Tag: ಕೆನಡಾ

  • ಹೊರಗಡೆ ಗಣೇಶನ ಚಿತ್ರ, ಒಳಗಡೆ 16 ಲಕ್ಷದ ಕೆನಡಾ ಡ್ರಗ್ಸ್ – ಬೆಂಗಳೂರಲ್ಲಿ ಆರೋಪಿ ಅರೆಸ್ಟ್

    ಹೊರಗಡೆ ಗಣೇಶನ ಚಿತ್ರ, ಒಳಗಡೆ 16 ಲಕ್ಷದ ಕೆನಡಾ ಡ್ರಗ್ಸ್ – ಬೆಂಗಳೂರಲ್ಲಿ ಆರೋಪಿ ಅರೆಸ್ಟ್

    ಆನೇಕಲ್: ಕೆನಡಾದಿಂದ ಲೈಸರ್ಜಿಕ್ ಡೈಥಲಾಮೈಡ್ (ಎಲ್‍ಎಸ್‍ಡಿ) ಡ್ರಗ್ಸ್ ತರಿಸಿದ್ದ ಖಾಸಗಿ ಆಸ್ಪತ್ರೆ ಸಿಬ್ಬಂದಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿ ಹೆಬ್ಬಗೋಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಆರೋಪಿಯನ್ನು ಅರುಣ್ ಆಂತೋಣಿ(22) ಎಂದು ಗುರುತಿಸಲಾಗಿದೆ. ಈತ ಮೂಲತಃ ಕೇರಳದ ಪೆರಂಬಾಡಿ ಚೇರಾ ಹೌಸ್‍ನ ಕೊಟ್ಟಾಯಂ ನಿವಾಸಿಯಾಗಿದ್ದಾನೆ. ಆನೇಕಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 7ರ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಯಲ್ಲಿನ ಸ್ಪರ್ಶ ಆಸ್ಪತ್ರೆಯ ಎಕ್ಸ್-ರೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದನು.

    ಕೆನಡಾದಲ್ಲಿ ಸಿಗುವ ಎಲ್‍ಎಸ್‍ಡಿ ಡ್ರಗ್ಸ್ ಅನ್ನು ಕೇರಳದಿಂದಲೇ ಬೇರೊಬ್ಬರಿಂದ ಬುಕ್ ಮಾಡಿಸಿ ಸ್ಪರ್ಶ ಆಸ್ಪತ್ರೆಯ ತನ್ನ ವಿಭಾಗದ ವಿಳಾಸಕ್ಕೆ 310 ಹಾಳೆಗಳನ್ನು ತರಿಸಿದ್ದನು.

    ಈ ಕುರಿತಂತೆ ಬೆಂಗಳೂರು ನಗರ ಮಾದಕ ದ್ರವ್ಯ ನಿಗ್ರಹ ದಳದ ಸಿಸಿಬಿ ಇನ್‍ಸ್ಪೆಕ್ಟರ್ ಲಕ್ಷ್ಮಿಕಾಂತಯ್ಯರಿಗೆ ಖಚಿತ ಮಾಹಿತಿ ದೊರಕಿದ್ದು, ಹೆಬ್ಬಗೋಡಿ ಸಿಐ ಗೌತಮ್ ಮತ್ತು ಸಿಬ್ಬಂದಿಯ ನೆರವಿನಿಂದ ಆಸ್ಪತ್ರೆಯಲ್ಲಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ. ಮುಂದಿನ ತನಿಖೆ ಕೈಗೊಂಡಿದ್ದಾರೆ.


    ಡ್ರಗ್ಸ್ ಹಾಳೆಯ ಮೇಲೆ ಹಳೆಯ ಛಾಪಾ ಕಾಗದದ ಮಾದರಿಯಲ್ಲಿ ಗಣೇಶನ ಚಿತ್ರ, ಮತ್ತಿತರೆ ಧಾರ್ಮಿಕ ಚಿತ್ರಗಳನ್ನು ಇರಿಸಲಾಗಿತ್ತು. ಯಾರಿಗೂ ಅನುಮಾನ ಬಾರದಂತೆ ಕಾಗದ ಒಳಗಡೆ ಡ್ರಗ್ಸ್ ಇರಿಸಲಾಗಿತ್ತು.

    ಒಟ್ಟು ಪಾರ್ಸೆಲ್ ಬಂದಿರುವ ಎಸ್‍ಎಲ್‍ಡಿ ಡ್ರಗ್ಸ್ ಮೌಲ್ಯ 16 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. 10×6ರ ಆಕಾರದಲ್ಲಿರುವ ಕಾಗದದಲ್ಲಿ ಮೊಬೈಲ್ ಸಿಮ್ ಸೈಜ್ ಹಾಳೆಯ ಚೂರನ್ನು ರಾಗಿ ಕಾಳಿನಷ್ಟು ಚಪ್ಪರಿಸಿದರೆ ಸಾಕು ಅರ್ಧ ಗಂಟೆಯಲ್ಲಿ ಮತ್ತೇರುತ್ತದೆ. ಈ ಡ್ರಗ್ಸ್ ಹತ್ತು ಗಂಟೆಗಳವರೆಗೂ ನಶೆಯಲ್ಲಿ ಇರಿಸುತ್ತದೆ ಎಂದು ತಿಳಿದು ಬಂದಿದೆ.

  • ನನ್ನದೇನೂ ತಪ್ಪಿರ್ಲಿಲ್ಲ, ಆದ್ರೂ ಬ್ರೇಕಪ್ ಮಾಡ್ಕೊಂಡ್ಳು- ಡೆತ್‍ನೋಟ್ ಬರೆದು ಆತ್ಮಹತ್ಯೆ

    ನನ್ನದೇನೂ ತಪ್ಪಿರ್ಲಿಲ್ಲ, ಆದ್ರೂ ಬ್ರೇಕಪ್ ಮಾಡ್ಕೊಂಡ್ಳು- ಡೆತ್‍ನೋಟ್ ಬರೆದು ಆತ್ಮಹತ್ಯೆ

    – ಮದುವೆಗಾಗಿ ಶಾಪಿಂಗ್ ಮಾಡಿದ್ದ ಪ್ರಿಯತಮ
    – ಸೋಶಿಯಲ್ ಮೀಡಿಯಾದಲ್ಲಿ ಗೆಳೆಯನನ್ನ ಬ್ಲಾಕ್ ಮಾಡಿದ ಯುವತಿ

    ಹೈದರಾಬಾದ್: ನನ್ನದೇನು ತಪ್ಪಿರಲಿಲ್ಲ, ಆದರೂ ನನ್ನ ಜೊತೆ ಬ್ರೇಕಪ್ ಮಾಡಿಕೊಂಡಳು ಎಂದು ಯುವಕನೋರ್ವ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೈದರಾಬಾದ್ ಮೂಲದ ಯುವಕ ಕೆನಡಾದಲ್ಲಿ ಪ್ರೀತಿಸಿದ ಯುವತಿ ತನ್ನನ್ನು ಅವೈಡ್ ಮಾಡಿದಕ್ಕೆ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪುತ್ರ ಸಾವನ್ನಪ್ಪಿರುವ ವಿಷಯ ಪೋಷಕರಿಗೆ ಭಾನುವಾರ ರಾತ್ರಿ ತಿಳಿದಿದೆ.

    ಹಬ್ಸಿಗುದಾ ನಿವಾಸಿ ಪ್ರಣಯ್ ಆತ್ಮಹತ್ಯೆಗೆ ಶರಣಾದ ಯುವಕ. ಕೆಲ ವರ್ಷಗಳಿಂದ ಉದ್ಯೋಗ ಅರಸಿ ಪ್ರಣಯ್ ಕೆನಡಾಗೆ ಹೋಗಿದ್ದನು. ಅಲ್ಲಿ ಆತನಿಗೆ ಅಖಿಲಾಳ ಪರಿಚಯವಾಗಿದೆ. ಇಬ್ಬರ ಸ್ನೇಹ ಕೆಲ ದಿನಗಳಲ್ಲಿ ಪ್ರೀತಿಯಾಗಿ ಬದಲಾಗಿತ್ತು. ಹಾಗಾಗಿ ಇಬ್ಬರು ಲೀವ್ ಇನ್ ರಿಲೇಶನ್ ಶಿಪ್‍ನಲ್ಲಿದ್ದರು. ಆಗಸ್ಟ್ ನಲ್ಲಿ ಮದುವೆಯಾಗಲು ತೀರ್ಮಾನಿಸಿದ್ದ ಜೋಡಿ ಜೊತೆಯಾಗಿ ಮುಂದಿನ ಜೀವನದ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದರು. ಇದನ್ನೂ ಓದಿ: ತಪ್ಪು ಮಾಡ್ತಿದ್ದೇನೆ, I Love you ಅಪ್ಪ ಅಮ್ಮ- ಡೆತ್‍ನೋಟ್ ಬರೆದು ಬಾಲಕಿ ಆತ್ಮಹತ್ಯೆ

    ಡೆತ್‍ನೋಟ್?: ಮದುವೆಗೆ ಪ್ಲಾನ್ ಮಾಡಿಕೊಂಡಿದ್ದರಿಂದ ಜೊತೆಯಾಗಿ ಶಾಪಿಂಗ್ ಮಾಡಲು ಆರಂಭಿಸಿದ್ದೆ. ಅಖಿಲಾಗೆ ಹೆಚ್1 ವಿಸಾ ಸಿಕ್ಕ ಕೂಡಲೇ ಸೋಶಿಯಲ್ ಮೀಡಿಯಾದಲ್ಲಿ ನನ್ನನ್ನು ಬ್ಲಾಕ್ ಮಾಡಿದಳು. ನಂತರ ನನ್ನ ಜೊತೆ ಮಾತನಾಡೋದನ್ನು ಸಹ ನಿಲ್ಲಿಸಿದಳು. ನಾನೇನೂ ತಪ್ಪು ಮಾಡಿರಲಿಲ್ಲ, ಆದ್ರೂ ನನ್ನ ಜೊತೆ ಬ್ರೇಕಪ್ ಮಾಡಿಕೊಂಡಳು ಎಂದು ಪ್ರಣಯ್ ಡೆತ್‍ನೋಟ್ ನಲ್ಲಿ ಬರೆದಿದ್ದಾನೆ. ಇದನ್ನೂ ಓದಿ: ಕ್ಷಮಿಸು ಅಮ್ಮ, ನಾನು ಲವ್ ಮಾಡಿಲ್ಲ ಎಂದು ನೇಣಿಗೆ ಶರಣಾದ ಯುವಕ

    ದೂರವಾದ ಬಳಿನ ನನ್ನ ಜೊತೆ ಅಖಿಲಾ ಕೆಟ್ಟದಾಗಿ ನಡೆದುಕೊಳ್ಳಲು ಆರಂಭಿಸಿದಳು. ಹಾಗಾಗಿ ಆಕೆಯ ಜೊತೆಗಿನ ರಿಲೇಶನ್ ಶಿಪ್ ನಿಂದ ಹೊರ ಬಂದರೂ ನನ್ನ ಪೋಷಕರಿಗೆ ಕಿರುಕುಳ ನೀಡಲು ತೊಡಗಿದಳು. ನನ್ನ ವಿರುದ್ಧ ಹಲವು ಆರೋಪಗಳನ್ನು ಮಾಡಿ ಅಖಿಲಾ ದೂರವಾದಳು ಎಂದು ಪ್ರಣಯ್ ಕೊನೆ ಸಾಲುಗಳಲ್ಲಿ ಹೇಳಿದ್ದಾನೆ. ಇದನ್ನೂ ಓದಿ: ನಾನು ಅಪ್ರಾಪ್ತೆಯಲ್ಲ ಎಂದು ಲವ್ವರ್ ನ ಮದ್ವೆಯಾದ್ಳು – ಮದ್ವೆಯಾದ ಕೆಲವೇ ತಿಂಗ್ಳಲ್ಲಿ ಡೆತ್‍ನೋಟ್ ಬರೆದು 18ರ ಯುವತಿ ಆತ್ಮಹತ್ಯೆ

  • ‘ಒ’ ರಕ್ತದ ಗುಂಪಿನವರಿಗೆ ಕೊರೊನಾ ಸಾಧ್ಯತೆ ಕಡಿಮೆ – ರಿಸ್ಕ್‌ ಜಾಸ್ತಿ ಯಾರಿಗೆ?

    ‘ಒ’ ರಕ್ತದ ಗುಂಪಿನವರಿಗೆ ಕೊರೊನಾ ಸಾಧ್ಯತೆ ಕಡಿಮೆ – ರಿಸ್ಕ್‌ ಜಾಸ್ತಿ ಯಾರಿಗೆ?

    – ಡೆನ್ಮಾರ್ಕ್‌ ಮತ್ತು ಕೆನಡಾದ ಅಧ್ಯಯನ ವರದಿ
    – ಎ, ಬಿ, ಎಬಿ ರಕ್ತದ ಗುಂಪಿನವರಿಗೆ ಬೇಗ ಸೋಂಕು

    ನವದೆಹಲಿ: ಕೋವಿಡ್‌ 19 ‘ಒ’ ರಕ್ತದ ಗುಂಪಿನವರಿಗೆ ಬರುವ ಸಾಧ್ಯತೆ ಕಡಿಮೆ ಎಂದು ಅಧ್ಯಯನ ಹೇಳಿದೆ.

    ಡೆನ್ಮಾರ್ಕ್‌ ಮತ್ತು ಕೆನಡಾದ ಸಂಶೋಧಕರು ರೋಗಿಗಳ ರಕ್ತದ ಗುಂಪುಗಳನ್ನು ಅಧ್ಯಯನ ಮಾಡಿ ಯಾವ ರಕ್ತದ ಗುಂಪು ಹೊಂದಿದವರಿಗೆ ಬೇಗ ಕೊರೊನಾ ಬರುತ್ತದೆ ಎಂಬ ವರದಿಯನ್ನು ಪ್ರಕಟಿಸಿದ್ದಾರೆ.

    ಎ, ಬಿ, ಎಬಿ ರಕ್ತದ ಗುಂಪಿನವರಿಗೆ ಕೊರೊನಾ ಬೇಗ ಬರುತ್ತದೆ ಎಂದು ಡೆನ್ಮಾರ್ಕ್‌ ಅಧ್ಯಯನ ತಿಳಿಸಿದೆ. ಈ ರಕ್ತವನ್ನು ಹೊಂದಿರುವ ರೋಗಿಗಳ ಮೇಲೆ ಯಾಕೆ ಬೇಗ ಸೋಂಕು ಬರುತ್ತದೆ ಎಂಬುದರ ಬಗ್ಗೆ ವರದಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಫೆ. 27ರಿಂದ ಜುಲೈ 30 ರವರೆಗೆ 8,41,327 ರೋಗಿಗಳಳ ಮೇಲೆ ಅಧ್ಯಯನ ನಡೆಸಿ ಈ ವರದಿಯನ್ನು ಡೆನ್ಮಾರ್ಕ್‌ ಸಂಶೋಧಕರು ತಯಾರಿಸಿದ್ದಾರೆ.

    ಜಗತ್ತಿನಲ್ಲಿ ‘ಒ’ ರಕ್ತದ ಗುಂಪಿನವರು ಹೆಚ್ಚು ಜನರಿದ್ದಾರೆ. ಬೇರೆ ರಕ್ತದ ಗುಂಪಿನವರಿಗೆ ಹೋಲಿಸಿದರೆ ಇವರಿಗೆ ಕೊರೊನಾ ಬರುವ ಸಾಧ್ಯತೆ ಕಡಿಮೆ. ಒಂದು ವೇಳೆ ತಗಲಿದರೂ ಗಂಭೀರ ಸ್ವರೂಪಕ್ಕೆ ಹೋಗುವ ಸಾಧ್ಯತೆ ಕಡಿಮೆ ಎಂದು ವರದಿ ತಿಳಿಸಿದೆ.

    ಕೆನಡಾ ಅಧ್ಯಯನದ ಪ್ರಕಾರ ಎ ಮತ್ತು ಎಬಿ ರಕ್ತದ ಗುಂಪಿನವರಿಗೆ ಕೊರೊನಾ ಬರುವ ಸಾಧ್ಯತೆ ಹೆಚ್ಚು ಮತ್ತು ಅಪಾಯವೂ ಹೆಚ್ಚು ಎಂದು ಹೇಳಿದೆ. ‘ಒ’ ರಕ್ತದ ಗುಂಪಿನವರಿಗೆ ಹೋಲಿಸಿದರೆ ಈ ರಕ್ತದ ಗುಂಪಿನವರು ಹೆಚ್ಚಿನ ಸಂಖ್ಯೆಯಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿಸಿದೆ.

    ಈ ಹಿಂದೆ ನಡೆದ ಅಧ್ಯಯನದಲ್ಲಿ ಎ ರಕ್ತದ ಗುಂಪು ಹೊಂದಿರುವ ಮಂದಿಗೆ ಹೃದಯ ಮತ್ತು ಗ್ಯಾಸ್ಟ್ರೀಕ್‌ ಕ್ಯಾನ್ಸರ್‌ ಕಡಿಮೆ ಎಂದು ಹೇಳಿದ್ದವು.

    ‘ಒ’ ಗುಂಪಿನವರಿಗೆ ಅಪಾಯ ಕಡಿಮೆ ‘ಎ’ ರಕ್ತದ ಗುಂಪಿನವರಿಗೆ ಬೇಗ ಕೊರೊನಾ ವೈರಸ್‌ ಬರುತ್ತದೆ ಎಂದು ಈ ಹಿಂದೆ ಚೀನಾದ ಅಧ್ಯಯನ ತಿಳಿಸಿತ್ತು. ಈ ಅಧ್ಯಯನಕ್ಕೆ ಪೂರಕ ಎಂಬಂತೆ ಈಗ ಡೆನ್ಮಾರ್ಕ್‌ ಮತ್ತು ಕೆನಡಾದ ಅಧ್ಯಯನ ಸಹ ಪ್ರಕಟವಾಗಿದೆ. ಇದನ್ನೂ ಓದಿ: ಯಾವ ರಕ್ತದ ಗುಂಪಿನವರಿಗೆ ಕೊರೊನಾ ಬೇಗ ಬರುತ್ತದೆ? – ಚೀನಾ ಅಧ್ಯಯನ ವರದಿ ಬಹಿರಂಗ

    ‘ಒ’ ಗುಂಪಿನ ರಕ್ತವನ್ನು ಹೊಂದಿರುವವರು ಸಾರ್ವತ್ರಿಕ ದಾನಿಗಳೆಂದು ಗುರುತಿಸಿಕೊಂಡಿದ್ದಾರೆ. ಇವರು ಯಾರಿಗೆ ಬೇಕಾದರೂ ರಕ್ತವನ್ನು ದಾನ ಮಾಡಬಹುದು. ಆದರೆ ಈ ಗುಂಪಿನವರು ‘ಒ’ ನೆಗೆಟಿವ್‌ ಹೊಂದಿರುವ ವ್ಯಕ್ತಿಗಳಿಂದ ಮಾತ್ರ ರಕ್ತವನ್ನು ಪಡೆಯಬೇಕು.

    ಕೊರೊನಾ ವೈರಸ್‌ ಮೂಗಿನ ಮೂಲಕ ಶ್ವಾಸಕೋಶವನ್ನು ಪ್ರವೇಶಿಸಿ ಬಳಿಕ ರಕ್ತದಲ್ಲಿ ಸೇರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಿಗೆ ಬಹಳ ಬೇಗ ವೈರಸ್‌ ತಗುಲುತ್ತದೆ.

    ‘ಒ’ ರಕ್ತದ ಗುಂಪಿನವರಿಗೆ ಸೋಂಕು ಬರುವುದೇ ಇಲ್ಲ ಎಂದು ಎಲ್ಲೂ ಅಧ್ಯಯನ ಹೇಳಿಲ್ಲ. ಅಷ್ಟೇ ಅಲ್ಲದೇ ಈ ಅಧ್ಯಯನಗಳು ಭಾರತದಲ್ಲಿ ನಡೆದಿಲ್ಲ. ಕೊರೊನಾ ವೈರಸ್‌ ಒಂದೊಂದು ದೇಶದಲ್ಲಿ ಒಂದೊಂದು ರೀತಿ ವರ್ತಿಸುವ ಕಾರಣ ಪ್ರತಿಯೊಬ್ಬರು ಜಾಗೃತಿ ವಹಿಸುವುದು ಬಹಳ ಮುಖ್ಯ.

  • ವಿಶ್ವಸಂಸ್ಥೆ ಭದ್ರತಾ ಮಂಡಳಿ ಚುನಾವಣೆ – ಭಾರತಕ್ಕೆ 184 ವೋಟ್‌, ಉಳಿದ ರಾಷ್ಟ್ರಗಳಿಗೆ ಎಷ್ಟು ವೋಟ್‌ ಬಿದ್ದಿದೆ?

    ವಿಶ್ವಸಂಸ್ಥೆ ಭದ್ರತಾ ಮಂಡಳಿ ಚುನಾವಣೆ – ಭಾರತಕ್ಕೆ 184 ವೋಟ್‌, ಉಳಿದ ರಾಷ್ಟ್ರಗಳಿಗೆ ಎಷ್ಟು ವೋಟ್‌ ಬಿದ್ದಿದೆ?

    ನ್ಯೂಯಾರ್ಕ್‌: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎರಡು ವರ್ಷಗಳ ಕಾಲ ಸದಸ್ಯ ರಾಷ್ಟ್ರವಾಗಿ ಭಾರತ ಆಯ್ಕೆಯಾಗಿದೆ.

    ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಪರವಾಗಿ 184 ಮತಗಳು ಬಿದ್ದಿರುವುದು ವಿಶೇಷ. 192 ಸದಸ್ಯ ರಾಷ್ಟ್ರಗಳಿರುವ ಭದ್ರತಾ ಮಂಡಳಿಯಲ್ಲಿ ಸದಸ್ಯ ರಾಷ್ಟ್ರವಾಗಿ ಆಯ್ಕೆ ಆಗಲು ಒಂದು ದೇಶಕ್ಕೆ 128 ರಾಷ್ಟ್ರಗಳ ಬೆಂಬಲ ಬೇಕಿತ್ತು.

    2021-22ನೇ ಅವಧಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಜೊತೆ ಐರ್ಲೆಂಡ್, ಮೆಕ್ಸಿಕೊ ಮತ್ತು ನಾರ್ವೆ ದೇಶಗಳು ಸಹ ಸ್ಥಾನ ಪಡೆದಿದೆ. ಚುನಾವಣೆಯಲ್ಲಿ ಖಾಯಂ ರಹಿತ ಸದಸ್ಯ ರಾಷ್ಟ್ರ ಸ್ಥಾನಮಾನ ಬಯಸಿದ್ದ ಕೆನಡಾಗೆ ಸೋಲಾಗಿದೆ. ನಾರ್ವೆಗೆ 130, ಐರ್ಲೆಂಡಿಗೆ 128, ಕೆನಡಾಗೆ 108, ಮೆಕ್ಸಿಕೋಗೆ 187 ಮತಗಳು ಬಿದ್ದಿವೆ.

    ಈ ಹಿಂದೆ 1950-51, 1967-68, 1972-73, 1977-78, 1984-85, 1991-92 ಮತ್ತು 2011-12ರಲ್ಲಿ ಸಹ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸ್ಥಾನವನ್ನು ಭಾರತ ಅಲಂಕರಿಸಿತ್ತು.

    ಏಷ್ಯಾ ಪೆಸಿಫಿಕ್‌ ವಲಯದಿಂದ ಭಾರತ ಒಂದೇ ಸ್ಪರ್ಧಿಸಿತ್ತು. ಆಫ್ರಿಕಾ ದೇಶಗಳ ಪೈಕಿ ಕೀನ್ಯಾ ಮತ್ತು ಜಿಬೌಟಿ ದೇಶಗಳು ಸ್ಪರ್ಧಿಸಿತ್ತು. ಈ ಪೈಕಿ ಕೀನ್ಯಾಗೆ 113 ವೋಟ್‌ ಬಿದ್ದರೆ ಜಿಬೌಟಿಗೆ 78 ವೋಟ್‌ ಬಿದ್ದಿದೆ. ಹೀಗಾಗಿ ಮತ್ತೆ ಈ ಚುನಾವಣೆ ನಡೆಯಲಿದೆ.

    ಭಾರತಕ್ಕೆ ಏನು ಲಾಭ?
    ಭಾರತ ವಿಶ್ವಸಂಸ್ಥೆಯಲ್ಲಿ ಖಾಯಂ ಸ್ಥಾನ ಸಿಗಲು ಪ್ರಯತ್ನಿಸುತ್ತಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ 5 ಶಾಶ್ವತ ಸದಸ್ಯ ರಾಷ್ಟ್ರಗಳು ಮತ್ತು 10 ಶಾಶ್ವತ ರಹಿತ ಸದಸ್ಯ ರಾಷ್ಟ್ರಗಳು ಇವೆ. ಸದ್ಯ ಅಮೆರಿಕ, ಚೀನಾ, ಫ್ರಾನ್ಸ್‌, ರಷ್ಯಾ, ಇಂಗ್ಲೆಂಡ್‌ ದೇಶಗಳು ಖಾಯಂ ಸದಸ್ಯ ರಾಷ್ಟ್ರಗಳಾಗಿದ್ದು ವಿಶೇಷ ವೀಟೋ ಅಧಿಕಾರವನ್ನು ಹೊಂದಿದೆ. ಈಗ ಭಾರತ ಈ ರಾಷ್ಟ್ರಗಳ ಜೊತೆ ಎರಡು ವರ್ಷಗಳ ಕಾಲ ಕುಳಿತುಕೊಳ್ಳಲಿದೆ. ಎಸ್ಟೋನಿಯಾ, ನೈಜರ್, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಟುನೀಶಿಯಾ ಮತ್ತು ವಿಯೆಟ್ನಾಂ ದೇಶಗಳೂ ಕೂಡ ಇವೆ.

     

  • ಕೆನಡಾ ಪ್ರಧಾನಿ ಟ್ರುಡೊ ಪತ್ನಿ ಕೊರೊನಾದಿಂದ ಗುಣಮುಖ

    ಕೆನಡಾ ಪ್ರಧಾನಿ ಟ್ರುಡೊ ಪತ್ನಿ ಕೊರೊನಾದಿಂದ ಗುಣಮುಖ

    ಒಟ್ಟಾವಾ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಪತ್ನಿ ಸೋಫಿ ಗೊಗ್ರೊಯಿರ್ ಕೊರೊನಾ ಸೋಂಕುವಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.

    ಈ ಸಂಬಂಧ ಇನ್‍ಸ್ಟಾ ಗ್ರಾಮ್ ನಲ್ಲಿ ವಿಡಿಯೋ ಸ್ಟೇಟಸ್ ಅಪ್ ಡೇಟ್ ಮಾಡಿ, ನನ್ನ ಆರೋಗ್ಯ ಬಹಳ ಸುಧಾರಿಸಿದೆ. ಒಟ್ಟಾವಾ ಸಾರ್ವಜನಿಕ ಆಸ್ಪತ್ರೆಯಿಂದ ನಾನು ಗುಣಮುಖನಾಗಿದ್ದನ್ನು ವೈದ್ಯರು ಖಚಿತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಮಾರ್ಚ್ 12 ರಂದು ಜಸ್ಟಿನ್ ಟ್ರುಡೊ ಅವರ ಕಚೇರಿ ಸೋಫಿ ಗೊಗ್ರೊಯಿರ್ ಅವರಿಗೆ ಕೊರೊನಾ ಸೋಂಕು ತಗಲಿರುವುದು ಖಚಿತವಾಗಿತ್ತು. ಲಂಡನ್ ನಿಂದ ಮರಳಿ ಬಳಿಕ ಇವರ ಆರೋಗ್ಯ ಹದಗೆಟ್ಟಿತ್ತು.

    ಪತ್ನಿಗೆ ಕೊರೊನಾ ಬಂದ ನಂತರ ಟ್ರುಡೊ ಮನೆಯಲ್ಲೇ ಪ್ರತ್ಯೇಕವಾಗಿದ್ದರು. ಮೂವರು ಮಕ್ಕಳಿಗೂ ಕೊರೊನಾ ಸೋಂಕು ಬಂದಿಲ್ಲ.

    ಕೆನಡಾದಲ್ಲಿ 5,607 ಮಂದಿಗೆ ಕೊರೊನಾ ಬಂದಿದ್ದು 61 ಮಂದಿ ಮೃತಪಟ್ಟಿದ್ದಾರೆ. ಒಂಟ್ಟು ಈಗ 5,067 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, 479 ಮಂದಿ ಗುಣಮುಖರಾಗಿದ್ದಾರೆ.

    ಕೊರೊನಾ ಗುಣಪಡಿಸಲಾಗದ ಕಾಯಿಲೆ ಅಲ್ಲ. ಸ್ವಚ್ಛತೆಯ ಜೊತೆಗೆ ವೈದ್ಯರು ನೀಡಿದ ಔಷಧಿಯನ್ನು ಸರಿಯಾಗಿ ಸೇವಿಸಿದರೆ ಕೊರೊನಾ ಗುಣವಾಗುತ್ತದೆ.

  • ಒಂದು ವರ್ಷ ಒಲಿಂಪಿಕ್ಸ್ ಮುಂದೂಡಿಕೆ?

    ಒಂದು ವರ್ಷ ಒಲಿಂಪಿಕ್ಸ್ ಮುಂದೂಡಿಕೆ?

    ಟೋಕಿಯೊ: ಕೊರೊನಾ ವೈರಸ್ ಮರಣ ಮೃದಂಗಕ್ಕೆ ವಿಶ್ವವೇ ತತ್ತರಿಸಿದ್ದು ಅನಿವಾರ್ಯವಾಗಿ ಈ ವರ್ಷ ನಡೆಯಬೇಕಿದ್ದ ಒಲಿಂಪಿಕ್ಸ್ ಕ್ರೀಡಾಕೂಟ ಒಂದು ವರ್ಷ ಮುಂದೂಡಿಕೆಯಾಗುವ ಸಾಧ್ಯತೆಯಿದೆ.

    ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮತ್ತು ಆತಿಥೇಯ ರಾಷ್ಟ್ರ ಜಪಾನ್ ನಿಗದಿತ ವೇಳಾಪಟ್ಟಿಯಂತೆ ಒಲಿಂಪಿಕ್ಸ್ ನಡೆಸುವುದಾಗಿ ಹೇಳುತ್ತಿದ್ದವು. ಆದರೆ ಈಗ ಒಲಿಂಪಿಕ್ಸ್ ಮುಂದೂಡುವ ನಿಲುವನ್ನು ತೋರಿಸುತ್ತಿವೆ ಎಂದು ವರದಿಯಾಗಿದೆ.

    ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಟೋಕಿಯೊ ಒಲಿಂಪಿಕ್ಸ್‍ಗೆ ಸಂಬಂಧಿಸಿದಂತೆ ಕೆನಡಾ ಮತ್ತು ಆಸ್ಟ್ರೇಲಿಯಾ ಪ್ರಮುಖ ನಿರ್ಧಾರ ಕೈಗೊಂಡಿವೆ. ಟೋಕಿಯೊ ಕ್ರೀಡಾಕೂಟಕ್ಕೆ ತಮ್ಮ ಆಟಗಾರರನ್ನು ಕಳುಹಿಸುವುದಿಲ್ಲ ಎಂದು ಉಭಯ ದೇಶಗಳು ಸ್ಪಷ್ಟನೆ ನೀಡಿವೆ. ಇದನ್ನೂ ಓದಿ: ಕೊರೊನಾ ಭೀತಿ ಇದ್ರೂ ಒಲಿಂಪಿಕ್ ಜ್ಯೋತಿ ನೋಡಲು ಅರ್ಧ ಕಿ.ಮೀ. ಕ್ಯೂ

    ಕೆನಡಾ ಒಲಿಂಪಿಕ್ಸ್ ಸಮಿತಿ (ಸಿಒಸಿ) ಮತ್ತು ಕೆನಡಾ ಪ್ಯಾರಾ ಒಲಿಂಪಿಕ್ಸ್ ಸಮಿತಿ (ಸಿಪಿಸಿ) ಕ್ರೀಡಾಪಟುಗಳ ಆಯೋಗವು ರಾಷ್ಟ್ರೀಯ ಕ್ರೀಡಾ ಒಕ್ಕೂಟ ಮತ್ತು ಕೆನಡಾ ಸರ್ಕಾರದೊಂದಿಗೆ ಚರ್ಚಿಸಿದ್ದು, ತಮ್ಮ ಆಟಗಾರರನ್ನು ಟೋಕಿಯೊಗೆ ಕಳುಹಿಸದಿರಲು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ. ಜೊತೆಗೆ ಆಟಗಾರರ ಮತ್ತು ವಿಶ್ವ ಸಮುದಾಯದ ಆರೋಗ್ಯಕ್ಕಿಂತ ಬೇರೆ ಯಾವುದೂ ನಮಗೆ ಮುಖ್ಯವಲ್ಲ ಎಂದು ಅಭಿಪ್ರಾಯಪಟ್ಟಿದೆ.  ಇದನ್ನೂ ಓದಿ: ಕೊರೊನಾ ಎಫೆಕ್ಟ್ – ಮನೆಯಲ್ಲೇ ಏಕಾಂಗಿಯಾಗಿ ಬೀಚ್ ವಾಲಿಬಾಲ್ ಆಡಿದ ರಾಸ್: ವಿಡಿಯೋ

    ಒಲಿಂಪಿಕ್ಸ್ ಅನ್ನು ಮುಂದೂಡಲು ಒಂದು ಆಯ್ಕೆ ಇದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಅಧ್ಯಕ್ಷ ಥಾಮಸ್ ಬಾಕ್ ಹೇಳಿದ್ದಾರೆ. ಆದರೆ ರದ್ದು ಮಾಡುವುದು ನಮ್ಮ ಕಾರ್ಯಸೂಚಿಯಲ್ಲಿಲ್ಲ. ‘ನಾವು ಜಗತ್ತಿನಾದ್ಯಂತÀ ಪರಿಸ್ಥಿತಿ ಮತ್ತು ಒಲಿಂಪಿಕ್ಸ್‍ನ ಪ್ರಭಾವದ ಬಗ್ಗೆ ಪಾಲುದಾರರೊಂದಿಗೆ ಚರ್ಚಿಸಿದ್ದೇವೆ. ಮುಂದಿನ 4 ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ಇದೇ ವಿಚಾರವಾಗಿ ಸೋಮವಾರ ಜಪಾನ್ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ಶಿಂಜೊ ಅಬೆ, ‘ನಾವು ಕ್ರೀಡಾಕೂಟವನ್ನು ಆಯೋಜಿಸಲು ಬದ್ಧರಾಗಿದ್ದೇವೆ. ಆಟಗಾರರ ಸುರಕ್ಷತೆಗೆ ಧಕ್ಕೆಯುಂಟಾಗುವುದಿಲ್ಲ. ಆದರೆ ಒಲಿಂಪಿಕ್ಸ್ ಅನ್ನು ಸುರಕ್ಷಿತವಾಗಿ ನಡೆಸಲು ಸಾಧ್ಯವಿಲ್ಲ ಎಂದು ಭಾವಿಸಿದರೆ, ನಾವು ಮುಂದೂಡುತ್ತೇವೆ ಎಂದು ಹೇಳಿದ್ದರು.

    ಶೇ.70ರಷ್ಟು ಅಮೆರಿಕದ ಆಟಗಾರರು ಒಲಿಂಪಿಕ್ಸ್ ಅನ್ನು ಮುಂದೂಡಲು ಒಲವು ತೋರಿದ್ದಾರೆ. ಇತ್ತ ಕ್ರೀಡಾಕೂಟವು 2020ರ ಜುಲೈ 24ರಿಂದ ಆಗಸ್ಟ್ 9ರವರೆಗೆ ನಡೆದರೆ ಆಟಗಾರರನ್ನು ಕಳುಹಿಸುತ್ತೇವೆ ಎಂದು ಕೆನಡಾ ಮತ್ತು ಆಸ್ಟ್ರೇಲಿಯಾ ಪಟ್ಟು ಹಿಡಿದಿವೆ.

  • ಜಿಮ್‍ನಲ್ಲಿ ಕಠಿಣ ವರ್ಕೌಟ್- 22 ಕೆಜಿ ತೂಕ ಇಳಿಸಿದ 73ರ ಅಜ್ಜಿ

    ಜಿಮ್‍ನಲ್ಲಿ ಕಠಿಣ ವರ್ಕೌಟ್- 22 ಕೆಜಿ ತೂಕ ಇಳಿಸಿದ 73ರ ಅಜ್ಜಿ

    ಒಟ್ಟಾವಾ: ಜಿಮ್‍ನಲ್ಲಿ ಕಠಿಣ ವರ್ಕೌಟ್ ಮಾಡುವ ಮೂಲಕ 73 ವರ್ಷದ ಅಜ್ಜಿಯೊಬ್ಬರು 22 ಕೆಜಿ ತೂಕ ಇಳಿಸಿದ್ದಾರೆ.

    ಕೆನಡಾ ರಾಜಧಾನಿ ಒಟ್ಟಾವಾದ 73 ವರ್ಷದ ಜಾನ್ ಮೆಕೆಡೊನಾಲ್ಡ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧರಾಗಿದ್ದಾರೆ. ಅವರ ಇನ್‍ಸ್ಟಾಗ್ರಾಮ್ ಖಾತೆ ಟ್ರೈನ್ ವಿಥ್‍ಜಾನ್ ಅನ್ನು 5 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.

    https://www.instagram.com/p/B6RWQdwjTJS/?utm_source=ig_embed

    ಜಾನ್ ಮೆಕೆಡೊನಾಲ್ಡ್ ಅವರು ಮೂರು ವರ್ಷಗಳ ಹಿಂದೆ ವಯೋಸಹಜ ಕಾಯಿಲೆ ಸೇರಿದಂತೆ ಅಧಿಕ ತೂಕ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಹೀಗಾಗಿ 5.3 ಅಡಿ ಎತ್ತರ, 90 ಕೆಜಿ ತೂಕದ ಜಾನ್ ಜಿಮ್‍ಗೆ ಹೋಗಲು ಪ್ರಾರಂಭಿಸಿದರು. ಕಠಿಣ ವರ್ಕೌಟ್ ಮಾಡುವ ಮೂಲಕ 22 ಕೆಜಿಗಿಂತ ಹೆಚ್ಚು ತೂಕವನ್ನು ಕಡಿಮೆ ಮಾಡಿದ್ದಾರೆ. ಜೊತೆಗೆ ಜಾನ್ ಅವರ ದೇಹದ ಸ್ನಾಯುಗಳು ಬಲವಾಗಿವೆ.

    ಜಾನ್ ಅವರು ದೈಹಿಕವಾಗಿ ಭಾರೀ ಬದಲಾಗಿದ್ದಾರೆ. ಅವರು ಆಹಾರ ಪದ್ಧತಿ ಬದಲಾವಣೆ ತಂದು, ಪ್ರೋಟೀನ್ ಪ್ರಮಾಣವನ್ನು ಹೆಚ್ಚಿಸಿದರು. ಈ ಮೂಲಕ ಅವರು ವೇಟ್ ಲಿಫ್ಟಿಂಗ್ ಹಾಗೂ ಬಾಡಿಬಿಲ್ಡರ್ ಆಗಿದ್ದಾರೆ ಎಂದು ಕೆನಡಾ ಮಾಧ್ಯಮಗಳು ವರದಿ ಮಾಡಿವೆ.

    https://www.instagram.com/p/B9ecp-0Dh7g/

  • ಭಾವಿ ಪತ್ನಿಗೆ ಕೆನಡಾದಿಂದ ಚಂದನ್ ಸರ್ಪ್ರೈಸ್

    ಭಾವಿ ಪತ್ನಿಗೆ ಕೆನಡಾದಿಂದ ಚಂದನ್ ಸರ್ಪ್ರೈಸ್

    ಬೆಂಗಳೂರು: ‘ಬಿಗ್‍ಬಾಸ್’ ವಿನ್ನರ್ ಚಂದನ್ ಶೆಟ್ಟಿ ತಮ್ಮ ಭಾವಿ ಪತ್ನಿ ನಿವೇದಿತಾ ಗೌಡಗೆ ಕೆನಡಾದಿಂದಲೇ ಸರ್ಪ್ರೈಸ್ ನೀಡಿದ್ದಾರೆ.

    ಹೌದು. ಈ ಬಾರಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಒಟ್ಟಿಗೆ ಹೊಸ ವರ್ಷವನ್ನು ಆಚರಣೆ ಮಾಡಿಲ್ಲ. ಯಾಕೆಂದರೆ ಚಂದನ್ ಕಾರ್ಯಕ್ರಮವೊಂದಕ್ಕೆ ಕೆನಡಾಗೆ ಹೋಗಿದ್ದಾರೆ. ಹೀಗಾಗಿ ಅಲ್ಲಿಂದಲೇ ನಿವೇದಿತಾಗೆ  ಒಂದು ವಿಡಿಯೋ ಮಾಡಿ ಸರ್ಪ್ರೈಸ್ ನೀಡಿದ್ದಾರೆ. ಇದನ್ನೂ ಓದಿ: ಮದುವೆ ತಯಾರಿಯಲ್ಲಿ ಚಂದನ್- ನಿವೇದಿತಾ

    ಚಂದನ್ ಕೆನಡಾದಲ್ಲಿ ಸ್ನೋ ಏಂಜಲ್ ತಯಾರಿಸಿ, ಆ ವಿಡಿಯೋನ ನಿವೇದಿತಾ ಗೌಡಗೆ ಕಳುಹಿಸುವ ಮೂಲಕ ಸರ್ಪ್ರೈಸ್ ಕೊಟ್ಟಿದ್ದಾರೆ. ತನ್ನ ಭಾವಿ ಪತಿ ನೀಡಿರುವ ಸರ್ಪ್ರೈಸ್ ಅನ್ನು ನಿವೇದಿತಾ ಗೌಡ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಜೊತೆಗೆ “ಇದು ತುಂಬಾ ಕ್ಯೂಟ್ ಆಗಿದೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. 2020ರ ಹೊಸ ವರ್ಷದಂದು ನಿನ್ನನ್ನು ತುಂಬಾ ಮಿಸ್ ಮಾಡಿಕೊಂಡೆ. ಹೊಸ ವರ್ಷದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಎಲ್ಲರಿಗೂ ಹೊಸ ವರ್ಷದ ಶುಭಾಶಯವನ್ನು ಕೋರಿದ್ದಾರೆ.

    ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ‘ಬಿಗ್‍ಬಾಸ್’ ಮನೆಯೊಳಗೆ ಭೇಟಿಯಾಗಿದ್ದು, ಇಬ್ಬರು ಸ್ನೇಹಿತರಾಗಿದ್ದರು. ಇಬ್ಬರ ಸ್ನೇಹ ಪ್ರೀತಿಯಾಗಿ ಬದಲಾಗಿದ್ದು, ಚಂದನ್ ಶೆಟ್ಟಿ ಮೈಸೂರು ಯುವ ದಸರಾ ವೇದಿಕೆ ಮೇಲೆ ನಿವೇದಿತಾ ಗೌಡ ಕೈಬೆರಳಿಗೆ ಉಂಗುರ ತೊಡಿಸುವ ಮೂಲಕ ಎಲ್ಲರ ಮುಂದೆಯೇ ಪ್ರಪೋಸ್ ಮಾಡಿದ್ದರು. ಬಳಿಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಿಶ್ಚಿತಾರ್ಥ ಸಮಾರಂಭ ಕೂಡ ಅದ್ಧೂರಿಯಾಗಿ ನಡೆದಿದೆ. ಸದ್ಯದಲ್ಲೇ ಇಬ್ಬರು ಮದುವೆಯಾಗಲಿದ್ದಾರೆ.

    https://www.instagram.com/p/B6xk92HJd9E/

  • ಮೂತ್ರ ವಿಸರ್ಜನೆಗೆ ಬ್ಯಾಟನ್ನು ಬಿಟ್ಟು ಮೈದಾನ ತೊರೆದು ಓಡಿದ ಆಟಗಾರ – ವಿಡಿಯೋ

    ಮೂತ್ರ ವಿಸರ್ಜನೆಗೆ ಬ್ಯಾಟನ್ನು ಬಿಟ್ಟು ಮೈದಾನ ತೊರೆದು ಓಡಿದ ಆಟಗಾರ – ವಿಡಿಯೋ

    ಅಬುಧಾಬಿ: ಟಿ20 ವಿಶ್ವಕಪ್ ಕ್ರಿಕೆಟ್ ಅರ್ಹತಾ ಪಂದ್ಯದಲ್ಲಿ ಆಟಗಾರನೊಬ್ಬ ಮೂತ್ರ ವಿಸರ್ಜನೆ ಮಾಡಲು ಬ್ಯಾಟನ್ನು ಬಿಟ್ಟು ಮೈದಾನದಿಂದಲೇ  ಓಡಿದ ಪ್ರಸಂಗ ನಡೆದಿದೆ.

    ಅಬುಧಾಬಿಯ ಶೇಖ್ ಝಾಯದ್ ಕ್ರೀಡಾಂಗಣದಲ್ಲಿ ಕೆನಡಾ ಮತ್ತು ನೈಜೀರಿಯಾ ನಡುವೆ ಟಿ20 ಕ್ರಿಕೆಟ್ ಪಂದ್ಯ ನಡೆಯುತಿತ್ತು. ಕೆನಡಾ ನೀಡಿದ 160 ರನ್ ಗಳ ಗುರಿಯನ್ನು ಬೆನ್ನತ್ತಿದ ನೈಜೀರಿಯಾ 7 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 38 ರನ್ ಗಳಿಸಿತ್ತು. ಈ ಸಂದರ್ಭದಲ್ಲಿ ಕ್ರೀಸ್ ನಲ್ಲಿದ್ದ ಸುಲೇಮಾನ್ ರನ್ಸೀವಿ ಇದ್ದಕ್ಕಿದ್ದಂತೆ ಬ್ಯಾಟನ್ನು ಬಿಟ್ಟು ಓಡಿಕೊಂಡು ಮೈದಾನವನ್ನು ತೊರೆದಿದ್ದಾರೆ.

    ಇದ್ದಕ್ಕಿದ್ದಂತೆ ಯಾರಿಗೂ ಹೇಳದೇ ರನ್ಸೀವಿ ಓಡಿದ್ದನ್ನು ನೋಡಿ ಅಂಪೈರ್ ಮತ್ತು ಆಟಗಾರರು ಆ ಕ್ಷಣ ದಂಗಾಗಿ ಬಿಟ್ಟಿದ್ದಾರೆ. ಓಡಿದ್ದು ಯಾಕೆ ಎನ್ನುವುದು ತಿಳಿಯದ ಪರಿಣಾಮ ಕೊನೆಗೆ ಆಟ ಮುಂದುವರಿಸಲು ಮೊತ್ತೊಬ್ಬ ಆಟಗಾರ ಮೈದಾನಕ್ಕೆ ಇಳಿಯಲು ಮುಂದಾಗುತ್ತಾನೆ. ಈ ಸಮಯದಲ್ಲಿ ರನ್ಸೀವಿ ಟಿವಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡು ತೊಡೆಯ ಗಾರ್ಡ್ ಗಳನ್ನು ಸರಿ ಮಾಡಿಕೊಂಡು ಓಡಿಕೊಂಡು ಮೈದಾನವನ್ನು ಪ್ರವೇಶಿಸುತ್ತಾರೆ.

    ರನ್ಸೀವಿ ಓಡಿಕೊಂಡು ಮೈದಾನವನ್ನು ಪ್ರವೇಶಿಸುವುದನ್ನು ನೋಡಿ ಇತರೇ ನೈಜೀರಿಯಾ ಆಟಗಾರರು ಬಿದ್ದು ಬಿದ್ದು ನಕ್ಕಿದ್ದಾರೆ. ವಿಷಯ ತಿಳಿದು ಅಂಪೈರ್ ಸಹ ನಗೆ ಬೀರಿದ್ದಾರೆ. ಈ ಅರ್ಹತಾ ಪಂದ್ಯವನ್ನು ಕೆನಡಾ 50 ರನ್ ಗಳಿಂದ ಗೆದ್ದುಕೊಂಡಿದೆ.

  • ಕೆನಡಾದಲ್ಲಿ ಕುರುಕ್ಷೇತ್ರ ವೀಕ್ಷಿಸಿದ ಕನ್ನಡಿಗರು

    ಕೆನಡಾದಲ್ಲಿ ಕುರುಕ್ಷೇತ್ರ ವೀಕ್ಷಿಸಿದ ಕನ್ನಡಿಗರು

    ಬೆಂಗಳೂರು: ಮೂರು ದಿನಗಳ ಹಿಂದೆಯಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಬಿಡುಗಡೆಗೊಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕೆನಡಾದಲ್ಲಿಯೂ ಕನ್ನಡಾಭಿಮಾನಿಗಳು ಚಿತ್ರವನ್ನು ವೀಕ್ಷಿಸಿ ಸಂಭ್ರಮಿಸಿದ್ದಾರೆ.

    ಕೆನಡಾದಲ್ಲಿರುವ ಹಲವಾರು ಕನ್ನಡಿಗರು ಸಿನಿಮಾವನ್ನು ವೀಕ್ಷಿಸಿದ್ದಾರೆ. ಅಲ್ಲದೆ ಚಿತ್ರ ತುಂಬಾ ಸುಂದರವಾಗಿ ಮೂಡಿಬಂದಿದ್ದು, ದರ್ಶನ್ ಅಭಿನಯವನ್ನು ಮೆಚ್ಚಿದ್ದಾರೆ. ಚಿತ್ರ ವೀಕ್ಷಿಸಿದ ಬಳಿಕ ಅಲ್ಲಿನ ಕನ್ನಡಿಗರು ಸಿನಿಮಾದ ಪೋಸ್ಟರ್ ಹಿಡಿದು ಐ ಲವ್ ಯೂ ಡಿ ಬಾಸ್ ಎಂದು ಕುಣಿದು ಕುಪ್ಪಳಿಸಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳನ್ನು ಕೆನಡಾ ಕನ್ನಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಮುನಿರತ್ನ ನಿರ್ಮಾಣದ ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್, ನಿಖಿಲ್ ಕುಮಾರಸ್ವಾಮಿ, ಅರ್ಜುನ್ ಸರ್ಜಾ, ರವಿಚಂದ್ರನ್ ಹೀಗೆ ಬಹುತಾರಾಗಣವೇ ಇದೆ. ಆಗಸ್ಟ್ 9ರ ಶುಕ್ರವಾರದಂದು ಬೆಳಗ್ಗಿನ ಜಾವ 4.30ಕ್ಕೆ ಬೆಂಗಳೂರಿನ ಕೋರಮಂಗಲದ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಗೊಂಡಿತು. ಅಂದು ವರಮಹಾಲಕ್ಷ್ಮಿ ಹಬ್ಬವಿದ್ದು, ಅದರ ಮಧ್ಯೆಯೂ ಅಭಿಮಾನಿಗಳು ಚಿತ್ರಮಂದಿರಕ್ಕೆ ಆಗಮಿಸಿ ಮಹಾಭಾರತದ ದೃಶ್ಯ ವೈಭವವನ್ನು ಕಣ್ತುಂಬಿಕೊಂಡಿದ್ದರು.

    ಗುರುವಾರ ಬೆಂಗಳೂರಿನ ಮಂತ್ರಿಮಾಲ್‍ನಲ್ಲಿ ಸಿನಿಮಾದ ಪ್ರೀಮಿಯರ್ ಶೋ ನಡೆಯಿತು. ದರ್ಶನ್, ಸುಮಲತಾ ಅಂಬರೀಶ್, ರಾಕ್‍ಲೈನ್ ವೆಂಕಟೇಶ್ ಪ್ರೀಮಿಯರ್ ಶೋ ವೀಕ್ಷಿಸಿದ್ದರು. ಬಳಿಕ ಮಾತಾಡಿದ ಸುಮಲತಾ ಅಂಬರೀಶ್ ಎಲ್ಲರ ನಟನೆ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರೆ, ಎಲ್ಲರೂ ಸಿನಿಮಾ ನೋಡಿದ ಬಳಿಕ ನಾನು ಪ್ರತಿಕ್ರಿಯಿಸ್ತೇನೆ ಅಂತ ದರ್ಶನ್ ಹೇಳಿದ್ದರು.