Tag: ಕೆಸಿ ಜನರಲ್

  • ಕೆಸಿ ಜನರಲ್ ಆಸ್ಪತ್ರೆ ಎಡವಟ್ಟಿನಿಂದ ಮಗು ಸಾವು- ಮಗು ಸತ್ತೋದ ಮೇಲೆ ಬಿಲ್ ಕೇಳಿದ ಆರೋಪ

    ಕೆಸಿ ಜನರಲ್ ಆಸ್ಪತ್ರೆ ಎಡವಟ್ಟಿನಿಂದ ಮಗು ಸಾವು- ಮಗು ಸತ್ತೋದ ಮೇಲೆ ಬಿಲ್ ಕೇಳಿದ ಆರೋಪ

    – ಸಿಜೇರಿಯನ್‍ಗೆ ವೈದ್ಯರ ವಿಳಂಬ ಆರೋಪ

    ಬೆಂಗಳೂರು: ನಗರದ ಕೆಸಿ ಜನರಲ್ (KC General) ಅಸ್ಪತ್ರೆಯ ವೈದ್ಯರ ಎಡವಟ್ಟಿನಿಂದಾಗಿ ಜಗತ್ತಿಗೆ ಬರುವ ಮುಂಚೆಯೇ ಕಂದಮ್ಮ ಕಣ್ಣು ಮುಚ್ಚಿದ ಘಟನೆಯೊಂದು ನಡೆದಿದೆ.

    ಚೊಕ್ಕಸಂದ್ರದ ದೇವಿಕಾ ಎಂಬವರಿಗೆ 9 ತಿಂಗಳು ಭರ್ತಿಯಾಗಿ 12 ದಿನದ ಬಳಿಕ ಆಸ್ಪತ್ರೆ ವೈದ್ಯರು ಡೆಲಿವರಿಗೆ ಡೇಟ್ ಕೊಟ್ಟರು. ಆದರೆ ಡೇಟ್ ಮೀರಿದೆ ಸಿಜೇರಿಯನ್ ಮಾಡಿ ಅಂತಾ ಕುಟುಂಬಸ್ಥರು ಮನವಿ ಮಾಡಿದರೂ ವೈದ್ಯರು ಒಪ್ಪದೇ ನಾರ್ಮಲ್ ಗೆ ರೆಡಿ ಮಾಡಿದ್ದಾರೆ. ಬಳಿಕ ನಾರ್ಮಲ್ ಆಗಲ್ಲ ಸಿಜೇರಿಯನ್ ಮಾಡ್ತೀವಿ ಅಂತಾ ಹೇಳಿದ್ದಾರೆ. ಕೊನೆಗೆ ಮಗು ಗಲೀಜು ನೀರು ಕುಡಿದಾಗಿದ್ದು, ಮಗು ಸತ್ತು ಹೋಗಿದೆ ಎಂದು ತಿಳಿಸಿದ್ದಾರೆ.

