Tag: ಕೆಮಿಕಲ್ ನೀರು

  • ಮಳೆಗಾಲದ ಮಧ್ಯೆ ನೀರಿಗೆ ಹಾಹಾಕಾರ – ಬೀದರ್‌ನ ಕುಗ್ರಾಮದ ಜನರಿಗೆ ಕೆಮಿಕಲ್ ನೀರು ಕುಡಿಯುವ ಕರ್ಮ

    ಮಳೆಗಾಲದ ಮಧ್ಯೆ ನೀರಿಗೆ ಹಾಹಾಕಾರ – ಬೀದರ್‌ನ ಕುಗ್ರಾಮದ ಜನರಿಗೆ ಕೆಮಿಕಲ್ ನೀರು ಕುಡಿಯುವ ಕರ್ಮ

    – ಫ್ಯಾಕ್ಟರಿಗಳಿಂದ ಕುತ್ತು; ಬೋರ್‌ವೇಲ್‌ನಲ್ಲಿ ಕೆಮಿಕಲ್ ನೀರು

    ಬೀದರ್‌: ಬೇಸಿಗೆ ಬಂದ್ರೆ ಸಾಕು ಕುಗ್ರಾಮಗಳಲ್ಲಿ ನೀರಿನ (Water) ಸಮಸ್ಯೆಯಾಗೋದು ಸಾಮಾನ್ಯ. ಆದ್ರೆ ಬೀದರ್‌ನ ಕುಗ್ರಾಮದಲ್ಲಿ ಮಳೆಗಾಲ ಮುಗಿದ ಬೆನ್ನಲ್ಲೇ ಹನಿ ಹನಿ ನೀರಿಗೆ ಹಾಹಾಕಾರ ಶುರುವಾಗಿದೆ. ಗ್ರಾಮದಲ್ಲಿರುವ ಏಕೈಕ ಕುಡಿಯುವ ನೀರಿನ ಬೋರ್ ವೆಲ್‌ನಿಂದ ಕೆಮಿಕಲ್ ನೀರು (Chemical water) ಬರುತ್ತಿದೆ.

    ಹೌದು. ಬೀದರ್ (Bidar) ತಾಲೂಕಿನ ಕಮಲಾಪೂರ್ ಗ್ರಾಮದಲ್ಲಿ ಜನರು ಕುಡಿಯುವ ಹನಿ ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ. ಇಡೀ ಗ್ರಾಮಕ್ಕೆ ಇರುವ ಏಕೈಕ ಬೋರ್‌ವೆಲ್‌ ಮುಂದೆ ಗಂಟೆಗಟ್ಟಲೇ ನಿಲ್ಲಬೇಕಿದೆ. ಈ ಬೋರ್ವೆಲ್‌ನಿಂದ ಕೆಮಿಕಲ್ ಯುಕ್ತ ನೀರು ಬರುತ್ತಿದ್ದು ಗ್ರಾಮದ ಜನ ಈ ನೀರನ್ನೇ ಕುಡಿಯುವ ಅನಿವಾರ್ಯತೆ ಬಂದೊದಗಿದೆ.

    ಕೆಮಿಕಲ್ ನೀರು ಕುಡಿದು ಜನ್ರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿದ್ದು, ಕೆಮಿಕಲ್ ಫ್ಯಾಕ್ಟರಿ ಮಾಲೀಕರಿಗೆ ಮತ್ತು ಅಧಿಕಾರಿಗಳಿಗೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ಯಾಕೆಂದ್ರೆ ಕೊಳ್ಳಾರ ಕೆಮಿಕಲ್ ಫ್ಯಾಕ್ಟರಿಗಳಿಂದ ಪ್ರತಿದಿನ ಗ್ರಾಮದ ಪಕ್ಕದ ಕೆರೆಗೆ ಕೆಮಿಕಲ್ ಸೇರುತ್ತಿದೆ. ಈ ಮೂಲಕ ಗ್ರಾಮದ ಬೋರ್ವೆಲ್‌ಗಳಲ್ಲಿ ಕೆಮಿಕಲ್ ಮಿಶ್ರಿತ ನೀರು ಬರುತ್ತಿದೆ. ಈ ಕೆಮಿಕಲ್ ನೀರನ್ನು ಅನಿವಾರ್ಯವಾಗಿ ಕುಡಿಯುತ್ತಿರುವ ಗ್ರಾಮಸ್ಥರು ಪ್ರತಿದಿನ ಸತ್ತು ಬದುಕುತ್ತಿದ್ದಾರೆ. ಇನ್ನು ಕೆಲವರು 2 ಕಿಲೋ ಮೀಟರ್ ದೂರದ ಗ್ರಾಮಗಳಿಗೆ ಹೋಗಿ 30 ರೂಪಾಯಿ ಕೊಟ್ಟು ಫಿಲ್ಟರ್ ನೀರು ತಂದು ಕುಡಿಯುತ್ತಿದ್ದಾರೆ.

