Tag: ಕೆನ್ನೆ

  • ನಟಿ ಶ್ರೀಲೀಲಾಗೆ ಕೆನ್ನೆಗೆ ಬಾರಿಸಿದ ಬಾಲಯ್ಯ: ಏನಿದು ಗುಸು ಗುಸು?

    ನಟಿ ಶ್ರೀಲೀಲಾಗೆ ಕೆನ್ನೆಗೆ ಬಾರಿಸಿದ ಬಾಲಯ್ಯ: ಏನಿದು ಗುಸು ಗುಸು?

    ತೆಲುಗಿನ (Telugu) ಖ್ಯಾತ ನಟ ಬಾಲಯ್ಯ ನಟನೆಯ ಹೊಸ ಸಿನಿಮಾದಲ್ಲಿ ಕನ್ನಡತಿ ಶ್ರೀಲೀಲಾ (Srileela) ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣದಲ್ಲೂ ಅವರು ಪಾಲ್ಗೊಂಡಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ಶ್ರೀಲೀಲಾಗೆ ಬಾಲಯ್ಯ ಕೆನ್ನೆಗೆ ಬಾರಿಸಿದರು ಎನ್ನುವ ಸುದ್ದಿ ಸಖತ್ ಚರ್ಚೆಗೆ ಕಾರಣವಾಗಿದೆ.

    ಬಾಲಯ್ಯ (Balayya) ಸಖತ್ ಕೋಪಿಷ್ಠ ಎನ್ನುವುದು ಪದೇ ಪದೇ ಸಾಬೀತಾಗಿದೆ. ಚಿತ್ರೀಕರಣದ ಸ್ಥಳದಲ್ಲಿ ಬಾಲಯ್ಯ ಯಾವತ್ತಿಗೂ ಗರಂ ಆಗಿರುತ್ತಾರೆ ಎನ್ನುವುದು ಹಲವು ಘಟನೆಗಳು ನೆನಪಿಸುತ್ತವೆ. ಆದರೆ, ಅವರು ಈವರೆಗೂ ನಟಿಯರ ಮೇಲೆ ಕೈ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ನಟಿಯೊಬ್ಬರ ಮೇಲೆ ಬಾಲಯ್ಯ ಕೈ ಮಾಡಿದ್ದಾರೆ ಎನ್ನುವುದು ಹಾಟ್ ಟಾಪಿಕ್. ಇದನ್ನೂ ಓದಿ:‘RRR’ ರೈಟರ್ ವಿಜೇಂದ್ರ ಪ್ರಸಾದ್‌ ಜೊತೆ ಕೇದರನಾಥ್‌ಗೆ ಕಂಗನಾ ಭೇಟಿ

    ಶೂಟಿಂಗ್ ಸ್ಥಳದಲ್ಲಿ ಇದ್ದವರ ಮಾಹಿತಿ ಪ್ರಕಾರ, ಅದು ಕೋಪದಿಂದ ಹೊಡೆದ ಘಟನೆಯಲ್ಲವಂತೆ. ಅಂಥದ್ದೊಂದು ದೃಶ್ಯ ಸಿನಿಮಾದಲ್ಲಿತ್ತು ಎಂದು ಹೇಳಲಾಗುತ್ತಿದೆ. ಬಾಲಯ್ಯ ಕುಟುಂಬದ ಸೊಸೆಯಾಗಿ ಶ್ರೀಲೀಲಾ ನಟಿಸುತ್ತಿದ್ದಾರೆ. ಸೊಸೆಯನ್ನು ಹೊಡೆಯುವಂತಹ ಸನ್ನಿವೇಶ ಅದಾಗಿತ್ತು ಎಂದು ಹೇಳಲಾಗುತ್ತಿದೆ.

    ಅಷ್ಟಕ್ಕೂ ಶ್ರೀಲೀಲಾ ಅವರೇ ದೃಶ್ಯ ನೈಜವಾಗಿ ಬರಲಿ ಎನ್ನುವ ಕಾರಣಕ್ಕಾಗಿ ಜೋರಾಗಿ ಕೆನ್ನೆಗೆ ಬಾರಿಸಿ ಎಂದು ಬಾಲಯ್ಯನವರನ್ನು ಕೇಳಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಇದರಲ್ಲಿ ಯಾವುದು ನಿಜವೋ ಯಾವುದು ಸುಳ್ಳು ಎನ್ನುವುದನ್ನು ಅವರೇ ಸ್ಪಷ್ಟ ಪಡಿಸಬೇಕು.

  • ತಮ್ಮ ಕ್ಷೇತ್ರದ ರಸ್ತೆಯನ್ನು ಹೇಮಾಮಾಲಿನಿ ಕೆನ್ನೆಗೆ ಹೋಲಿಕೆ – ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಿದ ಸಚಿವ

    ತಮ್ಮ ಕ್ಷೇತ್ರದ ರಸ್ತೆಯನ್ನು ಹೇಮಾಮಾಲಿನಿ ಕೆನ್ನೆಗೆ ಹೋಲಿಕೆ – ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಿದ ಸಚಿವ

    ಮುಂಬೈ: ಬಾಲಿವುಡ್ ನಟಿ ಹೇಮಾಮಾಲಿನಿ ಅವರ ಕೆನ್ನೆಯನ್ನು ಜಲಗಾಂವ್ ಜಿಲ್ಲೆಯ ತಮ್ಮ ಕ್ಷೇತ್ರದ ರಸ್ತೆಗಳಿಗೆ ಹೋಲಿಸುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಹಾರಾಷ್ಟ್ರದ ಸಚಿವ ಮತ್ತು ಶಿವಸೇನೆಯ ಹಿರಿಯ ನಾಯಕ ಗುಲಾಬ್ ರಾವ್ ಪಾಟೀಲ್ ಇದೀಗ ಕ್ಷಮೆಯಾಚಿಸಿದ್ದಾರೆ.

    ಉತ್ತರ ಮಹಾರಾಷ್ಟ್ರದ ತಮ್ಮ ಜಿಲ್ಲೆಯ ಬೋದ್ವಾಡ್ ನಗರ ಪಂಚಾಯತ್ ಚುನಾವಣೆಯ ಸಭೆಯನ್ನುದ್ದೇಶಿಸಿ ಗುಲಾಬ್ ರಾವ್ ಪಾಟೀಲ್ ಅವರು ಶನಿವಾರ ಭಾಷಣ ಮಾಡಿದ್ದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಭಾಷಣದ ವೇಳೆ ಗುಲಾಬ್ ರಾವ್ ಪಾಟೀಲ್ ಅವರು ತಮ್ಮ ಕ್ಷೇತ್ರದ ರಸ್ತೆಗಳ ಗುಣಮಟ್ಟ ಎಷ್ಟಿದೆ ಎಂಬುವುದನ್ನು ತಮ್ಮ ವಿರೋಧಿಗಳಿಗೆ ಒಮ್ಮೆ ಭೇಟಿ ನೀಡಿ ನೋಡುವಂತೆ ತಿಳಿಸಿದ್ದರು.  ಇದನ್ನೂ ಓದಿ: ಕರ್ನಾಟಕದಲ್ಲಿ ಮರಾಠಿಗರ ಮೇಲೆ ದಾಳಿ ನಡೆಯುತ್ತಿದೆ – ಸುಳ್ಳು ಆರೋಪ ಹೊರಿಸಿದ ಉದ್ಧವ್ ಠಾಕ್ರೆ

     

    30 ವರ್ಷಗಳಿಂದ ಶಾಸಕನಾಗಿರುವ ನನ್ನ ಕ್ಷೇತ್ರಕ್ಕೆ ಬಂದು ಒಮ್ಮೆ ರಸ್ತೆ ನೋಡಿ. ಅದು ಹೇಮಾಮಾಲಿನಿ ಅವರ ಕೆನ್ನೆಯಂತೆ ಇಲ್ಲದಿದ್ದರೆ, ನಾನು ರಾಜೀನಾಮೆ ನೀಡುತ್ತೇನೆ ಮತ್ತು ನೀರು ಸರಬರಾಜು ಮತ್ತು ನೈರ್ಮಲ್ಯ ಬಗ್ಗೆ ಕೂಡ ಮಾತನಾಡಿದ್ದರು. ಇನ್ನೂ ಈ ಮಾತನ್ನು ಹಲವಾರು ವರ್ಷಗಳಿಂದ ಜಲಗಾಂವ್‍ನಿಂದ ಶಾಸಕರಾಗಿದ್ದ ಮಾಜಿ ಬಿಜೆಪಿ ನಾಯಕ ಏಕನಾಥ್ ಖಾಡ್ಸೆ ಅವರನ್ನು ಗುರಿಯಾಗಿಸಿಕೊಂಡು ಹೇಳಿದ್ದರು.

    ಈ ಹೇಳಿಕೆ ಕುರಿತಂತೆ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು ಮತ್ತು ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.  ಇದನ್ನೂ ಓದಿ: ಶಿವಾಜಿ ಪ್ರತಿಮೆಗೆ ಮಸಿ – ರಣಧೀರ ಪಡೆಯ 7 ಜನರ ಬಂಧನ

    rupali chakankar

    ಇದಾದ ಕೆಲವೇ ಗಂಟೆಗಳಲ್ಲಿ ಗುಲಾಬ್ ರಾವ್ ಪಾಟೀಲ್ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ. ಈ ಕುರಿತಂತೆ ಧುಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾರನ್ನೂ ನೋಯಿಸುವ ಉದ್ದೇಶವನ್ನು ಹೊಂದಿರಲಿಲ್ಲ. ನನ್ನ ಹೇಳಿಕೆಗೆ ಕ್ಷಮೆಯಾಚಿಸುತ್ತೇನೆ. ನಾನು ಛತ್ರಪತಿ ಶಿವಾಜಿ ಮಹಾರಾಜರನ್ನು ಆರಾಧಿಸುವ ಶಿವಸೇನೆಗೆ ಸೇರಿದವನು. ಮಹಿಳೆಯರನ್ನು ಗೌರವಿಸುವುದನ್ನು ಪಕ್ಷದ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ನಮಗೆ ಕಲಿಸಿದ್ದಾರೆ ಎಂದು ತಿಳಿಸಿದರು.

  • ಬಾಲಕನ ಕೆನ್ನೆಯ ಮೇಲೆ ಮೂಡಿದೆ ಕರ್ನಾಟಕ ಭೂಪಟದ ಮಚ್ಚೆ

    ಬಾಲಕನ ಕೆನ್ನೆಯ ಮೇಲೆ ಮೂಡಿದೆ ಕರ್ನಾಟಕ ಭೂಪಟದ ಮಚ್ಚೆ

    ಕೊಡಗು: ಬಾಲಕನ ಕೆನ್ನೆಯ ಮೇಲೆ ಕರ್ನಾಟಕ ಭೂಪಟದ ಮಚ್ಚೆ ಮೂಡಿದೆ. ಬಾಲಕನ ಕೆನ್ನೆಯ ಮೇಲೆ ಕರ್ನಾಟಕದ ಆಕೃತಿ ಕಂಡ ಜಿಲ್ಲೆಯ ಜನ ಹಾಗೂ ಸ್ನೇಹಿತರು ಆಶ್ಚರ್ಯಚಕಿತರಾಗಿದ್ದಾರೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದ ಗುಮ್ಮನ ಕೊಲ್ಲಿಯ ನಿವಾಸಿ ದೇವರಾಜು ಹಾಗೂ ಪವಿತ್ರ ದಂಪತಿಯ ಪುತ್ರನ ಕೆನ್ನೆಯ ಮೇಲೆ ನಕ್ಷೆ ಮೂಡಿದೆ. ನಾಲ್ಕನೇ ತರಗತಿಯಲ್ಲಿರುವ ಓದುತ್ತಿರುವ ಶಶಾಂಕನಿಗೆ ಹುಟ್ಟಿದಾಗಿನಿಂದಲೇ ತನ್ನ ಎಡಬದಿಯ ಕೆನ್ನೆಯ ಮೇಲೆ ಕರ್ನಾಟಕದ ಆಕೃತಿಯ ವಿಸ್ಮಯಕಾರಿ ಮಚ್ಚೆ ಮೂಡಿ ಬರುತ್ತಿದೆ.

    ದೇವರಾಜು ಪವಿತ್ರ ದಂಪತಿಯ ಪುತ್ರ ಶಶಾಂಕನಿಗೆ ಹುಟ್ಟಿದಾಗನಿಂದಲೂ ಮುಖದ ಮೇಲೆ ಮಚ್ಚೆ ಇತ್ತು. ಅದು ನಂತರ ಬಾಲಕ ಬೆಳೆಯುತ್ತಾ ಕರ್ನಾಟಕದ ಭೂಪಟವು ಹೋಲುವಂತೆ ಕಾಣಿಸುತ್ತಿದೆ. ಪ್ರತಿನಿತ್ಯ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿ ಆ ಮುಖದಲ್ಲಿ ಕರ್ನಾಟಕದ ಭೂಪಟ ವನ್ನು ಕಂಡು ಖುಷಿ ಪಡುವ ಶಶಾಂಕನಿಗೆ ಶಾಲೆಯ ಗೆಳೆಯರು ಹಾಗೂ ಶಿಕ್ಷಕರು ಸಂತೋಷ ವ್ಯಕ್ತಪಡಿಸುತ್ತಾರೆ.

  • ಪತಿ-ಪತ್ನಿ ಜಗಳ ನೋಡಿ ನಕ್ಕಿದಕ್ಕೆ ಕೆನ್ನೆಯನ್ನೇ ಕತ್ತರಿಸಿದ!

    ಪತಿ-ಪತ್ನಿ ಜಗಳ ನೋಡಿ ನಕ್ಕಿದಕ್ಕೆ ಕೆನ್ನೆಯನ್ನೇ ಕತ್ತರಿಸಿದ!

    ನವದೆಹಲಿ: ಪತಿ-ಪತ್ನಿ ಜಗಳ ಮಾಡುತ್ತಿದ್ದಾಗ ನೋಡಿ ನಕ್ಕಿದ ಯುವಕನೋರ್ವನ ಎರಡು ಕನ್ನೆಯನ್ನೇ ಪತಿರಾಯ ಕತ್ತರಿಸಿದ ಭಯಾನಕ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

    ದೆಹಲಿಯ ಕಲ್ಯಾಣನಗರದ ನಿವಾಸಿ ಕುಮಾಲ್(17) ಗಾಯಗೊಂಡ ಯುವಕ. ಕಲ್ಯಾಣನಗರದಲ್ಲಿ ಗುರುವಾರದಂದು ದಂಪತಿ ಜಗಳವಾಡುತ್ತಿದ್ದರು. ಈ ವೇಳೆ ಸ್ಥಳದಲ್ಲಿದ್ದ ಯುವಕ ಅವರಿಬ್ಬರ ಜಗಳ ನೋಡಿ ನಕ್ಕಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಪತಿರಾಯ ಯುವಕನ ಮೇಲೆ ಹಲ್ಲೆ ಮಾಡಿದ್ದಾನೆ.

    ಯುವಕನನ್ನು ಮರುದಿನ ಪಾರ್ಕಿಗೆ ಕರೆದುಕೊಂಡು ಹೋದ ಆರೋಪಿ, ನಿನ್ನೆ ನೀನು ನಮ್ಮ ಜಗಳ ನೋಡಿ ನಗುತ್ತಿದ್ದೆ. ನನ್ನ ಪತ್ನಿ ಜೊತೆ ಜಗಳವಾಡಿದರೆ ನೀನೇಕೆ ನಕ್ಕಿದ್ದು ಎಂದು ಪ್ರಶ್ನಿಸಿ, ನಮ್ಮನ್ನ ನೋಡಿ ನಕ್ಕಿದ್ದಕ್ಕೆ ನಿನಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಹೇಳಿದ್ದಾನೆ. ಬಳಿಕ ಏಕಾಏಕಿ ಯುವಕನ ಮೇಲೆ ಹಲ್ಲೆ ನಡೆಸಿ ಆತನ ಎರಡೂ ಕೆನ್ನೆಯನ್ನು ಬ್ಲೇಡ್ ನಿಂದ ಕತ್ತರಿಸಿ ಕ್ರೌರ್ಯ ಮೆರೆದಿದ್ದಾನೆ.

    ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಹಾಗೆಯೇ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು ಬಲೆ ಬೀಸಿದ್ದಾರೆ.