Tag: ಕೆವಿಎನ್‌ ಸಂಸ್ಥೆ

  • ವಿಜಯ್ ದಳಪತಿ ಸಿನಿಮಾದಲ್ಲಿ ಬಾಬಿ ಡಿಯೋಲ್- ಗುಡ್ ನ್ಯೂಸ್ ಕೊಟ್ಟ ‘ಕೆವಿಎನ್’ ಸಂಸ್ಥೆ

    ವಿಜಯ್ ದಳಪತಿ ಸಿನಿಮಾದಲ್ಲಿ ಬಾಬಿ ಡಿಯೋಲ್- ಗುಡ್ ನ್ಯೂಸ್ ಕೊಟ್ಟ ‘ಕೆವಿಎನ್’ ಸಂಸ್ಥೆ

    ಮಿಳಿನ ಸ್ಟಾರ್ ನಟ ವಿಜಯ್ ದಳಪತಿ (Vijay Thalapathy) ಕೊನೆಯ ಸಿನಿಮಾ ಕುರಿತು ಇದೀಗ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾದಲ್ಲಿ ವಿಜಯ್ ಕಡೆಯದಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದಲ್ಲಿ ಬಾಬಿ ಡಿಯೋಲ್ ವಿಲನ್ ಆಗಿ ಅಬ್ಬರಿಸಲಿದ್ದಾರೆ. ಈ ವಿಚಾರವನ್ನು ಚಿತ್ರತಂಡವೇ ಅಧಿಕೃತವಾಗಿ ತಿಳಿಸಿದೆ. ಇದನ್ನೂ ಓದಿ:Kantara Chapter 1: ರಿಷಬ್ ಶೆಟ್ಟಿ ತಂದೆ ಪಾತ್ರದಲ್ಲಿ ಮೋಹನ್‌ಲಾಲ್?

    ವಿಜಯ್ ನಟನೆಯ 69ನೇ ಸಿನಿಮಾದಲ್ಲಿ ‘ಅನಿಮಲ್’ ಖ್ಯಾತಿಯ ನಟ ಬಾಬಿ ಡಿಯೋಲ್ (Bobby Deol) ಕಾಣಿಸಿಕೊಳ್ಳಲಿದ್ದಾರೆ. ಇದರ ಬಗ್ಗೆ ನಿರ್ಮಾಣ ಸಂಸ್ಥೆಯೇ ಗುಡ್ ನ್ಯೂಸ್ ಕೊಟ್ಟಿದೆ. ಆದರೆ ಯಾವ ಪಾತ್ರ ಮಾಡಲಿದ್ದಾರೆ ಎಂಬುದನ್ನು ರಿವೀಲ್ ಮಾಡಿಲ್ಲ. ಮೂಲಗಳ ಪ್ರಕಾರ, ಈ ಚಿತ್ರದಲ್ಲಿ ವಿಜಯ್‌ಗೆ ವಿಲನ್ ಆಗಿ ನಟಿಸಲಿದ್ದಾರೆ ಎನ್ನಲಾಗಿದೆ.

     

    View this post on Instagram

     

    A post shared by KVN Productions (@kvn.productions)

    ಅಂದಹಾಗೆ, ‘ದಳಪತಿ 69’ ಮೇಲೆ ಬಲು ನಿರೀಕ್ಷೆ ಇರೋದ್ರಿಂದ ಭರ್ತಿ 500 ಕೋಟಿಯಲ್ಲಿ ಚಿತ್ರ ತಯಾರಾಗುತ್ತಿದೆ. ತಮಿಳು ಚಿತ್ರಪ್ರೇಮಿಗಳ ಪಾಲಿನ ಮಾಸ್ ಮ್ಯಾನ್ ಇನ್ಮುಂದೆ ಬಣ್ಣ ಹಚ್ಚೋದಿಲ್ಲ ಅನ್ನುವ ಕೊರಗಿನ ಮಧ್ಯೆ ದಳಪತಿ 69 ಮೇಲೆ ನಿರೀಕ್ಷೆಯಂತೂ ದುಪ್ಪಟ್ಟಾಗಿದೆ. ಈ ನಡುವೆ ಇನ್ನೊಂದು ವಿಷಯ ಭಾರೀ ಆಶ್ಚರ್ಯ ಹುಟ್ಟಿಸಿದೆ. ಅದುವೇ ವಿಜಯ್ ಸಂಭಾವನೆ.

    ಇನ್ನೂ ದಳಪತಿ 69 ಚಿತ್ರಕ್ಕೆ ವಿಜಯ್ ಭರ್ತಿ 275 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾಂತೆ. ಚಿತ್ರದ ಬಜೆಟ್‌ನ ಅರ್ಧ ಭಾಗದಷ್ಟು ವಿಜಯ್ ಸಂಭಾವನೆ ಇರುತ್ತದೆ ಎಂದು ಸುದ್ದಿಯಾಗಿದೆ. ಹಿಂದಿನ ದಿ ಗೋಟ್ ಚಿತ್ರಕ್ಕೆ ವಿಜಯ್ ಬರೋಬ್ಬರಿ 200 ಕೋಟಿ ಸಂಭಾವನೆ ಪಡೆದಿದ್ದರು ಎಂಬ ವದಂತಿ ಇದೆ. ಈ ಬೆನ್ನಲ್ಲೇ ಅದಕ್ಕಿಂತಲೂ ಹೆಚ್ಚು 275 ಕೋಟಿ ಹಣ ಸಂಭಾವನೆ ರೂಪದಲ್ಲಿ ವಿಜಯ್ ಪಡೆಯಲಿದ್ದಾರೆ ಎಂಬುದೇ ಕುತೂಹಲದ ಸಂಗತಿ.

    2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ವಿಜಯ್ ಅಣಿಯಾಗುತ್ತಿದ್ದಾರೆ. ಸ್ವಂತ ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಎಂಟ್ರಿಯಾಗಿದ್ದಾರೆ. ಲೋಗೋ ಮತ್ತಿತರ ಕೆಲಸಗಳನ್ನ ಮಾಡಿಕೊಂಡು ಬಂದಿದ್ದಾರೆ. ಈ ನಡುವೆ ವರ್ಷ ಕಳೆಯುವದರೊಳಗೆ ವಿಜಯ್ ಒಪ್ಪಿಕೊಂಡ 69ನೇ ಚಿತ್ರ ಮುಗಿಸಿ ಕೊಡಬೇಕಾಗಿದೆ.

  • ಧ್ರುವ ಸರ್ಜಾ ಜೊತೆ ರೊಮ್ಯಾನ್ಸ್ ಮಾಡಲಿರುವ ನಾಯಕಿ ಇವರೇ

    ಧ್ರುವ ಸರ್ಜಾ ಜೊತೆ ರೊಮ್ಯಾನ್ಸ್ ಮಾಡಲಿರುವ ನಾಯಕಿ ಇವರೇ

    ಡೈರೆಕ್ಟರ್ ಪ್ರೇಮ್ (Director Prem) ನಿರ್ದೇಶನದ ಸಿನಿಮಾ `ಕೆಡಿ’ (KD) ಶುರುವಾದ ದಿನದಿಂದ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇದೆ. ಧ್ರುವಾಗೆ ಸಂಜಯ್ ದತ್ ವಿಲನ್ ಆಗಿ ಅಬ್ಬರಿಸಿದ್ದರೆ, ಆ್ಯಕ್ಷನ್ ಪ್ರಿನ್ಸ್ ಜೊತೆ ರೊಮ್ಯಾನ್ಸ್ ಮಾಡಲಿರುವ ನಾಯಕಿ ಬಗ್ಗೆ ಸಖತ್ ಚರ್ಚೆ ನಡೆಯುತ್ತಿದೆ.‌ ಇದನ್ನೂ ಓದಿ: 800 ವರ್ಷದ ಹಳೆಯ ಮನೆಯಲ್ಲಿ ಶುಭಾ ಪೂಂಜಾ ದಿಢೀರ್ ಮದುವೆ

    ಕೆವಿಎನ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ KD ಸಿನಿಮಾ ಭರದಿಂದ ಶೂಟಿಂಗ್ ನಡೆಯುತ್ತಿದೆ. 1970ರ ದಶಕದ ಕಥೆಯನ್ನ ತೆರೆಯ ಮೇಲೆ ತೋರಿಸಲು ನಿರ್ದೇಶಕ ಪ್ರೇಮ್ ಹೊರಟಿದ್ದಾರೆ. ಧ್ರುವ ಮುಂದೆ ಖಳನಾಯಕನಾಗಿ ಸಂಜಯ್ ದತ್ ಅಬ್ಬರಿಸಲಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಬಂದು `ಕೆಜಿಎಫ್ 2′ ನಟ ತನ್ನ ಭಾಗದ ಶೂಟಿಂಗ್ ಮುಗಿಸಿ ಕೊಟ್ಟಿದ್ದಾರೆ.

    ಇನ್ನೂ 2ನೇ ಭಾಗದ ಚಿತ್ರೀಕರಣವನ್ನು 12 ಎಕರೆ ಜಾಗದಲ್ಲಿ ಶೂಟ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಅದಕ್ಕಾಗಿ ಅದ್ದೂರಿಯಾಗಿ ಸೆಟ್ ಕೂಡ ನಿರ್ಮಿಸಲಾಗಿದೆ. 70ರ ದಶಕದಲ್ಲಿ ಬೆಂಗಳೂರು ಹೇಗಿತ್ತು ಎಂಬುದನ್ನ ತಮ್ಮ ಸಿನಿಮಾ ಮೂಲಕ ತೋರಿಸಲು ರೆಡಿಯಾಗಿದ್ದಾರೆ. ಇನ್ನೂ ಕೆಡಿ ಧ್ರುವಾಗೆ ನಾಯಕಿ ಯಾರು ಎಂಬುದರ ಬಗ್ಗೆ ಇದುವರೆಗೂ ರಿವೀಲ್ ಆಗಿಲ್ಲ.

    ಆದರೆ ಧ್ರುವ ಸರ್ಜಾಗೆ ಕೊಡಗಿನ ಬ್ಯೂಟಿ ರೀಷ್ಮಾ (Reeshma Nanaih) ಮತ್ತು ಭರಾಟೆ ನಟಿ ಶ್ರೀಲೀಲಾ (Sreeleela) ಇಬ್ಬರ ಹೆಸರು ಕೇಳಿ ಬರುತ್ತಿದೆ. ಚಿತ್ರಕ್ಕೆ ನಾಯಕಿ ಯಾರಾಗ್ತಾರೆ ಎಂಬುದರ ಬಗ್ಗೆ ಕುತೂಹಲ ಮೂಡಿಸಿದೆ. ಸಿನಿಮಾ ತಂಡದಿಂದ ಅಧಿಕೃತ ಅಪ್‌ಡೇಟ್ ಸಿಗುವವರೆಗೂ ಕಾದುನೋಡಬೇಕಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜನವರಿ 8ಕ್ಕೆ ಯಶ್ ಅಭಿಮಾನಿಗಳಿಗೆ ಕಾದಿದೆ ಗುಡ್ ನ್ಯೂಸ್

    ಜನವರಿ 8ಕ್ಕೆ ಯಶ್ ಅಭಿಮಾನಿಗಳಿಗೆ ಕಾದಿದೆ ಗುಡ್ ನ್ಯೂಸ್

    ಚಂದನವನದ `ಮಫ್ತಿ’ ನಿರ್ದೇಶಕ ನರ್ತನ್ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಂತಸದ ನಡುವೆ ನರ್ತನ್ ಮತ್ತು ಯಶ್ ಕಾಂಬಿನೇಷನ್ ಸಿನಿಮಾ ಕೂಡ ಸಖತ್ ಸದ್ದು ಮಾಡ್ತಿದೆ. `ಕೆಜಿಎಫ್ 2′ (Kgf 2) ಸಕ್ಸಸ್ ನಂತರ ಯಶ್ 19 ಸಿನಿಮಾ, ನರ್ತನ್ ಜೊತೆ ಬರಲಿದೆ ಎಂದು ಸಖತ್ ಸುದ್ದಿಯಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

    ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ನ್ಯಾಷನಲ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲದಲ್ಲಿದೆ. `ಕೆಜಿಎಫ್ 2′ ಸೂಪರ್ ಸಕ್ಸಸ್ ನಂತರ ಯಶ್ 19ನೇ (Yash 19) ಸಿನಿಮಾದ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಲೇ ಇವೆ. ಆದರೆ, ಕೆವಿಎನ್ ಪ್ರೊಡಕ್ಷನ್ (KVN) ಹೌಸ್ ಯಶ್ ಮುಂದಿನ ಸಿನಿಮಾವನ್ನು ನಿರ್ಮಾಣ ಮಾಡಲಿದೆ ಎಂಬ ಸುದ್ದಿ ಬಹುದಿನಗಳಿಂದ ಹರಿದಾಡುತ್ತಿದೆ. ಇದರ ಜೊತೆಗೆ ನರ್ತನ್ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತು ಕೂಡ ಇದೆ. ಇದಕ್ಕೀಗ ಮತ್ತಷ್ಟು ಪುಷ್ಠಿ ಸಿಕ್ಕಿದೆ.

     

    View this post on Instagram

     

    A post shared by KVN Productions (@kvn.productions)

    ಸ್ಯಾಂಡಲ್‌ವುಡ್‌ನ (Sandalwood) ಖ್ಯಾತ ನಿರ್ದೇಶಕ ನರ್ತನ್ (Narthan) ಅವರ ಹುಟ್ಟುಹಬ್ಬ. ಇವರ ಜನ್ಮದಿನಕ್ಕೆ ಕೆವಿಎನ್ ಪ್ರೊಡಕ್ಷನ್ ಹೌಸ್ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ನರ್ತನ್‌ಗೆ ಕೆವಿನ್ ವಿಶ್ ಮಾಡಿದೆ. ಇದರಲ್ಲಿ ನಮ್ಮ ಡೈರೆಕ್ಟರ್ ಎಂದು ಬರೆದಿರುವುದು ಕುತೂಹಲ ಕೆರಳಿಸಿದೆ. ಈ ಮೂಲಕ ಯಶ್ 19 ಬಗ್ಗೆ ಚಿಕ್ಕ ಸುಳಿವು ನೀಡಿರುವ ಕೆವಿಎನ್ ಜನವರಿ 8ಕ್ಕೆ ಯಶ್ ಹುಟ್ಟುಹಬ್ಬದ ದಿನ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ದೀಪಿಕಾ ದಾಸ್ ಆಸೆಯಂತೆ ಬಿಗ್ ಬಾಸ್ ಮನೆಗೆ ವಾಸುಕಿ ವೈಭವ್ ಎಂಟ್ರಿ

     

    View this post on Instagram

     

    A post shared by Yash (@thenameisyash)

    `ಕೆಜಿಎಫ್ 1′ ಮತ್ತು `ಕೆಜಿಎಫ್ 2′ ಸೂಪರ್ ಸಕ್ಸಸ್ ನಂತರ ಯಶ್ ಕೂಡ ತಮ್ಮ ಮುಂದಿನ ಚಿತ್ರ ಆಯ್ಕೆಯಲ್ಲಿ ಸೆಲೆಕ್ಟೀವ್ ಆಗಿದ್ದಾರೆ. ಸಿನಿಮಾ ಬರೋದು ತಡವಾದರೂ ಪರ್ವಾಗಿಲ್ಲ. ಒಳ್ಳೆಯ ಸಿನಿಮಾ ಅಭಿಮಾನಿಗಳಿಗೆ ಕೊಡಬೇಕು ಎಂಬುದು ಯಶ್ ಅವರ ಉದ್ದೇಶವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರೇಮ್-ಧ್ರುವ ಹೊಸ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದಾರೆ ತೌಫಿಕ್ ಖುರೇಷಿ

    ಪ್ರೇಮ್-ಧ್ರುವ ಹೊಸ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದಾರೆ ತೌಫಿಕ್ ಖುರೇಷಿ

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇದೀಗ ಪ್ರೇಮ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸಲು ರೆಡಿಯಾಗಿದ್ದಾರೆ. ಈ ಚಿತ್ರಕ್ಕಾಗಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ಹೀಗಿರುವಾಗ ಈ ಚಿತ್ರದ ಬಗ್ಗೆ ಹೊಸ ಅಪ್‌ಡೇಟ್‌ವೊಂದು ಹೊರ ಬಿದ್ದಿದೆ. ಪ್ರೇಮ್ ನಿರ್ದೇಶನದ ಹೊಸ ಚಿತ್ರಕ್ಕೆ ಬಾಲಿವುಡ್‌ನ ಸಂಗೀತ ನಿರ್ದೇಶಕ ತೌಫಿಕ್ ಖುರೇಷಿ ಸಾಥ್ ನೀಡಿದ್ದಾರೆ.

    ಭಿನ್ನ ಕಥೆಯ ಮೂಲಕ ಪ್ರೇಕ್ಷಕರನ್ನ ರಂಜಿಸಲು ಪ್ರೇಮ್ ಮತ್ತು ಧ್ರುವ ಕಾಂಬಿನೇಷನ್ ಹೊಸ ಚಿತ್ರ ಮೂಡಿ ಬರುತ್ತಿದೆ. ಚಿತ್ರದ ಕಥೆಯಿಂದ ಹಿಡಿದು ಮ್ಯೂಸಿಕ್‌ವರೆಗೂ ಒತ್ತು ನೀಡುವ ಸ್ಟಾರ್ ನಿರ್ದೇಶಕ ಪ್ರೇಮ್, ತಮ್ಮ ಹೊಸ ಪ್ರಾಜೆಕ್ಟ್‌ಗೆ ಝಾಕಿರ್ ಹುಸೇನ್ ಸಹೋದರ ತೌಫಿಕ್ ಈ ಚಿತ್ರತಂಡವನ್ನ ಸೇರಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ಬರಲು ನಂದಿನಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ?

    ಚಿತ್ರದ ಮೊದಲ ಟೀಸರ್ ರಿಲೀಸ್ ತೆರೆಮರೆಯಲ್ಲಿ ಭರದಿಂದ ತಯಾರಿ ನಡೆಯುತ್ತಿದೆ. ಕ್ಯಾಲಿಫೋರ್ನಿಯ ಮತ್ತು ಬಾಂಬೆಯಲ್ಲಿ ಈ ಚಿತ್ರಕ್ಕಾ ಮ್ಯೂಸಿಕ್ ಕಂಪೋಸ್ ಮಾಡಲಾಗುತ್ತಿದೆ. ಮುಂದಿನ ಚಿತ್ರದ ಮೊದಲ ಟೀಸರ್ ಬಗ್ಗೆ ಅಪ್‌ಡೇಟ್ ಸಿಗಲಿದೆ. ಇನ್ನು ತೌಫಿಕ್ ಖುರೇಷಿ ಜತೆ ಇರುವ‌ ಫೋಟೋ ನಿರ್ದೇಶಕ ಪ್ರೇಮ್ ಮತ್ತು ಅರ್ಜುನ್ ಜನ್ಯ, ಸುಪ್ರಿತ್ ಸಖತ್ ವೈರಲ್ ಅಗುತ್ತದೆ.

    ಕೆವಿಎನ್ ಸಂಸ್ಥೆಯ ನರ‍್ಮಾಣದ ಈ ಚಿತ್ರದಲ್ಲಿ ಪ್ರೀತಿ, ಆ್ಯಕ್ಷನ್, ಡೈಲಾಗ್, ಮ್ಯೂಸಿಕ್ ಇವೆಲ್ಲಾವನ್ನ ತೆರೆಯ ಮೇಲೆ ನೋಡಬಹುದಾಗಿದೆ. ಈ ಚಿತ್ರದ ಮತ್ತಷ್ಟು ಅಪ್‌ಡೇಟ್‌ಗಾಗಿ, ಚಿತ್ರತಂಡ ಅಧಿಕೃತವಾಗಿ ಹೇಳುವವರೆಗೂ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]