Tag: ಕೆಟಿವಿಎ

  • ಟೆಲಿವಿಷನ್ ಅಸೋಷಿಯೇಷನ್ : ರವಿ ಗರಣಿ ಅಧ್ಯಕ್ಷ, ಸೃಜನ್ ಲೋಕೇಶ್ ಕಾರ್ಯದರ್ಶಿ

    ಟೆಲಿವಿಷನ್ ಅಸೋಷಿಯೇಷನ್ : ರವಿ ಗರಣಿ ಅಧ್ಯಕ್ಷ, ಸೃಜನ್ ಲೋಕೇಶ್ ಕಾರ್ಯದರ್ಶಿ

    ರ್ನಾಟಕ ಕಿರುತೆರೆಯ ಕಲಾವಿದರು ಹಾಗೂ ತಂತ್ರಜ್ಞರ ಮಾತೃಸಂಸ್ಥೆ ಕರ್ನಾಟಕ ಟೆಲಿವಿಷನ್ (Television) ಅಸೋಷಿಯೇಷನ್ (Association) (KTVA) ಮೊನ್ನೆಯಷ್ಟೇ ಚುನಾವಣೆ ನಡೆದಿದ್ದು, ಕನ್ನಡದ ಹೆಸರಾಂತ ನಿರ್ದೇಶಕ ಹಾಗೂ ನಿರ್ಮಾಪಕ ರವಿ ಆರ್ ಗರಣಿ (Ravi Garani) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಖ್ಯಾತ ನಟ ಸೃಜನ್ ಲೋಕೇಶ್ (Srujan Lokesh) ಕಾರ್ಯದರ್ಶಿ, ನಿರ್ಮಾಪಕ ಭಾಸ್ಕರ್ ಎಸ್.ಎಸ್. ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಧನಂಜಯ ನಟನೆಯ 25ನೇ ಸಿನಿಮಾ ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್

    ಕಾರ್ಯಕಾರಿ ಸಮಿತಿಗೆ ಕಲಾವಿದರಾದ ಗಿರಿಜಾ ಲೋಕೇಶ್, ವೀಣಾ ಸುಂದರ್, ಗಣೇಶ್ ರಾವ್ ಕೆಸರ್ಕರ್, ಸುನೇತ್ರಾ ಪಂಡಿತ್, ರಾಮಸ್ವಾಮಿ ಗೌಡ ಎನ್.ಟಿ, ವಸಂತ್ ಕುಮಾರ್ ವಿ, ನಿರ್ಮಾಪಕಿ ಭಾವನಾ ಬೆಳಗೆರೆ, ನಿರ್ದೇಶಕ ಸತೀಶ್ ಕೃಷ್ಣ, ಬರಹಗಾರ ಕೇಶವಚಂದ್ರ, ಛಾಯಾಗ್ರಾಹಕರಾದ ಬೆಟ್ಟೇ ಗೌಡ ಕೆ.ಟಿ. ನಿರ್ಮಾಣ ನಿರ್ವಾಹಕ ಪರಯ್ಯ ಆರ್ ಮತ್ತು ಹರ್ಷ ವಿಶ್ವನಾಥ್, ಯೂನಿಟ್ ಮಾಲೀಕ ಸೆಲ್ವಂ, ಸಂಕಲನಕಾರ ಕೃಷ್ಣ ಅರಸ್ ಕೆ.ಸಿ, ಪ್ರಸಾಧನ ಕಲಾವಿದ ನಾಗರಾಜು ಪಿ. ಧ್ವನಿಗ್ರಾಹಕ ಕಲಾವಿದ ಸಾಗರ್ ಬಿ.ಕೆ, ಬೆಳಕು ಸಹಾಯಕರಾದ ಶ್ರೀನಿವಾಸ್ ಪಿ.ವಿ, ವಸ್ತ್ರವಿನ್ಯಾಸ ಮತ್ತು ಕಲಾವಿನ್ಯಾಸ ವೀರೇಂದ್ರ ಡಿ.ಸಿ , ವಾಹನ ಚಾಲಕರಾದ ತಿಮ್ಮರಾಜು, ನಿರ್ಮಾಣ ಸಹಾಯಕರಾದ ವೀರೇಂದ್ರ ಪಿಕೆ. ಈ ಬಾರಿ ಆಯ್ಕೆಯಾಗಿರುತ್ತಾರೆ. ಇದನ್ನೂ ಓದಿ:  ಕ್ರಿಕೆಟರ್ ಶುಭಮನ್ ಗಿಲ್ ಬಗ್ಗೆ ಕೇಳಿದ್ದಕ್ಕೆ ನಾಚಿ ನೀರಾದ ರಶ್ಮಿಕಾ ಮಂದಣ್ಣ

