Tag: ಕೆವಿಎನ್ ಪ್ರೊಡಕ್ಷನ್ಸ್

  • ‘ಮಂಜುಮ್ಮಲ್ ಬಾಯ್ಸ್’ ನಿರ್ದೇಶಿಸಿದ್ದ ಚಿದಂಬರಂ ಜೊತೆ KVN ಪ್ರೊಡಕ್ಷನ್ಸ್ ಹೊಸ ಚಿತ್ರ

    ‘ಮಂಜುಮ್ಮಲ್ ಬಾಯ್ಸ್’ ನಿರ್ದೇಶಿಸಿದ್ದ ಚಿದಂಬರಂ ಜೊತೆ KVN ಪ್ರೊಡಕ್ಷನ್ಸ್ ಹೊಸ ಚಿತ್ರ

    ಕೆವಿಎನ್ ಪ್ರೊಡಕ್ಷನ್ಸ್ (KVN Productions) ಮತ್ತು ತೆಸ್ಪಿಯನ್ ಫಿಲ್ಮ್ಸ್ಒಂದು ಹೊಸ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ. ಈ ಮಹತ್ವಾಕಾಂಕ್ಷೆಯ ಚಿತ್ರವನ್ನ  ಹೊಸ ಶೈಲಿಯ ಚಿತ್ರಗಳಿಂದ ಇಂದಿನ ಯುವ ಸಮುದಾಯದ ಮನ ಗೆದ್ದಿರುವ ನಿರ್ದೇಶಕ ಚಿದಂಬರಂ ಮತ್ತು ಜೀತು ಮಾಧವನ್ ಜೊತೆಯಾಗಿ ಹೊಸ ಸಿನಿಮಾಗಾಗಿ ಸಾಥ್‌ ನೀಡಿದ್ದಾರೆ.

    ತೆಸ್ಪಿಯನ್ ಫಿಲ್ಮ್ಸ್ ಸಂಸ್ಥೆಯ ರೂವಾರಿ ಶ್ರೀಮತಿ ಶೈಲಜಾ ದೇಸಾಯಿ ಜೊತೆಗೆ ಕೈ ಜೋಡಿಸಿರುವ  KVN ಪ್ರೊಡಕ್ಷನ್ಸ್‌ನ ರೂವಾರಿ ವೆಂಕಟ್ ಕೆ. ನಾರಾಯಣ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ‘ಮಂಜುಮ್ಮಲ್ ಬಾಯ್ಸ್’ (Manjummel Boys) ನಿರ್ದೇಶಿಸಿದ್ದ ಚಿದಂಬರಂ ಜೊತೆಗೆ, ಇತ್ತೀಚೆಗೆ ಎಲ್ಲರ‌ ಮನಗೆದ್ದಿದ್ದ ‘ಆವೇಶಮ್’ ಖ್ಯಾತಿಯ ನಿರ್ದೇಶಕ ಜಿತು‌ ಮಾಧವನ್ ಈ ಹೊಸ ಯೋಜನೆಗೆ ಜೊತೆಯಾಗಲಿದ್ದಾರೆ.

    ಅಷ್ಟೇ ಅಲ್ಲ ಈ‌ ಚಿತ್ರದಲ್ಲಿ ನುರಿತ ತಂತ್ರಜ್ಞರ ದೊಡ್ಡ‌ ಪಡೆಯೇ ಕೆಲಸ ಮಾಡಲಿದ್ದಾರೆ. ಛಾಯಾಗ್ರಹಣಕ್ಕೆ ಶೈಜು ಖಾಲೆದ್, ಸಂಗೀತ ನೀಡಲು ಸುಶಿನ್ ಶ್ಯಾಮ್ ಆಯ್ಕೆಯಾದರೆ ಎಡಿಟಿಂಗ್ ಜವಾಬ್ದಾರಿ ವಿವೇಕ್ ಹರ್ಷನ್ ಹೆಗಲಿಗೇರಿದೆ.

    KVN ಪ್ರೊಡಕ್ಷನ್ಸ್ ಸಂಸ್ಥಾಪಕ ವೆಂಕಟ ಕೆ ನಾರಾಯಣ ಅವರು ಮಾತನಾಡಿ, ನಾವು ನಮ್ಮ ಸಂಸ್ಥೆಯಿಂದ  ಭಿನ್ನ ಬಗೆಯ, ಸದಭಿರುಚಿಯ ಮನರಂಜನಾತ್ಮಕ ಸಿನಿಮಾಗಳನ್ನ ಕೊಡೋ ದೃಷ್ಟಿಯಿಂದ ಕೆಲಸ ಮಾಡುತ್ತೇವೆ. ಅದರಂತೆ ಇಂಥ ಹೊಸ ಬಗೆಯ ಚಿಂತನೆಯುಳ್ಳ, ನಿರ್ದೇಶಕರಿಂದ ಜನರ ಮನರಂಜಿಸುವ ಕೆಲಸಕ್ಕೆ ಕೈ ಹಾಕಿರೋದೆ ಒಂದು ಮೈನವಿರೇಳಿಸೊ ಪ್ರಯತ್ನ. ಇಂತಹ ತಂಡದ ಜೊತೆಗೆ ಸಿನಿಮಾ ಮಾಡೋ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಡುತ್ತಿರುವ ನಮಗೆ ಹೆಮ್ಮೆ ತಂದಿದೆ.

    ಒಂದು ಕಥೆಯನ್ನ ತೆರೆ ಮೇಲೆ ತರೊ ಪ್ರಕ್ರಿಯೆನೇ ರೋಮಾಂಚಕ. ನನ್ನಂತೆಯೇ ಒಳ್ಳೆಯ ಕಥೆಗೆ, ಸ್ಕ್ರಿಪ್ಟ್‌ಗೆ ಒತ್ತು ಕೊಡುವ ತಂಡದ ಜೊತೆ ಕೆಲಸ ಮಾಡ್ತಿರೋದು‌ ನಿಜಕ್ಕೂ‌ ಹೆಮ್ಮೆಯ ವಿಷಯ. ಇದು ನನ್ನ ಹೃದಯಕ್ಕೆ ಹತ್ತಿರವಾದ ಕಥೆಯಾಗಿದೆ. ಸಿನಿಮಾ ಕೃಷಿಯ ಬಗ್ಗೆ ಇಷ್ಟೊಂದು ಗಾಢ ಪ್ರೀತಿಯುಳ್ಳ ತಂಡದ ಜೊತೆ‌ ಕೆಲಸ ಮಾಡೋದೆ ಒಂದು ದೊಡ್ಡ ಖುಷಿ ಅಂತ ಅಭಿಪ್ರಾಯಪಟ್ಟರು.

    KVN ಪ್ರೊಡಕ್ಷನ್ಸ್ ಪಾಲಿಗೆ 2025 ಸುವರ್ಣ ಸಮಯವಾಗಲಿದೆ. ಈಗಾಗಲೇ ಯಶ್ ಜೊತೆ ಟಾಕ್ಸಿಕ್, ತಮಿಳಿನ ದಳಪತಿ ಜೊತೆ ‘ತಳಪತಿ 69’ ಸಿನಿಮಾ, ಹಿಂದಿಯಲ್ಲಿ ಪ್ರಿಯದರ್ಶನ್ ಜೊತೆ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ, ಹಾಗೆಯೇ ಧ್ರುವ ಸರ್ಜಾ‌ ಜೊತೆ ‘ಕೆಡಿ’ ಸಿನಿಮಾವಿದೆ. ಇದೀಗ ಮಲಯಾಳಂ‌ ಚಿತ್ರರಂಗಕ್ಕೆ ಹೀಗೆ ನುರಿತರೊಂದಿಗೆ ಕಾಲಿಡ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ದೊಡ್ಡ ಯೋಜನೆಗಳನ್ನ ಹಾಕಿಕೊಂಡಿರೋ ಸೂಚನೆ ಕೆವಿಎನ್ ಸಂಸ್ಥೆ ಕೊಡುತ್ತಿದೆ.

