ಧ್ರುವ ಸರ್ಜಾ (Dhruva Sarja) ನಟಿಸಿರುವ ಪ್ರೇಮ್ (Prem) ನಿರ್ದೇಶಿರುವ ಬಹುನಿರೀಕ್ಷಿತ ಚಿತ್ರವೇ `ಕೆಡಿ’. ಚಿತ್ರದ ಎರಡು ಹಾಡುಗಳು ಈಗಾಗ್ಲೇ ರಿಲೀಸ್ ಆಗಿ ವೈರಲ್ ಆಗಿದೆ. ಇದೀಗ ಟೀಸರ್ ಎಂಟ್ರಿಗೆ ಕೌಂಟ್‌ಡೌನ್ ಶುರುವಾಗಿದೆ.
ಸಾಮಾನ್ಯವಾಗಿ ಪ್ಯಾನ್ ಇಂಡಿಯಾ ಚಿತ್ರಗಳ ಟೀಸರ್, ಟ್ರೇಲರ್ ಏಕಕಾಲದಲ್ಲಿ ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗುತ್ತವೆ. ಆದರೆ ಕೆಡಿ (KD) ಟೀಮ್ ಟೀಸರ್ ರಿಲೀಸ್ ಕಾರ್ಯಕ್ರಮಗಳನ್ನು ವಿಭಿನ್ನವಾಗಿ ನಡೆಸಲು ಪ್ಲ್ಯಾನ್ ಮಾಡಿಕೊಂಡಿದೆ.ಒಂದೊಂದು ಭಾಷೆಯಲ್ಲಿ ಒಂದೊಂದು ದಿನ ಟೀಸರ್ ರಿಲೀಸ್ ಆಗಲಿದೆ. ಇದನ್ನೂಓದಿ: ದರ್ಶನ್ ಫ್ಯಾಮಿಲಿ ಕುಡಿ ಶೀಘ್ರದಲ್ಲೇ ಹೀರೋ ಆಗಿ ಎಂಟ್ರಿ?
ಆರಂಭಿಕವಾಗಿ ಇದೇ ಗುರುವಾರ ಮುಂಬೈನಲ್ಲಿ ಹಿಂದಿ ಭಾಷೆಯ ಟೀಸರ್ ಮಧ್ಯಾಹ್ನ ರಿಲೀಸ್ ಆಗುತ್ತೆ. ಅದೇ ದಿನ ಹೈದ್ರಾಬಾದ್‌ನಲ್ಲಿ ತೆಲುಗು ಭಾಷೆಯ ಟೀಸರ್ ರಿಲೀಸ್ ಆಗುತ್ತೆ. ಕನ್ನಡದಲ್ಲಿ ಯಾವಾಗ ಎಂದು ಕಾಯುತ್ತಿದ್ದ ಫ್ಯಾನ್ಸ್ ಕುತೂಹಲಕ್ಕೆ ಇದುವರೆಗೂ ಉತ್ತರ ಕೊಟ್ಟಿಲ್ಲ ಕೆಡಿ ಟೀಮ್. ಇದನ್ನೂ ಓದಿ: `ಎಕ್ಕ’ ಸಿನಿಮಾ ರಿಲೀಸ್‌ಗೆ ದಿನಗಣನೆ – ಮಂತ್ರಾಲಯ ರಾಯರ ದರ್ಶನ ಪಡೆದ ಯುವ ರಾಜ್‌ಕುಮಾರ್
ಪ್ರೇಮ್ ಸಿನಿಮಾ ಅಂದ್ಮೇಲೆ ಪ್ರಚಾರ ಹೈಪು ದೊಡ್ಡಮಟ್ಟಕ್ಕಿರಲೇಕು. ಅದರಂತೆ ವಿವಿಧ ಊರುಗಳಲ್ಲಿ ಒಂದೊಂದು ದಿನ ಗ್ಯಾಪ್ ತೆಗೆದುಕೊಂಡು ಟೀಸರ್ ರಿಲೀಸ್ ಮಾಡಲಿದೆ ಟೀಮ್. ಘೋಷಣೆಯೂ ಮೂರು ದಿನ ನಡೆಯಲಿದ್ದು ಭಾನುವಾರ ಪೂರ್ತಿ ದಿನ ಅಭಿಮಾನಿಗಳು ಕಾದರೂ ಕನ್ನಡ (Kannada) ಭಾಷೆಯ ಟೀಸರ್ ಡೇಟ್ ಘೋಷಣೆ ಆಗಲಿಲ್ಲ. ಆದರೆ ಸೀಕ್ರೇಟ್ ಏನ್ ಗೊತ್ತಾ ಎಲ್ಲಾ ಭಾಷೆಯ ಬಳಿಕ ಕೊನೆಯಲ್ಲಿ ಬೆಂಗಳೂರಿನಲ್ಲಿ ಮೂಲ ಭಾಷೆ ಕನ್ನಡದಲ್ಲಿ ಟೀಸರ್ ರಿಲೀಸ್ ಆಗುತ್ತೆ. ಇದು ಕೆಡಿ ಪ್ಲ್ಯಾನ್. ಕೆಡಿ ಚಿತ್ರವನ್ನು ಬಹುಕೋಟಿ ವೆಚ್ಚದಲ್ಲಿ ಕನ್ನಡದ ಕೆವಿಎನ್ ಫಿಲಂಸ್ ನಿರ್ಮಿಸಿದೆ.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ನಟನೆಯ ‘ಕೆಡಿ’ (KD) ಚಿತ್ರದ ರಿಲೀಸ್‌ಗೆ ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಇದರ ನಡುವೆ ಅರ್ಜುನ್ ಸರ್ಜಾ ನಿರ್ದೇಶನದ ‘ಸೀತಾ ಪಯಣ’ ಸಿನಿಮಾದಲ್ಲಿ ಧ್ರುವ ನಟಿಸಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಲಾಗಿದೆ. ಇದನ್ನೂ ಓದಿ:ರಾಮ್ ಚರಣ್ ‘ಪೆದ್ದಿ’ ಚಿತ್ರದ ಗ್ಲಿಂಪ್ಸ್ ಔಟ್- ನಟನ ಮಾಸ್ ಅವತಾರಕ್ಕೆ ಫ್ಯಾನ್ಸ್ ಫಿದಾ
ಧ್ರುವ ಸರ್ಜಾ ಅವರು ‘ಸೀತಾ ಪಯಣ’ (Seetha Payana) ಸಿನಿಮಾದಲ್ಲಿ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಅತಿಥಿ ಪಾತ್ರವಾಗಿದ್ದರೂ ಕಥೆಯಲ್ಲಿ ಟ್ವಿಸ್ಟ್ ಕೊಡೋ ಪಾತ್ರ ಅವರದ್ದಾಗಿದೆ. ಈ ಚಿತ್ರದಲ್ಲಿ ಧ್ರುವ ಜಬರ್‌ದಸ್ತ್ ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪವನ್ ಎಂಬ ಪಾತ್ರಕ್ಕೆ ಧ್ರುವ ಜೀವ ತುಂಬಿದ್ದಾರೆ. ಸದ್ಯ ರಿವೀಲ್ ಅವರ ಖಡಕ್ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಿನಿಮಾ ರಿಲೀಸ್‌ಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಇದನ್ನೂ ಓದಿ:ಪಾರ್ಶ್ವವಾಯುವಿಗೆ ತುತ್ತಾಗಿ ‘ವಿಕ್ರಾಂತ್ ರೋಣ’ ನಟಿ ಜಾಕ್ವೆಲಿನ್ ತಾಯಿ ನಿಧನ
ಇನ್ನೂ ‘ಸೀತಾ ಪಯಣ’ ಸಿನಿಮಾದಲ್ಲಿ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ. ನಾಯಕಿಯಾಗಿ ಐಶ್ವರ್ಯಾ ಸರ್ಜಾ ನಟಿಸಲಿದ್ದಾರೆ. ಈ ಸಿನಿಮಾ ಕನ್ನಡದ ಜೊತೆ ತೆಲುಗು, ತಮಿಳಿನಲ್ಲಿಯೂ ಮೂಡಿ ಬರಲಿದೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಕೆಡಿ ಸಿನಿಮಾದ ಶೂಟಿಂಗ್ ಗಾಗಿ ಮೈಸೂರಿನಲ್ಲಿ ಉಳಿದುಕೊಂಡಿದ್ದರು. ಇದೀಗ ತಮ್ಮ ಭಾಗದ ಬಹುತೇಕ ಚಿತ್ರೀಕರಣವನ್ನು ಮುಗಿಸಿಕೊಟ್ಟಿದ್ದಾರೆ ಶಿಲ್ಪಾ. ಈಗ ಶಿಲ್ಪಾ ಶೆಟ್ಟಿ ಅವರ ಕೆಡಿ ಸಿನಿಮಾದ ಫೋಟೋವೊಂದು ರಿಲೀಸ್ ಆಗಿದ್ದು, ರೆಟ್ರೋ ಶೈಲಿಯಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ನಿನ್ನೆಯಷ್ಟೇ ತಮ್ಮ ಭಾಗದ ಶೂಟಿಂಗ್ ಮುಗಿದ ನಂತರ ಸೆಟ್ ನಲ್ಲಿ ನಿರ್ದೇಶಕ ಜೋಗಿ ಪ್ರೇಮ್ (Prem) ಜೊತೆ ತಮಾಷೆ ಮಾಡಿದ್ದಾರೆ. ಜೊತೆಗೆ ಈವರೆಗಿನ ಚಿತ್ರೀಕರಣದ ನೆನಪುಗಳನ್ನೂ ಅವರು ಹಂಚಿಕೊಂಡಿದ್ದಾರೆ. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಧ್ರುವ ಸರ್ಜಾ (Dhruva Sarja) ನಟನೆಯ ‘ಕೆಡಿ’ (KD Film) ಸಿನಿಮಾ ಇದೇ ಡಿಸೆಂಬರ್‌ಗೆ ತೆರೆಗೆ ಅಪ್ಪಳಿಸಲಿದೆ. ಇದರ ನಡುವೆ ಸಿನಿಮಾದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಚಿತ್ರತಂಡ ಹಂಚಿಕೊಂಡಿದೆ. ಸಿನಿಮಾ ರಿಲೀಸ್ ಮುನ್ನವೇ ದುಬಾರಿ ಮೊತ್ತಕ್ಕೆ ‘ಕೆಡಿ’ ಚಿತ್ರದ ಆಡಿಯೋ ರೈಟ್ಸ್ ರಿಲೀಸ್ ಆಗಿದೆ.
‘ಕೆಡಿ’ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಅದ್ಧೂರಿಯಾಗಿ ಈ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದೆ. ಈ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. ‘ಕೆಡಿ’ ರೆಟ್ರೋ ಸ್ಟೈಲ್ ಸಿನಿಮಾ. ಹಾಗಾಗಿ ಚಿತ್ರತಂಡ ಕೂಡ ಅದೇ ಲುಕ್‌ನಲ್ಲಿ ಸುದ್ದಿಗೋಷ್ಠಿಗೆ ಆಗಮಿಸಿದ್ದರು. ಕನ್ನಡ ಚಿತ್ರರಂಗದಲ್ಲೇ ದಾಖಲೆ ಮೊತ್ತಕ್ಕೆ ‘ಕೆಡಿ’ ಆಡಿಯೋ ರೈಟ್ಸ್ ಮಾರಾಟವಾಗಿದೆ ಎಂದು ಚಿತ್ರತಂಡ ಹೇಳಿದೆ. ಆನಂದ್ ಆಡಿಯೋ ಸಂಸ್ಥೆ ರೈಟ್ಸ್ ಕೊಂಡುಕೊಂಡಿದೆ. 17.70 ಕೋಟಿ ರೂ.ಗೆ ಆಡಿಯೋ ರೈಟ್ಸ್ ಸೇಲ್ ಆಗಿದೆ ಎಂದು ತಿಳಿಸಿದ್ದಾರೆ.
ಈ ವೇಳೆ ನಟ ಧ್ರುವ ಸರ್ಜಾ ಮಾತನಾಡಿ, ‘ಕೆಡಿ’ ಅಂದ್ರೆ ಕಾಳಿದಾಸ. ಈ ಸಿನಿಮಾದಲ್ಲಿ ಕಾಳಿದಾಸ ನಾನೇ. ನಿರ್ದೇಶಕ ಪ್ರೇಮ್ ಜೊತೆಗೆ ಸಿನಿಮಾ ಮಾಡಬೇಕು ಅಂತ ನಿರ್ಧಾರ ಮಾಡಿದ್ದೆ. ಅದು ಕೆವಿಎನ್ ಸಂಸ್ಥೆಯಿಂದ ಆರಂಭ ಆಯ್ತು. ಚಿತ್ರದ ಆಡಿಯೋ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟ ಆಗಿದ್ದು, ತುಂಬಾ ಖುಷಿ ಆಗಿದೆ. ನನ್ನ ‘ಅದ್ಧೂರಿ’ ಸಿನಿಮಾ 4 ಕೋಟಿ ರೂ. ಖರ್ಚಿನಲ್ಲಿ ನಿರ್ಮಾಣವಾಗಿತ್ತು. ಆದರೆ ಈಗ ಕೆಡಿ ಸಿನಿಮಾದ ಆಡಿಯೋ ಹಕ್ಕು ಮಾತ್ರ 17.70 ಕೋಟಿ ರೂ. ಸೇಲ್ ಆಗಿದೆ. ಸಿನಿಮಾ ಕೂಡ ತುಂಬಾ ರಿಚ್ ಆಗಿ ಮೂಡಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಕೆಡಿ ಸಿನಿಮಾದ ಶೂಟಿಂಗ್ ಗಾಗಿ ಮೈಸೂರಿನಲ್ಲಿ ಉಳಿದುಕೊಂಡಿದ್ದರು. ಇದೀಗ ತಮ್ಮ ಭಾಗದ ಬಹುತೇಕ ಚಿತ್ರೀಕರಣವನ್ನು ಮುಗಿಸಿಕೊಟ್ಟಿದ್ದಾರೆ ಶಿಲ್ಪಾ. ಆನಂತರ ಸೆಟ್ ನಲ್ಲಿ ನಿರ್ದೇಶಕ ಜೋಗಿ ಪ್ರೇಮ್ (Prem) ಜೊತೆ ತಮಾಷೆ ಮಾಡಿದ್ದಾರೆ. ಜೊತೆಗೆ ಈವರೆಗಿನ ಚಿತ್ರೀಕರಣದ ನೆನಪುಗಳನ್ನೂ ಅವರು ಹಂಚಿಕೊಂಡಿದ್ದಾರೆ. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಧ್ರುವ ಸರ್ಜಾ (Dhruva Sarja) ನಟನೆಯ ‘ಕೆಡಿ’ (KD Film) ಸಿನಿಮಾ ಇದೇ ಡಿಸೆಂಬರ್‌ಗೆ ತೆರೆಗೆ ಅಪ್ಪಳಿಸಲಿದೆ. ಇದರ ನಡುವೆ ಸಿನಿಮಾದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಚಿತ್ರತಂಡ ಹಂಚಿಕೊಂಡಿದೆ. ಸಿನಿಮಾ ರಿಲೀಸ್ ಮುನ್ನವೇ ದುಬಾರಿ ಮೊತ್ತಕ್ಕೆ ‘ಕೆಡಿ’ ಚಿತ್ರದ ಆಡಿಯೋ ರೈಟ್ಸ್ ರಿಲೀಸ್ ಆಗಿದೆ.
‘ಕೆಡಿ’ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಅದ್ಧೂರಿಯಾಗಿ ಈ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದೆ. ಈ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. ‘ಕೆಡಿ’ ರೆಟ್ರೋ ಸ್ಟೈಲ್ ಸಿನಿಮಾ. ಹಾಗಾಗಿ ಚಿತ್ರತಂಡ ಕೂಡ ಅದೇ ಲುಕ್‌ನಲ್ಲಿ ಸುದ್ದಿಗೋಷ್ಠಿಗೆ ಆಗಮಿಸಿದ್ದರು. ಕನ್ನಡ ಚಿತ್ರರಂಗದಲ್ಲೇ ದಾಖಲೆ ಮೊತ್ತಕ್ಕೆ ‘ಕೆಡಿ’ ಆಡಿಯೋ ರೈಟ್ಸ್ ಮಾರಾಟವಾಗಿದೆ ಎಂದು ಚಿತ್ರತಂಡ ಹೇಳಿದೆ. ಆನಂದ್ ಆಡಿಯೋ ಸಂಸ್ಥೆ ರೈಟ್ಸ್ ಕೊಂಡುಕೊಂಡಿದೆ. 17.70 ಕೋಟಿ ರೂ.ಗೆ ಆಡಿಯೋ ರೈಟ್ಸ್ ಸೇಲ್ ಆಗಿದೆ ಎಂದು ತಿಳಿಸಿದ್ದಾರೆ.
ಈ ವೇಳೆ ನಟ ಧ್ರುವ ಸರ್ಜಾ ಮಾತನಾಡಿ, ‘ಕೆಡಿ’ ಅಂದ್ರೆ ಕಾಳಿದಾಸ. ಈ ಸಿನಿಮಾದಲ್ಲಿ ಕಾಳಿದಾಸ ನಾನೇ. ನಿರ್ದೇಶಕ ಪ್ರೇಮ್ ಜೊತೆಗೆ ಸಿನಿಮಾ ಮಾಡಬೇಕು ಅಂತ ನಿರ್ಧಾರ ಮಾಡಿದ್ದೆ. ಅದು ಕೆವಿಎನ್ ಸಂಸ್ಥೆಯಿಂದ ಆರಂಭ ಆಯ್ತು. ಚಿತ್ರದ ಆಡಿಯೋ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟ ಆಗಿದ್ದು, ತುಂಬಾ ಖುಷಿ ಆಗಿದೆ. ನನ್ನ ‘ಅದ್ಧೂರಿ’ ಸಿನಿಮಾ 4 ಕೋಟಿ ರೂ. ಖರ್ಚಿನಲ್ಲಿ ನಿರ್ಮಾಣವಾಗಿತ್ತು. ಆದರೆ ಈಗ ಕೆಡಿ ಸಿನಿಮಾದ ಆಡಿಯೋ ಹಕ್ಕು ಮಾತ್ರ 17.70 ಕೋಟಿ ರೂ. ಸೇಲ್ ಆಗಿದೆ. ಸಿನಿಮಾ ಕೂಡ ತುಂಬಾ ರಿಚ್ ಆಗಿ ಮೂಡಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ, ಶಾರುಖ್ ನಟನೆಯ ‘ಪಠಾಣ್’ ಚಿತ್ರಕ್ಕೆ 180 ಜನರನ್ನು ಬಳಸಿ, ಆರ್ಕೆಸ್ಟ್ರಾ ಮಾಡಿಸಲಾಗಿತ್ತು. ಆದರೆ ‘ಕೆಡಿ’ ಸಿನಿಮಾ ಅದನ್ನು ಮೀರಿಸಿದೆ. ಆ ಮೂಲಕ ಮೇಕಿಂಗ್ ಹಂತದಲ್ಲೇ ಸಿನಿಮಾ ಹೊಸ ದಾಖಲೆ ಬರೆದಿದೆ ಎಂದು ಮಾಹಿತಿ ನೀಡಿದ್ದಾರೆ.
ಧ್ರುವ ಸರ್ಜಾ ನಟನೆಯ ಕೆಡಿ (KD) ಸಿನಿಮಾದ ಶೂಟಿಂಗ್ (Shooting) ಗಾಗಿ ಮೈಸೂರಿಗೆ ಬಂದಿಳಿದಿದ್ದಾರೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty). ಚಿತ್ರೀಕರಣದ ಮಧ್ಯ ಬಿಡುವು ಮಾಡಿಕೊಂಡು ಅವರು ನಂಜನಗೂಡಿನ ನಂಜುಂಡೇಶ್ವರನ ದರ್ಶನ ಪಡೆದಿದ್ದಾರೆ. ಇತ್ತೀಚೆಗೆ ಶಿಲ್ಪಾ ಶೆಟ್ಟಿ ಟೆಂಪಲ್ ರನ್ ಮಾಡುತ್ತಿದ್ದಾರೆ.
