದ್ರದಲ್ಲಿ ಪೂರ್ಣ ಸಮಯದ ದಾದಿಯರು, ವೈದ್ಯರು, ರೋಗಿಗಳ ಆರೈಕೆ ಮಾಡುವವರು, ಸ್ವಚ್ಛತಾಕಾರರು, ವ್ಯವಸ್ಥಾಪಕರು, ಬಿಲ್ಲಿಂಗ್ ತಂಡ, ಸ್ವಾಗತಕಾರರು, ನಿರ್ವಹಣೆ ಮತ್ತು ಭದ್ರತಾ ತಂಡಗಳು ಇರಲಿವೆ. ರೋಗಿಗೆ ಆಸ್ವತ್ರೆಯ ಆರೈಕೆ ಅಗತ್ಯವಿದ್ದಲ್ಲಿ, ಪ್ರಕ್ರಿಯಾ ಆಸ್ವತ್ರೆ ತನ್ನ ಆಸ್ವತ್ರೆಗಳಲ್ಲಿ ಅವಕಾಶ ಕಲ್ಪಿಸುತ್ತದೆ. ಕೇಂದ್ರದಲ್ಲಿ ಅಂಬುಲೆನ್ಸ್ ಜೊತೆ ಆಕ್ಸಿಜನ್ ಸೌಲಭ್ಯ ಲಭ್ಯವಿರುತ್ತದೆ. ಸ್ವಾಬ್ ಸಂಗ್ರಹ ಕೇಂದ್ರವನ್ನು ಸಹ ಇಲ್ಲಿ ಸ್ಥಾಪಿಸಲಾಗಿದೆ.

    ಈ ಕೇಂದ್ರದಲ್ಲಿ ಕೆ.ಎಸ್.ಆರ್.ಟಿ.ಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ ಮತ್ತು ವಾಯವ್ಯ ಸಾರಿಗೆ ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೆ 50% ಹಾಸಿಗೆಗಳನ್ನು ಒದಗಿಸಲಾಗಿದೆ. ಈ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ರೋಟರಿ ಮತ್ತು ಟೈಟಾನ್‍ನಿಂದ ಉಲ್ಲೇಖಿಸಲಾದ ರೋಗಿಗಳಿಗೆ 10% ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಸರ್ಕಾರ ಸೂಚಿಸಿದ ದರಗಳ ಪ್ರಕಾರ ರೋಗಿಗಳಿಗೆ ಶುಲ್ಕ ವಿಧಿಸಲಾಗುತ್ತದೆ. ಬಡವರು ಮತ್ತು ನಿರ್ಗತಿಕರಿಗೆ ಈ ಕೇಂದ್ರದಿಂದ ಅನುಕೂಲವಾಗಲಿದೆ.

    ರೋಗಿಗಳಿಗೆ ಆಹಾರ ಮತ್ತು ಇತರ ಸೇವೆಗಳೊಂದಿಗೆ ಮೂಲ ವೈದ್ಯಕೀಯ ಸೇವೆಯನ್ನು ನೀಡಲಾಗುತ್ತದೆ. ಸದರಿ ಕೇಂದ್ರದಲ್ಲಿ ಶೌಚಾಲಯ, ಬಿಸಿ ನೀರಿನ ಸ್ನಾನದ ಸೌಲಭ್ಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ. ಎಲ್ಲಾ ರೋಗಿಗಳಿಗೆ ಪೌಷ್ಠಿಕ ಆಹಾರವನ್ನು ನೀಡಲಾಗುವುದು. ಈ ಕೇಂದ್ರದಲ್ಲಿ ಸಿಬ್ಬಂದಿ ಇರಲು ಅವಕಾಶ ಕಲ್ಪಿಸಲಾಗಿದೆ. ಸಿಬ್ಬಂದಿ ಮತ್ತು ವೈದ್ಯರುಗಳಿಗೆ ಸೋಂಕು ಹರಡದಂತೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಈ ಕೇಂದ್ರದಲ್ಲಿ ಕೆಲಸ ಮಾಡುವ ಎಲ್ಲರಿಗೂ ಸಂಪೂರ್ಣ ಪಿಪಿಇ ಕಿಟ್‍ಗಳನ್ನು ಒದಗಿಸಲಾಗಿದೆ.

    ಕೇಂದ್ರವು ತುರ್ತು ವಾರ್ಡ್ ಮತ್ತು 10 ಹಾಸಿಗೆಗಳ ಐಸಿಯು ಹೊಂದಿದ್ದು, ಇದರಲ್ಲಿ ರೋಗಿಗಳ ಹಾಸಿಗೆಗಳು, ಮಾನಿಟರ್ ಗಳು, ಆಮ್ಲಜನಕ ಪೂರೈಕೆ ಮತ್ತು ಆಮ್ಲಜನಿಕ ಸಾಂದ್ರತೆಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಐಸಿಯು ಅನ್ನು ಟೈಟಾನ್ ಕಂಪನಿಯು ಪ್ರಾಯೋಜಿಸುತ್ತಿದೆ. ರೋಗಿಗಳು ಆಸ್ವತ್ರೆಯಲ್ಲಿ ಹಾಸಿಗೆ ಸಿಗುವವರೆಗೂ ಅವರನ್ನು ಇಲ್ಲಿ ತಾತ್ಕಲಿಕವಾಗಿ ನೋಡಿಕೊಳ್ಳಲಾಗುತ್ತದೆ. ಹೆಚ್ಚಿನ ವೈದ್ಯಕೀಯ ಅಗತ್ಯ ಕಂಡು ಬಂದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು.

  • ಕೆಎಸ್ಆರ್‌ಟಿಸಿಯ ಮಿಡಿ ಬಸ್ಸುಗಳು ಈಗ ಅಂಬುಲೆನ್ಸ್

    ಕೆಎಸ್ಆರ್‌ಟಿಸಿಯ ಮಿಡಿ ಬಸ್ಸುಗಳು ಈಗ ಅಂಬುಲೆನ್ಸ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪ್ರಮಾಣ ಹೆಚ್ಚುತ್ತಿರುವ ಕಾರಣ ಕೆಎಸ್‍ಆರ್‍ಟಿಸಿಯ ಮಿಡಿ ಬಸ್ಸುಗಳನ್ನು ಅಂಬುಲೆನ್ಸ್ ಗಳನ್ನಾಗಿ ಬಳಸಿಕೊಳ್ಳಲು ಸರ್ಕಾರ ನಿರ್ಧಾರ ಮಾಡಿದೆ.

    ಇದರ ಬಗ್ಗೆ ಮಾಹಿತಿ ನೀಡಿ ಸುತ್ತೋಲೆ ಹೊರಡಿಸಿರುವ ಕೆ.ಎಸ್.ಆರ್.ಟಿ.ಸಿ. ಈ ಅಂಬುಲೆನ್ಸ್ ಗಳಲ್ಲಿ ತುರ್ತುಸ್ಥಳದಿಂದ ರೋಗಿಯನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ವರ್ಗಾಹಿಸಲು ಮತ್ತು ಆಸ್ವತ್ರೆಯನ್ನು ತಲುಪಿದ ನಂತರ ತುರ್ತುಕೋಣಿಗೆ ರೋಗಿಯನ್ನು ತ್ವರಿತವಾಗಿ ಮತ್ತು ಆರಾಮದಾಯಕವಾಗಿ ತೆಗೆದುಕೊಂಡು ಹೋಗಲು ಅನುಕೂಲವಾಗುವಂತೆ 2 ಸ್ಟ್ರೆಚರ್ ಗಳನ್ನು ನಿರ್ಮಾಣ ಮಾಡಲಾಗಿದೆ.

    ಬ್ಯಾಂಡೇಜ್, ಕ್ರಿಮಿನಾಶಕ, ಗಾಜ್ಡ್ರೆಸ್ಸಿಂಗ್, ಪ್ಲಾಸ್ಟರ್, ಕ್ರೆಪ್ಬ್ಯಾಂಡೇಜ್, ಡ್ರೆಸಿಂಗ್, ಕೈ ಗವಸುಗಳು, ಕತ್ತರಿ ಮತ್ತು ಚಿಮುಟಗಳು, ಮತ್ತು ಸೋಂಕು ನಿವಾರಕ ಪರಿಹಾರಗಳನ್ನು ಒಳಗೊಂಡಿರುವ ಪ್ರಥಮ ಚಿಕಿತ್ಸಾ ಕಿಟ್‍ಗಳನ್ನು ಅಂಬುಲೆನ್ಸ್ ಹೊಂದಿದೆ. ಆಕ್ಸಿಜನ್, ಶುದ್ಧವಾದ ಅಮ್ಲಜನಕವನ್ನು ಕೃತಕವಾಗಿ ಒದಗಿಸುವ ಮೂಲಕ ರೋಗಿಯ ಜೀವವನ್ನು ಉಳಿಸಲು ಸಹಾಯ ಮಾಡುವ ಒಂದು ಆಮ್ಲಜನಕ ಸಿಲಿಂಡರ್ ಅನ್ನು ಅಂಬುಲೆನ್ಸ್‍ನಲ್ಲಿ ಇರಿಸಲಾಗಿದೆ.

    ಕೈ ತೊಳೆಯಲು 20 ಲೀಟರ್ ನ ನೀರಿನ ಟ್ಯಾಂಕ್, ಮತ್ತೊಂದು ಟ್ಯಾಂಕ್ ನೀರು ಸಂಗ್ರಹಿಸಲು ಒದಗಿಸಲಾಗಿದೆ. ಕೈ ತೊಳೆದು ನೀರನ್ನು ಸಂಗ್ರಹಿಸಲು ಪ್ರತ್ಯೇಕ ಪ್ಲಾಸ್ಟಿಕ್ ಟ್ಯಾಂಕ್ ಒದಗಿಸಲಾಗಿದೆ. ಡ್ರೈವರ್ ಗೆ ಸುಲಭವಾದ ಪ್ರತ್ಯೇಕ ಚಾಲಕ ವಿಭಾಗವನ್ನು ನಿರ್ಮಿಸಲಾಗಿದೆ. ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಅಂಬುಲೆನ್ಸ್ ಮುಂಭಾಗದ ಮೇಲ್ಬಾಗದಲ್ಲಿ ಕೆಂಪು ಮತ್ತು ನೀಲಿ ಬಣ್ಣ ಸೂಚಕಗಳನ್ನು ಮತ್ತು ಸೈರನ್‍ನನ್ನು ಜೋಡಿಸಲಾಗಿದೆ.

    ಒಟ್ಟು 5 ಸಂಖ್ಯೆ 2 ಆಸನಗಳ ಪ್ರಯಾಣಿಕರ ಆಸನ ಚೌಕಟ್ಟುಗಳನ್ನು ಒಳಗೆ ಒದಗಿಸಲಾಗಿದೆ. ಚಾಲಕರ ಕ್ಯಾಬಿನ್ ಜೋಡನೆಗೆ ಎದುರಾಗಿರುವ ಸ್ಟ್ರೀಟ್ ಲೈಟ್‍ಗೆ 3 ಸಂಖ್ಯೆ ಮತ್ತು ರೋಗಿಗಳ ಹತ್ತಿರ ವಿರುವ ವಿರುದ್ದ ದಿಕ್ಕಿನಲ್ಲಿ 1 ಸಂಖ್ಯೆ ನೀಲಿ ಬಣ್ಣದ ಕಿಟಕಿ ಪರದೆಗಳನ್ನು ಎರಡೂ ಕಡೆ ಒದಗಿಸಲಾಗಿದೆ. 4 ಫ್ಯಾನ್‍ಗಳು ಮತ್ತು ಸ್ಯಾನಿಟೈಜರ್ ಒಳಗೆ ಅಳವಡಿಸಲಾಗಿದೆ.

  • KSRTC ಸಿಬ್ಬಂದಿಗೆ ವೇತನವನ್ನು ನೀಡುತ್ತೇವೆ: ಸಾರಿಗೆ ಸಚಿವ ಸವದಿ

    KSRTC ಸಿಬ್ಬಂದಿಗೆ ವೇತನವನ್ನು ನೀಡುತ್ತೇವೆ: ಸಾರಿಗೆ ಸಚಿವ ಸವದಿ

    ಚಿಕ್ಕೋಡಿ: ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ಸಂಬಳ ನೀಡುವುದನ್ನು ನಿಲ್ಲಿಸುವುದಿಲ್ಲ ಎಂದು ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.

    ಬೆಳಗಾವಿ ಜಿಲ್ಲೆ ನಿಪ್ಪಾಣಿ ಪಟ್ಟಣದಲ್ಲಿ ನೂತನ ಪ್ರವಾಸಿ ಮಂದಿರ ಹಾಗೂ ಅಂಬೇಡ್ಕರ್ ಭವನ ವಾಣಿಜ್ಯ ತೆರಿಗೆ ಇಲಾಖೆ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 2,652 ಕೋಟಿ ನಷ್ಟವನ್ನು ಕೆ.ಎಸ್.ಆರ್.ಟಿ.ಸಿ ಅನುಭವಿಸುತ್ತಿದೆ. ಆದರೂ ಸಂಸ್ಥೆಯ 1 ಲಕ್ಷ 30 ಸಾವಿರ ಸಿಬ್ಬಂದಿಗೆ ವೇತನ ನೀಡಲಾಗುವುದು ಎಂದರು.

    ಪ್ರತಿ ತಿಂಗಳು 126 ಕೋಟಿ ಸಿಬ್ಬಂದಿ ವೇತನವನ್ನು ನೀಡಬೇಕಾಗುತ್ತದೆ. ಮುಖ್ಯಮಂತ್ರಿಗಳು 326 ಕೋಟಿ ನೀಡಿದ್ದು, ಸಿಬ್ಬಂದಿಯ 2 ತಿಂಗಳ ವೇತನ ನೀಡಲಾಗಿದೆ. ಸಿಬ್ಬಂದಿಗೆ ವೇತನ ರಹಿತ ರಜೆಯನ್ನು ಪಡೆಯುವಂತೆ ಒತ್ತಾಯ ಹಾಕುತ್ತಿಲ್ಲ. ಯಾವುದೇ ಕಾರಣಕ್ಕೂ ಸಿಬ್ಬಂದಿಯ ವೇತನವನ್ನು ಸರಕಾರ ತಡೆ ಹಿಡಿಯಲ್ಲ ಎಂದು ಸವದಿ ಅವರು ಕೆ.ಎಸ್.ಆರ್.ಟಿ.ಸಿ ನೌಕರರಿಗೆ ಅಭಯ ನೀಡಿದ್ದಾರೆ.

  • ನಾಲ್ವರು KSRTC ನಿರ್ವಾಹಕರಿಗೆ ಕೊರೊನಾ ಪಾಸಿಟಿವ್: ಹಾಸನದಲ್ಲಿ ಹೆಚ್ಚಾದ ಆತಂಕ

    ನಾಲ್ವರು KSRTC ನಿರ್ವಾಹಕರಿಗೆ ಕೊರೊನಾ ಪಾಸಿಟಿವ್: ಹಾಸನದಲ್ಲಿ ಹೆಚ್ಚಾದ ಆತಂಕ

    – ಇಂದು 25 ಜನರಿಗೆ ಕೊರೊನಾ, 1 ಸಾವು

    ಹಾಸನ: ಕರ್ತವ್ಯ ನಿರ್ವಹಿಸುತ್ತಿದ್ದ ನಾಲ್ವರು ಕೆ.ಎಸ್.ಆರ್.ಟಿ.ಸಿ ಕಂಡಕ್ಟರ್ ಗಳು ಸೇರಿದಂತೆ ಹಾಸನದಲ್ಲಿ ಇಂದು 25 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

