Tag: ಕೆನಡಾ

  • ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ನಿಜ್ಜರ್ ಹತ್ಯೆ ಕೇಸ್‌ – ಕೆನಡಾದಲ್ಲಿ 4ನೇ ಭಾರತೀಯ ಪ್ರಜೆ ಬಂಧನ

    ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ನಿಜ್ಜರ್ ಹತ್ಯೆ ಕೇಸ್‌ – ಕೆನಡಾದಲ್ಲಿ 4ನೇ ಭಾರತೀಯ ಪ್ರಜೆ ಬಂಧನ

    ಒಟ್ಟಾವಾ: ಖಲಿಸ್ತಾನ್‌ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯಲ್ಲಿ ಪಾತ್ರವಹಿಸಿದ್ದ ನಾಲ್ಕನೇ ಭಾರತೀಯನನ್ನು ಕೆನಡಾ (Canada) ಅಧಿಕಾರಿಗಳು ಬಂಧಿಸಿದ್ದಾರೆ.

    ಕೆನಡಾದ ಬ್ರಾಂಪ್ಟನ್, ಸರ್ರೆ ಮತ್ತು ಅಬಾಟ್ಸ್‌ಫೋರ್ಡ್ ಪ್ರದೇಶಗಳ ನಿವಾಸಿ ಅಮರ್‌ದೀಪ್ ಸಿಂಗ್ (22) ವಿರುದ್ಧ ಕೊಲೆ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭೀಕರ ಪ್ರವಾಹ – 330 ಜನರ ದುರ್ಮರಣ

    ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿನ ಪಾತ್ರಕ್ಕಾಗಿ ಅಮರದೀಪ್ ಸಿಂಗ್‌ನನ್ನು ಮೇ 11 ರಂದು ಬಂಧಿಸಲಾಯಿತು ಎಂದು IHIT ತಿಳಿಸಿದೆ. ದಾಖಲೆ ಇಲ್ಲದ ಬಂದೂಕು ಹೊಂದಿದ್ದ ಆರೋಪಕ್ಕಾಗಿ ಆತ ಈಗಾಗಲೇ ಪೀಲ್ ಪ್ರಾದೇಶಿಕ ಪೊಲೀಸರ ವಶದಲ್ಲಿದ್ದ.

    2023 ರ ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದ ಸರ್ರೆಯ ಗುರುನಾನಕ್ ಸಿಖ್ ಗುರುದ್ವಾರದ ಹೊರಗೆ ಹರ್ದೀಪ್ ನಿಜ್ಜರ್ (45) ಹತ್ಯೆಯಾಗಿತ್ತು. IHIT ತನಿಖಾಧಿಕಾರಿಗಳು ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಮೂವರು ಭಾರತೀಯ ಪ್ರಜೆಗಳನ್ನು ಮೇ 3 ರಂದು ಬಂಧಿಸಿದ್ದಾರೆ. ಇದನ್ನೂ ಓದಿ: ಪಿಒಕೆ ನಿವಾಸಿಗಳ ಮೇಲೆ ಪಾಕ್ ದಬ್ಬಾಳಿಕೆ – ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ

    ಕರಣ್ ಬ್ರಾರ್ (22), ಕಮಲಪ್ರೀತ್ ಸಿಂಗ್ (22) ಮತ್ತು 28 ವರ್ಷದ ಕರಣ್‌ಪ್ರೀತ್ ಸಿಂಗ್ ಬಂಧಿತರು. ಎಲ್ಲಾ ಮೂರು ಆರೋಪಿಗಳು ಎಡ್ಮಂಟನ್‌ನಲ್ಲಿ ವಾಸಿಸುವ ಭಾರತೀಯ ಪ್ರಜೆಗಳಾಗಿದ್ದು, ಕೊಲೆ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪ ಹೊತ್ತಿದ್ದಾರೆ.

  • ಹೆಸರಾಂತ ಗಾಯಕ ವಿಜಯ್ ಪ್ರಕಾಶ್ ಗೆ ಗೌರವ ಡಾಕ್ಟರೇಟ್

    ಹೆಸರಾಂತ ಗಾಯಕ ವಿಜಯ್ ಪ್ರಕಾಶ್ ಗೆ ಗೌರವ ಡಾಕ್ಟರೇಟ್

    ನ್ನಡದ ಹೆಸರಾಂತ ಗಾಯಕ ವಿಜಯ್ ಪ್ರಕಾಶ್ (Vijay Prakash) ಗೌರವ ಡಾಕ್ಟರೇಟ್ (Honorary Doctorate)ಗೆ ಪಾತ್ರರಾಗಿದ್ದಾರೆ. ಅವರ ಸಂಗೀತ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಕೆನಡಾದ ಗ್ಯಾಬ್ರಿಯಲ್ ವಿಶ್ವ ವಿದ್ಯಾಲಯವು ವಿಜಯ್ ಪ್ರಕಾಶ್ ಅವರಿಗೆ ಗೌರವ ಡಾಕ್ಟರೇಟ್ ಘೋಷಿಸಿದೆ.

     

    ಮೂಲತಃ ಮೈಸೂರಿನವರಾದ ವಿಜಯ್ ಪ್ರಕಾಶ್, ಮುಂಬೈನಲ್ಲಿ ನೆಲೆಸಿ, ಎ.ಆರ್ ರೆಹಮಾನ್ ಕಂಪೋಸ್ ಮಾಡಿದ್ದ ಜೈ ಹೋ ಹಾಡಿನ ಮೂಲಕ ಮನೆಮಾತದವರು. ಆನಂತರ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಹಾಡಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಹಾಡುಗಳನ್ನು ಹಾಡಿದ ಹೆಗ್ಗಳಿಕೆ ಅವರದ್ದು.


    ನಾನಾ ಭಾಷೆಗಳ ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿ, ಗಾಯಕರಾಗಿ, ಸಂಗೀತ ಸಂಯೋಜಕರಾಗಿ ವಿಜಯ್ ಪ್ರಕಾಶ್ ಕೆಲಸ ಮಾಡಿದ್ದಾರೆ.

  • ಕೆನಡಾದಲ್ಲಿ ಭಾರತ ಮೂಲದ ವಿದ್ಯಾರ್ಥಿಯನ್ನು ಕಾರಿನೊಳಗೆ ಗುಂಡಿಕ್ಕಿ ಹತ್ಯೆ

    ಕೆನಡಾದಲ್ಲಿ ಭಾರತ ಮೂಲದ ವಿದ್ಯಾರ್ಥಿಯನ್ನು ಕಾರಿನೊಳಗೆ ಗುಂಡಿಕ್ಕಿ ಹತ್ಯೆ

    ಒಟ್ಟಾವಾ: ಭಾರತ ಮೂಲದ ವಿದ್ಯಾರ್ಥಿಯನ್ನು (Indian Origin Student) ಕಾರಿನೊಳಗೆ ಗುಂಡಿಕ್ಕಿ (Shootout) ಹತ್ಯೆಗೈದ ಘಟನೆ ಕೆನಾಡಾದ (Canada) ದಕ್ಷಿಣ ವ್ಯಾಂಕೋವರ್‌ನಲ್ಲಿ ನಡೆದಿದೆ.

    ಚಿರಾಗ್ ಆಂಟಿಲ್ (24) ಹತ್ಯೆಯಾದ ವಿದ್ಯಾರ್ಥಿ. ಗುಂಡಿನ ಸದ್ದು ಕೇಳುತ್ತಿದ್ದಂತೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಚಿರಾಗ್ ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದಾನೆ. ಈ ಕುರಿತು ತನಿಖೆ ಮುಂದುವರಿದಿದ್ದು, ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇರಾನ್‌ ವೈಮಾನಿಕ ದಾಳಿ; ಇಸ್ರೇಲ್‌ನ ಶಾಲಾ-ಕಾಲೇಜುಗಳು ಬಂದ್‌

    ಮೃತ ಚಿರಾಗ್ ಸಹೋದರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗ್ಗೆ ಫೋನಿನಲ್ಲಿ ಮಾತನಾಡಬೇಕಾದರೆ ಖುಷಿಯಾಗಿಯೇ ಇದ್ದ. ಬಳಿಕ ಎಲ್ಲೋ ಹೋಗಬೇಕೆಂದು ತನ್ನ ಆಡಿ ಕಾರನ್ನು ಹೊರಗೆ ತೆಗೆದ ಸಂದರ್ಭ ಆತನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಕಾಂಗ್ರೆಸ್ ವಿದ್ಯಾರ್ಥಿ ಘಟಕದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಮುಖ್ಯಸ್ಥ ವರುಣ್ ಚೌಧರಿ ಅವರು ಎಕ್ಸ್ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಟ್ಯಾಗ್ ಮಾಡಿ ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಾರಿನಲ್ಲೇ ವಿದ್ಯಾರ್ಥಿ ಜೊತೆ ರಾಸಲೀಲೆ – ಬೆತ್ತಲೆಯಾಗಿ ಸಿಕ್ಕಿಬಿದ್ದ ಇಂಗ್ಲಿಷ್ ಶಿಕ್ಷಕಿ ಅರೆಸ್ಟ್

    ಚಿರಾಗ್ ಮೃತದೇಹವನ್ನು ಭಾರತಕ್ಕೆ ತರುವ ಸಲುವಾಗಿ ಕುಟುಂಬಸ್ಥರು ಕ್ರೌಡ್ ಫಂಡಿಂಗ್ ಪ್ಲ್ಯಾಟ್‌ಫಾರ್ಮ್‌ನ ‘ಗೋ ಫಂಡ್ ಮೀ’ ಮೂಲಕ ಹಣ ಸಂಗ್ರಹಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಚಿರಾಗ್ ಆಂಟಿಲ್ ಸೆಪ್ಟೆಂಬರ್ 2022ರಲ್ಲಿ ವ್ಯಾಂಕೋವರ್‌ಗೆ ಬಂದಿದ್ದ. ಮೃತ ಚಿರಾಗ್ ಕೆನಡಾ ವೆಸ್ಟ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮುಗಿಸಿ ಇತ್ತೀಚೆಗೆ ಕೆಲಸದ ಪರವಾನಗಿಯನ್ನು ಪಡೆದಿದ್ದ. ಇದನ್ನೂ ಓದಿ: ಸಂಗಾತಿ ಜೊತೆಗೆ ಸ್ನಾನ ಮಾಡಿ ನೀರು ಉಳಿಸಿ; ನೀರಿನ ಮಿತಬಳಕೆಗೆ ಮೇಯರ್‌ ಸಲಹೆ

  • ಶತಮಾನಗಳಲ್ಲೇ ಮೊದಲಬಾರಿಗೆ ಸಂಪೂರ್ಣ ಸೂರ್ಯಗ್ರಹಣ ಗೋಚರ – ವಿಶೇಷ ವೀಡಿಯೋ ಹಂಚಿಕೊಂಡ ನಾಸಾ

    ಶತಮಾನಗಳಲ್ಲೇ ಮೊದಲಬಾರಿಗೆ ಸಂಪೂರ್ಣ ಸೂರ್ಯಗ್ರಹಣ ಗೋಚರ – ವಿಶೇಷ ವೀಡಿಯೋ ಹಂಚಿಕೊಂಡ ನಾಸಾ

    ನವದೆಹಲಿ: ವರ್ಷದ ಮೊದಲ ಸೂರ್ಯಗ್ರಹಣವು ಸೋಮವಾರ (ಏ.8) ಗೋಚರವಾಗಿದೆ. ಮೆಕ್ಸಿಕೊ, ಕೆನಡಾ ಹಾಗೂ ಅಮೆರಿಕದಂತಹ ದೇಶಗಳಲ್ಲಿ ಸೂರ್ಯಗ್ರಹಣ (Solar Eclipse) ಗೋಚರವಾಗಿದೆ. ಅಲ್ಲದೇ ನ್ಯೂಯಾರ್ಕ್‌ನಲ್ಲಿ (New York) ಶತಮಾನಗಳ ಬಳಿಕ ಮೊದಲಬಾರಿಗೆ ಸಂಪೂರ್ಣವಾಗಿ ಗೋಚರವಾಗಿರುವ ಸೂರ್ಯಗ್ರಹಣವಿದು ಎಂದು ಹೇಳಲಾಗಿದೆ.

    ಈ ಕುರಿತ ವಿಶೇಷ ವೀಡಿಯೋಗಳನ್ನು ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಸೋಶಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ಸಂಪೂರ್ಣತೆಯ ಹಾದಿಯಾಗಿ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಮರೆಮಾಚುವ ದೃಶ್ಯಗಳು ಈ ಚಿತ್ರಪಟ ಹಾಗೂ ವೀಡಿಯೋದಲ್ಲಿ ಕಂಡುಬಂದಿದೆ. ಆದ್ರೆ ಇದು ಭಾರತದಲ್ಲಿ ಗೋಚರವಾಗಿಲ್ಲ. ಇದನ್ನೂ ಓದಿ: ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವು – ಈ ವರ್ಷದಲ್ಲಿ 10ನೇ ಪ್ರಕರಣ

    ನಾಸಾ ವೀಕ್ಷಕರಿಗಾಗಿ ತನ್ನ ಸೋಶಿಯಲ್‌ ಮೀಡಿಯಾ ವೇದಿಕೆಗಳಲ್ಲಿ ಅಧಿಕೃತ ನೇರ ಪ್ರಸಾರ ಸಹ ಹಮ್ಮಿಕೊಂಡಿತ್ತು. ಈ ಕುರಿತ ವೀಡಿಯೋಗಳನ್ನು ಈಗ ಹಂಚಿಕೊಂಡಿದೆ. ಕಳೆದ ಒಂದು ಶತಮಾನದಲ್ಲಿ ಇದೇ ಮೊದಲಬಾರಿಗೆ ನ್ಯೂಯಾರ್ಕ್ ರಾಜ್ಯದ ಪಶ್ಚಿಮ ಮತ್ತು ಉತ್ತರ ದೇಶದ ಜನರು ಸಂಪೂರ್ಣ ಗ್ರಹಣ ಕಣ್ತುಂಬಿಕೊಂಡಿದ್ದಾರೆ ಎಂದು ನಾಸಾ ಮೂಲಗಳು ತಿಳಿಸಿವೆ.

    ಅಲ್ಲದೇ ಮೆಕ್ಸಿಕನ್ ಬೀಚ್‌ಸೈಡ್ ರೆಸಾರ್ಟ್ ಪಟ್ಟಣವಾದ ಮಜಟ್ಲಾನ್ ಉತ್ತರ ಅಮೆರಿಕಾದಲ್ಲಿಯೂ ಜನ ಗ್ರಹಣ ಕೌತುಕವನ್ನ ವೀಕ್ಷಿಸಿದ್ದಾರೆ. ದಕ್ಷಿಣ ಟೆಕ್ಸಾಸ್‌, ಮೆಕ್ಸಿಕೊದ ದಕ್ಷಿಣ ಗಡಿಯಲ್ಲಿರುವ ಈಗಲ್ ಪಾಸ್ ಭಾಗಶಃ ಗ್ರಹಣವು ಗೋಚರವಾಗಿದೆ. 2024ರ ಸಂಪೂರ್ಣ ಗ್ರಹಣವು ಐತಿಹಾಸಿಕ ಮಹತ್ವವನ್ನು ಗಳಿಸಿಕೊಂಡಿದೆ. ಏಕೆಂದರೆ ಮುಂದೆ 2044ರ ವರೆಗೆ ಮತ್ತೆ ಯುಎಸ್‌ ದೇಶಾದ್ಯಂತ ಗ್ರಹಣ ಗೋಚರವಾಗುವುದಿಲ್ಲ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Taiwan Earthquake – 7.4 ತೀವ್ರತೆಯ ಪ್ರಬಲ ಭೂಕಂಪ – ಸುನಾಮಿ ಎಚ್ಚರಿಕೆ

    ಅಲ್ಲದೆ ಒಕ್ಲಹೋಮ, ಅರ್ಕಾನ್ಸಾಸ್, ಮಿಸೌರಿ, ಇಲಿನಾಯ್ಸ್, ಕೆಂಟುಕಿ, ಇಂಡಿಯಾನಾ, ಓಹಿಯೋ, ಪೆನ್ಸಿಲ್ವೇನಿಯಾ, ನ್ಯೂಯಾರ್ಕ್, ವಮೊರ್ಂಟ್, ನ್ಯೂ ಹ್ಯಾಂಪ್‍ಶೈರ್ ಮತ್ತು ಮೈನೆ ಮೊದಲಾದ ರಾಜ್ಯಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗಿದೆ.

  • ಭಾರತದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಲಖ್ಬೀರ್ ಸಿಂಗ್ ಲಾಂಡಾ ಭಯೋತ್ಪಾದಕ ಅಂತ ಘೋಷಣೆ – ಕೇಂದ್ರ ಅಧಿಕೃತ ಪ್ರಕಟ

    ಭಾರತದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಲಖ್ಬೀರ್ ಸಿಂಗ್ ಲಾಂಡಾ ಭಯೋತ್ಪಾದಕ ಅಂತ ಘೋಷಣೆ – ಕೇಂದ್ರ ಅಧಿಕೃತ ಪ್ರಕಟ

    ನವದೆಹಲಿ: ಕೆನಡಾ ಮೂಲದ ದರೋಡೆಕೋರ (Canada-Based Gangster) ಲಖ್ಬೀರ್ ಸಿಂಗ್ ಲಾಂಡಾನನ್ನ ಭಯೋತ್ಪಾದಕ ಎಂದು ಭಾರತದ ಕೇಂದ್ರ ಗೃಹ ಸಚಿವಾಲಯ (MHA) ಘೋಷಿಸಿದ್ದು, ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ.

    ಮಾಹಿತಿ ಪ್ರಕಾರ, 1989ರಲ್ಲಿ ಪಂಜಾಬ್‌ನ ತರ್ನ್ ತರನ್ ಜಿಲ್ಲೆಯಲ್ಲಿ ಜನಿಸಿದ ಲಾಂಡಾ (Lakhbir Singh Land) 2017ರಲ್ಲಿ ಕೆನಡಾಕ್ಕೆ ಪಲಾಯನ ಮಾಡಿದ. ಕೆಲ ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದು, ಖಲಿಸ್ತಾನಿ ಗ್ರೂಪ್ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ)ಗೆ ಸೇರಿದ್ದಾನೆ. 2021ರಲ್ಲಿ ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್ (Punjab Police) ಇಂಟೆಲಿಜೆನ್ಸ್ ಮುಖ್ಯಕಚೇರಿ ಮೇಲೆ ರಾಕೆಟ್ ದಾಳಿಯ ಯೋಜನೆಯಲ್ಲಿ ಈತ ಭಾಗಿಯಾಗಿದ್ದನು ಎಂದು ವಿವರಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ನಿಷೇಧ: ಪ್ರಧಾನಿ ಘೋಷಣೆ 

    ಅಲ್ಲದೇ ಈತ ಪಾಕಿಸ್ತಾನ ಮೂಲದ ದರೋಡೆಕೋರ ಹರ್ವಿಂದರ್ ಸಿಂಗ್‌ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ. ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ವಿವಿಧ ಘಟಕಗಳಿಗೆ ಸುಧಾರಿತ ಸ್ಫೋಟಕ ಸಾಧನಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನ ಪೂರೈಕೆ ಮಾಡುತ್ತಿದ್ದ. ಪಂಜಾಬ್‌ನಲ್ಲಿ ಮಾತ್ರವಲ್ಲದೇ ದೇಶದ ಇತರ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಹಣ ಪೂರೈಕೆ ಮಾಡುತ್ತಿದ್ದ. ಹೀಗೆ ಸಾಕಷ್ಟು ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿರುವ ಲಾಂಡಾ, ಕೆನಡಾ ಮೂಲದ ಹಲವಾರು ಖಲಿಸ್ತಾನಿ ಭಯೋತ್ಪಾದಕರೊಂದಿಗೆ ನಿಕಟ ಸಂಬಂಧ ಹೊಂದಿದ್ದ. ಸಿಖ್ಸ್ ಫಾರ್ ಜಸ್ಟಿಸ್‌ನ ಗುರುಪತ್‌ವಂತ್ ಸಿಂಗ್ ಪನ್ನುನ್ ಮತ್ತು ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್)ನ ಮೃತ ಹರ್ದೀಪ್ ಸಿಂಗ್ ನಿಜ್ಜರ್ ಜೊತೆಗೂ ಸಂಪರ್ಕ ಬೆಳೆಸಿದ್ದ ಎಂದು ಗೃಹ ಸಚಿವಾಲಯ ತಿಳಿಸಿದೆ.

    2022ರ ಡಿಸೆಂಬರ್‌ನಲ್ಲಿ ತರ್ನ್ ತರನ್‌ನಲ್ಲಿರುವ ಸರ್ಹಾಲಿ ಪೊಲೀಸ್ ಠಾಣೆಯಲ್ಲಿ ಆರ್‌ಪಿಜಿ ದಾಳಿ ಹಾಗೂ ಇತರ ಭಯೋತ್ಪಾದಕ ಚಟುವಟಿಕೆಗಳಲ್ಲಿಯೂ ಭಾಗಿಯಾಗಿದ್ದಾನೆ. ಜೊತೆಗೆ ಭಾರತದ ವಿರುದ್ಧ ಷಡ್ಯಂತ್ರಗಳನ್ನು ರೂಪಿಸುವಲ್ಲಿಯೂ ತೊಡಗಿದ್ದಾನೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಯುದ್ಧಪೀಡಿತ ಗಾಜಾದಲ್ಲಿ 5 ಕಿಮೀ ನಡೆದು ಆಸ್ಪತ್ರೆಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

  • ಖಲಿಸ್ತಾನಿಗಳಿಂದ ಹಿಂದೂ ದೇವಾಲಯಗಳ ಟಾರ್ಗೆಟ್: ಕ್ರಮಕ್ಕೆ ಕೆನಡಾ ಸಂಸದ ಒತ್ತಾಯ

    ಖಲಿಸ್ತಾನಿಗಳಿಂದ ಹಿಂದೂ ದೇವಾಲಯಗಳ ಟಾರ್ಗೆಟ್: ಕ್ರಮಕ್ಕೆ ಕೆನಡಾ ಸಂಸದ ಒತ್ತಾಯ

    ಒಟ್ಟೋವಾ: ಖಲಿಸ್ತಾನಿ (Khalistani) ಪರ ಬೆಂಬಲಿಗರು ಹಿಂದೂ ದೇವಾಲಯಗಳನ್ನ ಟಾರ್ಗೆಟ್‌ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಭಾರತ ಮೂಲದ ಕೆನಡಾದ (Canada) ಸಂಸದ ಚಂದ್ರ ಆರ್ಯ (Chandra Arya) ಒತ್ತಾಯಿಸಿದ್ದಾರೆ.

    ಖಲಿಸ್ತಾನಿಗಳು ಲಕ್ಷ್ಮಿ ನಾರಾಯಣ ಮಂದಿರದಲ್ಲಿ ತೊಂದರೆ ಸೃಷ್ಟಿಸಲು ಮುಂದಾಗಿದ್ದಾರೆ. ಇವರ ವಿರುದ್ಧ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಕ್ರಿ.ಪೂ. ಸರ್ರೆಯಲ್ಲಿರುವ ಸಿಖ್ ಗುರುದ್ವಾರದ ಹೊರಗೆ ಖಲಿಸ್ತಾನ್ ಬೆಂಬಲಿಗರು ಸಿಖ್ ಕುಟುಂಬವನ್ನು ಮೌಖಿಕವಾಗಿ ನಿಂದಿಸಿದ್ದಾರೆ. ಈಗ ಅದೇ ಖಲಿಸ್ತಾನ್ ಗುಂಪು ಸರ್ರೆಯ ಹಿಂದೂ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ತೊಂದರೆಯನ್ನು ಸೃಷ್ಟಿಸಲು ಬಯಸಿದೆ ಎಂದು ಚಂದ್ರ ಆರ್ಯ ಅವರು ಎಕ್ಸ್‌ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ಗಾಜಾದ ಆಸ್ಪತ್ರೆಯನ್ನೇ ಉಗ್ರ ಚಟುವಟಿಕೆಗಳ ತಾಣವಾಗಿಸಿದ ಹಮಾಸ್- ಇಸ್ರೇಲ್ ವೀಡಿಯೋ ಸಾಕ್ಷಿ

    ಇವೆಲ್ಲವನ್ನೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮಾಡಲಾಗುತ್ತಿದೆ. ಕೆನಡಾದ ಅಧಿಕಾರಿಗಳು ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳುವಂತೆ ನಾನು ಮತ್ತೊಮ್ಮೆ ಕೇಳುತ್ತಿದ್ದೇನೆ ಎಂದು ಪೋಸ್ಟ್‌ನಲ್ಲಿ ಒತ್ತಾಯಿಸಿದ್ದಾರೆ.

    ಕಳೆದ ವರ್ಷಗಳಲ್ಲಿ ಹಿಂದೂ ದೇವಾಲಯಗಳು ದಾಳಿಗೆ ಗುರಿಯಾಗಿವೆ. ಎರಡು ವರ್ಷಗಳ ಅವಧಿಯಲ್ಲಿ ಹಿಂದೂ ದೇವಾಲಯಗಳ ಮೇಲೆ ಹಲವು ಬಾರಿ ದಾಳಿ ನಡೆಸಲಾಗಿದೆ. ಹಿಂದೂ-ಕೆನಡಿಯನ್ನರ ವಿರುದ್ಧ ದ್ವೇಷದ ಅಪರಾಧಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 22 ಕೋಟಿ ರೂ.ಗೆ ಮಾರಾಟವಾಯ್ತು 60 ವರ್ಷ ಹಳೆಯ ಒಂದು ಬಾಟಲಿ ವಿಸ್ಕಿ

    ಇಂತಹ ಕೃತ್ಯಗಳನ್ನು ಬಹಿರಂಗವಾಗಿ ಮತ್ತು ಸಾರ್ವಜನಿಕವಾಗಿ ಮಾಡಲು ಅವಕಾಶ ನೀಡುವುದು ಸ್ವೀಕಾರಾರ್ಹವಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಆಗಸ್ಟ್‌ನಲ್ಲಿ ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹಣೆಯ ಪೋಸ್ಟರ್‌ಗಳೊಂದಿಗೆ ಉಗ್ರಗಾಮಿಗಳು ಕೆನಡಾದಲ್ಲಿ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ್ದರು.

  • ಕಾರ್ಯಕ್ರಮಕ್ಕೆ ಬಂದಿದ್ದ ಕೆನಡಾ ಉರ್ದು ಸಾಹಿತಿಗೆ ಹೃದಯಾಘಾತ

    ಕಾರ್ಯಕ್ರಮಕ್ಕೆ ಬಂದಿದ್ದ ಕೆನಡಾ ಉರ್ದು ಸಾಹಿತಿಗೆ ಹೃದಯಾಘಾತ

    ಬೀದರ್: ಉತ್ತರಪ್ರದೇಶ (Uttarpradesh) ಮೂಲದ ಕೆನಡಾದಲ್ಲಿ (Canada) ವಾಸವಾಗಿದ್ದ ಉರ್ದು ಕವಿ ಹಾಗೂ ಸಾಹಿತಿ ಮುಷಾಯಿರಾ (Mushaira) ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದಿದೆ.

    ತಾರೀಕ್ ಪಾರೂಕ್ (78) ಹೃದಯಾಘಾತದಿಂದ ಸಾವನ್ನಪ್ಪಿದ ಸಾಹಿತಿ. ಇವರು ಮುಷಾಯಿರಾ ಕಾರ್ಯಕ್ರಮ ಹಿನ್ನೆಲೆ ಬಸವಕಲ್ಯಾಣಕ್ಕೆ ಬಂದಿದ್ದರು. ಇದನ್ನೂ ಓದಿ; ದೂರು ಕೊಟ್ಟ ಪತ್ನಿಗೆ ಠಾಣೆಯಲ್ಲೇ ಇರಿದ ಪಾಪಿ ಪತಿ!

    ಟೆಕ್ನೋಕ್ರೆಟ್ ಹಾಗೂ ಸಾಹಿತ್ಯಾಭಿಮಾನಿಗಳ ಸಂಘದಿಂದ ಮುಷಾಯಿರಾ ಹಾಗೂ ಕವಿಗೋಷ್ಟಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೂ ಮುನ್ನವೇ ಎದೆನೋವು ಹಿನ್ನೆಲೆ ಕವಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಆದರೆ ಇಂದು ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಿದ್ದು ಉತ್ತರಪ್ರದೇಶದ ಅಲಿಗಢ್‍ಗೆ ಮೃತದೇಹ ರವಾನೆ ಮಾಡಲಾಗಿದೆ.

  • ಕೆನಡಾ ಸಂಸತ್‍ನಲ್ಲಿ ಹಿಂದೂಧ್ವಜ ಹಾರಿಸಿದ ಕನ್ನಡಿಗ

    ಕೆನಡಾ ಸಂಸತ್‍ನಲ್ಲಿ ಹಿಂದೂಧ್ವಜ ಹಾರಿಸಿದ ಕನ್ನಡಿಗ

    ಒಟ್ಟಾವಾ: ಖಲಿಸ್ಥಾನಿಗಳ ಕಾರಣದಿಂದ ಭಾರತ-ಕೆನಡಾ (India- Canada) ನಡ್ವೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಕೆನಡಾದಲ್ಲಿರುವ ಖಲಿಸ್ಥಾನಿ ಉಗ್ರರು ಹಿಂದೂಗಳಿಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದೀಗ ಅಂತಹ ಕೆನಡಾದಲ್ಲಿ, ಅದರಲ್ಲೂ ಅಲ್ಲಿನ ಸಂಸತ್‍ನಲ್ಲಿಯೇ (Parliament) ಕನ್ನಡಿಗರೊಬ್ಬರು ದೀಪಾವಳಿ ಆಚರಿಸಿದ್ದಾರೆ.

    ಹೌದು. ಸಂಸದ ಚಂದ್ರ ಆರ್ಯ (MP Chandra Arya) ಅವರು ಪಾರ್ಲಿಮೆಂಟ್ ಹಿಲ್‍ನಲ್ಲಿ ದೀಪಾವಳಿ ಆಯೋಜಿಸಿದ್ದರು. ಈ ವೇಳೆ ಓಂ ಎಂದು ಬರೆದಿರುವ ಹಿಂದೂ ಧ್ವಜವನ್ನು ಹಾರಿಸಿದ್ದಾರೆ. ಈ ಕ್ಷಣಕ್ಕೆ ನೂರಾರು ಹಿಂದೂಗಳು ಸಾಕ್ಷಿಯಾಗಿದ್ದಾರೆ.

    ಪಾರ್ಲಿಮೆಂಟ್ ಹಿಲ್‍ನಲ್ಲಿ ದೀಪಾವಳಿ ಆಯೋಜಿಸಿದ್ದಕ್ಕೆ ನನಗೆ ಸಂತಸವಾಗಿದೆ. ಈ ಸಂದರ್ಭದಲ್ಲಿ ನಾವು ‘ಓಂ’ ಚಿಹ್ನೆ ಒಳಗೊಂಡ ಹಿಂದೂ ಧ್ವಜವನ್ನು (Hindu Flag) ಹಾರಿಸಿದೆವು. ಈ ಆಚರಣೆಗೆ ಕೆನಡಾದಲ್ಲಿರುವ 67 ಹಿಂದೂ ಮತ್ತು ಇಂಡೋ-ಕೆನಡಾ ಸಂಘಟನೆಗಳು ಬೆಂಬಲ ನಿಡಿದ್ದವು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನಿಂದಲೇ ರಾಮಮಂದಿರ ನಿರ್ಮಾಣ ಸಾಧ್ಯವಾಗಿದೆ: ಮೋದಿ

    ಮತ್ತೊಂದ್ಕಡೆ ಪ್ಯಾರೀಸ್ ಏರ್‍ಪೋರ್ಟ್‍ನಲ್ಲಿ 30 ಮುಸ್ಲಿಮವರು ಸಾಮೂಹಿಕವಾಗಿ ನಮಾಜ್ ಮಾಡಿರೋದು ವಿವಾದಕ್ಕೆ ಕಾರಣವಾಗಿದೆ. ಫ್ರಾನ್ಸ್ ರಾಜಕಾರಣಿಗಳು, ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಆದ್ರೆ, ಇದನ್ನು ಫ್ರಾನ್ಸ್ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ.

  • ಸಂಬಂಧವನ್ನು ಮರುಸ್ಥಾಪಿಸುತ್ತೇವೆ – NRIಗಳಿಗೆ ಕೆನಡಾ ವಿರೋಧ ಪಕ್ಷ ಭರವಸೆ

    ಸಂಬಂಧವನ್ನು ಮರುಸ್ಥಾಪಿಸುತ್ತೇವೆ – NRIಗಳಿಗೆ ಕೆನಡಾ ವಿರೋಧ ಪಕ್ಷ ಭರವಸೆ

    ಒಟ್ಟಾವಾ: ನಾನು ಕೆನಡಾದ (Canada) ಮುಂದಿನ ಪ್ರಧಾನಿಯಾದ್ರೆ, ಭಾರತದ ಜೊತೆಗಿನ ವೃತ್ತಿಪರ ಸಂಬಂಧವನ್ನು (Professional Relationship) ಸ್ಥಾಪಿಸುವುದಾಗಿ ಕೆನಡಾದ ವಿರೋಧ ಪಕ್ಷದ ನಾಯಕ ಪಿಯರೆ ಪೊಯ್ಲಿವ್ರೆ (Pierre Poilievre) ಅವರು ಕೆನಡಾದಲ್ಲಿರುವ ಭಾರತೀಯ ಸಮುದಾಯಕ್ಕೆ ಭರವಸೆ ನೀಡಿದ್ದಾರೆ.

    ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆ ವಿಚಾರದಲ್ಲಿ ಉಭಯ ದೇಶಗಳ ನಡುವೆ ರಾಜತಾಂತಿಕ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳುತ್ತಿದೆ. ಭಾರತದಿಂದ ತನ್ನ 41 ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಂಡಿರುವ ಕೆನಡಾ, ಅದರ ಬೆನ್ನಲ್ಲೇ ಭಾರತಕ್ಕೆ ಪ್ರಯಾಣಿಸುವ ತನ್ನ ಪ್ರಜೆಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ. ಭಾರತದಲ್ಲಿನ ತನ್ನ ಬಹುತೇಕ ಎಂಬೆಸ್ಸಿ ಹಾಗೂ ಕಾನ್ಸುಲೇಟ್‌ಗಳನ್ನು ಮುಚ್ಚಿರುವ ಕೆನಡಾ, ಅಧಿಕ ಮಟ್ಟದಲ್ಲಿ ಜಾಗರೂಕತೆ ವಹಿಸುವಂತೆ ತನ್ನ ನಾಗರಿಕರಿಗೆ ಸಲಹೆ ಕೊಟ್ಟಿದೆ.

    ಈ ಹಿನ್ನೆಲೆಯಲ್ಲಿ ಕನ್ಸರ್ವೇಟಿವ್ ಪಕ್ಷದ ನಾಯಕ ಪೊಯ್ಲಿವ್ರೆ, ಕೆನಡಾದಲ್ಲಿ ನೆಲೆಸಿರುವ ಭಾರತೀಯ ರಾಜತಾಂತ್ರಿಕರಿಗೆ ತೋರುತ್ತಿರುವ ಆಕ್ರಮಣಶೀಲತೆಯ ನಡೆಯನ್ನ ಖಂಡಿಸಿದ್ದಾರೆ. ಇದನ್ನೂ ಓದಿ: ನಿಜ್ಜರ್‌ನಿಂದ ಕೆನಡಾದಲ್ಲಿ ಶಸ್ತ್ರಾಸ್ತ್ರ ತರಬೇತಿ, ಭಾರತದಲ್ಲಿ ದಾಳಿಗೆ ಧನ ಸಹಾಯ: ಗುಪ್ತಚರ ದಾಖಲೆ

    ಈ ಕುರಿತು ರೇಡಿಯೋ ಸಂದರ್ಶನವೊಂದರಲ್ಲಿ ಮಾತನಾಡಿದ ಪೊಯ್ಲಿವ್ರೆ, ಕೆನಡಾದ ಮುಂದಿನ ಪ್ರಧಾನಿಯಾದ್ರೆ, ಭಾರತದ ಜೊತೆಗಿನ ವೃತ್ತಿಪರ ಹಾಗೂ ರಾಜತಾಂತ್ರಿಕ ಸಂಬಂಧವನ್ನು ಮರುಸ್ಥಾಪಿಸುತ್ತೇನೆ. ನಮಗೆ ಭಾರತ ಸರ್ಕಾರದ ಜೊತೆಗಿನ ವೃತ್ತಿಪರ ಸಂಬಂಧದ ಅಗತ್ಯವಿದೆ. ಏಕೆಂದರೆ ವಿಶ್ವದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶ ಭಾರತವಾಗಿದೆ. ಇದು ನಮ್ಮ ಅಭಿಪ್ರಾಯ-ಭಿನ್ನಾಭಿಪ್ರಾಯಗಳನ್ನ ಹೊಂದಲು ಸಹಕಾರಿಯಾಗಿದೆ. ಆದ್ರೆ ನಾವು ವೃತ್ತಿಪರ ಸಂಬಂಧವನ್ನು ಹೊಂದಿರಲೇಬೇಕು. ನಾನು ಪ್ರಧಾನಿಯಾದ್ರೆ ಖಂಡಿತವಾಗಿಯೂ ಅದನ್ನು ಪುನರ್‌ಸ್ಥಾಪಿಸುತ್ತೇನೆ ಎಂದು ಹೇಳಿದ್ದಾರೆ.

    ಇನ್ನೂ ಭಾರತದಿಂದ ಕೆನಡಾದ 41 ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ, ಪ್ರಶಾನಿ ಜಸ್ಟಿನ್ ಟ್ರುಡೊ ಕೆನಡಿಯರೇ ಪರಸ್ಪರ ವಿರುದ್ಧ ತಿರುಗಿಬೀಳುವಂತೆ ಮಾಡುತ್ತಿದ್ದಾರೆ. ಅಸಮರ್ಥರಾಗಿದ್ದು, ವಿದೇಶದಲ್ಲಿಯೂ ನಮ್ಮ ಸಂಬಂಧಗಳ ಬಗ್ಗೆ ಭಿನ್ನಾಭಿಪ್ರಾಯ ಉಂಟಾಗುವಂತೆ ಮಾಡಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಭಾರತವನ್ನ ಪ್ರಚೋದಿಸುವುದಿಲ್ಲ; ತಣ್ಣಗಾದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ

    ಜೊತೆಗೆ ನಿನ್ನೆಯಷ್ಟೇ ಒಟ್ಟಾವಾ, ಟೊರೆಂಟೊ ಮತ್ತು ವ್ಯಾಂಕೋವರ್‌ನಲ್ಲಿ, ಭಾರತದ ಚಾರಿಟಿಗಳಿಗೆ ವಿರುದ್ಧವಾಗಿ ನಡೆಸಿದ ಖಲಿಸ್ತಾನ್‌ ರ‍್ಯಾಲಿಯನ್ನ ಖಂಡಿಸಿದ್ದಾರೆ. ಬ್ರಿಟಿಷ್ ಕೊಲಂಬಿಯಾದ ಅಬಾಟ್ಸ್‌ ಫೋರ್ಡ್ ಪಟ್ಟಣದಲ್ಲಿರುವ ವೈಷ್ಣೋದೇವಿ ಹಿಂದೂ ದೇವಾಲಯದ ವೇಲೆ ಹಿಂದೂ ಹಾಗೂ ಭಾರತ ವಿರೋಧಿ ಪೋಸ್ಟರ್‌ಗಳಿಂದ ಅಪವಿತ್ರಗೊಳಿಸಿರುವುದಕ್ಕೂ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅ. 10ರೊಳಗೆ 40 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಿ- ಕೆನಡಾಗೆ ಭಾರತ ಗಡುವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತದ ಕೆಂಡಕ್ಕೆ ಟ್ರುಡೋ ಥಂಡಾ – ಭಾರತೀಯರಿಗೆ ಶುಭ ಕೋರಿದ ಟ್ರುಡೋ

    ಭಾರತದ ಕೆಂಡಕ್ಕೆ ಟ್ರುಡೋ ಥಂಡಾ – ಭಾರತೀಯರಿಗೆ ಶುಭ ಕೋರಿದ ಟ್ರುಡೋ

    ಒಟ್ಟಾವಾ: ಇತ್ತೀಚೆಗೆ ಭಾರತ (India) ಹಾಗೂ ಕೆನಡಾದ (Canada) ರಾಜತಾಂತ್ರಿಕ ಸಂಬಂಧ ಹದಗೆಟ್ಟಿದ್ದಿದ್ದು, ಇದನ್ನು ಸರಿಪಡಿಸುವ ಪ್ರಯತ್ನದಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ (Justin Trudeau) ಹಿಂದೂಗಳ ಹಬ್ಬ ನವರಾತ್ರಿಗೆ (Navratri) ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.

    ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಟ್ರುಡೋ ಕೆಲ ವಾರಗಳ ಹಿಂದೆ ಆರೋಪಿಸಿದ್ದರು. ಆದರೆ ಈ ಆರೋಪವನ್ನು ಭಾರತ ನಿರಾಕರಿಸಿದ್ದಲ್ಲದೇ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ಹಳಸಲು ಕಾರಣವಾಯಿತು.

    ಇದೀಗ ಟ್ರುಡೋ ಎರಡೂ ದೇಶಗಳ ಸಂಬಂಧಗಳನ್ನು ಸರಿಪಡಿಸುವ ಪ್ರಯತ್ನದಲ್ಲಿ ಹಿಂದೂಗಳ ಹಬ್ಬ ನವರಾತ್ರಿಗೆ ಶುಭಾಶಯವನ್ನು ತಿಳಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ನವರಾತ್ರಿಯ ಶುಭಾಶಯಗಳು. ನಾನು ಹಿಂದೂ ಸಮುದಾಯದ ಸದಸ್ಯರಿಗೆ ಹಾಗೂ ಈ ಹಬ್ಬವನ್ನು ಆಚರಿಸುತ್ತಿರುವ ಎಲ್ಲರಿಗೂ ಆತ್ಮೀಯತೆಯ ಶುಭಾಶಯಗಳನ್ನು ಕೋರುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಚಂದ್ರಯಾನ-3ರ ಬಳಿಕ ಇಸ್ರೋ ತಂತ್ರಜ್ಞಾನ ಬಯಸಿದ ನಾಸಾ: ಸೋಮನಾಥ್

    ಟ್ರುಡೋ ಹಿಂದೂ ಸಮುದಾಯದಲ್ಲಿ ನವರಾತ್ರಿಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ್ದಾರೆ. ಮಹಿಷಾಸುರನ ವಿರುದ್ಧ ದುರ್ಗಾ ದೇವಿಯ ವಿಜಯ ಇದು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ. ಟ್ರುಡೋ ಹಿಂದೂ ಸಂಸ್ಕೃತಿಯ ಬಗ್ಗೆ ಅರಿಯಲು ಹಾಗೂ ಕೆನಡಾಗೆ ಈ ಸಮುದಾಯದ ಕೊಡುಗೆಗಳನ್ನು ಶ್ಲಾಘಿಸಲು ಈ ಹಬ್ಬವನ್ನು ಗುರುತಿಸಿದ್ದಾರೆ.

    ಕೆನಡಾದ ಪ್ರಧಾನಿ ಬಿಡುಗಡೆ ಮಾಡಿದ ಅಧಿಕೃತ ಮಾಧ್ಯಮ ಹೇಳಿಕೆಯಲ್ಲಿ ಮುಂದಿನ 9 ರಾತ್ರಿ ಹಾಗೂ 10 ಹಗಲುಗಳಲ್ಲಿ ಕೆನಡಾ ಮತ್ತು ಪ್ರಪಂಚಾದ್ಯಂತ ಹಿಂದೂ ಸಮುದಾಯದ ಸದಸ್ಯರು ನವರಾತ್ರಿಯನ್ನು ಆಚರಿಸಲು ಒಟ್ಟಾಗಲಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: 10ನೇ ದಿನಕ್ಕೆ ಕಾಲಿಟ್ಟ ವಾರ್- ಇಸ್ರೇಲ್‌ ಸರ್ಕಾರದ ಆದೇಶಕ್ಕೆ ಕಾದು ಕುಳಿತ ಸೇನಾ ಮುಖ್ಯಸ್ಥರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]