Tag: ಕೆಜಿಎಫ್

  • ಯಶ್ ಸಿನಿಮಾಗಾಗಿ ಬೆಂಗಳೂರಿನಲ್ಲಿ ಬೀಡು ಬಿಟ್ಟ ಡೈರೆಕ್ಟರ್- ಇಲ್ಲಿದೆ ಗುಡ್ ನ್ಯೂಸ್

    ಯಶ್ ಸಿನಿಮಾಗಾಗಿ ಬೆಂಗಳೂರಿನಲ್ಲಿ ಬೀಡು ಬಿಟ್ಟ ಡೈರೆಕ್ಟರ್- ಇಲ್ಲಿದೆ ಗುಡ್ ನ್ಯೂಸ್

    ಕೊನೇ ಹಂತಕ್ಕೆ ಬಂದು ನಿಂತಿದೆ ಯಶ್ 19 (Yash 19)  ಸಿನಿಮಾ. ಇನ್ನೂ ಆರಂಭವೇ ಆಗಿಲ್ಲ. ಅದು ಹೇಗೆ ಕೊನೆ ಹಂತ? ಪ್ರಶ್ನೆ ಏಳುತ್ತದೆ. ಉತ್ತರಕ್ಕೂ ಮುನ್ನ ಇದಕ್ಕೆಲ್ಲ ತಳಪಾಯ ಹಾಕಿದ ಆ ಮಹಿಳಾ ನಿರ್ದೇಶಕಿಯ ಸಿನಿಮಾ ಶ್ರದ್ಧೆ, ಭಕ್ತಿ ಹಾಗೂ ತ್ಯಾಗದ ಕತೆ ಕೇಳಲೇಬೇಕು. ಯಶ್ 19 ಚಿತ್ರದ ಆ ಮಲಯಾಳಂ ನಿರ್ದೇಶಕಿ ಯಾರು? ಹೇಗೆ ಯಶ್ ಮತ್ತು ನಿರ್ದೇಶಕಿ (Director) ಹೊಂದಿಕೊಂಡರು? ಎಂಟು ವರ್ಷದ ಮಗಳನ್ನು ಬಿಟ್ಟು ಆರು ತಿಂಗಳಿಂದ ಆ ಮಹಿಳೆ ಬೆಂಗಳೂರಿನಲ್ಲಿ ಹೇಗೆ ಕಾಯಕ ಮಾಡುತ್ತಿದ್ದಾರೆ? ಯಾವಾಗ ಆರಂಭ ರಾಕಿ ನಯಾ ಯುದ್ಧ? ಇಲ್ಲಿದೆ ಎಕ್ಸ್‌ಕ್ಲೂಸಿವ್‌ ಸ್ಟೋರಿ.

    ಯಶ್ 19, ಭಕ್ತಗಣ ಈ ಸಿನಿಮಾದ ಸುದ್ದಿಯನ್ನು ಕೇಳಲು ತುದಿಗಾಲಲ್ಲಿ ನಿಂತಿದ್ದಾರೆ. ಬರೀ ಫ್ಯಾನ್ಸ್ ಮಾತ್ರ ಅಲ್ಲ, ಇಡೀ ವಿಶ್ವವೇ ರಾಕಿಭಾಯ್ ಇಡುವ ಹೊಸ ಹೆಜ್ಜೆಯನ್ನು ಕಣ್ಣುಜ್ಜಿಕೊಂಡು ಕಾಯುತ್ತಿದ್ದಾರೆ. ಕೆಜಿಎಫ್ ಮುಗಿದು ವರ್ಷವಾಗುತ್ತಾ ಬಂತು. ಇನ್ನೇನು ಮತ್ತೆ? ಈ ಪ್ರಶ್ನೆ ಕೇಳಿದವರಿಗೆ ಯಶ್ ಉತ್ತರ ಒಂದೇ. ‘ವೇಟ್ ಮಾಡಿ ಬ್ರದರ್…ಕಾದಷ್ಟು ಹಣ್ಣಿನ ರುಚಿ ಜಾಸ್ತಿ’ ಗಡ್ಡದ ಮೇಲೆ ಕೈ ಎಳೆದುಕೊಳ್ಳುತ್ತಿದ್ದಾರೆ. ಅದೀಗ ಮುಗಿವ ಹಂತಕ್ಕೆ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅದ್ದೂರಿಯಾಗಿ ಟೈಟಲ್ ಹಾಗೂ ಉಳಿದ ವಿವರ ಹರವಿಡಲಿದ್ದಾರೆ ಯಶ್.ಇದನ್ನೂ ಓದಿ:ಶಿಕ್ಷಕಿ ಜೊತೆ ಸಪ್ತಪದಿ ತುಳಿಯಲು ಸಜ್ಜಾದ ಪೈಲ್ವಾನ್ ಖ್ಯಾತಿಯ ನಟ

    ಕನ್ನಡ ಸ್ಟಾರ್‌ಗಳನ್ನು ಬಿಡಿ. ಅವರನ್ನು ದಾಟಿ ಯಶ್ (Yash)  ಮುಂದೆ ಹೋಗಿದ್ದಾರೆ. ಅಥವಾ ಜನರು ಹಾಗಂತ ಆಶೀರ್ವಾದ ಮಾಡಿದ್ದಾರೆ. ಇನ್ನೇನಿದ್ದರೂ ಅವರದ್ದು ಪ್ಯಾನ್ ಇಂಡಿಯಾ ಲೆವೆಲ್. ಅದಕ್ಕೆ ತಕ್ಕಂತೆ ಕತೆ, ಚಿತ್ರಕತೆ, ಮೇಕಿಂಗ್ ಮಾಡಬೇಕು. ಎರಡು ಮೂರು ವರ್ಷದಿಂದ ಇದಕ್ಕಾಗಿ ತಪಸ್ಸು ಮಾಡಿದ್ದಾರೆ. ಹಲವಾರು ಸ್ಟಾರ್ ಡೈರೆಕ್ಟರ್‌ಗಳು ಭೇಟಿ ಮಾಡಿದ್ದಾರೆ. ಎಲ್ಲರ ಕತೆ ಕೇಳಿದ್ದಾರೆ. ಅದ್ಯಾಕೊ.. ರಾಕಿಭಾಯ್ ಮನಸು ಹುಚ್ಚೆದ್ದು ಕುಣಿಯಲಿಲ್ಲ. ಈ ಪಾತ್ರ ಮಾಡಲೇಬೇಕು ಅನ್ನಿಸಲಿಲ್ಲ. ಹುರುಪು ಮೂಡಿಸಲಿಲ್ಲ. ಯಾರ ಬಳಿ ಇದೆ ನಂಗೆ ಹೊಂದುವ ಕತೆ. ಯಾರು ನನ್ನನ್ನು ಹ್ಯಾಂಡಲ್ ಮಾಡುತ್ತಾರೆ. ಯೋಚನೆ ಜಾರಿಯಲ್ಲಿತ್ತು. ಆಗಲೇ ಬಂದು ನಿಂತರು ಗೀತು ಮೋಹನ್‌ದಾಸ್.

    ರಾಜಮೌಳಿ, ಶಂಕರ್, ಸುಕುಮಾರ್, ಬನ್ಸಾಲಿ ಹೀಗೆ ದೇಶದ ಎಲ್ಲ ಭಾಷೆಯ ಟಾಪ್ ಸ್ಟಾರ್ ಡೈರೆಕ್ಟರ್ ಜೊತೆಯೇ ಯಶ್ ಹೊಸ ಸಿನಿಮಾ ಮಾಡ್ತಾರೆ ಬಿಡಪ್ಪ. ಈ ರೀತಿ ಎಲ್ಲರೂ ಅಂದುಕೊಂಡಿದ್ದರು. ಆ ಸಮಯದಲ್ಲಿ ಇದೇ ಸಮಾಚಾರ ಎಲ್ಲೆಡೆ ಧಗಧಗಿಸುತ್ತಿತ್ತು. ಯಾರು ಯಾರು ಯಾರು ಡೈರೆಕ್ಟರ್? ಉತ್ತರ ಸಿಗಲಿಲ್ಲ. ಈಗ ಎಲ್ಲದಕ್ಕೂ ಪೂರ್ಣ ವಿರಾಮವನ್ನು ಇಟ್ಟಿದ್ದಾರೆ. ಅಫ್‌ಕೋರ್ಸ್ ಅಧಿಕೃತವಾಗಿ ಯಶ್ ಟೀಮ್ ಹೇಳಿಲ್ಲ. ಆದರೆ ಖಬರ್ ಮಾತ್ರ ಪಕ್ಕಾ ಅಂದ್ರ ಪಕ್ಕಾ. ಆಗಲೇ ನೋಡಿ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಬೆಂಗಳೂರಿಗೆ ಕಾಲಿಟ್ಟಿದ್ದು, ಯಶ್‌ಗೆ ಕತೆ ಹೇಳಿದ್ದು ಮುಂದಾಗಿದ್ದು ಇತಿಹಾಸ. ಗೀತು, ಯಶ್ 19 ಚಿತ್ರಕ್ಕೆ ಕ್ಯಾಮೆರಾ ಹಿಡಿಯಲಿದ್ದಾರೆ ಅದರಲ್ಲಿ ನೋ ಡೌಟ್.

    ಗೀತು ಮೋಹನ್‌ದಾಸ್ (Geethu Mohandas) ಈಗ ತಾನೇ ಈ ಹೆಸರನ್ನು ಕನ್ನಡಿಗರು ಕೇಳುತ್ತಿದ್ದಾರೆ. ಮಲಯಾಳಂನಲ್ಲಿ (Malyalam) ಇವರಿಗೆ ದೊಡ್ಡ ಹೆಸರಿದೆ. ಆದರೆ ಮಾಸ್ ಸಿನಿಮಾ ಕೆಟಗರಿಯಲ್ಲಿ ಅಲ್ಲ. ಇವರದ್ದು ಏನಿದ್ದರೂ ಒಂಥರಾ ಬ್ರಿಡ್ಜ್ ಅಥವಾ ಕಲಾತ್ಮಕ ಸಿನಿಮಾ. 42 ವರ್ಷದ ಗೀತು ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಾಲ ನಟಿ ಹಾಗೂ ನಟಿಯಾಗಿ ಮೂವತ್ತಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ. ಅನೇಕ ಪ್ರಶಸ್ತಿ ಪಡೆದಿದ್ದಾರೆ. ಅದ್ಯಾಕೊ ಇವರಿಗೆ ನಿರ್ದೇಶನದ ಹುಡುಕಿ ಬಂದಿತು. ಆಗಲೇ ಇವರು ತಮ್ಮದೇ ಪ್ರೊಡಕ್ಷನ್ ಕಂಪನಿ ಸ್ಥಾಪಿಸಿದರು. ಕಿರು ಚಿತ್ರವನ್ನು ನಿರ್ಮಿಸಿ, ನಿರ್ದೇಶಿದರು. ಅದಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿಗಳು ದಕ್ಕಿದವು.

    ಇಲ್ಲಿವರೆಗೆ ಗೀತು ನಿರ್ದೇಶನ ಮಾಡಿದ್ದು ಎರಡೇ ಸಿನಿಮಾ. ಲೈರ್ಸ್ ಡೀಸ್ ಮತ್ತು ಮೋತಾನ್. ಹಿಂದಿ ಹಾಗೂ ಮಲಯಾಳಂ ಭಾಷೆ. ಎರಡಕ್ಕೂ ರಾಷ್ಟ್ರ ಪ್ರಶಸ್ಸಿ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿ ಲೆಕ್ಕವಿಲ್ಲದಷ್ಟು ಸಿಕ್ಕವು. ಇವರ ಬಯೋಡೇಟಾ ಇಷ್ಟೇ. ಒಂದೇ ಒಂದು ಮಾಸ್ ಸಿನಿಮಾ ಮಾಡಿಲ್ಲ, ಮಾಸ್ ಹೀರೋಗೆ ಕ್ಯಾಮೆರಾ ಹಿಡಿದಿಲ್ಲ. ಅಂಥ ನಿರ್ದೇಶಕಿಯನ್ನು ಯಶ್ ಆಯ್ಕೆ ಮಾಡಿಕೊಂಡಿದ್ದಾರೆ. ಅದು ಹೇಗೆ ಸಾಧ್ಯ ಎಂದು ಕೇಳುವಂತಿಲ್ಲ. ಇಬ್ಬರ ನಡುವೆ ಕತೆ. ಚಿತ್ರಕತೆ ಮೇಕಿಂಗ್ ಎಲ್ಲ ವಿಷಯದಲ್ಲಿ ಹೊಂದಾಣಿಕೆ ಹುಟ್ಟಿದಾಗ ಮಾತ್ರ ಕೈ ಜೋಡಿಸಲು ಸಾಧ್ಯ ಅಲ್ಲವೆ? ಅದಾಗಿದ್ದಕ್ಕೇ ಕಳೆದ ಆರು ತಿಂಗಳಿಂದ ಗೀತು ಬೆಂಗಳೂರಿನಲ್ಲಿದ್ದಾರೆ. ಎಂಟು ವರ್ಷದ ಮಗಳನ್ನು ಕೇರಳದಲ್ಲೇ ಬಿಟ್ಟಿದ್ದಾರೆ.

    ಗೀತು ಮೋಹನ್ ದಾಸ್‌ಗೆ ಏಳೆಂಟು ವರ್ಷದ ಮಗಳಿದ್ದಾಳೆ. ಹೆಸರು ಆರಾಧನಾ. ಹೆಚ್ಚು ಕಮ್ಮಿ ಐದಾರು ತಿಂಗಳಿಂದ ಬೆಂಗಳೂರಿನ ವೆಸ್ಟ್ ಎಂಡ್ ಹೋಟೆಲ್‌ನಲ್ಲಿದ್ದಾರೆ ಗೀತು. ಹಗಲು ರಾತ್ರಿ ದುಡಿಯುತ್ತಿದ್ದಾರೆ. ಕನ್ನಡ ಬರಲ್ಲ. ಆದರೂ ಎಲ್ಲ ವಿಭಾಗಕ್ಕೆ ಜೀವ ತುಂಬಿದ್ದಾರೆ. ಒಂದೊಂದು ದೃಶ್ಯಕ್ಕೂ ಪಕ್ಕಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಯಾವ್ಯಾವ ದೃಶ್ಯ, ಎಲ್ಲೆಲ್ಲಿ ಶೂಟಿಂಗು, ಸೆಟ್ಟು,ಸ್ಥಳ ಯಾವುದೂ ಹೋಗಲಿ ಬಿಡು ಎನ್ನುವಂತಿಲ್ಲ. ಎಲ್ಲವೂ ಕಾಗದದ ಮೇಲೆ ಮೂಡಬೇಕು. ಅದು ಕಾರ್ಯರೂಪಕ್ಕೆ ಬರಬೇಕು. ಹೀಗೆ ಇಡೀ ಸಹಾಯಕ ಹುಡುಗರ ತಂಡದ ಜವಾಬ್ದಾರಿ ಈ ಮಹಿಳೆ ಹೊತ್ತುಕೊಂಡಿದ್ದಾರೆ. ಅಫ್‌ಕೋರ್ಸ್ ಇದಕ್ಕೆಲ್ಲ ಇಂಚಿಂಚಾಗಿ ಗೈಡ್ ಮಾಡಲು ಯಶ್ ಇದ್ದೇ ಇದ್ದಾರೆ.

    ಯಶ್ ತಲೆಯಲ್ಲಿ ಎಲ್ಲವೂ ನಿಕ್ಕಿಯಾಗಿದೆ. ಮುಂದೆ ಯಾವ ರೀತಿ ಹೆಜ್ಜೆ ಇಡಬೇಕು ? ಯಾವ ಕತೆ ಮಾಡಬೇಕು ? ಕೆಜಿಎಫ್‌ಗಿಂತ ಭಿನ್ನವಾಗಿ ಹಾಗೂ ಅದಕ್ಕಿಂತ ಎತ್ತರಕ್ಕೆ ಸಿನಿಮಾವನ್ನು ಹೇಗೆ ತೆಗೆದುಕೊಂಡು ಹೋಗಬೇಕು ? ನ್ಯಾಶನಲ್ ಮಾರ್ಕೆಟ್‌ಗೆ ನುಗ್ಗಿದ್ದೇವೆ…ಇನ್ನು ಇಂಟರ್‌ನ್ಯಾಶನಲ್ ಮಟ್ಟ ಮುಟ್ಟುವುದು ಹೇಗೆ ? ಯಾವ ರೀತಿ ಹಾಲಿವುಡ್‌ಗೆ ಸ್ಯಾಂಡಲ್‌ವುಡ್ ಖದರ್ ತೋರಿಸಬೇಕು ? ಇದೇ ಕ್ಷಣ ಕ್ಷಣ ತಲೆಯಲ್ಲಿ ಓಡಾಡುತ್ತಿದೆ. ನಿಯತ್ತಿನ ತಂತ್ರಜ್ಞರನ್ನು ಒಂದುಗೂಡಿಸಿದ್ದಾರೆ. ಎಲ್ಲರೂ ಶಿಸ್ತು, ಶ್ರದ್ಧೆ ಹಾಗೂ ನಿಯತ್ತಿಗೆ ಇನ್ನೊಂದು ಹೆಸರಾದವರು. ಅವರಿಂದಲೇ ಹೊಸ ಚಿತ್ರಕ್ಕೆ ತುಪ್ಪದ ದೀಪ ಬೆಳಗಲಿದ್ದಾರೆ. ಗೀತು ಮೋಹನ್ ದಾಸ್ ನಮ್ಮ ಯಶ್ ಯಾಗಕ್ಕೆ ಉಘೇ ಉಘೆ ಎಂದಿದ್ದಾರೆ. ಈ ಸುದ್ದಿ ಕೇಳುತ್ತಿದ್ದಂತೆಯೇ ಒಬ್ಬೊಬ್ಬರು ಒಂದೊಂದು ರೀತಿ ಮಾತಾಡುತ್ತಾರೆ…ಅಥವಾ ಮಾತು ಶುರು ಮಾಡುತ್ತಾರೆ. ಹೆಸರೇ ಕೇಳದ…ಮಾಸ್ ಸಿನಿಮಾ ನಿರ್ದೇಶಿಸದ ಹೆಣ್ಣು ಅದು ಹೇಗೆ ಈ ಚಿತ್ರಕ್ಕೆ ಜೀವ ತುಂಬುತ್ತಾಳೆ ? ಯಶ್ ಅದ್ಯಾಕೆ ಈಕೆಯನ್ನು ಒಪ್ಪಿಕೊಂಡರು ? ಗ್ಯಾಂಗ್‌ಸ್ಟರ್ ಕತೆಯನ್ನು ಈ ಮಹಿಳೆ ನಿರ್ದೇಶಿಸಿ ಗೆಲ್ಲುತ್ತಾಳಾ ? ಕುತೂಹಲ ಹೆಚ್ಚಾಗುತ್ತಿದೆ. ಉತ್ತರ ಸಿನಿಮಾ ಮಾತ್ರ ಕೊಡುತ್ತದೆ. ಅದಕ್ಕಾಗಿ ಇನ್ನು ಒಂದೂವರೆ ವರ್ಷವೋ ಎರಡು ವರ್ಷವೋ ಕಾಯಬೇಕು, ಬೇರೆ ದಾರಿ ಇಲ್ಲ.

  • ಜಪಾನ್ ಭಾಷೆಗೆ ಡಬ್ ಆಗಿ ರಿಲೀಸ್ ಆಗಲಿದೆ ಕೆಜಿಎಫ್ ಸಿನಿಮಾ

    ಜಪಾನ್ ಭಾಷೆಗೆ ಡಬ್ ಆಗಿ ರಿಲೀಸ್ ಆಗಲಿದೆ ಕೆಜಿಎಫ್ ಸಿನಿಮಾ

    ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ (KGF) ಸರಣಿ ಸಿನಿಮಾಗಳು ರಿಲೀಸ್ ಆಗಿ ಹಲವು ವರ್ಷಗಳೇ ಕಳೆದಿವೆ. ಆದರೂ, ಅದರ ಕ್ರೇಜ್ ಇನ್ನೂ ನಿಂತಿಲ್ಲ. ಕೆಜಿಎಫ್ 1 ಮತ್ತು ಕೆಜಿಎಫ್ 2 ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಕಮಾಯಿ ಮಾಡಿದವು. ಇದೀಗ ಈ ಎರಡೂ ಚಿತ್ರಗಳು ಜಪಾನ್ (Japan) ಭಾಷೆಗೆ ಡಬ್ ಆಗಿ ರಿಲೀಸ್ ಆಗಲಿವೆ ಎನ್ನುವ ಮಾಹಿತಿ ಸಿಕ್ಕಿದೆ.

    ಕೆಜಿಎಫ್ 1 ಮತ್ತು ಕೆಜಿಎಫ್ 2 ಎರಡೂ ಸಿನಿಮಾಗಳನ್ನು ಈಗಾಗಲೇ ಜಪಾನ್ ಭಾಷೆಗೆ ಡಬ್ ಮಾಡಿದ್ದು, ಏಕಕಾಲಕ್ಕೆ ಎರಡೂ ಚಿತ್ರಗಳು ಜುಲೈ 14ರಂದು ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಜಪಾನ್ ನಲ್ಲಿ ಏಕಕಾಲಕ್ಕೆ ಸರಣಿ ಚಿತ್ರಗಳು ಬಿಡುಗಡೆ ಆಗುತ್ತಿರುವುದು ವಿಶೇಷ. ಈಗಾಗಲೇ ಈ ಕುರಿತು ಜಪಾನ್ ನಲ್ಲಿ ಪ್ರಚಾರ ಕಾರ್ಯ ಕೂಡ ಶುರು ಮಾಡಲಾಗಿದೆಯಂತೆ. ಇದನ್ನೂ ಓದಿ: ಅಂಬಿ ಪುತ್ರನ ಅದ್ದೂರಿ ಕಲ್ಯಾಣ- ಮದುವೆಯ ಕಲರ್‌ಫುಲ್ ಫೋಟೋಸ್

    ಕೆಜಿಎಫ್ ಚಿತ್ರಗಳ ಮೂಲಕ ಪ್ಯಾನ್ ಇಂಡಿಯಾ ನೋಡುಗರನ್ನು ತಲುಪಿದ್ದರು ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಟ ಯಶ್ (Yash). ಕೆಜಿಎಫ್ 1 ಮಾಡಿದ ಮೋಡಿಯೇ ಕೆಜಿಎಫ್ 2 ಚಿತ್ರಕ್ಕೆ ಸಾಕಷ್ಟು ಪ್ಲಸ್ ಪಾಯಿಂಟ್ ಆಯಿತು. ಮೊದಲ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ತಂದುಕೊಟ್ಟ ಹಣದ ಎರಡರಷ್ಟು ಪಾರ್ಟ್ 2 ಮಾಡಿತು. ಹೀಗಾಗಿ ಎರಡೂ ಚಿತ್ರಗಳ ಮೂಲಕ ಕೇವಲ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಕನ್ನಡ ಚಿತ್ರಗಳಿಗೆ ಬೇಡಿಕೆ ಬಂತು.