    ನಾಲ್ವರು ನಿರ್ವಾಹಕರು ಅರಸೀಕೆರೆ, ತುಮಕೂರು, ಬೆಂಗಳೂರು ಮಾರ್ಗದ ಬಸ್‍ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಸೋಂಕಿತ ಕಂಡಕ್ಟರ್ ಗಳು ಹಲವರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ. ಇವರಷ್ಟೇ ಅಲ್ಲದೆ 25 ಜನರಲ್ಲಿ ಓರ್ವ ಪೊಲೀಸ್, ಇಬ್ಬರು ಆರೋಗ್ಯ ಇಲಾಖೆ ಸಿಬ್ಬಂದಿಗೂ ಇಂದು ಕೊರೊನಾ ಪಾಸಿಟಿವ್ ಬಂದಿರುವುದು ಆತಂಕ ಮೂಡಿಸಿದೆ.

    ಇಂದು ಓರ್ವ 36 ವರ್ಷದ ವ್ಯಕ್ತಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದುವರೆಗೂ ಹಾಸನದಲ್ಲಿ 479 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, 255 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈಗ ಸದ್ಯ ಜಿಲ್ಲೆಯಲ್ಲಿ 217 ಕೊರೊನಾ ಪ್ರಕರಣಗಳು ಸಕ್ರಿಯವಾಗಿವೆ.

  • ಜಿಲ್ಲೆಗಳ ಬೇಡಿಕೆಗೆ ತಕ್ಕಂತೆ ಬಸ್‍ಗಳ ಸಂಚಾರ: KSRTC ಎಂಡಿ

    ಜಿಲ್ಲೆಗಳ ಬೇಡಿಕೆಗೆ ತಕ್ಕಂತೆ ಬಸ್‍ಗಳ ಸಂಚಾರ: KSRTC ಎಂಡಿ

    ಬೆಂಗಳೂರು: ಯಾವ್ಯಾವ ಜಿಲ್ಲೆಗಳಿಗೆ ಬೇಡಿಕೆ ಇದೆಯೋ ಬೇಡಿಕೆಗೆ ತಕ್ಕಂತೆ ಬಸ್‍ಗಳ ಸಂಚಾರ ಮಾಡುತ್ತೇವೆ ಎಂದು ಕೆ.ಎಸ್.ಆರ್.ಟಿ.ಸಿ ಎಂಡಿ ಶಿವಯೋಗಿ ಕಳಸದ್ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ

    ಇಂದು ಸಭೆ ನಡೆಸಿ ನಾಲ್ಕನೇ ಹಂತದ ಲಾಕ್‍ಡೌನ್ ಮಾರ್ಗಸೂಚಿಯನ್ನು ಇಂದು ಮಧ್ಯಾಹ್ನ ಮಾಡಿದ ಬಿಎಸ್ ಯಡಿಯೂರಪ್ಪನವರು, ಕೆ.ಎಸ್.ಆರ್.ಟಿ.ಸಿ, ಬಿಎಂಟಿಸಿ, ಖಾಸಗಿ ಬಸ್‍ಗಳು, ಆಟೋ ಮತ್ತು ಟ್ಯಾಕ್ಸಿಗಳು ಓಡಾಡಲು ಅನುಮತಿ ನೀಡಿದ್ದಾರೆ. ಈ ವೇಳೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ.

