Tag: ಕೆಫೆ

  • ಕೆನಡಾದಲ್ಲಿ ನಟ ಕಪಿಲ್ ಶರ್ಮಾ ಕೆಫೆ ಮೇಲೆ 3ನೇ ಬಾರಿ ಗುಂಡಿನ ದಾಳಿ

    ಕೆನಡಾದಲ್ಲಿ ನಟ ಕಪಿಲ್ ಶರ್ಮಾ ಕೆಫೆ ಮೇಲೆ 3ನೇ ಬಾರಿ ಗುಂಡಿನ ದಾಳಿ

    ಒಟ್ಟಾವಾ: ಕೆನಡಾದಲ್ಲಿರುವ (Canada) ನಟ ಕಪಿಲ್ ಶರ್ಮಾ (Kapil Sharma) ಕೆಫೆ ಮೇಲೆ ಮೂರನೇ ಬಾರಿ ಗುಂಡಿನ ದಾಳಿ ನಡೆದಿದೆ.

    ಗುರುವಾರ (ಅ.16) ಕೆನಡಾದ ಸರ್ರೆಯಲ್ಲಿರುವ ಕೆಫೆ ಮೇಲೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ.ಇದನ್ನೂ ಓದಿ:ಬೆಂಗಳೂರಲ್ಲಿ ಬೀದಿ ನಾಯಿ ಮೇಲೆ ಗ್ಯಾಂಗ್‌ ರೇಪ್‌; ನಶೆಯಲ್ಲಿದ್ದ ಕಾಮುಕರಿಂದ ಪೈಶಾಚಿಕ ಕೃತ್ಯ

    ಸಾಮಾಜಿಕ ಜಾಲತಾಣದಲ್ಲಿ ಗುಂಡಿನ ದಾಳಿಯ ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿಯೋರ್ವ ಕಾರಿನ ಕಿಟಕಿಯಿಂದ ಕೈ ಹೊರಗೆ ಹಾಕಿ ಹ್ಯಾಂಡ್‌ಗನ್‌ನಿಂದ ಗುಂಡು ಹಾರಿಸಿರುವುದು ಕಂಡುಬಂದಿದೆ. ಹಾರಿಸಿದ ಗುಂಡುಗಳು ಕೆಫೆಯ ಕಿಟಿಕಿ ಹಾಗೂ ಗೋಡೆಗೆ ತಾಗಿದೆ. ಗುಂಡಿನ ದಾಳಿ ನಡೆದ ಸಮಯದಲ್ಲಿ ಕೆಫೆಯೊಳಗೆ ಸಿಬ್ಬಂದಿಯಿದ್ದರು ಎಂದು ತಿಳಿದುಬಂದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಸದ್ಯ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ (Lawrence Bishnoi Gang) ಸಹಚರರಾದ ಕುಲ್ವೀರ್ ಸಿಧು ಮತ್ತು ಗೋಲ್ಡಿ ಧಿಲ್ಲೋನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡು ದಾಳಿಯ ಹೊಣೆ ಹೊತ್ತಿದ್ದಾರೆ.

    ನಮಗೆ ಸಾರ್ವಜನಿಕರ ವಿರುದ್ಧ ಯಾವುದೇ ದ್ವೇಷವಿಲ್ಲ. ಆದರೆ ನಮಗೆ ಮೋಸ ಮಾಡುವವರಿಗೆ ನಾವು ಎಚ್ಚರಿಕೆ ನೀಡುತ್ತೇವೆ. ಗುಂಡು ಎಲ್ಲಿಂದಾದರೂ ಬರಬಹುದು ನಮ್ಮ ಧರ್ಮದ ವಿರುದ್ಧ ಮಾತನಾಡುವ ಬಾಲಿವುಡ್ ವ್ಯಕ್ತಿಗಳು ಕೂಡ ಸಿದ್ಧರಾಗಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

    ಇದಕ್ಕೂ ಮುನ್ನ ಎರಡು ಬಾರೀ ಕಪಿಲ್ ಶರ್ಮಾ ಕೆಫೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಜು.9ರಂದು ಮೊದಲ ಬಾರೀ ಗುಂಡಿನ ದಾಳಿ ನಡೆದಾಗ ಜರ್ಮನಿ ಮೂಲದ ಬಿಕೆಐ ಉಗ್ರಗಾಮಿ ಹರ್ಜಿತ್ ಸಿಂಗ್ ಹಾಗೂ ಆ.7ಎಂದು ಎರಡನೇ ಬಾರೀ ನಡೆದಾಗ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಹೊಣೆ ಹೊತ್ತುಕೊಂಡಿತ್ತು.ಇದನ್ನೂ ಓದಿ: ವೈದ್ಯೆ ಕೃತಿಕಾ ಹತ್ಯೆ ಕೇಸ್ – 11 ತಿಂಗಳಿಂದ ಪತ್ನಿ ಹತ್ಯೆಗೆ ಸ್ಕೆಚ್ ಹಾಕಿದ್ದ ಕಿಲ್ಲರ್ ಪತಿ

  • ಸಲ್ಮಾನ್ ಖಾನ್‌ನ್ನು ಆಹ್ವಾನಿಸಿದ್ದಕ್ಕೆ ಕಪಿಲ್ ಶರ್ಮಾ ಕೆಫೆ ಮೇಲೆ ಶೂಟೌಟ್ – ಬಿಷ್ಣೋಯ್ ಗ್ಯಾಂಗ್‌ನದ್ದೇ ಎನ್ನಲಾದ ಆಡಿಯೋ ವೈರಲ್

    ಸಲ್ಮಾನ್ ಖಾನ್‌ನ್ನು ಆಹ್ವಾನಿಸಿದ್ದಕ್ಕೆ ಕಪಿಲ್ ಶರ್ಮಾ ಕೆಫೆ ಮೇಲೆ ಶೂಟೌಟ್ – ಬಿಷ್ಣೋಯ್ ಗ್ಯಾಂಗ್‌ನದ್ದೇ ಎನ್ನಲಾದ ಆಡಿಯೋ ವೈರಲ್

    ಒಟ್ಟಾವಾ: ಹಾಸ್ಯ ನಟ ಕಪಿಲ್ ಶರ್ಮಾ (Kapil Sharma) ಅವರ ಕೆನಡಾದ (Canada) ಕೆಫೆ ಮೇಲೆ ಗುಂಡಿನ ದಾಳಿ ನಡೆದ ಬೆನ್ನಲ್ಲೇ ಆಡಿಯೋವೊಂದು ವೈರಲ್ ಆಗಿದೆ. ಬಿಷ್ಣೋಯ್ ಗ್ಯಾಂಗ್‌ನ (Bishnoi Gang) ಹ್ಯಾರಿ ಬಾಕ್ಸರ್ ಎಂಬಾತನ ಆಡಿಯೋ ಇದಾಗಿದ್ದು, ನಟ ಸಲ್ಮಾನ್ ಖಾನ್‌ನ್ನು (Salman Khan) ಕೆಫೆ ಉದ್ಘಾಟನೆಗೆ ಆಹ್ವಾನಿಸಿದಕ್ಕಾಗಿ ಶೂಟೌಟ್ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

    ವೈರಲ್ ಆದ ಆಡಿಯೋದಲ್ಲಿ, ಕಪಿಲ್ ಶರ್ಮಾ ತಮ್ಮ ಕೆಫೆ ಉದ್ಘಾಟನೆಗೆ ಸಲ್ಮಾನ್ ಖಾನ್ ಅವರನ್ನು ಆಹ್ವಾನಿಸಿದ್ದಕ್ಕಾಗಿ ಗುಂಡಿನ ದಾಳಿ ನಡೆಸಲಾಗಿದೆ. ಅದಲ್ಲದೇ ಸಲ್ಮಾನ್ ಖಾನ್ ಜೊತೆಗೆ ಕೆಲಸ ಮಾಡುವ ಯಾವುದೇ ನಿರ್ದೇಶಕ, ನಿರ್ಮಾಪಕ ಅಥವಾ ಕಲಾವಿದರ ಎದೆಗೆ ಗುಂಡು ಹಾರಿಸುತ್ತೇವೆ. ನಾವು ಯಾರನ್ನೂ ಬಿಡುವುದಿಲ್ಲ. ಸಲ್ಮಾನ್ ಖಾನ್ ಜೊತೆ ಇರುವವರನ್ನು ಕೊಲ್ಲಲು ನಾವು ಯಾವ ಹಂತಕ್ಕೆ ಬೇಕಾದರೂ ಹೋಗುತ್ತೇವೆ. ನೆನಪಿರಲಿ, ನಿಮ್ಮ ಸಾವಿಗೆ ನೀವೇ ಕಾರಣರಾಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ:ಚುನಾವಣಾ ಆಯೋಗ ಬಿಜೆಪಿಯ ಬ್ರ್ಯಾಂಚ್‌ ಆಫೀಸ್‌: ಸಿದ್ದರಾಮಯ್ಯ

    ಆ.7ರಂದು ಬೆಳಗಿನ ಜಾವ 4:30ರ ಸುಮಾರಿಗೆ ಅಪರಿಚಿತ ವ್ಯಕ್ತಿಗಳು ಬಂದು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ 9 ರಿಂದ 10 ಗುಂಡುಗಳು ಕೆಫೆಯ ಗೋಡೆಗೆ ಹಾಗೂ ಕಿಟಿಕಿಗಳಿಗೆ ತಾಗಿವೆ. ಗುಂಡಿನ ಸದ್ದು ಕೇಳಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಕಪಿಲ್ ಶರ್ಮಾ ಕೆಫೆಯ ನಡೆದ ಎರಡನೇ ದಾಳಿ ಇದಾಗಿದೆ. ಸದ್ಯ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಗೋಲ್ಡಿ ಧಿಲ್ಲೋನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಗುಂಡಿನ ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ.

    ಜೂ.21ರಂದು ನೆಟ್‌ಫ್ಲಿಕ್ಸ್‌ನಲ್ಲಿ  ಪ್ರದರ್ಶನಗೊಂಡಿದ್ದ `ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನ ಸೀಸನ್-3ರ ಮೊದಲ ಎಪಿಸೋಡ್‌ನಲ್ಲಿ ಸಲ್ಮಾನ್ ಕಾಣಿಸಿಕೊಂಡಿದ್ದರು. ಕೆಫೆ ಉದ್ಘಾಟನೆಗಾಗಿ ಸಲ್ಮಾನ್ ಖಾನ್ ಅವರನ್ನು ಕಪಿಲ್ ಆಹ್ವಾನಿಸಿದ್ದರು. ಇದರ ಬೆನ್ನಲ್ಲೇ ಜು.10ರಂದು ಕೆಫೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಆ ಸಮಯದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ಜೀತ್ ಸಿಂಗ್ ಲಡ್ಡಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದ.ಇದನ್ನೂ ಓದಿ: ಒಂದು ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ 9 ಕೋಟಿ ಹಣ ಕಳೆದುಕೊಂಡ 80ರ ವೃದ್ಧ

  • ಕೋರಮಂಗಲ ಕೆಫೆಯಲ್ಲಿ ಅಗ್ನಿ ಅವಘಡ – 54 ಪಬ್‌ಗಳಿಗೆ ಬಿಬಿಎಂಪಿಯಿಂದ ಬೀಗ

    ಕೋರಮಂಗಲ ಕೆಫೆಯಲ್ಲಿ ಅಗ್ನಿ ಅವಘಡ – 54 ಪಬ್‌ಗಳಿಗೆ ಬಿಬಿಎಂಪಿಯಿಂದ ಬೀಗ

    ಬೆಂಗಳೂರು: ಕೋರಮಂಗಲದ (Koramangala) ಕೆಫೆಯಲ್ಲಿ ಅಗ್ನಿ (Fire) ಅವಘಡ ಸಂಭವಿಸಿದ ಬೆನ್ನಲ್ಲೇ ಬಿಬಿಎಂಪಿ (BBMP) ಆರೋಗ್ಯಾಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಇಲ್ಲಿಯವರೆಗೆ ನಗರದ 54 ಪಬ್‌ಗಳಿಗೆ (Pub) ಬೀಗ ಹಾಕಿದ್ದಾರೆ.

    ಬಿಬಿಎಂಪಿ ಅಧಿಕಾರಿಗಳು ನಗರದ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ 6 ದಿನಗಳಿಂದ ಒಟ್ಟು 1,058 ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಪರಿಶೀಲನೆ ನಡೆಸಿದ್ದಾರೆ. ಇದರಲ್ಲಿ 492 ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

    ಬುಧವಾರ ಒಂದೇ ದಿನ 234 ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಪರಿಶೀಲನೆ ನಡೆಸಿದ್ದು, ಅವುಗಳ ಪೈಕಿ 122 ಕ್ಕೆ ನೋಟಿಸ್ ನೀಡಿದೆ. 6 ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಬೀಗ ಹಾಕಿ ಬಂದ್ ಮಾಡಲಾಗಿದೆ. ಇದನ್ನೂ ಓದಿ: ಹುಲಿ ಉಗುರಿನ ಡಾಲರ್ ಹಾಕಿಕೊಂಡಿದ್ದ ಇಬ್ಬರು ಅರ್ಚಕರ ಬಂಧನ

    ಯಾವತ್ತು ಎಷ್ಟು ರೆಸ್ಟೋರೆಂಟ್‌ಗೆ ನೋಟಿಸ್?
    ಶುಕ್ರವಾರ (ಅ.20) – 12, ಶನಿವಾರ (ಅ.21) – 21, ಭಾನುವಾರ (ಅ.22) – 10, ಸೋಮವಾರ (ಅ.23) – 5, ಬುಧವಾರ (ಅ.25) – 6 ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗೆ ನೋಟಿಸ್ ನೀಡಿ ಬೀಗ ಜಡಿಯಲಾಗಿದೆ. ಇದನ್ನೂ ಓದಿ: `ಕೈ ಕಮಲ’ ಕ್ರೆಡಿಟ್ ಗಲಾಟೆ – ಬಿಜೆಪಿ ಶಾಸಕ ಚಾಲನೆ ನೀಡಿದ್ದ ಕಾಮಗಾರಿಗೆ ಮತ್ತೆ ಭೂಮಿ ಪೂಜೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೋರಮಂಗಲ ಕೆಫೆಯಲ್ಲಿ ಬೆಂಕಿ ಅವಘಡ ಪ್ರಕರಣ – ಮಾಲೀಕ ನಾಪತ್ತೆ

    ಕೋರಮಂಗಲ ಕೆಫೆಯಲ್ಲಿ ಬೆಂಕಿ ಅವಘಡ ಪ್ರಕರಣ – ಮಾಲೀಕ ನಾಪತ್ತೆ

    ಬೆಂಗಳೂರು: ನಗರದ ಕೋರಮಂಗಲ (Koramangala) ಕೆಫೆಯೊಂದರಲ್ಲಿ ನಡೆದ ಭಾರೀ ಬೆಂಕಿ (Fire) ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಕೆಫೆ ಮಾಲೀಕ ಸೇರಿದಂತೆ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೀಗ ಕೆಫೆ ಮಾಲೀಕ ದುರ್ಘಟನೆ ಬಳಿಕ ತಲೆಮರೆಸಿಕೊಂಡಿದ್ದಾನೆ.

    ಕೆಫೆ ಮಾಲೀಕ ಕರಣ್ ಜೈನ್ ಹಾಗೂ ಕಟ್ಟಡ ಮಾಲೀಕ ಕುಟಾಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಿರ್ಲಕ್ಷ್ಯದ ಆರೋಪದ ಹಿನ್ನೆಲೆ ಐಪಿಸಿ ಸೆಕ್ಷನ್ 338, 286 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಕರಣ್ ಜೈನ್ ನಾಪತ್ತೆಯಾಗಿದ್ದು, ತನ್ನ ಮೊಬೈಲ್ ಫೋನ್ ಅನ್ನು ಸ್ವಿಚ್‌ಆಫ್ ಮಾಡಿಕೊಂಡಿದ್ದಾನೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಾಗುತ್ತಿದ್ದಂತೆ ಕೆಫೆ ಮಾಲೀಕ ಕರಣ್ ಜೈನ್ ಹಾಗೂ ಕಟ್ಟಡದ ಮಾಲೀಕ ಕುಟಾಲ್‌ಗೆ ನೋಟಿಸ್ ನೀಡಿದ್ದಾರೆ.

    ಏನಿದು ಘಟನೆ?
    ಬುಧವಾರ ಕೋರಮಂಗಲದ ಬೃಹತ್ ಕಟ್ಟಡವೊಂದರ 4ನೇ ಅಂತಸ್ತಿನಲ್ಲಿದ್ದ ಮಡ್‌ಪೈಪ್ ಕೆಫೆ ಎಂಬ ರೆಸ್ಟೋರೆಂಟ್‌ನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ರೆಸ್ಟೋರೆಂಟ್‌ನಲ್ಲಿ ಜೋಶಿ, ಪ್ರೇಮ್ ಎನ್ನುವವರು ಅಡುಗೆ ಮಾಡುತ್ತಿದ್ದರು. ಈ ವೇಳೆ 15 ಸಿಲಿಂಡರ್‌ಗಳ ಪೈಕಿ 4 ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಇದನ್ನೂ ಓದಿ: ಟೆರರ್ ಫಂಡಿಂಗ್‍ಗೆ ಕಡಿವಾಣ – ವಿದೇಶಿ ವ್ಯವಹಾರದ ಮೇಲೆ ಕೇಂದ್ರ ಕಣ್ಣು

    ತಕ್ಷಣವೇ ಪ್ರೇಮ್ ಕಟ್ಟಡದ 4ನೇ ಮಹಡಿಯಿಂದ ಜಿಗಿದಿದ್ದಾನೆ. ಬೆಂಕಿ ಅದೇ ಕಟ್ಟಡದಲ್ಲಿದ್ದ ಜಿಮ್ ಹಾಗೂ ಕಾರ್ ಶೋ ರೂಮ್‌ಗೂ ವ್ಯಾಪಿಸಿದೆ. 4 ಬೈಕ್‌ಗಳು ಭಸ್ಮ ಆದರೆ, ಶೋರೂಮ್‌ನ 1 ಕಾರು ಅರ್ಧಂಬರ್ಧ ಸುಟ್ಟುಹೋಗಿದೆ. 6 ಅಗ್ನಿಶಾಮಕ ವಾಹನಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದೆ.

    4ನೇ ಮಹಡಿಯಿಂದ ಜಿಗಿದಿದ್ದ ಪ್ರೇಮ್ ತಲೆಗೆ ಗಂಭೀರ ಗಾಯವಾಗಿದ್ದು, ಕೈ ಮುರಿದು ಹೋಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಪ್ರೇಮ್‌ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಡಿಕೆಶಿ ಹಸ್ತಕ್ಷೇಪಕ್ಕೆ ಸತೀಶ್ ಕಿಡಿ – ಕಾಂಗ್ರೆಸ್‌ಗೂ ಬೆಳಗಾವಿ ರಾಜಕೀಯ ಕಂಟಕನಾ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಷ್ಯಾ ಕೆಫೆಯಲ್ಲಿ ಬೆಂಕಿ ಅವಘಡ – 13 ಸಾವು, 250 ಮಂದಿ ಸ್ಥಳಾಂತರ

    ರಷ್ಯಾ ಕೆಫೆಯಲ್ಲಿ ಬೆಂಕಿ ಅವಘಡ – 13 ಸಾವು, 250 ಮಂದಿ ಸ್ಥಳಾಂತರ

    ಮಾಸ್ಕೋ: (Mascow) ರಷ್ಯಾದ ಕೊಸ್ಟ್ರೋಮಾ ನಗರದ ಕೆಫೆಯಲ್ಲಿ (Russia Cafe Fire) ಸಂಭವಿಸಿದ ಬೆಂಕಿ ಅವಘಡದಲ್ಲಿ 13 ಮಂದಿ ಸಾವಿಗೀಡಾಗಿದ್ದು, ಅವಘಡದಲ್ಲಿ ಸಿಲುಕಿದ್ದ 250ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

    ಶುಕ್ರವಾರ ರಾತ್ರಿ ನಡೆದ ಬೆಂಕಿ ದುರಂತಕ್ಕೆ 13 ಜನರು ಬಲಿಯಾಗಿದ್ದಾರೆ ಎಂಬುದು ಪ್ರಾಥಮಿಕ ವರದಿ ಮಾಹಿತಿಯಿಂದ ತಿಳಿದುಬಂದಿದೆ ಎಂದು ಸ್ಥಳೀಯ ಗವರ್ನರ್ ಸೆರ್ಗೆಯ್ ಸಿಟ್ನಿಕೋವ್ ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತವನ್ನು ನೋಡಿ.. ಅಲ್ಲಿ ಪ್ರತಿಭಾವಂತರಿದ್ದಾರೆ: ಪುಟಿನ್ ಬಣ್ಣನೆ

    ಮಾಸ್ಕೋದ ಈಶಾನ್ಯಕ್ಕೆ ಸುಮಾರು 300 ಕಿಲೋಮೀಟರ್ ದೂರದಲ್ಲಿರುವ ನಗರದಲ್ಲಿ ರಾತ್ರಿ ಬೆಂಕಿ ಹೊತ್ತಿಕೊಂಡಾಗ ಕಟ್ಟಡದಿಂದ 250 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.

    ಘಟನೆಯಲ್ಲಿ ಕನಿಷ್ಠ ಐದು ಜನರು ಗಾಯಗೊಂಡಿದ್ದಾರೆ. ಆದರೆ ಅವರನ್ನು ಆಸ್ಪತ್ರೆಗೆ ಸೇರಿಸುವ ಅಗತ್ಯವಿಲ್ಲ. ಬೆಂಕಿಯು 3,500 ಚದರ ಮೀಟರ್‌ಗೆ ವ್ಯಾಪಿಸಿತ್ತು. ರಕ್ಷಣಾ ಪಡೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದೆ ಎಂದು ಸಿಟ್ನಿಕೋವ್‌ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭಾರತವನ್ನ ಸೋಲಿಸಿದ್ರೆ ಜಿಂಬಾಬ್ವೆ ಹುಡುಗನನ್ನ ಮದ್ವೆ ಆಗ್ತೀನಿ – ಪಾಕ್ ನಟಿ ಬಂಪರ್ ಆಫರ್

    Live Tv
    [brid partner=56869869 player=32851 video=960834 autoplay=true]