    ಕೆಜಿಎಫ್ ನಂತರ ಪ್ರಶಾಂತ್ ನೀಲ್ (Prashant Neel) ಸಲಾರ್ ಸಿನಿಮಾದಲ್ಲಿ ತೊಡಗಿಕೊಂಡಿದ್ದರೆ, ಯಶ್ ಇನ್ನೂ ಯಾವುದೇ ಸಿನಿಮಾ ಘೋಷಣೆ ಮಾಡಿಲ್ಲ. ಹಾಗಂತ ಸುಮ್ಮನೆಯೂ ಕೂತಿಲ್ಲ. ಮತ್ತೆ ಅಚ್ಚರಿ ಮೂಡಿಸುವಂತಹ ಸಿನಿಮಾ ಮಾಡುವ ತಯಾರಿಯನ್ನು ಅವರು ಮಾಡಿಕೊಳ್ಳುತ್ತಿದ್ದಾರೆ. ಹೊಸ ಸಿನಿಮಾದ ಮಾಹಿತಿಯನ್ನು ಕೇಳಲು ಅವರ ಅಭಿಮಾನಿಗಳೂ ಕೂಡ ತುದಿಗಾಲಲ್ಲಿ ನಿಂತಿದ್ದಾರೆ.

  • ಇದು ರಾಕಿಭಾಯ್‌ ಇಲ್ಲದ ರಿಯಲ್‌ KGF – ಸಮುದ್ರದಲ್ಲಿ ಸಿಕ್ತು 20 ಕೋಟಿ ಮೌಲ್ಯದ ಚಿನ್ನ..!

    ಇದು ರಾಕಿಭಾಯ್‌ ಇಲ್ಲದ ರಿಯಲ್‌ KGF – ಸಮುದ್ರದಲ್ಲಿ ಸಿಕ್ತು 20 ಕೋಟಿ ಮೌಲ್ಯದ ಚಿನ್ನ..!

    ಚೆನ್ನೈ: ಯಶ್‌ ನಟನೆಯ KGF-2 ಸಿನಿಮಾ ನೀವೆಲ್ಲರೂ ನೋಡಿಯೇ ಇರುತ್ತೀರಾ. ಕೊನೆಯಲ್ಲಿ ರಾಕಿಭಾಯ್‌ ಯಶ್‌ ಇಡೀ ಹಡಗಿನ ತುಂಬಾ ಚಿನ್ನದೊಂದಿಗೆ ಸಮುದ್ರಕ್ಕೆ ಬೀಳುತ್ತಾನೆ. ಎಷ್ಟೇ ಪ್ರಯತ್ನಿಸಿದರೂ ಅಲ್ಲಿಂದ ಚಿನ್ನ ಹೊರತೆಯಲಾಗುವುದಿಲ್ಲ ಎಂದು ಸುಮ್ಮನಾಗಿಬಿಡುತ್ತಾರೆ. ಅದೇ ರೀತಿಯ ಘಟನೆಯೊಂದು ತಮಿಳುನಾಡಿನ (Tamil Nadu) ರಾಮೇಶ್ವರಂನಲ್ಲಿ ನಡೆದಿದ ಸಮುದ್ರದಕ್ಕೆ ಎಸೆದಿದ್ದ 20 ಕೋಟಿಗೂ ಅಧಿಕ ಮೌಲ್ಯದ ಚಿನ್ನವನ್ನ ಹೊತೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ರಾಮೇಶ್ವರಂ ಮಂಟಪ ಪ್ರದೇಶದಿಂದ ಸಮುದ್ರ ಮಾರ್ಗವಾಗಿ ಭಾರೀ ಮೌಲ್ಯದ ಚಿನ್ನವನ್ನ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಅಧಿಕಾರಿಗಳಿಗೆ ಅಪರಿಚಿತ ದೋಣಿ ಹೋಗುತ್ತಿರೋದು ಗಮನಕ್ಕೆ ಬಂದಿತ್ತು. ಖಚಿತ ಮಾಹಿತಿ ಪಡೆದ ಭಾರತೀಯ ಕೋಸ್ಟ್ ಗಾರ್ಡ್ (India Coast Guard) ಮತ್ತು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (Revenue Intelligence) ಜಂಟಿಯಾಗಿ ದಾಳಿ ನಡೆಸಿತ್ತು. ಅಧಿಕಾರಿಗಳನ್ನು ನೋಡಿದ ದೋಣಿಯಲ್ಲಿದ್ದವರು ತಮ್ಮಲ್ಲಿದ್ದ ಒಂದು ಬಾಕ್ಸನ್ನು ಸಮುದ್ರಕ್ಕೆ ಎಸೆದಿದ್ದರು. ಅಧಿಕಾರಿಗಳು ದೋಣಿಯಲ್ಲಿದ್ದವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಎಲ್ಲರೂ ಅಸ್ಪಷ್ಟ ಉತ್ತರ ನೀಡುತ್ತಿದ್ದರು. ಇದನ್ನೂ ಓದಿ: ಒಡಿಶಾ ರೈಲು ದುರಂತಕ್ಕೆ ಸಿಗ್ನಲ್ ಕಾರಣ- ಪ್ರಾಥಮಿಕ ವರದಿ

    ಕೊನೆಗೆ ಸಮುದ್ರಕ್ಕೆ ಎಸೆದ ಬಾಕ್ಸ್ ಪತ್ತೆ ಮಾಡಲು ಸ್ಕೂಬಾ ಡೈವರ್‌ಗಳ ತಂಡ ನಿಯೋಜಿಸಲಾಯಿತು. ಜೊತೆಗೆ ಸ್ಥಳೀಯ ಮೀನುಗಾರರ ಸಹಾಯ ಪಡೆದುಕೊಳ್ಳಲಾಗಿತ್ತು. ಶೋಧ ಕಾರ್ಯ ನಡೆದ 2ನೇ ದಿನ ಸಮುದ್ರದಲ್ಲಿ ಎಸೆಯಲಾಗಿದ್ದ ಬಾಕ್ಸ್​ ಪತ್ತೆಯಾಯಿತು. ಸ್ಕೂಬಾ ಡೈವರ್ಸ್​ಗಳು ಬಾಕ್ಸ್​ನ್ನು ಮೇಲೆತ್ತಿದರು. ಅದರಲ್ಲಿ 20 ಕೋಟಿಗೂ ಅಧಿಕ ಮೌಲ್ಯದ ಗೋಲ್ಡ್‌ ಬಿಸ್ಕೆಟ್‌ ಅನ್ನು ನೋಡಿ ಅಧಿಕಾರಿಗಳೇ ಶಾಕ್‌ ಆದರು. ಇದನ್ನೂ ಓದಿ: ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬ, ಗಾಯಾಳುಗಳಿಗೆ ಪರಿಹಾರ ಘೋಷಣೆ

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ. ಕೆಲ ದಿನಗಳ ಹಿಂದೆಯೂ 17.74 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿತ್ತು.

  • ಕೆಜಿಎಫ್‌ನಲ್ಲಿ ಕೈಗಾರಿಕಾ ಕಾರಿಡಾರ್: ಉನ್ನತ ಪ್ರಾಧಿಕಾರಕ್ಕೆ ಸಚಿವ ಎಂ.ಬಿ ಪಾಟೀಲ್ ಕೋರಿಕೆ

    ಕೆಜಿಎಫ್‌ನಲ್ಲಿ ಕೈಗಾರಿಕಾ ಕಾರಿಡಾರ್: ಉನ್ನತ ಪ್ರಾಧಿಕಾರಕ್ಕೆ ಸಚಿವ ಎಂ.ಬಿ ಪಾಟೀಲ್ ಕೋರಿಕೆ

    ಬೆಂಗಳೂರು: ಕೆಜಿಎಫ್‌ನಲ್ಲಿ ಬಿಇಎಂಎಲ್ ಗೆ ಸೇರಿದ 3,600 ಎಕರೆ ಜಾಗದಲ್ಲಿ ಕೈಗಾರಿಕಾ ಕಾರಿಡಾರ್ (Industrial Corridor) ನಿರ್ಮಿಸುವ ಬಗ್ಗೆ ಪರಿಗಣಿಸಬೇಕು ಎಂದು ರಾಜ್ಯದ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್‌ (MB Patil) ಅವರು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಉನ್ನತ ಪ್ರಾಧಿಕಾರವನ್ನು ಮಂಗಳವಾರ
    ಕೋರಿದರು.

