Tag: ಕೆ.ಎನ್.ರಾಜಣ್ಣ

  • ಸಿದ್ದರಾಮಯ್ಯ ಸಂಪುಟ ಪುನಾರಚನೆ ಮಾಡಿದ್ರೆ ಅವ್ರೇ 5 ವರ್ಷ ಸಿಎಂ – ಕೆ.ಎನ್‌ ರಾಜಣ್ಣ ಬಾಂಬ್‌

    ಸಿದ್ದರಾಮಯ್ಯ ಸಂಪುಟ ಪುನಾರಚನೆ ಮಾಡಿದ್ರೆ ಅವ್ರೇ 5 ವರ್ಷ ಸಿಎಂ – ಕೆ.ಎನ್‌ ರಾಜಣ್ಣ ಬಾಂಬ್‌

    – ಓಬಿಸಿಗಳಿಗೆ ಲೋಕಸಭೆ, ವಿಧಾನ ಸಭೆ ಚುನಾವಣೆಯಲ್ಲಿ ಮೀಸಲಾತಿಗೆ ಮನವಿ

    ತುಮಕೂರು: ಸಂಪುಟ ಪುನಾರಚನೆ (Cabinet Reshuffle) ಯಾರು ಮಾಡುತ್ತಾರೋ ಅವರೇ ಸಿಎಂ ಆಗಲಿದ್ದಾರೆ ಅಥವಾ ಮುಂದುವರಿಯಲಿದ್ದಾರೆ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ (KN Rajanna) ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಮಾತನಾಡಿದ ರಾಜಣ್ಣ, ಸಿಎಂ ಸಿದ್ದರಾಮಯ್ಯರಿಗೆ ಸಂಪುಟ ಪುನಾರಚನೆ ಮಾಡಲು ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ಸಿದ್ದರಾಮಯ್ಯನವರೇ (Siddaramaiah) 5 ವರ್ಷ ಸಿಎಂ ಆಗಿ ಮುಂದುವರೆಯೋದು ಖಚಿತ. ಇಲ್ಲ ಅಂದರೆ ರಾಜಕೀಯದಲ್ಲಿ ಯಾವುದೇ ಬೆಳವಣಿಗೆ ನಡೆಯಬಹುದು ಎಂದು ರಾಜಣ್ಣ ಪರೋಕ್ಷವಾಗಿ ನವೆಂಬರ್ ಕ್ರಾಂತಿ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಇದನ್ನೂ ಓದಿ: ವಿದ್ಯಾವಂತರು ʻಎ ಖಾತಾ’ ಪರಿವರ್ತನೆ ಒಪ್ಪುತ್ತಿರೋದಕ್ಕೆ ಧನ್ಯವಾದ; ಕುಮಾರಸ್ವಾಮಿ ಖಾಲಿ ಟ್ರಂಕ್ ಎಂದ ಡಿಕೆಶಿ 

    ಎಲ್ಲವೂ ಬಿಹಾರ ಚುನಾವಣೆ ಫಲಿತಾಂಶದ ಬಗ್ಗೆ ನಡೆಯಲಿದೆ. ಅಲ್ಲಿಯವರೆಗೂ ಯಾವುದೇ ಬೆಳವಣಿಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯರೇ ಮುಂದುವರಿಯಬಹುದೂ ಅನ್ನೋದನ್ನು ರಾಜಣ್ಣ ಪರೋಕ್ಷವಾಗಿ ಹೇಳಿದ್ದಾರೆ. ಇದನ್ನೂ ಓದಿ: Bihar Election 2025 | ಪಂಚಾಯತ್ ಪ್ರತಿನಿಧಿಗಳಿಗೆ ಪಿಂಚಣಿ, 50 ಲಕ್ಷ ವಿಮೆ, 5 ಲಕ್ಷ ಆರ್ಥಿಕ ನೆರವು ನೀಡುವುದಾಗಿ ತೇಜಸ್ವಿ ಭರವಸೆ

    ಚುನಾವಣೆಯಲ್ಲೂ ಮೀಸಲಾತಿಗೆ ಆಗ್ರಹ
    ಮುಂದಿವರಿದು ಮಾತನಾಡಿದ ರಾಜಣ್ಣ ಅವರು, ಸಂಪುಟ ಪುನಾರಚನೆ ಆಗಲಿದೆ. ಇನ್ಮುಂದೆ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಮೀಸಲಾತಿ ಇರುವಂತೆ. ಓಬಿಸಿಗಳಿಗೆ ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಮೀಸಲಾತಿ ಕೊಡಬೇಕು. ಎಸ್ಸಿ-ಎಸ್ಟಿ ಮೀಸಲು ಕ್ಷೇತ್ರ ಇರುವಂತೆ ಓಬಿಸಿ ಮೀಸಲು ಕ್ಷೇತ್ರ ಕೊಡಬೇಕು. ಕೇಂದ್ರ ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ʻಒಂದ್‌ ಸಲ ಕಮಿಟ್‌ ಆದ್ರೆ ತನ್ನ ಮಾತ್‌ ತಾನೇ ಕೇಳಲ್ಲʼ – ಜಾಹೀರಾತಿನಿಂದ ಸಿಟ್ಟಿಗೆದ್ದ ಟ್ರಂಪ್‌, ಕೆನಡಾ ಮೇಲೆ ಹೆಚ್ಚುವರಿ 10% ಸುಂಕ

  • ಈದ್ಗಾ ಮೈದಾನ ಬಳಿ ರಸ್ತೆಯಲ್ಲೇ ನಮಾಜ್ ಮಾಡ್ತಾರಪ್ಪ, ಪರ್ಮಿಷನ್ ತಗೋತಾರ ಅವ್ರು?: ಕೆ.ಎನ್.ರಾಜಣ್ಣ

    ಈದ್ಗಾ ಮೈದಾನ ಬಳಿ ರಸ್ತೆಯಲ್ಲೇ ನಮಾಜ್ ಮಾಡ್ತಾರಪ್ಪ, ಪರ್ಮಿಷನ್ ತಗೋತಾರ ಅವ್ರು?: ಕೆ.ಎನ್.ರಾಜಣ್ಣ

    ತುಮಕೂರು: ಆರ್‌ಎಸ್‌ಎಸ್‌ಗೆ (RSS) ಅಂಕುಶ ಹಾಕಲು ಹೊರಟಿದ್ದ ಸರ್ಕಾರದ ಧೋರಣೆಗೆ ಮಾಜಿ ಸಚಿವ ಕೆ.ಎನ್.ರಾಜಣ್ಣ (K.N.Rajanna) ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ‌

    ತುಮಕೂರಿನಲ್ಲಿ (Tumakuru) ಮಾತನಾಡಿದ ರಾಜಣ್ಣ, ಈದ್ಗಾ ಮೈದಾನದಲ್ಲಿ ನಮಾಜ್ ಮಾಡುವಾಗ ರಸ್ತೆಯಲ್ಲೇ ನಮಾಜ್ ಮಾಡ್ತಾರಪ್ಪ. ಹಾಗಾದರೆ ಅವರೆಲ್ಲ ಪರ್ಮಿಷನ್ ತಗೊಂಡೇ ಅಲ್ಲಿ ನಮಾಜ್ ಮಾಡ್ತಾರಾ ಎಂದು ರಾಜಣ್ಣ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ನಾಳೆ RSS ಪಥ ಸಂಚಲನ – ಚಿತ್ತಾಪುರದಲ್ಲಿ ಹಾಕಿದ್ದ ಬ್ಯಾನರ್‌, ಬಂಟಿಂಗ್‌ ತೆರವು

    ಪರ್ಮಿಷನ್ ಕೊಡಿ ಅಂತ ಅವ್ರು ಬರಲ್ಲಾ. ಅಥವಾ ಪರ್ಮಿಷನ್ ತಗೊಳಿ ಅಂತ ನಾವು ಕೇಳೋದಿಲ್ಲ. ಹೀಗಾಗಿ, ಜಾರಿ ಮಾಡಲು ಸಾಧ್ಯವಾಗುವಂತಹ ಕಾನೂನನ್ನು ಮಾತ್ರ ತರಬೇಕು. ಅದನ್ನು ಬಿಟ್ಟು ಜಾರಿ ಮಾಡಲಾಗದ ಕಾನೂನು ತಂದ್ರೆ ಪುಸ್ತಕದಲ್ಲಿ ಇರಬೇಕು ಅಷ್ಟೇ ಎಂದು ಆರ್‌ಎಸ್‌ಎಸ್‌ಗೆ ನಿರ್ಬಂಧ ಹಾಕುವ ಸರ್ಕಾರದ ಧೋರಣೆಗೆ ರಾಜಣ್ಣ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

    ಸರ್ಕಾರಿ ಜಾಗದಲ್ಲಿ ಆರ್‌ಎಸ್‌ಎಸ್ ಆಗಲಿ ಬೇರೆ ಯಾವುದೇ ಸಂಘಟನೆ ಆಗಲಿ ಅನುಮತಿ ಪಡೆದು ಕಾರ್ಯಕ್ರಮ ಮಾಡಿ ಅಂತ ಹೇಳಿದ್ದಾರೆ. ಅದು ಎಷ್ಟರ ಮಟ್ಟಿಗೆ ಜಾರಿ ಆಗುತ್ತೆ ಎನ್ನುವುದನ್ನು ನೋಡೋಣ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಲಿಂಗಾಯತ ಧರ್ಮದ ಬಗ್ಗೆ ಅವಹೇಳನ; ಬಾಗಲಕೋಟೆ ತೊರೆಯುವಂತೆ ಕನ್ನೇರಿ ಶ್ರೀಗಳಿಗೆ ನೊಟೀಸ್!

  • ಸಿದ್ದರಾಮಯ್ಯ ಮೊದಲಿನಂತಿಲ್ಲ, ಹೇಳಲಾಗದ ಒತ್ತಡ ಇದೆ: ರಾಜಣ್ಣ ಬಾಂಬ್

    ಸಿದ್ದರಾಮಯ್ಯ ಮೊದಲಿನಂತಿಲ್ಲ, ಹೇಳಲಾಗದ ಒತ್ತಡ ಇದೆ: ರಾಜಣ್ಣ ಬಾಂಬ್

    ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ, ಪವರ್ ಶೇರಿಂಗ್ ಚರ್ಚೆ ಆಗಿಲ್ಲ. ಪಕ್ಷದ ಯಾರೂ ಈ ಬಗ್ಗೆ ಮಾತಾಡುವಂತಿಲ್ಲ ಅಂತ ಹೈಕಮಾಂಡ್ ನಾಯಕರು ಹೇಳಿದರೂ ರಾಜ್ಯ ನಾಯಕರ ವ್ಯಾಖ್ಯಾನಗಳು ಮುಂದುವರಿದಿವೆ.

    2013-18ರ ಸಿದ್ದರಾಮಯ್ಯ ಬೇರೆ.. ಇವಾಗಿನ ಸಿದ್ದರಾಮಯ್ಯ ಬೇರೆ. ಆಗ ಪಾದರಸದಂತೆ ಕೆಲಸ ಇರೋದು. ಈಗ ಅವರಿಗೆ ಬೇರೆ ಬೇರೆ ರೀತಿಯ ಒತ್ತಡ ಇದೆ. ಕೆಲವು ಹೇಳಲಾಗದೇ ಇರುವಂತಹ ಒತ್ತಡ ಇದೆ ಅಂದಿದ್ದಾರೆ. ಜೊತೆಗೆ, ನವೆಂಬರ್‌ನಲ್ಲಿ ಯಾವುದೇ ಬದಲಾವಣೆ ಆಗಲ್ಲ ಅಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 1.2 ಕೋಟಿ ಮನೆಗಳ ಸಮೀಕ್ಷೆ ಮುಕ್ತಾಯ – ಬೆಂಗಳೂರಲ್ಲಿ ಜಾತಿ ಜನಗಣತಿ ಮೊದಲ ದಿನವೇ ಗೊಂದಲ

    ಸಚಿವ ಜಮೀರ್ ಮಾತಾಡಿ, ನವೆಂಬರ್‌ಗೆ ಯಾವ ಕ್ರಾಂತಿ ಇಲ್ಲ, 5 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರ್ತಾರೆ ಅಂದಿದ್ದಾರೆ. ಅದಾಗ್ಯೂ, ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅಂತ ಬಯಸುತ್ತೇನೆ ಅಂತಲೂ ಹೇಳಿದ್ದಾರೆ.

    ಈ ಮಧ್ಯೆ, ಸಿದ್ದರಾಮಯ್ಯನವರೇ 5 ವರ್ಷವೂ ಸಿಎಂ ಆಗಿರ್ತಾರೆ ಅಂತ ಸಚಿವ ಮಹದೇವಪ್ಪ ಹಾಗೂ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿರೊ ಇಸ್ರೇಲ್ ರಾಯಭಾರ ಕಚೇರಿ, ಹೈಕೋರ್ಟ್‌ಗೆ RDX ಇಟ್ಟಿರೋದಾಗಿ ಇ-ಮೇಲ್‌ ಬೆದರಿಕೆ

  • ಜಾತಿ ಮುಂದೆ ಕ್ರಿಶ್ಚಿಯನ್ ಅಂತ ಬರೆದಿರೋದು ಸರ್ಕಾರವೇ ಮತಾಂತರಕ್ಕೆ ಪ್ರೋತ್ಸಾಹ ಕೊಟ್ಟಂತೆ: ಕೆ.ಎನ್‌ ರಾಜಣ್ಣ

    ಜಾತಿ ಮುಂದೆ ಕ್ರಿಶ್ಚಿಯನ್ ಅಂತ ಬರೆದಿರೋದು ಸರ್ಕಾರವೇ ಮತಾಂತರಕ್ಕೆ ಪ್ರೋತ್ಸಾಹ ಕೊಟ್ಟಂತೆ: ಕೆ.ಎನ್‌ ರಾಜಣ್ಣ

    ತುಮಕೂರು: ಜಾತಿ ಮುಂದೆ ಕ್ರಿಶ್ಚಿಯನ್ ಅಂತ ಬರೆದಿರೋದು ಸರ್ಕಾರವೇ ಮತಾಂತರಕ್ಕೆ (Conversion) ಪ್ರೋತ್ಸಾಹ ನೀಡಿದಂತೆ ಎಂದು ಕಾಂಗ್ರೆಸ್ ಶಾಸಕ ಕೆ.ಎನ್ ರಾಜಣ್ಣ (KN Rajanna) ಮತ್ತೊಮ್ಮೆ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ತುಮಕೂರಿನಲ್ಲಿ (Tumakuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ (Caste) ಮುಂದೆ ಕ್ರಿಶ್ಚಿಯನ್ ಅಂತ ಬರೆಯುವುದನ್ನು ನಾನೂ ವಿರೋಧ ಮಾಡಿದ್ದೇನೆ. ಅದನ್ನು ಈಗ ಡಿಲೀಟ್ ಮಾಡಿದ್ದಾರೆ. ಸರ್ಕಾರ ಈ ರೀತಿ ಬರೆದು ಸಮೀಕ್ಷೆ ಮಾಡೋದ್ರಿಂದ ಮತಾಂತರಕ್ಕೆ ಪ್ರೋತ್ಸಾಹ ಮಾಡಿದಂತೆ ಎಂದು ಖಂಡಿಸಿದ್ದಾರೆ. ಇದನ್ನೂ ಓದಿ: ಬಾನು ಮುಷ್ತಾಕ್ ಮೇಲೆ ನಮಗೆ ಗೌರವ ಹೆಚ್ಚಾಗಿದೆ: ನಾರಾಯಣಸ್ವಾಮಿ