    ಈಗ ಬಸ್ ಸಂಚಾರ ಮಾಡುವ ವಿಚಾರದ ಬಗ್ಗೆ ಮಾತನಾಡಿರುವ ಅವರು, ಯಾವ್ಯಾವ ಜಿಲ್ಲೆಗಳಿಗೆ ಬೇಡಿಕೆ ಇದೆಯೋ ಬೇಡಿಕೆಗೆ ತಕ್ಕಂತೆ ಬಸ್ ಗಳ ಬಸ್‍ಗಳನ್ನು ಬಿಡುತ್ತೇವೆ. ಆದರೆ ಡಿಮ್ಯಾಂಡ್ ಎಷ್ಟಿದೆ ಎಂದು ಗೊತ್ತಾಗುತ್ತಿಲ್ಲ. ಹೀಗಾಗಿ ಮೊದಲ ವಾರ ಪ್ರಾಥಮಿಕ ಹಂತದಲ್ಲಿ ಶೇ.20 ರಿಂದ 30 ರಷ್ಟು ಬಸ್ ಗಳು ಮಾತ್ರ ಕಾರ್ಯಚರಣೆ ಇಳಿಯುತ್ತವೆ. ಎರಡನೇ ವಾರದಲ್ಲಿ ಬಹುತೇಕ ಹೆಚ್ಚಿನ ಬಸ್‍ಗಳ ಬಿಡುತ್ತೇವೆ. ಈ ವೇಳೆ 30 ಸೀಟ್ ಗಳಿಗೆ ಮಾತ್ರ ಪ್ರಯಾಣಿಕರಿಗೆ ಅವಕಾಶ ಎಂದು ತಿಳಿಸಿದ್ದಾರೆ.

    ಬೆಂಗಳೂರಿನಿಂದ ಬೆಳಗಾವಿ ಬೀದರ್ ಗೆ ಹೋಗೋರಿಗೆ ಬೆಳಗ್ಗೆ 8 ಗಂಟೆಗೆ ವ್ಯವಸ್ಥೆ ಮಾಡಲಾಗಿದ್ದರೆ,  ಆ ಕಡೆಯಿಂದ ಬೆಂಗಳೂರಿಗೆ ಬರುವರಿರಿಗೆ ಬೆಳಿಗ್ಗೆ ಏಳುಗಂಟೆಗೆ ಬಸ್ ವ್ಯವಸ್ಥೆ ಮಾಡಲು ಸಾರಿಗೆ ಇಲಾಖೆ ಸಿದ್ಧತೆ ಮಾಡಿದೆ.

  • ಹುಬ್ಬಳ್ಳಿಯಿಂದ ಮಹಾರಾಷ್ಟಕ್ಕೆ ತೆರಳುವ 7 ಬಸ್ಸುಗಳ ಸಂಚಾರ ಸ್ಥಗಿತ

    ಹುಬ್ಬಳ್ಳಿಯಿಂದ ಮಹಾರಾಷ್ಟಕ್ಕೆ ತೆರಳುವ 7 ಬಸ್ಸುಗಳ ಸಂಚಾರ ಸ್ಥಗಿತ

    ಹುಬ್ಬಳ್ಳಿ: ವಿಜಯಪುರ ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಕೊರೊನಾ ವೈರಾಣು ಹರಡಿರುವುದರಿಂದ, ಹುಬ್ಬಳ್ಳಿಯಿಂದ ಈ ಭಾಗಕ್ಕೆ ತೆರಳುವ ಏಳು ಬಸ್ಸುಗಳು ಹಾಗೂ ರಾಜ್ಯದ ಕಲಬುರಗಿಗೆ ತೆರಳುವ ಸ್ಲೀಪರ್ ಕೋಚ್ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

    ಈ ಕುರಿತು ವಾಕರಸಾಸಂ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಕ ಹೆಚ್.ರಾಮನಗೌಡರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಹೀಗಾಗಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರನ್ನು ನಿಯಂತ್ರಿಸಲು ವಿಜಯಪುರ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಸಾರ್ವಜನಿಕ ಸಾರಿಗೆ ಮತ್ತು ಖಾಸಗಿ ಸಾರಿಗೆ ಸಂಸ್ಥೆಗಳ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

    ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ ಮಹಾರಾಷ್ಟ್ರದ ಸೊಲ್ಲಾಪುರ, ಔರಂಗಾಬಾದ್, ಬಾರ್ಸಿ ಹಾಗೂ ಪಂಡರಾಪುರಕ್ಕೆ ತೆರಳುವ ಏಳು ಬಸ್ಸುಗಳ ಸಂಚಾರವನ್ನು ತಕ್ಷಣದಿಂದ ಸ್ಥಗಿತಗೊಳಿಸಲಾಗಿದೆ. ಹುಬ್ಬಳ್ಳಿ-ಕಲಬುರಗಿ ಸ್ಲೀಪರ್ ಕೋಚ್ ಬಸ್ ಸಂಚಾರ ಈಗಾಗಲೇ ಸ್ಥಗಿತಗೊಳಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

  • ಕಲಬುರಗಿಗೆ ಹೋಗುವ ಬಸ್ಸುಗಳೆಲ್ಲ ಖಾಲಿ ಖಾಲಿ

    ಕಲಬುರಗಿಗೆ ಹೋಗುವ ಬಸ್ಸುಗಳೆಲ್ಲ ಖಾಲಿ ಖಾಲಿ

    ಬೀದರ್: ಮಹಾಮಾರಿ ಕೊರೊನಾ ವೈರಸ್ ದೇಶದ ಜನರನ್ನು ಬೆಚ್ಚಿ ಬೀಳಿಸುತ್ತಿದ್ದು, ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 80ರ ಗಡಿ ದಾಟಿದೆ. ಅಲ್ಲದೆ ದೇಶದಲ್ಲೇ ಮೊದಲ ಕೊರೊನಾ ಸೋಂಕಿತ ವ್ಯಕ್ತಿ ಕಲಬುರಗಿಯಲ್ಲಿ ಸಾವನ್ನಪ್ಪಿದ್ದಾನೆ. ಹೀಗಾಗಿ ಗಡಿ ಜಿಲ್ಲೆ ಬೀದರ್ ಪ್ರಯಾಣಿಕರು ಕಲಬುರಗಿ ಎಂದರೆ ಭಯ ಪಡುತ್ತಿದ್ದಾರೆ.

    ಪ್ರತಿದಿನ ಹತ್ತಾರು ಬಸ್ಸುಗಳಲ್ಲಿ ನೂರಾರು ಪ್ರಯಾಣಿಕರು ಬೀದರ್ ಹಾಗೂ ಕಲಬುರಗಿ ನಡುವೆ ಸಂಚರಿಸುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆ ಕಲಬುರಗಿಯಲ್ಲಿ 76ರ ವೃದ್ಧನನ್ನು ಕೊರೊನಾ ಮೊದಲ ಬಲಿಯಾಗಿ ತೆಗೆದುಕೊಂಡಿದ್ದರಿಂದ ಕಲಬುರಗಿ ಕಡೆ ಪ್ರಯಾಣ ಮಾಡಲು ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದಾರೆ.

