Tag: ಕೆಮಿಕಲ್ ರಿಯಾಕ್ಟರ್

  • ಕೆಮಿಕಲ್ ರಿಯಾಕ್ಟರ್ ಸ್ಫೋಟ: ಓರ್ವ ಕಾರ್ಮಿಕನ ಸ್ಥಿತಿ ಗಂಭೀರ

    ಕೆಮಿಕಲ್ ರಿಯಾಕ್ಟರ್ ಸ್ಫೋಟ: ಓರ್ವ ಕಾರ್ಮಿಕನ ಸ್ಥಿತಿ ಗಂಭೀರ

    ಬೀದರ್: ಕೆಮಿಕಲ್ ರಿಯಾಕ್ಟರ್ ಸ್ಫೋಟಗೊಂಡು ಭಾರೀ ಅಗ್ನಿ ಅವಘಡ ಸಂಭವಿಸಿ, ಓರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡ ಘಟನೆ ಬೀದರ್‌ನ ಹೊರ ವಲಯದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

    ಚಂದ್ರಾಲ್ಯಾಬ್ ಎಂಬ ಕೆಮಿಕಲ್ ಫ್ಯಾಕ್ಟರಿಯ ದೇವರಾಜ್ ಗಂಭೀರವಾಗಿ ಗಾಯಗೊಂಡ ಕಾರ್ಮಿಕ. ಕೆಮಿಕಲ್ ರಿಯಾಕ್ಟರ್ ಪಕ್ಕದಲ್ಲಿಯೇ ದೇವರಾಜ್ ನಿಂತಿದ್ದರು. ಹೀಗಾಗಿ ದೇವರಾಜ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳವು ಮೂರು ವಾಹನಗಳ ಸಹಾಯದಿಂದ ಬೆಂಕಿ ನಂದಿಸಿದ್ದಾರೆ. ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಬೀದರ್‌ನ ಕೊಳಾರ ಕೈಗಾರಿಕಾ ಪ್ರದೇಶದ ಸೃಜನ ಫಾರ್ಮಾ ಲಿಮಿಟೆಡ್‍ನಲ್ಲಿ ಇದೇ ವರ್ಷ ಜನವರಿ 17ರಂದು ರಾತ್ರಿ ಇಂತಹದ್ದೇ ಘಟನೆ ನಡೆದಿತ್ತು. ಈ ವೇಳೆ 10 ಜನರು ಗಾಯಗೊಂಡಿದ್ದರು.