    ಇದಾದ ಬಳಿಕ ಆಸ್ಪತ್ರೆಯಲ್ಲಿ ಕುಟುಂಬಸ್ಥರು ಗಲಾಟೆ ನಡೆಸಿದ್ದು, ಆಕ್ರೋಶ ಹೊರಹಾಕಿ ಕಣ್ಣೀರು ಹಾಕುತ್ತಿದ್ದಾರೆ. ಅಲ್ಲದೇ ಮಗು ಸತ್ತು ಹೋದ ಮೇಲೆಯೂ ದುಡ್ಡು ಕೊಡಿ ಎಂದು ಆಸ್ಪತ್ರೆಯವರು ಕೇಳಿದ್ದಾರೆ. ಭಾನುವಾರ 10 ಗಂಟೆಗೆ ಮಹಿಳೆ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಸಂಜೆ 7 ಗಂಟೆಯವರೆಗೆ ಆಸ್ಪತ್ರೆಯವರು ಕಾಯಿಸಿದ್ದಾರೆ. ಒಂದು ವಾರದ ಹಿಂದೆ ನಾರ್ಮಲ್ ಆಗಲ್ಲ, ಸಿಜೇರಿಯನ್ ಆಗುತ್ತೆ ಎಂದಿದ್ದರು. ಆದರೆ ನಿನ್ನೆ ಬಂದ ಬಳಿಕ ನಾರ್ಮಲ್ ಆಗುತ್ತೆ ಎಂದು ಅಸ್ಪತ್ರೆಯವರು ಹೇಳಿದ್ದಾರೆ. ಕುಟುಂಬಸ್ಥರು ದಿನ ತುಂಬಿದೆ ಕಾಯಬೇಡಿ ಅಂದ್ರೂ ಆಸ್ಪತ್ರೆಯವರು ಕೇಳಲಿಲ್ಲ ಎಂದು ದೇವಿಕಾ ಕುಟುಂಬಸ್ಥರು ಆರೋಪಿಸಿದ್ದಾರೆ. ಲಂಚ ಲಂಚ ಅಂತಾ ಸಾಯ್ತಾ ಇದ್ದಾರೆ. ವೈದ್ಯರನ್ನು ಹೊರಗೆ ಕರೆಸುವಂತೆ ಗಲಾಟೆ ಮಾಡಿ ಆಕ್ರೋಶ ಹೊರಹಾಕಿದ ಕುಟುಂಬಸ್ಥರು, ಆಸ್ಪತ್ರೆಯೊಳಗೆ ನುಗ್ಗಲು ಯತ್ನಿಸಿದ್ದಾರೆ. ವೈದ್ಯರನ್ನು ಸಸ್ಪೆಂಡ್ ಮಾಡಿ ಅಂತಾ ಕಿಡಿಕಾರಿದ್ದಾರೆ.

    ಇತ್ತ ಈ ಸಂಬಂಧ ಜನರಲ್ ಮೆಡಿಕಲ್ ಆಫೀಸರ್ ಡಾ ಮೋಹನ್ ಕೆಸಿ ಪ್ರತಿಕ್ರಿಯಿಸಿ, ಡಾ. ವಿಜಯಲಕ್ಷ್ಮಿ ವೈದ್ಯೆ ಇವರನ್ನು ನೋಡುತ್ತಿದ್ರು. ಡಿಸೆಂಬರ್ 10ಕ್ಕೆ ಡೆಲಿವರಿ ಡೇಟ್ ಇತ್ತು. ಸಿಜೇರಿಯನ್ ಅಗತ್ಯವಿಲ್ಲ ಅಂತಾ ನಿರ್ಧಾರಕ್ಕೆ ಬಂದಿದ್ರು. ಆದರೆ ನಾರ್ಮಲ್ ಆಗದೇ ಇರೋದ್ರಿಂದ ಸಿಜೇರಿಯನ್ ಮಾಡಿದ್ದಾರೆ. ಹಾರ್ಟ್ ಬೀಟ್ ಕಡಿಮೆ ಇತ್ತು, ಎನ್ ಐ ಸಿಯು ಗೆ ಶಿಫ್ಟ್ ಮಾಡಿದ್ದಾರೆ. ವೈದ್ಯೆ ನನ್ನ ಕಡೆಯಿಂದ ತಪ್ಪಾಗಿಲ್ಲ ಅಂತಾ ಹೇಳಿದ್ದಾರೆ. ಆದರೆ ವೈದ್ಯೆಯ ನಿರ್ಲಕ್ಷ್ಯ ಇದ್ರೆ ಖಂಡಿತಾ ಕ್ರಮ ಕೈಗೊಳ್ಳುತ್ತೇವೆ. ಆಂತರಿಕ ತನಿಖೆ ಮಾಡುತ್ತೇವೆ. ವರದಿ ತಯಾರಿ ಮಾಡಿದ ಬಳಿಕ ಕೇಸ್ ಶೀಟ್ ತಗೊಂಡು ನಿರ್ಧಾರ ಮಾಡ್ತೇವೆ. ವೈದ್ಯರ ನಿರ್ಲಕ್ಷ್ಯ ದಾಖಲೆಯಲ್ಲಿ ಬಂದ್ರೇ ಖಂಡಿತಾ ಕ್ರಮ ತೆಗೆದುಕೊಳ್ಳುತ್ತೇವೆ. ದೂರು ಕೊಟ್ಟ ಮೇಲೆ ತನಿಖೆ ಮಾಡೇ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

