Tag: ಕೆಜಿಎಫ್

  • ಯಶ್ 19ನೇ ಸಿನಿಮಾ ಟ್ರೆಂಡಿಂಗ್ : ಗೀತು ಮೋಹನ್ ದಾಸ್ ಸಿನಿಮಾದಲ್ಲಿ ರಾಕಿಭಾಯ್

    ಯಶ್ 19ನೇ ಸಿನಿಮಾ ಟ್ರೆಂಡಿಂಗ್ : ಗೀತು ಮೋಹನ್ ದಾಸ್ ಸಿನಿಮಾದಲ್ಲಿ ರಾಕಿಭಾಯ್

    ಇಂದು ಮತ್ತೆ ರಾಕಿಂಗ್ ಸ್ಟಾರ್ ಯಶ್ (Yash) ಅವರ 19ನೇ ಸಿನಿಮಾ (19th movie) ಟ್ವಿಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಕಳೆ ಹಲವು ತಿಂಗಳಿಂದ ಈ ಸಿನಿಮಾದ ಬಗ್ಗೆ ನಾನಾ ರೀತಿಯ ಸುದ್ದಿಗಳು ಕೇಳಿ ಬರುತ್ತಿವೆ. ಅಧಿಕೃತವಾಗಿ ಸಿನಿಮಾ ತಂಡವಾಗಲಿ ಅಥವಾ ಯಶ್ ಅವರಾಗಲಿ ಮಾತನಾಡದೇ ಇದ್ದರೂ, ಸೋಷಿಯಲ್ ಮೀಡಿಯಾಗಳಲ್ಲಂತೂ ಟ್ರೆಂಡ್ ಆಗುತ್ತಲೇ ಇದೆ.

    ಕೆಜಿಎಫ್ 2 (KGF 2) ಸಿನಿಮಾ ರಿಲೀಸ್ ನಂತರ ಅವರ ಮುಂದಿನ ಚಿತ್ರವನ್ನು ಯಾರೆಲ್ಲ ನಿರ್ದೇಶನ ಮಾಡಲಿದ್ದಾರೆ ಎನ್ನುವ ಕುರಿತಾಗಿ ನಾನಾ ಹೆಸರುಗಳು ಕೇಳಿ ಬಂದವು. ನರ್ತನ್, ಶಂಕರ್ ಹೀಗೆ ಹಲವಾರು ನಿರ್ದೇಶಕರ ಹೆಸರನ್ನು ತೇಲಿಬಿಟ್ಟರು. ಇದೀಗ ಮತ್ತೊಂದು ಹೆಸರು ಕೇಳಿ ಬಂದಿದ್ದು, ಇದೇ ನಿರ್ದೇಶಕರ ಸಿನಿಮಾದಲ್ಲೇ ಯಶ್ ನಟಿಸಲಿದ್ದಾರೆ ಎನ್ನುವ ವಿಷಯ ಹರಿದಾಡುತ್ತಿದೆ. ಇದನ್ನೂ ಓದಿ:38 ಕೋಟಿ ರೂಪಾಯಿ ಕೊಟ್ಟು ಎರಡು ಐಷರಾಮಿ ಮನೆ ಖರೀದಿಸಿದ ಆಲಿಯಾ ಭಟ್

    ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ (Geethu Mohan Das) ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ ಎನ್ನುವುದು ಸದ್ಯಕ್ಕಿರುವ ಮಾಹಿತಿ. ಲಯರ್ಸ್ ಡೈರಿ ಸಿನಿಮಾಗಾಗಿ ಎರಡು ರಾಷ್ಟ್ರಪ್ರಶಸ್ತಿಯನ್ನು ಪಡೆದಿರುವ ಗೀತು ಅವರ ಸ್ಕ್ರಿಪ್ಟ್ ಬಗ್ಗೆ ಯಶ್ ಒಲವು ತೋರಿದ್ದಾರೆ ಎಂದು ವರದಿಯಾಗಿದೆ. ಸತತ ಒಂದು ವರ್ಷಗಳಿಂತ ಗೀತು ಮತ್ತು ಯಶ್ ಸ್ಕ್ರಿಪ್ಟ್ ಬಗ್ಗೆ ಚರ್ಚೆ ಮಾಡುತ್ತಲೇ ಇದ್ದಾರೆ ಎಂದು ಅವರ ಆಪ್ತರು ಹಂಚಿಕೊಂಡಿದ್ದಾರೆ.

    ಕಳೆದೆರಡು ವಾರದ ಹಿಂದೆ ಯಶ್ ಶ್ರೀಲಂಕಾಕ್ಕೆ (Sri Lanka) ಭೇಟಿ ನೀಡಿದ್ದರು. ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದರು. ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ಫೋಟೋ ನೋಡಿದವರು ಯಶ್ ಶ್ರೀಲಂಕಾ ಪ್ರವಾಸದಲ್ಲಿ ಇದ್ದಾರೆ ಅಂದುಕೊಂಡಿದ್ದರು. ಬೇಸಿಗೆ ರಜೆಯನ್ನು ಕಳೆಯಲು ಅವರು ಅಲ್ಲಿಗೆ ಹೋಗಿದ್ದಾರೆ ಎಂದು ನಂಬಲಾಗಿತ್ತು. ಆದರೆ, ಶ್ರೀಲಂಕಾ ಸರಕಾರ ಬೇರೆಯದ್ದೇ ಮಾಹಿತಿಯನ್ನು ಕೊಟ್ಟಿತ್ತು.

    ಈ ಕುರಿತು ಬೋರ್ಡ್ ಆಫ್ ಇನ್ವೆಸ್ಟ್‌ಮೆಂಟ್‌ ಇನ್ ಶ್ರೀಲಂಕಾದ ಮುಖ್ಯಾಧಿಕಾರಿ ದಿನೇಶ್ ವೇರಕ್ಕೋಡಿ (Dinesh Verakkodi) ಅವರು ಮಾಹಿತಿ ಹಂಚಿಕೊಂಡಿದ್ದು, ‘ಭಾರತದ ಜನಪ್ರಿಯ ವ್ಯಕ್ತಿಯಾಗಿರುವ, ಯಶ್ ಎಂಬ ಹೆಸರಿನಿಂದ ಜನಪ್ರಿಯವಾಗಿರುವ ನಟ ನವೀನ್ ಕುಮಾರ್ ಅವರನ್ನು ಭೇಟಿ ಮಾಡಿದೆ. ಮೂರು ಫಿಲ್ಮ್ ಫೇರ್ ಪ್ರಶಸ್ತಿ ವಿಜೇತರು ಆಗಿರುವ ಅವರು ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡಲು ಅನುಮತಿ ಕೇಳಿದ್ದಾರೆ’ ಎಂದು ಟ್ವೀಟ್ ಮಾಡಿದ್ದರು.

  • KGF 2ಗೆ 1 ವರ್ಷ- ಪಾರ್ಟ್ 3 ಬಗ್ಗೆ ಸಿಹಿಸುದ್ದಿ ಕೊಟ್ಟ ಹೊಂಬಾಳೆ ಫಿಲ್ಮ್ಸ್

    KGF 2ಗೆ 1 ವರ್ಷ- ಪಾರ್ಟ್ 3 ಬಗ್ಗೆ ಸಿಹಿಸುದ್ದಿ ಕೊಟ್ಟ ಹೊಂಬಾಳೆ ಫಿಲ್ಮ್ಸ್

    ಟ ಯಶ್ (Yash) ವೃತ್ತಿ ಜೀವನದಲ್ಲಿ ಮೈಲಿಗಲ್ಲು ಸೃಷ್ಟಿಸಿದ ಕೆಜಿಎಫ್ 2 (KGF 2) ಸಿನಿಮಾಗೆ ಇದೀಗ ಒಂದು ವರ್ಷದ ಸಂಭ್ರಮ. ಇತಿಹಾಸ ಸೃಷ್ಟಿಸಿದ ‘ಕೆಜಿಎಫ್ 2’ ಒಂದು ವರ್ಷ ತುಂಬಿದ ಸಂಭ್ರಮದಲ್ಲಿ ಸಿನಿಮಾದ ಕೆಲ ದೃಶ್ಯಗಳನ್ನ ಶೇರ್ ಮಾಡಿ, ಅಭಿಮಾನಿಗಳಿಗೆ ಹೊಂಬಾಳೆ ಫಿಲ್ಮ್ಸ್ (Hombale Films) ಗುಡ್ ನ್ಯೂಸ್ ನೀಡಿದ್ದಾರೆ. ಕೆಜಿಎಫ್ 3 ಬಗ್ಗೆ ಸುಳಿವು ನೀಡಿದ್ದಾರೆ.

    ಕೆಜಿಎಫ್, ಕೆಜಿಎಫ್ 2 ಸಿನಿಮಾ ತೆರೆಯ ಮೇಲೆ ದೊಡ್ಡ ಮಟ್ಟದಲ್ಲಿ ಅಬ್ಬರಿಸಿತ್ತು. ಯಶ್-ಶ್ರೀನಿಧಿ ಶೆಟ್ಟಿ ಕಾಂಬೋ ಜೊತೆ ಪ್ರಶಾಂತ್ ನೀಲ್ (Prashanth Neel) ನಿರ್ದೇಶನ ಮ್ಯಾಜಿಕ್ ಮಾಡಿತ್ತು. ಸಿನಿಮಾ ಕಥೆ, ಯಶ್ ನಟನೆ, ಸಾಂಗ್ಸ್ ಎಲ್ಲವೂ ಕಮಾಲ್ ಮಾಡಿತ್ತು. ಕೆಜಿಎಫ್ ನಂತರ ಕೆಜಿಎಫ್ 2 (KGF 2) ಸಕ್ಸಸ್‌ನ ಆರ್ಭಟ ಮುಂದುವರೆಸಿತ್ತು. ಪಾರ್ಟ್ 2ನಲ್ಲಿ ರಾಕಿ ಭಾಯ್ ಮತ್ತು ಸಂಜಯ್ ದತ್ (Sanjay Dutt), ರವೀನಾ ಟಂಡನ್ (Raveena Dutt) ನಟನೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಕಳೆದ ವರ್ಷ ಇದೇ ಏ.14ಕ್ಕೆ ಕೆಜಿಎಫ್ 2 ಸಿನಿಮಾ ಕೋಟಿ ಕೋಟಿ ಗಲ್ಲಾಪೆಟ್ಟಿಗೆಯಲ್ಲಿ ಲೂಟಿ ಮಾಡಿತ್ತು. ಈ ಸುದಿನವನ್ನ ಮತ್ತೆ ಹೊಂಬಾಳೆ ಫಿಲ್ಮ್ಸ್ ಮೆಲುಕು ಹಾಕಿದೆ. ಇದನ್ನೂ ಓದಿ:ಸಲ್ಮಾನ್ ಖಾನ್ ಜೊತೆಗಿನ ಡೇಟಿಂಗ್ ಸುದ್ದಿಗೆ ಪೂಜಾ ಹೆಗ್ಡೆ ಸ್ಪಷ್ಟನೆ

    ‘ಕೆಜಿಎಫ್ 2’ ಸಿನಿಮಾಗೆ 1 ವರ್ಷ ತುಂಬಿದ ಸಂತಸದಲ್ಲಿ ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್ ನೀಡಿದೆ ಹೊಂಬಾಳೆ ಸಂಸ್ಥೆ. ‘ಕೆಜಿಎಫ್ 2 ಕ್ಲೈಮ್ಯಾಕ್ಸ್‌ನಲ್ಲೇ ಪಾರ್ಟ್ 3 ಬಗ್ಗೆ ಸುಳಿವು ನೀಡಿದ್ದರು. ಆದರೆ ಹೊಂಬಾಳೆ ಸಂಸ್ಥೆ ಸದ್ಯಕ್ಕಿಲ್ಲ ಎಂದು ಹೇಳುತ್ತಲೇ ಬಂದಿದ್ದರು. ಇದೀಗ ಶೇರ್ ಮಾಡಿರುವ ವೀಡಿಯೋದಲ್ಲಿ ಪಾರ್ಟ್ 2 ಬಗ್ಗೆ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಈ ವೀಡಿಯೋ ಶೇರ್ ಮಾಡ್ತಿದ್ದಂತೆ, ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಕೆಜಿಎಫ್ ಪಾರ್ಟ್ 3 ಎಂದು ಟ್ಯಾಗ್ ಬಳಸಿ ಫ್ಯಾನ್ಸ್ ಖುಷಿಪಡ್ತಿದ್ದಾರೆ. ಭಾಗ-3ರಲ್ಲೂ ಯಶ್, ರಾಕಿ ಭಾಯ್ ಆಗಿ ಅಬ್ಬರಿಸಲಿದ್ದಾರೆ. ಅದ್ಯಾವಾಗ ಎಂದು ಅಭಿಮಾನಿಗಳು ಎದುರು ನೋಡ್ತಿದ್ದಾರೆ.

  • ‘ಕಬ್ಜ 2’ ಚಿತ್ರದಲ್ಲಿ ಯಾರೆಲ್ಲ ಇರ್ತಾರೆ? ಕುತೂಹಲ ಹೆಚ್ಚಿಸಿದ ನಿರ್ದೇಶಕ ಚಂದ್ರು

    ‘ಕಬ್ಜ 2’ ಚಿತ್ರದಲ್ಲಿ ಯಾರೆಲ್ಲ ಇರ್ತಾರೆ? ಕುತೂಹಲ ಹೆಚ್ಚಿಸಿದ ನಿರ್ದೇಶಕ ಚಂದ್ರು

    ಭಾರತೀಯ ಸಿನಿಮಾ ರಂಗದಲ್ಲಿ ಹಲವು ದಾಖಲೆಗಳನ್ನು ಬರೆದಿರುವ ‘ಕಬ್ಜ’ ಸಿನಿಮಾ ಇನ್ನೂ ಸಾಕಷ್ಟು ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ. ಸಾವಿರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಮೂಲಕ ಕನ್ನಡ ಸಿನಿಮಾವೊಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ರಿಲೀಸ್ ಆದ ಎರಡನೇ ದಿನಕ್ಕೆ ನೂರು ಕೋಟಿ ಬಾಚುವ ಮೂಲಕ ಕೆಜಿಎಫ್ (KGF), ಕಾಂತಾರ (Kantara) ಸಿನಿಮಾಗಳ ಬಾಕ್ಸ್ ಆಫೀಸ್ ರೇಕಾರ್ಡ್ ಬ್ರೇಕ್ ಮಾಡಿತ್ತು. ಕಬ್ಜ ಸಿನಿಮಾ ತಂಡದಿಂದ ಮತ್ತಷ್ಟು ಮಾಹಿತಿಗಳು ಲಭ್ಯವಾಗುತ್ತಿವೆ.

    ಸಿನಿಮಾದ ಯಶಸ್ಸನ್ನು ಪ್ರೇಕ್ಷಕರಿಗೆ ಅರ್ಪಿಸಿ ನಿರ್ದೇಶಕ ಆರ್.ಚಂದ್ರು (R. Chandru) ‘ಕಬ್ಜ 2’ (Kabzaa 2) ಸಿನಿಮಾದ ತಯಾರಿಯಲ್ಲಿ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಟೀಮ್ ಕಟ್ಟಿಕೊಂಡು ಕಥೆ ವಿಸ್ತರಣೆಯಲ್ಲಿ ಚಂದ್ರು ತೊಡಗಿದ್ದಾರೆ ಎನ್ನುವುದು ಅವರ ಆಪ್ತರ ಮಾಹಿತಿ. ಈ ಬಾರಿ ಹತ್ತು ಹಲವು ವಿಶೇಷಗಳೊಂದಿಗೆ ಕಬ್ಜ 2 ತಯಾರಾಗಲಿದೆಯಂತೆ. ಅಲ್ಲದೇ, ಭಾರತೀಯ ಸಿನಿಮಾ ರಂಗದ ಹೆಸರಾಂತ ಕಲಾವಿದರು ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಇದನ್ನೂ ಓದಿ:ಯಾರನ್ನಾದರೂ ಡೇಟ್ ಮಾಡಿ ಎಂದ ಅಭಿಮಾನಿಗೆ ಸಮಂತಾ ಹೇಳಿದ್ದೇನು?

    ಭಾರತೀಯ ಚಿತ್ರರಂಗದಲ್ಲಿ ಒಂದು ಸಂಪ್ರದಾಯವಿದೆ. ಪಾರ್ಟ್ 1 ಹಿಟ್ ಆಗುತ್ತಿದ್ದಂತೆಯೇ ಎರಡನೇ ಭಾಗವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವ ಹಾಗೂ ಮತ್ತಷ್ಟು ಅದ್ಧೂರಿಯಾಗಿ ಮೇಕಿಂಗ್ ಮಾಡುತ್ತಾ ಬರಲಾಗಿದೆ. ಕೆಜಿಎಫ್ 2, ಪುಷ್ಪಾ 2, ಬಾಹುಬಲಿ 2 ಹೀಗೆ ಅನೇಕ ಚಿತ್ರಗಳನ್ನು ಉದಾಹರಣೆಯಾಗಿ ನೀಡಬಹುದು. ಹಾಗೆಯೇ ಚಂದ್ರು ಕೂಡ ಅದೇ ಹಾದಿಯಲ್ಲಿ ಹೆಜ್ಜೆ ಹಾಕಲಿದ್ದಾರಂತೆ.

    ಕಬ್ಜ 2 ಬಜೆಟ್ ಹಿಗ್ಗುವುದರ ಜೊತೆಗೆ ಹೆಸರಾಂತ ತಾರಾ ಬಳಗ ಕೂಡ ಇರಲಿದೆಯಂತೆ. ದಕ್ಷಿಣದ ಮತ್ತು ಬಾಲಿವುಡ್ ತಾರೆಯರು ಕೂಡ ಈ ಚಿತ್ರಕ್ಕಾಗಿ ಒಂದಾಗಲಿದ್ದಾರೆ ಎನ್ನುವ ಮಾಹಿತಿ ಕೂಡ ಹರಿದಾಡುತ್ತಿದೆ. ಈ ಕುರಿತು ಮಾತನಾಡಿರುವ ಚಂದ್ರು, ‘ಕಬ್ಜ 2 ಅದ್ಧೂರಿಯಾಗಿ ಮತ್ತು ಭಾರೀ ಬಜೆಟ್ ನಲ್ಲಿ ನಿರ್ಮಾಣ ಆಗುವುದು ಸತ್ಯ. ಕಥೆ ಮತ್ತು ಕಲಾವಿದರ ಬಗ್ಗೆ ಸದ್ಯಕ್ಕೆ ಏನೂ ಅಂದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಖಂಡಿತ ಎಲ್ಲದರ ಕುರಿತು ಮಾತನಾಡುತ್ತೇನೆ’ ಎನ್ನುತ್ತಾರೆ.

  • ತಮಿಳುನಾಡಿನಲ್ಲಿ ದೇವಸ್ಥಾನ ಕಟ್ಟಲು ಯಶ್ ಸಹಾಯ ನೆನೆದ ಡೇನಿಯಲ್ ಬಾಲಾಜಿ

    ತಮಿಳುನಾಡಿನಲ್ಲಿ ದೇವಸ್ಥಾನ ಕಟ್ಟಲು ಯಶ್ ಸಹಾಯ ನೆನೆದ ಡೇನಿಯಲ್ ಬಾಲಾಜಿ

    ನ್ಯಾಷನಲ್ ಸ್ಟಾರ್ ಯಶ್ (Yash) ತೆರೆಯ ಮೇಲೆ ಮಾತ್ರ ತಾವು ಹೀರೋ ಅಲ್ಲ, ತೆರೆ ಹಿಂದೆ ಕೂಡ ಹೀರೋನೇ ಅನ್ನೋದನ್ನ ಮತ್ತೆ ಪ್ರೂವ್ ಮಾಡಿದ್ದಾರೆ. ತೆರೆಮರೆಯಲ್ಲಿ ಸಹಾಯ ಮಾಡಿರೋದನ್ನ ಎಲ್ಲೂ ಹೇಳದಿರುವ ವಿಷ್ಯ ಇದೀಗ ರಿವೀಲ್ ಆಗಿದೆ. ಯಶೋಮಾರ್ಗ ಫೌಂಡೇಶನ್ ಮೂಲಕ ಸಹಾಯ ಮಾಡಿರುವ ಯಶ್, ತಮಿಳುನಾಡಿನ ದೇವಸ್ಥಾನ ಕಟ್ಟಲು ಸಾಥ್ ನೀಡಿರೋದರ ಬಗ್ಗೆ ಡೇನಿಯಲ್ ಬಾಲಾಜಿ (Daniel Balaji)  ಮಾತನಾಡಿದ್ದಾರೆ.

    ನಟ ಯಶ್ ಅವರ ಯಶೋಮಾರ್ಗ ಫೌಂಡೇಶನ್ (Yashomarga Foundation) ವತಿಯಿಂದ ಸಾಕಷ್ಟು ಕಾರ್ಯಗಳು ಕಾರ್ಯರೂಪಕ್ಕೆ ಬಂದಿದೆ. ಜನರಿಗೆ ನೆರವಾಗುವಂತಹ ಕೆಲಸಗಳ ಮೂಲಕ ಯಶ್ ಸಾಥ್ ನೀಡಿದ್ದಾರೆ. ಈಗ ಎಲ್ಲಿಯೂ ಸುದ್ದಿಯಾಗದೇ ಉಳಿದಿರುವ ವಿಷಯಗಳ ಪೈಕಿ ಯಶ್ ತಮಿಳುನಾಡಿನ ದೇವಸ್ಥಾನವೊಂದರ ನಿರ್ಮಾಣಕ್ಕೆ ಧನ ಸಹಾಯ ವಿಚಾರ ಹೊರಬಿದ್ದಿದೆ.

    ನಾಲ್ಕು ವರ್ಷಗಳ ಹಿಂದೆ ಯಶ್ ತಮಿಳುನಾಡಿನ ದೇವಸ್ಥಾನ (Temple) ನಿರ್ಮಾಣಕ್ಕೆ ಹಣ ದೇಣಿಗೆ ನೀಡಿದ್ದ ವಿಚಾರ ಈಗ ಬಹಿರಂಗವಾಗಿದೆ. `ಕಿರಾತಕ’ ಸಿನಿಮಾದಲ್ಲಿ ಖಳನಾಯಕನ ಪಾತ್ರ ನಿರ್ವಹಿಸಿದ್ದ ತಮಿಳು ನಟ ಡೇನಿಯಲ್ ಬಾಲಾಜಿ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿ ಈ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಮೊದಲ ಯುಗಾದಿ ಸಂಭ್ರಮದಲ್ಲಿ `ಸಿಂಹಪ್ರಿಯಾ’ ಜೋಡಿ

    ನಾಲ್ಕು ವರ್ಷಗಳ ಹಿಂದೆ ಕನ್ನಡದ ಚಿತ್ರವೊಂದರಲ್ಲಿ ನಟಿಸುವ ಆಫರ್ ತಿಳಿಸಲು ನನಗೆ ಕರೆ ಮಾಡಿದ್ದರು. ಆದರೆ ನಾನು ಇನ್ನೂ 20 ದಿನಗಳ ಕಾಲ ನನಗೊಂದು ಸಣ್ಣ ಕೆಲಸವಿದೆ ಎಂದು ಹೇಳಿದ್ದೆ. ಏನು ಕೆಲಸ ಎಂದು ಅವರು ಕೇಳಿದರು. ದೇವಸ್ಥಾನವೊಂದನ್ನು ನಿರ್ಮಿಸುತ್ತಿದ್ದೇನೆ, ಅದು ಮುಗಿಯುವವರೆಗೂ ನಾನು ಎಲ್ಲಿಗೂ ಬರಲು ಆಗುವುದಿಲ್ಲ ಎಂದು ಹೇಳಿದೆ. ಇದನ್ನು ಕೇಳಿ ಯಶ್, ನಿಮಗೆ ಒಳ್ಳೆದಾಗಲಿ ಎಂದು ಶುಭ ಕೋರಿದರು. ಕೆಲವೇ ಸೆಕೆಂಡುಗಳಲ್ಲಿ ನನಗೆ ಮೆಸೇಜ್‌ಗಳು ಬಂದವು. ಯಾವ ಮೆಸೇಜ್ ಎಂದು ನೋಡಿದರೆ ಯಶ್ ಹಣ ಕಳುಹಿಸಿದ್ದರು. ಅರೇ ಇನ್ನೂ ಸಿನಿಮಾ ಫೈನಲ್ ಆಗಿಲ್ಲ. ಈಗಲೇ ಅಡ್ವಾನ್ಸ್ ಹಾಕಿದ್ದೀರಲ್ಲ ಎಂದು ಪ್ರಶ್ನೆ ಮಾಡಿದೆ. ಅದಕ್ಕೆ ಯಶ್ ಇದು ನಿಮ್ಮ ದೇವಸ್ಥಾನಕ್ಕೆ ನಾನು ಕೊಡುತ್ತಿರುವ ದೇಣಿಗೆ ಎಂದಿದ್ದರು. ಸಂದರ್ಶನದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಮಾಡಿದ ಧನಸಹಾಯವನ್ನು ಡೇನಿಯಲ್ ನೆನೆದರು.

  • ಪ್ರಶಾಂತ್ ನೀಲ್ ಜೊತೆ ಆರ್.ಚಂದ್ರು ಹೋಲಿಕೆ : ಚಿತ್ರರಂಗದಲ್ಲಿ ‘ಕಬ್ಜ’ ಸಂಚಲನ

    ಪ್ರಶಾಂತ್ ನೀಲ್ ಜೊತೆ ಆರ್.ಚಂದ್ರು ಹೋಲಿಕೆ : ಚಿತ್ರರಂಗದಲ್ಲಿ ‘ಕಬ್ಜ’ ಸಂಚಲನ

    ಕೆಜಿಎಫ್ (KGF) ಸಿನಿಮಾ ಮೂಲಕ ಭಾರತೀಯ ಸಿನಿಮಾ ರಂಗವನ್ನೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದವರು ನಿರ್ದೇಶಕ ಪ್ರಶಾಂತ್ ನೀಲ್ (Prashant Neil). ಈ ಸಿನಿಮಾದ ಮೂಲಕ ಪ್ರಶಾಂತ್ ಕೇವಲ ಕನ್ನಡದ ನಿರ್ದೇಶಕರನ್ನಾಗಿ ಗುರುತಿಸುತ್ತಿಲ್ಲ, ಭಾರತೀಯ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲಿ ಅವರು ಕೂಡ ಒಬ್ಬರಾಗಿದ್ದಾರೆ. ಇವರ ಚಿತ್ರಗಳ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಬರುತ್ತಿವೆ. ಕಬ್ಜ (Kabzaa) ಸಿನಿಮಾದ ನಂತರ ಅಂಥದ್ದೊಂದು ಸ್ಥಾನ ನಿರ್ದೇಶಕ ಆರ್.ಚಂದ್ರು ಅವರ ಪಾಲಾಗಿದೆ. ಪ್ರಶಾಂತ್ ನೀಲ್ ಜೊತೆ ಆರ್.ಚಂದ್ರು (R. Chandru) ಅವರನ್ನೂ ಹೋಲಿಕೆ ಮಾಡಲಾಗುತ್ತಿದೆ.

    ಹಿಂದಿ, ತಮಿಳು, ತೆಲುಗು ಚಿತ್ರರಂಗದಲ್ಲಿ ‘ಕಬ್ಜ’ ಸಿನಿಮಾದ ಟ್ರೈಲರ್, ಟೀಸರ್ ಮತ್ತು ಹಾಡುಗಳು ಹವಾ ಕ್ರಿಯೇಟ್ ಮಾಡುತ್ತಿದ್ದಂತೆಯೇ ಕೆಜಿಎಫ್ ಮತ್ತು ಕಬ್ಜ ಸಿನಿಮಾವನ್ನು ಹೋಲಿಕೆ ಮಾಡಿ ಮಾತನಾಡಲಾಗುತ್ತಿದೆ. ಚಿತ್ರದ ಗುಣಮಟ್ಟ, ಮೇಕಿಂಗ್, ಬಜೆಟ್, ತಾರಾಗಣ, ಸೆಟ್ ಹೀಗೆ ನಾನಾ ಕಾರಣಗಳನ್ನಿಟ್ಟುಕೊಂಡು ಚರ್ಚೆ ಮಾಡಲಾಗುತ್ತಿದೆ. ಈ ಕಾರಣದಿಂದಾಗಿಯೇ ನಿರ್ದೇಶಕ ಆರ್.ಚಂದ್ರು ಇದೀಗ ಭಾರತೀಯ ಸಿನಿಮಾ ರಂಗದ ಮತ್ತೊಬ್ಬ ಪ್ರಮುಖ ನಿರ್ದೇಶಕರ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ರಿಷಬ್ ಶೆಟ್ಟಿ ಮಗಳ ಬರ್ತ್‌ಡೇ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

    ಕೆಜಿಎಫ್ ಸಿನಿಮಾ ಕೂಡ ಕನ್ನಡದಲ್ಲಿ ನಿರ್ಮಾಣವಾಗಿ ಆನಂತರ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿತ್ತು. ಹಿಂದಿಯಲ್ಲಿ ಭಾರೀ ಬೇಡಿಕೆ ಕ್ರಿಯೇಟ್ ಆಗಿತ್ತು. ಕಬ್ಜ ಸಿನಿಮಾ ಕೂಡ ಮೂಲ ಕನ್ನಡದಲ್ಲಿ ನಿರ್ಮಾಣವಾಗಿ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿದೆ. ಬಾಲಿವುಡ್ ನಲ್ಲಿ ಕಬ್ಜ ಚಿತ್ರಕ್ಕೆ ಸಾಕಷ್ಟು ಬೇಡಿಕೆ ಬಂದಿದೆ. ಪ್ರತಿಷ್ಠಿತ ವಿತರಣಾ ಸಂಸ್ಥೆಯು ಈ ಸಿನಿಮಾವನ್ನು ಹಂಚಿಕೆ ಮಾಡುತ್ತಿದೆ. ಅಲ್ಲದೇ, ಬೇರೆ ಬೇರೆ ಭಾಷೆಗಳು ಸೇರಿದಂತೆ ಸಾವಿರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಹೀಗಾಗಿ ಹೋಲಿಕೆ ಹೆಚ್ಚಾಗಿದೆ.

    ಪ್ರಶಾಂತ್ ನೀಲ್ ಮೊದಲ ಚಿತ್ರದಲ್ಲೇ ಗೆಲುವು ಕಂಡವರು. ಆರ್.ಚಂದ್ರು ನಿರ್ದೇಶನದ ಮೊದಲ ಚಿತ್ರ ‘ತಾಜ್ ಮಹಲ್’ ಕೂಡ ಬಾಕ್ಸ್ ಆಫೀಸ್ ಭರ್ತಿ ಮಾಡಿತ್ತು. ನಂತರದ ಪ್ರೇಮ್ ಕಹಾನಿ, ಮೈಲಾರಿ, ಚಾರ್ ಮಿನಾರ್, ಐ ಲವ್ ಯೂ ಸಾಲು ಸಾಲು ಚಿತ್ರಗಳು ಕೂಡ ದಾಖಲೆ ರೀತಿಯಲ್ಲಿ ಪ್ರದರ್ಶನ ಕಂಡವು. ಹೀಗಾಗಿ ಕನ್ನಡದ ಇಬ್ಬರು ನಿರ್ದೇಶಕರ ಬಗ್ಗೆ ಇದೀಗ ಇಡೀ ಭಾರತೀಯ ಚಿತ್ರರಂಗವೇ ಮಾತನಾಡುತ್ತಿದೆ.

  • `ಕಬ್ಜ’ ಚಿತ್ರವನ್ನು `ಕೆಜಿಎಫ್’ಗೆ ಹೋಲಿಸಿದವರಿಗೆ ನಟ ಉಪೇಂದ್ರ ಸ್ಪಷ್ಟನೆ

    `ಕಬ್ಜ’ ಚಿತ್ರವನ್ನು `ಕೆಜಿಎಫ್’ಗೆ ಹೋಲಿಸಿದವರಿಗೆ ನಟ ಉಪೇಂದ್ರ ಸ್ಪಷ್ಟನೆ

    ರಿಯಲ್ ಸ್ಟಾರ್ ಉಪೇಂದ್ರ (Upendra) ಸದ್ಯ `ಕಬ್ಜ’ (Kabzaa)ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಡಿಫರೆಂಟ್ ಗೆಟಪ್ ಮತ್ತು ಸಿನಿಮಾ ಮೂಲಕ ತೆರೆಯ ಮೇಲೆ ಅಬ್ಬರಿಸಲು ಉಪ್ಪಿ ರೆಡಿಯಾಗಿದ್ದಾರೆ. ಈ ನಡುವೆ `ಕೆಜಿಎಫ್’ ಚಿತ್ರವನ್ನ `ಕಬ್ಜ’ ಚಿತ್ರಕ್ಕೆ ಹೋಲಿಸಿ ಮಾತನಾಡುವವರಿಗೆ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಮಗನಿಗೆ ಸಾಹಸಸಿಂಹ ವಿಷ್ಣುವರ್ಧನ್ ಹೆಸರಿಟ್ಟ ವಿಷ್ಣು ಅಭಿಮಾನಿ

    ಮಾ.17ಕ್ಕೆ `ಕಬ್ಜ’ ಸಿನಿಮಾ ಬಹುಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಸಿನಿಮಾ ಭರ್ಜರಿ ಪ್ರಚಾರ ಕೂಡ ನಡೆಯುತ್ತಿದೆ. ಸದ್ಯ ಮುಂಬೈನಲ್ಲಿ ಬೀಡು ಬಿಟ್ಟಿರುವ `ಕಬ್ಜ’ ಟೀಂ ಇದೀಗ ಚಿತ್ರದ ಬಗ್ಗೆ ಹರಡಿದ್ದ ವದಂತಿಗಳಿಗೆ ಉಪೇಂದ್ರ ಉತ್ತರಿಸಿದ್ದಾರೆ. ಟೀಸರ್, ಟ್ರೈಲರ್‌ ನೋಡಿದ ಬಹುತೇಕರು ʻಕೆಜಿಎಫ್ʼ (KGF) ಚಿತ್ರಕ್ಕೆ ಹೋಲಿಸಿ ಮಾತನಾಡಿದ್ದರು. ಇದೀಗ ನಟ ಉಪ್ಪಿ ಈ ಬಗ್ಗೆ ಮಾತನಾಡಿದ್ದಾರೆ.

    ʻಕೆಜಿಎಫ್ʼ ಚಿತ್ರದೊಂದಿಗೆ ಕಬ್ಜ ಸಿನಿಮಾವನ್ನು ಹೋಲಿಸಬೇಡಿ. ಎರಡೂ ಬೇರೆ-ಬೇರೆ ರೀತಿಯ ಸಿನಿಮಾಗಳು. ಟೀಸರ್ ನೋಡಿದ ಹಲವರು ಕೆಜಿಎಫ್ ಸಿನಿಮಾದಂತಿದೆ ಎಂದಿದ್ದರು ಆದರೆ ಟ್ರೈಲರ್ ನೋಡಿದ ಮೇಲೆ ಗೊತ್ತಾಗಿದೆ ಅದೇ ಬೇರೆ ಕತೆ ಇದೇ ಬೇರೆ ಕತೆ ಎಂಬುದು. ಸಿನಿಮಾದ ಲುಕ್, ಫೀಲ್ ಒಂದೇ ಥರ ಇದೆಯಾದರೂ ಎರಡೂ ಸಂಪೂರ್ಣ ಬೇರೆಯದ್ದೇ ಕತೆಗಳು ಎಂದಿದ್ದಾರೆ.

    ಸಿನಿಮಾದ ಟೀಸರ್ ಬಿಡುಗಡೆ ಆದಾಗಲಂತೂ ಕೆಜಿಎಫ್ ಕತೆಯನ್ನೇ ಕಬ್ಜ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿತ್ತು, ಆಗ ಮಾತನಾಡಿದ್ದ ಉಪೇಂದ್ರ, ಕೆಜಿಎಫ್ ಥರ ಸಿನಿಮಾ ಮಾಡಿ ಅಂತಾರೆ, `ಕೆಜಿಎಫ್’ ಥರ ಮಾಡಿದರೆ ಕೆಜಿಎಫ್ ಥರಹ ಮಾಡಿದ್ದೀರಿ ಅಂತಾರೆ. ಏನು ಮಾಡಿದರೂ ಕೆಲವರು ಟೀಕೆ ಮಾಡ್ತಾರೆ ಎಂದು ತಮಾಷೆ ಮಾಡಿದ್ದರು.

    ಈ ಚಿತ್ರದಲ್ಲಿ ಬ್ರಿಟೀಷ್ ಕಾಲದ ಕತೆ, ಸ್ವಾತಂತ್ರ‍್ಯ ಹೋರಾಟ ನಂತರದ ಕತೆ ಇರುವ ಸುಳಿವನ್ನು ಟ್ರೈಲರ್ ನೀಡಿದೆ. ದೇಶ ಪ್ರೇಮ, ವ್ಯವಸ್ಥೆಯ ವಿರುದ್ಧ ಹೋರಾಟ, ಪಾತಕ ಲೋಕ, ತಾಯಿ ಸೆಂಟಿಮೆಂಟ್, ಬ್ರದರ್ ಸೆಂಟಿಮೆಂಟ್ ಎಲ್ಲವನ್ನೂ ಕಬ್ಜನಲ್ಲಿ ಆರ್. ಚಂದ್ರು ಟಚ್ ಮಾಡಿದ್ದಾರೆಂಬುದು ಟ್ರೈಲರ್‌ನಿಂದ ತಿಳಿದು ಬರುತ್ತಿದೆ.

    ಟ್ರೈಲರ್‌ನಲ್ಲಿ ಕುತೂಹಲ ಹುಟ್ಟಿಸಿರುವ ಸಂಗತಿಯೆಂದರೆ ಉಪೇಂದ್ರ ಪೊಲೀಸ್ ಧಿರಿಸಿನಲ್ಲಿ ಕಾಣಿಸಿಕೊಂಡಿರುವುದು. `ಕಬ್ಜ’ (Kabzaa) ಸಿನಿಮಾದ ಪೋಸ್ಟರ್, ಟೀಸರ್‌ಗಳಲ್ಲಿ ಗ್ಯಾಂಗ್‌ಸ್ಟರ್ ಅವತಾರದಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಸುದೀಪ್ (Sudeep) ಮತ್ತು ಶಿವಣ್ಣ (Shivarajkumar) ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಎಲ್ಲದಕ್ಕೂ ಅಪ್ಪು (Appu) ಹುಟ್ಟುಹಬ್ಬದ (Birthday) ದಿನ ಮಾರ್ಚ್ 17ಕ್ಕೆ ಉತ್ತರ ಸಿಗಲಿದೆ.

  • ಕಾಂಗ್ರೆಸ್‌ಗೆ ಸೇರ್ಪಡೆಯಾಗದ್ದಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ರಾ ಕೆಜಿಎಫ್ ಶಾಸಕಿ?

    ಕಾಂಗ್ರೆಸ್‌ಗೆ ಸೇರ್ಪಡೆಯಾಗದ್ದಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ರಾ ಕೆಜಿಎಫ್ ಶಾಸಕಿ?

    – 4 ದಿನಗಳಿಂದ ಗದ್ದೆಗೆ ನೀರು ಪೂರೈಕೆ ಇಲ್ಲ
    – ರೈತನ ಪರವಾಗಿ ಬಿಜೆಪಿ ಪ್ರತಿಭಟನೆ

    ಕೋಲಾರ: ಚುನಾವಣೆ ಸಮೀಪಿಸುತ್ತಿದ್ದಂತೆ ಹಳ್ಳಿ ಭಾಗಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜೊತೆಗೆ ಮತದಾರರನ್ನು ಸೆಳೆಯಲು ತಮ್ಮದೇ ಆದಂತಹ ಕಸರತ್ತುಗಳನ್ನು ರಾಜಕೀಯ ಪಕ್ಷದ ಅಭ್ಯರ್ಥಿಗಳು ನಡೆಸುತ್ತಿದ್ದಾರೆ. ಒಂದೆಡೆ ಮತದಾರರಿಗೆ ಆಸೆ ಆಮಿಷಗಳನ್ನು ಒಡ್ಡಿದರೆ ಇನ್ನೊಂದಡೆ ಬೇರೆ ಪಕ್ಷದ ಮತದಾರರನ್ನು ತಮ್ಮತ್ತ ಸೆಳೆದು ಪಕ್ಷ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ.

    ಕೋಲಾರ (Kolar) ಜಿಲ್ಲೆಯ ಕೆಜಿಎಫ್ (KGF) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ (Congress MLA) ರೂಪಾ ಶಶಿಧರ್ (Roopa Shashidhar) ತಮ್ಮ ಪಕ್ಷಕ್ಕೆ ಸೇರ್ಪಡೆಗೊಳ್ಳದ ಕುಟುಂಬಕ್ಕೆ ವಿದ್ಯುತ್  (Electricity) ಸಂಪರ್ಕ ಕಡಿತಗೊಳಿಸಿರುವ ಆರೋಪ ಕೇಳಿ ಬಂದಿದೆ. ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಬೇತಮಂಗಲ ವ್ಯಾಪ್ತಿಯ ಪಂತನಹಳ್ಳಿ ಗ್ರಾಮದಲ್ಲಿ ತಮ್ಮ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ ಎಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಪಂತನಹಳ್ಳಿ ಗ್ರಾಮದ ರೈತ (Farmer) ಶಿವಪ್ಪ ಬಿಜೆಪಿ (BJP) ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಇವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಕೆಜಿಎಫ್ ಶಾಸಕಿ ರೂಪಾ ಒತ್ತಾಯ ಮಾಡಿದ್ದರು ಎನ್ನಲಾಗಿದೆ. ಆದರೆ ರೈತ ಶಿವಪ್ಪ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳದ ಹಿನ್ನೆಲೆ ಕಳೆದ 3 ದಿನಗಳ ಹಿಂದೆ ಅವರ ಜಮೀನಿಗೆ ಇದ್ದಂತಹ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆಂದು ಆರೋಪಿಸಲಾಗಿದೆ. ಇದನ್ನೂ ಓದಿ: ಬುಧವಾರದಿಂದ ಸರ್ಕಾರಿ ನೌಕರರ ಮುಷ್ಕರ: ಯಾವ ಕಚೇರಿಗಳು ಬಂದ್‌ ಆಗಲಿವೆ?

    ಈ ಹಿನ್ನೆಲೆ ಶಾಸಕಿ ಅವರ ವಿರುದ್ಧ ಕೆಜಿಎಫ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಆಕಾಂಕ್ಷಿಯಾಗಿರುವ ಮೋಹನ್ ಕೃಷ್ಣ ನೇತೃತ್ವದಲ್ಲಿ ಪಂತನಹಳ್ಳಿ ಗ್ರಾಮದ ರೈತನ ತೋಟದಲ್ಲಿ ನಿಂತು ಪ್ರತಿಭಟನೆ ಮಾಡಿದ್ದಾರೆ. ಶಾಸಕಿ ರೂಪಾ ಅವರು ತಮ್ಮ ಪ್ರಭಾವ ಬಳಸಿ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳದ ಬಿಜೆಪಿ ಕಾರ್ಯಕರ್ತನ ತೋಟಕ್ಕೆ ಇದ್ದಂತಹ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಕಳೆದ 4 ದಿನಗಳಿಂದ ರೈತನು ಬೆಳೆದ ಬೆಳೆಗಳಿಗೆ ನೀರಿಲ್ಲದೆ ಪರದಾಡುವಂತಹ ಸ್ಥಿತಿಯಲ್ಲಿದ್ದು ಇದಕ್ಕೆ ಶಾಸಕಿ ರೂಪಾ ಅವರೇ ನೇರ ಹೊಣೆ ಎಂದು ಹೇಳಿದ್ದಾರೆ. ಶಾಸಕಿ ಆದಂತಹವರು ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕೇ ಹೊರತು ರಾಜಕೀಯವಾಗಿ ಅವರಿಗೆ ತೊಂದರೆ ನೀಡಬಾರದು ಎಂದು ಗುಡುಗಿದ್ದಾರೆ. ಇದನ್ನೂ ಓದಿ: 14 ಕಡೆ ಕುಕ್ಕರ್ ಬ್ಲಾಸ್ಟ್ ಆಗಿದೆ, ತಗೊಳೋ ಮುನ್ನ ಎಚ್ಚರ: ರಮೇಶ್ ಜಾರಕಿಹೊಳಿ

  • ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್  ನಾಮಿನೀಸ್ : ಕಾಂತಾರ, ಕೆಜಿಎಫ್ 2ಗೆ ಸಿಂಹಪಾಲು

    ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ ನಾಮಿನೀಸ್ : ಕಾಂತಾರ, ಕೆಜಿಎಫ್ 2ಗೆ ಸಿಂಹಪಾಲು

    ನಾಲ್ಕನೇ ವರ್ಷದ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ ಮಾರ್ಚ್ 5 ರಂದು ಅದ್ಧೂರಿಯಾಗಿ ನಡೆಯಲಿದೆ. ಅದಕ್ಕೂ ಮುನ್ನ ಪೂರ್ವಭಾವಿಯಾಗಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಪಟ್ಟಿ ಹಾಗೂ 2023ನೇ ವರ್ಷದ ಟ್ರೋಫಿ ಅನಾವರಣ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು.

    ಸತತ ಮೂರು ವರ್ಷಗಳಿಂದ ಯಶಸ್ವಿಯಾಗಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜನೆ ಮಾಡುತ್ತಾ ಬಂದಿರುವ ಚಂದವನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ, ಪ್ರತಿ ವರ್ಷವೂ ಒಂದಿಲ್ಲೊಂದು ವಿಶೇಷ ಪ್ರಶಸ್ತಿಯನ್ನು ಘೋಷಿಸುತ್ತಾ ಬಂದಿದೆ. ಈ ಬಾರಿ ಐದು ವಿಶೇಷ ಪ್ರಶಸ್ತಿಗಳನ್ನು ತನ್ನ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಗೊಳಿಸಿದ್ದು, ಈ ಐದೂ ಪ್ರಶಸ್ತಿಗಳಿಗೂ ಕನ್ನಡ ಸಿನಿಮಾ ರಂಗಕ್ಕೆ ತಮ್ಮದೇ ಕೊಡುಗೆ ನೀಡಿದ ಮಹನಿಯರ ಹೆಸರುಗಳನ್ನು ನಾಮಕರಣ ಮಾಡಿದೆ.

    ಅತ್ಯುತ್ತಮ ನಟ (ಡೆಬ್ಯು) ಪ್ರಶಸ್ತಿಯನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಹೆಸರಿನಲ್ಲಿ, ಅತ್ಯುತ್ತಮ ನಟಿ (ಡೆಬ್ಯು) ಪ್ರಶಸ್ತಿಯನ್ನು ಕನ್ನಡದ ಮೊದಲ ಚಿತ್ರದ ನಾಯಕಿ ತ್ರಿಪುರಾಂಭ ಹೆಸರಿನಲ್ಲಿ, ಅತ್ಯುತ್ತಮ ನಿರ್ದೇಶಕ (ಡೆಬ್ಯು) ಹೆಸರಾಂತ ನಟ, ನಿರ್ದೇಶಕ ಶಂಕರ್ ನಾಗ್ ಅವರ ಹೆಸರಿನಲ್ಲಿ, ಅತ್ಯುತ್ತಮ ನಿರ್ಮಾಪಕ (ಡೆಬ್ಯು) ಪ್ರಶಸ್ತಿಯನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಟ, ನಿರ್ಮಾಪಕ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ, ಅತ್ಯುತ್ತಮ ಬರಹಗಾರ (ಡೆಬ್ಯು) ಪ್ರಶಸ್ತಿಯನ್ನು ಚಿ.ಉದಯಶಂಕರ್ ಹೆಸರಿನಲ್ಲಿ ಪ್ರದಾನ ಮಾಡಲಾಗುತ್ತಿದೆ.

    ಕನ್ನಡದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್, ನಟಿಯರಾದ ಇತಿ ಆಚಾರ್ಯ, ಪಾವನಾ ಗೌಡ ಮತ್ತು ಸಂಗೀತಾ ಭಟ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಟ್ರೋಫಿ ಅನಾವರಣ ಮಾಡಿದರು. ಸಿನಿಮಾ ವಿಮರ್ಶಕರು ನೀಡುವ ದಕ್ಷಿಣ ಭಾರತದ ಮೊದಲ ಪ್ರಶಸ್ತಿ ಇದಾಗಿದ್ದರ ಬಗ್ಗೆ ಕೊಂಡಾಡಿದರು.

    ನಾಮಿನೀಸ್ ಲಿಸ್ಟ್ : 

     

    1. ಅತ್ಯುತ್ತಮ ಚಿತ್ರ

    1. ಕಾಂತಾರ
    2. ಕೆಜಿಎಫ್ 2
    3. ಧರಣಿ ಮಂಡಲ ಮಧ್ಯದೊಳಗೆ
    4. 777 ಚಾರ್ಲಿ
    5. ವ್ಹೀಲ್ ಚೇರ್ ರೋಮಿಯೋ
    1. ಅತ್ಯುತ್ತಮ ನಿರ್ದೇಶಕ
    1. ಪ್ರಶಾಂತ್ ನೀಲ್ (ಕೆಜಿಎಫ್2)
    2. ರಿಷಬ್ ಶೆಟ್ಟಿ (ಕಾಂತಾರ)
    3. ಕಿರಣ್ ರಾಜ್ ( 777 ಚಾರ್ಲಿ)
    4. ಅನೂಪ್ ಭಂಡಾರಿ (ವಿಕ್ರಾಂತ್ ರೋಣ)
    5. ಜಡೇಶ್ ಹಂಪಿ (ಗುರು ಶಿಷ್ಯರು)

    3. ಅತ್ಯುತ್ತಮ ಚಿತ್ರಕಥೆ

    1. ಕಾಂತಾರ ( ರಿಷಭ್ ಶೆಟ್ಟಿ)
    2. 777 ಚಾರ್ಲಿ (ಕಿರಣ್ ಕೆ)
    3. ಶ್ರೀಧರ್ ಶಿಕಾರಿಪುರ (ಧರಣಿ ಮಂಡಲ ಮಧ್ಯದೊಳಗೆ )
    4. ಡಾರ್ಲಿಂಗ್ ಕೃಷ್ಣ ( ಲವ್ ಮಾಕ್ಟೇಲ್ 2)
    5. ಕೆಜಿಎಫ್ 2 (ಪ್ರಶಾಂತ್ ನೀಲ್)

    4.ಅತ್ಯುತ್ತಮ ಸಂಭಾಷಣೆ

    1. ಗುರು ಶಿಷ್ಯರು (ಮಾಸ್ತಿ)
    2. ವೇದ ( ರಘು ನಿಡುವಳ್ಳಿ)
    3. ವ್ಹೀಲ್ ಚೇರ್ ರೋಮಿಯೋ (ನಟರಾಜ್ ಜಿ)
    4. 777 ಚಾರ್ಲಿ (ಕಿರಣ್ ಕೆ, ರಾಜ್ ಬಿ.ಶೆಟ್ಟಿ, ಅಭುಜಿತ್ ಮಹೇಶ್
    5. ಕಾಂತಾರ (ರಿಷಭ್ ಶೆಟ್ಟಿ)

    5.ಅತ್ಯುತ್ತಮ ನಾಯಕ

    1. ರಿಷಭ್ ಶೆಟ್ಟಿ (ಕಾಂತಾರ)
    2. ಯಶ್ (ಕೆಜಿಎಫ್ 2)
    3. ಪೃಥ್ವಿ ಅಂಬರ್ ( ಶುಗರ್ ಲೆಸ್)
    4. ರಕ್ಷಿತ್ ಶೆಟ್ಟಿ (777 ಚಾರ್ಲಿ)
    5. ವ್ಹೀಲ್ ಚೇರ್ ರೋಮಿಯೋ (ರಾಮ್ ಚೇತನ್)

    6.ಅತ್ಯುತ್ತಮ ನಾಯಕಿ

    1. ಸಪ್ತಮಿ ಗೌಡ (ಕಾಂತಾರ)
    2. ಸೋನಾಲ್ ಮಾಂತೇರೊ (ಬನಾರಸ್)
    3. ಆಶಿಕಾ ರಂಗನಾಥ್ (ರೇಮೊ)
    4. ಶರ್ಮಿಳಾ ಮಾಂಡ್ರೆ (ಗಾಳಿಪಟ 2)
    5. ಐಶಾನಿ ಶೆಟ್ಟಿ (ಧರಣಿ ಮಂಡಲ ಮಧ್ಯದೊಳಗೆ)

    7.ಅತ್ಯುತ್ತಮ ಪೋಷಕ ನಟ

    1. ಕಿಶೋರ್ (ಕಾಂತಾರ)
    2. ದಿಗಂತ್ (ಗಾಳಿಪಟ 2)
    3. ದತ್ತಣ್ಣ (ಗುರು ಶಿಷ್ಯರು)
    4. ಸುಚೇಂದ್ರ ಪ್ರಸಾದ್ (ವ್ಹೀಲ್ ಚೇರ್ ರೋಮಿಯೋ)
    5. ಗೋಪಾಲ ಕೃಷ್ಣ ದೇಶಪಾಂಡೆ (10)

    8.ಅತ್ಯುತ್ತಮ ಪೋಷಕ ನಟಿ

    1. ಉಮಾಶ್ರೀ (ವೇದ)
    2. ಹೇಮದತ್ತ (ತೋತಾಪುರಿ)
    3. ಸುಹಾಸಿನಿ (ಮಾನ್ಸೂನ್ ರಾಗ)
    4. ರಚಿತಾ ರಾಮ್ (ಮಾನ್ಸೂನ್ ರಾಗ)
    5. ಸುಧಾರಾಣಿ (ತುರ್ತು ನಿರ್ಗಮನ)

    9.ಅತ್ಯುತ್ತಮ ಬಾಲ ನಟ/ನಟಿ

    1. ಹೃದಯ್ ಶರಣ್ (ಗುರು ಶಿಷ್ಯರು)
    2. ಮಹೇಂದ್ರ ಪ್ರಸಾದ್ (ಜೋರ್ಡನ್)
    3. ಪ್ರಾಣ್ಯ ಎಂ.ರಾವ್ (ಜಮಾಲಿ ಗುಡ್ಡ)
    4. ಶಾರ್ವರಿ (777 ಚಾರ್ಲಿ)
    5. ಏಕಾಂತ್ ಪ್ರೇಮ್ (ಗುರು ಶಿಷ್ಯರು)

    10.ಅತ್ಯುತ್ತಮ ಸಂಗೀತ

    1. ಅಜನೀಶ್ (ಕಾಂತಾರ)
    2. ಅರ್ಜುನ್ ಜನ್ಯ (ಗಾಳಿಪಟ 2)
    3. ನೊಬಿನ್ ಪಾಲ್ (777 ಚಾರ್ಲಿ)
    4. ಅನೂಪ್ ಸೀಳಿನ್ (ಮಾನ್ಸೂನ್ ರಾಗ)
    5. ಅಜನೀಶ್ (ಬನಾರಸ್)

    11.ಅತ್ಯುತ್ತಮ ಹಿನ್ನೆಲೆ ಸಂಗೀತ

    1. ರವಿ ಬಸ್ರೂರು (ಕೆಜಿಎಫ್ 2)
    2. ಅನೂಪ್ ಸೀಳಿನ್ (ಮಾನ್ಸೂನ್ ರಾಗ)
    3. ಅಜನೀಶ್ ಲೋಕನಾಥ್ (ವಿಕ್ರಾಂತ್ ರೋಣ)
    4. ಅಜನೀಶ್ (ಕಾಂತಾರ)
    5. ಅರ್ಜುನ್ ಜನ್ಯ (ಪದವಿ ಪೂರ್ವ)

     

    12.ಅತ್ಯುತ್ತಮ ಚಿತ್ರ ಸಾಹಿತ್ಯ

    1. ತ್ರಿಲೋಕ್ ತ್ರಿವಿಕ್ರಮ (ಕರ್ಮದ-ಕಾಂತಾರ)
    2. ಯೋಗರಾಜ ಭಟ್ (ಪ್ರಾಯಶಃ-ಗಾಳಿಪಟ 2)
    3. ಶಶಾಂಕ್ (ಜಗವೇ ನೀನು- ಲವ್ 360)
    4. ನಾಗೇಂದ್ರ ಪ್ರಸಾದ್ (ಬೆಳಕಿನ ಕವಿತೆ- ಬನಾರಸ್)
    5. ರಾಘವೇಂದ್ರ ಕಾಮತ್ (ಲವ್ ಮಾಕ್ಟೇಲ್ 2)

    13.ಅತ್ಯುತ್ತಮ ಗಾಯಕ

    1. ವಿಜಯ್ ಪ್ರಕಾಶ್ (ಸಿಂಗಾರ-ಕಾಂತಾರ)
    2. ಸಿದ್ಧ್ ಶ್ರೀರಾಮ್ (ಜಗವೇ-ಲವ್ 360)
    3. ಮೋಹನ್ (ಜುಂಜಪ್ಪ-ವೇದ)
    4. ಸಂಜಿತ್ ಹೆಗಡೆ (ಬೆಳಕಿನ ಕವಿತೆ-ಬನಾರಸ್)
    5. ಸಾಯಿ ವಿಘ್ನೇಷ್ ( ವರಾಹ ರೂಪಂ -ಕಾಂತಾರ)

    14.ಅತ್ಯುತ್ತಮ  ಗಾಯಕಿ

    1. ಅಂಕಿತ ಕುಂದು (ನಾ ನಿನಗೆ ಕಾವಲುಗಾರ-ಜೇಮ್ಸ್)
    2. ಐಶ್ವರ್ಯ ರಂಗರಾಜನ್ (ಮೀಟ್ ಮಾಡೋಣ- ಏಕ್ ಲವ್ ಯಾ)
    3. ಮಂಗ್ಲಿ (ಯಾವನೋ ಇವ್ನು- ವೇದ)
    4. ಅನನ್ಯಾ ಭಟ್ (ಕಾಂತಾರ)
    5. ಸುನಿಧಿ ಚೌಹಾಣ್ (ಯಕ್ಕಾ ಸಕ್ಕಾ-ವಿಕ್ರಾಂತ್ ರೋಣ)

    15.ತಾಂತ್ರಿಕತೆ ವಿಭಾಗ :  ಅತ್ಯುತ್ತಮ  ಛಾಯಾಗ್ರಹಣ

    1. ವಿಲಿಯಮ್ ಡೇವಿಡ್ (ವಿಕ್ರಾಂತ್ ರೋಣ)
    2. ಅರವಿಂದ್ ಕಶ್ಯಪ್ ( ಚಾರ್ಲಿ-ಕಾಂತಾರ)
    3.  ವಿಶ್ವಜಿತ್ ರಾವ್ (ಖಾಸಗಿ ಪುಟಗಳು)
    4. ಕರಮ್ ಚಾವ್ಲ (10)
    5. ಭುವನ್ ಗೌಡ( ಕೆಜಿಎಫ್ 2)

    16.ಅತ್ಯುತ್ತಮ  ಸಂಕಲನ

    1. ಉಜ್ವಲ್ ಕುಲಕರ್ಣಿ (ಕೆಜಿಎಫ್2)
    2. ಪ್ರತೀಕ್ ಶೆಟ್ಟಿ (ಕಾಂತಾರ)
    3. ಶ್ರೀ ಕ್ರೇಜಿಮೈಂಡ್ಸ್ (ಲವ್ ಮಾಕ್ಟೈಲ್2)
    4. ಕೆ ಎಂ ಪ್ರಕಾಶ್ (ಗುರು ಶಿಷ್ಯರು)
    5. ಪ್ರತೀಕ್ ಶೆಟ್ಟಿ ( 777 ಚಾರ್ಲಿ)

    17.ಅತ್ಯುತ್ತಮ  ಕಲಾ ನಿರ್ದೇಶನ

    1. ಶಿವ ಕುಮಾರ್ (ವಿಕ್ರಾಂತ್ ರೋಣ)
    2. ಶಿವಕುಮಾರ್ (ಕೆಜಿಎಫ್ 2)
    3. ರವಿ ಸಂತೆಹಕ್ಲು (ವೇದ )
    4. ಧರಣಿ (ಕಾಂತಾರ)
    5. ಗುಣ (ಮಾನ್ಸೂನ್ ರಾಗ)

    18.ಅತ್ಯುತ್ತಮ  ನೃತ್ಯ ನಿರ್ದೇಶನ

    1. ಜಾನಿ ಮಾಸ್ಟರ್ (ರಾ ರಾ ರಕ್ಕಮ್ಮ)
    2. ಮುರಳಿ – ರಾಮ ರಾಮ (ದಿಲ್ ಪಸಂದ್)
    3. ಇಮ್ರಾನ್ ಸರ್ದಾರಿಯಾ- ರೇಮೋ ಫೇಮೋ (ರೇಮೊ)
    4. ಹರ್ಷ  – ವೇದ (ಜುಂಜಪ್ಪ)
    5. ಮೋಹನ್ – ಮೀಟ್ ಮಾಡೋಣ (ಏಕ್ ಲವ್ ಯಾ)
    1. ಅತ್ಯುತ್ತಮ ಸಾಹಸ

    1. ವಿಕ್ರಮ್ ಮೋರ್ (ಕಾಂತಾರ)

    1. ಅಂಬ್ರ್ಯು (ಕೆಜಿಎಫ್2)
    2. ವಿಜಯ್ (ವಿಕ್ರಾಂತ್ ರೋಣ)
    3. ರವಿ ವರ್ಮ, ಚೇತನ್ ಡಿಸೋಜಾ, ಅರ್ಜುನ್ ರಾಜ್, ವಿಕ್ರಂ ಮೋರೆ (ವೇದ)
    4. ವಿನೋದ್, ಚೇತನ್ ಡಿಸೋಜಾ (ಹೆಡ್ ಬುಷ್)
    1. ಅತ್ಯುತ್ತಮ ವಿಎಫ್ ಎಕ್ಸ್
    1. ವಿಕ್ರಾಂತ್ ರೋಣ –  ನಿರ್ಮಲ್ ಕುಮಾರ್ – ರಡಿಯನ್ಸ್
    2. ಕೆಜಿಎಫ್ 2  – ಉದಯರವಿ ಹೆಗ್ಡೆ – ಯೂನಿಫೈ ಮೀಡಿಯಾ
    3. ತುರ್ತು ನಿರ್ಗಮನ – ನಿತಿನ್ ಆನಂದ್, ಇಂದ್ರಜಿತ್ – ಸೂತ್ರ – ಐ ವಿಎಫ್ ಎಕ್ಸ್
    4. 777 ಚಾರ್ಲಿ – ರಾಹುಲ್ ವಿ – ಪಿನಕಾ ಸ್ಟುಡಿಯೋ
    5. ವೇದ – ಎಲಾಂಗೋ, ಸುಬೀಶ್ – ಜುಪಿಟರ್
    1. ಅತ್ಯುತ್ತಮ ನಟ (ಡೆಬ್ಯು) ಸಂಚಾರಿ ವಿಜಯ್ ಅವಾರ್ಡ್

    1. ಜಯೀದ ಖಾನ್ (ಬನಾರಸ್)

    1. ರಾಣಾ (ಏಕ್ ಲವ್ ಯಾ)
    2. ಕಾರ್ತಿಕ್ ಮಹೇಶ್ (ಡೊಳ್ಳು)
    3. ಪೃಥ್ವಿ ಶಾಮನೂರು (ಪದವಿ ಪೂರ್ವ)

    5. ರೋಹಿತ್ ಶ್ರೀಧರ್ (ವಾಸಂತಿ ನಲಿದಾಗ)

    1. ಅತ್ಯುತ್ತಮ ನಟಿ (ಡೆಬ್ಯು) ತ್ರಿಪುರಾಂಭ ಪ್ರಶಸ್ತಿ

    1.ರೇಷ್ಮಾ ನಾಣಯ್ಯ (ಏಕ್ ಲವ್ ಯಾ)

    1. ರಚೇಲ್ ಡೇವಿಡ್ (ಲವ್ ಮಾಕ್ಟೇಲ್ 2)
    2. ಶ್ವೇತಾ ಲೆನೋಲಿಯಾ (ಖಾಸಗಿ ಪುಟಗಳು)
    3. ಯಶಾ ಶಿವಕುಮಾರ್(ಪದವಿ ಪೂರ್ವ/ಮಾನ್ಸೂನ್ ರಾಗ)
    4. ಅಂಜಲಿ ಅನೀಶ್ (ಪದವಿ ಪೂರ್ವ)
    1. ಅತ್ಯುತ್ತಮ ನಿರ್ದೇಶಕ (ಡೆಬ್ಯು) ಶಂಕರ್ ನಾಗ್ ಅವಾರ್ಡ್

    1.ಕರಮ್ ಚಾವ್ಲ (10)

    1. ಶ್ರೀಧರ್ ಶಿಕಾರಿಪುರ (ಧರಣಿ ಮಂಡಲ ಮಧ್ಯದೊಳಗೆ)

    3. ಸಾಗರ್  ಪುರಾಣಿಕ್ (ಡೊಳ್ಳು)

    1. ನಟರಾಜ್ (ವ್ಹೀಲ್ ಚೇರ್ ರೋಮಿಯೋ)
    2. ಶಶಿಧರ್ ಕೆ. (ಶುಗರ್ ಲೆಸ್)
    1. ಅತ್ಯುತ್ತಮ ನಿರ್ಮಾಪಕ (ಡೆಬ್ಯು) -ಪುನೀತ್ ರಾಜಕುಮಾರ್ ಅವಾರ್ಡ್
    1. ಪವನ್ ಒಡೆಯರ್ (ಡೊಳ್ಳು)
    2. ಓಂಕಾರ್ ಆರ್ಯ (ಧರಣಿ ಮಂಡಲ ಮಧ್ಯದೊಳಗೆ)
    3. ಮಂಜು ವಿ.ರಾಜ್ (ಖಾಸಗಿ ಪುಟಗಳು)
    4. ಅಭಿಲಾಶ್ ಶೆಟ್ಟಿ (ಕೋಳಿ ಥಾಲ್)
    5. ಗೀತಾ ಪಿಕ್ಚರ್ಸ್ (ವೇದ)
    1. ಅತ್ಯುತ್ತಮ ಸಂಭಾಷಣೆ (ಡೆಬ್ಯು) ಚಿ.ಉದಯ ಶಂಕರ್ ಅವಾರ್ಡ್
    1. ಡೊಳ್ಳು – ಸಾಗರ್ ಪುರಾಣಿಕ್, ಶ್ರೀನಿಧಿ ಡಿ ಎಸ್
    2. ಧರಣಿ ಮಂಡಲ ಮಧ್ಯದೊಳಗೆ – ಶ್ರೀಧರ್ ಶಿಕಾರಿಪುರ
    3. ಕಂಬ್ಲಿ ಹುಳ – ನವೀನ್ ಶ್ರೀನಿವಾಸ್
    4. ಖಾಸಗಿ ಪುಟಗಳು – ಸಂತೋಷ್ ಶ್ರಿಕಂತಪ್ಪ
    5. ವಿಂಡೊಸೀಟ್  – ಶೀತಲ್ ಶೆಟ್ಟಿ
    1. ಅತ್ಯುತ್ತಮ ಯುಟ್ಯೂಬರ್
    1. ಗಗನ್ ಶ್ರೀನಿವಾಸ್ (ಡಾ ಬ್ರೋ)
    2. ಆಶಾ ಮತ್ತು ಕಿರಣ್ (ಫ್ಲೈಯಿಂಗ್ ಪಾಸ್ಪೋರ್ಟ್)
    3. ಕೆ ಎಸ್ ಪರಮೇಶ್ವರ (ಕಲಾ ಮಾಧ್ಯಮ)
    4. ರಾಮ್ ಮಹಾಬಲ (Global ಕನ್ನಡಿಗ)
    5. ಸಂದೀಪ್ ಗೌಡ (ಟೆಕ್ in Kannada)
    1. ಅತ್ಯುತ್ತಮ ಮನರಂಜನೆ ಸಾಮಾಜಿಕ ಜಾಲತಾಣ
    1. ರಘು ಗೌಡ (ಬಳ್ಳಿ ಅಂಗಡಿ ರಘು)
    2. ಪವನ್ ವೇನಗೋಪಾಲ್
    3. ಸೋನು ವೇಣುಗೋಪಾಲ್
    4. ಪವನ್ ಕುಲಕರ್ಣಿ (ಉಡಾಲ್ ಪಾವ್ವ್ಯ)
    5. ವಿಕಾಸ್ (ವಿಕ್ಕಿ ಪೀಡಿಯಾ)
  • ಬಾಲಯ್ಯ ಜೊತೆ ಸೊಂಟ ಬಳುಕಿಸಲು ಮಿಲ್ಕಿ ಬ್ಯೂಟಿಗೆ ಭರ್ಜರಿ ಸಂಭಾವನೆ

    ಬಾಲಯ್ಯ ಜೊತೆ ಸೊಂಟ ಬಳುಕಿಸಲು ಮಿಲ್ಕಿ ಬ್ಯೂಟಿಗೆ ಭರ್ಜರಿ ಸಂಭಾವನೆ

    ಸೌತ್ ಬ್ಯೂಟಿ ತಮನ್ನಾ ಭಾಟಿಯಾ(Tamanna Bhatia) ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ನಂದಮೂರಿ ಬಾಲಕೃಷ್ಣ (Nandamuri Balakrishna) ಜೊತೆ ಸೊಂಟ ಬಳುಕಿಸಲು ದುಬಾರಿ ಸಂಭಾವನೆಯನ್ನೇ (Remuneration) ಮಿಲ್ಕಿ ಬ್ಯೂಟಿ ಡಿಮ್ಯಾಂಡ್ ಮಾಡಿದ್ದಾರೆ.

    ಮಿಲ್ಕಿ ಬ್ಯೂಟಿ ತಮನ್ನಾ ಅವರು 17ನೇ ವಯಸ್ಸಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಇದೀಗ ತಮ್ಮ ಚಾರ್ಮ್ ಕಳೆದುಕೊಳ್ಳದೇ ಬಹುಭಾಷೆಗಳಲ್ಲಿ ನಟಿ ಮಿಂಚ್ತಿದ್ದಾರೆ. ಸ್ಟಾರ್ ನಟರಿಗೆ ನಾಯಕಿಯಾಗಿ ಮಿಂಚ್ತಿರುವ ತಮನ್ನಾಗೆ ಬಾಲಯ್ಯ (Actor Balayya) ಸಿನಿಮಾದಲ್ಲಿ ಐಟಂ ಡ್ಯಾನ್ಸ್‌ಗೆ ಹೆಜ್ಜೆ ಹಾಕಲು ಅವಕಾಶ ಸಿಕ್ಕಿದೆ. ಹೀಗಿರುವಾಗ ತಮ್ಮ ಸಂಭಾವನೆಯಲ್ಲಿ ಎಲ್ಲೂ ಕಾಂಪ್ರಮೈಸ್ ಆಗದೇ ದುಬಾರಿ ಸಂಭಾವನೆಯನ್ನೇ ನಟಿ ಬೇಡಿಕೆಯಿಟ್ಟಿದ್ದಾರೆ.

    ಬಾಲಯ್ಯ-ಅನಿಲ್‌ ನಿರ್ದೇಶನದ ಹೊಸ ಸಿನಿಮಾದಲ್ಲಿ ತಮನ್ನಾಗೆ ಡ್ಯಾನ್ಸ್ ಮಾಡಲು ಬುಲಾವ್ ಬಂದಿದೆ. ನಟಿ ಕೂಡ ಸೊಂಟ ಬಳುಕಿಸಲು ಓಕೆ ಎಂದಿದ್ದಾರೆ. ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು ತಮನ್ನಾ 50 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ. ಚಿತ್ರತಂಡ ಕೂಡ ಈ ವಿಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಇದನ್ನೂ ಓದಿ: ಪ್ರಾಣಿ ರಕ್ಷಣೆಗೆ ನಟಿ ಸಂಯುಕ್ತಾ ಅಂಬುಲೆನ್ಸ್‌ ಹೆಲ್ಪ್‌ಲೈನ್‌ಗೆ ಚಾಲನೆ

    ನಾಯಕಿಯಾಗಿ ಡಿಮ್ಯಾಂಡ್‌ನಲ್ಲಿರುವ ನಟಿ ಈಗಾಗಲೇ ಸಾಕಷ್ಟು ಚಿತ್ರದಲ್ಲಿನ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕೋ, ಗಣಿ, ಜಾಗ್ವಾರ್, ಜೈ ಲವಕುಶ, ಕೆಜಿಎಫ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಹೆಜ್ಜೆ ಹಾಕಿ ಮಿಂಚಿದ್ದಾರೆ. ಸದ್ಯ ಬಾಲಯ್ಯ ಜೊತೆ ತಮನ್ನಾ ಐಟಂ ಡ್ಯಾನ್ಸ್ ನ್ಯೂಸ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k