Tag: ಕೆಲಸ

  • ಮಧ್ಯಾಹ್ನ ನಿದ್ದೆ ಮಾಡುವ ಸೊಸೆಗೆ ಗೂಸಾ ಕೊಟ್ಟ ಅತ್ತೆ, ಮಾವ

    ಮಧ್ಯಾಹ್ನ ನಿದ್ದೆ ಮಾಡುವ ಸೊಸೆಗೆ ಗೂಸಾ ಕೊಟ್ಟ ಅತ್ತೆ, ಮಾವ

    ಗಾಂಧಿಗನರ: ಮನೆಯ ಕೆಲಸವನ್ನು ಮಾಡಿ ಸುಸ್ತಾಗಿದೆ ಎಂದು ಮಧ್ಯಾಹ್ನ ಮಲಗಿದ್ದ ಸೊಸೆಯನ್ನು ನೋಡಿದ ಅತ್ತೆ, ಮಾವ ಹೊಡೆದು ಹಲ್ಲೆ ಮಾಡಿರುವ ಘಟನೆ ಗುಜರಾತಿನ ಅಹ್ಮದಾಬಾದ್‍ನ ಶಾಹಿಬಾಗ್‍ನಲ್ಲಿ ನಡೆದಿದೆ.

    2016ರಲ್ಲಿ ಮೆಹ್ಸಾನಾದಲ್ಲಿರುವ ಕಾಡಿಯ ವ್ಯಕ್ತಿಯೊಬ್ಬನನ್ನು ಮದುವೆಯಾದಳು ಮತ್ತು ಅಂದಿನಿಂದ ತನ್ನ ಅತ್ತೆ-ಮಾವನೊಂದಿಗೆ ಒಂದೇ ಮನೆಯಲ್ಲಿಯೇ ವಾಸಿಸುತ್ತಿದ್ದಳು. ಸೊಸೆ ಮಧ್ಯಾಹ್ನ ವೇಳೆ ನಿದ್ದೆ ಜಾರಿರುವುದನ್ನು ಕಂಡು ಆಕೆಯ ಮೇಲೆ ಹಲ್ಲೇ ಮಾಡಿದ್ದಾರೆ.

    ನಾನು ಈ ಮನೆಗೆ ಬಂದಾಗಿನಿಂದಲೂ ನಾನು ಮಧ್ಯಾಹ್ನ ನಿದ್ರೆ ಮಾಡುವುದನ್ನು ಅತ್ತೆ, ಮಾವ ವಿರೋಧಿಸುತ್ತಿದ್ದರು. ನಾನು ಮುಂಜಾನೆ ಬೇಗೆ ಏಳುವುದರಿಂದ ನನಗೆ ಮಧ್ಯಾಹ್ನ ಬರುವ ನಿದ್ರೆ ತಡೆಯಲು ಸಾಧ್ಯವಾಗುವುದಿಲ್ಲ. ಅತ್ತೆ ಮತ್ತು ಮಾವ ಇಬ್ಬರೂ ಹೊಡೆಯಲು ಪ್ರಾರಂಭಿಸಿದ್ದರು. ಮೊದಲ ಬಾರಿಗೆ ತನ್ನ ಪತಿ ಹೊಡೆದಾಗ ಕಾಡಿ ಪೊಲೀಸರಿಗೆ ದೂರು ಸಲ್ಲಿಸಿದ್ದೆ. ನಂತರ ರಾಜಿ ಮಾಡಿಕೊಂಡು ಪತಿ ಜೊತೆಗೆ ವಾಸಿಸಲು ನಿರ್ಧರಿಸಿದ್ದಳು. ಆದರೆ ಅತ್ತೆ ಮಾವನ ಕಿರುಕುಳ ನಿರಂತರವಾಗಿತ್ತು. ನಾನು ಗರ್ಭಿಣಿಯಾಗಿದ್ದಾಗ ನನ್ನ ಪತಿ ಮತ್ತು ಅತ್ತೆ ಮಾವ ನನಗೆ ಸಹಾಯ ಮಾಡಲಿಲ್ಲ ಮತ್ತು ನನ್ನನ್ನು ನನ್ನ ಹೆತ್ತವರ ಮನೆಗೆ ಕಳುಹಿಸಿದರು ಎಂದು ಹಲ್ಲೆಗೊಳಗಾದ ಸೊಸೆ ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ನಾಯಕರಿಗೆ ಗತಿ ಇಲ್ಲ, ಅಭ್ಯರ್ಥಿಗಳಿಗಂತೂ ದಟ್ಟ ದಾರಿದ್ರ್ಯ- ಕಾಂಗ್ರೆಸ್ ವಿರುದ್ಧ ಹೆಚ್‍ಡಿಕೆ ಕಿಡಿ

    2017 ಸೆಪ್ಟೆಂಬರ್ 18ರಂದು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದೆ. ಗಂಡು ಮಗು ಆಗದ ಕಾರಣ ಅವರು ನನಗೆ ತುಂಬಾನೇ ಕಿರುಕುಳ ನೀಡಿದರು ಮತ್ತು ಥಳಿಸಿದರು. ವರ್ಷದ 2021 ಫೆಬ್ರವರಿ 7ರಂದು ಪತಿ ಮನೆಯಿಂದ ಹೊರ ಹಾಕಿದ್ದಾರೆ. ಸಮುದಾಯದ ನಾಯಕರ ಹಸ್ತಕ್ಷೇಪದ ಹೊರತಾಗಿಯೂ, ಪತಿ ಮನೆಗೆ ಕರೆದುಕೊಂಡು ಹೋಗಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ಗೋ ಕಳ್ಳರಿಗೆ ಸಹಾಯ ಮಾಡಿದ್ದ ಪೊಲೀಸರ ಬಗ್ಗೆಯಷ್ಟೇ ಮಾತನಾಡಿದ್ದೇನೆ: ಆರಗ ಜ್ಞಾನೇಂದ್ರ

    ಇದೀಗ ಈ ವಿಚಾರವಾಗಿ ಸೊಸೆ ಮಾಧವಪುರ ಪೊಲೀಸರನ್ನು ಸಂಪರ್ಕಿಸಿ ತನ್ನ ಪತಿ ಮತ್ತು ಅತ್ತೆ ಮಾವಂದಿರ ವಿರುದ್ಧ ಕೌಟುಂಬಿಕ ಹಿಂಸೆಯ ಬಗ್ಗೆ ದೂರು ಸಲ್ಲಿಸಿದ್ದಾಳೆ.

  • ಕ್ಲಾಸ್ ರೂಮ್‍ನಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ- ಶಾಲೆಗೆ ಚಕ್ಕರ್ ಕೂಲಿಗೆ ಹಾಜರ್

    ಕ್ಲಾಸ್ ರೂಮ್‍ನಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ- ಶಾಲೆಗೆ ಚಕ್ಕರ್ ಕೂಲಿಗೆ ಹಾಜರ್

    ಯಾದಗಿರಿ: ಶಾಲೆಗೆ ಬರದೇ ಮಕ್ಕಳು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಶಾಲೆ ಓಪನ್ ಆದ್ರೂ ಶಾಲೆ ಕಡೆ ಮುಖ ಮಾಡದ ವಿದ್ಯಾರ್ಥಿಗಳು, ಶಾಲೆಗೆ ಗೈರು ಕೂಲಿಗೆ ಹೋಗುತ್ತಿದ್ದಾರೆ. ಆರ್ಥಿಕ ಸಂಕಷ್ಟದಿಂದ ಯಾದಗಿರಿ ಜಿಲ್ಲೆಯ ವಿದ್ಯಾರ್ಥಿಗಳು ಬಾಲಕಾರ್ಮಿಕರಾಗುತ್ತಿದ್ದಾರೆ.

    ಇಡೀ ಕ್ಲಾಸ್ ರೂಮ್‍ನಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ ಆರನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ, ಏಳನೇ ತರಗತಿಯಲ್ಲಿ ನಾಲ್ಕು ಮಕ್ಕಳು ಇದ್ದರು. ಉಳಿದ ಮಕ್ಕಳು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು,ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಸಂಬರ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಿಸ್ಥಿತಿಯನ್ನು,ಹೇಳೊರಿಲ್ಲ ಕೇಳೋರಿಲ್ಲ ಎಂಬುವಂತಾಗಿದೆ. ಅಮಿತ್ ಶಾಗೆ ವಿಶ್ ಮಾಡಿ ಟ್ರೋಲ್‍ಗೊಳಗಾದ ನಟಿ ಸಾರಾ ಅಲಿಖಾನ್

    ಈ ಶಾಲೆಯಲ್ಲಿ ಸುಮಾರು 250 ಮಕ್ಕಳ ದಾಖಲಾತಿದ್ದು, 6 ನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ ಶಾಲೆಗೆ ಬಂದ್ರೆ ಇನ್ನೂಳಿದ 49 ವಿದ್ಯಾರ್ಥಿಗಳು ಕೆಲಸಕ್ಕೆ ಹೋಗುತ್ತಿದ್ದಾರೆ. 7ನೇ ತರಗತಿಯಲ್ಲಿ 60 ಮಕ್ಕಳಿದ್ದು, ಇದರಲ್ಲಿ 4 ಜನ ವಿದ್ಯಾರ್ಥಿಗಳು ಶಾಲೆಗೆ ಬರ್ತಿದ್ದಾರೆ. ಹಲವಾರು ದಿನಗಳಿಂದ ಇದೆ ಪರಿಸ್ಥಿತಿ ನಡಿತೀದ್ರೂ ಶಿಕ್ಷಕರು ಫುಲ್ ಸೈಲಂಟ್ ಆಗಿದ್ದಾರೆ.

    ಮಕ್ಕಳು ಕೂಲಿಗೆ ಹೋದ್ರು ಶಿಕ್ಷಣ ಇಲಾಖೆ ಮಾತ್ರ ಕಣ್ಮುಚ್ಚಿದೆ. ಮಕ್ಕಳ ಕೂಲಿ ಕೆಲಸವೇ ನೆಪಾವಗಿಟ್ಟುಕೊಂಡ ಟೀಚರ್ಸ್, ಕಾಟಾಚಾರಕ್ಕೆ ಶಾಲೆಗೆ ಬಂದು, ಹರಟೆ ಹೊಡೆದು ಮತ್ತೆ ಸಂಜೆ ಮನೆಯ ವಾಪಸ್ ಆಗತ್ತಾರೆ.

    ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‌ನಲ್ಲಿ ಇದು ಬಯಲಾಗಿದೆ. ಉರಿ ಬಿಸಿಲು, ಜಡಿ ಮಳೆಯನ್ನದೇ ದಿನವಿಡೀ ಮಕ್ಕಳು ಹತ್ತಿ ಹೊಲದಲ್ಲಿ ದುಡಿಯುತ್ತಿದ್ದಾರೆ. ಸ್ವತಃ ಪೋಷಕರೇ ಮಕ್ಕಳನ್ನು ಕೂಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಯಾದಗಿರಿ ಜಿಲ್ಲೆಯಾದ್ಯಂತ ಬಾಲ ಕಾರ್ಮಿಕರು ಹೆಚ್ಚುತ್ತಿದ್ದು, 150 ರೂ. ಕೂಲಿಗಾಗಿ ಈಡೀ ದಿನ ಶಾಲಾ ಮಕ್ಕಳು ದುಡಿವಂತಾಗಿದೆ.ಯಾದಗಿರಿ ಜಿಲ್ಲೆಯ ಗುರಮಿಠಕಲ್ ತಾಲೂಕಿನ ಸಂಬರ, ವಂಕಸಂಬರ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ.