    ಕೋಟಿ ಕೋಟಿ ಅನುದಾನದಲ್ಲಿ ಜೆಜೆಎಂ ಕಾಮಗಾರಿಯಲ್ಲಿ ಗ್ರಾಮದ ಪ್ರತಿಯೊಂದು ಮನೆಗಳಲ್ಲಿ ನಲ್ಲಿಗಳನ್ನು ಹಾಕಲಾಗಿದೆ. ಆದ್ರೆ ಐದಾರು ವರ್ಷಗಳಿಂದ ಈ ನಲ್ಲಿಗಳಲ್ಲಿ ಒಂದು ಹನಿ ನೀರು ಬಂದಿಲ್ಲ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೋಟಿ ಕೋಟಿ ಹಣ ಗುಳುಂ ಮಾಡಿದ್ದಾರೆ. 40 ವರ್ಷಗಳ ಹಿಂದೇ ಕಾರಂಜಾ ಜಲಾಶಯ ನಿರ್ಮಾಣಕ್ಕಾಗಿ ಜನ್ರು ತಮ್ಮ ಗ್ರಾಮವನ್ನೇ ಬಿಟ್ಟು ಇಲ್ಲಿಗೆ ಬಂದಿದ್ದಾರೆ. ಆದ್ರೆ ಇಲ್ಲಿ ಯಾವುದೇ ಮೂಲಭೂತ ಸೌಕರ್ಯ ನೀಡದೆ ನಿರ್ಲಕ್ಷಿಸಲಾಗಿದೆ.

  • ಕೆಮಿಕಲ್ ನೀರಿನಿಂದ ಕೆರೆಯಲ್ಲಿ ಬೆಂಕಿ

    ಕೆಮಿಕಲ್ ನೀರಿನಿಂದ ಕೆರೆಯಲ್ಲಿ ಬೆಂಕಿ

    ಬೆಂಗಳೂರು: ಕೆಲ ದಿನಗಳ ಹಿಂದೆ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡು ಜನರಲ್ಲಿ ಆತಂಕವನ್ನು ಸೃಷ್ಟಿ ಮಾಡಿ ವಿಶ್ವದಲ್ಲೇ ಬೆಂಗಳೂರಿನ ಮಾನವನ್ನು ಹರಾಜು ಹಾಕಿತ್ತು. ಇದೀಗ ಬೆಂಗಳೂರಿನ ಮತ್ತೊಂದು ಕೆರೆಯಲ್ಲಿ ಕೆಮಿಕಲ್ ನೀರಿನಿಂದ ಬೆಂಕಿ ಕಾಣಿಸಿಕೊಂಡು ಜನರಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ.

    ಬೆಂಗಳೂರು ಹೊರವಲಯದ ಆನೇಕಲ್‍ನ ಬೊಮ್ಮಸಂದ್ರ ಕೆರೆಯ ಸುತ್ತಮುತ್ತ ನೂರಾರು ಕೆಮಿಕಲ್ ಕಾರ್ಖಾನೆಗಳಿದೆ. ಈ ಕಾರ್ಖಾನೆಗಳು ಬಿಡುವ ಕೆಮಿಕಲ್‍ನಿಂದ ಕೆರೆ ಸಂಪೂರ್ಣ ಕಲುಷಿತಗೊಂಡಿದೆ. ಇಂದು ಸಹ ಕೆಲವು ಕಾರ್ಖಾನೆಗಳು ಕೆಮಿಕಲ್ ನೀರನ್ನು ಕಾಲುವೆಗೆ ಬಿಟ್ಟಿದ್ದು, ಕೆಮಿಕಲ್ ಹಾಗೂ ನೀರು ಎರಡು ಬೆರೆತ ತಕ್ಷಣ ಬೆಂಕಿ ಕಾಣಿಸಿ ಕೊಂಡಿದೆ. ಇದರಿಂದ ಕೆರೆ ಒಂದು ಭಾಗ ಸುಟ್ಟು ಹೋಗಿ ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬೆಂಕಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ನೀರನ್ನು ಬಿಟ್ಟರು ಅದು ಮತ್ತಷ್ಟು ಹೆಚ್ಚಾಗುತ್ತಿದೆ. ಕೆರೆಯ ನೀರಿಗೆ ಕೆಮಿಕಲ್ ನೀರು ಬಿಟ್ಟಿರುವುದರಿಂದ ಬೆಂಕಿ ಕಾಣಿಸಿಕೊಳ್ಳುತಿದೆ. ಪ್ರತಿ ಬಾರಿ ಬೆಂಕಿ ಕಾಣಿಸಿಕೊಂಡ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿ ಹೋಗುತ್ತಾರೆ. ಆದರೆ ಇವರೆಗೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇತ್ತ ಸುಳಿಯಲಿಲ್ಲ ಎಂದು ಸ್ಥಳೀಯರು  ಆರೋಪಿಸಿದ್ದಾರೆ.