    ಜೊತೆಗೆ ಮತಾಂತರಗೊಂಡವರು ಮೂಲ ಜಾತಿಯ ಮೀಸಲಾತಿ, ಸವಲತ್ತು ಪಡೀತಾರೆ. ಇದಕ್ಕೂ ಸರ್ಕಾರ ಅವಕಾಶ ಕೊಡಬಾರದು. ನಾನು ನಾಯಕ ಜಾತಿಯವನು ಕ್ರಿಶ್ಚಿಯನ್‌ಗೆ ಮತಾಂತರಗೊಂಡರೆ ನಾಯಕ ಜಾತಿಯ ಬೆನಿಫಿಟ್ ತಗೋಬಾರದು. ಸರ್ಕಾರ ಇದರ ಬಗ್ಗೆಯೂ ಗಮನ ಹರಿಸಬೇಕು ಎಂದು ರಾಜಣ್ಣ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ನಮ್ಮದು ಜಾತ್ಯಾತೀತ ಸರ್ಕಾರ ಆಗಿರೋದಕ್ಕೆ ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ ಮಾಡಿಸಿರೋದು: ಪ್ರದೀಪ್ ಈಶ್ವರ್

    ಮತಗಳ್ಳತನದ (Vote Chori) ತನಿಖೆ ವಿಚಾರದಲ್ಲಿ ಮಾತನಾಡಿದ ರಾಜಣ್ಣ, ಈಗ ಎಸ್‌ಐಟಿ ಮಾಡಿದ್ದಾರೆ. ಮೊದಲು ಒಂದು ಎಫ್‌ಐಆರ್ ರಿಜಿಸ್ಟ್ರಾರ್ ಮಾಡಿ ಆನ್ ಲೈನ್ 6-7 ಫಾರಂ ಕೊಟ್ಟಿರ್ತಾನೋ, ಯಾವ ಐಡಿಯಲ್ಲಿ ಬಂದಿದೆ ಅಂತ ಚೆಕ್ ಮಾಡಿ ಅವನ‌ ಮೇಲೆ ಕೇಸ್‌ ಹಾಕ್ಬೇಕು. ಮಲ್ಲಿಕಾರ್ಜುನ್ ಎಂಬಾತ ನನ್ನದೇ ಹೆಸರಲ್ಲಿ 7 ವೋಟ್ ಡಿಲೀಟ್ ಮಾಡಿದ್ದಾರೆ ಅಂತಿದ್ದಾರೆ. ಅವನದ್ದೇ ಕಂಪ್ಲೆಂಟ್‌ ತಗೊಂಡು, ಬಾಟಂನಿಂದ ಹೋಗಬೇಕು. ಅವನ ಊರು ಯಾವುದು? ಯಾವ ಉದ್ದೇಶಕ್ಕೆ ಮಾಡಿದ್ದಾನೆ? ಎಲ್ಲವನ್ನು ವಿಚಾರಣೆ ಮಾಡಬೇಕು. ಏಕೆಂದ್ರೆ ಇದು ಮಿಸ್ ರೆಪ್ರೆಸೆಂಟೇಷನ್ ಅಂಡ್ ಕ್ರಿಮಿನಲ್‌ ಸಂಚು ಕಾನೂನು ಅಡಿಯಲ್ಲಿ ಕೇಸ್ ದಾಖಲು ಮಾಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಕ್ಕಳ ದಾಸೋಹ ಸಂಗ್ರಹಕ್ಕೆ ಕಾರು ಉಡುಗೊರೆ ನೀಡಿದ ನಟ ವಿನೋದ್ ರಾಜ್

  • ಡಿಕೆಶಿ ಸಿಎಂ ಆಗಬೇಕು, ರಾಜಣ್ಣ ಲಾಯಲ್ಟಿ ಬಗ್ಗೆ ನಾನು ಮಾತಾಡಲ್ಲ: ಕುಣಿಗಲ್ ರಂಗನಾಥ್

    ಡಿಕೆಶಿ ಸಿಎಂ ಆಗಬೇಕು, ರಾಜಣ್ಣ ಲಾಯಲ್ಟಿ ಬಗ್ಗೆ ನಾನು ಮಾತಾಡಲ್ಲ: ಕುಣಿಗಲ್ ರಂಗನಾಥ್

    ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಸಿಎಂ ಆಗಬೇಕು ಅಂತಾ ಕಾರ್ಯಕರ್ತರು ಹೇಳೋದ್ರಲ್ಲಿ ಅರ್ಥ ಇದೆ. ಡಿ.ಕೆ ಶಿವಕುಮಾರ್ ಸಿಎಂ ಆಗ್ತಾರೆ ಅಂತಾ ನಾನೂ ಹೇಳಿದ್ದೇನೆ ಅಂತಾ ಕುಣಿಗಲ್ ಶಾಸಕ ರಂಗನಾಥ್ (Ranganath) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಸರ್ಕಾರದಲ್ಲಿ ಗೊಂದಲ ಆಗುವ ಹೇಳಿಕೆ ಕೊಡಬಾರದು. ಕೆಲವು ವಿಚಾರದಲ್ಲಿ ನನಗೂ ಅಸಮಾಧಾನ ಇದೆ. ಆದರೆ ತುಮಕೂರು ವಿಚಾರದಲ್ಲಿ ನಾನು ಹೋಗಿ ಕೂತು, ನಾಲ್ಕು ಗೋಡೆ ಮಧ್ಯೆ ಬಗೆಹರಿಸಿಕೊಳ್ತೇನೆ ಎಂದಿದ್ದಾರೆ. ಇದನ್ನೂ ಓದಿ: ನಾವು ಸಿದ್ದರಾಮಯ್ಯ ಶಿಷ್ಯರೇ, ಬ್ರೈನ್ ಮ್ಯಾಪಿಂಗ್‌ಗೆ ನಾನು ರೆಡಿ – ರಾಜಣ್ಣ ವಿರುದ್ಧ ಮತ್ತೆ ಕಿಡಿಕಾರಿದ ಮಾಗಡಿ ಬಾಲಕೃಷ್ಣ

    ರಾಜಣ್ಣನವರು ನಮ್ಮ ಜಿಲ್ಲೆಯ ಹಿರಿಯ ನಾಯಕರು. ಅವರು ಬೇರೆ ಪಾರ್ಟಿಗೆ ಹೋಗಿ ಬಂದಿರಬಹುದು. ಆದ್ರೆ ಬಿಜೆಪಿಗೆ ಹೋಗೋ ನಿರ್ಧಾರ ಮಾಡಲ್ಲ. ಆ ವಿಚಾರದಲ್ಲಿ ಮಾತಾಡುವಷ್ಟು ನಾನು ದೊಡ್ಡವನಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಂದಿನ ಮೂರ್ನಾಲ್ಕು ದಿನ ಬೆಂಗ್ಳೂರಿಗೆ ಮಳೆ ಅಲರ್ಟ್‌

     ಹೈಕಮಾಂಡ್ ವಿರುದ್ಧ ಮಾತಾಡಿದ್ದಕ್ಕೆ ವಜಾ ಮಾಡಿದ್ದಾರೆ. ಹೈಕಮಾಂಡ್‌ನವರೇ ಮಂತ್ರಿ ಮಾಡಿದ್ದಾರೆ. ರಾಜೇಂದ್ರ ಅವರು ದೊಡ್ಡ ರಾಜಕಾರಣಿ. ಅವರ ಬಗ್ಗೆ ಮಾತಾಡುವಷ್ಟು ದೊಡ್ಡವನಲ್ಲ. ಅವರಿಗೆ ಎಂಎಲ್‌ಸಿ ಚುನಾವಣೆಯಲ್ಲಿ ನಾನೂ ಸಾಥ್ ಕೊಟ್ಟಿದ್ದೇನೆ. ರಾಜಣ್ಣ ಲಾಯಲ್ಟಿ ಬಗ್ಗೆ ನಾನು ಮಾತಾಡಲ್ಲ ಎಂದು ಹೇಳಿ ಜಾರಿಕೊಂಡರು.

  • ಕಾಂಗ್ರೆಸ್ ನನಗೆ ಮೋಸ ಮಾಡಿಲ್ಲ, ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ: ಕೆ.ಎನ್.ರಾಜಣ್ಣ ಸ್ಪಷ್ಟನೆ

    ಕಾಂಗ್ರೆಸ್ ನನಗೆ ಮೋಸ ಮಾಡಿಲ್ಲ, ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ: ಕೆ.ಎನ್.ರಾಜಣ್ಣ ಸ್ಪಷ್ಟನೆ

    – ಸಿದ್ದರಾಮಯ್ಯ ನೇತೃತ್ವ ಇರೋವರೆಗೂ ನನ್ನ ಭವಿಷ್ಯಕ್ಕೆ ತೊಂದರೆ ಇಲ್ಲ ಎಂದ ಮಾಜಿ ಸಚಿವ

    ತುಮಕೂರು: ಕಾಂಗ್ರೆಸ್ ಪಕ್ಷ ನನಗೆ ಮೋಸ ಮಾಡಿಲ್ಲ. ಯಾವುದೇ ಕಾರಣಕ್ಕೂ ನಾನು ಪಕ್ಷ ಬಿಡಲ್ಲ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ (K.N.Rajanna) ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಸೇರುತ್ತಾರೆಂಬ ಆರೋಪವನ್ನು ಅಲ್ಲಗಳೆದಿದ್ದಾರೆ.

    ಮಧುಗಿರಿಯ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ರಾಜಣ್ಣ, ಅನ್ನಭಾಗ್ಯ ಕಾರ್ಯಕ್ರಮ ನನಗೆ ಬಹಳ ಪ್ರೀತಿಯ ಯೋಜನೆ. ಸಿದ್ದರಾಮಯ್ಯ ಅವರು ಅನ್ನಭಾಗ್ಯ ಕಾರ್ಯಕ್ರಮದಿಂದ ನನಗೆ ಅಚ್ಚುಮೆಚ್ಚು. ಅದಕ್ಕೆ ನಾನು ಅವರನ್ನು ಹೆಚ್ಚು ಪ್ರೀತಿ ಮಾಡುತ್ತೇನೆ. ಹಸಿವಿನ ಪಿಡುಗು ತೊಡೆದು ಹಾಕಿದ್ದು ಮಾನ್ಯ ಸಿದ್ದರಾಮಯ್ಯ. ಉಳಿದ ಸಿಎಂಗಳಿಗೆ ಮನಸ್ಥಿತಿ ಇರಲಿಲ್ಲ. ಹಾಗಾಗಿ ಅವರು ಅನ್ನಭಾಗ್ಯದಂತಹ ಕಾರ್ಯಕ್ರಮ ತಂದಿಲ್ಲ. ಸಿದ್ದರಾಮಯ್ಯನವರು ಅವರ ಮನೆಯಿಂದ ತಂದು ಕೊಟ್ಟಿಲ್ಲ ನಿಜ. ಆದರೆ ಬೇರೆ ಸಿಎಂಗಳು ಯಾಕೆ ಕೊಟ್ಟಿಲ್ಲ. ಮಧುಗಿರಿ ತಾಲೂಕಿನಲ್ಲಿ ಅನ್ನಭಾಗ್ಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಬಡವರ ಕಾರ್ಯಕ್ರಮ ಮಂಜೂರು ಮಾಡುವಾಗ ನಾವು ತಾರತಮ್ಯ ಮಾಡಿಲ್ಲ. ಪಕ್ಷಕ್ಕೆ ಮತ ಹಾಕಿಲ್ಲ ಎಂದು ಸವಲತ್ತು ಕೊಡದೇ ಇಲ್ಲ ನಾನು. ಎಲ್ಲಾ ಪಕ್ಷ, ಜಾತಿಯವರಿಗೆ ಮನೆಗಳು ಮಂಜೂರು ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜಣ್ಣ ಬಿಜೆಪಿಗೆ ಹೋಗಲು ಅರ್ಜಿ ಹಾಕಿದ್ದಾರೆ – ಬಾಲಕೃಷ್ಣ ಸ್ಫೋಟಕ ಹೇಳಿಕೆ

    ನಾನು ಮಾಜಿ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಅದರಿಂದ ಬೇಜಾರಿಲ್ಲ. 35 ಸಾವಿರ ಲೀಡ್‌ನಿಂದ ನಾನು ಗೆದ್ದಿದ್ದೇನೆ. ಈಗ ಚುನಾವಣೆ ಆದರೂ ನಾನೂ ಹೆಚ್ಚು ಮತದಿಂದ ಗೆಲ್ಲುತ್ತೇನೆ. ನಾನು ಭ್ರಷ್ಟಾಚಾರ ಮಾಡಿಲ್ಲ. ಆದರೂ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ ಎಂದು ಮಾತನಾಡಿದ್ದಾರೆ.

    ನಾನ್ಯಾಕೆ ಬಿಜೆಪಿ ಸೇರಲಿ? ಅವಕಾಶ ಇಲ್ಲ ನನಗೆ. ಪಾರ್ಟಿ ನನಗೆ ಏನೂ ಮೋಸ ಮಾಡಿಲ್ಲ. ಯಾವ ಕಾರಣಕ್ಕೂ ನಾನು ಕಾಂಗ್ರೆಸ್ ಬಿಡಲ್ಲ. ಜನರು ನನಗೆ ಕಾಂಗ್ರೆಸ್, ಬಿಜೆಪಿ ಅಥವಾ ಇಂಡಿಪೆಂಡೆಂಟ್ ನಿಂತರೂ ಮತ ಹಾಕುತ್ತಾರೆ. ರಾಹುಲ್ ಗಾಂಧಿ ಮತಗಳ್ಳತನ ಹೋರಾಟವನ್ನು ನಾನು ಬೆಂಬಲಿಸುತ್ತೇನೆ. ಸಿದ್ದರಾಮಯ್ಯ ನೇತೃತ್ವ ಇರೋವರೆಗೂ ನನ್ನ ಭವಿಷ್ಯಕ್ಕೆ ತೊಂದರೆ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೈಸೂರು| ಕಾಂಗ್ರೆಸ್‌ ಶಾಸಕನಿಂದ ಧರ್ಮಸ್ಥಳ ಯಾತ್ರೆ

    ರಾಜಕೀಯದಲ್ಲಿ ದುಡ್ಡು ಅಥವಾ ಜಾತಿ ಇದ್ದಾಗ ಮಾತ್ರ ಬೆಳೆಯಬಹುದು. ಅದು ಎರಡೂ ನನ್ನ ಬಳಿ ಇಲ್ಲ. ಆದರೂ ಕ್ಷೇತ್ರದ ಜನರು ನನ್ನ ಬೆಳೆಸಿದ್ದಾರೆ ಎಂದಿದ್ದಾರೆ.

  • ರಾಜಣ್ಣ ಬಿಜೆಪಿಗೆ ಹೋಗಲು ಅರ್ಜಿ ಹಾಕಿದ್ದಾರೆ – ಬಾಲಕೃಷ್ಣ ಸ್ಫೋಟಕ ಹೇಳಿಕೆ

    ರಾಜಣ್ಣ ಬಿಜೆಪಿಗೆ ಹೋಗಲು ಅರ್ಜಿ ಹಾಕಿದ್ದಾರೆ – ಬಾಲಕೃಷ್ಣ ಸ್ಫೋಟಕ ಹೇಳಿಕೆ

    – ಅವರ ಬ್ರೈನ್ ಮ್ಯಾಪಿಂಗ್ ಮಾಡಿದ್ರೆ ಸತ್ಯ ಗೊತ್ತಾಗುತ್ತೆ ಎಂದ ಶಾಸಕ

    ರಾಮನಗರ: ಕೆ.ಎನ್.ರಾಜಣ್ಣ (KN Rajanna) ಬಿಜೆಪಿಗೆ (BJP) ಹೋಗಲು ಅರ್ಜಿ ಹಾಕಿದ್ದಾರೆ. ಅವರ ಬ್ರೈನ್ ಮ್ಯಾಪಿಂಗ್ ಮಾಡಿದ್ರೆ ಸತ್ಯ ಗೊತ್ತಾಗುತ್ತದೆ. ಅವರು ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ರಾಮನಗರದಲ್ಲಿ (Ramanagar) ಮಾಧ್ಯಮದವರೊಂದಿಗೆ ಮಾತನಾಡಿ ಕೆ.ಎನ್.ರಾಜಣ್ಣರನ್ನ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲು ಒತ್ತಡ ಹೇರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ನನಗಿರುವ ಮಾಹಿತಿ ಪ್ರಕಾರ ಕೆ.ಎನ್.ರಾಜಣ್ಣ ಬಿಜೆಪಿಗೆ ಅರ್ಜಿ ಹಾಕಿದ್ದಾರೆ. ಹೈಕಮಾಂಡ್ ವಿರುದ್ಧ ಮಾತನಾಡಿದ್ದಕ್ಕೆ ಅವರು ವಜಾ ಆಗಿದ್ದಾರೆ. ಹೀಗಾಗಿ ಬೇರೆ ಪಕ್ಷಕ್ಕೆ ಹೋಗುವ ಮುನ್ನ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತಿದ್ದಾರೆ. ಈಗೇನೋ ದೆಹಲಿಯಲ್ಲಿ ಸಮಾವೇಶ ಮಾಡ್ತಾರಂತೆ ಮಾಡಲಿ. ಕೆ.ಎನ್.ರಾಜಣ್ಣ ಬಿಜೆಪಿಗೆ ಹೋಗ್ತಿದ್ದಾರೋ? ಇಲ್ವೋ? ಅಂತ ಅವರನ್ನೇ ಕೇಳಿ. ಅವರ ಬ್ರೈನ್ ಮ್ಯಾಪಿಂಗ್ ಮಾಡಿಸಿದ್ರೆ ಎಲ್ಲಾ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ವರುಣಾರ್ಭಟಕ್ಕೆ ಉತ್ತರ ಭಾರತ ತತ್ತರ – ವಿಶೇಷ ಪ್ಯಾಕೇಜ್ ಘೋಷಿಸಲು ಖರ್ಗೆ ಆಗ್ರಹ

    ರಾಜಣ್ಣ ಅವರನ್ನ ಸ್ವಾಗತ ಮಾಡ್ತಿರೋದು ಬಿಜೆಪಿ ನಾಯಕರೇ ಅಲ್ವಾ? ರಾಜಣ್ಣ ಈ ಹಿಂದೆ ನನಗೆ ಯಾವ ಪಕ್ಷದ ಅವಶ್ಯಕತೆಯೂ ಇಲ್ಲ ಅಂದಿದ್ದರು. ಈಗ ಯಾರ ಜೊತೆ ಸಂಪರ್ಕದಲ್ಲಿದ್ದಾರೆ ಅಂತ ಗೊತ್ತಾಗಬೇಕು. ನೂರಕ್ಕೆ ನೂರರಷ್ಟು ಅವರು ಬಿಜೆಪಿಗೆ ಸೇರುತ್ತಾರೆ. ನಮ್ಮ ಸರ್ಕಾರ ಇಲ್ಲ ಅಂದಿದ್ರೆ ಇಷ್ಟೊತ್ತಿಗೆ ಅವರು ಬಿಜೆಪಿ ಸೇರಿರುತ್ತಿದ್ದರು. ಈಗಾಗಲೇ ಒಂದು ಕಾಲು ಅವರು ಬಿಜೆಪಿಯಲ್ಲಿ ಇಟ್ಟಿದ್ದಾರೆ. ಜೊತೆಗೆ ಬಿಜೆಪಿ ಕೇಂದ್ರ, ರಾಜ್ಯ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ.

    ಕೆ.ಎನ್.ರಾಜಣ್ಣ ಮಂತ್ರಿಯಾಗಿದ್ದಾಗ ಯಾವ ರೀತಿ ನಡೆದುಕೊಂಡರು ಎಂದು ಎಲ್ಲರಿಗೂ ಗೊತ್ತಿದೆ. ಅವರ ನಡವಳಿಕೆ, ಮಾತು ಯಾವ ರೀತಿಯಿತ್ತು ಎನ್ನೋದು ಕೂಡ ಗೊತ್ತಿದೆ. ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು ಎನ್ನುವ ಹಾಗೇ ಅವರು ಮಾತಾಡುತ್ತಿದ್ದರು. ಅವರ ಮಾತಿನಿಂದಲೇ ಅವರು ಕೆಟ್ಟಿರೋದು, ಅದರ ಹಿಂದೆ ಯಾರ ಷಡ್ಯಂತ್ರವೂ ಇಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಕಿಡ್ನ್ಯಾಪ್‌ ಜಾಲ ಪತ್ತೆ – ಐವರು ಅರೆಸ್ಟ್‌, 6 ಮಕ್ಕಳ ರಕ್ಷಣೆ

  • ರಾಜಣ್ಣ ರಾಜೀನಾಮೆ ಬಳಿಕ ಸಹಕಾರ ಇಲಾಖೆಯ ಮೊದಲ ಸಭೆ ನಡೆಸಿದ ಸಿಎಂ

    ರಾಜಣ್ಣ ರಾಜೀನಾಮೆ ಬಳಿಕ ಸಹಕಾರ ಇಲಾಖೆಯ ಮೊದಲ ಸಭೆ ನಡೆಸಿದ ಸಿಎಂ

    – ಪ್ರಸಕ್ತ ಸಾಲಿನಲ್ಲಿ 37 ಲಕ್ಷ ರೈತರಿಗೆ 28,000 ಕೋಟಿ ಸಾಲ ವಿತರಣೆ ಗುರಿ

    ಬೆಂಗಳೂರು: ಸಹಕಾರ ಇಲಾಖೆಯ ಸಚಿವ ಸ್ಥಾನಕ್ಕೆ ಕೆ.ಎನ್‌ ರಾಜಣ್ಣ (KN Rajanna) ರಾಜೀನಾಮೆ ನೀಡಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಂದು ಸಹಕಾರ ಇಲಾಖೆಯ ಮೊದಲ ಸಭೆ ನಡೆಸಿದರು.

    ಸಿಎಂ ಅಧಿಕೃತ ನಿವಾಸ ಕೃಷ್ಣಾದಲ್ಲಿ ಸಹಕಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ (Cooperation Department KDP Meeting) ನಡೆಸಿ ಹಲವು ಮಹತ್ವದ ವಿಷಯಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಅಲ್ಲದೇ ರಾಜ್ಯದಲ್ಲಿ ಸಹಕಾರಿ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಹಕಾರ ಇಲಾಖೆ ಅಧಿಕಾರಿಗಳು ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

    ಸಿಎಂ ಸಭೆಯ ಮುಖ್ಯಾಂಶಗಳೇನು?
    * ರಾಜ್ಯದಲ್ಲಿ ಪ್ರಸ್ತುತ ಸಾಲಿನಲ್ಲಿ 37 ಲಕ್ಷ ರೈತರಿಗೆ ರೂ.28,000 ಕೋಟಿ ಸಾಲ ವಿತರಣೆಯ ಗುರಿ ಹೊಂದಲಾಗಿದ್ದು, ಜುಲೈ ಅಂತ್ಯದವರೆಗೆ 8,69,284 ರೈತರಿಗೆ ರೂ.8,362.68 ಕೋಟಿ ಸಾಲ ವಿತರಣೆ ಮಾಡಲಾಗಿದೆ. ರೈತರಿಗೆ ಸಕಾಲದಲ್ಲಿ ಕೃಷಿ ಸಾಲ ಸಿಗುವುದನ್ನು ಪ್ರತಿ ಜಿಲ್ಲೆಯಲ್ಲೂ ಖಾತ್ರಿಪಡಿಸಬೇಕು.

    • ನಬಾರ್ಡ್ ರಿಯಾಯಿತಿ ಬಡ್ಡಿ ದರದ ಸಾಲದ ಮಿತಿಯನ್ನು ಹಿಂದಿನ ಸಾಲಿನಲ್ಲಿದ್ದ ರೂ.5,600 ಕೋಟಿಗಳಿಂದ ರೂ.3,236.11 ಕೋಟಿಗೆ ಅಂದರೆ ಶೇ.42.21ರಷ್ಟು ಕಡಿಮೆ ಮಾಡಿದೆ. ಆದರೂ ಸಾಲ ವಿತರಣೆಯಲ್ಲಿ ಶೇ.96.07 ರಷ್ಟು ಪ್ರಗತಿ ಸಾಧಿಸಲಾಗಿದೆ. 2024-25ನೇ ಸಾಲಿನಲ್ಲಿ 29,75,598 ರೈತರಿಗೆ 25,939.09 ಕೋಟಿ ಕೃಷಿ ಸಾಲ ವಿತರಣೆ ಮಾಡಲಾಗಿದೆ.

    • ರಾಜ್ಯದಲ್ಲಿ 28,516 ಸಹಕಾರ ಸಂಘಗಳು ಲಾಭದಲ್ಲಿದ್ದು, 14,670 ಸಂಘಗಳು ನಷ್ಟದಲ್ಲಿವೆ. ಸಾಲ ವಸೂಲಾತಿ ಸರಿಯಾಗಿ ಆಗದ ಕಾರಣ ಬಹುತೇಕ ಸಂಘಗಳು ನಷ್ಟದಲ್ಲಿದ್ದು, ಅಂತಹ ಸಂಘಗಳು ಸಾಲ ವಸೂಲಾತಿಗೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಇದರಲ್ಲಿ 2,200 ಹಾಲು ಉತ್ಪಾದಕ ಸಂಘಗಳು ನಷ್ಟದಲ್ಲಿವೆ. ಹಾಲು ಉತ್ಪಾದಕ ಸಹಕಾರ ಸಂಘಗಳ ವೆಚ್ಚದ ಮೇಲೆ ನಿಗಾ ಇರಿಸಬೇಕು. ಹಾಲು ಉತ್ಪಾದನೆಯನ್ನು ಹೆಚ್ಚಿಸುವುದು ಸಂಘಗಳ ಕಾರ್ಯದರ್ಶಿಗಳ ಜವಾಬ್ದಾರಿ. ಹಾಲು ಉತ್ಪಾದಕ ಸಹಕಾರ ಸಂಘಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು.

    • ಕನ್ನಡ ಸಾಹಿತ್ಯ ಪರಿಷತ್‌‌ನ ಅವ್ಯವಹಾರಗಳ ಕುರಿತು ಡಿಆರ್‌ಸಿಎಸ್ ತನಿಖೆ ನಡೆಸುತ್ತಿದೆ. ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಕೆಲವು ಸದಸ್ಯರ ಸದಸ್ಯತ್ವವನ್ನು ಪರಿಷತ್ ರದ್ದುಪಡಿಸುತ್ತಿರುವ ಕುರಿತು ದೂರುಗಳು ಬಂದಿದ್ದು, ಈ ಕುರಿತು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು.

    • ಸಹಕಾರ ಸಂಘಗಳ ಹಿರಿಯ ನಿರೀಕ್ಷಕರ 126 ಹುದ್ದೆಗಳು ಹಾಗೂ ಸಹಕಾರ ಸಂಘಗಳ ನಿರೀಕ್ಷಕರ 403 ಹುದ್ದೆಗಳು ಖಾಲಿಯಿವೆ. ಹುದ್ದೆಗಳ ಭರ್ತಿಗೆ ಪ್ರಸ್ತಾವನೆ ಸಲ್ಲಿಸಬೇಕು.

    • ಸಹಕಾರ ಸಂಘಗಳ ನಿಬಂಧಕರ ಕಚೇರಿಯ ವ್ಯಾಪ್ತಿಯ ಸೇವೆಗಳನ್ನು ಗಣಕೀಕರಿಸುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.

    • ರಾಜ್ಯದಲ್ಲಿ 7,074 ಗಿರವಿದಾರ ಸಂಸ್ಥೆಗಳು ಹಾಗೂ 1,468 ಚೀಟಿ ಸಂಸ್ಥೆಗಳು ಕರ್ನಾಟಕ ಲೇವಾದೇವಿಗಾರರ ಅಧಿನಿಯಮ 1961, ಕರ್ನಾಟಕ ಗಿರವಿದಾರರ ಅಧಿನಿಯಮ 1961 ಮತ್ತು ಚೀಟಿನಿಧಿಗಳ ಅಧಿನಿಯಮ 1982ರಡಿ ನೋಂದಣಿಯಾಗಿವೆ. ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಗಿರವಿದಾರ ಸಂಸ್ಥೆಗಳು ಹಾಗೂ ಚೀಟಿ ಸಂಸ್ಥೆಗಳ ಮೇಲೆ ನಿಗಾ ಇರಿಸಬೇಕು…

  • ಸಮಯ ಬಂದಾಗ ಮತ್ತೆ ಸಚಿವ ಸ್ಥಾನ ಪಡೆಯುತ್ತೇನೆ: ಕೆ.ಎನ್.ರಾಜಣ್ಣ

    ಸಮಯ ಬಂದಾಗ ಮತ್ತೆ ಸಚಿವ ಸ್ಥಾನ ಪಡೆಯುತ್ತೇನೆ: ಕೆ.ಎನ್.ರಾಜಣ್ಣ

    – ಕಾಣದ ಕೈಗಳ ಕೈವಾಡ ಇದೆ, ಸಿಎಂಗೂ ಅದು ಗೊತ್ತಿಲ್ಲ ಎಂದ ಮಾಜಿ ಸಚಿವ

    ತುಮಕೂರು: ಸಮಯ ಬಂದಾಗ ಇದೇ ಅವಧಿಯಲ್ಲಿ ಸಚಿವ ಸ್ಥಾನ ಮತ್ತೆ ಪಡೆಯುತ್ತೇನೆ. ಹೈಕಮಾಂಡ್ ಕನ್ವಿನ್ಸ್ ಆಗುತ್ತಾರೆ ಎಂಬ ವಿಶ್ವಾಸ ಇದೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ (K.N.Rajanna) ಭರವಸೆ ವ್ಯಕ್ತಪಡಿಸಿದರು.

    ಸಚಿವ ಸ್ಥಾನದಿಂದ ವಜಾ ಆದ ಬಳಿಕ ರಾಜಣ್ಣ ತಮ್ಮ ಸ್ವಕ್ಷೇತ್ರ ಮಧುಗಿರಿಗೆ ಇದೇ ಮೊದಲ ಬಾರಿಗೆ ಭೇಟಿ ಕೊಟ್ಟಿದ್ದಾರೆ. ಸ್ವಾತಂತ್ರ‍್ಯ ದಿನಾಚರಣೆ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ನಡೆಸಿದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾದರು. ಬಳಿಕ ಮಧುಗಿರಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯನವರ ಕೈ ಬಲಪಡಿಸುವ ಕಡೆಗೆ ನಮ್ಮ ಚಿಂತನೆ ಇರಲಿ: ಅಭಿಮಾನಿಗಳಿಗೆ ರಾಜಣ್ಣ ಭಾವುಕ ಪತ್ರ

    ಕಳೆದ ವಾರ ಸಚಿವನಾಗಿ ಮಧುಗಿರಿಗೆ ಬಂದಿದ್ದೆ. ಈ ವಾರ ಮಾಜಿ ಸಚಿವನಾಗಿ ಬಂದಿದ್ದೇನೆ. ಇದರಲ್ಲಿ ಯಾವುದೇ ವ್ಯತ್ಯಾಸ ನನಗೆ ಕಾಣುತ್ತಿಲ್ಲ. ಜನರ ಪ್ರೀತಿ-ವಿಶ್ವಾಸ ಒಂದಿದ್ದರೆ ಸಾಕು. ನಿನ್ನೆ ರಾತ್ರಿ ಜಿ ಪರಮೇಶ್ವರ್ ಕೂಡ ನನ್ನ ಮನೆಗೆ ಬಂದು ಕುಶಲೋಪರಿ ವಿಚಾರಿಸಿ ಹೋಗಿದ್ದಾರೆ. ಅಸೆಂಬ್ಲಿ ಮುಗಿದ ಬಳಿಕ ಹೈಕಮಾಂಡ್‌ಗೆ ಭೇಟಿ ಆಗಿ ಸತ್ಯ ವಿವರಿಸುತ್ತೇನೆ. ನನಗೆ ರಾಜಕೀಯ ಏಳು-ಬೀಳು ಹೊಸತಲ್ಲ. ಸಮಯ ಬಂದಾಗ ಮತ್ತೆ ಸಚಿವನಾಗುತ್ತೇನೆ. ಹೈಕಮಾಂಡ್ ಕನ್ವಿನ್ಸ್ ಆಗುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

    ಶೂ ಭಾಗ್ಯ ನನ್ನ ಮನವಿ ಮೇರೆಗೆ ಜಾರಿ ಮಾಡಿದ್ದು. ರಾಹುಲ್ ಗಾಂಧಿ ಮತಗಳ್ಳತನ ವಿರುದ್ಧ ಹೋರಾಟ ಮಾಡುತ್ತಿದ್ದರು. ಸಿಟಿಯಲ್ಲಿ ಮತಗಳ್ಳತನ ಹೆಚ್ಚಾಗುತ್ತದೆ. ಗ್ರಾಮಾಂತರದಲ್ಲಿ ಮತಗಳ್ಳತನ ಆಗಲ್ಲ. ಆರ್‌ಎಸ್‌ಎಸ್ ನವರು ಬಹಳ ಪದ್ಧತಿ ಪೂರ್ವಕವಾಗಿ ಚುನಾವಣೆ ಮಾಡುತ್ತಾರೆ. ನಮ್ಮ ಕಾರ್ಯಕರ್ತರು ಮತಗಳ್ಳತನ ಕುರಿತಂತೆ ಎಚ್ಚರಿಕೆಯಿಂದ ಇರಬೇಕು. ಮತಗಳ್ಳತನದ ವಿರುದ್ಧದ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ಅಸೆಂಬ್ಲಿ ಮುಗಿದ ಬಳಿಕ ನಾನು ಹೈಕಮಾಂಡ್‌ಗೆ ಭೇಟಿಯಾಗಿ ವಿವರಿಸುತ್ತೇನೆ. ಆಗ ನನಗೆ ನೈಜ ಕಾರಣ ಗೊತ್ತಾಗುತ್ತದೆ. ನನಗೆ ಯಾವ ಬೇಸರನೂ ಇಲ್ಲ. ಇಂಡಿಯಾ ಒಕ್ಕೂಟಕ್ಕೆ 20 ಸೀಟ್ ಜಾಸ್ತಿ ಪಡೆದರೆ, ಮೋದಿ ಪ್ರಧಾನಿ ಆಗುತ್ತಿರಲಿಲ್ಲ. ನನಗೆ ರಾಜಕೀಯ ಏಳು-ಬೀಳು ಹೊಸತ್ತಲ್ಲ. ಜನರ ವಿಶ್ವಾಸ, ಆಶೀರ್ವಾದ ಇರೋವರೆಗೂ ಎಂತಹ ಸಂದರ್ಭವನ್ನೂ ಎದುರಿಸಬಹುದು. ಅಧಿಕಾರ ಬಂದರೆ ಜನಪರ ಕೆಲಸ ಮಾಡುತ್ತೇನೆ. ನಾನು ಸುಳ್ಳು ಹೇಳೋನು, ಮೋಸ ಮಾಡೋನು ಅಲ್ಲ. ಸ್ವಾರ್ಥಕೋಸ್ಕರ ಸುಳ್ಳು ಹೇಳಿಲ್ಲ. ಅಧಿಕಾರ ಇಲ್ಲದೇ ಹಾಳಾಗಿ ಹೋಗಲಿ. ಜನರ ವಿಶ್ವಾಸ-ಪ್ರೀತಿ ಹೀಗೆ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ರಾಹುಲ್‌ ಗಾಂಧಿ ನಿರ್ದೇಶನದ ಮೇಲೆ ರಾಜಣ್ಣರನ್ನ ಸಂಪುಟದಿಂದ ವಜಾ ಮಾಡಲಾಗಿದೆ: ಸಿದ್ದರಾಮಯ್ಯ

    ವಿ.ಸೋಮಣ್ಣ ಮಧುಗಿರಿ ಹಾಗೂ ಕೊರಟಗೆರೆಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಅದನ್ನು ಹೇಳಿದರೆ ಸೋಮಣ್ಣನ ಹೊಗಳಿದರು ಅಂತಾರೆ. ಶ್ರೀರಾಮುಲು ಅವರನ್ನು ನಾನೇ ಕಾಂಗ್ರೆಸ್‌ಗೆ ಕರೆದುಕೊಂಡು ಬರುತ್ತೇನೆ. ಶ್ರೀರಾಮುಲುಗೆ ನನ್ನ ಮೇಲೆ ವಿಶ್ವಾಸ ಇದೆ. ಹಾಗಾಗಿ ಅವರು ಬಿಜೆಪಿಗೆ ಬರುವಂತೆ ಹೇಳಿರಬಹುದು. ನನಗೆ ಕಾಂಗ್ರೆಸ್ ಏನೂ ಕಡಿಮೆ ಮಾಡಿಲ್ಲ. ಸಿಎಂ ಅಧಿವೇಶನಕ್ಕೆ ಬಂದು ವಿಧಾನ ಸೌಧದಲ್ಲಿ ಇಳಿಯುತ್ತಿದ್ದಂತೆ ಕಾಲ್ ಬಂದಿದೆ. ಸಿಎಂ ಕಾರಿನಲ್ಲೇ ಕುಂತು ಮಾತನಾಡಿದರು. ಅದೇ ಮಾತು ನನ್ನ ವಿಚಾರ ಎಂದರು.

    ನನ್ನ ವಜಾಗೆ ಕಾರಣ ಏನೂ ಅನ್ನೋದು ದೆಹಲಿಗೆ ಹೋದ ನಂತರ ಗೊತ್ತಾಗಲಿದೆ. ಮತಗಳ್ಳತನದ ಹೇಳಿಕೆ ಸೇರಿದಂತೆ ಹಿಂದಿನ ಎಲ್ಲಾ ಹೇಳಿಕೆ ಸೇರಿಸಿ ಹೈಕಮಾಂಡ್‌ಗೆ ಬೇರೆ ರೀತಿ ಅರ್ಥೈಸಿದ್ದಾರೆ. ಪಾರ್ಟಿಯಲ್ಲಿ ವಾಕ್ ಸ್ವಾತಂತ್ರ‍್ಯ ಇದೆ. ನಾನು ಒಳಮೀಸಲಾತಿ ಪರ ಇದ್ದೇನೆ. ಎಡಗೈ ಸಮುದಾಯ ರಾಜಕೀಯ ಪ್ರಾತಿನಿಧ್ಯ ಕುಗ್ಗುತ್ತಿದೆ. ಹಾಗಾಗಿ, ಅವರಿಗೆ ಒಳಮೀಸಲಾತಿ ಕೊಡಬೇಕು. ಸಿಎಂ ಸಿದ್ದರಾಮಯ್ಯರಿಗೆ ಕೂಡ ಒಲವಿದೆ ಎಂದು ಹೇಳಿದರು. ಇದನ್ನೂ ಓದಿ: ಸಚಿವ ಸಂಪುಟದಿಂದ ರಾಜಣ್ಣ ವಜಾ – ಪರಿಷತ್‌ನಲ್ಲಿ ಗದ್ದಲ ಗಲಾಟೆ

    ಅಲ್ಲಿ (ಹೈಕಮಾಂಡ್) ಯಾರಾದರು ನನ್ನ ವಿರುದ್ಧ ಹೇಳೋರಲೂ ಇರಬಹುದು. ಅದಕ್ಕೆ ನಾನು ತಲೆ ಕೆಡಿಸಿಕೊಂಡಿಲ್ಲ. ಕಾಣದ ಕೈಗಳ ಕೈವಾಡ ಇದೆ. ಸಿಎಂಗೂ ಗೊತ್ತಿರಲಿಲ್ಲ. ಏಕಾಏಕಿ ನಿರ್ಣಯ ಆಗಿದೆ. ಸಿಎಂ ಏನೂ ಮಾಡೋಕೆ ಆಗಲ್ಲ ಅಂದರು ಎಂದು ತಿಳಿಸಿದರು.

  • ರಾಹುಲ್‌ ಗಾಂಧಿ ನಿರ್ದೇಶನದ ಮೇಲೆ ರಾಜಣ್ಣರನ್ನ ಸಂಪುಟದಿಂದ ವಜಾ ಮಾಡಲಾಗಿದೆ: ಸಿದ್ದರಾಮಯ್ಯ

    ರಾಹುಲ್‌ ಗಾಂಧಿ ನಿರ್ದೇಶನದ ಮೇಲೆ ರಾಜಣ್ಣರನ್ನ ಸಂಪುಟದಿಂದ ವಜಾ ಮಾಡಲಾಗಿದೆ: ಸಿದ್ದರಾಮಯ್ಯ

    – ಉದ್ದೇಶ ಬೇರೆ ಆಗಿದ್ದರೂ ಹೇಳಿದ ರೀತಿ ತಪ್ಪು; ಸಿಎಲ್‌ಪಿ ಸಭೆಗೆ ಸಿಎಂ ಮಾಹಿತಿ

    ಬೆಂಗಳೂರು: ರಾಹುಲ್ ಗಾಂಧಿ ಅವರ ನಿರ್ದೇಶನದ ಮೇಲೆ ರಾಜಣ್ಣರನ್ನ (KN Rajanna) ಸಂಪುಟದಿಂದ ಕೈ ಬಿಡಲಾಗಿದೆ ಶಾಸಕಾಂಗ ಪಕ್ಷದ ಸಭೆಗೆ ಸಿಎಂ ಸಿದ್ದರಾಮಯ್ಯ (Siddaramaiah) ಮಾಹಿತಿ ನೀಡಿದ್ದಾರೆ.

    ಸಭೆಯ ಆರಂಭದಲ್ಲೇ ಕೆ.ಎನ್‌ ರಾಜಣ್ಣ ತಲೆದಂಡ ಕುರಿತು ಮಾಹಿತಿ ನೀಡಿದ ಸಿಎಂ, ರಾಜಣ್ಣರನ್ನ ಸಚಿವ ಸಂಪುಟದಿಂದ ವಜಾ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಯ್ತು. ಅವರು ಮಾತನಾಡಿದ ಉದ್ದೇಶ ಬೇರೆಯೇ ಆಗಿದ್ದರೂ ಹೇಳಿದ ರೀತಿ ಸರಿ ಇರಲಿಲ್ಲ. ಆ ತಪ್ಪಿನಿಂದಾಗಿ ರಾಜಣ್ಣರನ್ನ ಸಂಪುಟದಿಂದ ಕೈ ಬಿಡಬೇಕಾಯಿತು. ರಾಹುಲ್ ಗಾಂಧಿ ಅವರ ನಿರ್ದೇಶನದ ಮೇಲೆ ರಾಜಣ್ಣರನ್ನ ಸಂಪುಟದಿಂದ ಕೈಬಿಡಲಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಸೆಪ್ಟೆಂಬರ್‌ ಕ್ರಾಂತಿ ಎಂದಿದ್ದ ರಾಜಣ್ಣಗೆ ಆಗಸ್ಟ್‌ನಲ್ಲೇ ಕೇಡುಗಾಲ – ವಜಾಗೆ ಕಾರಣ ಏನು?

    ರಾಜಣ್ಣ ತಲೆದಂಡ ಆಗಿದ್ದೇಕೆ?
    ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ (Rahul Gandhi) ನೀಡಿದ್ದ ಹೇಳಿಕೆಗೆ ರಾಜಣ್ಣ ವ್ಯಂಗ್ಯಭರಿತ ಹೇಳಿಕೆ ಕೊಟ್ಟಿದ್ದರು. ನಮ್ಮ ಕಾಲದಲ್ಲೇ ಅಲ್ವಾ ವೋಟರ್ ಲಿಸ್ಟ್ ಆಗಿದ್ದು, ಆಗೇನು ಕಣ್ಣುಮುಚ್ಚಿ ಕುಳಿತಿದ್ರಾ? ಮಾತನಾಡಿದ್ರೆ ಏನೇನೋ ಆಗುತ್ತೆ. ಈಗ ದೂರಿದ್ರೆ ಏನರ್ಥ? ಎಂದು ಹೇಳಿಕೆ ಕೊಟ್ಟಿದ್ದರು. ಇದು ಹೈಕಮಾಂಡ್ ಸಿಟ್ಟಿಗೆ ಕಾರಣವಾಗಿತ್ತು. ರಾಜಣ್ಣ ಲೂಸ್‌ ಟಾಕ್‌ ನೀಡುವುದು ಹೊಸದೆನಲ್ಲ. ಈ ಹಿಂದೆಯೂ ಹಲವು ಬಾರಿ ಸರ್ಕಾರ ಮತ್ತು ಸಚಿವರು, ಹೈಕಮಾಂಡ್‌ ನಾಯಕರ ವರ್ತನೆಯನ್ನು ಟೀಕಿಸಿದ್ದರು. ಈ ಸಂಬಂಧ ಹೈಕಮಾಂಡ್‌ ಹಂತಕ್ಕೆ ದೂರು ಹೋಗಿತ್ತು. ಇದನ್ನೂ ಓದಿ: ಸಂಪುಟದಿಂದ ರಾಜಣ್ಣ ಕಿಕ್‌ಔಟ್‌ – ಆಪ್ತನ ತಲೆದಂಡದಿಂದ ಮೌನಕ್ಕೆ ಶರಣಾದ ಸಿಎಂ

    ಈ ಬಾರಿ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನದ ಆರೋಪ ಮಾಡಿದ್ದ ರಾಹುಲ್‌ ಗಾಂಧಿ, ಹೋರಾಟವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯಲು ಮುಂದಾಗಿದ್ದಾರೆ. ಆದ್ರೆ ರಾಜಣ್ಣ ಅವರ ಹೇಳಿಕೆ ರಾಗಾ ಅವರ ಹೋರಾಟಕ್ಕೆ ಹಿನ್ನಡೆ ಉಂಟುಮಾಡುವಂತಿತ್ತು. ಆದ್ದರಿಂದ ರಾಜಣ್ಣರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡ ಹೈಕಮಾಂಡ್‌ ಯಾವುದೇ ಕಾರಣಕ್ಕೂ ಕ್ಷಮಿಸದದೇ ರಾಜಣ್ಣ ಅವರನ್ನ ಸಂಪುಟದಿಂದ ಕಿಕ್‌ಔಟ್‌ ಮಾಡಿಸಿದೆ. ಇದನ್ನೂ ಓದಿ: ರಾಜಣ್ಣ ರಾಜೀನಾಮೆ ಅಲ್ಲ, ಸಂಪುಟದಿಂದಲೇ ಕಿಕ್‌ಔಟ್‌