    ಇನ್ನೂ ಪೋಷಕರ ಒತ್ತಾಯಿಂದ ಕೂಲಿಗೆ ತೆರಳುತ್ತಿರುವ ವಿದ್ಯಾರ್ಥಿಗಳು ಶಾಲೆಯನ್ನು ನೆನದು ಕಣ್ಣೀರು ಹಾಕುತ್ತಿದ್ದಾರೆ. ಸರ್ ಶಾಲೆಗೆ ಹೋಗು ಅನ್ನಸತ್ತಿದೆ ಆದರೆ ಬಡತನ ಅದಕ್ಕೆ ಕೂಲಿಗೆ ಬಂದೆ. ನಮ್ಮ ಸರ್, ಗೆಳೆಯರು ನೆನಪಾಗುತ್ತಾರೆ, ಕೂಲಿ ಮಾಡೋಕೆ ಕಷ್ಟ ಆಗುತ್ತಿದೆ ಎಂದು ಪಬ್ಲಿಕ್ ಟಿವಿ ಕ್ಯಾಮರಾ ಎದುರು ಮುಗ್ಧ ವಿದ್ಯಾರ್ಥಿಗಳ ಅಳಲು ತೋಡಿಕೊಂಡಿದ್ದಾರೆ.

  • ಆಫ್ರಿಕಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ಗಂಗಾವತಿ ಯುವಕ

    ಆಫ್ರಿಕಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ಗಂಗಾವತಿ ಯುವಕ

    ಕೊಪ್ಪಳ: ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಆಫ್ರಿಕಾ ಯುವಕರ ಗಲಾಟೆಯ ಮಧ್ಯೆ ಆಫ್ರಿಕಾದಲ್ಲಿ ಕನ್ನಡಿಗನೊಬ್ಬ ಸಂಕಷ್ಟಕ್ಕೆ ಒಳಗಾಗಿದ್ದಾನೆ. ಉದ್ಯೋಗ ಅರಸಿ ವಿದೇಶಕ್ಕೆ ಹೋಗಿರುವ ಕನ್ನಡಿಗ, ತಾಯ್ನಾಡಿಗೆ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದಾನೆ.

    ಕೊಪ್ಪಳ ಜಿಲ್ಲೆ ಗಂಗಾವತಿಯ ಮೆಹಬೂಬ್ ಸಾಬ್ ಆಫ್ರಿಕಾ ಖಂಡದ ಲೈಬಿರಿಯಾ ದೇಶದಲ್ಲಿ ತೊಂದರೆಗೆ ಒಳಗಾಗಿದ್ದಾರೆ. ಹೈಡ್ರಾಲಿಕ್ ಮೆಕಾನಿಕ್ ಆಗಿರುವ ಮೆಹಬೂಬ್, ಕಳೆದ 4 ತಿಂಗಳ ಹಿಂದೆಯಷ್ಟೇ ಗಂಗಾವತಿಯಿಂದ ಮುಂಬೈ ಮೂಲಕ ಲೈಬಿರಿಯಾಕ್ಕೆ ಹೋಗಿದ್ದಾರೆ. ಅಲ್ಲಿನ ಜಿವಿಎಲ್ – ಸೆನೋ ಎಂಬ ಕಂಪನಿ ಈತನಿಗೆ ಜೆಸಿಬಿ, ಲೋಡರ್, ಹಿಟಾಚಿಗಳ ಮೇಲುಸ್ತುವಾರಿ ನೋಡಿಕೊಳ್ಳುವ ಕೆಲಸಕ್ಕಾಗಿ ನೇಮಕ ಮಾಡಿಕೊಂಡಿದೆ.

    ಮೆಹಬೂಬ್ ಸಾಬ್‍ಗೆ ಕೆಲಸ ನೀಡಿರುವ ಕಂಪನಿಯೇ ವೀಸಾ ನೀಡಿ, ವಿಮಾನದ ಖರ್ಚು ನೋಡಿಕೊಂಡು ತಮ್ಮ ದೇಶಕ್ಕೆ ಕರೆಸಿಕೊಂಡಿದ್ದಾರೆ. ಕಳೆದ 4 ತಿಂಗಳಿನಿಂದ ರಜೆಯನ್ನು ನೀಡದೇ ಕೆಲಸ ಮಾಡಿಸಿಕೊಂಡಿದ್ದರೂ ವೇತನ ನೀಡಿಲ್ಲ. ಅಷ್ಟೇ ಅಲ್ಲದೇ ಗುಡ್ಡಗಾಡು ಪ್ರದೇಶದಲ್ಲಿ ಕೆಲಸಕ್ಕೆ ಕಳುಹಿಸುತ್ತಿದ್ದಾರೆ. ಸರಿಯಾಗಿ ಊಟ- ನೀರು ನೀಡುತ್ತಿಲ್ಲ ಎಂದು ಸಂಕಷ್ಟಕ್ಕೆ ಒಳಗಾಗಿರುವ ಮೆಹಬೂಬ್ ಅವರು ಆಡಿಯೋ ಮೂಲಕ ತಮ್ಮ ನೋವು ತೋಡಿಕೊಂಡಿದ್ದಾರೆ. ಮೆಹಬೂಬ್ ಸಾಮಾಜಿಕ ಜಾಲತಾಣದ ಮೂಲಕ, ಕನ್ನಡಿಗರೇ ಸ್ಥಾಪಿಸಿರುವ ಏಮ್ ಇಂಡಿಯಾ ಫೋರಂ ಸಂಸ್ಥೆಗೆ ಸಂಪರ್ಕ ಮಾಡಿದ್ದಾರೆ. ಕೂಡಲೇ ನೆರವಿಗೆ ಮುಂದಾಗಿರುವ ಸಂಸ್ಥೆ, ಈಗಾಗಲೇ ಲೈಬೀರಿಯಾ ದೇಶದ ಭಾರತೀಯ ರಾಯಭಾರಿ ಕಚೇರಿ ಸಂಪರ್ಕಿದೆ. ಲೈಬೀರಿಯಾದಲ್ಲಿನ ಭಾರತೀಯ ಅಧಿಕಾರಿ ಉಪಜೀತ್ ಸಿಂಗ್ ಸಚ್ಚದೇವ್‍ರಿಗೆ ಮಾಹಿತಿಯನ್ನು ನೀಡಿದ್ದಾರೆ.

