Tag: ಕೆಸಿಎನ್‌ ಮೋಹನ್‌

  • ಹಿರಿಯ ನಿರ್ಮಾಪಕ ಕೆಸಿಎನ್ ಮೋಹನ್ ನಿಧನ

    ಹಿರಿಯ ನಿರ್ಮಾಪಕ ಕೆಸಿಎನ್ ಮೋಹನ್ ನಿಧನ

    ಸ್ಯಾಂಡಲ್‌ವುಡ್ (Sandalwood) ಹಿರಿಯ ನಿರ್ಮಾಪಕ ಕೆಸಿಎನ್ ಮೋಹನ್ (Producer Kcn Mohan) ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮೋಹನ್ ಅವರು ಚಿಕಿತ್ಸೆ ಫಲಿಸದೇ ಭಾನುವಾರ (ಜುಲೈ 2)ರಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.

    ಮೋಹನ್ ಒಡೆತನದಲ್ಲಿ ಜಯಸಿಂಹ, ಭಲೇ ಚತುರ, ರಮ್ಯಾ (Ramya) ನಟನೆಯ ಜೂಲಿ (Julie Film), ಹೂಮಳೆ, ಅಳಿಮಯ್ಯ, ಆಚಾರ್ಯ, ಪೊಲೀಸ್ ಪವರ್, ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ಮಾಣ ಮಾಡಿದ್ದ ಕೆಸಿಎನ್ ಮೋಹನ್ ಅವರು ತಮ್ಮ ತಂದೆ ನಿರ್ಮಾಪಕ ಕೆಸಿಎನ್ ಗೌಡ್ರು ಅವರ ನಿಧನ ಬಳಿಕ ಅನುಪಮ್ ಮೂವೀಸ್ ಜವಾಬ್ದಾರಿಯನ್ನ ಹೊತ್ತಿದ್ದರು. ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಂಡವಾಳ ಹೂಡುವ ಮೂಲಕ ಕೆಸಿಎನ್ ಮೋಹನ್ ಸಾಥ್ ನೀಡಿದ್ರು. ನಿರ್ಮಾಪಕ ಮೋಹನ್, ಬೆಂಗಳೂರಿನ ನವರಂಗ್ ಚಿತ್ರಮಂದಿರದ ಮಾಲಿಕರಾಗಿದ್ದಾರೆ. ಇದನ್ನೂ ಓದಿ:ವಿಖ್ಯಾತ್ ಚಿತ್ರ ಪ್ರೊಡಕ್ಷನ್ ಸಾರಥ್ಯದಲ್ಲಿ ಪ್ಯಾನ್‌ ಇಂಡಿಯಾದತ್ತ ಗಣೇಶ್ ಗೋಲ್ಡನ್ ಹೆಜ್ಜೆ

    ಇದೀಗ 62ನೇ ವಯಸ್ಸಿಗೆ ಎಂದೂ ಬಾರದ ಲೋಕಕ್ಕೆ ಕೆಸಿಎನ್ ಮೋಹನ್ ಹೋಗಿದ್ದಾರೆ. ಕೆಲ ವರ್ಷಗಳ ಹಿಂದೆ ಮೋಹನ್ ಅವರ ಪತ್ನಿ ನಿಧನರಾಗಿದ್ದರು. ಸಹೋದರ ಚಂದ್ರಶೇಖರ್ ಕೂಡ ನಿಧನರಾಗಿದ್ದಾರೆ. ಇದೀಗ ಇಬ್ಬರೂ ಹೆಣ್ಣು ಮಕ್ಕಳನ್ನು ಬಿಟ್ಟು ಮೋಹನ್ ಅಗಲಿದ್ದಾರೆ. ಸಾಕಷ್ಟು ಸಮಯದಿಂದ ಮೋಹನ್ ಅನಾರೋಗ್ಯದಿಂದ ಬಳಲುತ್ತಿದ್ದರು. ಹಾಗಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯನ್ನ ಕೂಡ ಪಡೆಯುತ್ತಿದ್ದರು. ಜುಲೈ 2ರ ಬೆಳಿಗ್ಗೆ ಕಿಡ್ನಿ ವೈಪಲ್ಯದಿಂದ ಕೆಸಿಎನ್ ಮೋಹನ್ ವಿಧಿವಶರಾಗಿದ್ದಾರೆ. ಮೋಹನ್ ನಿಧನಕ್ಕೆ ಚಿತ್ರರಂಗದ ಗಣ್ಯರು, ಆಪ್ತರು ಸಂತಾಪ ಸೂಚಿಸಿದ್ದಾರೆ.

    ಕಸ್ತೂರಿ ನಿವಾಸ, ಭಕ್ತ ಸಿರಿಯಾಳ, ರಂಗನಾಯಕಿ, ಸನಾದಿ ಅಪ್ಪಣ್ಣ, ಸತ್ಯ ಹರಿಶ್ಚಂದ್ರ, ಬಬ್ರುವಾಹನ ಸೇರಿ ಅನೇಕ ಚಿತ್ರಗಳ ನಿರ್ಮಾಣ ಸಂಸ್ಥೆಯ ಕುಡಿ ಕೆಸಿಎನ್ ಮೋಹನ್ ಅವರಾಗಿದ್ದು, ಮೋಹನ್ ನಿಧನದ ಮೂಲಕ 50 ವರ್ಷಗಳ ಇತಿಹಾಸವುಳ್ಳ ಸಂಸ್ಥೆಯೇ ಯುಗಾಂತ್ಯವಾಗಿದೆ. ಕನ್ನಡ ಚಿತ್ರೋದ್ಯಮದಲ್ಲಿ ಬಿಗ್ ಬಜೆಟ್ ಚಿತ್ರಗಳನ್ನ ಪರಿಚಯಿಸಿದ್ದ ಸಂಸ್ಥೆ ಡಾ.ರಾಜ್ ಕುಮಾರ್ ಚಿತ್ರಗಳನ್ನ ನಿರ್ಮಿಸುವುದರ ಮೂಲಕ ಸ್ಯಾಂಡಲ್ವುಡ್ ಶ್ರೀಮಂತ ಚಿತ್ರ ನಿರ್ಮಾಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕಳೆದ ಕೆಲ ವರ್ಷಗಳ ಹಿಂದೆ ಲೆಜೆಂಡ್ ‘ಕಸ್ತೂರಿ ನಿವಾಸ’ ಚಿತ್ರವನ್ನು ಕಲರ್ ಟಚ್ ಕೊಟ್ಟು ಆಧುನೀಕರಿಸಿ ನಿರ್ಮಾಪಕ ಕೆಸಿಎನ್ ಮೋಹನ್ ರೀ-ರಿಲೀಸ್ ಮಾಡಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]