Tag: ಕೆಶಿಪ್ ಕಚೇರಿ

  • ರೇವಣ್ಣ ಸ್ವಕ್ಷೇತ್ರಕ್ಕೆ ಕೆಶಿಪ್ ಕಚೇರಿ ಸ್ಥಳಾಂತರ

    ರೇವಣ್ಣ ಸ್ವಕ್ಷೇತ್ರಕ್ಕೆ ಕೆಶಿಪ್ ಕಚೇರಿ ಸ್ಥಳಾಂತರ

    ಬೆಳಗಾವಿ: ಉತ್ತರ ಕರ್ನಾಟಕ ಜನರ ವಿರೋಧದ ನಡುವೆಯೇ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಎಚ್‍ಡಿ ರೇವಣ್ಣ ಅವರ ಕ್ಷೇತ್ರಕ್ಕೆ ಬೆಳಗಾವಿಯಿಂದ ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ(ಕೆಶಿಪ್) ಕಚೇರಿ ಸ್ಥಳಾಂತರಗೊಂಡಿದೆ.

    ಬಸವನಬಾಗೇವಾಡಿ ಕೆಶಿಪ್ ಉಪ ವಿಭಾಗದ ಕಚೇರಿ ಬೇಲೂರಿಗೆ ಸ್ಥಳಾಂತರವಾಗಿದ್ದು, ಸಮ್ಮಿಶ್ರ ಸರ್ಕಾರದ ನಿರ್ಧಾರಕ್ಕೆ ಉತ್ತರ ಕರ್ನಾಟಕ ಭಾಗದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಕೆಶಿಪ್ ಹಾಸನಕ್ಕೆ ಹೋಗಲು ಬಿಡಲ್ಲ- ಸೂಪರ್ ಸಿಎಂಗೆ ಸತೀಶ್ ಜಾರಕಿಹೋಳಿ ಸೆಡ್ಡು

    ಸದ್ಯ ಕಚೇರಿ ಶಿಫ್ಟ್ ಆಗುತ್ತಿರುವುದರಿಂದ ಸಿಬ್ಬಂದಿ ಮಂಗಳವಾರದಿಂದ ದಾಖಲೆಗಳನ್ನು ಗಂಟುಮೂಟೆ ಕಟ್ಟುತ್ತಿದ್ದಾರೆ. ಈ ಮೂಲಕ ಕಚೇರಿ ಎತ್ತಂಗಡಿಯನ್ನು ತಡೆಯುವಲ್ಲಿ ಸಚಿವರು, ಶಾಸಕರು ವಿಫಲರಾಗಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಇದನ್ನೂ ಓದಿ:  ಕೆಶಿಪ್ ಎತ್ತಂಗಡಿಗೆ ಉತ್ತರ ಕರ್ನಾಟಕದಲ್ಲಿ ಭಾರೀ ವಿರೋಧ- ಸೂಪರ್ ಸಿಎಂ ವಿರುದ್ಧ ಖಂಡನೆ

    ಈ ವಿಚಾರಕ್ಕೆ ಸಂಬಂಧಪಟ್ಟಂತೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ, ಸ್ಥಳೀಯ ಶಾಸಕನಿಗೆ ಯಾವುದೇ ಮಾಹಿತಿ ನೀಡದೇ ಕಚೇರಿ ಸ್ಥಳಾಂತರಿಸೋದು ತಪ್ಪು. ನಮ್ಮಲ್ಲಿ ಇನ್ನು ಕೆಲಸಗಳು ನಡೆಯುತ್ತಿದ್ದು, ಹಾಗಾಗಿ ಕಚೇರಿ ಸ್ಥಳಾಂತರಿಸಲು ಬಿಡಲ್ಲ. ಈ ಬಗ್ಗೆ ಸ್ಥಳೀಯ ಶಾಸಕರ ಅಭಿಪ್ರಾಯ ಯಾಕೆ ಕೇಳಿಲ್ಲ ಅಂತಾ ಸಿಎಂ ಹಾಗೂ ಮಂತ್ರಿಗಳಿಗೆ ಪ್ರಶ್ನೆ ಮಾಡುತ್ತೇನೆ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv