Tag: ಕೆಸಿ ವೇಣುಗೋಪಾಲ್

  • ರಾಹುಲ್ ಗಾಂಧಿಯ ಎದೆಗೆ ಗುಂಡಿಕ್ಕಬೇಕು – ಕೇರಳ ಬಿಜೆಪಿ ನಾಯಕನ ಹೇಳಿಕೆಗೆ ಕಾಂಗ್ರೆಸ್ ಆಕ್ಷೇಪ

    ರಾಹುಲ್ ಗಾಂಧಿಯ ಎದೆಗೆ ಗುಂಡಿಕ್ಕಬೇಕು – ಕೇರಳ ಬಿಜೆಪಿ ನಾಯಕನ ಹೇಳಿಕೆಗೆ ಕಾಂಗ್ರೆಸ್ ಆಕ್ಷೇಪ

    – ಕ್ರಮ ಕೈಗೊಳ್ಳುವಂತೆ ಅಮಿತ್ ಶಾಗೆ ಕಾಂಗ್ರೆಸ್ ಪತ್ರ

    ನವದೆಹಲಿ: ಟಿ.ವಿ ವಾಹಿನಿಯೊಂದರ ಚರ್ಚೆಯಲ್ಲಿ ಬಿಜೆಪಿಯ ಮಾಧ್ಯಮ ವಕ್ತಾರರೊಬ್ಬರು ‘ರಾಹುಲ್ ಗಾಂಧಿಯ ಎದೆಗೆ ಗುಂಡಿಕ್ಕಬೇಕು’ ಎಂಬ ಹೇಳಿಕೆಗೆ ಕಾಂಗ್ರೆಸ್ (Congress) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

    ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್, ರಾಹುಲ್ ಗಾಂಧಿಯ (Rahul Gandhi) ಎದೆಗೆ ಗುಂಡು ಹಾರಿಸಲಾಗುವುದು ಎಂದು ಕೇರಳ ಬಿಜೆಪಿ ವಕ್ತಾರ ಪಿಂಟು ಮಹಾದೇವ್ ಅವರು ಹೇಳಿದ್ದು, ಈ ಕುರಿತು ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಇದನ್ನೂ ಓದಿ: ಬರೇಲಿಯ ‘ಐ ಲವ್ ಮುಹಮ್ಮದ್’ ಪ್ರತಿಭಟನೆಯಲ್ಲಿ ಹಿಂಸಾಚಾರ – ಮಾಸ್ಟರ್ ಮೈಂಡ್ ನದೀಮ್ ಅರೆಸ್ಟ್

    ಪಕ್ಷದ ತಳಹಂತದ ಪದಾಧಿಕಾರಿಯೊಬ್ಬರು ನೀಡಿರುವ ಕ್ಷುಲ್ಲಕ ಹೇಳಿಕೆ ಇದು ಎಂದು ಅಸಡ್ಡೆ ತೋರಬಾರದು. ಲೋಕಸಭೆಯ ವಿರೋಧ ಪಕ್ಷದ ನಾಯಕನನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ನೀಡಿರುವ ದ್ವೇಷದ ಹೇಳಿಕೆ ಇದಾಗಿದೆ’ ಎಂದಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಕೇಸ್‌ | ನನ್ಗೆ ಪ್ರಧಾನಿ ಗೊತ್ತು – ಪೊಲೀಸರಿಗೇ ಬೆದರಿಕೆ ಹಾಕಿದ ಸ್ವಾಮಿ ಚೈತನ್ಯಾನಂದ ಸರಸ್ವತಿ

    ‘ಬಿಜೆಪಿಯ ಮಾಧ್ಯಮ ವಕ್ತಾರರಾಗಿ ಟಿ.ವಿ. ವಾಹಿನಿಗಳ ಚರ್ಚೆಯಲ್ಲಿ ಭಾಗವಹಿಸುವ ಎಬಿವಿಪಿಯ ಮಾಜಿ ಕಾರ್ಯಕರ್ತ ಪಿಂಟು ಮಹಾದೇವ್ ಹೇಳಿಕೆಯನ್ನು ನಿರ್ಲಕ್ಷ್ಯದಿಂದ ನೋಡಬಾರದು. ಅದು ಜೀವ ಬೆದರಿಕೆ’ ಎಂದಿರುವ ವೇಣುಗೋಪಾಲ್, ಆತನ ವಿರುದ್ಧ ತ್ವರಿತವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹಿರಿಯ ರಂಗಕರ್ಮಿ ಯಶವಂತ್ ಸರದೇಶಪಾಂಡೆ ಹೃದಯಾಘಾತದಿಂದ ನಿಧನ

    ರಾಜಕೀಯ ಭಿನ್ನಾಭಿಪ್ರಾಯಗಳನ್ನು ಸಾಂವಿಧಾನಿಕ ಚೌಕಟ್ಟಿನೊಳಗೆ ಪರಿಹರಿಸಿಕೊಳ್ಳಬೇಕು. ಆದರೆ ಬಿಜೆಪಿ ನಾಯಕರು ತಮ್ಮ ವಿರೋಧಿಗಳಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: RBI ಉಪ ಗವರ್ನರ್ ಆಗಿ ಶಿರೀಶ್ ಚಂದ್ರ ಮುರ್ಮು ನೇಮಕ

  • ಖರ್ಗೆ, ವೇಣುಗೋಪಾಲ್ ಭೇಟಿಯಾದ ಸತೀಶ್ ಜಾರಕಿಹೊಳಿ

    ಖರ್ಗೆ, ವೇಣುಗೋಪಾಲ್ ಭೇಟಿಯಾದ ಸತೀಶ್ ಜಾರಕಿಹೊಳಿ

    – ನಾಳೆ ದೆಹಲಿಗೆ ದಲಿತ ಸಚಿವರ ದಂಡು

    ನವದೆಹಲಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ, ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಚರ್ಚೆ ತಣ್ಣಗಾಗುವ ಹೊತ್ತಲ್ಲೇ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿ ಕುತೂಹಲ ಮೂಡಿಸಿದ್ದಾರೆ.

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge), ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ (KC Venugopal) ಅವರನ್ನು ಸತೀಶ್ ಜಾರಕಿಹೊಳಿ ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದ್ದಾರೆ.ಇದನ್ನೂ ಓದಿ: ನನ್ನ ಮದುವೆಗೆ ದರ್ಶನ್ ಅವ್ರು ಬಂದ್ರೆ ತುಂಬಾ ಸಂತೋಷ: ಡಾಲಿ ಧನಂಜಯ್

    ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ವಿಚಾರದಲ್ಲಿ ಯಾವುದೇ ಬಹಿರಂಗ ಹೇಳಿಕೆ ನೀಡದಂತೆ ವರಿಷ್ಠರು ತಾಕೀತು ಮಾಡಿದ ಬೆನ್ನಲ್ಲೇ ವರಿಷ್ಠರನ್ನು ಭೇಟಿಯಾಗಿ ರಾಜ್ಯ ಕಾಂಗ್ರೆಸ್ ಪಕ್ಷದೊಳಗಿನ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಮುಖ್ಯವಾಗಿ ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಯಾವ ಬೆಳವಣಿಗೆ ನಡೆಯುತ್ತಿದೆ ಎಂದು ವಿವರಿಸಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಥವಾ ಸಿಎಂ ಬದಲಾವಣೆ ಮಾಡುವುದಾದರೆ ದಲಿತ ನಾಯಕರನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮಾವೇಶ ನಡೆಸಲು ಅನುಮತಿ ನೀಡುವಂತೆ ಕೇಳಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

    ಸತೀಶ್ ಜಾರಕಿಹೊಳಿ ಭೇಟಿ ನಡುವೆ ನಾಳೆ ದೆಹಲಿಗೆ ಗೃಹ ಸಚಿವ ಪರಮೇಶ್ವರ್, ಕೆ.ಎನ್ ರಾಜಣ್ಣ ಮತ್ತು ಹೆಚ್‌ಸಿ ಮಹದೇವಪ್ಪ ಕೂಡಾ ದೆಹಲಿಗೆ ಆಗಮಿಸುತ್ತಿದ್ದು, ಹೈಕಮಾಂಡ್ ನಾಯಕರ ಭೇಟಿಗೆ ಸಮಯ ಕೇಳಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ರಾಜ್ಯದಲ್ಲಿ ಬಹಿರಂಗ ಹೇಳಿಕೆ ನೀಡುತ್ತಿದ್ದ ದಲಿತ ನಾಯಕರು ಈಗ ದೆಹಲಿ ಮಟ್ಟದಲ್ಲಿ ಹೊಸ ಚರ್ಚೆ ಹುಟ್ಟು ಹಾಕುತ್ತಿದ್ದಾರೆ.ಇದನ್ನೂ ಓದಿ: ವಿಷ್ಣುಪ್ರಿಯ ಟ್ರೈಲರ್‌ನಲ್ಲಿ ಕಂಡಿದ್ದು ನವಿರು ಪ್ರೇಮ ಮಾತ್ರವಲ್ಲ!

  • ಕಾಂಗ್ರೆಸ್‌ ಸರ್ಕಾರದಲ್ಲಿ ಒಂದೇ ಡಿಸಿಎಂ – ಎಐಸಿಸಿ ಅಧಿಕೃತ ಘೋಷಣೆ

    ಕಾಂಗ್ರೆಸ್‌ ಸರ್ಕಾರದಲ್ಲಿ ಒಂದೇ ಡಿಸಿಎಂ – ಎಐಸಿಸಿ ಅಧಿಕೃತ ಘೋಷಣೆ

    ನವದೆಹಲಿ: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಎಐಸಿಸಿ (AICC) ಅಧಿಕೃತವಾಗಿ ತಿಳಿಸಿದೆ.

    ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್‌ ಮತ್ತು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣ್‌ದೀಪ್‌ ಸುರ್ಜೇವಾಲಾ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

    ಈ ವೇಳೆ ಒಂದೇ ಡಿಸಿಎಂ ಹುದ್ದೆ ಸರ್ಕಾರದಲ್ಲಿ ಇರಲಿದೆ. ಮುಂದಿನ ಲೋಕಸಭಾ ಚುನಾವಣೆ ನಡೆಯುವರೆಗೂ ಡಿಕೆ ಶಿವಕುಮಾರ್‌ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಎಷ್ಟು ಸಮಯದವರೆಗೆ ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರದಲ್ಲಿ ಇರಲಿದ್ದಾರೆ ಎಂಬ ಪ್ರಶ್ನೆಗೆ ಯಾವುದೇ ಉತ್ತರ ನೀಡಲಿಲ್ಲ. ಕರ್ನಾಟಕ ಜನರ ಸೇವೆ ಮಾಡಲು ಕಾಂಗ್ರೆಸ್‌ ಬದ್ಧವಾಗಿದೆ. 5 ಗ್ಯಾರಂಟಿಗಳನ್ನು ಸರ್ಕಾರ ಈಡೇರಿಸಲಿದೆ ಎಂದು ವಿವರಿಸಿದರು.  ಇದನ್ನೂ ಓದಿ: ಒಂದು ಕರೆಗೆ ಕರಗಿದ ಕನಕಪುರದ ಬಂಡೆ – ತಡರಾತ್ರಿ ನಡೆದಿದ್ದು ಏನು?