  • Yash 19 ಸಿನಿಮಾ KVN ನಿರ್ಮಾಣ ಮಾಡ್ತಿದ್ಯಾ? ಇಲ್ಲಿದೆ ಸೀಕ್ರೆಟ್

    Yash 19 ಸಿನಿಮಾ KVN ನಿರ್ಮಾಣ ಮಾಡ್ತಿದ್ಯಾ? ಇಲ್ಲಿದೆ ಸೀಕ್ರೆಟ್

    ಶ್ 19 ಯಾವಾಗ? ಇನ್ನೇನು ಎರಡು ಮೂರು ದಿನದಲ್ಲಿ ಘೋಷಣೆಯಾಗಲಿದೆ ಬಿಡ್ರಿ. ಹೀಗಂತ ಎಲ್ಲರೂ ಹೇಳುತ್ತಿದ್ದಾರೆ. ಕಾರಣ ಯಶ್ 19 (Yash 19) ನಿರ್ಮಿಸುತ್ತಿರುವ ಕೆವಿಎನ್ (Kvn Productions) ಬಿಗ್ ಅನೌನ್ಮೆಂಟ್ ಮಾಡುವುದಾಗಿ ಕಿಡಿ ಹೊತ್ತಿಸಿದೆ. ಹಾಗಿದ್ದರೆ ನಿಜವಾಗಿ ಯಶ್ ಹೊಸ ಸಿನಿಮಾ ಅನೌನ್ಸ್ ಆಗಲಿದೆಯಾ? ಅಥವಾ ಕೆವಿಎನ್ ನಿರ್ಮಾಣದ ಇನ್ನೊಂದು ಚಿತ್ರದ ವಿಷಯ ಹೊರ ಬೀಳಲಿದೆಯಾ? ರಾಕಿ ನಯಾ ಸಿನಿಮಾ ಖಬರ್ ಹಾಗೂ ಈಗ ಗೊತ್ತಾಗಲಿರುವ ಸುದ್ದಿ. ಎರಡರ ಎಕ್ಸ್‌ಕ್ಲೂಸಿವ್ ಸಮಾಚಾರ ಇಲ್ಲಿದೆ.

    ಒಂದೂವರೆ ವರ್ಷ ಯಶ್ ಇನ್ನೂ ಮನೆ ಬಾಗಿಲು ತೆಗೆದಿಲ್ಲ. ಅಲ್ಲಿಂದ ಹೊರ ಬಂದು ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ನಿಮಗಾಗಿ ಒಳ್ಳೆಯ ಸಿನಿಮಾ ಕೊಡಲು ಇಷ್ಟೊಂದು ತಯಾರಿ ಮಾಡುತ್ತಿದ್ದೇನೆ. ಎಲ್ಲವನ್ನೂ ಸದ್ಯದಲ್ಲೇ ಹೇಳುತ್ತೇನೆ. ಹೀಗಂತ ಸಮಾಧಾನ ಮಾಡುತ್ತಾ ಬಂದಿದ್ದಾರೆ. ಆದರೆ ಈಗ ನೋಡಿದರೆ ಯಶ್ 19 ಸಿನಿಮಾ ನಿರ್ಮಿಸುತ್ತಿರುವ ಕೆವಿಎನ್ ಸಂಸ್ಥೆ ಸೋಶಿಯಲ್ ಮೀಡಿಯಾದಲ್ಲಿ ಸದ್ಯದಲ್ಲೇ ಬಿಗ್ ಅನೌನ್ಸ್ಮೆಂಟ್ ಮಾಡಲಿದ್ದೇವೆ ಎಂದಿದೆ. ಅಲ್ಲಿಗೆ ಯಶ್ ಭಕ್ತಗಣ(Fans) ಮತ್ತೆ ಕಿವಿ ಅಗಲಿಸಿ ಕುಳಿತಿದ್ದಾರೆ. ಇದೇನಾ ಯಶ್ 19 ಸಿನಿಮಾ? ಹಾಗಿದ್ದರೆ ಯಾವಾಗ ಅನಾವರಣ? ಇದನ್ನೂ ಓದಿ:ವಿಡಿಯೋ ಲೀಕ್ ಬಗ್ಗೆ ಭಯಾನಕ ಸತ್ಯ ಬಿಚ್ಚಿಟ್ಟ ಕೃತಿ ಕರಬಂಧ

