Tag: ಕೆಲಸ

  • ತಾನೊಬ್ಬ ಎಸ್ಪಿ ಅನ್ನೋದನ್ನೆ ಮರೆತು ಮಹತ್ವದ ಕೆಲಸ ಮಾಡಿದ್ರು ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ!

    ತಾನೊಬ್ಬ ಎಸ್ಪಿ ಅನ್ನೋದನ್ನೆ ಮರೆತು ಮಹತ್ವದ ಕೆಲಸ ಮಾಡಿದ್ರು ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ!

    ಚಿಕ್ಕಮಗಳೂರು: ಕಳೆದೊಂದು ವಾರದ ಹಿಂದೆ ಕಾಫಿನಾಡಿನ ಚಾರ್ಮಾಡಿ ಘಾಟ್‍ನಲ್ಲಿ ಸುರಿದ ಭಾರೀ ಮಳೆಯಿಂದ ಚಾರ್ಮಾಡಿ ಘಾಟ್‍ನಲ್ಲಿ ಮೂರು ದಿನಗಳ ಕಾಲ ಸಂಚಾರಕ್ಕೆ ಬ್ರೇಕ್ ಹಾಕಲಾಗಿತ್ತು.

    ಭಾರೀ ಮಳೆ-ಗಾಳಿಯಿಂದ ಚಾರ್ಮಾಡಿಯಲ್ಲಿ ಸುಮಾರು ಒಂಬತ್ತು ಗುಡ್ಡಗಳು ಕುಸಿದು ಮಣ್ಣು ರಸ್ತೆಗೆ ಹರಡಿ ಸಂಚಾರ ಮಾಡದಂತಾಗಿತ್ತು. ಸುಮಾರು 18 ಗಂಟೆಗಳ ಕಾಲ ಜನ ಸುರಿಯೋ ಮಳೆಯಲ್ಲೇ ಊಟ-ತಿಂಡಿ ಇಲ್ಲದೆ ನಿಂತಲ್ಲೇ ನಿಲ್ಲುವಂತಹಾ ಸ್ಥಿತಿ ನಿರ್ಮಾಣವಾಗಿತ್ತು.

    ಚಾರ್ಮಾಡಿಯಲ್ಲಿ ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಆಗಿ, ಜನ ಮಳೆಯಲ್ಲಿ ಸಿಕ್ಕಿಬಿದ್ದಿದ್ದಾಗ ಸ್ಥಳಕ್ಕೆ ಬಂದ ಎಸ್ಪಿ ಅಣ್ಣಾಮಲೈ ತಾನೊಬ್ಬ ಎಸ್ಪಿ ಎನ್ನುವುದನ್ನೇ ಮರೆತು ಕೆಲಸಗಾರರ ಜೊತೆ ಕೆಲಸಗಾರರಾಗಿ ಕುಸಿದಿದ್ದ ಮಣ್ಣನ್ನು ಸರಿಸೋಕೆ ಮುಂದಾದರು.

    ಎಸ್ಪಿಯ ಶೈಲಿಯನ್ನು ಪ್ರದರ್ಶಿಸದೇ ಕೆಲಸಗಾರರೊಂದಿಗೆ ಮರದ ಟೊಂಗೆಗಳನ್ನು ಎತ್ತಿ ಹಾಕಿದ್ದರು. ಸುರಿಯೋ ಮಳೆಯನ್ನೂ ಲೆಕ್ಕಿಸದೆ ಸ್ಪಾಟ್‍ನಲ್ಲಿ ನಿಂತು ಟ್ರಾಫಿಕ್ ಕ್ಲಿಯರ್ ಮಾಡಿದರು. ಎಸ್ಪಿಯ ಗನ್ ಮ್ಯಾನ್ ಛತ್ರಿ ಹಿಡಿದು ಎಸ್ಪಿಯ ಹಿಂದಿನಿಂದ ಬಂದರೂ ಛತ್ರಿಯನ್ನ ಬೇಡವೆಂದು ಎಸ್ಪಿ ಮೊಣಕಾಲುದ್ದ ಕೆಸರಿನ ಮಧ್ಯೆಯೂ ಟ್ರಾಫಿಕ್ ಕ್ಲಿಯರ್ ಮಾಡಲು ಮುಂದಾದರು.

    ಇದನ್ನೆಲ್ಲಾ ಗಮನಿಸಿದ ಸ್ಥಳಿಯರು, ಕೆಲಸಗಾರರು, ವಾಹನ ಸವಾರರು ಎಸ್ಪಿ ಎಂದರೆ ಹೀಗಿರಬೇಕು ಎಂದು ಹೇಳಿದ್ದಾರೆ. ಸದ್ಯ ಅಣ್ಣಮಲೈ ಕೆಲಸ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

  • ಬಳ್ಳಾರಿಯಲ್ಲಿ ವಿಶೇಷ ಕೆಲಸ ಮಾಡಿ ಬಂದ್ರು ಪವರ್ ಸ್ಟಾರ್!

    ಬಳ್ಳಾರಿಯಲ್ಲಿ ವಿಶೇಷ ಕೆಲಸ ಮಾಡಿ ಬಂದ್ರು ಪವರ್ ಸ್ಟಾರ್!

    ಬೆಂಗಳೂರು: ನಟಸಾರ್ವಭೌಮ ಚಿತ್ರದ ಚಿತ್ರೀಕರಣಕ್ಕೆಂದು ಬಳ್ಳಾರಿಗೆ ಹೋಗಿದ್ದ ಪುನೀತ್ ರಾಜ್‍ಕುಮಾರ್ ಯಾರಿಗೂ ಗೊತ್ತಾಗದಂತೆ ಅಲ್ಲೊಂದು ವಿಶೇಷ ಕೆಲಸ ಮಾಡಿ ಬಂದಿದ್ದಾರೆ. ತಂದೆಯಂತೆಯೇ ಸಮಾಜಮುಖಿಯಾಗಿ ಕೆಲಸ ಮಾಡಿ ಅನೇಕರಿಗೆ ಮಾದರಿಯಾಗಿದ್ದಾರೆ.