    ಕೆಮಿಕಲ್ ನೀರಿನಿಂದ ಪ್ರತಿ ವರ್ಷ ಸಾವಿರಾರು ಮೀನುಗಳು ಸಾವನ್ನಪುತ್ತಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ, ಕೆರೆ ಅಭಿವೃಧ್ಧಿ ಪ್ರಾಧಿಕಾರ, ಬೊಮ್ಮಸಂದ್ರ ಪುರಸಭೆಗೆ ದೂರು ನೀಡಿದರೂ ಕ್ರಮ ಜರುಗಿಸುತ್ತಿಲ್ಲ. ಇವರೆಲ್ಲ ಬೊಮ್ಮಸಂದ್ರ ಕೆಮಿಕಲ್ ಕಾರ್ಖಾನೆಗಳ ಜೊತೆ ಶಾಮಿಲಾಗಿರುವ ಬಗ್ಗೆ ಸ್ಥಳೀಯರು ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬರದಿದ್ದರೆ ಕೆರೆ, ಹಾಗೂ ಕೆರೆಯ ಅಕ್ಕಪಕ್ಕದ ಮನೆಗಳು ಸಂಪೂರ್ಣವಾಗಿ ಸುಟ್ಟು ಹೋಗುವ ಸಾಧ್ಯತೆ ಇದೆ.

  • ಬಲೂನ್ ಊದುವ ವೇಳೆ ಕೆಮಿಕಲ್ ಮಿಶ್ರಿತ ನೀರು ಸೇವನೆ- ಎಚ್.ವೈ.ಮೇಟಿ ಪುತ್ರಿ ಅಸ್ವಸ್ಥ

    ಬಲೂನ್ ಊದುವ ವೇಳೆ ಕೆಮಿಕಲ್ ಮಿಶ್ರಿತ ನೀರು ಸೇವನೆ- ಎಚ್.ವೈ.ಮೇಟಿ ಪುತ್ರಿ ಅಸ್ವಸ್ಥ

    ಬಾಗಲಕೋಟೆ: ಬಲೂನ್ ಊದುವ ವೇಳೆ ಆಕಸ್ಮಿಕವಾಗಿ ಕೆಮಿಕಲ್ ಮಿಶ್ರಿತ ನೀರು ಸೇವಿಸಿದ ಮಾಜಿ ಸಚಿವ ಎಚ್.ವೈ.ಮೇಟಿ ಪುತ್ರಿ ಹಾಗೂ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಾಯಕ್ಕ ಮೇಟಿ ಅಸ್ವಸ್ಥಗೊಂಡಿರುವ ಘಟನೆ ತಾಲ್ಲೂಕಿನ ತುಳಸಿಗೇರಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂದು ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚಾಲನೆ ನೀಡಿದ್ದರು. ಬಳಿಕ ಶಾಲಾ ಶಿಕ್ಷರು ಬಲೂನ್ ಊದಲು ಮನವಿ ಮಾಡಿದ್ದು, ಈ ವೇಳೆ ಬಾಯಕ್ಕ ಅವರ ದೇಹದಲ್ಲಿ ಕೆಮಿಕಲ್ ಮಿಶ್ರಿತ ಬಲೂನ್ ನೀರು ಸೇರ್ಪಡೆಯಾಗಿದೆ.