    ಮಲ್ಲೇಶ್ವರ ಠಾಣೆಯಲ್ಲಿ ಕುಟುಂಬಸ್ಥರು ವೈದ್ಯೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  • ಪ್ರತಿಷ್ಠಿತ ಕೆಸಿ ಜನರಲ್ ಆಸ್ಪತ್ರೆಗೆ ಪವರ್ ಕಟ್ ಮಾಡೋದಾಗಿ ಬೆಸ್ಕಾಂ ಶಾಕಿಂಗ್ ನೋಟಿಸ್

    ಪ್ರತಿಷ್ಠಿತ ಕೆಸಿ ಜನರಲ್ ಆಸ್ಪತ್ರೆಗೆ ಪವರ್ ಕಟ್ ಮಾಡೋದಾಗಿ ಬೆಸ್ಕಾಂ ಶಾಕಿಂಗ್ ನೋಟಿಸ್

    – 5 ತಿಂಗಳ 38 ಲಕ್ಷ ಕರೆಂಟ್ ಬಿಲ್ ಬಾಕಿ
    – ಸರ್ಕಾರಿ ಆಸ್ಪತ್ರೆಗಳ ಬಿಲ್ ಕಟ್ಟದಷ್ಟು ಸರ್ಕಾರದ ಬೊಕ್ಕಸದಲ್ಲಿ ದುಡ್ಡು ಇಲ್ವಾ?

    ಬೆಂಗಳೂರು: ರಾಜ್ಯದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತೇವೆ ಎಂದು ರಾಜ್ಯದ ಮುಖ್ಯಮಂತ್ರಿಗಳು, ಸಚಿವರು ಸಾಲು ಸಾಲು ಭಾಷಣ ಮಾಡುತ್ತಾರೆ. ಆಸ್ಪತ್ರೆಗಳ (Hospital) ನಿರ್ವಹಣೆಗೆ ಎಂದು ಕೋಟಿ ಕೋಟಿ ದುಡ್ಡು ಮೀಸಲಿಟ್ಟಿದ್ದೇವೆ ಎಂದು ಹೇಳುತ್ತಾರೆ. ಆದರೆ ಆಸ್ಪತ್ರೆಗಳ ನಿರ್ವಹಣೆ ಮಾಡುವುದರಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದಕ್ಕೆ ಸ್ಪಷ್ಟ ನಿದರ್ಶನ ಬೆಂಗಳೂರು (Bengaluru) ನಗರದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆ ಕೆಸಿ ಜನರಲ್ (KC General Hospital).

    ಮಲ್ಲೇಶ್ವರಂನಲ್ಲಿ ಇರುವ ಕೆಸಿ ಜನರಲ್ ಆಸ್ಪತ್ರೆಗೆ ಬೆಸ್ಕಾಂ (BESCOM) ಪವರ್ ಕಟ್ ಮಾಡುವ ಶಾಕಿಂಗ್ ನೋಟಿಸ್ ನೀಡಿದೆ. ಕಳೆದ 3-4 ತಿಂಗಳಿಂದ ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿದೆ. 38 ಲಕ್ಷ ರೂ. ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿದ್ದು, ಸರ್ಕಾರಿ ಆಸ್ಪತ್ರೆಗಳ ಕರೆಂಟ್ ಬಿಲ್ ಕಟ್ಟದಷ್ಟು ಸರ್ಕಾರದ ಬೊಕ್ಕಸ ಖಾಲಿಯಾಗಿದೆಯಾ ಎಂಬ ಪ್ರಶ್ನೆ ಮೂಡಿದೆ.

    ಈ ಕರೆಂಟ್ ಬಿಲ್ ಪಾವತಿ ಮಾಡದೇ ಇರಲು ಕಾರಣ ಸರ್ಕಾರದಿಂದ ಅನುದಾನ ಬರದೇ ಇರುವುದು. ಸರ್ಕಾರದಿಂದ ಅನುದಾನ ಬರುತಿತ್ತು. ಆದರೆ ಈಗ ಕೆಲ ತಿಂಗಳಿಂದ ಬಂದಿಲ್ಲ. ಹೀಗಾಗಿ ಬಿಲ್ ಬಾಕಿ ಇದೆ. ಅನುದಾನ ಕೊಡಿ ಎಂದು ಪತ್ರ ಬರೆದಿದ್ದೆವೆ. ಆರೋಗ್ಯ ಇಲಾಖೆಯ ನಿರ್ದೇಶನಾಲಯದಿಂದ ಅನುದಾನ ಬಂದ ತಕ್ಷಣವೇ ನಾವು ವಿದ್ಯುತ್ ಬಿಲ್ ಅನ್ನು ಕಟ್ಟುತ್ತೆವೆ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಫೆ.6 ರಂದು ಮತ್ತೆ ರಾಜ್ಯಕ್ಕೆ ಮೋದಿ – ಎಲ್ಲಿ ಏನು ಕಾರ್ಯಕ್ರಮ?

    ಒಟ್ಟಾರೆ ಆರೋಗ್ಯ ಸೇವೆಗೆ ಅಷ್ಟು ದುಡ್ಡು ಮೀಸಲಿಟ್ಟಿದ್ದೇವೆ, ಇಷ್ಟು ದುಡ್ಡು ಮೀಸಲಿಟ್ಟಿದ್ದೇವೆ ಎಂದು ಹೇಳಿಕೊಳ್ಳುವ ಸರ್ಕಾರ ಆಸ್ಪತ್ರೆಗಳಿಗೆ ಅನುದಾನ ಬಿಡುಗಡೆ ಮಾಡದೇ ಇರುವುದು ನಿಜಕ್ಕೂ ನಾಚಿಗೇಡಿನ ಸಂಗತಿ. ವರದಿ ಬಳಿಕವಾದರೂ ಎಚ್ಚೆತ್ತು ಆರೋಗ್ಯ ಇಲಾಖೆ ಸರ್ಕಾರಿ ಆಸ್ಪತ್ರೆಗಳ ವಿದ್ಯುತ್ ಬಿಲ್ ಬಾಕಿಯನ್ನು ಕ್ಲಿಯರ್ ಮಾಡಿ ರೋಗಿಗಳಿಗೆ ಬೆಳಕಾಗುತ್ತಾ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ಹುಬ್ಬಳ್ಳಿ -ಅಂಕೋಲಾ ರೈಲ್ವೆ ಮಾರ್ಗಕ್ಕೆ ಸಿಗದ ಅನುಮತಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ದೊಡ್ಡ ಹಗರಣ – ಆಸ್ಪತ್ರೆಯೇ ಕಟ್ಟಬಹುದಾದ ಹಣದಲ್ಲಿ ರಿಪೇರಿ ಕೆಲಸದ ಲೆಕ್ಕ

    ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ದೊಡ್ಡ ಹಗರಣ – ಆಸ್ಪತ್ರೆಯೇ ಕಟ್ಟಬಹುದಾದ ಹಣದಲ್ಲಿ ರಿಪೇರಿ ಕೆಲಸದ ಲೆಕ್ಕ

    ಬೆಂಗಳೂರು: ಒಂದೇ ಆಸ್ಪತ್ರೆ ನಿರ್ವಹಣೆ ಮತ್ತು ರಿಪೇರಿಗೆ ಕೋಟಿ ಕೋಟಿ ಹಣ ಖರ್ಚು ಮಾಡಲಾಗಿದೆ. ಆಸ್ಪತ್ರೆಯೇ ಕಟ್ಟಬಹುದಾದ ಹಣದಲ್ಲಿ ರಿಪೇರಿ ಕೆಲಸದ ಲೆಕ್ಕ ತೋರಿಸಲಾಗಿದೆ. ಕೆಲಸ ಆಗದಿದ್ರೂ ಬಿಲ್ ಮಾತ್ರ ರಿಲೀಸ್ ಆಗಿದೆ. ಆರೋಗ್ಯ ಇಲಾಖೆಯ ಕರ್ಮಕಾಂಡದ ಸ್ಟೋರಿ ಇದು.

    ಹೌದು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಇಂತಹದ್ದೊಂದು ದೊಡ್ಡ ಹಗರಣ ನಡೆದಿದೆ. ಆಸ್ಪತ್ರೆಯ ರಿಪೇರಿ ಹಾಗೂ ವಿವಿಧ ಕಾಮಗಾರಿಗೆ ಖರ್ಚಾಗಿರೋದು ಬರೋಬ್ಬರಿ 4.50 ಕೋಟಿ ರೂ. ಅಲ್ಲದೆ ನಿಯಮಗಳೆಲ್ಲ ಗಾಳಿಗೆ ತೂರಿ ಬೇಕಾದವರಿಗೆ ಟೆಂಡರ್ ನೀಡಲಾಗಿದೆ.

    ಬಣ್ಣ ಬಳಿಯೋಕೆ 35 ಲಕ್ಷ ರೂ., ಸ್ಟೀಲ್ ಕಂಬಿಗಳ ಅಳವಡಿಕೆಗೆ 25 ಲಕ್ಷ ರೂ., ಮೇಚ್ಛಾವಣಿ ರಿಪೇರಿಗೆ ಲಕ್ಷ ಲಕ್ಷ ಹಣ ಖರ್ಚಾಗಿದೆ. ಗೋಡೆ ಕಿತ್ತು ಹೋಗಿದ್ರು ಅದಕ್ಕೆ ಲಕ್ಷ ಲಕ್ಷ ದುಡ್ಡು ಖರ್ಚು ಮಾಡಿ ರಿಪೇರಿ ಮಾಡಿದ್ದಾಗಿ ಲೆಕ್ಕ ನೀಡಿದ್ದಾರೆ. ವಾರ್ಡ್‍ಗಳು ಹಾಗೇ ಇದ್ರು ವಾರ್ಡ್ ರಿಪೇರಿ ಹೆಸರಲ್ಲಿ 50 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಕೆಲಸವೇ ಆಗಿಲ್ಲವಾದ್ರೂ ದುಡ್ಡು ಮಾತ್ರ ರಿಲೀಸ್ ಆಗಿದೆ. ಹೀಗೆ ಕೆಸಿ ಜನರಲ್ ಆಸ್ಪತ್ರೆ ರಿಪೇರಿ ಖರ್ಚಿಗೆ ಆಗಿರೋದು ನಾಲ್ಕೂವರೆ ಕೋಟಿ ರೂ. RTI ನಲ್ಲಿ ಕೆ.ಸಿ.ಜನರಲ್ ಆಸ್ಪತ್ರೆಯ ಈ ಕರ್ಮಕಾಂಡ ಬಯಲಾಗಿದೆ.

    ಅತೀ ತುರ್ತು ಕೆಲಸ ಅಂತ ಟೆಂಡರ್ ಕರೆಯದೇ ಕಾಮಗಾರಿ ನೀಡಲಾಗಿದೆ. ಬೇಕಾದವರಿಗೆ ಕೆಲಸ ಕೊಟ್ಟು ಕೋಟಿ ಕೋಟಿ ಹಣ ಗುಳುಂ ಮಾಡಿರೋ ಆರೋಪ ಕೇಳಿಬಂದಿದೆ.