    ಕಳೆದ ವಾರ ನಟಸಾರ್ವಭೌಮ ಚಿತ್ರದ ಚಿತ್ರೀಕರಣಕ್ಕಾಗಿ ಪುನೀತ್ ರಾಜ್‍ಕುಮಾರ್ ಬಳ್ಳಾರಿಯಲ್ಲೇ ಸುಮಾರು ಐದಾರು ದಿನದಿಂದ ಶೂಟಿಂಗ್ ನಡೆಸುತ್ತಿದ್ದರು. ಈ ಮಧ್ಯೆ ಅವರು ಸಮಾಜಕ್ಕೆ ಸಂದೇಶ ಸಾರುವ ಕೆಲಸವನ್ನು ಮಾಡಿದ್ದಾರೆ.

    ಡಾ. ರಾಜ್‍ಕುಮಾರ್ ರೈತರಿಗೆ ಹಾಗೂ ಅಭಿಮಾನಿಗಳಿಗೆ ಒಳ್ಳೆಯ ಸಂದೇಶ ಸಿಗುತ್ತೆ ಎಂದಾದರೆ ಎರಡು ಮಾತನಾಡೋದರಲ್ಲೇನು ಎಂದುಕೊಂಡು ಉಚಿತವಾಗೇ ಸರ್ಕಾರಿ ಜಾಹಿರಾತಿನಲ್ಲಿ ಪಾಲ್ಗೊಂಡಿದ್ದರು. ಅದೇ ರೀತಿ ಇದೀಗ ಪುನೀತ್ ತಂದೆಯ ಕಾಯಕ ಮುಂದುವರಿಸಿಕೊಂಡು ಬಂದಿದ್ದಾರೆ.

    ಬಳ್ಳಾರಿ ಪೊಲೀಸರು ಕಳೆದ ಐದಾರು ತಿಂಗಳ ಹಿಂದೆ ಅಂಬುಲೆನ್ಸ್‍ಗೆ ದಾರಿ ಬಿಡಿ ಎನ್ನುವ ಅಭಿಯಾನ ಶುರುಮಾಡಿದ್ದರು. ಈ ಅಭಿಯಾನದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಸಾಥ್ ನೀಡಿದ್ದರು. ವಿಡಿಯೋ ಮೂಲಕ ಸಂದೇಶ ನೀಡಿ ತಮ್ಮಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಇದೀಗ ಇದೇ ಅಭಿಯಾನದಲ್ಲಿ ಪುನೀತ್ ರಾಜ್‍ಕುಮಾರ್ ಕೈ ಜೋಡಿಸಿದ್ದಾರೆ. ಜಾಗೃತಿಯ ಫಲಕ ಹಿಡಿದು ಅಂಬ್ಯುಲೆನ್ಸ್ ಗೆ ದಾರಿ ಬಿಡಿ ಎಂದು ಕೇಳಿಕೊಂಡಿದ್ದಾರೆ.

    ಪುನೀತ್ ಯಾವುದೇ ಕಾರ್ಯಕ್ರಮಕ್ಕೆ ಹೋಗಬೇಕಾದರೆ ಬಹಳ ಹಿಂದಿನಿಂದಲೇ ಡೇಟ್ಸ್ ಬುಕ್ ಆಗಿರಬೇಕಾಗುತ್ತೆ. ಆದರೆ ಈ ಜಾಗೃತಿ ಅಭಿಯಾನಕ್ಕಾಗಿ ಬಳ್ಳಾರಿ ಪೊಲೀಸರು ಕೇಳಿಕೊಂಡಾಗ ಆ ಕೂಡಲೇ ಪೊಲೀಸರ ಮನವಿ ಒಪ್ಪಿಕೊಂಡು ಶೂಟಿಂಗ್ ಜಾಗದಲ್ಲೇ ಶೂಟಿಂಗ್ ಮಾಡಲು ಸಮಯ ಕೊಟ್ಟಿದ್ದಾರೆ.

    ಕೋಟಿ ಕೋಟಿ ಹಣ ಸುರಿದು ಜಾಹಿರಾತಿಗಾಗಿ ತಾರೆಗಳನ್ನ ಬಳಸಿಕೊಳ್ಳುತ್ತಾರೆ. ಆದರೆ ಅದಕ್ಕೂ ಮೀರಿ ಸಾಮಾಜಿಕ ಕಳಕಳಿ ಬೀರುವ ಜಾಹಿರಾತಿನ ವಿಷಯ ಬಂದಾಗ ಉದಾರತೆ ತೋರಿಸುವ ಎಷ್ಟೋ ತಾರೆಗಳಿದ್ದಾರೆ. ಅಂಥದ್ದೇ ಕೆಲಸ ಪುನೀತ್ ರಾಜ್‍ಕುಮಾರ್ ಈಗ ಮಾಡಿದ್ದಾರೆ.

  • ಪತ್ನಿ ಮಾಡಿದ ನೀಚ ಕೆಲಸಕ್ಕೆ ಪತಿಯ ಕೆಲಸ ಹೋಯ್ತು!

    ಪತ್ನಿ ಮಾಡಿದ ನೀಚ ಕೆಲಸಕ್ಕೆ ಪತಿಯ ಕೆಲಸ ಹೋಯ್ತು!

