Tag: ಕೆರಿಬಿಯನ್

  • ಪತ್ನಿ ಜೊತೆ ಸೆಕ್ಸ್ ಮಾಡುತ್ತಿದ್ದಾಗ ಹೀಗಾಗಿದ್ದಕ್ಕೆ ಆಪರೇಷನ್ ಮಾಡಬೇಕಾಯ್ತು!

    ಪತ್ನಿ ಜೊತೆ ಸೆಕ್ಸ್ ಮಾಡುತ್ತಿದ್ದಾಗ ಹೀಗಾಗಿದ್ದಕ್ಕೆ ಆಪರೇಷನ್ ಮಾಡಬೇಕಾಯ್ತು!

    ಸ್ಯಾಂಟೋ ಡೊಮಿಂಗೊ: ವ್ಯಕ್ತಿಯೊಬ್ಬ ಪತ್ನಿಯ ಜೊತೆ ವಿಲಕ್ಷಣವಾಗಿ ಸೆಕ್ಸ್ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಆತನ ಪೃಷ್ಠದ ಒಳಗಡೆ ಏರ್‌ಫ್ರೆಶ್‌ನರ್ ಬಾಟಲಿ ಸಿಕ್ಕಿಕೊಂಡಿದ್ದ ಘಟನೆ ಡೊಮಿನಿಕನ್ ರಿಪಬ್ಲಿಕ್ ದೇಶದಲ್ಲಿ ನಡೆದಿದೆ.

    40 ವರ್ಷದ ವ್ಯಕ್ತಿ ಸ್ಯಾಂಟೋ ಡೊಮಿಂಗೋದಲ್ಲಿನ ಫ್ರಾನ್ಸಿಸ್ಕೋ ಮೆಸ್ಕೋಸಾ ಪುಲ್ಲೊ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಆತನ ಪೃಷ್ಠದ ಒಳಗಡೆ ಸಿಲುಕಿಕೊಂಡಿದ್ದ ಏರ್‌ಫ್ರೆಶ್‌ನರ್ ಬಾಟಲಿಯನ್ನು ಹೊರ ತೆಗೆದಿದ್ದಾರೆ.

    ವ್ಯಕ್ತಿ ತನ್ನ ಪತ್ನಿಯೊಂದಿಗೆ ಸೆಕ್ಸ್ ಆಟವಾಡುವಾಗ ಆಕಸ್ಮಿಕವಾಗಿ ಆತನ ಹಿಂಭಾಗದೊಳಗೆ ಏರ್‌ಫ್ರೆಶ್‌ನರ್ ಬಾಟಲಿ ಸಿಲುಕಿಕೊಂಡಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಸಮಾರು ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿ ಅದನ್ನು ಹೊರಗೆ ತೆಗೆದಿದ್ದಾರೆ.

    ಪತಿ ಜೊತೆ ಸೆಕ್ಸ್ ಗೇಮ್ ಆಟವಾಡುತ್ತಿದ್ದ ಸಂದರ್ಭದಲ್ಲಿ ಅವರು ಗುದನಾಳದೊಳಕ್ಕೆ ಅಲ್ಲೇ ಇದ್ದ ಏರ್‌ಫ್ರೆಶ್‌ನರ್ ಬಾಟಲಿಯನ್ನು ಹಾಕುವಂತೆ ನನ್ನಲ್ಲಿ ಮನವಿ ಮಾಡಿಕೊಂಡರು. ಹೀಗಾಗಿ ನಾನು ಬಾಟಲಿ ಹಾಕಿದ್ದು, ಅದು ಅರ್ಧದಲ್ಲೇ ಸಿಲುಕಿಕೊಂಡಿತ್ತು ಅಂತ ಪತ್ನಿ ನಡೆದ ಘಟನೆಯನ್ನು ವಿವರಿಸಿದ್ದಾರೆ.

    ಸದ್ಯ ವ್ಯಕ್ತಿಯ ದೇಹಕ್ಕೆ ಯಾವುದೇ ತೊಂದರೆ ಇಲ್ಲ. ಆರೋಗ್ಯವಾಗಿದ್ದಾರೆ. ಈ ರೀತಿ ಪ್ರಕರಣಗಳು ಅಸಾಮಾನ್ಯವಲ್ಲ, ಸೆಕ್ಸ್ ಗೇಮ್ ಆಡುವಾಗ ಮರದ ವಸ್ತು, ವಿವಿಧ ಬಾಟಲ್ ಗಳು, ಪ್ಲಾಸ್ಟಿಕ್ ವಸ್ತುಗಳು ಮತ್ತು ಬದನೆಕಾಯಿಯಂತಹ ತರಕಾರಿಗಳು ಸಿಕ್ಕಿ ಹಾಕಿಕೊಂಡವರು ನಮ್ಮ ಆಸ್ಪತ್ರೆಗೆ ಬಂದಿದ್ದಾರೆ. ಅನೇಕ ಮಂದಿ ಸೆಕ್ಸ್ ಗೆ ಸಂಬಂಧಿಸಿದ ಗಾಯಗಳಾದರೂ ಇಲ್ಲಿಗೆ ಬರುತ್ತಾರೆ ಎಂದು ವೈದ್ಯರು ಹೇಳಿದ್ದಾರೆ.

    ಸೆಕ್ಸ್ ಗೇಮ್ ಆಡುವಾಗ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಯಾಕೆಂದರೆ ಇಂತಹ ಘಟನೆಯಲ್ಲಿ ರಕ್ತಸ್ರಾವ, ಕರುಳಿಗೆ ಹಾನಿ ಅಥವಾ ಇತರ ಗಾಯಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv