ಕೋಲಾರ: ಪೋಷಕರು ಬುದ್ದಿವಾದ ಹೇಳಿದ ಹಿನ್ನೆಲೆ ಎಂಟನೇ ತರಗತಿ ವಿದ್ಯಾರ್ಥಿ (Student) ಮನೆ ಬಿಟ್ಟು ಹೋಗಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಕೋಲಾರ ಜಿಲ್ಲೆಯ ಕೆಜಿಎಫ್ (KGF) ತಾಲೂಕಿನ ಪೆದ್ದಪಲ್ಲಿ ಗ್ರಾಮದಲ್ಲಿಈ ಘಟನೆ ಜರುಗಿದ್ದು, ಗ್ರಾಮದ ಹರ್ಷಿತ್ ಎಂಬ ವಿದ್ಯಾರ್ಥಿ ಕಾಣೆಯಾಗಿದ್ದಾನೆ. ಕೆಜಿಎಫ್ ನಗರದ ಶಾಲೆಯೊಂದರಲ್ಲಿ ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಯಾವಾಗಲೂ ಮೊಬೈಲ್‌ನಲ್ಲಿಯೇ ಆಟವಾಡಿಕೊಂಡಿದ್ದ. ಈ ಹಿನ್ನೆಲೆ ತಂದೆ ಶೇಖರ್ ಮಗನಿಗೆ ಬೈದು ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡ ಮಗ ಮನೆಬಿಟ್ಟು ಹೋಗಿದ್ದಾನೆ. ಇದನ್ನೂ ಓದಿ: ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಬಂಧನ
ಶುಕ್ರವಾರ ಎಂದಿನಂತೆ ಶಾಲೆಗೆ ಹೋಗಿದ್ದು, ಶಾಲೆ ಮುಗಿದ ಬಳಿಕ ಮನೆಗೆ ಬಂದಿರಲಿಲ್ಲ. ಅಲ್ಲದೇ ಶಾಲೆಯಲ್ಲಿ ತಿರುಪತಿಗೆ (Tirupati) ಹೋಗುವ ಮಾರ್ಗದ ಕುರಿತು ಸ್ನೇಹಿತರನ್ನು ವಿಚಾರಣೆ ಮಾಡಿದ್ದ ಎನ್ನಲಾಗಿದೆ. ಈ ಹಿನ್ನೆಲೆ ತಿರುಪತಿಗೆ ತೆರಳಿರುವ ಅನುಮಾನವನ್ನು ಪೋಷಕರು ವ್ಯಕ್ತಪಡಿಸಿದ್ದಾರೆ. ಸದ್ಯ ಪೋಷಕರು ರಾಬರ್ಟ್ ಸನ್ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಮಂತ್ರಾಲಯಕ್ಕೆ ಹೊರಟಿದ್ದ ಬಸ್‍ನಲ್ಲಿ ದಟ್ಟ ಹೊಗೆ – ಆತಂಕಕ್ಕೊಳಗಾದ ರಾಯರ ಭಕ್ತರು
ತಮಿಳಿನ (Tamil) ನಟ ಜೈ ಆಕಾಶ್ (Jai Akash) ಮಾತನಾಡಿದ ಮಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದು ನಿಜವೋ ಅಥವಾ ಸುಳ್ಳೋ ಗೊತ್ತಿಲ್ಲ. ಆದರೆ, ಯಶ್ (Yash) ತಮ್ಮ ಬಳಿ ಅವಕಾಶಕ್ಕಾಗಿ ಕಣ್ಣೀರು ಹಾಕಿದ್ದರು. ಅವರಿಗೆ ನಾನು ಹೊಟ್ಟೆ ತುಂಬಾ ಊಟ ಹಾಕಿದ್ದೆ. ಇದೀಗ ಯಶ್ ಗೆ ಜಗತ್ತಿನಾದ್ಯಂತ ಅಭಿಮಾನಿಗಳು ಇದ್ದಾರೆ ಎಂದು ಜೈ ಆಕಾಶ್ ಹೇಳಿದ್ದಾರೆ. ಆದರೆ, ಅದನ್ನು ಯಶ್ ಅಭಿಮಾನಿಗಳು ನಂಬಲು ತಯಾರಿಲ್ಲ.