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಮತ್ತು ಅನುಷ್ಠಾನ ಟ್ರಸ್ಟ್ ನ (NICDIT) ಉನ್ನತಮಟ್ಟದ ಮೇಲ್ವಿಚಾರಣಾ ಪ್ರಾಧಿಕಾರದ ಸಭೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡು ಮಾತನಾಡಿದ ಸಂದರ್ಭದಲ್ಲಿ ಈ ಮನವಿ ಮಾಡಿದರು.

    ಶೀಘ್ರವೇ ಈ ಸಂಬಂಧ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರವು ಪ್ರಸ್ತಾವ ಸಲ್ಲಿಸಲಿದೆ. ಈ ಕಾರ್ಯಯೋಜನೆ ಜಾರಿಯಾದರೆ ಇದು ಚೆನ್ನೈ- ಬೆಂಗಳೂರು (Chennai-Bengaluru) ಕೈಗಾರಿಕಾ ಕಾರಿಡಾರ್ ಪ್ರಮುಖ ವಲಯಗಳಲ್ಲಿ ಒಂದಾಗುವ ಜೊತೆಗೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಇದನ್ನೂ ಓದಿ: 10 ಕೆಜಿ ಉಚಿತ ಅಕ್ಕಿ – ಸರ್ಕಾರದ ಲೆಕ್ಕಾಚಾರ ಏನು?

    ಪಾಟೀಲ್ ಅವರು ಮಾಡಿದ ಈ ಪ್ರಸ್ತಾಪಕ್ಕೆ ಸಭೆಯಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ ಅವರು ಇದಕ್ಕೆ ಸಂಬಂಧಿಸಿದ ವಿವರಗಳೊಂದಿಗೆ ಪ್ರಸ್ತಾವ ಸಲ್ಲಿಸುವಂತೆ ಸಭೆಯಲ್ಲಿದ್ದ ಕೇಂದ್ರ ಸಚಿವರು ಪಾಟೀಲ್ ಅವರಿಗೆ ಸೂಚಿಸಿದರು.

     

    ಚೆನ್ನೈ- ಬೆಂಗಳೂರು ಕೈಗಾರಿಕಾ ಕಾರಿಡಾರ್ ತುಮಕೂರು ನೋಡ್ ಬಗ್ಗೆ ತಿಳಿಸಿ, ಇಲ್ಲಿ 1,736 ಎಕರೆ ವಿಸ್ತೀರ್ಣದಲ್ಲಿ ಮೊದಲ ಹಂತದಲ್ಲಿನ ಅಭಿವೃದ್ಧಿ ಕೆಲಸಗಳನ್ನು ಎಲ್ ಅಂಡ್ ಟಿ ಸಂಸ್ಥೆಗೆ ಗುತ್ತಿಗೆ ವಹಿಸಲಾಗಿದೆ. ಇದಕ್ಕಾಗಿ 948 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದರು.

    ಬೆಂಗಳೂರು-ಮುಂಬೈ (Bengaluru-Mumbai) ಕೈಗಾರಿಕಾ ಕಾರಿಡಾರ್ ಧಾರವಾಡ ನೋಡ್ ಬಗ್ಗೆ ಮಾತನಾಡಿ, 6,042 ಎಕರೆ ಜಾಗಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಈ ಪೈಕಿ, 2000 ಎಕರೆ ಜಾಗಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಪಾಟೀಲ್ ವಿವರಿಸಿದರು.

     

    ಈ ಮೇಲಿನ ಯೋಜನೆಗಳಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಲು ಸರ್ಕಾರ ಒತ್ತು ನೀಡಲಿದೆ ಎಂದು ಹೇಳಿದರು. ಇದನ್ನೂ ಓದಿ: ಕೂದಲು ಹಿಡಿದು ತಲಾಖ್‌ ಕೊಟ್ಟ, ಹೋಗಿ ಸಾಯಿ ಎಂದ: ಕಣ್ಣೀರಿಟ್ಟ ಮಂಗಳೂರಿನ ಮಹಿಳೆ

    ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್, ಕೇಂದ್ರ ಬಂದರು ಸಚಿವ ಸರಬಾನಂದ ಸೋನೋವಾಲ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೈಗಾರಿಕಾ ಸಚಿವರು ಸಭೆಯಲ್ಲಿ ಭಾಗವಹಿಸಿದ್ದರು.

    ಕರ್ನಾಟಕ ಸರ್ಕಾರದ ಪರವಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಮತ್ತಿತರ ಉನ್ನತ ಅಧಿಕಾರಿಗಳು ವರ್ಚ್ಯುಯಲ್ ಸಭೆಯಲ್ಲಿ ಪಾಲ್ಗೊಂಡಿದ್ದರು.

  • ಮೇಕೆ ರಕ್ತದಿಂದ ನಟನ ಕಟೌಟ್‌ಗೆ ಅಭಿಷೇಕ: ಕೆಜಿಎಫ್‌ನಲ್ಲಿ 9 ಮಂದಿ ಅರೆಸ್ಟ್

    ಮೇಕೆ ರಕ್ತದಿಂದ ನಟನ ಕಟೌಟ್‌ಗೆ ಅಭಿಷೇಕ: ಕೆಜಿಎಫ್‌ನಲ್ಲಿ 9 ಮಂದಿ ಅರೆಸ್ಟ್

    ಜ್ಯೂನಿಯರ್ ಎನ್.ಟಿ. ಆರ್ (Junior NTR) ಮೊನ್ನೆಯಷ್ಟೇ ತಮ್ಮ 40ನೇ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಂಡಿದ್ದಾರೆ. ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ಕೂಡ ನಾನಾ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ಆದರೆ ಕರ್ನಾಟಕದ ಕೆಜಿಎಫ್ (KGF) ಸಮೀಪದ ರಾಬರ್ಟ್ ಸನ್ ಪೇಟ್ ನಲ್ಲಿ ಮಾತ್ರ ಹುಟ್ಟುಹಬ್ಬ ಆಚರಿಸಿ ಜೈಲು ಪಾಲಾಗಿದ್ದಾರೆ.