    ಆಯ್ಕೆಯಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಅವಧಿ ಮೂರು ವರ್ಷಗಳದ್ದಾಗಿದ್ದು 2023 ರಿಂದ 2025 ರವರೆಗೂ ಕಾಲಾವಧಿಯದ್ದಾಗಿದೆ. ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಕಟ್ಟುವಲ್ಲಿ ರವಿ ಆರ್ ಗರಣಿ ಅವರದ್ದು ಸಾಕಷ್ಟು ಶ್ರಮವಿದೆ. ಹಲವು ವರ್ಷಗಳಿಂದ ಅವರು ಈ ಸಂಘಟನೆಯೊಂದಿಗೆ ಸಕ್ರಿಯರಾಗಿದ್ದಾರೆ. ಇದೀಗ ಅಧ್ಯಕ್ಷರಾಗುವ ಮೂಲಕ ಸಂಘದ ಸಾರಥ್ಯವಹಿಸಿದ್ದಾರೆ. ಇದನ್ನೂ ಓದಿ: ʻಒಲವ ಘಮವುʼ ಆಲ್ಬಂ ಸಾಂಗ್‌ಗೆ ಧ್ರುವ ಸರ್ಜಾ ಮೆಚ್ಚುಗೆ

    ಈ ಹಿಂದೆ ಬಿ.ಸುರೇಶ್, ಎಸ್.ವಿ.ಶಿವಕುಮಾರ್, ರವಿಕಿರಣ್ ಸೇರಿದಂತೆ ಕಿರುತೆರೆಯ ಖ್ಯಾತನಾಮರು ಅಸೋಷಿಯೇಷನ್ ಅಧ್ಯಕ್ಷರಾಗಿ ಉದ್ಯಮಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕೆಲಸ ಮಾಡಿದ್ದಾರೆ. ಉದ್ಯಮದ ಅನೇಕ ಬಿಕ್ಕಟ್ಟುಗಳನ್ನು ಪರಿಹರಿಸಿದ್ದಾರೆ. ಕಲಾವಿದರ, ತಂತ್ರಜ್ಞರ ಕಷ್ಟಕ್ಕೂ ಸ್ಪಂದಿಸಿದ್ದಾರೆ. ಹೀಗಾಗಿ ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಕಿರುತೆರೆಯ ಜಗತ್ತಿನ ಪ್ರತಿಷ್ಠಿತ ಸಂಸ್ಥೆಯಾಗಿದೆ.

  • ಪುನೀತ್ ರಾಜಕುಮಾರ್ ಹೆಸರಿನಲ್ಲಿ ಅಪ್ಪು ಅಮರ ಹೆಲ್ತ್ ಪ್ರೆವಿಲೈಜ್ ಕಾರ್ಡ್

    ಪುನೀತ್ ರಾಜಕುಮಾರ್ ಹೆಸರಿನಲ್ಲಿ ಅಪ್ಪು ಅಮರ ಹೆಲ್ತ್ ಪ್ರೆವಿಲೈಜ್ ಕಾರ್ಡ್

    ರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಕಳೆದ ವರ್ಷ ನವಂಬರ್ ತಿಂಗಳಲ್ಲಿ ‘ಅಪ್ಪು ಅಮರ’  ಕಾರ್ಯಕ್ರಮದ ಮೂಲಕ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅವರಿಗೆ ಗೌರವ  ಸಲ್ಲಿಸಲಾಗಿತ್ತು. ಇದೇ ಸಂದರ್ಭದಲ್ಲಿ ಪ್ರತಿಷ್ಠಿತ ಕಾವೇರಿ ಆಸ್ಪತ್ರೆಯು, ಸಾಯಿ ಸಂಗಮ ಡಯಾಗ್ನೋಸ್ಟಿಕ್ ಮತ್ತು ಹೆಲ್ತ್ ಕೇರ್ ಸಹಯೋಗದಲ್ಲಿ ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ (KTVA) ಸದಸ್ಯರುಗಳಿಗೆ ‘ಅಪ್ಪು ಅಮರ ಹೆಲ್ತ್ ಪ್ರೆವಿಲೈಜ್ ಕಾರ್ಡ್” ವಿತರಿಸುವ ಭರವಸೆ ನೀಡಿತ್ತು. ಅದರಂತೆ ಇದೇ ನವೆಂಬರ್ 13ರಂದು ಭಾನುವಾರ ಸಂಜೆ ಐದು ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ‘ಅಪ್ಪು ಅಮರ ಹೆಲ್ತ್ ಪ್ರಿವೀಲೇಜ್ ಕಾರ್ಡ್” ವಿತರಿಸಲಿದೆ.

    ಈ ಕುರಿತು ಮಾತನಾಡಿದ ಕೆಟಿವಿಎ ಅಧ್ಯಕ್ಷ ಎಸ್.ವಿ. ಶಿವಕುಮಾರ್ (Shivakumar), ‘ಈ ಕಾರ್ಡ್ ಪಡೆದ ಸದಸ್ಯರುಗಳಲ್ಲಿ ಅವಶ್ಯಕತೆ ಇರುವ ಹಾಗೂ ಆರ್ಥಿಕವಾಗಿ ದುರ್ಬಲರಾದ  ಸದಸ್ಯರುಗಳಿಗೆ ಶಸ್ತ್ರಚಿಕಿತ್ಸೆಗಳನ್ನು ಸಂಪೂರ್ಣ ಉಚಿತವಾಗಿ ಮಾಡಲು ಕಾವೇರಿ ಆಸ್ಪತ್ರೆ ಮತ್ತು ಸಾಯಿ ಸಂಗಮ ಡಯಾಗ್ನೋಸ್ಟಿಕ್ ಮತ್ತು ಹೆಲ್ತ್ ಕೇರ್ ನಿರ್ಧರಿಸಿದೆ. ಇದಲ್ಲದೆ ಈ ಹೆಲ್ತ್ ಕಾರ್ಡ್ ಅಡಿಯಲ್ಲಿ ಎಲ್ಲಾ ಸ್ಪೆಷಾಲಿಟಿ ಸವಲತ್ತುಗಳನ್ನು ಕಡಿಮೆ ದರದಲ್ಲಿ ಪಡೆದುಕೊಳ್ಳಬಹುದು. ಈ  ಸವಲತ್ತನ್ನು ಸುಮಾರು 5000 ಸದಸ್ಯರು ಮತ್ತು ಅವರ ಕುಟುಂಬದವರು ಪಡೆಯಲಿದ್ದಾರೆ’ ಎನ್ನುತ್ತಾರೆ. ಇದನ್ನೂ ಓದಿ:`ಮಿಸ್ ಯೂ ಸಾನ್ಯ’ ಎಂದು ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ

    ಭಾನುವಾರ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್  (Ashwini Puneeth) ಭಾಗಿಯಾಗಲಿದ್ದು, ಅವತ್ತು ಅವರೇ ಕಾರ್ಡ್ ಅನ್ನು ವಿತರಿಸಲಿದ್ದಾರೆ. ಈಗಾಗಲೇ ಕಾರ್ಯಕ್ರಮ‍ಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಆಹ್ವಾನಿಸಲಾಗಿದೆ. ಅಲ್ಲದೇ, ಗಣ್ಯರು ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿರುವುದು ವಿಶೇಷ.

    Live Tv
    [brid partner=56869869 player=32851 video=960834 autoplay=true]