     

     

    ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಲ್ಡೋಜರ್‌ ಬುಲ್ಡೋಜರ್‌ ಮಾಡಿ ಕೆಳಗೆ ಹಾಕುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಗೆದ್ದಿದೆ. ಇದು ಪ್ರತಿಯೊಬ್ಬ ಕನ್ನಡಿಗನ ಜಯ. ಇಬ್ಬರಲ್ಲೂ ಸರ್ಕಾರ ನಿಭಾಯಿಸುವ ಶಕ್ತಿ ಇದೆ. ಇದೇ ರೀತಿ ಹಲವು ನಾಯಕರಲ್ಲೂ ಶಕ್ತಿ ಇದೆ. ಆದರೆ ಒಬ್ಬರನ್ನು ಮಾತ್ರ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

    ಬೇರೆ ಸಮುದಾಯದ ನಾಯಕರು ನಮ್ಮ ಸಮುದಾಯಕ್ಕೂ ಡಿಸಿಎಂ ಪಟ್ಟ ಕೇಳುತ್ತಿದ್ದಾರೆ ಎಂಬ ಪಬ್ಲಿಕ್‌ ಟಿವಿಗೆ ಪ್ರಶ್ನೆಗೆ ವೇಣುಗೋಪಾಲ್‌, ಸರ್ಕಾರದಲ್ಲಿ ಒಬ್ಬರಿಗೆ ಮಾತ್ರ ಡಿಸಿಎಂ ನೀಡಲಾಗುತ್ತದೆ. ಸಚಿವ ಸ್ಥಾನದಲ್ಲಿ ಎಲ್ಲಾ ಸಮುದಾಯದವರಿಗೂ ಪ್ರಾತಿನಿಧ್ಯ ನೀಡಲಾಗುವುದು ಎಂದು ಉತ್ತರಿಸಿದರು.

  • ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಡಲು ಸಾಧ್ಯವಿಲ್ಲ: ಕೆಸಿ ವೇಣುಗೋಪಾಲ್

    ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಡಲು ಸಾಧ್ಯವಿಲ್ಲ: ಕೆಸಿ ವೇಣುಗೋಪಾಲ್

    ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಸರ್ಕಾರದ ವಿರುದ್ಧ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಡಲು ಸಾಧ್ಯವಿಲ್ಲ. ಮತ ವಿಭಜನೆ ತಡೆಯಲು ವಿಪಕ್ಷಗಳು ಒಟ್ಟಾಗುವುದು ಅನಿವಾರ್ಯ ಎಂದು ಕಾಂಗ್ರೆಸ್ (Congress) ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ (KC Venugopal) ಹೇಳಿದ್ದಾರೆ.

    ಖಾಸಗಿ ಸಂದರ್ಶನದಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಎಲ್ಲಾ ಹಂತಗಳಲ್ಲಿ ಹೋರಾಡುತ್ತದೆ. ಆದರೆ ಪ್ರಜಾಪ್ರಭುತ್ವ ವಿರೋಧಿ, ಸರ್ವಾಧಿಕಾರಿ ಸರ್ಕಾರದ ವಿರುದ್ಧ ಹೋರಾಡಲು ಎಲ್ಲಾ ಪ್ರತಿಪಕ್ಷಗಳ ನೆರವು ಅಗತ್ಯವಿದೆ. ಕಾಂಗ್ರೆಸ್ ಈ ಬಗ್ಗೆ ಉತ್ಸುಕವಿದೆ. ಕಳೆದ ಸಂಸತ್ ಅಧಿವೇಶನದಲ್ಲಿ ಅದಾನಿ ವಿರುದ್ಧದ ಹೋರಾಟದಲ್ಲಿ ಎಲ್ಲಾ ವಿಪಕ್ಷಗಳನ್ನು ಒಂದುಗೂಡಿಸುವ ಪ್ರಯತ್ನ ಮಾಡಿದೆ ಎಂದರು. ಇದನ್ನೂ ಓದಿ: ಫೆ. 27ಕ್ಕೆ ಬೆಳಗಾವಿಗೆ ಮೋದಿ ಭೇಟಿ

    ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ಸನ್ನಿವೇಶ ನಿರ್ಮಾಣವಾಗಿದೆ. ಸರ್ವಾಧಿಕಾರಿ ಸರ್ಕಾರದ ವಿರುದ್ಧ ಹೋರಾಡುವ ದೊಡ್ಡ ನಿರ್ಧಾರ ಕಾಂಗ್ರೆಸ್ ತೆಗೆದುಕೊಂಡಿದೆ. ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಿದೆ. ಬಿಜೆಪಿಯನ್ನು ಅಧಿಕಾರದಿಂದ ಹೊರದಬ್ಬಲು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

    ಚಿಂತನ ಶಿಬಿರದ ನಿರ್ಧಾರಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. 50 ವರ್ಷದೊಳಗಿನ ಪದಾಧಿಕಾರಿಗಳನ್ನು ನೇಮಕ ಮಾಡುವ ಕಾರ್ಯ ಆರಂಭಗೊಂಡಿದೆ. ಈ ಮೂಲಕ ಪಕ್ಷ ಯುವಕರಿಗೆ ಆದ್ಯತೆ ನೀಡುವ ಕೆಲಸ ಮಾಡುತ್ತಿದೆ ಇನ್ನು ಸ್ವಲ್ಪ ದಿನಗಳಲ್ಲಿ ಈ ಬದಲಾವಣೆ ನಾವು ಕಾಣಬಹುದು ಎಂದು ವೇಣುಗೋಪಾಲ್ ಹೇಳಿದ್ದಾರೆ. ಇದನ್ನೂ ಓದಿ: ಡಿ.ರೂಪಾ, ರೋಹಿಣಿ ಸಿಂಧೂರಿಗೆ ನೋಟಿಸ್ ನೀಡಲು ಸೂಚನೆ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 8 ವರ್ಷದಲ್ಲಿ ಭಾರತ ದುರ್ಬಲವಾಗಿದೆ, ವಸ್ತುಗಳ ಬೆಲೆ ಭಾರೀ ಏರಿಕೆಯಾಗಿದೆ: ರಾಹುಲ್ ಕಿಡಿ

    8 ವರ್ಷದಲ್ಲಿ ಭಾರತ ದುರ್ಬಲವಾಗಿದೆ, ವಸ್ತುಗಳ ಬೆಲೆ ಭಾರೀ ಏರಿಕೆಯಾಗಿದೆ: ರಾಹುಲ್ ಕಿಡಿ

    ನವದೆಹಲಿ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶದಲ್ಲಿ ದ್ವೇಷ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದ್ವೇಷವನ್ನು ಹರಡುತ್ತಾ ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದೆ. 8 ವರ್ಷಗಳಲ್ಲಿ ಭಾರತವನ್ನು ದುರ್ಬಲಗೊಳಿಸಿದ್ದು, ಪಾಕಿಸ್ತಾನ ಮತ್ತು ಚೀನಾ ಇದರ ಲಾಭ ಪಡೆದುಕೊಳ್ಳುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

    ರಾಹುಲ್ ಗಾಂಧಿ ಅವರು ಬೆಲೆ ಏರಿಕೆ ವಿರೋಧಿಸಿ ದೇಶದಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನಾ ರ‍್ಯಾಲಿಯನ್ನುದ್ದೇಶಿಸಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಮಾತನಾಡಿದರು. ಇದನ್ನೂ ಓದಿ: ಸುಳಿವು ಕೊಟ್ಟು ಆ ಪದ ನಾನು ಹೇಳಲ್ಲ – ನಾಚಿ ನೀರಾದ ದ್ರಾವಿಡ್, ಬಿದ್ದುಬಿದ್ದು ನಕ್ಕ ಪತ್ರಕರ್ತರು

    ದೇಶದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದಲೂ ದ್ವೇಷ ಬೆಳೆಯುತ್ತಿದೆ. ಹಣದುಬ್ಬರ, ನಿರುದ್ಯೋಗ ಸಮಸ್ಯೆ ಬೆಲೆ ಏರಿಕೆ ಮೊದಲಾದ ಸಮಸ್ಯೆಗಳು ಜನರನ್ನು ದ್ವೇಷದ ಕಡೆ ತಿರುಗುವಂತೆ ಮಾಡುತ್ತಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಎರಡೂ ಸೇರಿ ದೇಶವನ್ನು ವಿಭಜನೆ ಮಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ದೇಶದಲ್ಲಿ ಭಯ ಮತ್ತು ದ್ವೇಷದಿಂದ ಇಬ್ಬರು ಕೈಗಾರಿಕೋದ್ಯಮಿಗಳಿಗೆ ಲಾಭವಾಗುತ್ತಿದೆ. ವಿಮಾನ ನಿಲ್ದಾಣ, ಬಂದರು ಇದೆಲ್ಲದರ ಪ್ರಯೋಜನವನ್ನೂ ಅವರೇ ಪಡೆಯುತ್ತಿದ್ದಾರೆ. ಅವರಿಗೆ ಅನುಕೂಲ ಮಾಡಿಕೊಡಲು ಬಿಜೆಪಿ ಕೆಲಸ ಮಾಡುತ್ತಿದೆ. ನಮ್ಮ ಸಿದ್ಧಾಂತ ದೇಶದ ಪ್ರಗತಿಯಿಂದ ಪ್ರತಿಯೊಬ್ಬರು ಪ್ರಯೋಜನ ಪಡೆಯಬೇಕು ಎಂದು ಹೇಳಿದರೆ, ಪ್ರಧಾನಿ ಅವರ ವಿಚಾರ ಧಾರೆ ಉದ್ಯಮಿಗಳು ಮಾತ್ರ ಪ್ರಯೋಜನ ಪಡೆಯಬೇಕು ಎಂದು ಹೇಳುತ್ತದೆ. ಇದರಿಂದಾಗಿಯೇ ಮೋದಿ ಸರ್ಕಾರ ಜನರಿಗೆ ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ. ದಿನದ 24 ಗಂಟೆಯು ಉದ್ಯಮಿಗಳಿಗಾಗಿಯೇ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಮಾಧ್ಯಮ, ನ್ಯಾಯಾಂಗ, ಚುನಾವಣಾ ಆಯೋಗದಂತಹ ಸಂಸ್ಥೆಗಳ ಮೇಲೆ ಈಗಲೂ ಒತ್ತಡವಿದೆ. ಅಲ್ಲದೇ ದೇಶದಲ್ಲಿ ಈಗ ಕಾಣುತ್ತಿರುವ ಬೆಲೆ ಏರಿಕೆ ಹಿಂದೆಂದೂ ನೋಡಿರಲಿಲ್ಲ. ಜನರು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಧ್ವನಿ ಎತ್ತಲು ಮುಂದಾದರೆ, ಮೋದಿ ಸರ್ಕಾರ ಅದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: BPL ಕಾರ್ಡ್‌ ಹೊಂದಿರುವ ಎಸ್‌ಸಿ, ಎಸ್‌ಟಿಗಳಿಗೆ ಗೃಹ ಬಳಕೆಗೆ 75 ಯುನಿಟ್‌ ಉಚಿತ ವಿದ್ಯುತ್ – ಆದೇಶ ಹಿಂಪಡೆದ ಸರ್ಕಾರ

    ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಕೇಂದ್ರೀಯ ತನಿಖಾ ದಳ (ಸಿಬಿಐ)ದ ಅಧಿಕಾರಿಗಳು ಇತ್ತೀಚೆಗೆ ನಡೆಸಿದ ಶೋಧ ಕಾರ್ಯಾಚರಣೆಗಳ ಬಗ್ಗೆಯೂ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾರು ಮಾತನಾಡುತ್ತಾರೋ ಅವರ ಮೇಲೆ ದಾಳಿ ನಡೆಸಲಾಗುತ್ತಿದೆ. ಇತ್ತೀಚೆಗೆ ನನ್ನನ್ನು 55 ಗಂಟೆ ಕಾಲ ಇ.ಡಿ ಕಚೇರಿಯಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗಿತ್ತು. ಆದರೆ ನಾನು ನಿಮ್ಮ ಇಡಿಗೆ ಹೆದರುವುದಿಲ್ಲ ಎಂದು ಪ್ರಧಾನಿ ಅವರಿಗೆ ಹೇಳಲು ಬಯಸುತ್ತೇನೆ. ಬೇಕಿದ್ದರೆ ನೂರು ವರ್ಷಗಳವರೆಗೂ ಪ್ರಶ್ನೆಗಳನ್ನು ಕೇಳಲಿ ನಾನು ಹೆದರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಕ್ಷ ಹಾಗೂ ಪಕ್ಷದ ಪ್ರತಿಯೊಬ್ಬ ಸದಸ್ಯ ನಿಮ್ಮ ಜೊತೆ ಇದ್ದಾರೆ – ಡಿಕೆಶಿಗೆ ಧೈರ್ಯ ತುಂಬಿದ ಸೋನಿಯಾ

