Tag: ಕೆ.ಈ ಕಾಂತೇಶ್

  • ವೀರ್ ಸಾವರ್ಕರ್ ಎಂದರೆ ಆನೆ, ನಾಯಿ ನರಿ ಮಾತಿಗೆಲ್ಲ ಅದು ತಲೆಕೆಡಿಸಿಕೊಳ್ಳಲ್ಲ: ಕಾಂತೇಶ್

    ವೀರ್ ಸಾವರ್ಕರ್ ಎಂದರೆ ಆನೆ, ನಾಯಿ ನರಿ ಮಾತಿಗೆಲ್ಲ ಅದು ತಲೆಕೆಡಿಸಿಕೊಳ್ಳಲ್ಲ: ಕಾಂತೇಶ್

    ಹಾವೇರಿ: ಕೆಲವರು ವೀರ್ ಸಾವರ್ಕರ್ (V.D Savarkar) ಅವರನ್ನು ರಾಷ್ಟ್ರದ್ರೋಹಿ ಎಂದು ಕರೆಯುತ್ತಿದ್ದಾರೆ. ಸಾವರ್ಕರ್ ಎಂದರೆ ಆನೆ ಇದ್ದಂತೆ, ಆನೆ ನಡೆಯುವಾಗ ನಾಯಿ ನರಿ ಮಾತನಾಡುತ್ತವೆ. ಅದಕ್ಕೆಲ್ಲಾ ಆನೆ ತಲೆ ಕೆಡೆಸಿಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ಈಶ್ವರಪ್ಪ ಅವರ ಪುತ್ರ ಕೆ.ಈ ಕಾಂತೇಶ್ (K.E Kantesh) ವ್ಯಂಗ್ಯವಾಡಿದ್ದಾರೆ.

    ಹಾವೇರಿಯಲ್ಲಿ (Haveri) ಸಾವರ್ಕರ್ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವೇಳೆ ಸಾವರ್ಕರ್ ವಿಚಾರವಾಗಿ ಇತ್ತೀಚಿನ ಬೆಳವಣಿಗೆ ಕುರಿತಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಾವೆಲ್ಲಾ ಆನೆಗೆ ಹೂವು ಕೊಡ್ತೀವಿ. ಹಾಗೇ ನಾಯಿ ನರಿಗಳ ಮಾತಿಗೆ ತಲೆ ಕೆಡೆಸಿಕೊಳ್ಳಬೇಕಿಲ್ಲ. ಸಾವರ್ಕರ್ ಎಂದರೆ ಆನೆ ಇದ್ದಂತೆ. ಆನೆ ಸಂಚರಿಸುವಾಗ ಇದೆಲ್ಲ ಸಹಜ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ವಸತಿ ಶಾಲೆಯಲ್ಲಿ ಬಾಲಕಿಯರ ಬಟ್ಟೆ ಬದಲಿಸುವ ವೀಡಿಯೋ ತೆಗೆದ ಸಿಬ್ಬಂದಿ – ಪೋಷಕರ ಆಕ್ರೋಶ

    ನಮ್ಮ ದೇಶ ಹಿಂದೂರಾಷ್ಟ್ರ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ನಮ್ಮ ದೇಶಕ್ಕಾಗಿ ರಾಷ್ಟ್ರಭಕ್ತರ ಸಂಖ್ಯೆ ಹೆಚ್ಚಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಇತ್ತೀಚೆಗೆ ಸಚಿವ ಪ್ರಿಯಾಂಕ್ ಖರ್ಗೆಯವರು, ಸಾವರ್ಕರ್ ಫೋಟೋವನ್ನು ವಿಧಾನಸೌಧ ಸಭಾಂಗಣದಲ್ಲಿರುವ ಸಾವರ್ಕರ್ ಫೋಟೋ ತೆರವುಗೊಳಿಸಬೇಕು ಎಂದಿದ್ದರು. ಬಳಿಕ ತೀವ್ರ ಟೀಕೆಗಳು ವ್ಯಕ್ತವಾದ ಬಳಿಕ, ನನ್ನ ಸಿದ್ಧಾಂತ ಬಸವ ತತ್ವ, ನಾರಾಯಣ ಗುರು, ಡಾ.ಬಿ.ಆರ್.ಅಂಬೇಡ್ಕರ್ ಅವರ ಸಿದ್ಧಾಂತ. ಹೀಗಾಗಿ ಸಾವರ್ಕರ್ ಸಿದ್ಧಾಂತವನ್ನು ನಾನು ಒಪ್ಪುವುದಿಲ್ಲ. ವಿಧಾನಸೌಧ ಸಭಾಂಗಣದಲ್ಲಿ ವಿ.ಡಿ. ಸಾವರ್ಕರ್ ಅವರ ಭಾವಚಿತ್ರ ತೆರವು ಮಾಡುವ ಕುರಿತು ನನ್ನ ಹೇಳಿಕೆಗೆ ನಾನು ಈಗಲೂ ಬದ್ಧವಾಗಿದ್ದೇನೆ. ಸಾವರ್ಕರ್ ಅವರು ಬ್ರಿಟೀಷರಿಂದ ಪಿಂಚಣಿ ಪಡೆಯುತ್ತಿದ್ದರು ಎಂದು ಸಮರ್ಥಿಸಿಕೊಂಡಿದ್ದರು. ಇದನ್ನೂ ಓದಿ: ಆಟವಾಡುತ್ತಾ ನದಿಗೆ ಬಿದ್ದ ಮಗುವಿನ ರಕ್ಷಣೆಗಾಗಿ ಧುಮುಕಿದ ಐವರು ಸಾವು!

