Tag: ಕೆಜಿಎಫ್

  • ಮಾಸ್ ಸಿನಿಮಾ ಮಾಡುತ್ತಿದ್ದೇನೆ, ಸದ್ಯದಲ್ಲೇ ಹೇಳುವೆ : ನಟ ಯಶ್

    ಮಾಸ್ ಸಿನಿಮಾ ಮಾಡುತ್ತಿದ್ದೇನೆ, ಸದ್ಯದಲ್ಲೇ ಹೇಳುವೆ : ನಟ ಯಶ್

    ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂದಿನ (New Movie) ಸಿನಿಮಾದ ಬಗ್ಗೆ ಮತ್ತೊಂದು ಅಪ್ ಡೇಟ್ (Update) ನೀಡಿದ್ದಾರೆ. ಮಲೇಷ್ಯಾದಲ್ಲಿ ಹೊಸ ಸಿನಿಮಾದ ಕುರಿತು ಮಾತನಾಡಿರುವ ಯಶ್, ‘ದೊಡ್ಡ ಸಿನಿಮಾವನ್ನು ಮಾಡುತ್ತೇನೆ ಎಂದು ಹೇಳುತ್ತಿಲ್ಲ, ಒಳ್ಳೆಯ ಸಿನಿಮಾ ಮಾಡಲು ಪ್ರಯತ್ನಿಸುತ್ತಿದ್ದೇನೆ. ಅದೊಂದು ಮಾಸ್ ಸಿನಿಮಾವಾಗಿರಲಿದೆ. ಸದ್ಯದಲ್ಲೇ ಮಾಹಿತಿ ನೀಡುತ್ತೇನೆ’ ಎಂದು ಮಾತನಾಡಿದ್ದಾರೆ.

    ರಾಕಿಭಾಯ್ ಯಶ್ (Yash) ಮೊನ್ನೆ ಮಲೇಷ್ಯಾಗೆ ಹಾರಿದ್ದರು. ನಾಲ್ಕೈದು ಗೆಳೆಯರೊಂದಿಗೆ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ ಅವರು, ಮಲೇಷ್ಯಾದಲ್ಲಿ (Malaysia) ಚಿನ್ನದ ಅಂಗಡಿಯೊಂದರ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ, ಮಲೇಷ್ಯಾದಲ್ಲಿ ವಾಸವಿರುವ ಅವರ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಯಶ್ ಅವರಿಗೆ ನೀಡಲಾದ ಗಿಫ್ಟ್ (Gift) ಸಾಕಷ್ಟು ವೈರಲ್ ಕೂಡ ಆಗಿದೆ. ಇದನ್ನೂ ಓದಿ:ಚೆಕ್ ಬೌನ್ಸ್ ಕೇಸ್‌ನಲ್ಲಿ ನಟ ನೀನಾಸಂ ಅಶ್ವಥ್ ಬಂಧನ

    ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್, ಇಬ್ಬರು ಮಕ್ಕಳು ಹಾಗೂ ಯಶ್ ಅವರ ತಂದೆ-ತಾಯಿ ಇರುವಂತಹ ಗ್ರೂಪ್ ಫೋಟೋವನ್ನು (Group Photo) ಪ್ರಸಿದ್ಧ ಕಲಾವಿದರ ಜೊತೆ ಪೇಟಿಂಗ್ ಮಾಡಿಸಿ, ಉಡುಗೊರೆಯಾಗಿ ನೀಡಿದ್ದಾರೆ. ಆ ಫೋಟೋವನ್ನು ಅವರೇ ಬಿಡುಗಡೆಗೊಳಿಸಿ ಬೆರಗಿನಿಂದ ನೋಡಿದರು ಯಶ್. ಆ ವಿಡಿಯೋ ಕೂಡ ವೈರಲ್ ಆಗಿದೆ.

     

    ಬೆಂಗಳೂರಿನಿಂದ ಹೊರಟ ವಿಶೇಷ ವಿಮಾನದಲ್ಲಿ ಪಾನಿಪುರಿ ಕಿಟ್ಟಿ (Panipuri Kitty) ಸೇರಿದಂತೆ ಹಲವರು ಇದ್ದಾರೆ. ಮಲೇಷ್ಯಾಗೆ ಬಂದಿಳಿದಿದ್ದ ತಮ್ಮ ನೆಚ್ಚಿನ ನಟನನ್ನು ನೋಡುವುದಕ್ಕಾಗಿ ಅಲ್ಲಿನ ಅಭಿಮಾನಿಗಳು ಕಾಯುತ್ತಿದ್ದರು ಎನ್ನುತ್ತಾರೆ ಯಶ್ ಆಪ್ತರು. ಚಿನ್ನದ ಅಂಗಡಿ ಉದ್ಘಾಟನೆಯ ನಂತರ ಮುಂದಿನ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡದೇ ಇದ್ದರೂ, ಕಾರ್ಯಕ್ರಮದ ನಂತರ ಫ್ಯಾನ್ಸ್ ಭೇಟಿ ಮಾಡುವುದು ಖಚಿತ ಎಂದಿದ್ದರು. ಹಾಗೆಯೇ ಯಶ್ ಅಭಿಮಾನಿಗಳನ್ನೂ ಭೇಟಿ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಪಾನ್ ನಲ್ಲಿ ಕೆಜಿಎಫ್ : ಜಪಾನ್ ಭಾಷೆಯಲ್ಲೇ ಚಿತ್ರ ನೋಡಿ ಎಂದ ಯಶ್

    ಜಪಾನ್ ನಲ್ಲಿ ಕೆಜಿಎಫ್ : ಜಪಾನ್ ಭಾಷೆಯಲ್ಲೇ ಚಿತ್ರ ನೋಡಿ ಎಂದ ಯಶ್

    ರ್.ಆರ್.ಆರ್ ಸಿನಿಮಾದ ನಂತರ ದಕ್ಷಿಣದ ಮತ್ತೊಂದು ಸಿನಿಮಾ ಜಪಾನ್ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಯಶ್ (Yash) ಮತ್ತು ಪ್ರಶಾಂತ್ ನೀಲ್ (Prashant Neel) ಕಾಂಬಿನೇಷನ್ ನ ‘ಕೆಜಿಎಫ್ 1’ (KGF) ಹಾಗೂ ‘ಕೆಜಿಎಫ್ 2’ ಚಿತ್ರವು ಜಪಾನ್ (Japan) ಭಾಷೆಗೆ ಡಬ್ ಆಗಿದ್ದು, ಶೀಘ್ರದಲ್ಲೇ ಸಿನಿಮಾ ರಿಲೀಸ್ ಆಗಲಿದೆಯಂತೆ. ಅದಕ್ಕಾಗಿಯೇ ಯಶ್ ಜಪಾನ್ ಭಾಷೆಯಲ್ಲೇ ವಿಡಿಯೋವೊಂದನ್ನು ಮಾಡಿ, ಸಿನಿಮಾ ನೋಡುವಂತೆ ಅಲ್ಲಿನ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

    ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಆರ್.ಆರ್.ಆರ್ ಸಿನಿಮಾ ಕೂಡ ಈ ಹಿಂದೆ ಜಪಾನ್ ಭಾಷೆಯಲ್ಲಿ ರಿಲೀಸ್ ಆಗಿತ್ತು. ನೂರು ಕೋಟಿಗೂ ಅಧಿಕ ಹಣವನ್ನು ಬಾಕ್ಸ್ ಆಫೀಸಿನಲ್ಲಿ ಲೂಟಿ ಮಾಡಿತ್ತು. ಆ ಸಿನಿಮಾ ಗೆಲುವು ಕಂಡ ಬೆನ್ನಲ್ಲೇ ಕೆಜಿಎಫ್ ಸಿನಿಮಾವನ್ನೂ ಜಪಾನ್ ಭಾಷೆಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಇದೀಗ ಸಿನಿಮಾ ರಿಲೀಸ್ ಮಾಡಲು ಹೊರಟಿದೆ.

    ಇದೇ ಜುಲೈ 14 ರಂದು ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಕೂಡ ಜಪಾನ್ ಭಾಷೆಯಲ್ಲಿ ಡಬ್ ಆಗಿ ರಿಲೀಸ್ ಆಗುತ್ತಿದೆ. ಪಠಾಣ್ ಸಿನಿಮಾ ಕೂಡ ಈ ವರ್ಷ ಹಿಟ್ ಆದ ಬಾಲಿವುಡ್ ಸಿನಿಮಾಗಳಲ್ಲಿ ಮೊದಲ ಸ್ಥಾನದಲ್ಲಿದೆ. ಜಪಾನ್ ನಲ್ಲಿ ಶಾರುಖ್ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಶಾರುಖ್ ಖಾನ್ ಸಿನಿಮಾಗಳು ಜಪಾನ್ ಭಾಷೆಯಲ್ಲಿ ರಿಲೀಸ್ ಆಗುತ್ತಲೇ ಇರುತ್ತವೆ. ಇದನ್ನೂ ಓದಿ:‘ಟೋಬಿ’ ಶೆಟ್ಟರ ಕೆನ್ನೆಗೆ ಮುತ್ತಿಟ್ಟ ಚೈತ್ರಾ- ರಾಜ್ ಬಿ ಶೆಟ್ಟಿ ಸ್ಪಷನೆ

    ಜಪಾನ್ ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಕೆಜಿಎಫ್.  ಈ ಹಿಂದೆ ಕೆಜಿಎಫ್ ಸಿನಿಮಾ 50ನೇ ದಿನದತ್ತ ದಾಪುಗಾಲಿಡುತ್ತಿರುವ ಸಂದರ್ಭದಲ್ಲಿ, ಜಪಾನ್‍ನ ಟೋಕಿಯೋದ ಚಿತ್ರಮಂದಿರವೊಂದರಲ್ಲಿ ಚಿತ್ರದ ಪ್ರದರ್ಶನ  ನಡೆದಿತ್ತು. ಜಪಾನ್‍ನಲ್ಲೂ ಅಪಾರ ಕನ್ನಡ ಅಭಿಮಾನಿಗಳು ಇದ್ದು, ಅವರು ಕೆಜಿಎಫ್ ಸಿನಿಮಾ ವೀಕ್ಷಿಸಿದ್ದರು.

    ಈ ವೇಳೆ ಅಲ್ಲಿನ ಕನ್ನಡಾಭಿಮಾನಿಗಳು ಯಶ್ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಸಿನಿಮಾ ಚೆನ್ನಾಗಿದೆ, ಕನ್ನಡ ಭಾಷೆಯಲ್ಲಿ ನೋಡುತ್ತಿದ್ದೇವೆ ಎಂದು ಹೇಳಿ ಯಶ್ ಅವರಿಗೆ ಶುಭಾಶಯ ತಿಳಿಸಿದ್ದರು. ಅಲ್ಲದೇ ಇದೇ ವೇಳೆ ಅಭಿಮಾನಿಗಳು ಸಿನಿಮಾದ ಒಂದು ಡೈಲಾಗ್ ಹೇಳಿ ಎಂದು ಮನವಿ ಮಾಡಿಕೊಂಡಿದ್ದರು.

     

    ಅಭಿಮಾನಿಗಳ ಒತ್ತಾಯದ ಮೇರೆಗೆ ಯಶ್ ಫೋನ್ ಮೂಲಕವೇ ಡೈಲಾಗ್ ಹೇಳಿದ್ದಾರೆ. ಯಶ್ ಡೈಲಾಗ್ ಹೇಳಿದ ಬಳಿಕ ಚಿತ್ರಮಂದಿರದಲ್ಲಿದ್ದ ಅಭಿಮಾನಿಯೊಬ್ಬರು, ಯಶ್ ನನ್ನ ರಕ್ತಾನೂ ಕೆಂಪಗೇ ಇದೆಯಲ್ಲಾ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಸಲಾರ್’ ಚಿತ್ರಕ್ಕೂ ‘ಕೆಜಿಎಫ್ 2’ಗೂ ಇದೆ ನಂಟು: ತಲೆಕೆಡಿಸಿಕೊಂಡ ಫ್ಯಾನ್ಸ್

    ‘ಸಲಾರ್’ ಚಿತ್ರಕ್ಕೂ ‘ಕೆಜಿಎಫ್ 2’ಗೂ ಇದೆ ನಂಟು: ತಲೆಕೆಡಿಸಿಕೊಂಡ ಫ್ಯಾನ್ಸ್

    ಇಂದು ಬೆಳ್ಳಂಬೆಳಗ್ಗೆ ಸಲಾರ್ ಸಿನಿಮಾದ ಟೀಸರ್ (Salaar) ರಿಲೀಸ್ ಆಗಿದೆ. ಟೀಸರ್ ಬಗ್ಗೆ ಹಲವರು ಹಲವು ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಟೀಸರ್ ನಲ್ಲಿ ಬಳಕೆಯಾದ ದೃಶ್ಯಗಳಲ್ಲಿ ಕೆಜಿಎಫ್ (KGF) ಸಿನಿಮಾವನ್ನೂ ಹಲವರು ಹುಡುಕಿದ್ದಾರೆ. ಹಾಗಾಗಿ ಫ್ಯಾನ್ಸ್ ತಲೆಕೆಡಿಸಿಕೊಂಡು ತಮ್ಮದೇ ಆದ ರೀತಿಯಲ್ಲಿ ಕಥೆ ಕಟ್ಟುತ್ತಿದ್ದಾರೆ.

    ಬೆಳಗ್ಗೆ ಬಿಡುಗಡೆಯಾದ ಸಲಾರ್ ಟೀಸರ್ ನಲ್ಲಿ ಕೆಜಿಎಫ್ ಸಿನಿಮಾದ ಕೋಲಾರ್ ಗೋಲ್ಡ್ ಫಿಲ್ಡನ್ ಮೂನಿಂಗ್ ಒಳಗಿನ ಸಾಮ್ರಾಜ್ಯವನ್ನು ತರುವ ಪ್ರಯತ್ನ ನಡೆದಿದೆಯಾ ಎನ್ನುವ ಅನುಮಾನ ಮೂಡಿಸಿದೆ. ಕೆಜಿಎಫ್ ಕಥೆಯಲ್ಲಿ ಬರುವ ಬಂಗಾರದ ಕಣಜಗಳ ಗೇಟ್ ಗಳು ಸಲಾರ್ ನಲ್ಲಿ ಎಂಟ್ರಿ ಪಡೆದಿವೆ. ಕೆಲ ನಂಬರ್ ಗಳು ಕೂಡ ಯಥಾವತ್ತಾಗಿ ದಾಖಲಾಗಿವೆ. ಹಾಗಾಗಿ ಕೆಜಿಎಫ್ ಅಧ್ಯಾಯದ ಒಂದಷ್ಟು ಭಾಗವನ್ನು ಸಲಾರ್ ಸಿನಿಮಾದಲ್ಲಿ ಹೇಳಿದ್ದಾರಾ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

    ಕೆಜಿಎಫ್’ ಮೂಲಕ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ಪ್ರಶಾಂತ್ ನೀಲ್ (Prashant Neel), ಈ ಬಾರಿ ‘ಸಲಾರ್’ ಮೂಲಕ ಇನ್ನೊಂದು ಹೊಸ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ.  ಭಾರತೀಯ ಚಿತ್ರರಂಗದಲ್ಲಿ ಇದುವರೆಗೂ ಕಂಡುಕೇಳರಿಯದ ಪ್ರಮಾಣದಲ್ಲಿ ಈ ಚಿತ್ರವು ನಿರ್ಮಾಣವಾಗುತ್ತಿದ್ದು, ಹೈದರಾಬಾದ್‌ ನ ರಾಮೋಜಿ ಫಿಲಂ ಸಿಟಿ ಬಳಿ 14 ಅದ್ಭುತ ಸೆಟ್ ಗಳನ್ನು ಈ ಚಿತ್ರಕ್ಕಾಗಿ ನಿರ್ಮಿಸಿ, ಅಲ್ಲಿ ಚಿತ್ರೀಕರಣ ಮಾಡಲಾಗಿದೆ. ಇದನ್ನೂ ಓದಿ:`90′ ಬಿಡಲು ಥಿಯೇಟರ್ ಗೆ ನೂಕು ನುಗ್ಗಲು: ಬಿರಾದರ್ ಗೆ ಥ್ಯಾಂಕ್ಸ್ ಎಂದ ಹೆಣೈಕ್ಳು

    ಈ ಚಿತ್ರದ ಕುರಿತು ಮಾತನಾಡುವ ನಿರ್ಮಾಪಕ ವಿಜಯ್ ಕಿರಗಂದೂರು, ‘ಈ ಚಿತ್ರ ಪ್ರಾರಂಭವಾದಾಗಲೇ ನಾವು ಇದು ಯಾವುದೋ ಒಂದು ಭಾಷೆಯ ಅಥವಾ ಪ್ಯಾನ್ ಇಂಡಿಯಾ ಸಿನಿಮಾವಲ್ಲ ಎಂದು ಹೇಳಿದ್ದೆವು. ಇದು ಎಲ್ಲ ಕಡೆ ಸಲ್ಲುವ ಭಾರತೀಯ ಚಿತ್ರವಾಗಬೇಕು ಎಂಬುದು ನಮ್ಮ ಆಸೆ. ಅದರಂತೆ ಈ ಚಿತ್ರ ಮೂಡಿಬಂದಿದ್ದು, ಬರೀ ಭಾರತದಲ್ಲಷ್ಟೇ ಅಲ್ಲ, ಹೊರದೇಶಗಳಲ್ಲೂ ಭಾರತೀಯ ಚಿತ್ರವಾಗಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡದ ನಿರ್ಮಾಣ ಸಂಸ್ಥೆಯೊಂದು, ಪ್ಯಾನ್ ಇಂಡಿಯಾ ಸ್ಟಾರ್ ಒಬ್ಬರ ಚಿತ್ರವೊಂದನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮಾಡುತ್ತಿರುವುದು ಹೆಮ್ಮೆಯ ವಿಷಯ. ಕನ್ನಡದ ನಿರ್ಮಾಣ ಸಂಸ್ಥೆ, ನಿರ್ದೇಶಕರು, ತಂತ್ರಜ್ಞರು ಮತ್ತು ಕಲಾವಿದರು, ತೆಲುಗಿನ ಸ್ಟಾರ್ ನಟ ಪ್ರಭಾಸ್, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್, ತಮಿಳಿನ ಶ್ರುತಿ ಹಾಸನ್ ಹೀಗೆ  ಎಲ್ಲ ಭಾಷೆಯ ಕಲಾವಿದರು ಮತ್ತು ತಂತ್ರಜ್ಞರು ಇಲ್ಲಿದ್ದಾರೆ. ಎಲ್ಲರನ್ನೂ ಸೇರಿಸಿ ಭಾರತೀಯ ಸಿನಿಮಾ ಮಾಡಿದ್ದೇವೆ. ಇವತ್ತು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರ ಸೆಪ್ಟೆಂಬರ್ 28ಕ್ಕೆ ಜಗತ್ತಿನಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎನ್ನುತ್ತಾರೆ.

    ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ‘ಸಲಾರ್’ ಚಿತ್ರವನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲಾಗಿದೆ. ವಿದೇಶಗಳಲ್ಲೂ ಚಿತ್ರದ ವಿಎಫ್ಎಕ್ಸ್ ಕೆಲಸ ನಡೆದಿದ್ದು, ಆಕ್ಷನ್ ದೃಶ್ಯಗಳಲ್ಲಿ ಬೇರೆ ದೇಶಗಳಿಂದ ಬಂದ ಹಲವು ನುರಿತ ಸಾಹಸ ಕಲಾವಿದರು ಕೆಲಸ ಮಾಡಿರುವುದು ಈ ಚಿತ್ರದ ವಿಶೇಷತೆಗಳಲ್ಲೊಂದು.

     

    ದೊಡ್ಡ ಕ್ಯಾನ್ವಾಸ್ ಅಷ್ಟೇ ಅಲ್ಲ, ದೊಡ್ಡ ತಾರಾಗಣವೂ ಇರುವ ಈ ಚಿತ್ರದಲ್ಲಿ ಪ್ರಭಾಸ್ (Prabhas)ಅವರಿಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದು, ಮಿಕ್ಕಂತೆ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದವರು ನಟಿಸಿದ್ದಾರೆ.  ‘ಕೆಜಿಎಫ್’ ಚಿತ್ರಗಳಿಗೆ ಕೆಲಸ ಮಾಡಿದ ತಾಂತ್ರಿಕ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡಿದ್ದು, ರವಿ ಬಸ್ರೂರು ಅವರ ಸಂಗೀತ, ಭುವನ್ ಗೌಡ ಛಾಯಾಗ್ರಹಣ, ಶಿವಕುಮಾರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ‘ಸಲಾರ್ ಪಾರ್ಟ್ 1: ಸೀಸ್ ಫೈರ್ ಚಿತ್ರವು ಸೆಪ್ಟೆಂಬರ್ 28ರಂದು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಜಗತ್ತಿನಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನನಸಾಗ್ತಿದೆ ಕೆಜಿಎಫ್ ತಾತನ ಹೀರೋ ಆಗುವ ಕನಸು: ಅವರು ಇರಬೇಕಿತ್ತು ಎಂದ ನಿರ್ದೇಶಕ ಕುಮಾರ್

    ನನಸಾಗ್ತಿದೆ ಕೆಜಿಎಫ್ ತಾತನ ಹೀರೋ ಆಗುವ ಕನಸು: ಅವರು ಇರಬೇಕಿತ್ತು ಎಂದ ನಿರ್ದೇಶಕ ಕುಮಾರ್

    ಕೆಜಿಎಫ್ (KGF) ಸಿನಿಮಾದಲ್ಲಿ ವಯೋವೃದ್ದ ಅಂಧನ ಪಾತ್ರಕ್ಕೆ ಬಣ್ಣ ಹಚ್ಚಿ ಬೆಂಕಿ ಡೈಲಾಗ್ ಬಿಟ್ಟಿದ್ದ ಕೃಷ್ಣೋಜಿ ರಾವ್ (Krishnaji Rao), ಕೆಜಿಎಫ್ ತಾತ ಅಂತಾನೇ ಫೇಮಸ್ ಆಗಿದ್ದು ನಿಮ್ಮೆಲ್ಲರಿಗೂ ಗೊತ್ತೆಯಿದೆ. ಅಂದ್ಹಾಗೇ, ಈ ತಾತನಿಗೆ ಒಂದು ಕನಸಿತ್ತು. ಬಣ್ಣ ಕಳಚುವುದರೊಳಗೆ ನಾನು ಹೀರೋ ಆಗ್ಬೇಕು, ನಾಯಕನಾಗಿ ನಾನು ಕೂಡ ಬೆಳ್ಳಿತೆರೆ ಮೇಲೆ ಮೆರವಣಿಗೆ ಹೊರಡಬೇಕು ಅಂತ ಆಸೆಪಟ್ಟಿದ್ದರು. ಅವರ ಆಸೆಯನ್ನು ನಿರ್ದೇಶಕ ಕುಮಾರ್ ಈಡೇರಿಸಿದರು. ನ್ಯಾನೋ ನಾರಾಯಣಪ್ಪ (Nano Narayanappa) ಚಿತ್ರಕ್ಕೆ ಕೆಜಿಎಫ್ ತಾತನ್ನು ಹೀರೋ ಮಾಡಿದರು. ಸದ್ಯ ಈ ಸಿನಿಮಾ ರಿಲೀಸ್‍ಗೆ ರೆಡಿಯಿದೆ, ಜುಲೈ 07ರಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿದೆ. ಆದರೆ, ಈ ಚಿತ್ರದ ಹೀರೋ ಕೆಜಿಎಫ್ ತಾತಾ ಅಲಿಯಾಸ್ ಕೃಷ್ಣೋಜಿ ರಾವ್ ಜೀವಂತವಾಗಿ ಉಳಿದಿಲ್ಲ. ಬಿಗ್‍ಸ್ಕ್ರೀನ್ ಮೇಲೆ ದಿಬ್ಬಣ ಹೊರಡುವ ಗಳಿಗೆಗೆ ಸಾಕ್ಷಿಯಾಗಬೇಕು ಎನ್ನುವ ಕೆಜಿಎಫ್ ತಾತನ ಕನಸು ನನಸಾಗಲಿಲ್ಲ.

    ಕೆಜಿಎಫ್ ತಾತ ನಿಧನರಾಗಿ ಸುಮಾರು ಆರು ತಿಂಗಳು ಕಳೀತಾ ಬಂತು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಕೃಷ್ಣೋಜಿ ರಾವ್ ಅವರು ಚಿಕಿತ್ಸೆ ಫಲಿಸದೇ ಉಸಿರು ಚೆಲ್ಲುವಂತಾಯ್ತು. ವೃತ್ತಿಜೀವನದಲ್ಲಿ ಮೊದಲ ಬಾರಿಗೆ ನಾಯಕನಾಗಿ ಬಣ್ಣ ಹಚ್ಚಿದ ಸಿನಿಮಾನ ಸಿಲ್ವರ್‌ ಸ್ಕ್ರೀನ್ ಮೇಲೆ ನೋಡುವ ಸುವರ್ಣಾವಕಾಶ ಮಿಸ್ ಆಯ್ತು. ಆದರೆ, ಸಿನಿಮಾನ ಡಬ್ಬಿಂಗ್ ಟೈಮ್‍ನಲ್ಲಿ ನೋಡಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ರಂತೆ. 40 ವರ್ಷಗಳ ಕಾಲ ಚಿತ್ರರಂಗದಲ್ಲಿ ಜೂನಿಯರ್ ಆರ್ಟಿಸ್ಟ್, ಅಸೋಸಿಯೇಟ್, ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಕ್ಕೂ ಸಾರ್ಥಕವಾಯ್ತು ಎನ್ನುವ ಹೆಮ್ಮೆಯ ಭಾವ ವ್ಯಕ್ತಪಡಿಸಿದ್ರಂತೆ. ಈ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ಕಮ್ ನಿರ್ಮಾಪಕ ಕುಮಾರ್ (Kumar), ಕೆಜಿಎಫ್ ತಾತನ ಅನುಪಸ್ಥಿತಿಯಲ್ಲಿ ನಮ್ಮ ಸಿನಿಮಾ ರಿಲೀಸ್ ಆಗ್ತಿರುವುದು ನಮಗೂ ಬೇಸರವಿದೆ ಎಂದರು. ಇದನ್ನೂ ಓದಿ:ಡೆವಿಲ್‌ ಕಥೆ ಹೇಳಲು ಸಜ್ಜಾದ ತೆಲುಗಿನ ನಟ ಕಲ್ಯಾಣ್‌ ರಾಮ್‌

    ಸಿನಿಮಾದ ಬಗ್ಗೆ ಮಾತು ಮುಂದುವರೆಸಿದ ನಿರ್ದೇಶಕ ಕುಮಾರ್, ಬರೀ 30 ಲಕ್ಷದಲ್ಲಿ ನ್ಯಾನೋ ನಾರಾಯಣಪ್ಪ ಸಿನಿಮಾ ಮಾಡಿದ್ದೇನೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಹಾಗೂ ಕ್ರಿಟಿಕಲ್ ಕೀರ್ತನೆಗಳು ಕೂಡ ಕಡಿಮೆ ಬಜೆಟ್‍ನಲ್ಲಿ ನಿರ್ಮಾಣಗೊಂಡಿದ್ವು. ಹಾಕಿದ ಬಂಡವಾಳದ ಜೊತೆಗೆ ಲಾಭ ತಂದುಕೊಟ್ಟಿದ್ವು. ಹೀಗಾಗಿ, ನ್ಯಾನೋ ನಾರಾಯಣಪ್ಪನ ಮೇಲೂ ನಂಬಿಕೆಯಿದೆ. ಆಡಿಯೋ ರೈಟ್ಸ್ ಒಳ್ಳೆ ಅಮೌಂಟ್‍ಗೆ ಸೇಲಾಗಿದ್ದು, ಅಮೆಜಾನ್ ಪ್ರೈಮ್‍ಗೆ ಡಿಜಿಟಲ್ ರೈಟ್ಸ್ ಮಾತುಕತೆ ನಡೀತಿದೆ. ವಿಜಯ್ ಸಿನಿಮಾಸ್ ಅವರು ಡಿಸ್ಟ್ರಿಬ್ಯೂಷನ್ ಮಾಡ್ತಿದ್ದಾರೆ ಎಂದು ಹೇಳಿಕೊಂಡರು. ತಮ್ಮ ನಿರ್ದೇಶನದ ಮೂರು ಸಿನಿಮಾಗಳಲ್ಲೂ ನ್ಯಾನೋ ಕಾರು ಬಳಕೆ ಮಾಡಿರುವ ಕುರಿತು ಸೆಂಟಿಮೆಂಟ್ ಬಿಚ್ಚಿಟ್ಟರು.

    ಅಂದ್ಹಾಗೆ, ನ್ಯಾನೋ ನಾರಾಯಣಪ್ಪ ಕಾಮಿಡಿ ಡ್ರಾಮಾ ಒಳಗೊಂಡಿರುವ ಚಿತ್ರ. ಇಲ್ಲಿ 70ರ ದಶಕದ ಲವ್‍ಸ್ಟೋರಿಯಿದೆ. ಪ್ರೀತಿಯ ಜೊತೆಗೆ ಜೀವನದ ಪಾಠವೂ ಅಡಕವಾಗಿದೆ. ಒಂದಿಡೀ ಕುಟುಂಬ ಥಿಯೇಟರ್‍ಗೆ ಬಂದು ಕಣ್ಣರಳಿಸಿ ನೋಡುವಂತಹ ಸಿನಿಮಾ ಇದು. ಇಲ್ಲಿ ಕೆಜಿಎಫ್ ತಾತ ಜೂನಿಯರ್ ಆರ್ಟಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೌಬಾಯ್ ಗೆಟಪ್‍ನಲ್ಲೂ ಖದರ್ ತೋರಿಸಿದ್ದಾರೆ. ಇಳಿವಯಸ್ಸಲ್ಲೂ ಕುಗ್ಗದ ಉತ್ಸಾಹ, ಹುಮ್ಮಸ್ಸು ಕೃಷ್ಣೋಜಿ ರಾವ್‍ರನ್ನ ಹೀರೋ ಮಾಡಿದೆ. 80ರ ದಶಕದಲ್ಲಿ ಕಂಡ ಕನಸು ಕೊನೆಗೂ ಈಡೇರಿದೆ. ಪ್ರಶಾಂತ್ ಸಿದ್ದಿ, ಕಾಕ್ರೋಚ್ ಸುಧಿ, ಗಿರೀಶ್ ಶಿವಣ್ಣ, ಅಕ್ಷತಾ ಕುಕ್ಕಿ, ಅಪೂರ್ವ, ಕಾಮಿಡಿ ಕಿಲಾಡಿಗಳು ಸಂತು, ಅನಂತ್ ಪದ್ಮನಾಭ್, ಕಿಂಗ್ ಮೋಹನ್ ಸೇರಿದಂತೆ ಹಲವು ಕಲಾವಿದರ ದಂಡು ಚಿತ್ರದಲ್ಲಿದ್ದು, ನ್ಯಾನೋ ನಾರಾಯಣಪ್ಪನಿಗೆ ಬಲ ಬಂದಂತಾಗಿದೆ.

    ನ್ಯಾನೋ ನಾರಾಯಣಪ್ಪ ಟೈಟಲ್ಲೇ ಹೇಳುವಂತೆ ನ್ಯಾನೋ ಕಾರು ಈ ಚಿತ್ರದ ಹೈಲೆಟ್. ಎರಡು ರಿಯಲ್ ಇನ್ಸಿಡೆಂಟ್‍ಗಳನ್ನ ಸಿನಿಮಾರೂಪಕವಾಗಿಸಿರುವುದು ಮತ್ತೊಂದು ಹೈಲೆಟ್. ಹಾಸ್ಯದ ಜೊತೆಗೆ ಭಾವನೆಗಳನ್ನು ಬ್ಲೆಂಡ್ ಮಾಡಿ ಪ್ರೇಕ್ಷಕರನ್ನು ಹಿಡಿದು ಕೂರಿಸುವ ನಿರ್ದೇಶಕ ಕುಮಾರ್, ಈ ಭಾರಿಯೂ ಅಂತಹದ್ದೇ ಪ್ರಯೋಗ ಮಾಡಿದ್ದಾರೆ. ಬೆಂಗಳೂರು ಸುತ್ತಮುತ್ತ ಶೂಟಿಂಗ್ ಮಾಡಿದ್ದು, ಶಿವಶಂಕರ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಆಕಾಶ್ ಪರ್ವ ಸಂಗೀತ, ದೀಪು, ಸಿದ್ದಾರ್ಥ್ ನಾಯಕ ಸಂಕಲನ ಚಿತ್ರಕ್ಕಿದ್ದು, ಕೇಸರಿ ಫಿಲ್ಮಂ ಕ್ಯಾಪ್ಚರ್ ಬ್ಯಾನರ್ ಅಡಿಯಲ್ಲಿ ನಿರ್ದೇಶಕ ಕುಮಾರ್ ಅವ್ರ ಬಂಡವಾಳದಲ್ಲಿ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದೆ. ಇದೇ ಜುಲೈ 07ರಂದು ರಾಜ್ಯಾದ್ಯಂತ ನ್ಯಾನೋ ನಾರಾಯಣಪ್ಪನ ದರ್ಶನವಾಗಲಿದೆ. ಮಿಸ್ ಮಾಡದೇ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಎನ್ನುತ್ತಿದೆ ಚಿತ್ರತಂಡ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೂಪಾ ಹಾಟ್ ಅವತಾರಕ್ಕೆ ಪಡ್ಡೆಹುಡುಗರು ಫಿದಾ

    ರೂಪಾ ಹಾಟ್ ಅವತಾರಕ್ಕೆ ಪಡ್ಡೆಹುಡುಗರು ಫಿದಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Breaking – ಕೆಜಿಎಫ್ ಹಾಡು ದುರ್ಬಳಕೆ : ರಾಹುಲ್ ಗಾಂಧಿ ಮತ್ತೆ ಸಂಕಷ್ಟ

    Breaking – ಕೆಜಿಎಫ್ ಹಾಡು ದುರ್ಬಳಕೆ : ರಾಹುಲ್ ಗಾಂಧಿ ಮತ್ತೆ ಸಂಕಷ್ಟ

    ಭಾರತ್‌ ಜೋಡೋ ಸಮಯದಲ್ಲಿ ತನ್ನ ಪ್ರಚಾರಕ್ಕೆ ಕೆಜಿಎಫ್‌ ಹಾಡನ್ನು ಬಳಿಸಿದ್ದ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ನಾಯಕರಿಗೆ ಸಂಕಷ್ಟ ಎದುರಾಗಿದೆ.

    ಕಾಂಗ್ರೆಸ್ ಮುಖಂಡರು ಪ್ರಕರಣವನ್ನು ರದ್ದು ಮಾಡಬೇಕು ಎಂದು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್  ನ್ಯಾ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಆದೇಶ ನೀಡಿದೆ.

    ಜೂನ್‌ 23 ರಂದು ಎರಡು ಕಡೆಯ ವಾದ, ಪ್ರತಿವಾದ ಆಲಿಸಿದ್ದ ಕೋರ್ಟ್‌ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಇದನ್ನೂ ಓದಿ:ಹೊಸ ಸಿನಿಮಾ ಮುನ್ನ ಫ್ಯಾಮಿಲಿ ಜೊತೆ ರಾಜಮೌಳಿ ಟ್ರಿಪ್

    ಏನಿದು ಪ್ರಕರಣ?

    ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು, ಸಂಸ್ಥೆಯ ಅನುಮತಿ ಇಲ್ಲದೇ ಹಾಡುಗಳನ್ನು ಯಾತ್ರೆಯಲ್ಲಿ ಬಳಸಿದ್ದಾರೆ. ಕೆಜಿಎಫ್ ಸಿನಿಮಾದ ‘ಸುಲ್ತಾನಾ..’ ಹಾಡನ್ನು ಯಾತ್ರೆಯಲ್ಲಿ ಬಳಸಿದ್ದಕ್ಕಾಗಿ ಕೆಜಿಎಫ್ ಚಿತ್ರದ ಹಾಡುಗಳ ಪ್ರಸಾರ ಹಕ್ಕು ಹೊಂದಿದ್ದ MRT ಸಂಸ್ಥೆಯು ರಾಹುಲ್ ಗಾಂಧಿ (Rahul Gandhi) , ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ (Supriya) ಹಾಗೂ ಭಾರತ್ ಜೋಡೋ ಯಾತ್ರೆಯ ಉಸ್ತುವಾರಿ ವಹಿಸಿಕೊಂಡಿರುವ ಜೈರಾಂ ರಮೇಶ್ (Jairam Ramesh) ವಿರುದ್ಧ ದೂರು ದಾಖಲಿಸಿತ್ತು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ (FIR) ದಾಖಲಾಗಿತ್ತು.

    ಕೆಜಿಎಫ್‌ ಹಾಡನ್ನು ಕಾಗ್ರೆಸ್ ಪಕ್ಷದ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಾದ ಟ್ಟಿಟ್ಟರ್‌, ಯೂಟ್ಯೂಬ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬಳಸಲಾಗಿದೆ. ನಮ್ಮ ಸಂಸ್ಥೆಯ ಅನುಮತಿ ಪಡೆಯದೇ ಕಾಪಿರೈಟ್‌ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಎಂಆರ್‌ಟಿ ಸಂಸ್ಥೆ ಕೋರ್ಟ್‌ ಮೊರೆ ಹೋಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಕೃತಿಯ ನಡುವೆ ಬಾಲ್ಯವನ್ನು ಎಂಜಾಯ್ ಮಾಡ್ತಿರುವ ಯಶ್ ಮಕ್ಕಳು

    ಪ್ರಕೃತಿಯ ನಡುವೆ ಬಾಲ್ಯವನ್ನು ಎಂಜಾಯ್ ಮಾಡ್ತಿರುವ ಯಶ್ ಮಕ್ಕಳು

    ನ್ಯಾಷನಲ್ ಸ್ಟಾರ್ ಯಶ್- ರಾಧಿಕಾ ಪಂಡಿತ್ (Radhika Pandit) ಜೋಡಿ ಇತ್ತೀಚಿಗೆ ದಕ್ಷಿಣ ಕಾಶಿ ನಂಜನಗೂಡಿಗೆ ಭೇಟಿ ಕೊಟ್ಟಿದ್ದರು. ಮುಂದಿನ ಸಿನಿಮಾ ಬಗ್ಗೆ ಸದ್ಯದಲ್ಲೇ ಅಪ್‌ಡೇಟ್ ಕೊಡ್ತೀನಿ ಎಂದು ಯಶ್ (Yash) ಸಿಹಿಸುದ್ದಿ ನೀಡಿದ್ರು. ಈ ಬೆನ್ನಲ್ಲೇ ಯಶ್, ಫ್ಯಾಮಿಲಿ ಜೊತೆ ವೆಕೇಷನ್‌ಗೆ ಹೋಗಿದ್ದಾರೆ. ಹಳ್ಳಿಯ ಸುಂದರ ತಾಣಗಳಿಗೆ ಭೇಟಿ ನೀಡಿದ್ದಾರೆ. ಈ ಕುರಿತ ಫೋಟೋಗಳನ್ನ ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಮತ್ತೆ ಸ್ಟೈಲೀಶ್‌ ಆಗಿ ಕಾಣಿಸಿಕೊಂಡ ‘ಬಿಗ್‌ ಬಾಸ್‌’ ಸಾನ್ಯ ಅಯ್ಯರ್

    ‘ಕೆಜಿಎಫ್ 2’ (KGF2) ಸಿನಿಮಾದ ಸೂಪರ್ ಸಕ್ಸಸ್ ನಂತರ ಯಶ್ ಸೈಲೆಂಟ್ ಆಗಿದ್ದಾರೆ. ಸದ್ದಿಲ್ಲದೇ ಹೊಸ ಸಿನಿಮಾಗೆ ತಾಲೀಮು ನಡೆಸುತ್ತಿದ್ದಾರೆ. ಯಶ್ ಏನೇ ಮಾಡಿದ್ರು ಅದು ಸುದ್ದಿಯಾಗುತ್ತಿದೆ. ಹೀಗಿರುವಾಗ ತಮ್ಮ ಮುಂದಿನ ಚಿತ್ರದ ಬಗ್ಗೆ ಯಾವುದೇ ಸುಳಿವು ನೀಡದೇ ಸೈಲೆಂಟ್ ಆಗಿ ಕೆಲಸ ಮಾಡ್ತಿದ್ದಾರೆ. ಯಶ್- ರಾಧಿಕಾ ಕುಟುಂಬ ಪ್ರವಾಸದಲ್ಲಿದ್ದಾರೆ. ತಮ್ಮ ಮಕ್ಕಳಿಗೆ ಪ್ರಕೃತಿಯನ್ನು ಹತ್ತಿರದಿಂದ ತೋರಿಸುತ್ತಿದ್ದಾರೆ.

    ಯಶ್ ದಂಪತಿಯ ಮುದ್ದಾದ ಮಕ್ಕಳು ಐರಾ, ಯಥರ್ವ್ ತಮ್ಮ ಬಾಲ್ಯವನ್ನು ಪ್ರಕೃತಿಯ ನಡುವೆ ಎಂಜಾಯ್ ಮಾಡ್ತಿದ್ದಾರೆ. ಯಶ್-ರಾಧಿಕಾ, ಹಳ್ಳಿಯ ಫಾರ್ಮ್ ಹೌಸ್‌ನಲ್ಲಿ ಸುತ್ತಾಡುತ್ತಿದ್ದಾರೆ. ಐರಾ- ಯಥರ್ವ್ ಇಬ್ಬರು ಹುಲ್ಲುಮಿಡತೆ ನೋಡುತ್ತಿರುವ ಫೋಟೋ ಸೇರಿದಂತೆ ಹಲವು ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ.

    ಇನ್ನೂ ಯಶ್ (Yash 19)ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ಕೌತುಕ ನಿರ್ಮಾಣವಾಗಿದೆ. ಹಾಗೆಯೇ ರಾಧಿಕಾ ಪಂಡಿತ್ (Radhika Pandit) ಕಂಬ್ಯಾಕ್ ಬಗ್ಗೆ ಕೂಡ ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಅದರಲ್ಲೂ ಯಶ್- ರಾಧಿಕಾ ಒಟ್ಟಿಗೆ ನಟಿಸಿದ್ರೆ ಎಷ್ಟು ಚೆನ್ನಾಗಿರುತ್ತೆ ಅಭಿಮಾನಿಗಳು ಲೆಕ್ಕಚಾರ ಹಾಕ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಯಶ್ ಜೋಡಿಗೆ ಮನವಿ ಮಾಡ್ತಿದ್ದಾರೆ.

    ಸಿನಿಮಾ ಕೆಲಸಗಳ ಮಧ್ಯೆಯೇ ಬಿಡುವು ಮಾಡಿಕೊಂಡು ಫ್ಯಾಮಿಲಿಗೆ ಟೈಮ್ ಕೊಟ್ಟಿದ್ದಾರೆ ಯಶ್. ಕಳೆದ ವಾರ ಯಶ್ ಅವರು ಮೈಸೂರು ಭಾಗದಲ್ಲಿ ಪ್ರವಾಸದಲ್ಲಿದ್ದರು. ನಾಗರ ಹೊಳೆ, ಬಂಡೀಪುರ ಅರಣ್ಯದಲ್ಲಿ ಸಫಾರಿ ನಡುವೆ ಶ್ರೀಕಂಠೇಶ್ವರ ದೇವರಿಗೆ ಪೂಜೆ ನೆರವೇರಿಸಿದ್ದಾರೆ. ಮೈಸೂರು ಯಶ್ ಅವರ ಹುಟ್ಟೂರು. ಅಲ್ಲದೇ, ಮೈಸೂರಿಗೆ ಹೋದಾಗೆಲ್ಲ ಯಶ್ ಹೀಗೆ ಪ್ರವಾಸ ಮಾಡುತ್ತಲೇ ಇರುತ್ತಾರೆ. ಇಷ್ಟದ ಸ್ಥಳಗಳಿಗೆ ಈ ಬಾರಿ ಹೆಂಡತಿ ಮತ್ತು ಹೆಂಡತಿ ಕುಟುಂಬವನ್ನು ಅವರು ಕರೆದುಕೊಂಡು ಹೋಗಿದ್ದಾರೆ. ಈ ಬಾರಿ ಮಕ್ಕಳಿಗೂ ತಮ್ಮ ಹುಟ್ಟೂರು ತೋರಿಸಿದ್ದಾರೆ ರಾಕಿಂಗ್ ಸ್ಟಾರ್.‌

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಭಿಮಾನಿಯ ಅಭಿಮಾನಕ್ಕೆ ಕಣ್ಣೀರಿಟ್ಟ ತಮನ್ನಾ ಭಾಟಿಯಾ

    ಅಭಿಮಾನಿಯ ಅಭಿಮಾನಕ್ಕೆ ಕಣ್ಣೀರಿಟ್ಟ ತಮನ್ನಾ ಭಾಟಿಯಾ

    ಕ್ಷಿಣ ಭಾರತದ ಖ್ಯಾತ ನಟಿ ಭಾಟಿಯಾ (Tamannaah Bhatia)  ಕಣ್ಣೀರಿಟ್ಟಿದ್ದಾರೆ. ಅದೊಂದು ಪ್ರೀತಿಗೆ ಭಾವುಕರಾಗಿದ್ದಾರೆ. ಇದಕ್ಕೆಲ್ಲ ಹಾಲಿ ಬಾಯ್‌ಫ್ರೆಂಡ್ ವಿಜಯ್ ವರ್ಮಾ (Vijay Varma) ಕಾರಣ ಎಂದು ತಿಳಿಯಬೇಡಿ. ಇದು ಬೇರೊಬ್ಬರ ಕಕ್ಕುಲಾತಿಗೆ ಸುರಿದ ಪನ್ನೀರು. ಯಾಕೆ ಅತ್ತಿದ್ದು ಮಿಲ್ಕಿಬ್ಯೂಟಿ? ಅದ್ಯಾರು ಇಂಥ ಘಟನೆಗೆ ಕಾರಣರಾದರು? ಹಾಲು ಜೇನಿನ ಕಥನ ನಿಮ್ಮ ಮುಂದೆ. ಇದನ್ನೂ ಓದಿ:ಜಿಮ್ಮಿ ಚಿತ್ರದ ಕ್ಯಾರೆಕ್ಟರ್ ಟೀಸರ್ : ಸ್ಯಾಂಡಲ್ ವುಡ್ ನಿಂದ ಪ್ರಶಂಸೆ

    ಮಿಲ್ಕಿ ಬ್ಯೂಟಿ ತಮನ್ನಾ ಕೆಲವು ತಿಂಗಳಿಂದ ಭರ್ಜರಿ ಸುದ್ದಿಯಾಗುತ್ತಿದ್ದಾರೆ. ಬಾಲಿವುಡ್ ನಟ ವಿಜಯ್ ವರ್ಮಾ ನನ್ನ ಬಾಯ್ ಫ್ರೆಂಡ್ ಎಂದು ಹೇಳಿದ್ದು, ಆತನೂ ‘ನನ್ನ ಟೊಮ್ಯಾಟೊ’ ಎಂದು ಕಿಸಿದಿದ್ದು…ಎಲ್ಲವೂ ಬಿಸ್ಸಿಬಿಸಿ ದೋಸೆ. ಜೊತೆಗೆ ಲಸ್ಟ್ ಸ್ಟೋರೀಸ್ ವೆಬ್ ಸೀರೀಸ್‌ನಲ್ಲಿ ಇದೇ ತಮನ್ನಾ ಬೆಡ್‌ರೂಮ್ ದೃಶ್ಯಗಳಲ್ಲಿ ಬಿಂಕವನ್ನು ಫ್ಯಾನಿಗೆ ನೇತು ಹಾಕಿ ನಟಿಸಿದ್ದು, ಓಹೋಹೋ ತಮನ್ನಾ ಕೊಟ್ಟೇಯಾ ಮೃಷ್ಟಾನ್ನ ಎಂದು ಪಡ್ಡೆಗಳು ಬಾಯಿ ಚಪ್ಪರಿಸಿದ್ದರು. ಈಗ ಅಭಿಮಾನಿಯೊಬ್ಬಳು ಕಣ್ಣೀರು ಹಾಕಿಸಿದ್ದಾಳೆ ನೋಡಿ.

    ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ತಮನ್ನಾರನ್ನು ಭೇಟಿ ಮಾಡಿದ ಮಹಿಳಾ ಅಭಿಮಾನಿಯೊಬ್ಬಳು (Fan) ಕೈ ಮೇಲೆ ‘ತಮನ್ನಾ ಐ ಲವ್ ಯು’ ಎಂದು ಅಚ್ಚೆ (Tattoo) ಹಾಕಿಸಿಕೊಂಡಿದ್ದನ್ನು ತೋರಿಸಿದ್ದಾಳೆ. ಹಾಗೆಯೇ ತಮನ್ನಾ ಪಾದ ಮುಟ್ಟಿ ನಮಸ್ಕಾರ ಮಾಡಿದ್ದಾಳೆ. ಆಕೆಯ ಪ್ರೀತಿ ಕಂಡು, ಇಂಥ ಅಭಿಮಾನಕ್ಕೆ ನಾನು ಯೋಗ್ಯಳಲ್ಲ ಎಂದು ತಮನ್ನಾ ಕೂಡ ಕಣ್ಣು ಒರೆಸಿಕೊಂಡಿದ್ದಾರೆ. ತಮನ್ನಾ ಕಣ್ಣೀರಿಗೆ ಭಕ್ತಗಣ ಕೂಡ ಅಳಬ್ಯಾಡ್ ಕಣೇ ಸುಮ್ಕಿರೇ ನಮ್ ಮುದ್ದಿನ ರಾಣಿ ಹಾಡಿಗೆ ಧ್ವನಿಯಾಗಿದ್ದಾರಂತೆ.

    ಇಷ್ಟೇಲ್ಲಾ ಅಭಿಮಾನದ ನಡುವೆ ನಟಿ ತಮನ್ನಾ, ವಿಜಯ್ ವರ್ಮಾ ಜೊತೆಗಿನ ಲವ್ ಮ್ಯಾಟರ್. `ಜೀ ಕರ್ದಾ’ ಸಿನಿಮಾದಲ್ಲಿನ ತಮನ್ನಾ ಸಖತ್ ಬೋಲ್ಡ್ & ಹಾಟ್ ಆಗಿ ಕಾಣಿಸಿಕೊಂಡಿರೋದು ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಒಟ್ನಲ್ಲಿ ಎಲ್ಲಾ ಕಡೆ ತಮನ್ನಾ ಬಗ್ಗೆ ಸುದ್ದಿಯೋ ಸುದ್ದಿ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಪಡ್ಡೆಹುಡುಗರ ಕಣ್ಣು ಕುಕ್ಕುವಂತೆ ಹಾಟ್‌ ಆಗಿ ಕಾಣಿಸಿಕೊಂಡ ‘ಕೆಜಿಎಫ್‌’ ನಟಿ

    ಪಡ್ಡೆಹುಡುಗರ ಕಣ್ಣು ಕುಕ್ಕುವಂತೆ ಹಾಟ್‌ ಆಗಿ ಕಾಣಿಸಿಕೊಂಡ ‘ಕೆಜಿಎಫ್‌’ ನಟಿ

    ಟಿ ರೂಪಾ ರಾಯಪ್ಪ (Roopa Rayappa) ಅವರು ಕೆಜಿಎಫ್ (KGF) ಸಿನಿಮಾ ಮೂಲಕ ಗುರುತಿಸಿಕೊಂಡರು. ಮಾಡೆಲ್, ಕಂಟೆಂಟ್ ಕ್ರಿಯೇಟರ್ ಆಗಿ ರೂಪಾ ರಾಯಪ್ಪ ಅವರು ಗುರುತಿಸಿಕೊಂಡಿದ್ದಾರೆ. ಸದ್ಯ ನಟಿ ರೂಪಾ ಹಾಟ್ ಆಗಿ ಟೈಲರ್ ಲುಕ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಯಶ್ (Yash) ನಟನೆಯ ‘ಕೆಜಿಎಫ್’ ಸಿನಿಮಾದಲ್ಲಿ ಡಿ ಗ್ಲಾಮ್ ಲುಕ್‌ನಲ್ಲಿ ರೂಪಾ ರಾಯಪ್ಪ ಅವರು ಶಾಂತಿ (Shanthi Role) ಪಾತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಪುಟ್ಟ ಪಾತ್ರವಾಗಿದ್ದರು. ಶಾಂತಿ ರೋಲ್ ಅನ್ನ ಕೆಜಿಎಫ್ ಚಿತ್ರದ ಫ್ಯಾನ್ಸ್ ಇನ್ನೂ ನೆನಪಿಟ್ಟುಕೊಂಡಿದ್ದಾರೆ. ಚಿತ್ರದಲ್ಲಿ ಗ್ಲ್ಯಾಮರ್ ಇಲ್ಲದ ಪಾತ್ರದಲ್ಲಿ ನಟಿಸಿರೋ ರೂಪಾ ಇದೀಗ ಗ್ಲ್ಯಾಮರಸ್ ಆಗಿ ಹಾಟ್ & ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ.

    ‘ಕೆಜಿಎಫ್’ ಶಾಂತಿ ರೋಲ್‌ನಲ್ಲಿ ನೋಡಿದ್ದ ಅಭಿಮಾನಿಗಳಿಗೆ ಈಗೀನ ರೂಪಾ ಹಾಟ್ ಲುಕ್ ನೋಡಿ ಕಳೆದು ಹೋಗಿದ್ದಾರೆ. ಇವ್ರು ಅವರೇನಾ ಅಂತಾ ಕೇಳ್ತಿದ್ದಾರೆ. ಅಷ್ಟರ ಮಟ್ಟಿಗೆ ರೂಪಾ ರಾಯಪ್ಪ ಬದಲಾದ ಅವತಾರದಲ್ಲಿ ಕಾಣಿಸಿಕೊಂಡಿರೋದು ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ. ಹಳದಿ ಬಣ್ಣದ ಬಿಕಿನಿ ಧರಿಸಿ, ಶಾರ್ಟ್ ಸ್ಕರ್ಟ್ ಧರಿಸಿದ್ದಾರೆ. ಟೈಲರ್ ಲುಕ್‌ನಲ್ಲಿರೋ ಹಸಿಬಿಸಿ ಫೋಟೋಗಳನ್ನ ನಟಿ ಶೇರ್ ಮಾಡಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ:ವರಾಹಿ ಯಾತ್ರೆಯಲ್ಲಿ ಪವನ್ ಕಲ್ಯಾಣ್ ಆರೋಗ್ಯದಲ್ಲಿ ಏರುಪೇರು

    ನಟಿ ರೂಪಾ ರಾಯಪ್ಪ ಅವರು ಸ್ಯಾಂಡಲ್‌ವುಡ್‌ನಲ್ಲಿ (Sandalwood) ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. ಸದ್ಯ ‘ದಿ ಜಡ್ಜ್‌ಮೆಂಟ್‌’  ಎಂಬ ಸಿನಿಮಾದಲ್ಲಿ ರವಿಚಂದ್ರನ್, ಧನ್ಯಾ ರಾಮ್‌ಕುಮಾರ್ ಮತ್ತು ದಿಗಂತ್ ಜೊತೆ ರೂಪಾ ರಾಯಪ್ಪ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದಿಷ್ಟು ಸಿನಿಮಾಗಳು ಮಾತುಕತೆ ಹಂತದಲ್ಲಿದೆ. ಯಶ್ ಸಿನಿಮಾದಲ್ಲಿ ನಟಿಸಿದ್ದ ನಟಿಗೆ ಲಕ್ ಬದಲಾಗಿದೆ. ಒಳ್ಳೆಯ ಪಾತ್ರಗಳು ಅವರನ್ನ ಅರಸಿ ಬರುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ನಂಜನಗೂಡು ನಂಜುಂಡೇಶ್ವರನ ಬಳಿ ಯಶ್ ಕೇಳಿದ್ದೇನು?

    ನಂಜನಗೂಡು ನಂಜುಂಡೇಶ್ವರನ ಬಳಿ ಯಶ್ ಕೇಳಿದ್ದೇನು?

    ಶ್ (Yash) ನಯಾ ಯುದ್ಧಕ್ಕೆ ಸಜ್ಜಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಸಿನಿಮಾದ ಮಾಹಿತಿ ಜಗತ್ತಿನ ಮುಂದೆ ಇಡಲಿದ್ದಾರೆ. ಅಖಾಡ ಸಿದ್ಧವಾಗಿದೆ. ಕುದುರೆ ಏರುವುದೊಂದೇ ಬಾಕಿ. ಅದಕ್ಕೂ ಮುನ್ನ ಮನೆ ದೇವರು ನಂಜುಂಡೇಶ್ವರನ (Nanjundeshwar) ಪಾದಕ್ಕೆ ಶರಣಾಗಿದ್ದಾರೆ. ಮಹಾ ಗೆಲುವಿಗಾಗಿ ಬೇಡಿಕೊಂಡಿದ್ದಾರೆ. ಇನ್ನೇನು ಕೋರಿಕೊಂಡರು ರಾಕಿಭಾಯ್? ನಯಾ ಸಿನಿಮಾ ಘೋಷಣೆ ಯಾವಾಗಂತೆ? ಬಾಲಿವುಡ್‌ಗೆ ಹೋಗಲಿದ್ದಾರಾ ರಾಮಾಚಾರಿ? ಇಂತಹ ಪ್ರಶ್ನೆಗಳು ಸಹಜವಾಗಿಯೇ ಅಭಿಮಾನಿಗಳಲ್ಲಿ ಮೂಡಿವೆ.

    ರಾಕಿಭಾಯ್ ಚಿತ್ತ. ಹೊಸ ಸಿನಿಮಾದತ್ತ. ಈ ಹಿಂದೆ ಮಾಡಿದ ಸಿನಿಮಾಗಳದ್ದು ಒಂದು ತೂಕವಾದರೆ. ಈಗ ಮಾಡಲಿರುವ ಚಿತ್ರದ್ದು ಭೂಮಿ ತೂಕ. ಅದಕ್ಕಾಗಿಯೇ ಕಳೆದ ಎರಡು ಮೂರು ವರ್ಷಗಳಿಂದ ಹುಡುಕಿ ಹುಡುಕಿ ಕತೆ ಮಾಡಿಸಿದ್ದಾರೆ. ಈಗಾಗಲೇ ಚಿತ್ರಕತೆ ಒಂದು ಹಂತಕ್ಕೆ ಬಂದಿದೆ. ತಿದ್ದುವಿಕೆ ನಡೆಯುತ್ತಲೇ ಇರುತ್ತದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಡೈರೆಕ್ಟರ್ ಪಟ್ಟದಲ್ಲಿ ಕುಳಿತಿದ್ದಾರೆ. ಒಂದೊಂದು ವಿಭಾಗವೂ ಹಗಲು ರಾತ್ರಿ ಬೆವರು ಸುರಿಸುತ್ತಿದೆ. ಈ ಸಮಯದಲ್ಲಿಯೇ ರಾಕಿಭಾಯ್ ಮನೆ ದೇವರು ನಂಜನಗೂಡು (Nanjangudu) ನಂಜುಂಡೇಶ್ವರನ ಪಾದಕ್ಕೆ ಅಡ್ಡ ಬಿದ್ದಿದ್ದಾರೆ. ದಿವ್ಯ ಗೆಲುವನ್ನು ನೀಡು ಎಂದು ಕೈಮುಗಿದಿದ್ದಾರೆ.

    ಯಶ್ ಬಾಲ್ಯದಿಂದಲೇ ಓಡಾಡಿ ಬೆಳೆದ ಜಾಗ ಈ ನಂಜುಂಡೇಶ್ವರನ ಸನ್ನಿಧಿ. ಮೈಸೂರಿನಿಂದ ಹಬ್ಬ ಹರಿದಿನಗಳಲ್ಲಿ ಅಪ್ಪ ಅಮ್ಮ ಹಾಗೂ ಇಬ್ಬರು ಮಕ್ಕಳು ಈ ದೈವ ದರ್ಶನಕ್ಕೆ ಹೋಗುತ್ತಿದ್ದರು. ಮನೆಯಲ್ಲಿ ಎಷ್ಟೇ ಕಷ್ಟ ಇದ್ದರೂ ಅದನ್ನು ನಿವಾರಿಸು ಭಗವಂತ ಎಂದು ಕೋರುತ್ತಿದ್ದರು. ಡ್ರೈವರ್ ಆಗಿದ್ದ ಅಪ್ಪ. ಮನೆ ಒಡತಿಯಾಗಿದ್ದ ಅಮ್ಮ. ಇಬ್ಬರೂ ಮಕ್ಕಳಿಗೆ ಏನೇನು ಬೇಕೊ ಎಲ್ಲವನ್ನೂ ಕೊಟ್ಟು ಭಾವುಕರಾಗುತ್ತಿದ್ದರು. ಅದೇ ದೇವರ ಮೆಟ್ಟಿಲ ಮೇಲೆ ಇಂದು ಯಶ್ ಮೀಸೆ ತಿರುವುತ್ತಾ ನಿಂತಿದ್ದಾರೆ. ನಂಜುಂಡೇಶ್ವರನ ಅನುಗ್ರಹದಿಂದಲೇ ಈಗ ನ್ಯಾಶನಲ್ ಸ್ಟಾರ್ ಪಟ್ಟದಲ್ಲಿ ಕುಳಿತಿದ್ದಾರೆ.

    ಅದೊಂದು ಕಾಲದಲ್ಲಿ ಅಪ್ಪ ಅಮ್ಮನ ಜೊತೆ ಈ ಸನ್ನಿಧಿಗೆ ಹೋಗುತ್ತಿದ್ದ ಯಶ್ ಈಗ ಪತ್ನಿ ರಾಧಿಕಾ ಹಾಗೂ ಇಬ್ಬರು ಮಕ್ಕಳ ಸಮೇತ ಹೋಗುವ ಸಮಯ ಬಂದಿದೆ. ಅಂದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ರಾಕಿ ಈಗ ಕೋಟಿ ಕೋಟಿ ಬೆಲೆ ಬಾಳು ಐಷಾರಾಮಿ ಕಾರಿನಲ್ಲಿ ಹೋಗಿದ್ದಾರೆ. ಇವರಿಗಾಗಿ ವಿಶೇಷ ಪೂಜೆ ಕೂಡ ಮಾಡಲಾಯಿತು. ಕೆಜಿಎಫ್ ಮುಗಿದ ಮೇಲೆ ಯಶ್ ಎಲ್ಲೇ ಸಿಗಲಿ ಎಲ್ಲರೂ ಕೇಳುವುದು ಒಂದೇ ಪ್ರಶ್ನೆ. `ಯಾವಾಗ ಹೊಸ ಸಿನಿಮಾ ಅನೌನ್ಸ್ಮೆಂಟ್ ?’ ಅದಕ್ಕೆ ಸಿದ್ಧರಾಗಿಯೇ ಬಂದಂತಿದ್ದ ಯಶ್ ಮತ್ತೆ ಅದೇ ಮಾತನ್ನು ರಿಪೀಟ್ ಮಾಡಿದರು. ಸದ್ಯದಲ್ಲೇ ಎಲ್ಲವನ್ನೂ ತಿಳಿಸುತ್ತೇನೆ ಎಂದರು. ಇದನ್ನೂ ಓದಿ:ಅನಿಮಲ್ ಶೂಟಿಂಗ್ ಮುಗಿಸಿದ ರಶ್ಮಿಕಾ ಮಂದಣ್ಣ

    ಕಾಸು ಕೊಟ್ಟು ನೋಡುವ ಪ್ರೇಕ್ಷಕರಿಗೆ ಯಾವುದೇ ರೀತಿ ಬೇಸರ ಆಗಬಾರದು. ಅಂಥ ಸಿನಿಮಾಕ್ಕಾಗಿಯೇ ಒಂದು ನಿಮಿಷ ವ್ಯರ್ಥ ಮಾಡದೇ ದುಡಿಯುತ್ತಿದ್ದೇನೆ ಎಂದು ಹೇಳಿ ಇನ್ನಷ್ಟು ಕುತೂಹಲ ಮೂಡಿಸಿದರು. ಈ ನಡುವೆ ತೂರಿ ಬಂದ ಪ್ರಶ್ನೆ ಒನ್ಸ್ ಅಗೇನ್ ಅದೇ. ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ಯಶ್ ರಾವಣನ ಪಾತ್ರ ಮಾಡಲಿದ್ದಾರಂತೆ. ಈಗಾಗಲೇ ರಾಮಾಯಣ ತಂಡ ಸಂಪರ್ಕ ಮಾಡಿದೆಯಂತೆ. ಇದೇ ಕೆಲವು ದಿನಗಳಿಂದ ಗಿರಕಿ ಹೊಡೆಯುತ್ತಿತ್ತು. ಹಾಗೆಯೇ ರಜನಿ ಜೊತೆ ಯಶ್ ನಟಿಸಲಿದ್ದಾರೆ ಎನ್ನುವ ಮಾತೂ ಕೇಳಿ ಬಂದಿತ್ತು. ಅದಕ್ಕೆಲ್ಲ ಖಡಕ್ ಉತ್ತರ ಕೊಟ್ಟು ನಕ್ಕರು.

    ಈಗಾಗಲೇ ಯಶ್ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಕೆಜಿಎಫ್ (KGF) ಗೆಲುವು ಸುಮ್ಮನೆ ಬಂದಿಲ್ಲ ಎನ್ನುವುದನ್ನು ಅವರು ಸಾಬೀತು ಪಡಿಸಬೇಕಿದೆ. ಕಾರಣ ಕಣ್ಣ ಮುಂದಿದೆ. ಬಾಹುಬಲಿ ನಂತರ ಟಾಲಿವುಡ್ ಸ್ಟಾರ್ ಪ್ರಭಾಸ್ ಒಂದೇ ಒಂದು ಹಿಟ್ ಕೊಟ್ಟಿಲ್ಲ. ಎಲ್ಲವೂ ಅಟ್ಟರ್ ಫ್ಲಾಪ್. ರಾಜಮೌಳಿ ಇದ್ದಿದ್ದಕ್ಕೇ ಬಾಹುಬಲಿ ಗೆದ್ದಿತು ಎನ್ನುವ ಮಾತು ಶುರುವಾಗಿದೆ. ಅದೇ ರೀತಿ ಪ್ರಶಾಂತ್ ನೀಲ್ ಮಾತ್ರ ಗೆಲುವಿಗೆ ಕಾರಣ ಎನ್ನುವಂತೆ ಆಗಬಾರದಲ್ಲವೆ? ಅದಕ್ಕಾಗಿ ಹೊಸ ಸಿನಿಮಾ ಜಗತ್ತಿನ ತುಂಬಾ ಮೆರವಣಿಗೆ ಹೊರಡಬೇಕಿದೆ. ಅದೆಲ್ಲ ಲೆಕ್ಕಾಚಾರ ತಲೆಯಲ್ಲಿ ಇಟ್ಟುಕೊಂಡು ಯಶ್ ಯಾಗಕ್ಕೆ ಮೊದಲ ಹೆಜ್ಜೆ ಇಡಲಿದ್ದಾರೆ.