    ಕೇಂದ್ರ ಬಸ್ ನಿಲ್ದಾಣದಲ್ಲಿನ ಬಸ್ಸುಗಳಲ್ಲಿ ಪ್ರಯಾಣಿಕರಿಲ್ಲದೆ ಖಾಲಿ ಹೊಡೆಯುತ್ತಿದ್ದು, ಬಸ್ಸುಗಳು ಖಾಲಿಯಾಗಿ ಸಂಚಾರ ಮಾಡುತ್ತಿವೆ. ಶೇಕಡ 70ರಷ್ಟು ಪ್ರಯಾಣಿಕರ ಸಂಖ್ಯೆ ಕುಸಿದಿದ್ದು, ಪ್ರಯಾಣಿಕರಿಲ್ಲದೆ ಬಸ್ಸುಗಳು ಸರತಿಯಲ್ಲಿ ನಿಂತುಕೊಂಡಿವೆ. ಪ್ರಯಾಣಿಕರಿಲ್ಲದ್ದಕ್ಕೆ ಸಾರಿಗೆ ಸಿಬ್ಬಂದಿ ಸಹ ಕೆಲಸವಿಲ್ಲದೆ ಕುಳಿತಿದ್ದಾರೆ. ಹೀಗಾಗಿ ಕೊರೊನಾ ವೈರಸ್ ಆರ್ಭಟಕ್ಕೆ ಸಾರಿಗೆ ಇಲಾಖೆ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದೆ.

  • ಕೊರೊನಾ ಎಫೆಕ್ಟ್- ಹೆಲ್ಮೆಟ್ ಧರಿಸಿ ಬಸ್ ಚಾಲನೆ

    ಕೊರೊನಾ ಎಫೆಕ್ಟ್- ಹೆಲ್ಮೆಟ್ ಧರಿಸಿ ಬಸ್ ಚಾಲನೆ

    ಮಡಿಕೇರಿ: ರಾಜ್ಯದಲ್ಲಿ ಕೊರೊನಾ ಭೀತಿ ತೀವ್ರವಾಗಿ ಕಾಡುತ್ತಿದ್ದು, ಮಾಸ್ಕ್ ಸಿಗದ ಹಿನ್ನೆಲೆಯಲ್ಲಿ ಕೆ ಎಸ್ ಆರ್ ಟಿ ಸಿ ಚಾಲಕರೊಬ್ಬರು ಹೆಲ್ಮೆಟ್ ಧರಿಸಿ ಬಸ್ ಚಾಲನೆ ಮಾಡುತ್ತಿದ್ದಾರೆ.

    ಮಡಿಕೇರಿ ಘಟಕದ ಡ್ರೈವರ್ ಉಷಾಕುಮಾರ್ ಕೊರೊನಾ ಭೀತಿಯಿಂದ ಹೆಲ್ಮೆಟ್ ಧರಿಸಿ ಬಸ್ ಚಾಲನೆ ಮಾಡುತ್ತಿದ್ದಾರೆ. ಕೊಡಗಿನಲ್ಲೂ ಕೊರೊನಾ ವೈರಸ್ ಸೋಂಕಿತ ಶಂಕಿತರು ಪತ್ತೆಯಾಗುತ್ತಿದ್ದಂತೆ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಹೀಗಾಗಿ ಚಾಲಕ ಉಷಾಕುಮಾರ್ ಮಾಸ್ಕ್ ಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಮಾಸ್ಕ್ ಸಿಗದ ಹಿನ್ನೆಲೆಯಲ್ಲಿ ಹೆಲ್ಮೆಟ್ ಧರಿಸಿ ಬಸ್ ಚಾಲನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ದುಬೈನಿಂದ ಬಂದ ವ್ಯಕ್ತಿಗೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ

    ಮಡಿಕೇರಿಯಿಂದ ಕುಶಾಲನಗರ ಮಾರ್ಗದಲ್ಲಿ ಬಸ್ಸು ಓಡಿಸುವ ಇವರು, ಬಹುತೇಕ ಮೆಡಿಕಲ್ ಶಾಪ್‍ಗಳಲ್ಲಿ ಮಾಸ್ಕ್ ಗಳನ್ನು ಕೇಳಿದ್ದಾರೆ. ಆದರೆ ಎಲ್ಲೂ ಸಿಕ್ಕಿಲ್ಲ, ಈ ಹಿನ್ನೆಲೆ ಆತಂಕಗೊಂಡು ಹೆಲ್ಮೆಟ್ ಮೊರೆ ಹೋಗಿದ್ದಾರೆ ತಿಳಿದುಬಂದಿದೆ.