    ಗುರ್‍ಗಾಂವ್: ಪತ್ನಿಯೊಬ್ಬಳು ತನ್ನ ಪತಿಯ ಬಾಸ್‍ಗೆ ಹಾಗೂ ಆತನ ಸಹದ್ಯೋಗಿಗಳಿಗೆ ಅಶ್ಲೀಲ ಫೋಟೋಗಳನ್ನು ಕಳುಹಿಸಿ ಆತ ಕೆಲಸ ಕಳೆದುಕೊಳ್ಳುವಂತೆ ಮಾಡಿದ ಘಟನೆ ಗುರ್‍ಗಾಂವ್‍ನಲ್ಲಿ ನಡೆದಿದೆ.

    ಅಭಿಷೇಕ್ ಕೆಲಸ ಕಳೆದುಕೊಂಡ ಪತಿ. ಅಭಿಷೇಕ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿಯ ಈ ನೀಚ ಕೆಲಸದಿಂದ ನಾನು ನನ್ನ ಕೆಲಸವನ್ನು ಕಳೆದುಕೊಂಡಿದ್ದೇನೆ ಎಂದು ಸ್ವತಃ ಅಭಿಷೇಕ್ ತನ್ನ ಪತ್ನಿಯ ಮೇಲೆ ಆರೋಪಿಸಿದ್ದಾರೆ.

    ಅಭಿಷೇಕ್ ಹಾಗೂ ಆತನ ಪತ್ನಿಯ ವಿಚ್ಛೇದನ ಕೇಸ್ ಕೋರ್ಟ್ ನಲ್ಲಿ ನಡೆಯುತ್ತಿತ್ತು. ಹಾಗಾಗಿ ಪತ್ನಿ ತನ್ನ ಪತಿಯ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಅಕೌಂಟ್ ಓಪನ್ ಮಾಡಿದ್ದಾಳೆ. ನಂತರ ಆ ಖಾತೆಯಿಂದ ತನ್ನ ಪತಿಯ ಬಾಸ್ ಹಾಗೂ ಆತನ ಸಹದ್ಯೋಗಿಗಳಿಗೆ ಅಶ್ಲೀಲ ಫೋಟೋಗಳನ್ನು ಕಳುಹಿಸಿದ್ದಾಳೆ.

    ಅಭಿಷೇಕ್ 2014ರಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, 2011ರಲ್ಲಿ ಮದುವೆ ನಡೆದಿತ್ತು. ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಇಬ್ಬರು ಬೇರೆ ಬೇರೆ ಆಗಿದ್ದರು. ಈಗ ಇವರಿಬ್ಬರ ವಿಚ್ಛೇದನ ಕೇಸ್ ಕೋರ್ಟ್‍ನಲ್ಲಿ ನಡೆಯುತ್ತಿದೆ.

    2016ರಲ್ಲಿ ಅಭಿಷೇಕ್ ಪತ್ನಿ ತನ್ನ ಪತಿಯ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆಯನ್ನು ಓಪನ್ ಮಾಡಿದ್ದಳು. ಆ ಖಾತೆಯಲ್ಲಿ ತನ್ನ ಪತಿಯ ಫೋಟೋ ಹಾಕಿ, ಆತನ ಬಾಸ್, ಸಹದ್ಯೋಗಿ ಹಾಗೂ ಹಿರಿಯ ಉದ್ಯೋಗಿಗಳಿಗೆ ಅಶ್ಲೀಲ ಫೋಟೋ ಹಾಗೂ ಮೆಸೇಜ್ ಮಾಡುತ್ತಿದ್ದಳು. ಅಲ್ಲದೇ ಮೆಸೆಂಜರ್ ನಲ್ಲಿ ಕರೆ ಮಾಡಿ ಹಲವು ಕಥೆಗಳನ್ನು ಹೇಳುತ್ತಿದ್ದಳು ಎನ್ನಲಾಗಿದೆ.

    ನನ್ನ ಪತ್ನಿಯಿಂದಾಗಿ ನಾನು ನನ್ನ ಕೆಲಸವನ್ನು ಕಳೆದುಕೊಂಡೆ. ನಾನು ಈ ಬಗ್ಗೆ ಪೊಲೀಸರ ಹತ್ತಿರ ಆಕೆಯ ವಿರುದ್ಧ ದೂರನ್ನು ದಾಖಲಿಸಿದ್ದೇನೆ ಎಂದು ಪತಿ ಅಭಿಷೇಕ್ ತಿಳಿಸಿದ್ದಾನೆ. ಪ್ರಾಥಮಿಕ ತನಿಖೆಯಿಂದ ಅಭಿಷೇಕ್ ಪತ್ನಿ ಆರೋಪಿ ಎಂದು ತಿಳಿದು ಬಂದಿದ್ದು, ಆಕೆಯ ವಿರುದ್ಧ ಐಟಿ ಕಾಯ್ದೆ ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ ಎಂದು ಸೆಕ್ಟರ್ 10ರ ಎಸ್‍ಒಎಚ್ ಚಂದ್ರಪ್ರಕಾಶ್ ತಿಳಿಸಿದ್ದಾರೆ.

  • ಪ್ರೀತ್ಸೆ..ಪ್ರೀತ್ಸೆ.. ಅಂತ ಬೆನ್ನು ಬಿದ್ದ ಯುವಕನಿಗೆ ಅಪ್ರಾಪ್ತೆಯ ತಂದೆಯಿಂದ ಬಿತ್ತು ಗೂಸಾ!

    ಪ್ರೀತ್ಸೆ..ಪ್ರೀತ್ಸೆ.. ಅಂತ ಬೆನ್ನು ಬಿದ್ದ ಯುವಕನಿಗೆ ಅಪ್ರಾಪ್ತೆಯ ತಂದೆಯಿಂದ ಬಿತ್ತು ಗೂಸಾ!