    ಕೆವಿಎನ್ ಕೆಲವು ದೊಡ್ಡ ದೊಡ್ಡ ಸಿನಿಮಾ ಘೋಷಣೆ ಮಾಡುತ್ತಿದೆ. ಈಗಾಗಲೇ ಪ್ರೇಮ್ ನಿರ್ದೇಶನದಲ್ಲಿ ಕೆಡಿ ಶೂಟಿಂಗ್ ಹಂತದಲ್ಲಿದೆ. ಇನ್ನು ಕೆಲವು ಸಿನಿಮಾಗಳನ್ನೂ ಇದು ನಿರ್ಮಿಸಲು ಸಜ್ಜಾಗಿದೆ. ಇದೆಲ್ಲದರ ನಡುವೆ ಯಶ್ ಸಿನಿಮಾಕ್ಕೂ ಕಾಸು ಸುರಿಯಲಿದೆ. ಇಡೀ ವಿಶ್ವವೇ ಕಾಯುತ್ತಿರುವ ರಾಕಿ ಸಿನಿಮಾಕ್ಕೆ ಕೋಟಿಗಳನ್ನು ಪೈಸೆಗಳ ಲೆಕ್ಕದಲ್ಲಿ ಹಂಚಲಿದೆ. ಹೀಗಾಗಿಯೇ ರಾಕಿ ಸಿನಿಮಾಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ಒಂದೂವರೆ ವರ್ಷದಿಂದ ಯಶ್ ಮಾತ್ರ ಅದ್ಭುತ ತಂಡ ಕಟ್ಟಿಕೊಂಡು ಬೆವರು ಸುರಿಸುತ್ತಿದ್ದಾರೆ. ಈ ಹೊತ್ತಲ್ಲಿ ಕೆವಿಎನ್ ಅನೌನ್ಸ್ಮೆಂಟ್ ಕುತೂಹಲ ಮೂಡಿಸಿದೆ. ಆದರೆ ನೀವಂದುಕೊಂಡಂತೆ ಇದು ಯಶ್ ಸಿನಿಮಾ ಘೋಷಣೆ ಅಲ್ಲವೇ ಅಲ್ಲ.

    ಹಾಗಿದ್ದರೆ ಯಶ್ ಸಿನಿಮಾ ಯಾವಾಗ ಹೊರ ಬೀಳಲಿದೆ? ಅಂದರೆ ಇನ್ನೆಷ್ಟು ಕಾಯಬೇಕು ನಾವು? ಇದು ಭಕ್ತಗಣ ಕೇಳುತ್ತಿರುವ ಪ್ರಶ್ನೆ. ಉತ್ತರ ಇಲ್ಲಿದೆ. ಇನ್ನು ಹದಿನೈದು ಅಥವಾ ಒಂದು ತಿಂಗಳಲ್ಲಿ ಅಕ್ಷರಶಃ ಇದೇ ಕೆವಿಎನ್ ಸಂಸ್ಥೆ ಇದೇ ರೀತಿ ಯಶ್ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಅನಾವರಣ ಮಾಡಲಿದೆ. ಇನ್ನೇನು ಎಲ್ಲ ಕೆಲಸವೂ ಮುಗಿದಿದೆ. ಅದರರ್ಥ ಸುಮ್ಮನೆ ಅಲ್ಲ. ಇಡೀ ಸಿನಿಮಾ ಈಗಾಗಲೇ ಕಾಗದದ ಮೇಲೆ ಮೂಡಿದೆ. ಕತೆ, ಚಿತ್ರಕತೆ, ಸಂಭಾಷಣೆ ಒಂದು ಕಡೆ. ಹಾಗೆಯೇ ಕ್ಯಾಮೆರಾ, ಸಂಗೀತ, ಕಲಾ ನಿರ್ದೇಶನ, ಸಾಹಸ ದೃಶ್ಯ, ಲೋಕೇಶನ್ಸ್, ಕಾಸ್ಟ್ಯೂಮ್ ಡಿಸೈನಿಂಗ್ ಎಲ್ಲವೂ ತೆರೆ ಮೇಲೆ ಬರಲು ಸಜ್ಜಾಗಿವೆ. ಶೂಟಿಂಗ್ ಮಾತ್ರ ಬಾಕಿ ಅಷ್ಟೇ. ಹಾಗಿದೆ ಯಶ್ ತಯಾರಿ.