  • ಮಗನಿಗೆ ರಾಜಕೀಯ ನೆಲೆ ಕಲ್ಪಿಸಲು ಈಶ್ವರಪ್ಪ ಪ್ರಯತ್ನ!

    ಮಗನಿಗೆ ರಾಜಕೀಯ ನೆಲೆ ಕಲ್ಪಿಸಲು ಈಶ್ವರಪ್ಪ ಪ್ರಯತ್ನ!

    – ಸಿಂಧಗಿ ಮಠಕ್ಕೆ ಮಾಜಿ ಸಚಿವರ ಕುಟುಂಬ ಭೇಟಿ

    ಹಾವೇರಿ: ಮಗನಿಗೆ ರಾಜಕೀಯ ನೆಲೆ ಕಲ್ಪಿಸಿಕೊಡಲು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಪ್ರಯತ್ನ ಪಡುತ್ತಿದ್ದಾರೆ.

    ಈಶ್ವರಪ್ಪ ಅವರ ಪತ್ನಿ, ಪುತ್ರ ಕೆ. ಈ ಕಾಂತೇಶ್, ಜೊತೆ ಸಿಂಧಗಿ ಮಠಕ್ಕೆ ಆಗಮಿಸಿದ್ದಾರೆ. ಸಿಂಧಗಿ ಮಠದಲ್ಲಿ ಶತರುದ್ರಾಭಿಷೇಕ, ಹಾಗೂ ರುದ್ರ ಹೋಮ ಹಮ್ಮಿಕೊಂಡಿದ್ದಾರೆ. ಈಶ್ವರಪ್ಪ ಅವರ ಈ ನಡೆ ರಾಜಕೀಯವಾಗಿಯೂ ಬಹಳ ಮಹತ್ವ ಪಡೆದಿದೆ.

    ಕೆ.ಎಸ್ ಈಶ್ವರಪ್ಪ ಪುತ್ರ ಕೆ.ಈ ಕಾಂತೇಶ್ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ (Haveri Loksabha Contituency Ticket) ಆಕಾಂಕ್ಷಿಯಾಗಿರುವ ಹಿನ್ನೆಲೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಈಶ್ವರಪ್ಪ ಫುಲ್ ಆಕ್ಟೀವ್ ಆಗಿದ್ದಾರೆ. ಈ ಬಾರಿ ತಮ್ಮ ಪುತ್ರ ಕೆ. ಈ ಕಾಂತೇಶ್ (K. E Kantesh) ಅವರಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.

    ಈಗಾಗಲೇ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕೆ.ಈ ಕಾಂತೇಶ್ ಫುಲ್ ಆಕ್ಟೀವ್ ಆಗಿಯೇ ಓಡಾಡುತ್ತಿದ್ದು, ಕೆಲ ದಿನಗಳ ಹಿಂದೆ ಸಿಂಧಗಿ ಮಠಕ್ಕೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಈಗ ತಮ್ಮ ತಂದೆ ಕೆ.ಎಸ್ ಈಶ್ವರಪ್ಪ ಜೊತೆ ಆಗಮಿಸಿ ಹೋಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಹಳೆಯ ವಿದ್ಯಾರ್ಥಿಗಳಿಂದ ಸದ್ದಿಲ್ಲದೇ ನಡೆಯುತ್ತಿದೆ ಸರ್ಕಾರಿ ಶಾಲೆಗೆ ಬಣ್ಣ, ಶೌಚಾಲಯ ನಿರ್ಮಾಣ ಕೆಲಸ

    ಮಗನಿಗೆ ಟಿಕೆಟ್ ಪಡೆಯಲು ಈಗಾಗಲೇ ಪ್ರಯತ್ನ ಮಾಡುತ್ತಿರುವುದಾಗಿ ಮಾಧ್ಯಮಗಳಿಗೆ ಹೇಳಿರುವ ಈಶ್ವರಪ್ಪ, ಹಾವೇರಿ ಜಿಲ್ಲೆಯಲ್ಲಿ ನಮ್ಮದೆ ಆದ ವೋಟ್ ಬ್ಯಾಂಕ್ ಇದೆ. ಪಕ್ಷ ತಿರ್ಮಾನಿಸಿದ್ರೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಪುತ್ರನನ್ನು ಕಣಕ್ಕಿಳಿಸುವುದಾಗಿ ಹೇಳಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]