    ಹುಬ್ಬಳ್ಳಿ: ಪ್ರೀತಿಸುವಂತೆ ಯುವಕನೊಬ್ಬ ಅಪ್ರಾಪ್ತೆಯ ಬೆನ್ನು ಬಿದ್ದ ಪರಿಣಾಮ ಬಾಲಕಿಯ ತಂದೆಯಿಂದ ಧರ್ಮದೇಟು ತಿಂದಿರುವ ಘಟನೆ ಹುಬ್ಬಳ್ಳಿಯ ವಿದ್ಯಾನಗರದ ಮಹಿಳಾ ವಿದ್ಯಾಪೀಠದ ಬಳಿ ನಡೆದಿದೆ.

    ಅಮರಗೋಳದ ನಿವಾಸಿಯಾಗಿರೋ ಸುನಿಲ್ ಹನಕನಹಳ್ಳಿ ಎಂಬಾತ ಧರ್ಮದೇಟು ತಿಂದವನಾಗಿದ್ದು, ಈತ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದಾನೆ. ಸುನೀಲ್ ಈ ಪ್ರದೇಶದ ಸುಮಾಳನ್ನು(ಹೆಸರು ಬದಲಾಯಿಸಿಲಾಗಿದೆ) ಪ್ರೀತಿಸುತ್ತೇನೆಂದು ಹಲವು ದಿನಗಳಿಂದ ಆಕೆಯ ಬೆನ್ನು ಬಿದ್ದಿದ್ದ.

    ಸುನಿಲ್ ಪ್ರೀತಿಗೆ ಸುಮಾ ಒಪ್ಪಿಗೆ ಸೂಚಿಸಿರಲಿಲ್ಲ. ಹೀಗಾಗಿ 17 ವರ್ಷದ ಅಪ್ರಾಪ್ತೆ ವಿದ್ಯಾನಗರದ ಮಹಿಳಾ ಕಾಲೇಜಿನಲ್ಲಿ ಟೈಲರಿಂಗ್ ಕಲಿಯಲು ಹೋಗುತ್ತಿದ್ದ ಸಂದರ್ಭದಲ್ಲಿ ಸುನಿಲ್ ಆಕೆಯನ್ನು ಫಾಲೋ ಮಾಡಿದ್ದಾನೆ. ಇದೇ ವಿಷಯ ಸುಮಾಳ ತಂದೆ ಧರ್ಮಪ್ಪ ಅವರಿಗೆ ಗೊತ್ತಾಗುತ್ತಿದ್ದಂತೆ ಸ್ಥಳೀಯರ ಜೊತೆಗೂಡಿ ಹಿಗ್ಗಾಮುಗ್ಗ ಥಳಿಸಿದ್ದಾರೆ.

    ತನ್ನ ಮಗಳ ಒಪ್ಪಿಗೆ ಇಲ್ಲದ ಒತ್ತಾಯದ ಮೇರೆಗೆ ಆಕೆಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಹಾಳು ಮಾಡುತ್ತಿದ್ದಾನೆಂದು ತಂದೆ ಧರ್ಮಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಧರ್ಮದೇಟು ತಿಂದ ಸುನಿಲ್ ನನ್ನು ನವನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಸುಮಾ ಅಲ್ಲದೇ ಈ ಹಿಂದೆ ಪ್ರೀತಿ-ಪ್ರೇಮ ಹೆಸರಿನಲ್ಲಿ ಅಪ್ರಾಪ್ತೆಯರನ್ನು ಪುಸಲಾಯಿಸಿ ಅವರ ಬದುಕಿನ ಜೊತೆ ಸುನಿಲ್ ಚೆಲ್ಲಾಟವಾಡುತ್ತಿದ್ದ ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.

    https://www.youtube.com/watch?v=6beI6pS8zG4

  • ಸಹೋದ್ಯೋಗಿಯ ತಮಾಷೆಯಿಂದಾಗಿ ಪ್ರಾಣವನ್ನೇ ಕಳೆದುಕೊಂಡ! ಸುದ್ದಿ ಓದಿ ನಕ್ಕರೂ ಯಾರೂ ಈ ರೀತಿ ಮಾಡ್ಬೇಡಿ

    ಸಹೋದ್ಯೋಗಿಯ ತಮಾಷೆಯಿಂದಾಗಿ ಪ್ರಾಣವನ್ನೇ ಕಳೆದುಕೊಂಡ! ಸುದ್ದಿ ಓದಿ ನಕ್ಕರೂ ಯಾರೂ ಈ ರೀತಿ ಮಾಡ್ಬೇಡಿ

    ನವದೆಹಲಿ: ಫ್ಯಾಕ್ಟರಿಯಲ್ಲಿ ಸಹೋದ್ಯೋಗಿಯ ತಮಾಷೆಯಿಂದಾಗಿ 40 ವರ್ಷದ ವ್ಯಕ್ತಿಯೊಬ್ಬರು ತನ್ನ ಪ್ರಾಣವನ್ನೇ ಕಳೆದುಕೊಂಡ ಆಘಾತಕಾರಿ ಘಟನೆಯೊಂದು ದೆಹಲಿಯ ನಂಗೋಲಿ ಎಂಬಲ್ಲಿ ನಡೆದಿದೆ.