    ಇದು ನೆಕ್ಸ್ಟ್‌ ಲೆವೆಲ್ ಸಿನಿಮಾ. ಹೀಗಂತಿದೆ ಇದೀ ಯಶ್ ಬಳಗ. ಈಗಾಗಲೇ ಫಸ್ಟ್ ಲುಕ್ ಕೂಡ ಜನರ ಮುಂದೆ ಬರಲು ಸಜ್ಜಾಗಿದೆ. ಅದನ್ನು ನೋಡಿದವರು ಬೆಚ್ಚಿ ಬಿದ್ದಿದ್ದಾರೆ. ಇದೇನಿದು ಯಶ್ ಅವತಾರ? ಬರೀ ಫಸ್ಟ್‌ ಲುಕ್ ಈ ರೇಂಜ್‌ಗಿದ್ದರೆ ಇನ್ನು ಸಿನಿಮಾ ಹೇಗಿರಬಹುದು? ಇನ್ಯಾವ ಹೊಸ ಲೋಕಕ್ಕೆ ನಮ್ಮನ್ನು ಕರೆದುಕೊಂಡು ಹೋಗಬಹುದು? ಇಡೀ ಜಗತ್ತೇ ನಮ್ಮ ಕನ್ನಡ ನಾಡನ್ನು ಬರೀ ಮೆರೆಸುವುದಲ್ಲ. ತಲೆ ಮೇಲಿಟ್ಟುಕೊಂಡು ಪೂಜೆ ಮಾಡುತ್ತದೆ. ಇದು ಯಶ್ 19 ಸಿನಿಮಾದ ಅಸಲಿ ಸಮಾಚಾರ. ಇನ್ನೇನು ಕೆಲವೇ ಕೆಲವು ದಿನ. ಖುದ್ದು ಯಶ್ ನಿಮ್ಮ ಮುಂದೆ ಹಾಜರಾಗಿ ಎಲ್ಲವನ್ನೂ ಹಂಚಿಕೊಳ್ಳಲಿದ್ದಾರೆ.

    ಯಶ್ 19 ನಿರ್ದೇಶಕರು ಯಾರು? ಪ್ರಶ್ನೆಗೆ ಇಲ್ಲೇ ಈ ಹಿಂದೆ ಉತ್ತರ ನೀಡಿದ್ದೇವೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್. ಇವರೇ ಸಕಲವನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ಕಳೆದ ಎಂಟು ತಿಂಗಳಿಂದ ಬೆಂಗಳೂರಿನ ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ಬೀಡುಬಿಟ್ಟಿದ್ದಾರೆ. ಒಂದೇ ಒಂದು ಅಗುಳಿನಷ್ಟೂ ತಪ್ಪಾಗಬಾರದು. ಹಾಗೆ ಜತನದಿಂದ ಎಲ್ಲ ರೂಪಿಸಿದ್ದಾರೆ. ಮೊದಲ ಬಾರಿ ಕನ್ನಡಕ್ಕೆ ಬಂದಿರುವ ಗೀತು. ಮೊದಲ ಬಾರಿ ಯಶ್‌ರನ್ನು ನಿರ್ದೇಶಿಸುತ್ತಿರುವ ಗೀತು. ಅದು ಹೇಗೆ ಎಲ್ಲ ನಿಭಾಯಿಸುತ್ತಾರೊ? ಅದಕ್ಕಾಗಿ ನೀವು ಇನ್ನು ಒಂದೂವರೆ ವರ್ಷ ಕಾಯಲೇಬೇಕು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • KVN ಪ್ರೊಡಕ್ಷನ್ಸ್ ತೆಕ್ಕೆಗೆ ರಾಜಮೌಳಿಯ ‘RRR’ ಕರ್ನಾಟಕ ವಿತರಣೆ ಹಕ್ಕು

    KVN ಪ್ರೊಡಕ್ಷನ್ಸ್ ತೆಕ್ಕೆಗೆ ರಾಜಮೌಳಿಯ ‘RRR’ ಕರ್ನಾಟಕ ವಿತರಣೆ ಹಕ್ಕು

    ಭಾರತೀಯ ಚಿತ್ರರಂಗ ಕಂಡ ಯಶಸ್ವಿ ಹಾಗೂ ಜನಪ್ರಿಯ ನಿರ್ದೇಶಕರಲ್ಲಿ ಎಸ್.ಎಸ್. ರಾಜಮೌಳಿ ಕೂಡ ಒಬ್ಬರು. ದಕ್ಷಿಣ ಭಾರತ ಸಿನಿಮಾ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ತಮ್ಮ ತೆಕ್ಕೆಯಲ್ಲಿಟ್ಟುಕೊಂಡಿರುವ ರಾಜಮೌಳಿ ಬಾಹುಬಲಿ ಸಿನಿಮಾ ಮೂಲಕ ಪ್ರಖ್ಯಾತಿಗಳಿಸಿಕೊಂಡಿದ್ದಾರೆ. ಬಾಹುಬಲಿ ನಂತರ ಯಾರ ಜೊತೆ ಸಿನಿಮಾ ಮಾಡ್ತಾರೆ ಎನ್ನುವಾಗಲೇ ದಿಗ್ಗಜ ನಟರನ್ನು ಒಂದೆಡೆ ಸೇರಿಸಿ ‘RRR’ ಸಿನಿಮಾ ಮೂಲಕ ಮತ್ತೊಮ್ಮೆ ಘರ್ಜಿಸಲು ಶುರು ಮಾಡಿದವರು ರಾಜಮೌಳಿ.

    RRR ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷ್ಯ. ಜನವರಿ 7ಕ್ಕೆ ಗ್ರ್ಯಾಂಡ್ ರಿಲೀಸ್ ಆಗಲು ಸಜ್ಜಾಗಿರುವ ಈ ಚಿತ್ರತಂಡದಿಂದ ಸಖತ್ ಸುದ್ದಿಯೊಂದು ಹೊರಬಿದ್ದಿದೆ. ಪಂಚ ಭಾಷೆಯಲ್ಲಿ ತೆರೆ ಮೇಲೆ ಅಬ್ಬರಿಸಲಿರುವ ಈ ಚಿತ್ರದ ಕರ್ನಾಟಕದ ವಿತರಣೆ ಹಕ್ಕು ಕನ್ನಡದ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಕೆವಿಎನ್ ಪ್ರೊಡಕ್ಷನ್ಸ್ ಪಾಲಾಗಿದೆ. ಈ ಸಂತಸದ ಸುದ್ದಿಯನ್ನು ಕೆವಿಎನ್ ಪ್ರೊಡಕ್ಷನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದೆ.

    ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ವಿತರಣೆ ಹಾಗೂ ನಿರ್ಮಾಣದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಖ್ಯಾತಿ ಗಳಿಸಿದೆ. ಸದ್ಯ ಸಖತ್, ಬೈಟು ಲವ್ ಸೇರಿದಂತೆ ಹಲವು ಸ್ಟಾರ್ ನಟರ ಸಿನಿಮಾಗಳ ನಿರ್ಮಾಣದಲ್ಲಿ ತಲ್ಲೀನವಾಗಿದೆ. ಇದರ ಜೊತೆಗೆ ‘RRR’ ಚಿತ್ರದ ಕರ್ನಾಟಕದ ಹಂಚಿಕೆ ಕೆವಿಎನ್ ಪ್ರೊಡಕ್ಷನ್ಸ್ ಪಾಲಾಗಿರುವುದು ಹೆಮ್ಮೆಯ ಸಂಗತಿ.

    ದಕ್ಷಿಣ ಭಾರತ ಹಾಗೂ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆ ಮತ್ತು ಭರವಸೆ ಹುಟ್ಟು ಹಾಕಿರುವ ಸಿನಿಮಾ ‘RRR’. ರಾಮ್ ಚರಣ್, ಜ್ಯೂನಿಯರ್ ಎನ್​ಟಿಆರ್ ನಾಯಕ ನಟರಾಗಿ ತೆರೆ ಮೇಲೆ ಅಬ್ಬರಿಸಲಿರುವ ಈ ಸಿನಿಮಾದಲ್ಲಿ ಬಾಹುಬಲಿ ಮಾಂತ್ರಿಕ ಮತ್ತೇನು ಮ್ಯಾಜಿಕ್ ಮಾಡಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಸಿನಿಮಾ ಚಿತ್ರೀಕರಣ ಮುಗಿಸಿ ಬಿಡುಗಡೆಗೂ ಸಜ್ಜಾಗಿ ನಿಂತಿರುವ ಚಿತ್ರತಂಡ ಸಿನಿಮಾದ ಒಂದೊಂದೇ ಝಲಕ್ ಬಿಡುಗಡೆ ಮಾಡಿ ಸೋಶಿಯಲ್ ಮೀಡಿಯಾದಲ್ಲೂ ಧೂಳ್ ಎಬ್ಬಿಸುತ್ತಿದೆ. ದಿನದಿಂದ ದಿನಕ್ಕೆ ಸಖತ್ ಕ್ರೇಜ್ ಕ್ರಿಯೇಟ್ ಮಾಡ್ತಿರುವ RRR ಜನವರಿ 7 ರಂದು ತೆರೆಗೆ ಬರ್ತಿದೆ.