Tag: ಕೆಟಿ ರಾಮರಾವ್

  • ಬಿಜೆಪಿಯನ್ನು ಗೆಲ್ಲಿಸಿದ ರಾಹುಲ್‌ಗೆ ಅಭಿನಂದನೆಗಳು: ಕೆ.ಟಿ ರಾಮ್ ರಾವ್

    ಬಿಜೆಪಿಯನ್ನು ಗೆಲ್ಲಿಸಿದ ರಾಹುಲ್‌ಗೆ ಅಭಿನಂದನೆಗಳು: ಕೆ.ಟಿ ರಾಮ್ ರಾವ್

    ಹೈದರಾಬಾದ್: ಬಿಜೆಪಿಯನ್ನು (BJP) ಮತ್ತೊಮ್ಮೆ ಗೆಲ್ಲಿಸಿದ್ದಕ್ಕಾಗಿ ರಾಹುಲ್ ಗಾಂಧಿಯವರಿಗೆ (Rahul Gandhi) ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಿಆರ್‌ಎಸ್‌ನ ಹಾಲಿ ರಾಜ್ಯಾಧ್ಯಕ್ಷ ಕೆ.ಟಿ ರಾಮ್ ರಾವ್ (KT Rama Rao) ವ್ಯಂಗ್ಯವಾಡಿದ್ದಾರೆ.


    ತೆಲಂಗಾಣದಲ್ಲಿ ದೆಹಲಿ ಚುನಾವಣಾ (Delhi Election) ಫಲಿತಾಂಶದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದರು. ಅವರು ಬಿಜೆಪಿಯನ್ನು ಸೋಲಿಸುವಲ್ಲಿ ರಾಹುಲ್ ಗಾಂಧಿಯವರು ಅಸಮರ್ಥರು ಎಂದು ದೆಹಲಿ ಚುನಾವಣಾ ಫಲಿತಾಂಶವು ಸಾಬೀತು ಮಾಡಿದೆ. ಅವರು ಸ್ವಂತ ಬಲದಿಂದಲೂ ಸಹ ಗೆಲ್ಲಲು ಸಾಧ್ಯವಿಲ್ಲ. ಅಲ್ಲದೆ ಇತರೇ ಸ್ಥಳೀಯ ಪಕ್ಷಗಳನ್ನು ದುರ್ಬಲಗೊಳಿಸಿ, ಪರೋಕ್ಷವಾಗಿ ಬಿಜೆಪಿಯ ಗೆಲುವಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮುಸ್ಲಿಮ್‌ ಬಾಹುಳ್ಯ ಇರೋ ಮುಸ್ತಫಾಬಾದ್‌ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

    ಬಿಜೆಪಿಯನ್ನು ಗೆಲ್ಲಿಸಿದಂತಹ ರಾಹುಲ್ ಗಾಂಧಿಯವರಿಗೆ ನಾನು ಅಭಿನಂದನೆ ಸಲ್ಲಿಸಲು ಇಚ್ಛಿಸುತ್ತೇನೆ. ಈ ಸಾಧನೆಯ ಬಗ್ಗೆ ಅವರಿಗೆ ಬಹಳ ಹೆಮ್ಮೆ ಇದೆ ಎಂದು ನಾನು ಭಾವಿಸುತ್ತೇನೆ ಎಂದು ವ್ಯಂಗ್ಯವಾಡಿದರು.

     

  • ಬಿದ್ದು ಕಾಲು ಮುರಿದುಕೊಂಡ ಕೆಟಿಆರ್- ಯಾವುದಾದ್ರೂ ಓಟಿಟಿ ಶೋನ ಸಲಹೆ ನೀಡಿ

    ಬಿದ್ದು ಕಾಲು ಮುರಿದುಕೊಂಡ ಕೆಟಿಆರ್- ಯಾವುದಾದ್ರೂ ಓಟಿಟಿ ಶೋನ ಸಲಹೆ ನೀಡಿ

    ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರು ಬಿದ್ದು, ಕಾಲು ಮುರಿದುಕೊಂಡಿದ್ದಾರೆ.