    ಮೃತ ದುರ್ದೈವಿ ವ್ಯಕ್ತಿಯನ್ನು ರವೀಂದ್ರ ಎಂದು ಗುರುತಿಸಲಾಗಿದೆ. ಈ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಪಂಡಿತ್ ಪ್ರಕರಣದ ಆರೋಪಿಯಾಗಿದ್ದು, ಸದ್ಯ ಈತನನ್ನು ನಂಗೋಲಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    ಏನಿದು ಘಟನೆ?: ನಂಗೋಲಿಯ ಸ್ವರ್ಣ್ ಪಾರ್ಕ್ ಪ್ರದೇಶದಲ್ಲಿ ತನ್ನ ಕುಟುಂಬದ ಜೊತೆ ವಾಸವಾಗಿರೋ ರವೀಂದ್ರ ಅವರು ಹತ್ತಿರದ ಪ್ಲೈವುಡ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಬುಧವಾರ ಬೆಳಗ್ಗೆ ಕೆಲಸಕ್ಕೆಂದು ರವೀಂದ್ರ ಬಂದಿದ್ದರು. ಈ ವೇಳೆ ಅವರ ಹಿಂಬದಿಯಲ್ಲಿ ಪ್ಯಾಂಟ್ ಹರಿದಿರುವುದನ್ನು ಸಹೋದ್ಯೋಗಿ ಪಂಡಿತ್ ಗಮನಿಸಿದ್ದಾನೆ. ಅಲ್ಲದೇ ತಮಾಷೆಗೆಂದು ಪ್ಯಾಂಟ್ ತೂತಾಗಿರುವ ಗುದದ್ವಾರದ ಜಾಗದಲ್ಲಿ ಏರ್ ಜೆಟ್ ಪೈಪ್ ಇಟ್ಟು ಬಲವಾಗಿ ಗಾಳಿ ನಿರ್ದೇಶಿಸಿದ್ದಾನೆ. ಪರಿಣಾಮ ಬಲವಾದ ಗಾಳಿಯು ರವೀಂದ್ರ ಅವರ ದೇಹಕ್ಕೆ ಹೊಕ್ಕಿ ಕರುಳಿಗೆ ಗಂಭೀರ ಸ್ವರೂಪದ ಘಾಸಿಯಾಗಿದೆ. ಇದರಿಂದ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಯಿಸಿತಾದ್ರೂ, ಕರುಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದರಿಂದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಅಂತ ಅಲ್ಲಿನ ಡಿಸಿಪಿ ಘಟನೆಯ ಬಗ್ಗೆ ಮಾಧ್ಯಮಕ್ಕೆ ವಿವರಿಸಿದ್ದಾರೆ.

    ರವೀಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಕೂಡಲೇ ವೈದ್ಯರು ಚಿಕಿತ್ಸೆ ನೀಡಲಿಲ್ಲ. ಅಲ್ಲದೇ ಈ ಘಟನೆ ತುಂಬಾನೇ ಸೂಕ್ಷ್ಮವಾಗಿದ್ದು, ತಕ್ಷಣವೇ ಶಸ್ತ್ರಚಿಕಿತ್ಸೆಗೆ ಒಳಪಡಿಸದಿರುವುದರಿಂದ ಅವರು ಸಾವನ್ನಪ್ಪಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.

    ಪ್ರಕರಣ ಸಂಬಂಧ ಆರೋಪಿ ಪಂಡಿತ್ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತಮಾಷೆ ಮಾಡಲು ಹೋಗಿ ಈ ಅವಘಡ ಸಂಭವಿಸಿದೆ ಅಂತ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ಈ ಸಂಬಂಧ ಫ್ಯಾಕ್ಡರಿಯಲ್ಲಿ ಕೆಲಸ ಮಾಡುತ್ತಿರುವ ಇತರರನ್ನು ಕೂಡ ವಿಚಾರಣೆ ನಡೆಸಿದ್ದಾರೆ.

  • ಬೆಂಗ್ಳೂರಿನಲ್ಲಿ ಕೆಲ್ಸ ಕೊಡಿಸುವುದಾಗಿ ನಂಬಿಸಿ 26ರ ಯುವತಿಗೆ ಪತಿ, ಪತ್ನಿಯಿಂದ ಲೈಂಗಿಕ ಕಿರುಕುಳ!

    ಬೆಂಗ್ಳೂರಿನಲ್ಲಿ ಕೆಲ್ಸ ಕೊಡಿಸುವುದಾಗಿ ನಂಬಿಸಿ 26ರ ಯುವತಿಗೆ ಪತಿ, ಪತ್ನಿಯಿಂದ ಲೈಂಗಿಕ ಕಿರುಕುಳ!

    ಬೆಂಗಳೂರು: ಕೆಲಸ ಕೊಡಿಸುವುದಾಗಿ ನಂಬಿಸಿ ನನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಾಗಾಲ್ಯಾಂಡ್ ಮೂಲದ ಯುವತಿ ಮನೆ ಮಾಲೀಕ ಮತ್ತು ಆತನ ಪತ್ನಿ ವಿರುದ್ಧ ದೂರು ನೀಡಿದ್ದಾರೆ.

    ವಾಹೆಂಗ್ ಬಾಮ್ ಲಲಿತ್ ಎಂಬಾತ ಲೈಂಗಿಕ ಕಿರುಕುಳ ನೀಡಿದ್ದಾನೆ. ಕೃತ್ಯಕ್ಕೆ ಆತನ ಪತ್ನಿ ರೊಂಗ್ಸೆನ್ಕಲಾ ಸಾಥ್ ನೀಡಿದ್ದಾಳೆ ಎಂದು ಯುವತಿ ಆರೋಪಿಸಿದ್ದಾಳೆ. ಯುವತಿ ನಾಗಾಲ್ಯಾಂಡ್‍ಗೆ ಹೋಗಿ ಅಲ್ಲಿಂದ ಇ-ಮೇಲ್ ಮೂಲಕ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ದಾಖಲಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ವಿವೇಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ದೂರಿನಲ್ಲಿ ಏನಿದೆ?
    2015ರಲ್ಲಿ ಕೆಲಸ ಆರಸಿಕೊಂಡು ಬೆಂಗಳೂರಿಗೆ ಬಂದಿದ್ದಾಗ ರೊಂಗ್ಸೆನ್ಕಲಾ ಎಂಬಾಕೆ ಪರಿಚಯವಾಗಿ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಕೊಡಿಸುವುದಾಗಿ ನನಗೆ ಹೇಳಿದ್ದಳು. ನಂತರ ನನ್ನನ್ನು ಹೆಚ್‍ಎಸ್‍ಆರ್ ಲೇಔಟ್ ನಲ್ಲಿರುವ ಅವರ ಮನೆಗೆ ಕರೆತಂದು ಒಂದೂವರೆ ವರ್ಷ ಅವರ ಮನೆಯಲ್ಲೇ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಈ ವೇಳೆ ನನಗೆ ಅವರ ಮನೆಯಲ್ಲಿಯೇ ಪ್ರತ್ಯೇಕ ರೂಮಿನಲ್ಲಿ ವಾಸಿಸುವಂತೆ ತಿಳಿಸಿದ್ದರು. ರೊಂಗ್ಸೆನ್ಕಲಾ ಜೊತೆ ಆಕೆಯ ಗಂಡ ವಾಹೆಂಗ್ ಲಲಿತ್ ಸಿಂಗ್ ಹಾಗೂ ಇಬ್ಬರೂ ಮಕ್ಕಳು ವಾಸಿಸುತ್ತಿದ್ದರು.

    ನಾನು ರೂಮಿನಲ್ಲಿದ್ದಾಗ ವಾಹೆಂಗ್ ಅನೇಕ ಬಾರಿ ನನ್ನ ರೂಮಿಗೆ ಅಕ್ರಮವಾಗಿ ಪ್ರವೇಶಿಸಿ ಒತ್ತಾಯ ಪೂರ್ವಕವಾಗಿ ನನ್ನನ್ನು ಹಿಡಿದುಕೊಂಡು ನನ್ನ ಖಾಸಗಿ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಮನೆ ಕೆಲಸ ಮಾಡಿದ್ದಕ್ಕೆ ಪ್ರತಿ ತಿಂಗಳು ಅವರು 6 ಸಾವಿರ ರೂ.ಕೊಡುತ್ತಿದ್ದರು. ಆದರೆ ಏಳನೇ ತಿಂಗಳ ಸಂಬಳವನ್ನು ಅವರು ನನಗೆ ನೀಡಲಿಲ್ಲ. ನಂತರ ವಾಹೆಂಗ್ ವರ್ತನೆ ಬಗ್ಗೆ ಆತನ ಪತ್ನಿ ಹತ್ತಿರ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಯುವತಿ ತಿಳಿಸಿದ್ದಾರೆ.

    ನನ್ನ ಮಾತು ಅವರು ಕೇಳದಿದ್ದಾಗ ನಾನು ಬೆಂಗಳೂರಿನಲ್ಲಿರುವ ನನ್ನ ಸಂಬಂಧಿಕರ ಸಹಾಯದಿಂದ ಮರಳಿ ನಾಗಾಲ್ಯಾಂಡ್‍ಗೆ ವಾಪಸ್ ಬಂದಿದ್ದೇನೆ. ಮನೆ ಕೆಲಸ ಮಾಡುವಾಗ ನನಗೆ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿರುವ ವಾಹೆಂಗ್ ಹಾಗೂ ರೊಂಗ್ಸೆನ್ಕಲಾ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ.

  • ಸರ್ಕಾರಿ ಕೆಲಸ ಕೊಡ್ಸೋದಾಗಿ ಮೋಸ- ಕಾಂಗ್ರೆಸ್ ನಾಯಕರ ಆಪ್ತ ಸಿಸಿಬಿ ಬಲೆಗೆ

    ಸರ್ಕಾರಿ ಕೆಲಸ ಕೊಡ್ಸೋದಾಗಿ ಮೋಸ- ಕಾಂಗ್ರೆಸ್ ನಾಯಕರ ಆಪ್ತ ಸಿಸಿಬಿ ಬಲೆಗೆ

    ಬೆಂಗಳೂರು: ಕಾಂಗ್ರೆಸ್ ನಾಯಕರ ಆಪ್ತನೊಬ್ಬ ಸರ್ಕಾರಿ ಕೆಲಸ ಕೊಡಿಸ್ತೀನಿ ಅಂತ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿ ಇದೀಗ ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾನೆ.

    ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯ ಮುಂಜುನಾಥ್ ಮೋಸ ಮಾಡಿರೋ ವ್ಯಕ್ತಿ. ಈತನಿಗೆ ಸಿಎಂ ಸಿದ್ದರಾಮಯ್ಯರಿಂದ ಹಿಡಿದು, ನಗರ ಪೊಲೀಸ್ ಆಯುಕ್ತರ ತನಕ ಎಲ್ಲರೂ ದೋಸ್ತಿಗಳಾಗಿದ್ದಾರೆ.

    ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಕ್ಲೋಸ್ ಫ್ರೆಂಡ್ ಆಗಿರೋ ಮಂಜುನಾಥ್ ಒಂದು ಫೋನ್ ಮಾಡಿದ್ರೆ ಕಾಂಗ್ರೆಸ್ ಪಾಳಯವೇ ಈತನ ಮುಂದೆ ಬಂದು ನಿಲ್ಲುತ್ತೆ. ಕೈ ನಾಯಕರ ಜೊತೆಗಿನ ಫೋಟೋಗಳನ್ನು ತೋರಿಸಿ, ಸರ್ಕಾರಿ ಕೆಲಸ ಕೊಡಿಸ್ತೀನಿ ಅಂತ ಕೊಟ್ಯಾಂತರ ರೂಪಾಯಿ ಪಂಗನಾಮ ಹಾಕಿದ್ದಾನೆ. ಆದ್ರೆ ಇದೀಗ ಬೆಂಗಳೂರಿನ ಸಿಸಿಬಿ ಪೊಲೀಸರು ಮಂಜುನಾಥ್‍ನನ್ನು ಹೆಡೆಮುರಿ ಕಟ್ಟಿ, ಕಂಬಿ ಹಿಂದೆ ತಳ್ಳಿದ್ದಾರೆ.

    ಕಾಂಗ್ರೆಸ್ ಸರ್ಕಾರದ ಎಲ್ಲಾ ಸಚಿವರ ಜೊತೆ ಫೋಟೋ ತೆಗಿಸಿಕೊಂಡಿರೋ ಮಂಜುನಾಥ್, ಯಾರದೇ ಹುಟ್ಟುಹಬ್ಬ ಬಂದ್ರು ಕೂಡ ಬ್ಯಾನರ್ ಹಾಕಿಸಿಕೊಳ್ತಿದ್ದ. ಬಿ ಗ್ರೂಪ್ ನೌಕರಿ ಸಿಗ್ಬೇಕು ಅಂದ್ರೆ 20 ಲಕ್ಷ, ಸಿ ಗ್ರೂಪ್‍ಗೆ 15 ಲಕ್ಷ ಅಂತ ರೇಟ್ ಫಿಕ್ಸ್ ಮಾಡ್ತಿದ್ದ. ಈತನ ಸಚಿವರೊಂದಿಗಿನ ಫೋಟೋ ನೋಡಿ ಮರುಳಾದ ಜನ ಕೆಲಸಕ್ಕಾಗಿ ಲಕ್ಷಾಂತರ ಹಣ ಕೊಟ್ಟು ಈಗ ಕಣ್ಕಣ್ಣು ಬಿಡುತ್ತಿದ್ದಾರೆ.


    ಮಂಜುನಾಥ್ ಬಂಧನವಾದ ವಿಷಯ ತಿಳಿಯುತ್ತಿದ್ದಂತೆ ಸರ್ಕಾರವೇ ಬಿದ್ದು ಹೋಯ್ತೇನೋ ಎನ್ನುವಂತೆ ಈತನನ್ನು ಬಿಡಿಸಲು ಪ್ರಯತ್ನ ನಡೆದಿದೆ. ಆದ್ರೆ ಸಾಕ್ಷಿ ಇದ್ದ ಕಾರಣ ಕಸ್ಟಡಿಗೆ ಪಡೆದಿರೋ ಸಿಸಿಬಿ ಪೊಲೀಸರು ಮಂಜುನಾಥ್‍ನಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

  • ಕೆಲಸಕ್ಕೆ ಹೋಗು ಎಂದು ಬುದ್ಧಿವಾದ ಹೇಳಿದ್ದಕ್ಕೆ ತಂದೆಯನ್ನೇ ಕೊಂದ!

    ಕೆಲಸಕ್ಕೆ ಹೋಗು ಎಂದು ಬುದ್ಧಿವಾದ ಹೇಳಿದ್ದಕ್ಕೆ ತಂದೆಯನ್ನೇ ಕೊಂದ!

    ಬೆಳಗಾವಿ: ಕೆಲಸಕ್ಕೆ ಹೋಗು ಎಂದು ಬುದ್ಧಿವಾದ ಹೇಳಿದ್ದಕ್ಕೆ ತಂದೆಯನ್ನೇ ಮಗ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೈನಾಪುರ ಗ್ರಾಮದಲ್ಲಿ ನಡೆದಿದೆ.

    ರಾಮಸಿದ್ದ ಖೋತ್ (53) ಮಗನಿಂದಲೇ ಕೊಲೆಯಾದ ದುರ್ದೈವಿಯಾಗಿದ್ದು ಸಂತೋಷ್ ಖೋತ್(27) ತಂದೆಯನ್ನೇ ಕೊಲೆ ಮಾಡಿದ ಪಾಪಿ ಪುತ್ರನಾಗಿದ್ದಾನೆ. ಕೆಲಸಕ್ಕೆ ಹೋಗದೆ ಸೋಮಾರಿ ತಿರುಗುತ್ತಿದ್ದ ಸಂತೋಷ್‍ಗೆ ಪೋಲಿಯಾಗಿ ಅಲೆಯಬೇಡ ಎಂದು ತಂದೆ ರಾಮಸಿದ್ದ ಬುದ್ಧಿವಾದ ಹೇಳಿದ್ದರು.

    ಇದರಿಂದ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದ್ದು,ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಜಗಳದಲ್ಲಿ ತಂದೆಯನ್ನು ಸಂತೋಷ್ ತಳ್ಳಿದ್ದಾನೆ. ತಳ್ಳಿದ ರಭಸಕ್ಕೆ ಸಿಮೆಂಟ್ ಶೀಟ್ ಮೇಲೆ ಬಿದ್ದ ರಾಮಸಿದ್ದ ಅವರ ತಲೆಗೆ ಬಲವಾದ ಏಟು ಬಿದ್ದದ್ದರಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಆರೋಪಿ ಸಂತೋಷ್ ನನ್ನು ಬಂಧಿಸಿ ಐಪಿಸಿ ಸೆಕ್ಷನ್ 302ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಪತ್ನಿಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿದ ಪತಿ ಈಗ ಪೊಲೀಸರ ವಶಕ್ಕೆ

    ಪತ್ನಿಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿದ ಪತಿ ಈಗ ಪೊಲೀಸರ ವಶಕ್ಕೆ

    ಬೆಂಗಳೂರು: ಪತಿಯೇ ತನ್ನ ಪತ್ನಿಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಶೀಗೆಹಳ್ಳಿ ಪ್ರಿಯಾಂಕನಗರದಲ್ಲಿ ನಡೆದಿದೆ.

    ನೀಲ (25) ಕೊಲೆಯಾಗಿರುವ ದುರ್ದೈವಿ. ಇಂದು ಬೆಳಗಿನ ಜಾವ ಘಟನೆ ನಡೆದಿದ್ದು, ಪತಿ ದೊರೆ ಹಗ್ಗದಿಂದ ಪತ್ನಿಯ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿದ್ದಾನೆ. ಕೆಲಸಕ್ಕೆ ಹೋಗದೇ ಮನೆಯಲ್ಲಿ ಇರುತ್ತಿದ್ದ ಪತಿ ಪ್ರತಿದಿನ ಪತ್ನಿಯನ್ನು ಹಿಂಸಿಸುತ್ತಿದ್ದ. ಅಷ್ಟೇ ಅಲ್ಲದೇ ನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ.

    ಗುರುವಾರ ರಾತ್ರಿಯೂ ಸಹ ಇಬ್ಬರ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ಹೋಗಿ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ. ಆದರೆ ಕೊಲೆ ಮಾಡಿದ ಬಳಿಕ ಎಂದಿನಂತೆ ಸ್ನೇಹಿತರೊಂದಿಗೆ ಏನೂ ತಿಳಿಯದಂತೆ ಓಡಾಡಿಕೊಂಡಿದ್ದ. ನಂತರ ನನ್ನ ಹೆಂಡತಿ ಮೇಲೆಳುತ್ತಿಲ್ಲ ಎಂದು ಸ್ನೇಹಿತರಿಗೆ ತಿಳಿಸಿದ್ದಾನೆ.

    ಅನುಮಾನಗೊಂಡು ಸ್ಥಳೀಯರು ವಿಚಾರಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿ ಈಗ ಕೆ.ಆರ್.ಪುರ ಪೊಲೀಸರ ವಶದಲ್ಲಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

  • 4 ವರ್ಷದ ಹಿಂದೆ ಕಾಣೆಯಾಗಿದ್ದ ಸೋದರಿಯನ್ನ ವೇಶ್ಯಾವಾಟಿಕೆ ಅಡ್ಡೆಯಿಂದ ಪಾರು ಮಾಡಿದ ಸಹೋದರ

    4 ವರ್ಷದ ಹಿಂದೆ ಕಾಣೆಯಾಗಿದ್ದ ಸೋದರಿಯನ್ನ ವೇಶ್ಯಾವಾಟಿಕೆ ಅಡ್ಡೆಯಿಂದ ಪಾರು ಮಾಡಿದ ಸಹೋದರ

    ಪಾಟ್ನಾ: ಪೊಲೀಸರು ಬಿಹಾರದ ಬೆಗುಸರಾಯ್ ಜಿಲ್ಲೆಯ ವೇಶ್ಯಾವಾಟಿಕೆಯ ಅಡ್ಡೆ ಮೇಲೆ ದಾಳಿ ನಡೆಸಿ ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

    ರಾಮ್ ಮೋಹನ್ (ಹೆಸರು ಬದಲಾಯಿಸಲಾಗಿದೆ) ಎಂಬವರು ನಾಲ್ಕು ವರ್ಷಗಳ ಹಿಂದೆ ಕಾಣೆಯಾಗಿದ್ದ ಸೋದರಿಯನ್ನು ಹುಡುಕುತ್ತಿದ್ದರು. ಆದರೆ ರಾಮ್ ಮೋಹನ್ ತಮ್ಮ ಸೋದರಿಯನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿದ್ದರು. ಖಾಸಗಿ ಹಡಗು ಸಂಸ್ಥೆಯೊಂದರಲ್ಲಿ ಕೆಲಸ ಮಾಡ್ತಿರೋ ರಾಮ್ ಮೋಹನ್ ಕೆಲಸದ ಮೇಲೆ ಇತ್ತೀಚೆಗೆ ಬಾಖ್ರಿ ಗ್ರಾಮವೊಂದರ ರೆಡ್ ಲೈಟ್ ಏರಿಯಾ ತಲುಪಿದಾಗ ಅಲ್ಲಿ ತನ್ನ ಸಹೋದರಿಯನ್ನ ನೋಡಿದ್ದಾರೆ.

    ಸೋದರಿ ಬಂಧಿಯಾಗಿರುವ ಬಗ್ಗೆ ತಿಳಿಯುತ್ತಲೇ ರಾಮ್ ಮೋಹನ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರ್ಯಪ್ರವೃತ್ತರಾದ ಪೊಲೀಸರು ವೇಶ್ಯಾವಾಟಿಕೆಯ ಅಡ್ಡೆ ಮೇಲೆ ದಾಳಿ ನಡೆಸಿ ರಾಮ್‍ಮೋಹನ್ ಸೋದರಿ ಸೇರಿದಂತೆ ಮತ್ತೊಬ್ಬ ಯುವತಿಯನ್ನು ರಕ್ಷಿಸಿದ್ದಾರೆ. ರಾಮ್ ಮೋಹನ್ ಸೋದರಿ ಶೇಹೊರಾ ಜಿಲ್ಲೆಯ ನಿವಾಸಿಯಾಗಿದ್ದು, ರಕ್ಷಿಸಲ್ಪಟ್ಟ ಮತ್ತೊಬ್ಬ ಯುವತಿ ಜಾರ್ಖಂಡ್ ರಾಜ್ಯದ ಗುಮ್ಲಾ ಜಿಲ್ಲೆಯ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.

    ರಾಮ್ ಮೋಹನ್ ಸೋದರಿಗೆ ಕೆಲಸ ಕೊಡಿಸುವುದಾಗಿ ಹೇಳಿ ಹರಿಯಾಣದ ಮಹಿಳೆ ಬಾಖ್ರಿಯಲ್ಲಿ ವೇಶ್ಯಾವಾಟಿಕೆಗೆ ಮಾರಾಟ ಮಾಡಿದ್ದಳು. ರಕ್ಷಿಸಲ್ಪಟ್ಟ ಮತ್ತೊಬ್ಬ ಯುವತಿಯನ್ನು 10 ವರ್ಷಗಳ ಹಿಂದೆ ಇದೇ ರೀತಿ ಮಾರಾಟ ಮಾಡಲಾಗಿತ್ತು. ದಾಳಿ ವೇಳೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ದಂಧೆಯಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.