    ಮೇ 20 ರಂದು ಜ್ಯೂನಿಯರ್ ಎನ್.ಟಿ.ಆರ್ ಅವರ ಹುಟ್ಟು ಹಬ್ಬವನ್ನು ಆಚರಿಸಲು ಕೆಲ ಅಭಿಮಾನಿಗಳು ಕೆಜಿಎಫ್ ಬಳಿಯ ರಾಬರ್ಟ್ ಸನ್ ಪೇಟ್ ಬಳಿ ಇರುವ ಚಿತ್ರ ಮಂದಿರಕ್ಕೆ ಬಂದಿದ್ದರು. ಅಂದು ಜ್ಯೂನಿಯರ್ ಅವರ ಸಿನಿಮಾ ಕೂಡ ಪ್ರದರ್ಶನವಾಗುತ್ತಿತ್ತು. ಥಿಯೇಟರ್ ಮುಂದೆ ಹಾಕಿದ್ದ ಪೋಸ್ಟರ್ ಮುಂದೆ ಎರಡು ಕುರಿಗಳನ್ನು ತಂದು ಕತ್ತರಿಸಿದ್ದಾರೆ ಅಭಿಮಾನಿಗಳು. ನಂತರ ರಕ್ತದಿಂದ ಪೋಸ್ಟರ್ ಗೆ ಅಭಿಷೇಕ ಮಾಡಿದ್ದಾರೆ. ಇದನ್ನೂ ಓದಿ:ಶಿವಣ್ಣ ನಟನೆಯ ‘ಬೈರತಿ ರಣಗಲ್‌’ ಸಿನಿಮಾದ ಬಿಗ್‌ ಅಪ್‌ಡೇಟ್

    ಈ ಮಾಹಿತಿ ಪೊಲೀಸರಿಗೆ ಸಿಗುತ್ತಿದ್ದಂತೆಯೇ ಅಭಿಮಾನಿಗಳ ಬಂಧನಕ್ಕೆ (Arrest) ಬಲೆ ಬೀಸಿದ್ದರು. ಇದೀಗ ಅಭಿಮಾನಿಗಳ ಬಂಧನವಾಗಿದ್ದು, ಅವರನ್ನು ಜೈಲಿಗೆ ಕಳುಹಿಸಲಾಗಿದೆ. ನಾಗಭೂಷಣಂ, ಶಿವನಾಗ ರಾಜು, ಅನಿಲ್ ಕುಮಾರ್, ಶಿವ, ನಾಗೇಶ್ವರ ರಾವ್ ಸೇರಿದಂತೆ 9 ಜನ ಅಭಿಮಾನಿಗಳನ್ನು ಪೊಲೀಸರು ಬಂಧಿಸಿದ್ದಾರೆ.

  • ಬಾಲಯ್ಯ ಸಿನಿಮಾದಲ್ಲಿ ಸೊಂಟ ಬಳುಕಿಸಲು 5 ಕೋಟಿ ಕೇಳಿದ್ರಾ? ತಮನ್ನಾ ಸ್ಪಷ್ಟನೆ

    ಬಾಲಯ್ಯ ಸಿನಿಮಾದಲ್ಲಿ ಸೊಂಟ ಬಳುಕಿಸಲು 5 ಕೋಟಿ ಕೇಳಿದ್ರಾ? ತಮನ್ನಾ ಸ್ಪಷ್ಟನೆ

    ಸೌತ್ ಬ್ಯೂಟಿ ತಮನ್ನಾ ಭಾಟಿಯಾ (Tamanna Bhatia) ಅವರು ಸದಾ ವಿಜಯ್ ವರ್ಮಾ (Vijay Varma) ಜೊತೆಗಿನ ಡೇಟಿಂಗ್ ವಿಷ್ಯವಾಗಿ ಸುದ್ದಿಯಲ್ಲಿರುತ್ತಿದ್ದರು. ಇದೀಗ ತಮ್ಮ ಸಿನಿಮಾ ಸಂಭಾವನೆ ವಿಚಾರವಾಗಿ ಗಾಸಿಪ್ ಹಬ್ಬಿದ್ದಕ್ಕೆ ತಮನ್ನಾ ಗರಂ ಆಗಿದ್ದಾರೆ. ಬಾಲಯ್ಯ (Balayya) ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು 5 ಕೋಟಿ ರೂ. ಡಿಮ್ಯಾಂಡ್ ಮಾಡಿದ್ದರು ಎನ್ನಲಾದ ಸುದ್ದಿಗೆ ನಟಿ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಭಾವಿಪತಿಗೆ ಸಿಹಿಮುತ್ತು ಕೊಟ್ಟು, ನಿಶ್ಚಿತಾರ್ಥದ ಸುದ್ದಿ ಹಂಚಿಕೊಂಡ ಅನುರಾಗ್‌ ಕಶ್ಯಪ್‌ ಪುತ್ರಿ

    ಬಹುಭಾಷಾ ನಟಿಯಾಗಿ ಸದ್ದು ಮಾಡ್ತಿರುವ ತಮನ್ನಾ ಭಾಟಿಯಾ ಅವರು ‘ಕೆಜಿಎಫ್’ (KGF) ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಾಯಕಿಯಾಗಿಯೂ ಗೆದ್ದಿದ್ದಾರೆ. ಇತ್ತೀಚೆಗೆ ನಂದಮೂರಿ ಬಾಲಯ್ಯ ಅವರ 108ನೇ ಚಿತ್ರಕ್ಕೆ 5 ಕೋಟಿ ರೂ ಸಂಭಾವನೆ ಡಿಮ್ಯಾಂಡ್ ಮಾಡಿದ್ರು ಎಂಬ ಸುದ್ದಿಗೆ ನಟಿ ತಮನ್ನಾ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಗಾಸಿಪ್‌ಗೆಲ್ಲಾ ಬ್ರೇಕ್ ಹಾಕಿದ್ದಾರೆ.

    ಬಾಲಯ್ಯ ನಟನೆಯ 108ನೇ ಸಿನಿಮಾಗೆ ಅನಿಲ್ ರವಿಪುಡಿ ನಿರ್ದೇಶಕ. ಈ ಸಿನಿಮಾದಲ್ಲಿನ ಒಂದು ಐಟಂ ಸಾಂಗ್‌ನಲ್ಲಿ ಕುಣಿಯುವಂತೆ ತಮನ್ನಾಗೆ ಆಫರ್ ನೀಡಲಾಗಿದೆ ಎಂದು ಗಾಳಿ ಸುದ್ದಿ ಹಬ್ಬಿತ್ತು. ಅಷ್ಟೇ ಅಲ್ಲದೇ, ಆ ಹಾಡಿನಲ್ಲಿ ಡ್ಯಾನ್ಸ್ ಮಾಡಲು ತಮನ್ನಾ ಅವರು ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ ಎಂದು ಕೂಡ ಗಾಸಿಪ್ ಮಂದಿ ಮಾತನಾಡಿಕೊಂಡಿದ್ದರು. ಅದು ತಮನ್ನಾ ಗಮನಕ್ಕೂ ಬಂದಿದ್ದು, ಸ್ಪಷ್ಟನೆ ನೀಡಿದ್ದಾರೆ.

    ನಿರ್ದೇಶಕ ಅನಿಲ್ ರವಿಪುಡಿ ಅವರ ಜೊತೆ ಕೆಲಸ ಮಾಡುವುದನ್ನು ನಾನು ಯಾವಾಗಲೂ ಎಂಜಾಯ್ ಮಾಡಿದ್ದೇನೆ. ಅದೇ ರೀತಿ ನಂದಮೂರಿ ಬಾಲಕೃಷ್ಣ ಅವರ ಬಗ್ಗೆಯೂ ನನಗೆ ಸಾಕಷ್ಟು ಗೌರವ ಇದೆ. ಆದರೆ ಅವರ ಸಿನಿಮಾದಲ್ಲಿನ ಹಾಡಿನಲ್ಲಿ ನಾನು ಇರುವುದಾಗಿ ಗಾಸಿಪ್ ಹಬ್ಬಿರುವುದು ನನಗೆ ಬೇಸರ ಮೂಡಿಸಿದೆ. ಆಧಾರ ಇಲ್ಲದ ಆರೋಪ ಮಾಡುವುದಕ್ಕೂ ಮುನ್ನ ನೀವು ಸ್ವಲ್ಪ ರಿಸರ್ಚ್ ಮಾಡಿಕೊಳ್ಳಿ ಎಂದು ನಟಿ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ.

  • ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 4 ಕೋಟಿ 5 ಲಕ್ಷ ರೂ. ವಶ

    ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 4 ಕೋಟಿ 5 ಲಕ್ಷ ರೂ. ವಶ

    ಕೋಲಾರ: ಕೆ.ಜಿ.ಎಫ್ (KGF) ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 4 ಕೋಟಿ 5 ಲಕ್ಷ ರೂಪಾಯಿ ಹಣವನ್ನ ವಶಕ್ಕೆ ಪಡೆದಿದ್ದಾರೆ.

    ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹಂಚಾಳ ಬಳಿ ಇರುವ ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್‍ನ ವಿಲ್ಲಾ ದಲ್ಲಿರಿಸಿದ್ದ ಕಂತೆ ಕಂತೆ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ (Ramesh) ಅನ್ನೋರಿಗೆ ಸೇರಿದ ವಿಲ್ಲಾ ಇದಾಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಕೆಜಿಎಫ್ ಎಸ್‍ಪಿ ಧರಣಿದೇವಿ ನೇತೃತ್ವದ ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಮಣಿಪುರ ಧಗಧಗ – ಪರಿಸ್ಥಿತಿ ಕೈಮೀರಿದರೆ ಕಂಡಲ್ಲಿ ಗುಂಡು ಹಾರಿಸಿ: ಸರ್ಕಾರ ಆದೇಶ

    ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್ 279 ನಂಬರ್ ವಿಲ್ಲಾದಲ್ಲಿ ಪತ್ತೆಯಾದ ಹಣ ಮತದಾರರಿಗೆ ಹಂಚಲು ಸಂಗ್ರಹಿಸಿದ್ದು ಎನ್ನಲಾಗಿದೆ. ಬಂಗಾರಪೇಟೆ ಪಂಚಾಯ್ತಿ ವಾರ ಹೆಸರು ಬರೆದು ಬಂಡಲ್ ಮಾಡಿಟ್ಟಿದ್ದ ಹಣ ಇದಾಗಿದ್ದು, ಕೆಜಿಎಫ್ ಎಸ್‍ಪಿ ಧರಣಿದೇವಿ ಖಾಸಗಿ ಕಾರ್‍ನಲ್ಲಿ ಬಂದು ದಾಳಿ ಮಾಡಿದ್ದಾರೆ. ದಾಳಿ ವಿಚಾರ ತಿಳಿಯುತ್ತಿದ್ದಂತೆ ಕಾರು ಬಿಟ್ಟು ಮಾಲೀಕ ರಮೇಶ್ ಪರಾರಿಯಾಗಿದ್ದಾರೆ.

    ಮೊದಲಿಗೆ ವಿಲ್ಲಾದಲ್ಲಿದ್ದ 2 ಕೋಟಿ 54 ಲಕ್ಷ ಹಾಗೂ ಕಾರಿನ ಬೀಗ ಒಡೆದ ವೇಳೆ ಕಾರಿನಲ್ಲಿ ಮೂರು ಗೋಣಿ ಚೀಲದಲ್ಲಿದ್ದ ಒಂದೂವರೆ ಕೋಟಿ ಹಣ ಪತ್ತೆಯಾಗಿದೆ. ಇನ್ನೂ ಸ್ಥಳದಲ್ಲಿ ಚುನಾವಣಾ ವೀಕ್ಷಕರ ತಂಡ ಮೊಕ್ಕಾಂ ಹೂಡಿದ್ದು, ಹಣವನ್ನು ಮೆಷಿನ್ ಮೂಲಕ ಲೆಕ್ಕ ಹಾಕಿದ್ದು, ಸ್ಥಳದಲ್ಲಿ ಚುನಾವಣಾ ಲೆಕ್ಕ ವೀಕ್ಷಕರು, ತಾಲೂಕು ಚುನಾವಣಾಧಿಕಾರಿಗಳು, ಐಟಿ ಅಧಿಕಾರಿಗಳ ಸಮ್ಮುಖದಲ್ಲಿ ಹಣವನ್ನ ವಶಕ್ಕೆ ಪಡೆಯಲಾಗಿದೆ.

  • ಸ್ನೇಹಿತನ ಮದುವೆಯಲ್ಲಿ ಮಿಂಚಿದ ನಟ ಯಶ್- ರಾಧಿಕಾ ಪಂಡಿತ್

    ಸ್ನೇಹಿತನ ಮದುವೆಯಲ್ಲಿ ಮಿಂಚಿದ ನಟ ಯಶ್- ರಾಧಿಕಾ ಪಂಡಿತ್

    ಸ್ಯಾಂಡಲ್‌ವುಡ್ ಸ್ಟಾರ್ ಯಶ್- ರಾಧಿಕಾ ಪಂಡಿತ್ (Radhika Pandit) ಜೋಡಿ ಇದೀಗ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡು ಸುದ್ದಿಯಲ್ಲಿದ್ದಾರೆ. ಸ್ನೇಹಿತನ ಮದುವೆಯಲ್ಲಿ (Wedding) ರಾಕಿಭಾಯ್ ಯಶ್- ರಾಧಿಕಾ ಪಾಲ್ಗೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ.

    ‘ಕೆಜಿಎಫ್ 2’ (KGF2) ಸಕ್ಸಸ್ ನಂತರ ಹೊಸ ಸಿನಿಮಾ ತಯಾರಿಯಲ್ಲಿ ಯಶ್ (Yash) ಬ್ಯುಸಿಯಾಗಿದ್ದಾರೆ. ಅದಕ್ಕಾಗಿ ಶ್ರೀಲಂಕಾದಲ್ಲಿ ಕೆಲವು ದಿನಗಳ ಕಾಲ ಬೀಡು ಬಿಟ್ಟಿದ್ದರು. ಈಗ ಕೊಂಚ ಕೆಲಸಕ್ಕೆ ಬ್ರೇಕ್ ಹಾಕಿ ಸ್ನೇಹಿತನ ಮದುವೆಯಲ್ಲಿ ಪತ್ನಿ ರಾಧಿಕಾ ಜೊತೆ ಯಶ್ ಮಿಂಚಿದ್ದಾರೆ. ಮದುವೆ ಮನೆಯಲ್ಲಿ ಯಶ್-ರಾಧಿಕಾಗೆ ಗ್ರ್ಯಾಂಡ್‌ ವೆಲ್‌ಕಮ್ ಕೂಡ ಮಾಡಲಾಗಿದೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್- ಸೈಫ್ ಅಲಿ ಖಾನ್ ಚಿತ್ರದಲ್ಲಿ ಕನ್ನಡದ ನಟಿ ಚೈತ್ರಾ ರೈ

    ನವಜೋಡಿಗೆ ಮನಸಾರೆ ಶುಭಹಾರೈಸಿ ಕುಶಲೋಪರಿ ವಿಚಾರಿಸಿ ಬಂದಿದ್ದಾರೆ. ಸ್ನೇಹಿತನ ಮದುವೆ ಸಂಭ್ರಮದಲ್ಲಿ ಅದ್ಭುತವಾಗಿ ಎಂಟ್ರಿ ಕೊಟ್ಟಿದ್ದಾರೆ. ಯಶ್ ನೇರಳೆ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡರೆ, ಗ್ರೇ ಬಣ್ಣದ ಸೀರೆಯಲ್ಲಿ ರಾಧಿಕಾ ಪಂಡಿತ್ ಕಂಗೊಳಿಸಿದ್ದಾರೆ.

    ‘ಕೆಜಿಎಫ್ 2’ ಸಿನಿಮಾ ನಂತರ ಕೆಜಿಎಫ್ ಪಾರ್ಟ್ 3ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಇತ್ತೀಚಿಗಷ್ಟೇ ಹೊಂಬಾಳೆ ಸಂಸ್ಥೆ ಈ ಬಗ್ಗೆ ಅನೌನ್ಸ್‌ ಕೂಡ ಮಾಡಿತ್ತು.

  • ‘ತಂಗಲಾನ್’ ರಿಹರ್ಸಲ್ ವೇಳೆ ವಿಕ್ರಮ್‌ಗೆ ಗಾಯ- ಶೂಟಿಂಗ್ ಸ್ಥಗಿತ

    ‘ತಂಗಲಾನ್’ ರಿಹರ್ಸಲ್ ವೇಳೆ ವಿಕ್ರಮ್‌ಗೆ ಗಾಯ- ಶೂಟಿಂಗ್ ಸ್ಥಗಿತ

    ಕ್ಷಿಣ ಭಾರತದ ಸ್ಟಾರ್ ನಟ ಚಿಯಾನ್ ವಿಕ್ರಮ್ (Chiyaan Vikram) ಅವರು ‘ಪೊನ್ನಿಯಿನ್ ಸೆಲ್ವನ್ 2’ (Ponniyin Selvan 2) ಸಿನಿಮಾ ಪ್ರಚಾರ ಮುಗಿಸಿ ಮತ್ತೆ ಹೊಸ ಸಿನಿಮಾದ ಚಿತ್ರೀಕರಣಕ್ಕೆ ಹಾಜರಾಗಿದ್ದರು. ‘ತಂಗಲಾನ್’ (Thangalaan Film) ರಿಹರ್ಸಲ್ ವೇಳೆ ಬಿದ್ದು ವಿಕ್ರಮ್ ಪಕ್ಕೆಲುಬಿಗೆ ಪೆಟ್ಟಾಗಿದೆ. ಕೂಡಲೇ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ.

    ‘ತಂಗಲಾನ್’ ಸಿನಿಮಾದ ರಿಹರ್ಸಲ್ ವೇಳೆ ವಿಕ್ರಮ್‌ಗೆ ಗಾಯಗಳಾಗಿರೋದ್ರಿಂದ ಶೂಟಿಂಗ್ ನಿಲ್ಲಿಸಲಾಗಿದೆ. ಅವರು ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕೆ ಮತ್ತೆ ಶೂಟಿಂಗ್ ಶುರುವಾಗುತ್ತದೆ. ಈ ಹಿಂದೆ ಕೂಡ ಇದೇ ಸಿನಿಮಾ ಸೆಟ್‌ನಲ್ಲಿ ವಿಕ್ರಮ್‌ಗೆ ಪೆಟ್ಟಾಗಿ ಕೆಲವು ದಿನಗಳ ಕಾಲ ಶೂಟಿಂಗ್ ನಿಂತಿತ್ತು. ಇದರಿಂದ ವಿಕ್ರಮ್ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ವಿಕ್ರಮ್ ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಪ್ರಸ್ತುತ ವಿಕ್ರಮ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ್ರಾರಂಭಿಸಲಾಗಿದೆ ಎಂದು ಹೇಳಲಾಗುತ್ತಿದೆ.

    ಕೋಲಾರ ಚಿನ್ನದ ಗಣಿಯ ಕಾರ್ಮಿಕರ ಸುತ್ತಾ ‘ತಂಗಲಾನ್’ ಸಿನಿಮಾ ಮೂಡಿ ಬರ್ತಿದೆ. ನಿರ್ದೇಶಕ ಪಾ.ರಂಜಿತ್ ಕೋಲಾರದಲ್ಲಿ ನಡೆದ ನಿಜವಾದ ಘಟನೆಗಳನ್ನು ಆಧರಿಸಿ, ಆ ಬಗ್ಗೆ ಸಂಶೋಧನೆ ನಡೆಸಿ ಸಿನಿಮಾ ಮಾಡುತ್ತಿರುವುದಾಗಿ ಹೇಳಿದ್ದಾರೆ. ನೂರು ವರ್ಷಗಳ ಹಿಂದೆ ಅಲ್ಲಿನ ಗಣಿ ಕಾರ್ಮಿಕರ ಪರಿಸ್ಥಿತಿ ಹೇಗಿತ್ತು ಎನ್ನುವುದರ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ.

  • Hombale Films: ತಲೈವಾಗೆ ‘ವಿಕ್ರಮ್‌’ ನಿರ್ದೇಶಕ ಆ್ಯಕ್ಷನ್ ಕಟ್?

    Hombale Films: ತಲೈವಾಗೆ ‘ವಿಕ್ರಮ್‌’ ನಿರ್ದೇಶಕ ಆ್ಯಕ್ಷನ್ ಕಟ್?

    ಕೆಜಿಎಫ್, ಕೆಜಿಎಫ್ 2 (KGF2), ಕಾಂತಾರ (Kantara) ಅಂತಹ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟಿರೋ ಹೊಂಬಾಳೆ ಫಿಲ್ಮ್ಸ್ ಟೀಮ್ ಯಶ್, ಪ್ರಭಾಸ್, ರಿಷಬ್, ಪುನೀತ್ ರಾಜ್‌ಕುಮಾರ್ ಜೊತೆ ಸಿನಿಮಾ ಮಾಡಿ ಗೆದ್ದು ಬೀಗಿದ್ದಾರೆ. ಇದೀಗ ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್‌ಗೆ (Rajanikanth) ನಿರ್ದೇಶಕನ ಮಾಡಲು ಪ್ರತಿಭಾನ್ವಿತ ನಿರ್ದೇಶಕ ಲೋಕೇಶ್ ಕನಕರಾಜ್‌ಗೆ (Lokesh Kanagaraj) ಗಾಳ ಹಾಕಿದ್ದಾರೆ.

    ಸೂಪರ್ ಸ್ಟಾರ್‌ಗಳ ಜೊತೆಗೆ ಕೆಲಸ ಮಾಡಿ ಅದ್ಭುತ ಸಿನಿಮಾಗಳನ್ನ ಕೊಟ್ಟಿರೋ ಹೊಂಬಾಳೆ ಟೀಮ್ ಇದೀಗ ತಲೈವಾ ಜೊತೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ರಜಿನಿಕಾಂತ್ ಜೊತೆ ಸಿನಿಮಾ ಮಾಡುವ ವಿಚಾರ ಕೆಲವು ದಿನಗಳಿಂದ ಚಾಲ್ತಿಯಲ್ಲಿತ್ತು. ಈ ಬೆನ್ನಲ್ಲೇ ಮತ್ತೊಂದು ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ. ಇದನ್ನೂ ಓದಿ:ಪಡ್ಡೆಹೈಕ್ಳಿಗೆ ಬೋಲ್ಡ್‌ ಲುಕ್‌ನಿಂದ ಹಾಟ್‌ ಟ್ರೀಟ್‌ ನೀಡಿದ ಲಕ್ಷ್ಮಿ ರೈ

    ‘ವಿಕ್ರಮ್’ (Vikram) ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ಜೊತೆ ಚಿತ್ರ ಮಾಡಲು ಹೊಂಬಾಳೆ ಸಂಸ್ಥೆ ಪ್ಲ್ಯಾನ್ ಮಾಡಿದೆ. ರಜನಿಕಾಂತ್‌ಗಾಗಿಯೇ ಲೋಕೇಶ್ ಈಗಾಗಲೇ ಕಥೆ ಮಾಡಿದ್ದಾರೆ. ತಲೈವಾ 171ನೇ ಚಿತ್ರಕ್ಕೆ ಇವರೇ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ, ರಜನಿಕಾಂತ್ ಅವರು ಲೋಕೇಶ್ ಕಥೆ ಕೇಳಿ ಓಕೆ ಎಂದಿದ್ದಾರೆ ಅಂತೆ.

    ಲೋಕೇಶ್ ಕನಕರಾಜ್- ರಜನಿಕಾಂತ್ ಜೊತೆ ಸಿನಿಮಾ ಮೂಡಿ ಬರಲಿರುವ ಸುದ್ದಿ ಕೇಳಿಯೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ? ಅಥವಾ ಜಸ್ಟ್ ಗಾಸಿಪ್ ಸುದ್ದಿನಾ ಎಂಬುದನ್ನ ಮುಂದಿನ ದಿನಗಳಲ್ಲಿ ಹೊಂಬಾಳೆ ಟೀಮ್ (Hombale Films) ಅಧಿಕೃತವಾಗಿ ಹೇಳುವವರೆಗೂ ಕಾಯಬೇಕಿದೆ.