    ಕಾರ್ಯಕ್ರಮದ ವೇದಿಕೆಯಲ್ಲೇ ಬಾಯಕ್ಕ ಅವರು ಅಸ್ವಸ್ಥರಾಗಿ ವಾಂತಿ ಮಾಡಿಕೊಂಡರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಶಾಲಾ ಶಿಕ್ಷಕರು ಹಾಗೂ ಇಲಾಖೆಯ ಅಧಿಕಾರಿಗಳು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಸದ್ಯ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಬಾಯಕ್ಕ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

    ಬಲೂನ್‍ನಲ್ಲಿದ್ದ ಗ್ಲಿಸರಿನ್ ಹಾಗೂ ಶಾಂಪೂ ಮಿಶ್ರಿತ ನೀರು ಬಾಯಕ್ಕ ಅವರ ದೇಹ ಸೇರಿರುವುದು ಅವರು ಅಸ್ವಸ್ಥರಾಗಲು ಕಾರಣವಾಗಿದ್ದು, ಹೀಗಾಗಿ ವಾಂತಿ ಶುರುವಾಗಿದೆ. ಈಗಾಗಲೇ ಅವರ ದೇಹ ಸೇರಿದ್ದ ಕೆಮಿಕಲ್ ನೀರನ್ನು ಹೊರ ತೆಗೆಯಲಾಗಿದ್ದು, ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕ ಪಿ.ಎ.ಬಿರಾದಾರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

  • ಸಕ್ಕರೆ ಕಾರ್ಖಾನೆಯ ಫ್ರೀಜರ್ ಬಾಯ್ಲರ್ ಬ್ಲಾಸ್ಟ್- ಗದ್ದೆಗೆ ಕೆಮಿಕಲ್ ನೀರು ನುಗ್ಗಿ ಲಕ್ಷಾಂತರ ರೂ. ನಷ್ಟ

    ಸಕ್ಕರೆ ಕಾರ್ಖಾನೆಯ ಫ್ರೀಜರ್ ಬಾಯ್ಲರ್ ಬ್ಲಾಸ್ಟ್- ಗದ್ದೆಗೆ ಕೆಮಿಕಲ್ ನೀರು ನುಗ್ಗಿ ಲಕ್ಷಾಂತರ ರೂ. ನಷ್ಟ

    ಮಂಡ್ಯ: ಸಕ್ಕರೆ ಕಾರ್ಖಾನೆಯಲ್ಲಿ ಫ್ರೀಜರ್ ಬಾಯ್ಲರ್ ಬ್ಲಾಸ್ಟ್ ಆದ ಪರಿಣಾಮ ಗದ್ದೆಗೆ ರಾಸಾಯನಿಕ ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

    ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪದಲ್ಲಿರುವ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಸುಮಾರು ಆರು ಲಕ್ಷ ಲೀಟರ್ ಸಾಮಥ್ರ್ಯದ ಬಾಯ್ಲರ್ ಬ್ಲಾಸ್ಟ್ ಆಗಿದೆ. ಸ್ಫೋಟದ ರಭಸಕ್ಕೆ ಪಕ್ಕದಲ್ಲಿ ಇದ್ದು ಕಾಂಪೌಂಡ್ ಗೋಡೆ ಛಿದ್ರವಾಗಿದೆ. ಬಾಯ್ಲರ್ ಅಕ್ಕಪಕ್ಕ ಸುಮಾರು 20 ಮೀಟರ್ ವ್ಯಾಪ್ತಿಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಈ ವೇಳೆ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದ ಪರಿಣಾಮ ಓರ್ವನಿಗಷ್ಟೇ ಗಾಯವಾಗಿದ್ದು ಭಾರೀ ದುರಂತ ತಪ್ಪಿದೆ.

    ಬಾಯ್ಲರ್ ಸ್ಪೋಟಗೊಂಡ ಪರಿಣಾಮ ಅದರೊಳಗಿದ್ದ ಡಿಸ್ಟಿಲರಿ ವಾಟರ್ ಕಾರ್ಖಾನೆ ಸುತ್ತಮುತ್ತಲ ಗದ್ದೆಗಳಿಗೆ ನುಗ್ಗಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ಬೆಳೆ ನಾಶವಾಗಿದೆ ಎಂದು ರೈತ ಉಮೇಶ್ ಪ್ರತಿಕ್ರಿಯಿಸಿದ್ದಾರೆ.

    ಗದ್ದೆಗೆ ಮಾತ್ರ ಅಲ್ಲದೇ ಕೆಮಿಕಲ್ ನೀರು ಶಿಂಷಾ ನದಿಗೆ ಹರಿದು ಹೋಗುತ್ತಿದ್ದು ಜಲಚರಗಳಿಗೂ ಕಂಟಕವಾಗುವ ಸಾಧ್ಯತೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv