Tag: ಕೆಜಿಎಫ್2

  • 29 ದಾಖಲೆಗಳನ್ನು ಬರೆದು ರಾಕೆಟ್ ವೇಗದಲ್ಲಿ ಮುನ್ನುಗ್ತಿದೆ ಕೆಜಿಎಫ್ 2: ದಾಖಲೆಗಳ ಪಟ್ಟಿ ಇಲ್ಲಿದೆ

    29 ದಾಖಲೆಗಳನ್ನು ಬರೆದು ರಾಕೆಟ್ ವೇಗದಲ್ಲಿ ಮುನ್ನುಗ್ತಿದೆ ಕೆಜಿಎಫ್ 2: ದಾಖಲೆಗಳ ಪಟ್ಟಿ ಇಲ್ಲಿದೆ

    ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬಿನೇಷನ್ ನ ಕೆಜಿಎಫ್ 2 ಸಿನಿಮಾ ಐದನೇ ದಿನದತ್ತ ಮುನ್ನುಗ್ಗುತ್ತಿದೆ. ಈ ಸಂದರ್ಭದಲ್ಲಿ ಅದು 29 ದಾಖಲೆಗಳನ್ನು ಮಾಡಿದೆ. ಆ ದಾಖಲೆಗಳನ್ನು ಭಾರತದ ಯಾವ ಚಿತ್ರಗಳು ಮಾಡಿಲ್ಲ ಎನ್ನುವುದು ವಿಶೇಷ. ಬಿಡುಗಡೆಯಾದ ಅಷ್ಟೂ ಭಾಷೆಗಳಲ್ಲೂ ಕೋಟಿ ಕೋಟಿ ಸಂಪಾದನೆ ಮಾಡುತ್ತಿದೆ. ಈವರೆಗೂ ಎಲ್ಲಾ ರೆಕಾರ್ಡ್ ಗಳನ್ನು ಮುರಿದಿರುವ ಕೆಜಿಎಫ್ 2, ಮುಂದೆ ಯಾರೂ ಮುರಿಯದಂತಹ ದಾಖಲೆಯನ್ನೂ ಮಾಡುತ್ತಿದೆ. ಇದನ್ನೂ ಓದಿ : ಭಾವಿ ಪತಿಯ ತಂದೆ ನಿಧನ: ನಟಿ ಕಾವ್ಯ ಶಾ ಮದುವೆ ಮುಂದೂಡಿಕೆ

    ಏ.14ರ ಗುರುವಾರ ಬಿಡುಗಡೆಯಾದ ಕೆಜಿಎಫ್ 2 ದಿನದಿಂದ ದಿನಕ್ಕೆ ಬಾಕ್ಸ್ ಆಫೀಸಿನ ಕ್ರೇಜ್ ಏರಿಸುತ್ತಲೇ ಇದೆ. ನಾಲ್ಕು ದಿನಗಳ ಕಾಲ ರಜೆ ಸಿಕ್ಕ ಕಾರಣಕ್ಕಾಗಿ ರಾಕಿಭಾಯ್ ಮತ್ತಷ್ಟು ಜೇಬು ತುಂಬಿಸಿಕೊಳ್ಳುತ್ತಿದ್ದಾನೆ. ಕನ್ನಡ ಸಿನಿಮಾವೊಂದು ವಿಶ್ವಮಟ್ಟದಲ್ಲಿ ಈ ರೀತಿ ದುಡ್ಡು ಮಾಡುತ್ತಿರುವುದು ಅನೇಕ ಸಿನಿಮಾ ರಂಗದ ನಿರ್ಮಾಪಕರಿಗೆ ಹೊಸದೊಂದು ಮಾರ್ಗ ಕಾಣಿಸಿದಂತಾಗಿದೆ. ಇದನ್ನೂ ಓದಿ : ನಾನೇಕೆ ಡ್ರಗ್ಸ್ ತಗೆದುಕೊಳ್ಳುತ್ತಿದ್ದೆ? ಅಸಲಿ ಕಾರಣ ಬಿಚ್ಚಿಟ್ಟ ಸಂಜಯ್ ದತ್

    ದಾಖಲೆಗಳು ಯಾವವು?

    ಬಾಲಿವುಡ್ ನಲ್ಲಿ ರೆಕಾರ್ಡ್ ಓಪನರ್ ಸಿನಿಮಾ

    ಬಾಲಿವುಡ್ ನಲ್ಲಿ ವಾರಾಂತ್ಯದ ಕಲೆಕ್ಷನ್ ನಲ್ಲಿ ದಾಖಲೆ

    ಬಾಲಿವುಡ್ ನಲ್ಲಿ ಒಂದೇ ದಿನದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ

    ಬಾಲಿವುಡ್ ನಲ್ಲಿ ಎರಡನೇ ದಿನವೂ ಅತೀ ಹೆಚ್ಚು ದುಡ್ಡು ಮಾಡಿದ ಚಿತ್ರ.

    ಬಾಲಿವುಡ್ ನಲ್ಲಿ ಭಾನುವಾರವೂ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ

    ಬಾಲಿವುಡ್ ನಲ್ಲಿ ನಾಲ್ಕನೇ ದಿನವೂ ಅತೀ ಹೆಚ್ಚು ದುಡ್ಡು ತಂದುಕೊಟ್ಟ ಚಿತ್ರ

    ಕರ್ನಾಟಕದಲ್ಲಿ ಮೊದಲ ದಿನವೇ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ

    ಕರ್ನಾಟದಲ್ಲಿ ವಾರಾಂತ್ಯಕ್ಕೆ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ

    ಕರ್ನಾಟಕದಲ್ಲಿ ಒಂದೇ ದಿನದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ

    ಕರ್ನಾಟಕದಲ್ಲಿ ಎರಡನೇ ದಿನವೂ ಅತೀ ಹೆಚ್ಚು ದುಡ್ಡು ಮಾಡಿದ ಚಿತ್ರ.

    ಕರ್ನಾಟಕದಲ್ಲಿ ಭಾನುವಾರವೂ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ

    ಕರ್ನಾಟಕದಲ್ಲಿ  ನಾಲ್ಕನೇ ದಿನವೂ ಅತೀ ಹೆಚ್ಚು ದುಡ್ಡು ತಂದುಕೊಟ್ಟ ಚಿತ್ರ

    ಕರ್ನಾಟಕದಲ್ಲಿ ಭರ್ಜರಿ ಓಪನಿಂಗ್ ಪಡೆದ ಮೊದಲ ಚಿತ್ರ

    ಕೇರಳದಲ್ಲಿ ಮೊದಲ ದಿನವೇ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ

    ಕೇರಳದಲ್ಲಿ ವಾರಾಂತ್ಯಕ್ಕೆ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ

    ಕೇರಳದಲ್ಲಿ ಒಂದೇ ದಿನದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ

    ಕೇರಳದಲ್ಲಿ ಎರಡನೇ ದಿನವೂ ಅತೀ ಹೆಚ್ಚು ದುಡ್ಡು ಮಾಡಿದ ಚಿತ್ರ.

    ಕೇರಳದಲ್ಲಿ ಭಾನುವಾರವೂ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ

    ಕೇರಳದಲ್ಲಿ  ನಾಲ್ಕನೇ ದಿನವೂ ಅತೀ ಹೆಚ್ಚು ದುಡ್ಡು ತಂದುಕೊಟ್ಟ ಚಿತ್ರ

    ಕೇರಳದಲ್ಲಿ ಭರ್ಜರಿ ಓಪನಿಂಗ್ ಪಡೆದ ಮೊದಲ ಚಿತ್ರ

    ಟಾಲಿವುಡ್ ನಲ್ಲಿ ಮೊದಲ ದಿನವೇ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ

    ಟಾಲಿವುಡ್ ನಲ್ಲಿ ವಾರಾಂತ್ಯಕ್ಕೆ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ

    ಟಾಲಿವುಡ್ ನಲ್ಲಿ ಒಂದೇ ದಿನದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ

    ಟಾಲಿವುಡ್ ನಲ್ಲಿ ಎರಡನೇ ದಿನವೂ ಅತೀ ಹೆಚ್ಚು ದುಡ್ಡು ಮಾಡಿದ ಚಿತ್ರ.

    ಟಾಲಿವುಡ್ ನಲ್ಲಿ ಭಾನುವಾರವೂ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ

    ಟಾಲಿವುಡ್ ನಲ್ಲಿ ನಾಲ್ಕನೇ ದಿನವೂ ಅತೀ ಹೆಚ್ಚು ದುಡ್ಡು ತಂದುಕೊಟ್ಟ ಚಿತ್ರ

    ಟಾಲಿವುಡ್ ನಲ್ಲಿ ಭರ್ಜರಿ ಓಪನಿಂಗ್ ಪಡೆದ ಮೊದಲ ಚಿತ್ರ

    ಭಾರತದಲ್ಲಿ ಐ.ಎಮ್.ಎಎಕ್ಸ್ ನಲ್ಲಿ ವಾರಾಂತ್ಯಕ್ಕೆ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ

    ಸಾರ್ವಕಾಲಿಕವಾಗಿ ಕನ್ನಡದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರ.

  • ಕೆಜಿಎಫ್-2 ಸಿನಿಮಾ ತಂಡ, ಯಶ್ ಕನ್ನಡಿಗರ ಮಾತ್ರವಲ್ಲ ದೇಶದ ಆಸ್ತಿ: ಯಶ್ ತಾಯಿ

    ಕೆಜಿಎಫ್-2 ಸಿನಿಮಾ ತಂಡ, ಯಶ್ ಕನ್ನಡಿಗರ ಮಾತ್ರವಲ್ಲ ದೇಶದ ಆಸ್ತಿ: ಯಶ್ ತಾಯಿ

    – ನನ್ನ ಮಗ ಹುಟ್ಟಿದಾಗಲೇ ಹೀರೋ
    – ಚಿತ್ರತಂಡಕ್ಕೆ ಪುಷ್ಪಾ ಅಭಿನಂದನೆ
    – ಯಶ್ ಟ್ಯಾಲೆಂಟ್‍ಗೆ ಇದು ಸಾಲದು

    ಬೆಂಗಳೂರು: ಪ್ರತಿಯೊಬ್ಬ ತಾಯಿಗೂ ಅವರ ಮಕ್ಕಳು ಹಿರೋ ಆಗಿರುತ್ತಾರೆ. ನನ್ನ ಮಗ ಹುಟ್ಟಿದಾಗಲೇ ನನಗೆ ಹೀರೋ ಎಂದು ಗೊತ್ತಿತ್ತು. ಇದೀಗ ಕೆಜಿಎಫ್-2 ಟೀಸರ್ ಇಷ್ಟೊಂದು ದೊಡ್ಡಮಟ್ಟದ ಯಶಸ್ಸನ್ನು ಕಂಡುಕೊಂಡಿದೆ, 2021 ಎಲ್ಲರಿಗೂ ಒಳ್ಳೆದು ಮಾಡಲಿ ನನಗೆ ತುಂಬಾ ಸಂತೋಷವಾಗಿದೆ ಎಂದು ರಾಕಿಬಾಯ್ ತಾಯಿ ಪುಷ್ಪಾ ಹೇಳಿದ್ದಾರೆ.

    ಶುಕ್ರವಾರ ರಾತ್ರಿಯಷ್ಟೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಇದೀಗ ಎಲ್ಲಾ ದಾಖಲೆಗಳನ್ನು ಸರಿಗಟ್ಟಿ ನಾಗಲೋಟದಲ್ಲಿ ಓಡುತ್ತಿದೆ. ಈ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಿರ್ಮಾಪಕ ವಿಜಯ್ ಕಿಗಂದೂರ್ ಅವರು ಹಾಗೂ ವಿಶ್ವದ ಜನ ಈ ಯಶಸ್ಸಿಗೆ ಕಾರಣರಾಗಿದ್ದಾರೆ. ನಿರ್ದೆಶಕ ಪ್ರಶಾಂತ್ ನೀಲ್ ಅವರು ಇಂತಹ ಒಳ್ಳೆಯ ಒಂದು ಕಥೆಯನ್ನು ಕೊಟ್ಟು ಇಷ್ಟೊಂದು ಒಳ್ಳೆಯ ಟೀಸರ್ ಅನ್ನು ಹೊರ ತಂದಿದ್ದಾರೆ ಎಂದರೆ ಅವರ ಶ್ರಮವಿದೆ ಎಂದರು.

    ಕೆಜಿಎಫ್-2 ಸಿನಿಮಾ ತಂಡ ಹಾಗೂ ಯಶ್ ಕನ್ನಡಿಗರ ಆಸ್ತಿ ಮಾತ್ರವಲ್ಲ ಇಡೀ ದೇಶದ ಆಸ್ತಿಯಾಗಿದ್ದಾರೆ. ಪ್ರತಿಯೊಂದು ಸಿನಿಮಾರಂಗದಲ್ಲಿಯೂ ಇಂಹತ ಒಳ್ಳೆ ನಿರ್ಮಾಪಕರು ಸಿನಿಮಾಕ್ಕೆ ಸಿಗುವಂತಾಗಲಿ. ಇದೇ ರೀತಿಯ ಇನ್ನೂ ಹೆಚ್ಚು ಹೆಚ್ಚು ಚಿತ್ರ ನಿರ್ಮಾಣವಾಗುವಂತಾಗಲಿ. ಯಾವ ನಿರ್ಮಾಪಕರು ಧೈರ್ಯವಾಗಿ ಇಷ್ಟೊಂದು ಹಣವನ್ನು ನಿಸಿಮಾಕ್ಕೆ ಹೂಡಲು ಧೈರ್ಯ ಮಾಡುವುದಿಲ್ಲ, ಆದರೆ ವಿಜಯ್ ಕಿಗಂದೂರ್ ಇಂತಹ ಧೈರ್ಯವನ್ನು ಮಾಡಿದ್ದಾರೆ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

    ಪ್ರಶಾಂತ್ ನೀಲ್ ಅವರ ತಂದೆ ತಾಯಿಗೆ ಧನ್ಯವಾದ ಹೇಳುತ್ತೇನೆ ಅವರ ತಾಳ್ಮೆ ಯಾರಿಗೂ ಬರಲು ಸಾಧ್ಯವಾಗುವುದಿಲ್ಲ, ಒಳ್ಳೆಯ ಕಥೆಯನ್ನು ಪ್ರಶಾಂತ್ ನೀಲ್ ನೀಡಿದ್ದಾರೆ. ಕೆಜಿಎ ಫ್-2 ಸಿನಿಮಾದಲ್ಲಿ ಕೆಲಸ ಮಾಡಿದ ಕ್ಯಾಮೆರಾ ಮೆನ್ ಹಾಗೂ ಇತರ ಸದಸ್ಯರಿಗೆ ಹಾಗೂ ಸಂಪೂರ್ಣ ಚಿತ್ರತಂಡಕ್ಕೆ ನನ್ನ ಅಭಿನಂದನೆ ಹೇಳುತ್ತೇನೆ ಎಂದಿದ್ದಾರೆ.

    ಒಳ್ಳೆ ಕೆಲಸವನ್ನು ಮಾಡುತ್ತಿದ್ದಾರೆ ಒಳ್ಳೆಯ ಹೆಸರು ಬಂದೇ ಬರುತ್ತದೆ ಎಂದು ಈ ಮೊದಲೇ ನನಗೆ ಗೊತ್ತಿತ್ತು. ಯಾರೇ ಶ್ರದ್ಧೆಯಿಂದ ಕೆಲಸ ಮಾಡಿದರೂ ದೇವರ ಆಶೀರ್ವಾದ ಸಿಗುತ್ತದೆ. ಅಂತೆಯೇ ಈ ಸಿನಿಮಾಕ್ಕೂ ಸಿಕ್ಕಿದೆ. ಯಶ್ ಟ್ಯಾಂಲೆಂಟ್‍ಗೆ ಇದು ಸಾಲದು. ಇದೆನೋ ಮಾಡಿದ್ದಾನೆ ಎಂದು ಸುಮ್ಮನಾಗುವುದಲ್ಲ, ಸಾಧಿಸುವುದು ಇನ್ನೂ ಇದೆ ಎಂದು ಸಂತೋಷವನ್ನು ಹಂಚಿಕೊಂಡಿದ್ದಾರೆ.

    ನನ್ನ ಮಕ್ಕಳು ಸೊಸೆ, ಮೊಮ್ಮಕ್ಕಳ ಮೇಲೆ ಆಶೀರ್ವಾದ ಇರಲಿ ಎಂದು ಕೇಳಿಕೊಳ್ಳುತ್ತೇನೆ. ಎಂದು ಕೆಜಿಎಫ್ 2 ಟೀಸರ್ ದಾಖಲೆ ಬರೆದಿರುವ ಸಂತೋಷವನ್ನು ಹಂಚಿಕೊಂಡಿದ್ದಾರೆ.

  • ಕೆಜಿಎಫ್-2 ಸಿನಿಮಾದ ಬಗ್ಗೆ ಟ್ರೆಂಡ್ ಆಯ್ತು ಅಭಿಮಾನಿಗಳ ಬೇಡಿಕೆ

    ಕೆಜಿಎಫ್-2 ಸಿನಿಮಾದ ಬಗ್ಗೆ ಟ್ರೆಂಡ್ ಆಯ್ತು ಅಭಿಮಾನಿಗಳ ಬೇಡಿಕೆ

    ಬೆಂಗಳೂರು: ಕೆಜಿಎಫ್-2, ಯಶ್ ಅಭಿಮಾನಿಗಳು ಮಾತ್ರವಲ್ಲದೆ ಪ್ರತಿಯೊಬ್ಬ ಸಿನಿಮಾ ಅಭಿಮಾನಿಯೂ ಬಹುನೀರಿಕ್ಷೆಯಿಂದ ಕಾಯುತ್ತಿರುವ ಸಿನಿಮಾವಾಗಿದೆ. ಸದ್ಯ ಅಭಿಮಾನಿಗಳ ಬೇಡಿಕೆಯೊಂದು ಟ್ವಿಟ್ಟರ್ ನಲ್ಲಿ ಭಾರೀ ಟ್ರೆಂಡ್ ಆಗಿದೆ.

    ಹೌದು. ಕೆಜಿಎಫ್-2 ಸಿನಿಮಾದ ಟೀಸರ್ ಬಿಡುಗಡೆ ಮಾಡುವಂತೆ ಟ್ವಿಟ್ಟರ್ ಮೂಲಕವಾಗಿ ಅಭಿಮಾನಿಗಳು ಸಿನಿಮಾ ತಂಡದ ಮುಂದೆ ಬೇಡಿಕೆ ಇಡುತ್ತಿದ್ದಾರೆ. ‘ವೀನೀಡ್ ಕೆಜಿಎಫ್2 ಟೀಸರ್’ ಹ್ಯಾಶ್‍ಟ್ಯಾಗ್‍ನೊಂದಿಗೆ ಟ್ವೀಟ್ ನ ಸುರಿಮಳೆ ಗೈದಿದ್ದಾರೆ. ಬೆಳಗ್ಗಿನಿಂದಲೇ ಈ ವಿಚಾರ ಟ್ವಿಟರ್‍ನಲ್ಲಿ ಟ್ರೆಂಡಿಂಗ್ ಆಗಿದೆ.

    https://twitter.com/RakhiYashCult/status/1319511051289849856

    ಚಾಪ್ಟರ್-2 ಅಕ್ಟೋಬರ್ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಕೋವಿಡ್ 19 ಸಾಂಕ್ರಾಮಿಕ ರೋಗ ಇರುವುದರಿಂದ 2021ಕ್ಕೆ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಹೀಗಾಗಿ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಪಕ ಕಾರ್ತಿಕ್ ಗೌಡ ಅವರಿಗೆ ಕೆಜಿಎಫ್-2 ಟೀಸರ್ ಕುರಿತು ಅಪ್‍ಡೇಟ್ಸ್ ನೀಡುವಂತೆ ಅಭಿಮಾನಿಗಳು ಕೇಳುತ್ತಿದ್ದಾರೆ.

    ಒಟ್ಟಿನಲ್ಲಿ ಚಾಪ್ಟರ್ ಒಂದನ್ನು ಪರದೆಯ ಮೇಲೆ ನೋಡಿ ಸಂಭ್ರಮಿಸಿದ ಅಭಿಮಾನಿಗಳಿಗೆ ಕೆಜಿಎಫ್-2 ಕುರಿತಾಗಿ ಬಹುನೀರಿಕ್ಷೆಯನ್ನು ಇಟ್ಟುಕೊಂಡಿದ್ದು, ಇದೀಗ ಟೀಸರ್ ಬಿಡುಗಡೆ ಮಾಡುವಂತೆ ಟ್ವೀಟ್ ಮಾಡುವ ಮೂಲಕ ಒತ್ತಾಯಿಸುತ್ತಿದ್ದಾರೆ.

  • ಸೈನೈಡ್ ಗುಡ್ಡದ ಮೇಲೆ ಕೆಜಿಎಫ್-2 ಸಿನಿಮಾ ಶೂಟಿಂಗ್ ಪುನರ್ ಆರಂಭ

    ಸೈನೈಡ್ ಗುಡ್ಡದ ಮೇಲೆ ಕೆಜಿಎಫ್-2 ಸಿನಿಮಾ ಶೂಟಿಂಗ್ ಪುನರ್ ಆರಂಭ

    ಕೋಲಾರ: ಹಲವು ಅಡೆತಡೆಗಳ ನಡುವೆಯೇ ಕೆಜಿಎಫ್-2 ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ಶೂಟಿಂಗ್ ಹಿನ್ನೆಲೆಯಲ್ಲಿ ಸೆಟ್ ಬಳಿ ಸಾರ್ವಜನಿಕರಿಗೆ ಪ್ರವೇಶ ನಿರಾಕರಣೆ ಮಾಡಲಾಗುತ್ತಿದೆ.

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಪ್ 2 ಶೂಟಿಂಗ್ ನಡ್ಯದಂತೆ ಈ ಹಿಂದೆ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಲಾಗಿತ್ತು. 2 ತಿಂಗಳಿನಿಂದ ಸ್ಥಗಿತಗೊಂಡಿದ್ದ ಶೂಟಿಂಗ್ ಸದ್ಯ ಮತ್ತೆ ಆರಂಭವಾಗಿದೆ. ದಕ್ಷಿಣ ಭಾರತದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದ ಕೆಜಿಎಫ್ ಸಿನಿಮಾದ ಶೂಟಿಂಗ್‍ಗಾಗಿಯೇ ಕೋಲಾರ ಕೆಜಿಎಫ್ ಸೈನೈಡ್ ಗುಡ್ಡದ ಮೇಲೆ ವಿಶೇಷ ಸೆಟ್ ನಿರ್ಮಿಸಲಾಗಿದೆ. ಇದನ್ನೂ ಓದಿ: ದಕ್ಷಿಣ ಭಾರತದ ಸೆನ್ಸೇಷನ್ ಕೆಜಿಎಫ್-2ಗೆ ವಿಘ್ನಗಳ ಮೇಲೆ ವಿಘ್ನ

    ಶೂಟಿಂಗ್ ಸ್ಥಗಿತಗೊಂಡಿದ್ದ ಕಾರಣದಿಂದ ಶೂಟಿಂಗ್‍ಗಾಗಿ ನಿರ್ಮಿಸಿದ್ದ ಸೆಟ್ ಭಾಗಶಃ ನಾಶವಾಗಿತ್ತು. ಆದರೆ ಸದ್ಯ ಎಲ್ಲ ಅಡೆತಡೆಗಳನ್ನು ಎದುರಿಸುತ್ತಿರುವ ಚಿತ್ರತಂಡ ಮತ್ತೆ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಸದ್ಯ ಶೂಟಿಂಗ್ ಸ್ಥಳಕ್ಕೆ ಸಾರ್ವಜನಿಕರು ಬಾರದಂತೆ ರಕ್ಷಣೆ ನೀಡಲಾಗುತ್ತಿದ್ದು, ಚಿತ್ರೀಕರಣ ಸ್ಥಳವನ್ನು ಬೇರೆಯವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿಯಲು ಕೂಡ ಅವಕಾಶ ನಿರಾಕರಿಸಲಾಗಿದೆ. ಚಿತ್ರತಂಡ ಕೆಲ ಯುವಕರನ್ನು ಈ ಕಾರ್ಯಕ್ಕೆ ನೇಮಿಸಿದೆ. ಅಲ್ಲದೇ ಚಿತ್ರೀಕರಣ ಆರಂಭವಾದ ಹಿನ್ನೆಲೆಯಲ್ಲಿ ಚಿತ್ರತಂಡ ಪೊಲೀಸ್ ಭದ್ರತೆಗೂ ಮನವಿ ಮಾಡಿದ್ದು, ಮನವಿಯ ಮೇರೆಗೆ ಎಸ್ ಪಿ ಪೊಲೀಸ್ ರಕ್ಷಣೆಯನ್ನು ನೀಡಿದ್ದಾರೆ.

  • ಕೆಜಿಎಫ್ 2 ಚಿತ್ರೀಕರಣ – ಚಿತ್ರತಂಡಕ್ಕೆ ಬಿಗ್ ರಿಲೀಫ್

    ಕೆಜಿಎಫ್ 2 ಚಿತ್ರೀಕರಣ – ಚಿತ್ರತಂಡಕ್ಕೆ ಬಿಗ್ ರಿಲೀಫ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷೆಯ ‘ಕೆಜಿಎಫ್-2’ ಚಿತ್ರತಂಡಕ್ಕೆ ಚಿತ್ರೀಕರಣ ನಡೆಸದಂತೆ ಕೋಲಾರ ಸಿಟಿ ಸಿವಿಲ್ ಕೋರ್ಟ್ ನೀಡಿತ್ತು. ಇದೀಗ ಕೋರ್ಟ್ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಚಿತ್ರತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದೆ.

    ಸಿಟಿ ಸಿವಿಲ್ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಚಿತ್ರೀಕರಣ ವೇಳೆ ಪರಿಸರಕ್ಕೆ ಯಾವುದೇ ಹಾನಿ ಮಾಡಿಲ್ಲ. ಇನ್ನೂ 25 ದಿನಗಳಲ್ಲಿ ಚಿತ್ರೀಕರಣ ಮುಗಿಸುತ್ತೇವೆ ಎಂದು ಮನವಿ ಕೋರ್ಟ್ ಬಳಿ ಮಾಡಿಕೊಂಡಿದ್ದರು. ನಿರ್ಮಾಪಕರ ಮನವಿ ಪುರಸ್ಕರಿಸಿದ ಹೈಕೋರ್ಟ್ ಚಿತ್ರೀಕರಣಕ್ಕೆ ಅನುಮತಿ ನೀಡಿದೆ.

    ಕೋಲಾರ ಜಿಲ್ಲೆಯ ಕೆಜಿಎಫ್‍ನ ಕೆನಡೀಸ್ ಸೈನೈಡ್ ಗುಡ್ಡದ ಮೇಲೆ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ದುಬಾರಿಯ ಸೆಟ್ ಹಾಕಲಾಗಿತ್ತು. ಆದರೆ ಶ್ರೀನಿವಾಸ್ ಎಂಬವರು ಪರಿಸರ ಹಾನಿ ಹಾಗೂ ಚಿತ್ರೀಕರಣದಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಕೆಜಿಎಫ್ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿದಾರರ ವಾದ ಪುರಸ್ಕರಿಸಿ ಕೋರ್ಟ್ ಕೆಜಿಎಫ್ ನಿರ್ಮಾಪಕರಿಗೆ ತಾತ್ಕಾಲಿಕವಾಗಿ ಶೂಟಿಂಗ್ ನಿಲ್ಲಿಸುವಂತೆ ಸೂಚನೆ ನೀಡಿತ್ತು.

    ಇದೀಗ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡುವ ಮೂಲಕ ಚಿತ್ರೀಕರಣಕ್ಕೆ ಅವಕಾಶ ನೀಡಿದೆ. ಯಶ್ ಅಭಿನಯಿಸುತ್ತಿರುವ ‘ಕೆಜಿಎಫ್-2’ ಸಿನಿಮಾವನ್ನ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್ ಕಿರಗಂದೂರು ನಿರ್ಮಿಸುತ್ತಿದ್ದಾರೆ.

  • ಕೆಜಿಎಫ್-2 ಚಿತ್ರೀಕರಣ ಶುರು!

    ಕೆಜಿಎಫ್-2 ಚಿತ್ರೀಕರಣ ಶುರು!

    ನ್ನಡ ಚಿತ್ರಗಳ ಬಗ್ಗೆ ಪರಭಾಷೆಗಳಲ್ಲಿ ಎಂಥಾ ಅಸಡ್ಡೆಯಿತ್ತೋ ಆ ಜಾಗದಲ್ಲಿ ಬೆರಗೊಂದನ್ನು ಪ್ರತಿಷ್ಠಾಪಿಸುವಂಥಾ ಗೆಲುವು ಕಂಡಿರೋ ಚಿತ್ರ ಕೆಜಿಎಫ್. ಪ್ರಶಾಂತ್ ನೀಲ್ ಸಮರ್ಥ ಸಾರಥ್ಯ, ಪ್ರತಿಭಾವಂತ ತಂಡದ ಪರಿಶ್ರಮ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಅದ್ಭುತ ಅಭಿನಯವೂ ಸೇರಿದಂದಂತೆ ಒಂದಕ್ಕೊಂದು ಪೂರಕವಾಗಿದ್ದ ಕೆಜಿಎಫ್ ಬರೆದಿರೋದು ಸಾರ್ವಕಾಲಿಕ ದಾಖಲೆ. ಇಂಥಾ ಚಿತ್ರದ ಚಾಪ್ಟರ್ 2 ಶುರುವಾಗುತ್ತದೆಯೆಂದರೆ ಅದರತ್ತಲೂ ತೀವ್ರವಾದ ಕುತೂಹಲ ಹುಟ್ಟೋದು ಸಹಜವೇ.

    ಕೆಜಿಎಫ್ ಚಾಪ್ಟರ್ 2 ಬಗ್ಗೆಯೂ ಕೂಡಾ ಕನ್ನಡವೂ ಸೇರಿದಂತೆ ನಾನಾ ಭಾಷಾ ಪ್ರೇಕ್ಷಕರಲ್ಲಿ ಅಂಥಾದ್ದೇ ಕುತೂಹಲ ಹುಟ್ಟಿಕೊಂಡಿದೆ. ಕೆಜಿಎಫ್ ಸೃಷ್ಟಿಸಿದ್ದ ಹವಾದ ಬಿಸಿಯಲ್ಲಿಯೇ ಇಡೀ ಟೀಮು ಎರಡನೇ ಭಾಗಕ್ಕಾಗಿ ಸಜ್ಜುಗೊಂಡಿತ್ತು. ಆ ಹೊತ್ತಿಗಾಗಲೇ ಚಿತ್ರೀಕರಣ ಯಾವಾಗ ಶುರುವಾಗುತ್ತದೆ ಎಂಬ ಕುತೂಹಲ ಕೂಡಾ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಆದರೆ ಇತ್ತೀಚೆಗೆ ಆರಂಭವಾಗಲಿದ್ದ ಕ್ಷಣವೊಂದು ಕಾರಣಾಂತರಗಳಿಂದ ಮಿಸ್ ಆಗಿದ್ದರಿಂದ ಎಲ್ಲರಿಗೂ ನಿರಾಸೆಯಾಗಿದ್ದದ್ದು ನಿಜ. ಆದರೆ ಇದೀಗ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣಕ್ಕೆ ವಿಧ್ಯುಕ್ತ ಚಾಲನೆ ಸಿಕ್ಕಿದೆ.

    ಪ್ರಶಾಂತ್ ನೀಲ್ ಹಾಗೂ ಛಾಯಾಗ್ರಾಹಕ ಭುವನ್ ಗೌಡ ಬೆಂಗಳೂರಿನಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ. ಈ ಮೂಲಕವೇ ಒಂದಷ್ಟು ಸಮುಯದಿಂದ ಕೆಜಿಎಫ್ ಅಲೆಯಲ್ಲಿಯೇ ಮಿಂದೇಳುತ್ತಾ ಮಗಳು ಹುಟ್ಟಿದ ಸಂಭ್ರಮವನ್ನು ಆಸ್ವಾದಿಸಿದ್ದ ರಾಕಿ ಭಾಯ್ ಕೂಡಾ ಮತ್ತೆ ಚಿತ್ರೀಕರಣದ ಪೆವಿಲಿಯನ್ನಿಗೆ ಮರಳಿದ್ದಾರೆ. ಇಡೀ ತಂಡ ಕೆಲ ತಿಂಗಳಿಂದ ದೂರವಿದ್ದ ಸೆಟ್ಟಿನಲ್ಲಿ ಮತ್ತೆ ಮುಖಾಮುಖಿಯಾಗಿ ಸಂಭ್ರಮಿಸಿದೆ.

    ಕಳೆದ ಬಾರಿ ಕಥೆಯೆಂಬುದೇ ಸಮಯ ಕೇಳುವಂತಿದ್ದುದರಿಂದ ಚಿತ್ರೀಕರಣ ಎರಡು ವರ್ಷಗಳ ಕಾಲ ಮುಂದುವರೆದಿತ್ತು. ಕೆಜಿಎಫ್ ನೋಡಿದ ಪ್ರತಿಯೊಬ್ಬರಿಗೂ ಅಷ್ಟು ಸಮಯ ತೆಗೆದುಕೊಂಡಿದ್ದದ್ದೇಕೆ ಎಂಬುದೂ ತಿಳಿದಿತ್ತು. ಆದರೆ ಈ ಬಾರಿ ಮಾತ್ರ ಪ್ರೇಕ್ಷಕರ ನಿರೀಕ್ಷೆಯನ್ನೂ ಮೀರಿ ಆದಷ್ಟು ಬೇಗನೆ ಚಿತ್ರೀಕರಣ ಮುಗಿಸಲು ಪ್ರಶಾಂತ್ ನೀಲ್ ನೀಲನಕ್ಷೆ ಸಿದ್ಧಪಡಿಸಿಕೊಂಡಿದ್ದಾರೆ.

    ಇದೀಗ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆಯಾದರೂ ಸದ್ಯದಲ್ಲಿಯೇ ಚಿತ್ರತಂಡ ಕರಾವಳಿಯ ಸುಂದರ ತಾಣಗಳತ್ತ ಹೊರಳಿಕೊಳ್ಳಲಿದೆ. ಇದೆಲ್ಲ ಏನೇ ಇದ್ದರೂ ಕೆಜಿಎಫ್ ಚಾಪ್ಟರ್ 2 ಆರಂಭವಾಗಿರೋದೇ ಪ್ರೇಕ್ಷಕರ ಪಾಲಿಗೆ ಶುಭ ಸಮಾಚಾರ.