    ಮುಖ್ಯಮಂತ್ರಿಗಳಿಗೂ ಪತ್ರ: ಆಫ್ರಿಕಾದಲ್ಲಿ ಗಂಗಾವತಿಯ ಯುವಕ ಸಿಲುಕಿಕೊಂಡಿರುವ ಕುರಿತು ಆಫ್ರಿಕಾದಲ್ಲಿ ಕನ್ನಡಿಗರು ಸ್ಥಾಪನೆ ಮಾಡಿಕೊಂಡಿರುವ ಏಮ್ ಇಂಡಿಯಾ ಸಂಸ್ಥೆಯು ಗಂಗಾವತಿಯ ಯುವಕನನ್ನು ಸಂಕಷ್ಟದಿಂದ ಪಾರು ಮಾಡಲು ಭಾರತೀಯ ರಾಯಭಾರಿ ಕಚೇರಿಗೆ ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿಯನ್ನು ಮಾಡಿಕೊಂಡು ಪತ್ರ ರವಾನೆ ಮಾಡಿದೆ. ಇದನ್ನೂ ಓದಿ:ನನಗೆ ಪರೀಕ್ಷೆ ಮಾಡಬೇಕು ಅಂತ ಯಾವುದೇ ಹಠ, ಪ್ರತಿಷ್ಠೆ ಇರಲಿಲ್ಲ: ಸುರೇಶ್ ಕುಮಾರ್

  • ಗ್ರಾಮೀಣ ಭಾಗದಲ್ಲಿ ಮಳೆಗಾಲದಲ್ಲಿ ನಿಲ್ಲದ ಗುಳೆ

    ಗ್ರಾಮೀಣ ಭಾಗದಲ್ಲಿ ಮಳೆಗಾಲದಲ್ಲಿ ನಿಲ್ಲದ ಗುಳೆ

    ರಾಯಚೂರು: ಗ್ರಾಮೀಣ ಭಾಗದ ಜನ ಕೆಲಸವಿಲ್ಲದೆ ನಗರ ಪ್ರದೇಶಗಳಕಡೆ ಗುಳೆ ಹೋಗುತ್ತಿರುವುದು ರಾಯಚೂರು ಭಾಗದಲ್ಲಿ ಹೆಚ್ಚಾಗುತ್ತಿದೆ.

    ಇದರಿಂದ ಮಳೆಗಾಲದಲ್ಲೂ ಗುಳೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಮುಂಗಾರು ಉತ್ತಮವಾಗಿದ್ದರೂ ಕೆಲಸವಿಲ್ಲ ಎಂದು ರಾಯಚೂರಿನ ವಿವಿಧ ತಾಲೂಕಿನ ಕೃಷಿ ಕೂಲಿ ಕಾರ್ಮಿಕರು ಮಳೆಗಾಲ ಚೆನ್ನಾಗಿದ್ರೂ ಮಹಾನಗರಗಳಿಗೆ ಗುಳೆ ಹೋಗುತ್ತಲೇ ಇದ್ದಾರೆ.

    ಜಮೀನುಗಳಲ್ಲಿ ನಿತ್ಯ ಕೆಲಸ ಇರುವುದಿಲ್ಲ. ವಾರದಲ್ಲಿ ಮೂರು ದಿನ ಕೆಲಸ ಸಿಕ್ಕರೆ, ನಾಲ್ಕು ದಿನ ಖಾಲಿ ಕೂಡಬೇಕು. ಹೀಗಾಗಿ ಬೆಂಗಳೂರು ಸೇರಿದಂತೆ ವಿವಿಧ ಮಹಾನಗರಗಳಿಗೆ ಗುಳೆ ಹೋಗುತ್ತಲೇ ಇದ್ದಾರೆ. ಮಾನ್ವಿ, ದೇವದುರ್ಗ, ಮಸ್ಕಿ ಭಾಗದಿಂದ ಹೆಚ್ಚು ಜನ ಗುಳೆ ಹೋಗುತ್ತಿದ್ದಾರೆ. ರಾಯಚೂರು ತಾಲೂಕಿನ ಕೂಲಿಕಾರರು ಕೆಲಸ ಕೊಡಿ ನಾವು ಗುಳೆ ಹೋಗಲ್ಲ ಅಂತ ಕೆಲಸಕ್ಕಾಗಿ ಕಾದು ಕುಳಿತಿದ್ದಾರೆ. ಇದನ್ನೂ ಓದಿ: ಶೇಂಗಾ ಸೇವನೆಯಿಂದ ಆರೋಗ್ಯಕ್ಕೆ ಸಿಗಲಿದೆ ಹಲವು ಲಾಭ

    ಉದ್ಯೋಗ ಖಾತ್ರಿ ಕೆಲಸ ಮಾಡೋಣವೆಂದರೆ ಕೆಲವು ಸಮಸ್ಯೆಗಳು ಇವೆ. 275 ರೂಪಾಯಿ ನಿಗದಿತ ಕೂಲಿಯಲ್ಲಿ ಕೇವಲ 200 ರೂಪಾಯಿ ಕೊಡುತ್ತಿದ್ದಾರೆ. ಕಾಮಗಾರಿ ಸ್ಥಳದಲ್ಲಿ ಬಿಸಿಯೂಟ, ಮಾಸ್ಕ್ ,ಸ್ಯಾನಿಟೈಸರ್, ನೀರು, ಟೆಂಟ್ ವ್ಯವಸ್ಥೆ ಮಾಡಬೇಕು ಆದರೆ ಯಾವ ವ್ಯವಸ್ಥೆ ಮಾಡುತ್ತಿಲ್ಲ. ಕೆಲಸಕ್ಕೆ ಅರ್ಜಿಹಾಕಿ 15 ದಿನಗಳಲ್ಲಿ ಕೆಲಸ ಕೊಡಬೇಕು ಆದರೆ ಕೆಲಸ ಕೊಡುತ್ತಿಲ್ಲ. ಅರ್ಜಿಹಾಕಿದವರಲ್ಲಿ ಕೆಲವರಿಗೆ ಮಾತ್ರ ಕೆಲಸ ಕೊಡುತ್ತಿದ್ದಾರೆ ಅವರಿಗೂ ಸರಿಯಾಗಿ ಕೂಲಿ ಕೊಡುತ್ತಿಲ್ಲ ಅಂತ ರಾಯಚೂರು ತಾಲೂಕಿನ ಗಿಲ್ಲೆಸುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಲಿಕಾರರು ಆರೋಪಿಸಿದ್ದಾರೆ.

    ಮಳೆ ಚೆನ್ನಾಗಿದ್ದು, ಉತ್ತಮ ಬೆಳೆ ನಿರೀಕ್ಷೆಯಿದ್ದರೂ ಜನರ ಗುಳೆ ನಿಂತಿಲ್ಲ. ಈಗಲಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕೂಲಿಕಾರರಿಗೆ ಉದ್ಯೋಗ ನೀಡಬೇಕಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

  • ಕೊರೊನಾ ನಡುವೆ ಸತತವಾಗಿ ಕಾರ್ಯನಿರ್ವಹಿಸಿದ ಪೊಲೀಸರಿಗೆ ಒಂದು ದಿನ ಬಿಗ್ ರಿಲೀಫ್

    ಕೊರೊನಾ ನಡುವೆ ಸತತವಾಗಿ ಕಾರ್ಯನಿರ್ವಹಿಸಿದ ಪೊಲೀಸರಿಗೆ ಒಂದು ದಿನ ಬಿಗ್ ರಿಲೀಫ್

    – ಸಿಬ್ಬಂದಿ, ಕುಟುಂಬದವರ ಜೊತೆಗೆ ಬೆಟ್ಟ ಹತ್ತಿ ಸಂತಸಪಟ್ಟ ಪೊಲೀಸರು

    ಯಾದಗಿರಿ: ಕೊರೊನಾ ಲಾಕ್‍ಡೌನ್ ಮತ್ತು ಅನ್‍ಲಾಕ್ ಕಾರ್ಯದಲ್ಲಿ ಸತತವಾಗಿ ಕಾರ್ಯನಿರ್ವಹಿಸಿದ ಪೊಲೀಸರು ಇಂದು ವನ ಸಂಚಾರ ಮಾಡುವ ಮೂಲಕ ವಿಶ್ರಾಂತಿ ಪಡೆದಿದ್ದಾರೆ.

    ಸುರಪುರ ವಿಭಾಗದ ಡಿವೈಎಸ್ಪಿ ವೆಂಕಟೇಶ್ ಉಗಿಬಂಡಿ ತಮ್ಮ ವ್ಯಾಪ್ತಿಯ ಪಿಎಸ್‍ಐ, ಸಿಪಿಐ ಸಿಬ್ಬಂದಿ, ಕುಟುಂಬ್ಥರು ಹಾಗೂ ಅವರ ಮಕ್ಕಳ ಜೊತೆಗೆ ಕಾಲ ಕಳೆಯಲು ಇಂದು ಅನುವು ಮಾಡಿಕೊಂಡಿದ್ದಾರೆ. ಸದಾ ತಮ್ಮ ಕೆಲಸದಲ್ಲಿ ಬ್ಯಸಿಯಾಗಿರುತ್ತಿದ್ದ ಪೊಲೀಸರು, ಕುಟುಂಬಸ್ಥರ ಜೊತೆ ಕಾಲ ಕಳೆಯುವುದೇ ಅಪರೂಪವಾಗಿತ್ತು. ಇದನ್ನು ಗಮನಿಸಿದ ಡಿವೈಎಸ್ಪಿ ವೆಂಕಟೇಶ್ ಉಗಿಬಂಡಿ ಎಲ್ಲ ಸಿಬ್ಬಂದಿ ಮತ್ತು ಕುಟುಂಬದ ಸದಸ್ಯರನ್ನು ಕರೆದುಕೊಂಡು ಶಹಪುರದ ಬೆಟ್ಟದಲ್ಲಿ ಕೆಲ ಹೊತ್ತು ಕಾಲ ಕಳೆದಿದ್ದಾರೆ.

    ಇದಕ್ಕೂ ಮೊದಲು ಶಹಪುರ ನಗರದಲ್ಲಿ ಕೊರೊನಾ ಜಾಗೃತಿ ಮೂಡಿಸಿದ ಪೊಲೀಸ್ ಅಧಿಕಾರಿಗಳು, ಬಳಿಕ ಬೆಟ್ಟಕ್ಕೆ ತೆರಳಿದರು. ಈ ಔಟಿಂಗ್ ನಲ್ಲಿ ಸುರಪುರ, ಶಹಪುರ, ಕೇಂಭಾವಿ, ಗೋಗಿ, ಬಿಗುಡಿ ಸಿಬ್ಬಂದಿ ಪಾಲ್ಗೊಂಡಿದ್ದರು.

  • ಜನ ಗುಳೆ ಹೋಗುವುದನ್ನು ತಪ್ಪಿಸಲು ಅಧಿಕಾರಿಗಳಿಂದ ಹರಸಹಾಸ

    ಜನ ಗುಳೆ ಹೋಗುವುದನ್ನು ತಪ್ಪಿಸಲು ಅಧಿಕಾರಿಗಳಿಂದ ಹರಸಹಾಸ

    – ನರೇಗಾ ಯೋಜನೆ ಸದ್ಬಳಕೆಗೆ ಮುಂದಾದ ಅಧಿಕಾರಿಗಳು

    ಯಾದಗಿರಿ: ಜಿಲ್ಲೆಯ ಜನ ಬೆಂಗಳೂರು, ಮುಂಬೈ ಹಾಗೂ ಪುಣೆಗೆ ಗೂಳೆ ಹೋಗುವುದನ್ನು ತಪ್ಪಿಸಲು, ನರೇಗಾ ಯೋಜನೆ ಅಡಿ ಅವರ ಊರಲ್ಲೇ ಕೆಲಸ ನೀಡಲು ಜಿ.ಪಂ ಮುಂದಾಗಿದೆ.

    ಗ್ರಾಪಂಚಾಯ್ತಿ ವ್ಯಾಪ್ತಿಯಲ್ಲಿ ಉಳು ತೆಗೆವುದು, ಬಸಿಗೌಲಿ ಸ್ವಚ್ಛತೆ, ಬದು ನಿರ್ಮಾಣ ಹಾಗೂ ಕೃಷಿ ಹೊಂಡ ಕೆಲಸಗಳು ನಡೆಯುತ್ತಿವೆ. ಒಂದು ಕುಟುಂಬಕ್ಕೆ 100 ದಿನ ಕೆಲಸ ಕೊಟ್ಟಿದ್ದು, ಪ್ರತಿಯೊಬ್ಬರಿಗೆ ದಿನಕ್ಕೆ 289 ರೂಪಾಯಿ ಕೂಲಿ ಸಿಗುತ್ತದೆ. ಅಲ್ಲದೇ ಒಂದು ವಾರದ ನಂತರ ನೇರವಾಗಿ ಅವರ ಖಾತೆ ಹಣ ಜಮೆಯಾಗುತ್ತದೆ. ಇದನ್ನೂ ಓದಿ: ಒಲಿಂಪಿಕ್ಸ್‌ ಆಯ್ಕೆಯಾಗುವ ಕರ್ನಾಟಕದ ಕ್ರೀಡಾಪಟುಗಳಿಗೆ ತಲಾ ರೂ. 10 ಲಕ್ಷ ಪ್ರೋತ್ಸಾಹಧನ: ಡಾ. ನಾರಾಯಣಗೌಡ

    ವಲಸೆ ಹೋದಾಗ ಕಟ್ಟಡ ಕೆಲಸ ಮಾಡುವಾಗ ಅನಾಹುತಗಳು ಸಂಭವಿಸುತ್ತವೆ. ಹೀಗಾಗಿ ಇಲ್ಲೇ ನರೇಗಾದಲ್ಲಿ ಕೆಲಸ ಕೊಡಲಾಗಿದೆ. ಉತ್ತಮವಾಗಿ ಕೆಲಸವೂ ನಡೆಯುತ್ತಿದೆ. ಬಸ್, ರೈಲಿನಲ್ಲಿ ಮೂಲಕ ಗುಳೆ ಹೋಗುವ ಜನರನ್ನು, ತಡೆದು ಅವರಿಗೆ ಜಾಗೃತಿ ಮೂಡಿಸಿ, ಜಿಲ್ಲೆಯಲ್ಲಿಯೆ ದುಡಿಯುವಂತೆ ಮನವೊಲಿಸಲು ಮುಂದಾಗಿ ಕೆಲವನ್ನು ಕೊಡುತ್ತಿದ್ದಾರೆ.

  • ಹಟ್ಟಿಚಿನ್ನದ ಗಣಿಯಲ್ಲಿ ಅವಘಡ – ಕಾರ್ಮಿಕನಿಗೆ ಗಂಭೀರ ಗಾಯ

    ಹಟ್ಟಿಚಿನ್ನದ ಗಣಿಯಲ್ಲಿ ಅವಘಡ – ಕಾರ್ಮಿಕನಿಗೆ ಗಂಭೀರ ಗಾಯ

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಕಲ್ಲುಮಣ್ಣು ಕಸಿದು ಓರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಚಿನ್ನದ ಗಣಿಯ ಮಲ್ಲಪ್ಪ ಶಾಫ್ಟ್ ನಲ್ಲಿ ಘಟನೆ ನಡೆದಿದೆ.

    ಕಾರ್ಮಿಕ ಹನುಮಂತ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಂಡರ್ ಗ್ರೌಂಡ್ ನಲ್ಲಿ ಕಾರ್ಯನಿರ್ವಹಿಸುವ ವೇಳೆ ಘಟನೆ ನಡೆದಿದ್ದು, ಹಟ್ಟಿ ಗೋಲ್ಡ್ ಮೈನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಈ ಅವಘಡಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ, ಸುರಕ್ಷತಾ ಕ್ರಮಗಳನ್ನ ತೆಗೆದುಕೊಳ್ಳದೇ ಕೆಲಸ ಮಾಡಿಸಲಾಗುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

    ಕೋವಿಡ್ ನಿಯಮ ಮೀರಿ ಕಾರ್ಮಿಕರಿಂದ ಅಧಿಕಾರಿಗಳು ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಶೇ.50 ರಷ್ಟು ಮಾತ್ರ ಕಾರ್ಮಿಕರನ್ನ ಬಳಸಿಕೊಳ್ಳಲು ಅನುಮತಿಯಿದ್ದರೂ ಶೇ.100 ರಷ್ಟು ಕಾರ್ಮಿಕರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೇ ಅವಧಿ ಮೀರಿ ಕಾರ್ಮಿಕರಿಂದ ದುಡಿಸಿಕೊಳ್ಳುತ್ತಿದ್ದು, ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ ಕೆಲಸದ ಅವಧಿಯಿದ್ದು, ಮಧ್ಯಾಹ್ನ 2.30 ರವರೆಗೆ ಕಾರ್ಮಿಕರಿಂದ ಕೆಲಸ ಮಾಡಿಕೊಳ್ಳಲಾಗುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಸದ್ಯ ಗಾಯಾಳು ಹನುಮಂತ ಚೇತರಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ವಾಯ್ಸ್ ಆಫ್ ನೀಡ್ ಫೌಂಡೇಶನ್ ವತಿಯಿಂದ ದಿವ್ಯಾಂಗರಿಗೆ ಕೋವಿಡ್ ಲಸಿಕೆ ಅಭಿಯಾನ

  • ವೀಡಿಯೋ ವೈರಲ್: ಸೀರೆಯುಟ್ಟು ಮ್ಯಾನ್‍ಹೋಲ್‍ಗೆ ಇಳಿದ ಮುನ್ಸಿಪಲ್ ಆಫೀಸರ್

    ವೀಡಿಯೋ ವೈರಲ್: ಸೀರೆಯುಟ್ಟು ಮ್ಯಾನ್‍ಹೋಲ್‍ಗೆ ಇಳಿದ ಮುನ್ಸಿಪಲ್ ಆಫೀಸರ್

    ಮುಂಬೈ: ಸ್ವಚ್ಛತಾ ಕಾಮಗಾರಿಯ ವೇಳೆ ಕಾರ್ಮಿಕರನ್ನು ಮ್ಯಾನ್‍ಹೋಲ್‍ಗೆ ದಬಾಯಿಸಿ ಇಳಿಸುವ ಅಧಿಕಾರಿಗಳನ್ನು ನಾವು ನೋಡಿದ್ದೇವೆ. ಅದರೆ ಸೀರೆಯುಟ್ಟು ಮ್ಯಾನ್‍ಹೋಲ್‍ಗೆ ಇಳಿದು ಕೆಲಸ ಮಾಡಿಸುತ್ತಿರುವ ಮುನ್ಸಿಪಲ್ ಆಫೀಸರ್ ಅಧಿಕಾರಿಯ ವೀಡಿಯೋ ವೈರಲ್ ಆಗಿದೆ.

    ಥಾಣೆಯಲ್ಲಿ ಮಳೆ ಹೆಚ್ಚಾಗಿರುವುದರಿಂದ ಮಳೆ ನೀರು ಸರಾಗವಾಗಿ ಹೋಗಲು ಚರಂಡಿ ವ್ಯವಸ್ಥೆ ಸರಿ ಇದೆಯೇ ಎಂದು ಮಹಿಳಾ ಅಧಿಕಾರಿ ಪರಿಶೀಲನೆ ನಡೆಸಿದ್ದಾರೆ. ಭಿವಾಂಡಿ-ನಿಜಾಂಪುರ್ ಮುನ್ಸಿಪಲ್ ಕಾರ್ಪೋರೇಷನ್ (ಬಿಎನ್‍ಎಂಸಿ)ನ ಸ್ಯಾನಿಟರಿ ಇನ್ಸ್‍ಪೆಕ್ಟರ್ ಸುವಿಧಾ ಚವಾಣ್, ಮರದ ಏಣಿಯ ಸಹಾಯದಿಂದ ಮ್ಯಾನ್ ಹೋಲ್ ಒಳಗೆ ಇಳಿದು ಪರಿಶಿಲನೆ ನಡೆಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಕತ್ತೆಗಳ ಸಂಖ್ಯೆ ಹೆಚ್ಚಳ

    ವೀಡಿಯೋದಲ್ಲಿ ಏನಿದೆ:
    ಮ್ಯಾನ್‍ಹೋಲ್‍ನಲ್ಲಿ ಸ್ವಚ್ಛತಾ ಕೆಲಸ ನಡೆಯುತ್ತಿತ್ತು. ವೇಳೆ ಅಲ್ಲಿಗೆ ಬಂದ ಮಹಿಳಾ ಅಧಿಕಾರಿ ಸ್ವತಃ ಮ್ಯಾನ್‍ಹೋಲ್ ಒಳಕ್ಕೆ ಇಳಿದಿದ್ದಾರೆ. ಮ್ಯಾನ್‍ಹೋಲ್‍ಗೆ ಮರದ ಏಣಿಯೊಂದನ್ನು ಇರಿಸಿ ಉಟ್ಟ ಸೀರೆಯಲ್ಲೇ ಕೆಳಕ್ಕಿಳಿದ ಸುವಿಧಾ, ಒಳಗೆ ಏನೇನು ಕೆಲಸ ನಡೆಯುತ್ತಿದೆ ಎಂದು ಫೋಟೋ ತೆಗೆದು, ಅಲ್ಲಿದ್ದ ಕಾರ್ಮಿಕರ ಬಳಿ ಮಾತನಾಡಿ ಸ್ವಚ್ಛತಾ ಕೆಲಸ ಪರಿಶೀಲನೆ ಮಾಡಿದ್ದಾರೆ. ಈ ಘಟನೆಯ ವೀಡಿಯೋ ಈಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಮಹಾರಾಷ್ಟ್ರದ ಭಿವಾಂಡಿ, ನಿಜಾಮ್‍ಪುರ್ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಫೀಸ್ ಕಟ್ಟುವಂತೆ ಒತ್ತಾಯ ಮಾಡುವ ಶಾಲೆಗಳ ವಿರುದ್ಧ ಕ್ರಮ: ಸಿಎಂ

    ಮುಂಗಾರು ಪ್ರಾರಂಭವಾಗುತ್ತಿರುವುದರಿಂದ ಅವ್ಯವಸ್ಥೆ ಆಗದಂತೆ ನೋಡಿಕೊಳ್ಳುವುದಕ್ಕಾಗಿ ಪಾಲಿಕೆ ವ್ಯಾಪ್ತಿಯ ವಿವಿಧೆಡೆ ಸ್ವಚ್ಛತಾ ಕಾರ್ಯಗಳ ಬಗ್ಗೆ ಹೀಗೆಯೇ ನಿಗಾ ವಹಿಸುತ್ತಿದ್ದು, ಇವರು ಇಷ್ಟೊಂದು ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿ ಇಂತಹ ಅಧಿಕಾರಿಗಳು ಇರಬೇಕು ಎಂದು ಶ್ಲಾಘಿಸುತ್ತಿದ್ದಾರೆ.

     

  • ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

    ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

    ಮಡಿಕೇರಿ: ಕಾಫಿ ತೋಟ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಓರ್ವ ಗಂಭೀರ ಗಾಯಗೊಂಡಿದ್ದು, ಮತ್ತೋರ್ವ ಪ್ರಾಣಾಪಾಯದಿಂದ ಪಾರಾದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬರಡಿ ಗ್ರಾಮದಲ್ಲಿ ನಡೆದಿದೆ.

    ಕಾಡಾನೆ ದಾಳಿಯಿಂದ ಗಾಯಗೊಂಡ ಸುರೇಂದ್ರ(50) ಸಿದ್ದಾಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಮತ್ತೋರ್ವ ಕಾರ್ಮಿಕ ಜನಾರ್ದನ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಕಾಡಾನೆ ಹಾವಳಿಯಿಂದ ಗ್ರಾಮಸ್ಥರಲ್ಲಿ ಇದೀಗ ಆತಂಕ ಮನೆ ಮಾಡಿದೆ. ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿ ಪಂಚಾಯಿತಿ ವ್ಯಾಪ್ತಿಯ ಬರಡಿ ಗ್ರಾಮದಲ್ಲಿ ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಹಠಾತ್ ದಾಳಿ ಮಾಡಿದೆ. ವಿಷಯ ತಿಳಿದ ಸ್ಥಳೀಯರು, ಸ್ಥಳಕ್ಕೆ ಆಗಮಿಸಿದ ವೇಳೆ ಕಾಡಾನೆ ಕಾಫಿ ತೋಟದತ್ತ ತೆರಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಕೆಲ ದಿನಗಳಿಂದ ಗ್ರಾಮ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಡಾನೆಯಿಂದ ರೈತರ ಕೃಷಿ ಫಸಲು ನಾಶವಾಗುತ್ತಿದ್ದು, ಕಾರ್ಮಿಕರ ಮೇಲೆ ನಿರಂತರ ದಾಳಿಮಾಡುತ್ತಿದೆ. ಕಾಡಾನೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ವಿಫಲವಾಗಿದ್ದು, ಶಾಶ್ವತವಾಗಿ ಕಾಡಾನೆ ಹಾವಳಿ ತಡೆಗಟ್ಟಲು ಕಾರ್ಮಿಕ ಸಂಘಟನೆಯ ಮುಖಂಡ ಪಿ.ಆರ್. ಭರತ್ ಒತ್ತಾಯಿಸಿದರು.

    ಉಪವಲಯ ಅರಣ್ಯಾಧಿಕಾರಿ ಸುಬ್ರಾಯ, ಅರಣ್ಯ ರಕ್ಷಕ ಚರಣ್ ಆಸ್ಪತ್ರೆಗೆ ಭೇಟಿ ನೀಡಿ ಹೆಚ್ಚಿನ ಚಿಕಿತ್ಸೆಗೆ ಸುರೇಂದ್ರರನ್ನು ಮಡಿಕೇರಿಗೆ ದಾಖಲಿಸಿದ್ದಾರೆ. ವಲಯ ಅರಣ್ಯಾಧಿಕಾರಿ ಸುಬ್ರಾಯ ಪತ್ರಿಕೆಯೊಂದಿಗೆ ಮಾತನಾಡಿ ಅರಣ್ಯದಂಚಿನಲ್ಲಿ ಅಳವಡಿಸಲಾಗಿರುವ ಸೋಲಾರ್ ವಿದ್ಯುತ್ ತಂತಿ ಮೇಲೆ ಮಳೆಯಿಂದ ಮರ ಬಿದ್ದು ತುಂಡಾಗಿದೆ. ಕಾಡಾನೆಯೊಂದು ಬರಡಿ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ತಕ್ಷಣ ಕಾಡಿಗಟ್ಟುವ ಕಾರ್ಯಾಚರಣೆ ಮಾಡಲಾಗುವುದು ಎಂದು ಹೇಳಿದರು.