ಈ ವರ್ಷ ಧ್ರುವ ಸರ್ಜಾ ಅಭಿನಯದ ಎರಡು ಬಹು ನಿರೀಕ್ಷಿತ ಚಿತ್ರಗಳು ರಿಲೀಸಾಗುವುದು ಕನ್ ಫರ್ಮ್ ಆಗಿದೆ. ಅದರಲ್ಲಿ ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಕಾಣಲಿದೆ ಎಂದು ನಿರ್ದೇಶಕ ಪ್ರೇಮ್ ಅವರೇ ಪ್ರಕಟಿಸಿದ್ದಾರೆ. ಅತಿದೊಡ್ಡ ತಾರಾಗಣ, ಅದ್ದೂರಿ ಮೇಕಿಂಗ್‌ನಿಂದಲೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲ, ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ಕೆಡಿ ಚಿತ್ರದ ಆಡಿಯೋ ಹಕ್ಕು ಕೂಡ ಆನಂದ್ ಆಡಿಯೋ ಸಂಸ್ಥೆಗೆ ಸೇಲಾಗಿದೆ. ಇದುವರೆಗೂ ತಮ್ಮ ಚಿತ್ರದ ಆಡಿಯೋ ಹಕ್ಕು ಎಷ್ಟು ಮೊತ್ತಕ್ಕೆ ಹೋಗಿದೆ ಎಂದು ಯಾವೊಬ್ಬ ನಿರ್ಮಾಪಕರೂ ಹೇಳಿಕೊಂಡಿದ್ದಿಲ್ಲ. ಆದರೆ ಇದೇ ಮೊದಲಬಾರಿಗೆ ನಿರ್ದೇಶಕ ಪ್ರೇಮ್ ತಮ್ಮ ಕೆಡಿ ಚಿತ್ರದ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋದವರು 17.70 ಕೋಟಿ ರೂ.ಗಳಿಗೆ ತಗೊಂಡಿದ್ದಾರೆ ಎಂದು ಪ್ರಕಟಿಸಿದ್ದಾರೆ,
ಹೌದು, ಈ ವಿಷಯವನ್ನು ಸ್ವತಃ ಪ್ರೇಮ್ ಅವರೇ ಹೇಳಿದ್ದಾರೆ. ಕೆಡಿ ಚಿತ್ರದ ವಿಶೇಷ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯವನ್ನು ಅವರು ಅಧಿಕೃತವಾಗಿ ಘೋಷಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಜ್ ಮಾಡಿದ್ದಾರೆ, ವೇದಿಕೆಯಲ್ಲಿ ಚಿತ್ರದ ನಿರ್ದೇಶಕ, ನಾಯಕ, ಸಂಗೀತ ನಿರ್ದೇಶಕ ಸೇರಿ ಎಲ್ಲರೂ ವಿಂಟೇಜ್ ಡ್ರೆಸ್‌ನಲ್ಲಿದ್ದುದು ವಿಶೇಷವಾಗಿತ್ತು. ಏಕೆಂದರೆ ಈ ಚಿತ್ರದ ಕಥೆ ನಡೆಯುವುದು ಎಪ್ಪತ್ತು, ಎಂಭತ್ತರ ದಶಕದಲ್ಲಿ. ನಿರ್ದೇಶಕ ಪ್ರೇಮ್, ಚಿತ್ರದ ಕ್ವಾಲಿಟಿಯಲ್ಲಿ ಎಲ್ಲೂ ಕಾಂಪ್ರಮೈಸ್ ಆಗಿಲ್ಲ, ಇನ್ನು ಈ ಚಿತ್ರದ ಹಾಡುಗಳಿಗೆ ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲಬಾರಿಗೆ 256 ಪೀಸ್ ಆರ್ಕೆಸ್ಟ್ರಾ ಬಳಸಲಾಗಿದೆ, ಶಾರುಖ್‌ಖಾನ್ ಅಭಿನಯದ ಜವಾನ್ ಚಿತ್ರಕ್ಕೆ ೧೮೦ ಪೀಸ್ ಆರ್ಕೆಸ್ಟ್ರಾ ಬಳಸಲಾಗಿತ್ತು, ಇದೀಗ ಆ ದಾಖಲೆಯನ್ನು ಕೆಡಿ ಸಿನಿಮಾ ಮುರಿದಿದೆ.
ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ಪ್ರೇಮ್, ಕೆಡಿ ಚಿತ್ರಕ್ಕೆ ಈವರೆಗೆ 150 ದಿನಗಳ ಚಿತ್ರೀಕರಣ ನಡೆಸಿದ್ದೇವೆ. ಇನ್ನೊಂದು ವಾರದ ಟಾಕಿ ಪೋರ್ಷನ್ ಹಾಗೂ 3 ಹಾಡುಗಳನ್ನು ಶೂಟ್ ಮಾಡಿದರೆ ಚಿತ್ರೀಕರಣ ಮುಗಿದಂತೆ, ನೈಜಘಟನೆ ಆಧಾರಿತ ಈ ಚಿತ್ರಕ್ಕೆ ಇಪ್ಪತ್ತು ಎಕರೆ ಜಾಗದಲ್ಲಿ ಸೆಟ್ ಹಾಕಿದ್ದೇವೆ, ಚಿತ್ರದಲ್ಲಿ ಆರು ಹಾಡುಗಳಿದ್ದು, ಆರು ಜನ ಕೊರಿಯಾಗ್ರಾಫರ‍್ಸ್ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿ ನಂತರ ಕೆಡಿ ಚಿತ್ರವನ್ನು ಡಿಸೆಂಬರ್‌ನಲ್ಲಿ ತೆರೆಗೆ ತರುವುದಾಗಿ ತಿಳಿಸಿದರು. ಅಲ್ಲದೆ ಆಗಸ್ಟ್ 16ರ ವರಮಹಾಲಕ್ಷ್ಮಿ ಹಬ್ಬದಂದು ಮುಂಬೈನಲ್ಲಿ ಚಿತ್ರದ ಟೀಸರ್ ಹಾಗೂ 24ಕ್ಕೆ ಚಿತ್ರದ ಮೊದಲ ಹಾಡನ್ನು ಹೈದರಾಬಾದ್‌ನಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿರುವುದಾಗಿಯೂ ಅವರು ತಿಳಿಸಿದರು.
ನನ್ನ ವಿಐಪಿಗಳಿಗೆ ನಮಸ್ಕಾರ ಎಂದು ಮಾತು ಆರಂಭಿಸಿದ ನಾಯಕ ಧ್ರುವ, ಮೊದಲು ನಾನು ಕೆವಿಎನ್ ಜೊತೆ ಸೈನ್ ಮಾಡಿದಾಗ ಯಾರಕೈಲಿ ನಿರ್ದೇಶನ ಮಾಡಿಸುವುದು ಎಂಬ ಪ್ರಶ್ನೆ ಬಂದಾಗ ಫಸ್ಟ್ ನನ್ನ ಬಾಯಲ್ಲಿ ಬಂದದ್ದು ಪ್ರೇಮ್ ಹೆಸರು, ಅವರು ಸಿನಿಮಾ ಬಗ್ಗೆ ತುಂಬಾ ತಿಳಿದುಕೊಂಡಿದ್ದಾರೆ, ನಾವು ಸೆಟ್‌ಗೆ ಹೋದಾಗ ಅವರು ಟೀಚರ್ ಥರ ಇರ್ತಾರೆ, ಅವರೇ ಆಕ್ಟ್ ಮಾಡಿ ತೋರಿಸುತ್ತಾರೆ, ಇದು 1970-75ರಲ್ಲಿ ಬೆಂಗಳೂರಲ್ಲಿ ನಡೆಯುವ ಕಥೆ, ಇಡೀ ಬೆಂಗಳೂರನ್ನೇ ಸೆಟ್ ಹಾಕಿ ಅವರು, ಇನ್ನೊಂದು ಬೆಂಗಳೂರು ಥರ ಮಾಡಿಬಿಟ್ಟಿದ್ರು, ಚಿತ್ರದ ಬಗ್ಗೆ ಎಲ್ಲ ಕಡೆಯಿಂದಲೂ ಪಾಸಿಟಿವ್ ವೈಬ್ಸ್ ಬರ‍್ತಾ ಇದೆ, ನಾನು ಕೂಡ ತುಂಬಾ ಎಕ್ಸೂಟ್ ಆಗಿದ್ದೇನೆ ಎಂದು ಹೇಳಿದರು, ಕಾರ್ಯಕಾರಿ ನಿರ್ಮಾಪಕರಾದ ಸುಪ್ರೀತ್ ಮಾತನಾಡಿ ಈ ಸಿನಿಮಾ ಸ್ಟಾರ್ಟ್ ಆಗಲು ಕಾರಣ ಪ್ರೇಮ್, ನಾನು ವೆಂಕಟ್ ಅವರ ಬಳಿ ಚರ್ಚೆ ಮಾಡುತ್ತ `ಧ್ರುವ ಸರ್ಜಾ ಸಿನಿಮಾನ ಯಾರಕೈಲಿ ಡೈರೆಕ್ಟ್ ಮಾಡಿಸೋದು ಎಂಬ ಪ್ರಶ್ನೆ ಬಂದಾಗ ಫಸ್ಟ್ ನೆನಪಾದದ್ದು ಪ್ರೇಮ್. ಜನ್ಯ ಅವರು ನಮ್ಮ ಸಿನಿಮಾಗೆ ಕೊಟ್ಟಷ್ಟು ಟೈಮನ್ನು ಯಾವ ಚಿತ್ರಕ್ಕೂ ಕೊಟ್ಟಿಲ್ಲ ಎಂದು ಹೇಳಿದರು. ಅರ್ಜುನ್ ಜನ್ಯ ಮಾತನಾಡಿ ನನ್ನ ಲೈಫ್ ನಲ್ಲೇ ದ ಬೆಸ್ಟ್ ಸಿನಿಮಾ ಇದು. ಭಾರತದ ಎಲ್ಲ ಬೆಸ್ಟ್ ಮ್ಯುಸಿಶಿಯನ್ಸ್ ಪರ್ ಫಾರ್ಮ್ ಮಾಡಿದ್ದಾರೆ. ಈ ಥರದ ಮ್ಯೂಸಿಕ್ ತೆಗೆಸೋದು ಪ್ರೇಮ್ ಕೈಲಷ್ಟೇ ಸಾಧ್ಯ ಎಂದು ಹೇಳಿದರು,
ಕೆಡಿ ಚಿತ್ರಕ್ಕೆ ಪ್ರೇಮ್ ಅವರೇ ಕಥೆ, ಚಿತ್ರಕಥೆ, ಸಂಬಾಷಣೆ ಬರೆದು ನಿರ್ದೇಶಿಸಿದ್ದಾರೆ. ಕೆ.ವಿ.ಎನ್. ಪ್ರೊಡಕ್ಷನ್ಸ್ ಬ್ಯಾನರ್‌ಅಡಿ ನಿರ್ಮಾಣವಾಗಿರೋ ಈ ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿಯಂಥ ದಿಗ್ಗಜ ಕಲಾವಿದರು ನಟಿಸಿದ್ದಾರೆ. ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಕೆಡಿ ಚಿತ್ರಕ್ಕಿದೆ.
ಮೊನ್ನೆಯಷ್ಟೇ ಕೆಡಿ ಸಿನಿಮಾದ ಶೂಟಿಂಗ್ ಮುಕ್ತಾಯವಾದ ಸುದ್ದಿಯನ್ನು ನಿರ್ದೇಶಕ ಪ್ರೇಮ್ ಬಹಿರಂಗ ಪಡಿಸಿದ್ದರು. ಇದೀಗ ಇದೇ ಸಿನಿಮಾದ ಮತ್ತೊಂದು ಸುದ್ದಿ ಹೊರ ಬಿದ್ದಿದ್ದು, ತಮಿಳಿನ ಹೆಸರಾಂತ ನಟ ವಿಜಯ್ ಸೇತುಪತಿ (Vijay Sethupathi) ಈ ಸಿನಿಮಾದಲ್ಲಿ ನಟಿಸಲಿದ್ದಾರಂತೆ. ಕೆಡಿ ಸಿನಿಮಾ ಎರಡು ಭಾಗವಾಗಿ ಮೂಡಿ ಬರಲಿದ್ದು, ಮೊದಲ ಭಾಗದಲ್ಲಿ ಕ್ಲೈಮ್ಯಾಕ್ಸ್ ನಲ್ಲಿ ಸೇತುಪತಿ ಕಾಣಿಸಿಕೊಂಡರೆ, ಎರಡನೇ ಭಾಗದಲ್ಲಿ ಹೆಚ್ಚು ಸ್ಕ್ರೀನ್ ಸ್ಪೆಸ್ ಹೊಂದಲಿದ್ದಾರಂತೆ.
ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಧ್ರುವ ಸರ್ಜಾ ನಟನೆಯ ಮಾರ್ಟಿನ್ (Martin) ಸಿನಿಮಾ ತೆರೆಗೆ ಬರಬೇಕಿತ್ತು. ಕೆಲ ತಿಂಗಳ ಹಿಂದೆ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ಮಾಡಿ, ಮಾರ್ಟಿನ್ ಚಿತ್ರದ ಕೆಲವು ಅಪ್ ಡೇಟ್ ನೀಡಿತ್ತು ಚಿತ್ರತಂಡ. ಈಗ ಮತ್ತೆ ಅದರ ಅಪ್ ಡೇಟ್ ಕೇಳುತ್ತಿದ್ದಾರೆ ಫ್ಯಾನ್ಸ್. ಈ ನಡುವೆ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದ ಶೂಟಿಂಗ್ ಕೂಡ ಮುಗಿದಿದೆ. ಇದೇ ವರ್ಷ ರಿಲೀಸ್ ಮಾಡುವುದಾಗಿ ನಿರ್ದೇಶಕ ಪ್ರೇಮ್ ಘೋಷಣೆ ಮಾಡಿದ್ದಾರೆ.
ಹೊಸ ವರ್ಷದ ದಿನದಂದು ಕೆಡಿ ಸಿನಿಮಾ ಇದೇ ವರ್ಷ ರಿಲೀಸ್ ಆಗಲಿದೆ ಎಂದು ಘೋಷಣೆ ಮಾಡುತ್ತಿದ್ದಂತೆಯೇ ಮಾರ್ಟಿನ್ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ. ಮಾರ್ಟಿನ್ ಗಿಂತ ಮುಂಚೆ ಕೆಡಿ ಸಿನಿಮಾ ರಿಲೀಸ್ ಆಗಲಿದೆ ಎನ್ನುವ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಕೆಡಿ ಸಿನಿಮಾದ ಚಿತ್ರೀಕರಣ ಪೂರ್ಣವಾಗಿದೆ. ಮಾರ್ಟಿನ್ ಕೆಲಸದ ಬಗ್ಗೆ ಚಿತ್ರತಂಡವೇ ಮಾಹಿತಿ ನೀಡಬೇಕಿದೆ.
ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿರುವ ಕೆಡಿ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಅಣ್ಣನಾಗಿ ರಮೇಶ್ ಅರವಿಂದ್ ನಟಿಸಲಿದ್ದಾರೆ. ತಾರಾಗಣದ ಕಾರಣದಿಂದಾಗಿಯೇ ಈ ಸಿನಿಮಾ ಕುತೂಹಲ ಮೂಡಿಸಿದ್ದು, ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಹೀಗೆ ಹೆಸರಾಂತ ಕಲಾವಿದರೇ ತಾರಾಗಣದಲ್ಲಿದ್ದಾರೆ. ಈ ಹಿಂದೆ ತಮ್ಮದೇ ಸಿನಿಮಾದಲ್ಲಿ ನಟಿಸಿದ್ದ ರೀಷ್ಮಾ ನಾಣಯ್ಯ (Reeshma Nanaiah) ಅವರಿಗೆ ಮತ್ತೊಂದು ಅವಕಾಶ ನೀಡಿದ್ದಾರೆ ಪ್ರೇಮ್. ಕೆಡಿ ಸಿನಿಮಾದಲ್ಲಿ ರೀಷ್ಮಾ ಅವರು ಮಚ್ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದಾರೆ.
1968ರಿಂದ 1978ರ ನಡುವೆ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ರೆಟ್ರೋ ಸಿನಿಮಾ ಕಟ್ಟಿಕೊಡಲಾಗ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅದಕ್ಕೆ ತಕ್ಕಂತೆ ಸ್ಟಾರ್ಕಾಸ್ಟ್, ಮೇಕಿಂಗ್, ಪ್ರಮೋಷನ್ ಎಲ್ಲವೂ ಇರಲಿದೆ. ಈ ಚಿತ್ರಕ್ಕಾಗಿ ಕೇವಲ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿ ಧ್ರುವ ಸರ್ಜಾ ನಟಿಸಿದ್ದಾರೆ.
ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಧ್ರುವ ಸರ್ಜಾ ನಟನೆಯ ಮಾರ್ಟಿನ್ (Martin) ಸಿನಿಮಾ ತೆರೆಗೆ ಬರಬೇಕಿತ್ತು. ಕೆಲ ತಿಂಗಳ ಹಿಂದೆ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ಮಾಡಿ, ಮಾರ್ಟಿನ್ ಚಿತ್ರದ ಕೆಲವು ಅಪ್ ಡೇಟ್ ನೀಡಿತ್ತು ಚಿತ್ರತಂಡ. ಈಗ ಮತ್ತೆ ಅದರ ಅಪ್ ಡೇಟ್ ಕೇಳುತ್ತಿದ್ದಾರೆ ಫ್ಯಾನ್ಸ್. ಈ ನಡುವೆ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದ ಶೂಟಿಂಗ್ ಕೂಡ ಮುಗಿದಿದೆ. ಇದೇ ವರ್ಷ ರಿಲೀಸ್ ಮಾಡುವುದಾಗಿ ನಿರ್ದೇಶಕ ಪ್ರೇಮ್ ಘೋಷಣೆ ಮಾಡಿದ್ದಾರೆ.
ಹೊಸ ವರ್ಷದ ದಿನದಂದು ಕೆಡಿ ಸಿನಿಮಾ ಇದೇ ವರ್ಷ ರಿಲೀಸ್ ಆಗಲಿದೆ ಎಂದು ಘೋಷಣೆ ಮಾಡುತ್ತಿದ್ದಂತೆಯೇ ಮಾರ್ಟಿನ್ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ. ಮಾರ್ಟಿನ್ ಗಿಂತ ಮುಂಚೆ ಕೆಡಿ ಸಿನಿಮಾ ರಿಲೀಸ್ ಆಗಲಿದೆ ಎನ್ನುವ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಕೆಡಿ ಸಿನಿಮಾದ ಚಿತ್ರೀಕರಣ ಪೂರ್ಣವಾಗಿದೆ. ಮಾರ್ಟಿನ್ ಕೆಲಸದ ಬಗ್ಗೆ ಚಿತ್ರತಂಡವೇ ಮಾಹಿತಿ ನೀಡಬೇಕಿದೆ.
ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿರುವ ಕೆಡಿ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಅಣ್ಣನಾಗಿ ರಮೇಶ್ ಅರವಿಂದ್ ನಟಿಸಲಿದ್ದಾರೆ. ತಾರಾಗಣದ ಕಾರಣದಿಂದಾಗಿಯೇ ಈ ಸಿನಿಮಾ ಕುತೂಹಲ ಮೂಡಿಸಿದ್ದು, ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಹೀಗೆ ಹೆಸರಾಂತ ಕಲಾವಿದರೇ ತಾರಾಗಣದಲ್ಲಿದ್ದಾರೆ.
ಈ ಹಿಂದೆ ತಮ್ಮದೇ ಸಿನಿಮಾದಲ್ಲಿ ನಟಿಸಿದ್ದ ರೀಷ್ಮಾ ನಾಣಯ್ಯ (Reeshma Nanaiah) ಅವರಿಗೆ ಮತ್ತೊಂದು ಅವಕಾಶ ನೀಡಿದ್ದಾರೆ ಪ್ರೇಮ್. ಕೆಡಿ ಸಿನಿಮಾದಲ್ಲಿ ರೀಷ್ಮಾ ಅವರು ಮಚ್ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದಾರೆ.
1968ರಿಂದ 1978ರ ನಡುವೆ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ರೆಟ್ರೋ ಸಿನಿಮಾ ಕಟ್ಟಿಕೊಡಲಾಗ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅದಕ್ಕೆ ತಕ್ಕಂತೆ ಸ್ಟಾರ್ಕಾಸ್ಟ್, ಮೇಕಿಂಗ್, ಪ್ರಮೋಷನ್ ಎಲ್ಲವೂ ಇರಲಿದೆ. ಈ ಚಿತ್ರಕ್ಕಾಗಿ ಕೇವಲ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿ ಧ್ರುವ ಸರ್ಜಾ ನಟಿಸಿದ್ದಾರೆ.
ದಕ್ಷಿಣ ಭಾರತದ ಖ್ಯಾತ ಸ್ಟಂಟ್ ಕೊರಿಯೋಗ್ರಾಫರ್ ರಾಮ-ಲಕ್ಷ್ಮಣ (Rama-Laxman) ಜೋಡಿ ಮತ್ತೆ ಕನ್ನಡ ಚಿತ್ರವೊಂದಕ್ಕೆ ಸಾಹಸ ದೃಶ್ಯಗಳನ್ನು ಕಂಪೋಸ್ ಮಾಡುತ್ತಿದೆ. ಧ್ರುವ ಸರ್ಜಾ ನಟನೆ, ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿರುವ ಕೆಡಿ (KD) ಸಿನಿಮಾದ ಸಾಹದ ದೃಶ್ಯವೊಂದಕ್ಕೆ ಈ ಜೋಡಿ ಸ್ಟಂಟ್ ಕೊರಿಯೋಗ್ರಫಿ ಮಾಡುತ್ತಿದೆ. ಈಗಾಗಲೇ ಚಿತ್ರೀಕರಣದಲ್ಲೂ ಇವರ ತೊಡಗಿಕೊಂಡಿದ್ದಾರೆ.
ಇದೇ ತಂಡದಿಂದ ಮತ್ತೊಂದು ತಾಜಾ ಸುದ್ದಿ ಬಂದಿದ್ದು, ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಅಣ್ಣನಾಗಿ ರಮೇಶ್ ಅರವಿಂದ್ ನಟಿಸಲಿದ್ದಾರೆ. ಸದ್ಯದಲ್ಲೇ ತಮ್ಮ ಭಾಗದ ಚಿತ್ರೀಕರಣದಲ್ಲೂ ಅವರು ಭಾಗಿಯಾಗಲಿದ್ದಾರೆ. ತಾರಾಗಣದ ಕಾರಣದಿಂದಾಗಿಯೇ ಈ ಸಿನಿಮಾ ಕುತೂಹಲ ಮೂಡಿಸಿದ್ದು, ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಹೀಗೆ ಹೆಸರಾಂತ ಕಲಾವಿದರೇ ತಾರಾಗಣದಲ್ಲಿದ್ದಾರೆ.
ಈ ಹಿಂದೆ ತಮ್ಮದೇ ಸಿನಿಮಾದಲ್ಲಿ ನಟಿಸಿದ್ದ ರೀಷ್ಮಾ ನಾಣಯ್ಯ (Reeshma Nanaiah) ಅವರಿಗೆ ಮತ್ತೊಂದು ಅವಕಾಶ ನೀಡಿದ್ದಾರೆ ಪ್ರೇಮ್. ಕೆಡಿ ಸಿನಿಮಾದಲ್ಲಿ ರೀಷ್ಮಾ ಅವರು ಮಚ್ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೂಪರ್ ಸ್ಟಾರ್ಗಳಿರುವ ತಾರಾಗಣ ಅಂದ್ರೆ ಅದು ಕೆಡಿ ಸಿನಿಮಾ. ಧ್ರುವ ಸರ್ಜಾ, ರವಿಚಂದ್ರನ್, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) , ಸಂಜಯ್ ದತ್ (Sanjay Dutt), ಹೀಗೆ ಸ್ಟಾರ್ಗಳನ್ನ ಸ್ಟಾರ್ ಡೈರೆಕ್ಟರ್ ನಿರ್ದೇಶಕ ಪ್ರೇಮ್ ನಿರ್ದೇಶನ ಮಾಡ್ತಿದ್ದಾರೆ. ವಿಭಿನ್ನ ಕಥೆ ಹೊತ್ತು, ಪ್ಯಾನ್ ಇಂಡಿಯಾ ಸಿನಿಮಾ ಹೊತ್ತು ತರುತ್ತಿದ್ದಾರೆ.
1968ರಿಂದ 1978ರ ನಡುವೆ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ರೆಟ್ರೋ ಸಿನಿಮಾ ಕಟ್ಟಿಕೊಡಲಾಗ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅದಕ್ಕೆ ತಕ್ಕಂತೆ ಸ್ಟಾರ್ಕಾಸ್ಟ್, ಮೇಕಿಂಗ್, ಪ್ರಮೋಷನ್ ಎಲ್ಲವೂ ಇರಲಿದೆ. ಈ ಚಿತ್ರಕ್ಕಾಗಿ ಕೇವಲ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿ ಧ್ರುವ ಸರ್ಜಾ ನಟಿಸ್ತಿದ್ದಾರೆ.
ನಟ ಧ್ರುವ ಸರ್ಜಾ ಹುಟ್ಟುಹಬ್ಬಕ್ಕಾಗಿ (Birthday) ‘ಕೆಡಿ’ ಸಿನಿಮಾ ತಂಡ ಚಿತ್ರದ ಪೋಸ್ಟರ್ (Poster) ರಿಲೀಸ್ ಮಾಡುವ ಮೂಲಕ ಶುಭಾಶಯ ತಿಳಿಸಿದೆ. ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್‌ನ ಸಿನಿಮಾ ಇದಾಗಿದ್ದು, ಈ ಸಿನಿಮಾದಲ್ಲಿ ಧ್ರುವ ಹೊಸ ರೀತಿಯ ಪಾತ್ರವನ್ನು ಮಾಡಿದ್ದಾರೆ. ಆ ಪಾತ್ರದ ಹಿನ್ನೆಲೆಯಾಗಿಟ್ಟುಕೊಂಡು ಈ ಪೋಸ್ಟರ್ ಸಿದ್ಧ ಮಾಡಿದೆ ಚಿತ್ರತಂಡ.
ಕ್ರಿಯೆಟಿವ್ ಡೈರೆಕ್ಟರ್ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ `ಕೆಡಿ’ (Kd Film) ಸಿನಿಮಾದ ಫೋಟೋವೊಂದು ಈ ಹಿಂದೆ ಲೀಕ್ ಆಗಿತ್ತು. ಮೈಸೂರಿನಲ್ಲಿ ಚಿತ್ರದ ಶೂಟಿಂಗ್ ನಡೆದಾಗ, ಆ ಭಾಗದ ಶೂಟಿಂಗ್‌ನಲ್ಲಿ ಧ್ರುವ ಸರ್ಜಾ ರೆಟ್ರೋ ಲುಕ್ (Retro Look) ನಲ್ಲಿ ಕಂಡಿದ್ದರು. ಅಭಿಮಾನಿಗಳ ಮಧ್ಯ ಧ್ರುವ ಕಾಣಿಸಿಕೊಂಡಿರುವ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ರೆಟ್ರೋ ಲುಕ್‌ನಲ್ಲಿ ಧ್ರುವ ಸಖತ್ ಆಗಿ ಕಂಡಿದ್ದರು.
ಕೆವಿಎನ್ ನಿರ್ಮಾಣದ ಧ್ರುವ ಸರ್ಜಾ (Dhruva Sarja) ಮತ್ತು ನಿರ್ದೇಶಕ ಪ್ರೇಮ್ (Director Prem) ಕಾಂಬಿನೇಷನ್ ಸಿನಿಮಾ ನಾನಾ ಕಾರಣಗಳಿಂದಾಗಿ ಸಖತ್ ಸದ್ದು ಮಾಡ್ತಿದೆ. ಚಿತ್ರದ ಟೈಟಲ್ ಮೂಲಕ ಕ್ಯೂರಿಯಸ್ ಹುಟ್ಟು ಹಾಕಿರುವ ಈ ಸಿನಿಮಾ ಬಗ್ಗೆ ಫ್ಯಾನ್ಸ್ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ ಈ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ರವಿಚಂದ್ರನ್ (Ravichandran) ಕೂಡ ಇದ್ದಾರೆ. ಮೊನ್ನೆಯಷ್ಟೇ ರವಿಚಂದ್ರನ್ ಅವರ `ಕೆಡಿ’ ಸಿನಿಮಾದಲ್ಲಿನ ಫಸ್ಟ್ ಲುಕ್ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿತ್ತು. ಇದನ್ನೂ ಓದಿ:ಅಲ್ಲು ಬ್ಯುಸಿನೆಸ್ ಪಾರ್ಕ್ ನಲ್ಲಿ ಖ್ಯಾತ ನಟ ಅಲ್ಲು ರಾಮಲಿಂಗಯ್ಯ ಪ್ರತಿಮೆ
ಈ ಹಿಂದೆ ತಮ್ಮದೇ ಸಿನಿಮಾದಲ್ಲಿ ನಟಿಸಿದ್ದ ರೀಷ್ಮಾ ನಾಣಯ್ಯ (Reeshma Nanaiah) ಅವರಿಗೆ ಮತ್ತೊಂದು ಅವಕಾಶ ನೀಡಿದ್ದಾರೆ ಪ್ರೇಮ್. ಕೆಡಿ ಸಿನಿಮಾದಲ್ಲಿ ರೀಷ್ಮಾ ಅವರು ಮಚ್ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೂಪರ್ ಸ್ಟಾರ್ಗಳಿರುವ ತಾರಾಗಣ ಅಂದ್ರೆ ಅದು ಕೆಡಿ ಸಿನಿಮಾ. ಧ್ರುವ ಸರ್ಜಾ, ರವಿಚಂದ್ರನ್, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) , ಸಂಜಯ್ ದತ್ (Sanjay Dutt) ಹೀಗೆ ಸ್ಟಾರ್ಗಳನ್ನ ಸ್ಟಾರ್ ಡೈರೆಕ್ಟರ್ ನಿರ್ದೇಶಕ ಪ್ರೇಮ್ ನಿರ್ದೇಶನ ಮಾಡ್ತಿದ್ದಾರೆ. ವಿಭಿನ್ನ ಕಥೆ ಹೊತ್ತು, ಪ್ಯಾನ್ ಇಂಡಿಯಾ ಸಿನಿಮಾ ಹೊತ್ತು ತರುತ್ತಿದ್ದಾರೆ.
1968ರಿಂದ 1978ರ ನಡುವೆ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ರೆಟ್ರೋ ಸಿನಿಮಾ ಕಟ್ಟಿಕೊಡಲಾಗ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅದಕ್ಕೆ ತಕ್ಕಂತೆ ಸ್ಟಾರ್ಕಾಸ್ಟ್, ಮೇಕಿಂಗ್, ಪ್ರಮೋಷನ್ ಎಲ್ಲವೂ ಇರಲಿದೆ. ಈ ಚಿತ್ರಕ್ಕಾಗಿ ಕೇವಲ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿ ಧ್ರುವ ಸರ್ಜಾ ನಟಿಸ್ತಿದ್ದಾರೆ.
ಜೋಗಿ ಪ್ರೇಮ್ (Prem) ಅಡ್ಡಾದಿಂದ ಬ್ರೇಕಿಂಗ್ ಸುದ್ದಿಯೊಂದು ಬಂದಿದೆ. ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಕೆಡಿ’ (KD) ಚಿತ್ರ ತಂಡಕ್ಕೆ ಮತ್ತೋರ್ವ ಖ್ಯಾತ ನಟನ ಆಗಮನವಾಗಿದ್ದು, ಧ್ರುವ ಸರ್ಜಾ (Dhruva Sarja) ಜೊತೆ ಇದೇ ಮೊದಲ ಬಾರಿಗೆ ರಮೇಶ್ ಅರವಿಂದ್ (Ramesh Aravind) ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಮಾಹಿತಿಯನ್ನು ಸ್ವತಃ ಪ್ರೇಮ್ ಅವರೇ ಬಹಿರಂಗ ಪಡಿಸಿದ್ದಾರೆ.
ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿರುವ ಕೆಡಿ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಅಣ್ಣನಾಗಿ ರಮೇಶ್ ಅರವಿಂದ್ ನಟಿಸಲಿದ್ದಾರೆ. ಸದ್ಯದಲ್ಲೇ ತಮ್ಮ ಭಾಗದ ಚಿತ್ರೀಕರಣದಲ್ಲೂ ಅವರು ಭಾಗಿಯಾಗಲಿದ್ದಾರೆ. ತಾರಾಗಣದ ಕಾರಣದಿಂದಾಗಿಯೇ ಈ ಸಿನಿಮಾ ಕುತೂಹಲ ಮೂಡಿಸಿದ್ದು, ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಹೀಗೆ ಹೆಸರಾಂತ ಕಲಾವಿದರೇ ತಾರಾಗಣದಲ್ಲಿದ್ದಾರೆ.