  • ಕೆಫೆ ಮುಂದೆ ಕ್ಯಾಮೆರಾಗೆ ಹಾಟ್ ಪೋಸ್ ನೀಡಿದ ಮೌನಿ ರಾಯ್

    ಕೆಫೆ ಮುಂದೆ ಕ್ಯಾಮೆರಾಗೆ ಹಾಟ್ ಪೋಸ್ ನೀಡಿದ ಮೌನಿ ರಾಯ್

    ಮುಂಬೈ: ಬಾಲಿವುಡ್ ನಟಿ ಮೌನಿ ರಾಯ್ ತಮ್ಮ ಗೆಳತಿ ಜೊತೆ ಮುಂಬೈ ಬಾಂದ್ರಾದಲ್ಲಿರುವ ಕೆಫೆಯೊಂದರ ಬಳಿ ಕಾಣಿಸಿಕೊಂಡಿದ್ದಾರೆ. ಕಾರಿನಿಂದ ಬಂದ ಮೌನಿ ರಾಯ್ ವೈಟ್ ಕಲರ್ ಶಾರ್ಟ್ ಸ್ಲೀವ್ಸ್ ಲೆಸ್ ಟಾಪ್, ಕ್ರೀಮ್ ಕಲರ್ ಪ್ಯಾಂಟ್, ಸಿಂಪಲ್ ಚೈನ್, ಹಾಗೂ ಬ್ಲಾಕ್ ಕಲರ್ ಗೋಗಾಲ್ ಧರಿಸಿದ್ದರು.

    Mouni Roy

    ಕಾರಿನಿಂದ ಕೆಳಗಿಳಿದು ಕೂಡಲೇ ಡೋರ್ ಹಾಕಿ ಮುಂಗುರುಳು ಸರಿಪಡಿಸಿಕೊಳ್ಳುತ್ತಾ ಹೇರ್ ಫ್ರೀ ಹೇರ್ ಬಿಟ್ಟಿದ್ದ ಮೌನಿ ರಾಯ್ ಬಹಳ ಮುದ್ದು ಮುದ್ದಾಗಿ ಕಾಣುತ್ತಿದ್ದರು. ಇದನ್ನೂ ಓದಿ: ಇಷ್ಟಾರ್ಥ ನೆರವೇರಿಸಿದ ಕೊರಗಜ್ಜನಿಗೆ ಹರಕೆ ಸಲ್ಲಿಸಿದ ಕ್ರೇಜಿ ಕ್ವೀನ್ ದಂಪತಿ

    Mouni Roy

    ಈ ಎಲ್ಲದರ ಮಧ್ಯೆ ಮೌನಿ ರಾಯ್ ಬ್ಲಾಕ್ ಕಲರ್ ಮಾಸ್ಕ್ ತೊಟ್ಟು ಕೊರೊನಾ ನಿಯಮವನ್ನು ಕೂಡ ಪಾಲಿಸಿದರು. ಇದನ್ನೂ ಓದಿ: ಸಲ್ವಾರ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದ ಕೆಜಿಎಫ್ ಬೆಡಗಿ ಮೌನಿ ರಾಯ್

    Mouni Roy

    ನಂತರ ಗೆಳತಿ ಕೈ ಹಿಡಿದುಕೊಂಡು ಮುಂದೆ ಸಾಗಿದ ಮೌನಿ ರಾಯ್ ಕೆಫೆ ಮುಂಭಾಗ ಕ್ಯಾಮೆರಾಗೆ ಸಖತ್ ಹಾಟ್ ಆಗಿ ಪೋಸ್ ನೀಡಿದ್ದಾರೆ. ಇದೇ ವೇಳೆ ಕೆಫೆ ಒಳಗೆ ಸಂಕೋಚದಿಂದ ಹೋಗುತ್ತಿದ್ದ ಗೆಳತಿಯನ್ನು ತಡೆದು ಪ್ರೀತಿಯ ಸ್ನೇಹಿತೆ ಜೊತೆ ಕ್ಯಾಮೆರಾಗೆ ಹಾಟ್ ಆಗಿ ಪೋಸ್ ನೀಡಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಬೆಡಗಿ ಮೌನಿರಾಯ್‍ಗೆ ಮದುವೆ

    Mouni Roy

    ಸ್ಯಾಂಡಲ್‍ವುಡ್ ಸೂಪರ್ ಹಿಟ್ ಸಿನಿಮಾ ಕೆಜಿಎಫ್ ಹಿಂದಿ ವರ್ಶನ್‍ನಲ್ಲಿ ಗಲಿ ಗಲಿ ಎಂಬ ಐಟಂ ಸಾಂಗ್‍ಗೆ ಮೌನಿ ರಾಯ್ ನಟ ರಾಕಿಂಗ್ ಸ್ಡಾರ್ ಯಶ್ ಜೊತೆ ಹೆಜ್ಜೆ ಹಾಕಿದ್ದರು. ಇನ್ನೂ ಈ ಹಾಡು ಹಿಂದಿಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಇದನ್ನೂ ಓದಿ: ಕೆಜಿಎಫ್ ನಟಿ ಮೌನಿ ರಾಯ್ ಹಾಟ್ ಲುಕ್‍ಗೆ ನೆಟ್ಟಿಗರು ಫಿದಾ

    Mouni Roy

    ಇತ್ತೀಚೆಗಷ್ಟೇ ಮೌನಿ ರಾಯ್ ಅವರು ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಜೊತೆ ರಿಲೇಶನ್‍ಶಿಪ್‍ನಲ್ಲಿದ್ದಾರೆ. ಈ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಾಗಲಿ ಅಥವಾ ಮಾಧ್ಯಮದ ಎದುರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅವರು ಹೇಳಿಕೊಂಡಿಲ್ಲ. ಆದರೆ ಅವರ ಪ್ರೇಮ ವಿಚಾರ ಬಿಟೌನ್‍ನಲ್ಲಿ ಹರಿದಾಡುತ್ತಿದ್ದು, ಜನವರಿಯಲ್ಲಿ ಮೌನಿ ಅವರು ವಿವಾಹವಾಗಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ.

    https://www.youtube.com/watch?v=i2abGi7yQBw

  • ಕಾಫಿ ಕೆಫೆಯೊಂದರಲ್ಲಿ ಮಂಗ್ಳೂರು ಜೋಡಿಯ ಚುಮ್ಮಾ…ಚುಮ್ಮಾ

    ಕಾಫಿ ಕೆಫೆಯೊಂದರಲ್ಲಿ ಮಂಗ್ಳೂರು ಜೋಡಿಯ ಚುಮ್ಮಾ…ಚುಮ್ಮಾ

    ಮಂಗಳೂರು: ಕಾಫಿ ಕೆಫೆಯೊಂದರಲ್ಲಿ ಯುವಕನೊಬ್ಬ ಯುವತಿಗೆ ಓಪನ್ನಾಗಿ ಕಿಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ,

    ಇಬ್ಬರು ಕೆಫೆಯಲ್ಲಿ ಏನೋ ಮಾತನಾಡುತ್ತಾ ಯುವಕ ಯುವತಿಯನ್ನು ಹತ್ತಿರಕ್ಕೆಳೆದುಕೊಂಡು ಕಿಸ್ ಮಾಡಿದ್ದಾನೆ. ಎಲ್ಲಿ ನಡೆದಿರುವುದು ಅನ್ನೋದು ಇನ್ನೂ ದೃಢಪಟ್ಟಿಲ್ಲ. ಆದರೆ ಮಂಗಳೂರಿನ ಯಾವುದೋ ಕಾಫ್ ಶಾಪ್ ನಲ್ಲಿ ನಡೆದಿದೆ ಅನ್ನುವಂತೆ ಈ ವಿಡಿಯೋ ಶೇರ್ ಆಗುತ್ತಿದೆ.

    ಮೇಲ್ನೋಟಕ್ಕೆ ಇವರಿಬ್ಬರು ಲವರ್ ಆಗಿರುವಂತೆ ಕಾಣುತ್ತಿದೆ. ಆದರೆ ಯುವತಿ ಯಾವುದೋ ಕಾಲೇಜು ವಿದ್ಯಾರ್ಥಿನಿಯಂತೆ ತೋರುತ್ತಿದ್ದು ಕಾಲೇಜು ಆಸುಪಾಸಿನ ಕೆಫೆಯಲ್ಲಿ ನಡೆದಿರುವ ಸಾಧ್ಯತೆಯಿದೆ.

    ವಿಡಿಯೋದಲ್ಲಿರುವ ಯುವತಿ ಕಾಲೇಜಿನ ಸಮವಸ್ತ್ರ ಧರಿಸಿದ್ದು, ಯಾವ ಕಾಲೇಜಿನ ವಿದ್ಯಾರ್ಥಿನಿ ಎನ್ನುವುದು ತಿಳಿದುಬಂದಿಲ್ಲ. ಕೆಫೆ ಕ್ಯಾಂಪಸ್ ನಿಂದ ಹೊರಗಡೆ ಇದ್ದಿದ್ದರಿಂದ ಇಬ್ಬರೂ ರಾಜರೋಷವಾಗಿ ಕಿಸ್ಸಿಂಗ್ ಮಾಡಿದ್ದಾರೆ. ಈ ಜೋಡಿ ಪ್ರತಿದಿನ ಈ ಕೆಫೆಗೆ ಬರುತ್ತಿದ್ದನ್ನು ಗಮನಿಸಿದ ಪರಿಚಯಸ್ಥರೇ ಈ ವಿಡಿಯೋ ಮಾಡಿ ಹರಿಬಿಟ್ಟಿರಬಹುದು ಎಂದು ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ.

    https://youtu.be/iLK9l3jUTEo

  • ಮಾಲೀಕನ ಈ ಸೂಪರ್ ಐಡಿಯಾದಿಂದ ವರ್ಲ್ಡ್ ಫೇಮಸ್ ಆಯ್ತು ಕೆಫೆ

    ಮಾಲೀಕನ ಈ ಸೂಪರ್ ಐಡಿಯಾದಿಂದ ವರ್ಲ್ಡ್ ಫೇಮಸ್ ಆಯ್ತು ಕೆಫೆ

    ಸ್ಯಾನ್ ಫ್ರಾನ್ಸಿಸ್ಕೋ: ಹೋಟೆಲ್ ಗಳು ಬರೀ ತಿಂಡಿ ತಿನಿಸುಗಳನ್ನು ಮಾಡಿದ್ರೆ ಸಾಲದು, ಜನರನ್ನು ಹೇಗೆ ಆಕರ್ಷಿಸಿಕೊಳ್ಳಬೇಕು. ಜನರನ್ನು ಆಕರ್ಷಿಸಲೆಂದೇ ಈಗ ಅಮೆರಿಕದ ಕೆಫೆಯೊಂದು ಸಖತ್ ಪ್ಲಾನ್ ಮಾಡಿದ್ದು ಯಶಸ್ವಿಯಾಗಿದೆ.

    ಹೌದು, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗಾರ್ತ್ ಹೊನಾರ್ಟ್ ಎಂಬವರು ಇಲಿಗಳ ಹೋಟೆಲ್ ನಿರ್ಮಿಸಿದ್ದಾರೆ. ಇಲಿಗಳ ಹೋಟೆಲ್ ಎನ್ನುವ ಕಾರಣಕ್ಕೆ ಇಲಿಮಾಂಸವನ್ನು ನೀಡುತ್ತಾರೆ ಎಂದು ನೀವು ಊಹಿಸಿದರೆ ತಪ್ಪಾದಿತು. ಕೆಫೆಯಲ್ಲಿ ಇಲಿಗಳು ಗ್ರಾಹಕರನ್ನು ಬರಮಾಡಿಕೊಳ್ಳುತ್ತವೆ. ಹಾಗೆ ಇಲ್ಲಿ ಗ್ರಾಹಕರೊಂದಿಗೆ ಪ್ರೀತಿಯಿಂದ ಬೆರೆಯುತ್ತವೆ ಎಂದು ಗಾರ್ತ್ ಹೊನಾರ್ಟ್ ಹೇಳುತ್ತಾರೆ.

    ಈ ಇಲಿಗಳಿಂದ ಯಾವುದೇ ಅಪಾಯವಿಲ್ಲ. ಇವುಗಳಿಂದ ಕಾಯಿಲೆ ಕೂಡಾ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುಲಾಗಿದೆ ಎಂದು ತಿಳಿಸಿದ್ದಾರೆ.

    ಇದು ಮೊನ್ನೆಯಷ್ಟೇ ಶುರುವಾದ ರ್ಯಾಟ್ ಕೆಫೆ ಈಗ ವರ್ಲ್ಡ್ ಫೇಮಸ್ ಯಾಗಿದೆ. ಇದು ಏಷ್ಯಾದ ಕೆಲವು ಪ್ರಾಂತ್ಯಗಳಲ್ಲಿ ಮತ್ತು ಅಮೆರಿಕ, ಯೂರೋಪಿನಲ್ಲಿ ಈ Rat Cafeನ್ನು ಪ್ರಾರಂಭಮಾಡಲಾಗಿದೆ. ಈ ಇಲಿಗಳ ಜೊತೆ ಬೆಕ್ಕುಗಳು ಕೂಡಾ ಇರುತ್ತವೆ ಎನ್ನುವುದು ವಿಶೇಷವಾಗಿದೆ.

    https://twitter.com/TheSFDungeon/status/880893747520786432?ref_src=twsrc%5Etfw&ref_url=http%3A%2F%2Fwww.ndtv.com%2Foffbeat%2Fat-san-franciscos-rat-cafe-you-dine-as-rodents-run-free-only-for-50-1719691