    ಪಕ್ಷ ಹಾಗೂ ಪಕ್ಷದ ಪ್ರತಿಯೊಬ್ಬ ಸದಸ್ಯ ನಿಮ್ಮ ಜೊತೆ ಇದ್ದಾರೆ – ಡಿಕೆಶಿಗೆ ಧೈರ್ಯ ತುಂಬಿದ ಸೋನಿಯಾ

    ನವದೆಹಲಿ: ಪಕ್ಷ ಹಾಗೂ ಪಕ್ಷದ ಪ್ರತಿಯೊಬ್ಬ ಸದಸ್ಯ ನಿಮ್ಮ ಜೊತೆ ಇದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಡಿಕೆ ಶಿವಕುಮರ್ ಅವರಿಗೆ ಧೈರ್ಯ ತುಂಬಿದ್ದಾರೆ.

    ಇಂದು ಬೆಳಗ್ಗೆ ಡಿಕೆ ಶಿವಕುಕಮಾರ್ ಅವರನ್ನು ತಿಹಾರ್ ಜೈಲಿನಲ್ಲಿ ಸೋನಿಯಾ ಗಾಂಧಿ ಭೇಟಿಯಾಗಿ ಮಾತುಕತೆ ನಡೆಸಿದರು. ಭೇಟಿ ವೇಳೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಸೋನಿಯಾ ಜೊತೆ ಆಗಮಿಸಿದ್ದರು.

    ಸೋನಿಯಾ ಭೇಟಿಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಡಿಕೆ ಸುರೇಶ್, ಪಕ್ಷ ಹಾಗೂ ಪಕ್ಷದ ಪ್ರತಿಯೊಬ್ಬ ಸದಸ್ಯ ನಿಮ್ಮ ಜೊತೆ ಇದ್ದಾರೆ ಎಂದು ಅಣ್ಣನಲ್ಲಿ ಹೇಳಿ ಸೋನಿಯಾ ಗಾಂಧಿ ಧೈರ್ಯ ತುಂಬಿದ್ದಾರೆ. ಸೋನಿಯಾಗಾಂಧಿ ಭೇಟಿ ಹಾಗೂ ಸಾಂತ್ವನದಿಂದ ಶಿವಕುಮಾರ್ ಅವರಲ್ಲಿಯೂ ಧೈರ್ಯ ಬಂದಿದೆ ಎಂದು ತಿಳಿಸಿದರು.

    ಇಂದು ದೆಹಲಿ ಹೈಕೋರ್ಟಿನಿಂದ ಜಾಮೀನು ಸಿಗುವ ವಿಶ್ವಾಸದಲ್ಲಿದ್ದೇವೆ. ಏನೇ ಅದರೂ ನ್ಯಾಯಾಲಯದ ಆದೇಶಕ್ಕೆ ನಾವು ತಲೆಬಾಗುತ್ತೇವೆ ಎಂದು ಸುರೇಶ್ ಪ್ರತಿಕ್ರಿಯಿಸಿದರು.

    ಅಕ್ರಮ ಹಣ ವರ್ಗಾವಣೆ ಆರೋಪದ ಅಡಿ ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ. ಮಧ್ಯಾಹ್ನ 2.30ಕ್ಕೆ ದೆಹಲಿ ಹೈಕೋರ್ಟ್‍ನ ನ್ಯಾ.ಸುರೇಶ್ ಕುಮಾರ್ ಕೈಟ್ ಆದೇಶ ಪ್ರಕಟಿಸಲಿದ್ದಾರೆ.

    ಡಿಕೆಶಿ ಪರ ವಾದ ಮಂಡಿಸಿದ್ದ ಅಭಿಷೇಕ್ ಮನುಸಿಂಘ್ವಿ ಅವರು, ಈಗಾಗಲೇ 45 ದಿನಗಳಿಂದ ಡಿಕೆ ಶಿವಕುಮಾರ್ ಅವರು ಬಂಧನದಲ್ಲಿದ್ದಾರೆ. ಬಹುತೇಕ ವಿಚಾರಣೆಯ ಮುಗಿದರೂ ಅನಾವಶ್ಯಕವಾಗಿ ವಶದಲ್ಲಿಟ್ಟುಕೊಳ್ಳಲಾಗಿದೆ. ಐಟಿ ದಾಖಲಿಸಿದ್ದ ಕೇಸ್ ನಲ್ಲಿ ಇಡಿ ವಿಚಾರಣೆ ನಡೆಸುತ್ತಿದ್ದು ಸ್ವಯಂ ಘೋಷಿತ ಆಸ್ತಿ ಮೇಲೆ ವಿಚಾರ ನಡೆಸುತ್ತಿದೆ ಹೊರತು ಯಾವುದೇ ಹೊಸ ಅಂಶಗಳನ್ನು ಬಯಲು ಮಾಡಿಲ್ಲ ಎಂದು ವಾದಿಸಿದ್ದರು. ಆದರೆ, ಪ್ರತಿವಾದ ಮಂಡಿಸಿದ್ದ ಇಡಿ ಪರ ವಕೀಲರು, 300ಕ್ಕೂ ಹೆಚ್ಚು ಆಸ್ತಿಗಳನ್ನು ಡಿಕೆಶಿ ಹೊಂದಿದ್ದು ಇದರ ಮೂಲ ನೀಡುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಬೇಲ್ ಕೊಡಬಾರದು, ಬೇಲ್ ನೀಡಿದರೆ ಸಾಕ್ಷಿನಾಶ ಆಗುತ್ತೆ ಎಂದು ವಾದ ಮಂಡಿಸಿದ್ದರು.

  • ಕರ್ನಾಟಕ ಉಸ್ತುವಾರಿಯ ‘ಕೈ’ಚಳಕಕ್ಕೆ ಸರಿತಾಗೆ 5 ದಿನ ನಡೆಯೋಕೂ ಸಾಧ್ಯವಾಗಿಲ್ವಂತೆ!

    ಕರ್ನಾಟಕ ಉಸ್ತುವಾರಿಯ ‘ಕೈ’ಚಳಕಕ್ಕೆ ಸರಿತಾಗೆ 5 ದಿನ ನಡೆಯೋಕೂ ಸಾಧ್ಯವಾಗಿಲ್ವಂತೆ!

    – ಕೇರಳದ ಸೋಲಾರ್ ಕಾಮಕಾಂಡದ ವರದಿ ಬಯಲು
    – ವಿಧಾನಸಭೆಯಲ್ಲಿ ನ್ಯಾಯಾಂಗ ತನಿಖಾ ವರದಿ ಮಂಡನೆ

    ತಿರುವನಂತಪುರಂ: ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಅವರು ಬಹುಕೋಟಿ ಸೋಲಾರ್ ಹಗರಣದ ಆರೋಪಿ ಸರಿತಾ ನಾಯರ್ ಅವರಿಗೆ ದೈಹಿಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನ್ಯಾಯಾಂಗ ತನಿಖಾ ವರದಿ ಹೇಳಿದೆ.

    ಸೋಲಾರ್ ಹಗರಣದ ನ್ಯಾಯಾಂಗ ತನಿಖಾ ವರದಿ ಗುರುವಾರ ಕೇರಳ ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಸರಿತಾ ನಾಯರ್ ಹೇಳಿಕೆಯನ್ನು ಆಧರಿಸಿ ತಯಾರಿಸಲಾದ ವರದಿಯಲ್ಲಿ ಕೆಸಿ ವೇಣುಗೋಪಾಲ್ ಅವರ ‘ಕೈ’ಚಳಕದ ಬಗ್ಗೆ ವಿವರವಾಗಿ ಪ್ರಸ್ತಾಪವಾಗಿದೆ.

    ವರದಿಯಲ್ಲಿ ಏನಿದೆ?
    ಟೀಂ ಸೋಲಾರ್ ಬ್ರ್ಯಾಂಚ್ ಉದ್ಘಾಟನೆಗೆ ಆಹ್ವಾನಿಸಲು ಆಲೆಪ್ಪಿಯಲ್ಲಿರುವ ವೇಣುಗೋಪಾಲ್ ನಿವಾಸ ‘ರಾಜೀವಂ’ ಗೆ ಸರಿತಾ ಆಗಮಿಸಿದ್ದರು. ಈ ವೇಳೆ ವೇಣುಗೋಪಾಲ್ ಅವರಿಗೆ ಸರಿತಾ ಪರಿಚಯವಾಗಿತ್ತು. ಉದ್ಘಾಟನೆಯ ದಿನಾಂಕ, ಸಮಯ ನಿಗದಿಯಾದ ಬಳಿಕ ಹೊರಡಲು ಸಜ್ಜಾಗಿದ್ದ ವೇಳೆ ಕೆ.ಸಿ.ವೇಣುಗೋಪಾಲ್ ಸರಿತಾ ಹಿಂಭಾಗವನ್ನು ಸವರಿದ್ದಾರೆ. ಇದೇ ವೇಳೆ ಕೈಯಲ್ಲಿದ್ದ ಫೈಲ್‍ನಲ್ಲಿ ವೇಣುಗೋಪಾಲ್ ಹೊಡೆದ ಸರಿತಾ,’ಹಾಗೆ ಮಾಡಬೇಡಿ’ ಎಂದು ಹೇಳಿದ್ದರು. ಈ ಘಟನೆಗೆ ಸರಿತಾ ಜೊತೆಗಿದ್ದ ಜನರಲ್ ಮ್ಯಾನೇಜರ್ ಸಾಕ್ಷಿಯಾಗಿದ್ದಾರೆ. ಈ ವೇಳೆ ಜನರಲ್ ಮ್ಯಾನೇಜರ್ ಮಧ್ಯಪ್ರವೇಶಿಸಿ ಸರಿತಾ ಅವರನ್ನು ಸುಮ್ಮನಾಗಿಸಿದ್ದರು.

    ಇದಾದ ಕೆಲ ಸಮಯದ ಬಳಿಕ ಸರಿತಾ ಮೊಬೈಲ್‍ಗೆ ವೇಣುಗೋಪಾಲ್ ‘ತುಂಬಾ ಮೃದುವಾಗಿತ್ತು’ ಎಂದು ಸಂದೇಶ ಕಳುಹಿಸಿದ್ದಾರೆ. ಇದರಿಂದ ಸಿಟ್ಟಾಗಿ ಸರಿತಾ ಫೋನ್ ಮಾಡಿ ಬೈದಾಗ ‘ಸ್ಟಿಲ್ ಲವ್ ಯೂ’ ಎಂದು ಹೇಳಿದ್ದಾರೆ. ಫೋನ್ ಕರೆಯಲ್ಲಿ ನೀನು ದೆಹಲಿಗೆ ಬಂದ್ರೆ ಮಾತ್ರ ಬ್ರ್ಯಾಂಚ್ ಉದ್ಘಾಟನೆಗೆ ಬರುತ್ತೇನೆ ಎಂದು ಷರತ್ತು ವಿಧಿಸಿದ್ದರು. ಕೊನೆಗೆ ದೆಹಲಿಗೆ ಬಂದು ಸರಿತಾ – ವೇಣುಗೋಪಾಲ್ ರಾಜಿಯಾಗಿದ್ದರು. ಇದಾದ ಬಳಿಕ ರಾತ್ರಿ ವೇಳೆ ಪದೇ ಪದೇ ವೇಣುಗೋಪಾಲ್ ಫೋನ್ ಮಾಡುತ್ತಿದ್ದರು. ಅನಿಲ್ ಕುಮಾರ್ ಹಾಗೂ ನಜರುಲ್ಲಾ ಅವರು ಕೆಸಿ ವೇಣುಗೋಪಾಲ್‍ಗೆ ಪಿಂಪ್‍ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು.

    ಅಂದು ಕೇರಳದಲ್ಲಿ ಬಿಜೆಪಿ ಬಂದ್‍ಗೆ ಕರೆ ನೀಡಿತ್ತು. ಈ ವೇಳೆ ಇಕೋ ಟೂರಿಸಂ ಯೋಜನೆಯ ಪೇಪರ್ ರೆಡಿಯಿದೆ ಎಂದು ರೋಸ್ ಹೌಸ್‍ಗೆ ಬರಲು ವೇಣುಗೋಪಾಲ್ ಸರಿತಾಗೆ ಆಹ್ವಾನ ನೀಡಿದ್ದರು. ಇಕೋಟೂರಿಸಂ ಯೋಜನೆ ನಂಬಿ ಸರಿತಾ ಆಗಮಿಸಿದಾಗ ರೋಸ್ ಹೌಸ್ ನಲ್ಲಿ ಬಂದಾಗ ಸಚಿವರೂ ಇರಲಿಲ್ಲ, ಸಚಿವರ ಆಪ್ತ ಸಿಬ್ಬಂದಿಯೂ ಇರಲಿಲ್ಲ. ಇಬ್ಬರು ಪೊಲೀಸರು ಮಾತ್ರ ಗೇಟ್‍ನಲ್ಲಿ ನಿಂತಿದ್ದರು. ಫೋನ್ ಮಾಡಿದಾಗ ಹಾಲ್‍ನಲ್ಲಿದ್ದೇನೆ ಎಂದು ವೇಣುಗೋಪಾಲ್ ಹೇಳಿದ್ದರು. ಕುಡಿದ ಅಮಲಿನಲ್ಲಿ ತೇಲಾಡುತ್ತಿದ್ದ ವೇಣುಗೋಪಾಲ್ ಸರಿತಾ ಕೊಠಡಿಗೆ ಬಂದಾಗ ಒತ್ತಾಯಪೂರ್ವಕವಾಗಿ ಅಪ್ಪಿಕೊಂಡಿದ್ದಾರೆ. ಈ ವೇಳೆ ಇಬ್ಬರೂ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವೇಣುಗೋಪಾಲ್ ಬಲವಂತವಾಗಿ ದೈಹಿಕವಾಗಿ ದೌರ್ಜನ್ಯ ನಡೆಸಿದ್ದಾರೆ. ದೌರ್ಜನ್ಯ ನಡೆದ ಬಳಿಕ ಸರಿತಾಗೆ 5 ದಿನ ನಡೆಯಲೂ ಸಾಧ್ಯವಾಗಲಿಲ್ಲ. ಎದ್ದುನಿಂತುಕೊಳ್ಳಲೂ ಸಾಧ್ಯವಾಗಿರಲಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಸರಿತಾ ಬಳಿ ಸಾಕ್ಷ್ಯಗಳಿದ್ದು, ಇದಾದ ಬಳಿಕವೂ ಫೋನ್ ಕಾಲ್ ಹಾಗೂ ಎಸ್‍ಎಂಎಸ್ ಮೂಲಕ ದೌರ್ಜನ್ಯ ನಡೆಯುತ್ತಿತ್ತು ಎನ್ನುವ ಅಂಶ ವರದಿಯಲ್ಲಿದೆ.

    ಕೆಸಿ ವೇಣುಗೋಪಾಲ್ ಬೆದರಿಸಿ ನನ್ನನ್ನು ಸೆಕ್ಸ್ ಗೆ ಬಳಸಿಕೊಂಡಿದ್ದಾರೆ. ಟೆಲಿಫೋನ್ ಕಾಲ್, ಎಸ್‍ಎಂಎಸ್ ಮಾಡಿ ದೌರ್ಜನ್ಯ ಎಸಗಿದ್ದಾರೆ. ಇದಕ್ಕೆ ಎಲ್ಲ ನನ್ನ ಬಳಿ ಸಾಕ್ಷ್ಯವಿದೆ ಎಂದು ಆಯೋಗದ ಮುಂದೆ ಸರಿತಾ ನಾಯರ್ ಹೇಳಿಕೆ ನೀಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ ವರದಿ ಮಂಡನೆ ಬಗ್ಗೆ ಪ್ರತಿಕ್ರಿಯಿಸಿದ ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ, ಇದು ಸೋಲಾರ್ ತನಿಖಾ ಆಯೋಗದ ವರದಿಯೋ ಅಥವಾ ಸರಿತಾ ನಾಯರ್ ಹೇಳಿಕೆಯ ವರದಿಯೋ ಎಂದು ಪ್ರಶ್ನಿಸಿದ್ದಾರೆ. ವರದಿಯಲ್ಲಿರುವ ಎಲ್ಲ ಅಂಶಗಳು ಈ ಹಿಂದೆ ಸರಿತಾ ಬರೆದ ಪತ್ರದಲ್ಲಿತ್ತು. ಈ ವರದಿಯಲ್ಲಿ ಏನೂ ವಿಶೇಷ ಅಂಶಗಳಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

    ಈ ಹಿಂದಿನ ಯುಡಿಎಫ್ ಸರಕಾರದ ಆಡಳಿತದ ವೇಳೆ ನಡೆದ ಸೋಲಾರ್ ಭ್ರಷ್ಟಾಚಾರ ಹಗರಣದ ನ್ಯಾಯಾಂಗ ತನಿಖೆಯನ್ನು ಜಸ್ಟೀಸ್ ಜಿ. ಶಿವರಾಜನ್ ನಡೆಸಿದ್ದರು. ಅಂದು ಮುಖ್ಯಮಂತ್ರಿಯಾಗಿದ್ದ ಉಮ್ಮನ್ ಚಾಂಡಿ, ವಿದ್ಯುತ್ ಖಾತೆ ಸಚಿವ ಆರ್ಯಾಡನ್ ಮುಹಮ್ಮದ್, ಸೋಲಾರ್ ಪ್ಯಾನಲ್ ಪೂರೈಕೆಯ ಪ್ರಧಾನ ಸೂತ್ರಧಾರಿ ಸರಿತಾ ಎಸ್. ನಾಯರ್, ಆಕೆಯ ಪತಿ ಬಿಜು ರಾಧಾಕೃಷ್ಣನ್ ಸೇರಿದಂತೆ ಹಲವರು ಈ ಹೇಳಿಕೆ ನೀಡಿದ್ದರು.

    ಈ ಹಿಂದೆ ತಿರುವನಂತಪುರಂನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್, ಸರಿತಾ ನಾಯರ್ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆದಿದೆ. ಹೀಗಾಗಿ ಸರಿತಾ ನಾಯರ್ ಯಾರ ವಿರುದ್ಧ ಹೇಳಿಕೆ ನೀಡಿದ್ದಾರೋ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಹೇಳಿದ್ದರು.

    ಆರೋಪಿ ಸರಿತಾ ಉಲ್ಲೇಖ ಮಾಡಿರುವ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಬಹುದು ನ್ಯಾಯಾಂಗ ಆಯೋಗ ಹೇಳಿದೆ. ಲೈಂಗಿಕ ಬಯಕೆ ಈಡೇರಿಸುವಂತೆ ಬೇಡಿಕೆ ಇಡುವುದು ಭ್ರಷ್ಟಾಚಾರದ ಭಾಗವೆಂದು ಪರಿಗಣಿಸಲಾಗಿದೆ. ವರದಿಯನ್ನೇ ಆಧರಿಸಿ ಕಾಂಗ್ರೆಸ್‍ಗೆ ಶಾಕ್ ನೀಡಲು ಕೇರಳದ ಎಡಪಕ್ಷಗಳ ಸರ್ಕಾರ ಈಗ ಮುಂದಾಗಿದೆ.

  • ಸಾಲಮನ್ನಾ ಮಾಡಿದ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಚುನಾವಣಾ ತಯಾರಿ ಚುರುಕು

    ಸಾಲಮನ್ನಾ ಮಾಡಿದ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಚುನಾವಣಾ ತಯಾರಿ ಚುರುಕು

    ಬೆಂಗಳೂರು: ಅವಧಿಗೂ ಮುನ್ನವೇ ವಿಧಾನಸಭಾ ಚುನಾವಣೆ ನಡೆಯಲಿದೆ ಅನ್ನೋ ಮಾತು ರಾಜಕೀಯ ಪಡಸಾಲೆಯಲ್ಲಿ ಆಗಾಗ್ಗೆ ಕೇಳಿಬರುತಿತ್ತು. ಈಗ ಸರ್ಕಾರ ರೈತರ ಸಾಲಮನ್ನಾ ಮಾಡಿದ ಬಳಿಕ ರಾಜ್ಯದಲ್ಲೀಗ ಎಲೆಕ್ಷನ್ ಮೂಡ್ ಮನೆ ಮಾಡಿದೆ. ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ರೆ, ಲೆಕ್ಕಾಚಾರಗಳು ಜೋರಾಗಿವೆ.

    ಸಾಲಮನ್ನಾ ಅಸ್ತ್ರವನ್ನ ಮತಗಳನ್ನಾಗಿ ಪರಿವರ್ತಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಸಖತ್ ಪ್ಲಾನ್ ಮಾಡಿದಂತಿದೆ. ಇದಕ್ಕೆ ಪುಷ್ಟಿ ಎನ್ನುವಂತೆ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬೆಂಗಳೂರಿನಲ್ಲೇ ಮನೆ ಮಾಡಲಿದ್ದಾರೆ ಅನ್ನೋ ಮಾತು ಕೇಳಿ ಬಂದಿದೆ.

    ಅಷ್ಟೇ ಅಲ್ಲದೇ ಜೊತೆಗೆ, ಇದೇ ತಿಂಗಳ 27 ರಿಂದ ಜುಲೈ 07ರವರೆಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಲಿಂಗಾಯಿತ ಮತ ಸೆಳೆಯಲು 29ರಂದು ಕೂಡಲ ಸಂಗಮದಿಂದಲೇ ಸಮಾವೇಶದ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.

    ಇದೇ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪಟ್ಟಿಯಲ್ಲಿ ಪ್ರಬಲವಾಗಿ ಕೇಳಿ ಬಂದಿದ್ದ ಲಿಂಗಾಯಿತ ನಾಯಕ ಎಸ್.ಆರ್ ಪಾಟೀಲ್ ಅವರು ಪಕ್ಷದ ಕಾರ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ. ನಂತರ ಕಾಂಗ್ರೆಸ್ ಎಲ್ಲಾ ಘಟಕಗಳು ಹಾಗೂ ಜಿಲ್ಲಾಧ್ಯಕ್ಷರೊಂದಿಗೆ ವೇಣುಗೋಪಾಲ್ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಈ ಮಧ್ಯೆ, ಪಕ್ಷದ ಯಾವುದೇ ಸಚಿವರು, ಶಾಸಕರು ಯಾವುದೇ ಹಗರಣದಲ್ಲಿ ಸಿಲುಕಿಕೊಳ್ಳಬಾರದು ಅಂಥ ವಾರ್ನಿಂಗ್ ಕೊಟ್ಟಿದ್ದಾರೆ.

     

    https://www.youtube.com/watch?v=tq1SE7Pu_hg