Tag: ಕೆಜಿಏಫ್‌ 2

  • ಕೆಜಿಎಫ್ ಕ್ವೀನ್ ಬ್ಯಾಕ್ ಟು ರಾಕ್- ಫ್ಯಾನ್ಸ್‌ಗೆ ಗುಡ್ ನ್ಯೂಸ್

    ಕೆಜಿಎಫ್ ಕ್ವೀನ್ ಬ್ಯಾಕ್ ಟು ರಾಕ್- ಫ್ಯಾನ್ಸ್‌ಗೆ ಗುಡ್ ನ್ಯೂಸ್

    ನ್ನಡದ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಮತ್ತೆ ಬೆಳ್ಳಿಪರದೆಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಮಿಂಚಲು ಸಜ್ಜಾಗಿದ್ದಾರೆ. 3 ವರ್ಷಗಳ ಬಳಿಕ ಮತ್ತೆ ಬೆಳ್ಳಿಪರದೆಯತ್ತ ನಟಿ ಎಂಟ್ರಿ ಕೊಡ್ತಿದ್ದಾರೆ. ಯಾವೆಲ್ಲಾ ಸಿನಿಮಾಗಳು ಕುಡ್ಲದ ಬೆಡಗಿ ಕೈಯಲ್ಲಿದೆ ಗೊತ್ತಾ? ಇಲ್ಲಿದೆ ವಿವರ. ಇದನ್ನೂ ಓದಿ:ಟ್ರೋಲ್‌ಗೆ ಡೋಂಟ್ ಕೇರ್ ಎನ್ನುತ್ತಾ ಮಿನಿ ಡ್ರೆಸ್‌ನಲ್ಲಿ ಮಿಂಚಿದ ನಿವೇದಿತಾ ಗೌಡ

    ರಾಕಿಂಗ್ ಸ್ಟಾರ್ ಯಶ್‌ಗೆ (Yash) ನಾಯಕಿಯಾಗಿ ಸತತ 5 ವರ್ಷಗಳ ಕಾಲ ‘ಕೆಜಿಎಫ್ 1’ ಮತ್ತು ‘ಕೆಜಿಎಫ್ 2’ಗೆ (KGF 2) 5 ವರ್ಷ ಮೀಸಲಿಟ್ಟು ಗೆದ್ದು ಬೀಗಿದ್ದರು. ಆ ನಂತರ ಚಿಯಾನ್ ವಿಕ್ರಮ್‌ಗೆ ನಾಯಕಿಯಾಗಿ ‘ಕೋಬ್ರಾ’ ಮೂಲಕ ಹಿಟ್ ಕೊಡಲು ರೆಡಿಯಾದ್ರು. ಆದರೆ ಅದ್ಯಾಕೋ ಸಕ್ಸಸ್ ಸಿಗದೇ ನಟಿ ಸೈಲೆಂಟ್ ಆದರು. ಈಗ ಬರೋಬ್ಬರಿ 3 ಬಿಗ್ ಪ್ರಾಜೆಕ್ಟ್‌ಗಳ ಮೂಲಕ ಮೂರು ವರ್ಷಗಳ ಬಳಿಕ ಕೆಜಿಎಫ್ ಕ್ವೀನ್ ಶ್ರೀನಿಧಿ ಬರುತ್ತಿದ್ದಾರೆ.

    ನ್ಯಾಚುರಲ್ ಸ್ಟಾರ್ ನಾನಿ (Nani) ಜೊತೆ ಹಿಟ್ 3, ಸಿದ್ದು ಜೊನ್ನಲಗಡ್ಡ ಜೊತೆ ‘ತೆಲುಸು ಕದಾ’ ಸಿನಿಮಾಗಳನ್ನ ಮಾಡಿದ್ದಾರೆ. ಕಿಚ್ಚ ಸುದೀಪ್ ನಟನೆಯ ‘ಕಿಚ್ಚ 47’ ಸಿನಿಮಾಗೂ ಇವರೇ ನಾಯಕಿ ಅನ್ನೋದು ಚಿತ್ರತಂಡದ ಕಡೆಯಿಂದ ಅಧಿಕೃತವಾಗಿದೆ. ಅಲ್ಲಿಗೆ ‘ಕೆಜಿಎಫ್’ (KGF) ಕ್ವೀನ್ ಈಸ್ ಬ್ಯಾಕ್. ಹೊಸ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸೋಕೆ ನಟಿ ರೆಡಿಯಾಗಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  • ಶ್ರೀನಿಧಿ ಬ್ಯೂಟಿಗೆ ರಕ್ಷಿತ್ ಫಿದಾ, ಶೆಟ್ರೆ ಏನ್ ವಿಷ್ಯ ಎಂದು ಕಾಲೆಳೆದ ಫ್ಯಾನ್ಸ್

    ಶ್ರೀನಿಧಿ ಬ್ಯೂಟಿಗೆ ರಕ್ಷಿತ್ ಫಿದಾ, ಶೆಟ್ರೆ ಏನ್ ವಿಷ್ಯ ಎಂದು ಕಾಲೆಳೆದ ಫ್ಯಾನ್ಸ್

    `ಕೆಜಿಎಫ್ 2′ (KGF 2) ಬ್ಯೂಟಿ ರೀನಾ ಅಲಿಯಾಸ್ ಶ್ರೀನಿಧಿ ಶೆಟ್ಟಿ (Srinidhi Shetty), ಪ್ಯಾನ್ ಇಂಡಿಯಾ ಸ್ಟಾರ್ ನಾಯಕಿಯಾಗಿ ಮಿಂಚಿದ ಮೇಲೆ ಕರಾವಳಿ ನಟಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಇನ್ನೂ ಬಿಡುವಿದ್ದಾಗ ಆಗಾಗ ಚೆಂದದ ಫೋಟೋಗಳನ್ನ ನಟಿ ಶೇರ್ ಮಾಡ್ತಾರೆ. ಈ ಬಾರಿ ಕೂಡ ಕ್ಯೂಟ್ ಫೋಟೋವೊಂದನ್ನ ಸೋಷಿಯಲ್ ಮೀಡಿಯಾದಲ್ಲಿ ಶ್ರೀನಿಧಿ ಪೋಸ್ಟ್ ಮಾಡಿದ್ದರು. ಶೆಟ್ರ ಲುಕ್‌ಗೆ ರಕ್ಷಿತ್ ಫಿದಾ ಆಗಿದ್ದಾರೆ. ಇದನ್ನೂ ಓದಿ: ಡಿವೋರ್ಸ್‌ ಬಳಿಕ ಐಟಂ ಡ್ಯಾನ್ಸ್‌ ಮಾಡಬೇಡ ಎಂದಿದ್ರು: ನಟಿ ಸಮಂತಾ

    ಸಿನಿಮಾ ಜಗತ್ತಿನಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ ಸಿನಿಮಾ ಕೆಜಿಎಫ್ 1, ಕೆಜಿಎಫ್2 ಚಿತ್ರದಲ್ಲಿ ನಟಿಸಿರುವ ಶ್ರೀನಿಧಿ ಶೆಟ್ಟಿ, ಆಗಾಗ ಹೊಸ ಫೋಟೋಶೂಟ್‌ನಿಂದ ನಟಿ ಮಿಂಚ್ತಿರುತ್ತಾರೆ. ಮಾರ್ಚ್ 28ರಂದು ಶ್ರೀನಿಧಿ, ನೇರಳೆ ಬಣ್ಣದ ಡ್ರೆಸ್ ಧರಿಸಿರುವ ಸೆಲ್ಫಿ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ. ಬಳಿಕ `ಹಾಗೆ ಸುಮ್ಮನೆ’ ಎಂದು ಅಡಿಬರಹ ನೀಡಿದ್ದಾರೆ. ಈ ಪೋಸ್ಟ್ ನೋಡಿ ನಟ ರಕ್ಷಿತ್ ಶೆಟ್ಟಿ, ನಟಿಯ ಕಾಲೆಳೆದಿದ್ದಾರೆ.

    ನಟಿ ಶ್ರೀನಿಧಿ ಶೆಟ್ಟಿ ಪೋಸ್ಟ್ ನೋಡಿ ರಕ್ಷಿತ್ ಶೆಟ್ಟಿ (Rakshit Shetty), `ಆಯ್ತು ಶೆಟ್ರೆ ಗೊತ್ತಾಯ್ತು’ ಎಂದು ತುಳುವಿನಲ್ಲಿ ಕಾಮೆಂಟ್ ಮಾಡಿದ್ದಾರೆ. ಬಳಿಕ ಹೌದಾ.. ಗೊತ್ತಾಯ್ತಾ ಶೆಟ್ರೆ, ಯಾರಿಗೂ ಹೇಳಬೇಡಿ ಎಂದು ರಕ್ಷಿತ್‌ಗೆ ಶ್ರೀನಿಧಿ ರಿಪ್ಲೈ ಕೊಟ್ಟಿದ್ದಾರೆ. ಇಬ್ಬರ ತುಳು ಸಂಭಾಷನಣೆ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಜೊತೆಗೆ ಏನ್ ಶೆಟ್ರೆ ಸಮಾಚಾರ ಎಂದು ಫ್ಯಾನ್ಸ್ ಕಾಲೆಳೆದಿದ್ದಾರೆ.