    ಈ ಬಗ್ಗೆ ಟ್ವೀಟ್‍ನಲ್ಲಿ ಹಂಚಿಕೊಂಡಿದ್ದು, ಬಿದ್ದು ಕಾಲಿನ ಪಾದಕ್ಕೆ ಪೆಟ್ಟಾಗಿದೆ. ಈ ಹಿನ್ನೆಲೆಯಲ್ಲಿ ವೈದ್ಯರು 3 ವಾರಗಳ ವಿಶ್ರಾಂತಿಯನ್ನು ಸೂಚಿಸಿದ್ದಾರೆ. ಯಾವುದಾದರೂ ಯೋಗ್ಯ ಓಟಿಟಿ ಶೋನ ಕುರಿತು ಸಲಹೆ ನೀಡುತ್ತೀರಾ ಎಂದು ತಿಳಿಸಿದ್ದಾರೆ.

    ಈ ಟ್ವೀಟ್‍ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಶೀಘ್ರವಾಗಿ ಗುಣವಾಗಲಿ ಎಂದು ಹಾರೈಸಿದರೆ, ಇನ್ನೂ ಕೆಲವರು ಓಟಿಟಿಯಲ್ಲಿ ಯಾವುದಾದರೂ ಚೆನ್ನಾಗಿರುವ ಶೋ ಇದ್ದರೆ ತಿಳಿಸಿ ಎಂದಿದ್ದಕ್ಕೆ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಯೂತ್ ಕೈ ಕಾರ್ಯಕರ್ತರ ನಡುವೆ ಮಾರಾಮಾರಿ- ರಾಜೀನಾಮೆಗೆ ಮುಂದಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

    ಇಂದು ಕೆಟಿಆರ್ ಅವರ ಜನ್ಮ ದಿನವಾಗಿದೆ. ಆದರೆ ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ಜನ್ಮದಿನವನ್ನು ಆಚರಿಸದಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಇದ ಬದಲಾಗಿ ಗಿಫ್ಟ್ ಎ ಸ್ಮೈಲ್ ಕಾರ್ಯಕ್ರಮದಡಿಯಲ್ಲಿ ಅಗತ್ಯವಿರುವವರಿಗೆ ಉದಾರವಾಗಿ ದೇಣಿಗೆ ನೀಡುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂ. ಠಾಣೆಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಟ್ರಾಫಿಕ್ ಪೊಲೀಸ್

    Live Tv
    [brid partner=56869869 player=32851 video=960834 autoplay=true]

  • ಐಸ್‍ಕ್ರೀಮ್ ಮಾರಾಟ ಮಾಡಿ 7.5 ಲಕ್ಷ ಗಳಿಸಿದ ತೆಲಂಗಾಣ ಸಿಎಂ ಮಗ

    ಐಸ್‍ಕ್ರೀಮ್ ಮಾರಾಟ ಮಾಡಿ 7.5 ಲಕ್ಷ ಗಳಿಸಿದ ತೆಲಂಗಾಣ ಸಿಎಂ ಮಗ

    ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರ ಕೆಟಿ ರಾಮ ರಾವ್ ಐಸ್‍ಕ್ರೀಮ್ ಮಾರಾಟ ಮಾಡಿ 7.5 ಲಕ್ಷ ರೂ. ಗಳಿಸಿದ್ದಾರೆ.

    ಹೌದು. ಹೈದರಾಬಾದ್ ನಾಗ್ಪುರ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಐಸ್‍ಕ್ರೀಂ ಪಾರ್ಲರ್‍ವೊಂದರಲ್ಲಿ ಕೆಲಸ ಮಾಡಿ 1 ಗಂಟೆಗೂ ಕಡಿಮೆ ಅವಧಿಯಲ್ಲಿ ಕೆಟಿ ರಾಮರಾವ್ 7.5 ಲಕ್ಷ ರೂ. ಗಳಿಸಿದ್ರು. ಈ ಐಸ್‍ಕ್ರೀಮ್ ಪಾರ್ಲರ್‍ನವರು ಇಡೀ ತಿಂಗಳಲ್ಲಿ ಗಳಿಸುವ ಹಣ ಇದಕ್ಕಿಂತ ಕಡಿಮೆಯಂತೆ.

    ಆದ್ರೆ ಕೆಟಿ ರಾಮರಾವ್ ಅವರ ಬಳಿ ಐಸ್‍ಕ್ರೀಂ ಖರೀದಿಸಿದ ಬಹುತೇಕರು ಪಕ್ಷದ ಕಾರ್ಯಕರ್ತರಾಗದ್ದರು. ಅವರಲ್ಲಿ ಒಬ್ಬರಾದ 63 ವರ್ಷದ ಸಂಸದ ಮಲ್ಲಾ ರೆಡ್ಡಿ 5 ಲಕ್ಷ ರೂ. ಕೊಟ್ಟು ಐಸ್‍ಕ್ರೀಂ ಖರೀದಿಸಿದ್ರು.

    ಪಕ್ಷದ ಅದ್ಧೂರಿ ಸಮಾವೇಶಕ್ಕಾಗಿ ಹಣ ಸಂಗ್ರಹಿಸಲು ಎರಡು ದಿನ ಕೂಲಿಗಳಾಗಿ ಕೆಲಸ ಮಾಡಿ ಎಂದು ಸಿಎಂ ಚಂದ್ರಶೇಖರ್ ರಾವ್, ಸಚಿವರಿಗೆ, ಮುಖಂಡರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದರು. ಮದಲು ನಾನೇ ಈ ಕೆಲಸವನ್ನು ಮಾಡಿ ಮಾದರಿಯಾಗುತ್ತೇನೆ ಎಂದು ಕೂಡ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಪುತ್ರ ಹಾಗು ಮಾಹಿತಿ ತಂತ್ರಜ್ಞಾನ ಸಚಿವರಾದ ಕೆಟಿ ರಾಮರಾವ್, ಐಸ್‍ಕ್ರೀಮ್ ಪಾರ್ಲರ್‍ಗೆ ಹೋಗಿ, ಏಪ್ರಾನ್ ಧರಿಸಿ ಕೆಲಸ ಶುರು ಮಾಡಿಯೇಬಿಟ್ರು.

    ಮುಂದಿನ ಒಂದು ವಾರಗಳ ಕಾಲ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಈ ರೀತಿ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದು ಸಿಎಂ ಕೆಸಿಆರ್ ಇದನ್ನ ಗುಲಾಬಿ ಕೂಲಿ ದಿನಗಳು ಎಂದು ಕರೆದಿದ್ದಾರೆ (ಕೆಸಿಆರ್ ಅವರ ಪಕ್ಷವಾದ ಟಿಆರ್‍ಎಸ್-ತೆಲಂಗಾಣ ರಾಷ್ಟ್ರ ಸಮಿತಿಯ ಬಣ್ಣ ಗುಲಾಬಿ)

    ಪಕ್ಷದ ಮುಖಂಡರು ತಮ್ಮ ಎರಡು ದಿನಗಳ ಕೆಲಸದಿಂದ ಗಳಿಸುವ ಹಣವನ್ನ ಏಪ್ರಿಲ್ 21ರಂದು ನಡೆಯಲಿರುವ ಟಿಆರ್‍ಎಸ್‍ನ ಅದ್ಧೂರಿ ವಾರ್ಷಿಕ ಸಮಾವೇಶದ ಖರ್ಚು ವೆಚ್ಛಗಳಿಗೆ ಬಳಸಿಕೊಳ್ಳಲಾಗುತ್ತದೆ. ಈಗಾಗಲೇ ಪಕ್ಷದ ಸದಸ್ಯತ್ವ ಶುಲ್ಕದಿಂದ 35 ಕೋಟಿ ರೂ ಸಂಗ್ರಹವಾಗಿದ್ದು, ಪಕ್ಷದ ಬ್ಯಾಂಕ್ ಖಾತೆ ಸೇರಿದೆ ಎಂದು ಕೆಸಿಆರ್ ಹೇಳಿದ್ದಾರೆ.