ಜೈ ಆಕಾಶ್ ಅವರ ವಿಡಿಯೋ ವೈರಲ್ ಆಗಿದ್ದರೂ, ಈ ಕುರಿತಾಗಿ ಯಶ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಸಲಿಯಾಗಿ ತಮಿಳು ನಟನ ಬಳಿ ಯಶ್ ಯಾವ ಕಾರಣಕ್ಕಾಗಿ ಸಹಾಯ ಕೇಳಿದರು ಎನ್ನುವುದು ಗೊತ್ತಿಲ್ಲ. ಇದು ಯಾವ ಸಂದರ್ಭದಲ್ಲಿ ಆಗಿದ್ದು ಎಂದು ಆ ನಟನೂ ಹೇಳಿಕೊಂಡಿಲ್ಲ.
ಕೆಜಿಎಫ್ ಸಿನಿಮಾದ ನಂತರ ಯಶ್ ಭಾರತದ ನಟನಾಗಿ ರೂಪುಗೊಂಡಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಹಾಗಾಗಿ ಪ್ರಚಾರಕ್ಕಾಗಿ ಹಾಗೇನಾದರೂ ಜೈ ಆಕಾಶ್ ಮಾತನಾಡಿದ್ದಾರಾ ಗೊತ್ತಿಲ್ಲ. ಇಂತಹ ವಿಷಯಗಳು ಸುದ್ದಿಯಾದಾಗ ಎರಡೂ ಕಡೆಯಿಂದ ನಿಜಾಂಶ ತಿಳಿಬೇಕು. ಈ ವಿಷಯದಲ್ಲಿ ಯಶ್ ಏನು ಹೇಳುತ್ತಾರೋ ನೋಡೋಣ.
ರಾಕಿ ಭಾಯ್ ಅಭಿಮಾನಿಗಳಿಗೆ ಇದು ನಿಜಕ್ಕೂ ಸಿಹಿಸುದ್ದಿ. ಯಶ್ (Yash) ಮುಂದಿನ ಸಿನಿಮಾ ಯಾವುದು ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಇಲ್ಲಿದೆ ಉತ್ತರ. ಕೆಜಿಎಫ್ ಪಾರ್ಟ್ 3ಗೆ ಶೀಘ್ರದಲ್ಲೇ ಚಾಲನೆ ಸಿಗಲಿದೆ. ಮತ್ತೆ ರಾಕಿಭಾಯ್ ಆರ್ಭಟ ಶುರುವಾಗಲಿದೆ. ಇದನ್ನೂ ಓದಿ:ಮತ್ತೆ ಲವರ್ ಬಾಯ್ ಆಗಿ ಕಿರುತೆರೆಯತ್ತ ಸ್ಕಂದ ಅಶೋಕ್
ಹೊಂಬಾಳೆ ಸಂಸ್ಥೆ ನಿರ್ಮಾಣದ ಕೆಜಿಎಫ್ 1 ಮತ್ತು ಕೆಜಿಎಫ್ 2 (KGF 2) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿತ್ತು. ಕೋಟಿ ಕೋಟಿ ಕಲೆಕ್ಷನ್ ಮಾಡಿತ್ತು. ಹೊಂಬಾಳೆ ಟೀಮ್ ಯಶ್ ಹುಟ್ಟುಹಬ್ಬಕ್ಕೆ ಶುಭಕೋರಿ, ಕೆಜಿಎಫ್ 3 (KGF 3) ಬಗ್ಗೆ ಅಪ್‌ಡೇಟ್ ನೀಡಿತ್ತು. ಆದರೆ ಯಾವಾಗ ಎಂಬುದಕ್ಕೆ ಉತ್ತರವಿರಲಿಲ್ಲ. ಆದರೆ ಪಾರ್ಟ್ 3 ಶೀಘ್ರದಲ್ಲೇ ಶುರು ಮಾಡೋದಕ್ಕೆ ತಯಾರಿ ನಡೆಯುತ್ತಿದೆ. ಪ್ರಭಾಸ್ ನಟನೆಯ ಸಲಾರ್ ಕಂಪ್ಲೀಟ್ ಕೆಲಸ ಮುಗಿಯುತ್ತಿದ್ದಂತೆ ಪ್ರಶಾಂತ್‌ನೀಲ್ ಕೆಜಿಎಫ್ 3 ಕೈಗೆತ್ತಿಕೊಳ್ಳುತ್ತಾರೆ.
ಸಲಾರ್ ಬಳಿಕ ಜ್ಯೂ.ಎನ್ ಟಿಆರ್ ಜೊತೆ ಪ್ರಶಾಂತ್ ನೀಲ್ (Prashanth Neel) ಸಿನಿಮಾ ಮಾಡ್ತಾರೆ ಎನ್ನಲಾಗಿತ್ತು. ಆದರೆ ತಾರಕ್, ಕೊರಟಾಲ ಶಿವ ನಿರ್ದೇಶನದ ‘ದೇವರು’ (Devaru) ಸಿನಿಮಾದಲ್ಲಿ ನಟಿಸುತ್ತಿದ್ದು, ಬಳಿಕ ಬಾಲಿವುಡ್ ನ ‘ವಾರ್’ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ. ಹಾಗಾಗಿ ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾ ಮತ್ತೆ ಮುಂದಕ್ಕೆ ಹೋಗಲಿದೆ. ಹಾಗಾಗಿ ಮತ್ತೆ ಯಶ್ ಜೊತೆ ಪ್ರಶಾಂತ್ ನೀಲ್ ಕೈಜೋಡಿಸುತ್ತಿದ್ದಾರೆ.
ಭಾರತೀಯ ಸಿನಿಮಾರಂಗದಲ್ಲೇ ದಾಖಲೆ ಬರೆದ ಸಿನಿಮಾ ಕೆಜಿಎಫ್ (KGF) ಮುಂದುವರೆದ ಭಾಗ ಯಾವಾಗ ಎಂದು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಈ ಮೂಲಕ ಅಪ್ ಡೇಟ್ ಸಿಕ್ಕಿದೆ. ಮತ್ತೆ ಯಶ್- ನೀಲ್ ಕೈಚಳಕ ಪರದೆಯ ಮೇಲೆ ಕಮಾಲ್ ಮಾಡಲಿದೆ.
ಕೆಜಿಎಫ್ ಪಾರ್ಟ್ 2ನಲ್ಲಿ (KGF 2) ರಾಕಿಭಾಯ್-ರೀನಾ ಕಹಾನಿ ಎಂಡ್ ಆಗಿತ್ತು. ಪಾರ್ಟ್ 3ನಲ್ಲಿ ಸ್ಟೋರಿ ಹೇಗೆ ಮೂಡಿ ಬರಲಿದೆ ಎಂಬುದರ ಬಗ್ಗೆ ಫ್ಯಾನ್ಸ್ ಕಾತರದಿಂದ ಎದುರು ನೋಡ್ತಿದ್ದಾರೆ.
ಯಶ್ (Yash) ಕೊನೆಗೂ ಆ ನಿರ್ಧಾರಕ್ಕೆ ಬಂದಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ದಿವ್ಯ ದರ್ಶನ ನೀಡಲು ಸಜ್ಜಾಗಿದ್ದಾರೆ. ‘ಕಾಣೆಯಾಗಿದ್ದಾರೆ ಯಶ್’ ಹೀಗಂತ ಒದ್ದಾಡುತ್ತಿರುವ ಭಕ್ತಗಣಕ್ಕೆ ಉತ್ತರ ನೀಡಲು ಅಖಾಡ ಸಿದ್ದ ಮಾಡುತ್ತಿದ್ದಾರೆ. ಹಾಗಿದ್ದರೆ ಯಾವಾಗ ಯಶ್ ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರೆ? ಈಗ ಯಾವ ದೇಶದಲ್ಲಿದ್ದಾರೆ? ಇದೆಲ್ಲದರ ನಡುವೆ ಅವರನ್ನು ಕಾಡುತ್ತಿರುವ ಗೊಂದಲವೇನು? ಅದಕ್ಕೆ ಪರಿಹಾರ ಏನು ಹುಡುಕಿದ್ದಾರೆ? ಇಲ್ಲಿದೆ ಅಪ್‌ಡೇಟ್
ಕಾಣೆಯಾಗಿದ್ದಾರೆ ರಾಕಿಭಾಯ್ ಹೀಗಂತ ಕೆಲವು ದಿನಗಳ ಹಿಂದೆ ಪ್ರಕಟಣೆ ಹೊರಬಿದ್ದಿತ್ತು. ಆ ರೀತಿ ಹೇಳಿದ್ದು ಬೇರಾರೂ ಅಲ್ಲ. ಖುದ್ದು ಯಶ್ ಭಕ್ತಗಣ. ಇಷ್ಟು ವರ್ಷವಾದರೂ ಹೊಸ ಸಿನಿಮಾ ಬಗ್ಗೆ ಸಿಂಗಲ್ ಸುದ್ದಿ ಇಲ್ಲ. ಯಾವುದೇ ಅಪ್ ಡೇಟ್ ಇಲ್ಲ. ಎಲ್ಲ ಫ್ಯಾನ್ಸ್ ತಮ್ಮ ತಮ್ಮ ಹೀರೊ ಹೊಸ ಸಿನಿಮಾ ಸುದ್ದಿ ಹಾಕಿಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಅಪ್‌ಡೇಟ್ ಸುದ್ದಿ ಕೊಟ್ಟು ಕೇಕೆ ಹೊಡೆಯುತ್ತಿದ್ದಾರೆ. ನೀವೂ ಏನೂ ಹೊಸ ಹಾಕುತ್ತಿಲ್ಲ. ನಮ್ಮ ಎಮೋಷನ್ಸ್ ಜೊತೆ ಆಟ ಆಡಬೇಡಿ ಬಾಸ್. ನಾವೇನು ಮಾಡಬೇಕು ಹೇಳಿ ಎಂದು ಗೋಳಾಡಿದ್ದರು. ಅದಕ್ಕೆ ಉತ್ತರ ಕೊಡುವ ಸಮಯ ಬಂದಿದೆ ಎನ್ನುತ್ತಿದ್ದಾರೆ ಖುದ್ದು ಯಶ್. ಇದನ್ನೂ ಓದಿ:‘ಬಾಹುಬಲಿ’ ಪ್ರಭಾಸ್ ಫೇಸ್‌ಬುಕ್ ಅಕೌಂಟ್ ಹ್ಯಾಕ್
ಯು ಆರ್ ರೈಟ್, ಯಶ್ ಮೈ ಕೊಡವಿ ಎದ್ದು ನಿಂತಿದ್ದಾರೆ. ಎರಡು ವರ್ಷದಿಂದ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅದಕ್ಕೆ ಸಿದ್ಧತೆ ಅನ್ನೋದು ಸಣ್ಣ ಶಬ್ದವಾದೀತು. ಕಾರಣ ಅಷ್ಟೊಂದು ಇಂಚಿಂಚು ಮಾಹಿತಿ. ಸಣ್ಣ ಸಣ್ಣ ಡಿಟೇಲ್ಸ್, ಅಗುಳಿನಷ್ಟೂ ತಪ್ಪಾಗದ ಹೆಜ್ಜೆಯನ್ನು ಇಟ್ಟು ಕೊನೇ ಹಂತ ಬಂದು ಮುಟ್ಟಿದ್ದಾರೆ. ಕತೆ,ಚಿತ್ರಕತೆ, ಸಂಭಾಷಣೆ, ಕ್ಯಾಮೆರಾ, ಸಂಗೀತ, ಕಲಾ ನಿರ್ದೇಶನ ಮತ್ತು ಶೂಟಿಂಗ್ ಸ್ಥಳ, ಕಾಸ್ಟ್ಯೂಮ್ ಡಿಸೈನಿಂಗ್ ಒಂದೇ ಒಂದು ಗುಲಗಂಜಿ ತಪ್ಪಾಗದಂತೆ ಎಚ್ಚರ ವಹಿಸಿ ದೇವರಿಗೆ ತುಪ್ಪದ ದೀಪ ಹಚ್ಚಿದ್ದಾರೆ. ಜಗತ್ತಿನ ಹಾರೈಕೆ ಬೇಡಲು ನಿಮ್ಮ ಮುಂದೆ ಬರಲಿದ್ದಾರೆ.
ಹೊಸ ಸಿನಿಮಾಕ್ಕಾಗಿ ತಪಸ್ಸು ಮಾಡುತ್ತಿದ್ದಾರೆ ರಾಕಿಭಾಯ್. ಅದಕ್ಕೊಂದು ತಂಡ ಕಟ್ಟಿಕೊಂಡಿದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ಕೆಲಸ ಒಪ್ಪಿಸಿದ್ದಾರೆ. ಯಾವುದೂ ಹಾದಿ ತಪ್ಪಬಾರದು. ಹಾಗೆ ನೋಡಿಕೊಂಡಿದ್ದಾರೆ. ಇದಕ್ಕೆ ಜೊತೆಯಾಗಿ ನಿಂತಿರುವುದು ನಿರ್ದೇಶಕಿ ಗೀತು ಮೋಹನ್‌ದಾಸ್ (Geethu Mohandas) ಮಲಯಾಳಂ ಮೂಲದ ನಿರ್ದೇಶಕಿಗೆ ಇದು ಮೊದಲ ಕಮರ್ಷಿಯಲ್ ಅಂಡ್ ಕನ್ನಡ ಕಮ್ ಪ್ಯಾನ್ ಇಂಡಿಯಾ ಸಿನಿಮಾ. ಇಬ್ಬರೂ ಹೇಗೆ ಸಿಕ್ಕರು. ಹೇಗೆ ಹೊಂದಿಕೊಂಡರು. ಹೇಗೆ ಇಂಥ ಮಹಾ ಯುದ್ಧಕ್ಕೆ ಕುದುರೆ ಏರಿದರು? ಎಲ್ಲವೂ ಸದ್ಯದಲ್ಲೇ ಹೊರಬೀಳಲಿದೆ. ಅದಕ್ಕೂ ಮುನ್ನ ಇನ್ನು ಮೂರು ನಾಲ್ಕು ವಾರಗಳಲ್ಲಿ ಯಶ್ (Yash) ಘೋಷಣೆ ಮಾಡೋದು ಶತಸಿದ್ಧ. ಇದನ್ನೂ ಓದಿ:ಚಾಮುಂಡಿ ತಾಯಿ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜಕುಮಾರ್
ಆಗಸ್ಟ್ ತಿಂಗಳಲ್ಲೇ ಅನೌನ್ಸ್ ಮಾಡುತ್ತಾರಾ? ಅಫ್‌ಕೋರ್ಸ್ ಎಸ್ ಇದು ಸತ್ಯ. ಎಲ್ಲ ಅಂದರೆ ಎಲ್ಲವೂ ಆಚೀಚೆ ಆಗದಂತೆ ಸಜ್ಜಾಗಿದೆ. ಅದು ಯಾವ ಮಟ್ಟಿಗೆ ಪೂರ್ವ ತಯಾರಿ ಮಾಡಿಕೊಂಡಿದ್ದಾರೆ ಗೊತ್ತೆ? ಬಹುತೇಕ ಸಿನಿಮಾ ಮುಗಿಸಿದ್ದಾರೆ. ಅದನ್ನು ಶೂಟಿಂಗ್ ಮಾಡೋದೊಂದು ಬಾಕಿ. ಅದರ ಅರ್ಥ ಇಷ್ಟೇ. ಅಷ್ಟೊಂದು ಜತನದಿಂದ ಅಖಾಡ ರೆಡಿಯಾಗಿದೆ. ಯಾವುದನ್ನು ಎಲ್ಲಿ ಎಷ್ಟು ಹೇಗೆ? ಇಂಥ ಪ್ರತಿ ಪ್ರಶ್ನೆಗೆ ಕಾಗದದ ಮೇಲೆ ಉತ್ತರ ಬರೆದುಕೊಂಡಿದ್ದಾರೆ. ಅಂದುಕೊಂಡಿದ್ದನ್ನು ಚಿತ್ರೀಕರಣ ಮಾಡಬೇಕಷ್ಟೇ. ಅದೇನೂ ಸಣ್ಣ ಸವಾಲಲ್ಲ. ಆದರೆ ಇವರು ಮಾಡಿಕೊಂಡಿರುವ ತಯಾರಿ ಆ ಸವಾಲನ್ನು ಎಡಗೈಯಿಂದ ಸರಿಸುವಷ್ಟು ತಾಕತ್‌ವಾರ್ ಅಷ್ಟೇ ಉತ್ತರ.
ಈಗ ಒಂದೇ ಒಂದು ಪ್ರಶ್ನೆ ರಾಕಿಭಾಯ್‌ಗೆ ತಲೆ ತಿನ್ನುತ್ತಿದೆ. ನಿಗ್ಗಿನಿಗಿ ಸವಾಲು ಕಾಡುತ್ತಿದೆ. ಅದೇನು ಗೊತ್ತೆ? ಈ ಹೊಸ ಸಿನಿಮಾವನ್ನು ಯಾವ ರೀತಿ ಅನೌನ್ಸ್ ಮಾಡಬೇಕು? ಇದು ಸಹಜ ಆತಂಕ ಹಾಗೂ ಗೊಂದಲ. ಎಲ್ಲರೂ ಎಲ್ಲ ರೀತಿಯಲ್ಲಿ ಸಿನಿಮಾ ಘೋಷಣೆ ಮಾಡಿದ್ದಾರೆ. ಯುಟ್ಯೂಬ್, ಸಾರ್ವಜನಿಕ, ಕಾರ್ಯಕ್ರಮ ಅಥವಾ ಇನ್ನೇನೋ ಸಂವಹನದಿಂದ ಟೈಟಲ್ ಘೋಷಣೆ ಮಾಡಿದ್ದಾರೆ. ಕೆಜಿಎಫ್(KGF), ಸಲಾರ್ (Salaar), ಕಲ್ಕಿ ಹೀಗೆ ಒಬ್ಬೊಬ್ಬರು ಒಂದೊಂದು ದಾರಿ ಹಿಡಿದಿದ್ದಾರೆ. ಇದೇ ರೀತಿ ಮಾಡಬೇಕಾ ಅಥವಾ ಇದನ್ನು ಬಿಟ್ಟು ಇನ್ನೊಂದು ದಾರಿ ಹಿಡಿಯಬೇಕಾ? ಯಾವುದು ಹೆಚ್ಚು ಜನರಿಗೆ ಮುಟ್ಟಲು ಸಾಧ್ಯ? ಈ ಪ್ರಶ್ನೆಗಳನ್ನು ಹರವಿಕೊಂಡು ಕುಳಿತಿದ್ದಾರೆ ರಾಕಿಭಾಯ್.
ಇದಿಷ್ಟು ಸದ್ಯದ ಕಥನ ಹೂರಣ. ಬರೀ ಕನ್ನಡಿಗರು ಮಾತ್ರ ಅಲ್ಲ. ಇಡೀ ವಿಶ್ವವೇ ಯಶ್ ಮುಂದಿನ ನಡೆಯನ್ನು ಕುತೂಹಲದಿಂದ ಕಾಯುತ್ತಿದೆ. ಏನು ಮಾಡಲಿದ್ದಾರೆ? ಏನು ಮಾಡಬಹುದು? ಇಷ್ಟೆಲ್ಲ ಕಾಯಿಸಿ ಅದ್ಯಾವ ಊಟ ಬಡಿಸಬಹುದು? ಎಲ್ಲವೂ ಬರೀ ಪ್ರಶ್ನೆಗಳೇ. ಉತ್ತರ ಸಿಗಲು ಸಮಯ ಬೇಕು. ಆದರೆ ಒಂದು ಮಾತು ಸತ್ಯ. ಮನೆ ಕಟ್ಟಲು ಹೆಚ್ಚು ಸಮಯ ಬೇಕಾಗಲ್ಲ. ಆದರೆ ಅರಮನೆ ಕಟ್ಟಲು? ಬೇಕಪ್ಪಾ. ಬೇಕು ಎದ್ವಾತದ್ವಾ ಟೈಮು. ಅರಮನೆ ಅಂಗಳದಲ್ಲಿ ನಿಂತು ಹಬ್ಬ ಮಾಡಲು ಕಾಯುತ್ತಿದೆ ಭಕ್ತಗಣ. ಕಡ್ಡಿ ಗೀರಿ ಕೈಯಲ್ಲಿ ಹಿಡಿದುಕೊಂಡಿರಿ, ಬಂದೇ ಬಿಡ್ತಾರೆ ರಾಕಿಭಾಯ್. ಸರಪಟಾಕಿ ಹಿಡಿದುಕೊಂಡು ಹಚ್ಚಿದಾಗ ದೀಪಾವಳಿ ಪಕ್ಕಾ.
ಯಶ್ ನಾಯಕನಾಗಿ ನಟಿಸಿರುವ ಕೆಜಿಎಫ್ 1 ಮತ್ತು ಕೆಜಿಎಫ್ 2 ಚಿತ್ರಗಳು ಇತ್ತೀಚೆಗಷ್ಟೇ ಜಪಾನ್ ಭಾಷೆಗೆ ಡಬ್ ಆಗಿ ರಿಲೀಸ್ ಆಗಿದ್ದವು. ಕನ್ನಡದ ಚಿತ್ರಕ್ಕೆ ಜಪಾನ್ ಸಿನಿಮಾ ನೋಡುಗರು ಕೂಡ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ರಿಲೀಸ್ ಆದ ಹತ್ತು ದಿನಕ್ಕೆ ಸಾವಿರದ ನಾಲ್ಕು ನೂರು ಟಿಕೆಟ್ ಗಳು ಮಾರಾಟವಾಗಿವೆ ಎಂದು ಅಂದಾಜಿಸಲಾಗಿದೆ. ಅದರಲ್ಲೂ ವಾರಾಂತ್ಯದ ಬಹುತೇಕ ಶೋಗಳು ಹೌಸ್ ಫುಲ್ ಪ್ರದರ್ಶನ ಕಂಡಿವೆ.
ಪ್ರಶಾಂತ್ ನೀಲ್ (Prashant Neel) ನಿರ್ದೇಶನದ ಕೆಜಿಎಫ್ (KGF) ಸರಣಿ ಸಿನಿಮಾಗಳು ರಿಲೀಸ್ ಆಗಿ ಹಲವು ವರ್ಷಗಳೇ ಕಳೆದಿದಿದ್ದರೂ ಅದರ ಕ್ರೇಜ್ ಇನ್ನೂ ನಿಂತಿಲ್ಲ ಎನ್ನುವುದಕ್ಕೆ ಜಪಾನ್ ನೋಡುಗರೇ ಸಾಕ್ಷಿಯಾಗಿದ್ದಾರೆ. ಭಾರತದಲ್ಲೂ ಕೆಜಿಎಫ್ 1 ಮತ್ತು ಕೆಜಿಎಫ್ 2 ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಕಮಾಯಿ ಮಾಡಿದವು. ಇದೀಗ ಈ ಎರಡೂ ಚಿತ್ರಗಳು ಜಪಾನ್ (Japan) ಭಾಷೆಗೆ ಡಬ್ ಆಗಿ ಅಲ್ಲಿಯೂ ಉತ್ತಮ ಕಲೆಕ್ಷನ್ ಮಾಡಿವೆ.
ಇದೇ ಮೊದಲ ಬಾರಿಗೆ ಜಪಾನ್ ನಲ್ಲಿ ಏಕಕಾಲಕ್ಕೆ ಸರಣಿ ಚಿತ್ರಗಳು ಬಿಡುಗಡೆ ಆಗಿದ್ದು ವಿಶೇಷ. ಸಿನಿಮಾ ರಿಲೀಸ್ ಗೂ ಮುನ್ನ ಜಪಾನ್ ನಲ್ಲಿ ಪ್ರಚಾರ ಕಾರ್ಯ ಕೂಡ ಶುರು ಮಾಡಿದ್ದರಿಂದ, ಸಿನಿಮಾ ಬಿಡುಗಡೆಗೂ ಮೊದಲು ಕೆಜಿಎಫ್ 1 ಸಿನಿಮಾ 91 ಶೋಗಳು ಹಾಗೂ ಕೆಜಿಎಫ್ 2 ಸಿನಿಮಾದ 85 ಶೋಗಳು ಮುಂಗಡವಾಗಿ ಬುಕ್ ಆಗಿದ್ದವು.
ಕೆಜಿಎಫ್ ಚಿತ್ರಗಳ ಮೂಲಕ ಪ್ಯಾನ್ ಇಂಡಿಯಾ ನೋಡುಗರನ್ನು ತಲುಪಿದ್ದರು ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಟ ಯಶ್ (Yash). ಕೆಜಿಎಫ್ 1 ಮಾಡಿದ ಮೋಡಿಯೇ ಕೆಜಿಎಫ್ 2 ಚಿತ್ರಕ್ಕೆ ಸಾಕಷ್ಟು ಪ್ಲಸ್ ಪಾಯಿಂಟ್ ಆಯಿತು. ಮೊದಲ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ತಂದುಕೊಟ್ಟ ಹಣದ ಎರಡರಷ್ಟು ಪಾರ್ಟ್ 2 ಮಾಡಿತು. ಹೀಗಾಗಿ ಎರಡೂ ಚಿತ್ರಗಳ ಮೂಲಕ ಕೇವಲ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಕನ್ನಡ ಚಿತ್ರಗಳಿಗೆ ಬೇಡಿಕೆ ಬಂತು.
ಆರ್.ಆರ್.ಆರ್ ಸಿನಿಮಾದ ನಂತರ ದಕ್ಷಿಣದ ಮತ್ತೊಂದು ಸಿನಿಮಾ ಜಪಾನ್ ಭಾಷೆಯಲ್ಲಿ ರಿಲೀಸ್ ಆಗುತ್ತಿರುವುದು ಗುರುತಿಸಬೇಕಾದ ಸಂಗತಿ. ಅದಕ್ಕಾಗಿ ನಟ ಯಶ್ ಜಪಾನ್ ಭಾಷೆಯಲ್ಲೇ ವಿಡಿಯೋವೊಂದನ್ನು ಮಾಡಿ, ಸಿನಿಮಾ ನೋಡುವಂತೆ ಅಲ್ಲಿನ ಅಭಿಮಾನಿಗಳಿಗೆ ಮನವಿ ಮಾಡಿದ್ದರು.
ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಆರ್.ಆರ್.ಆರ್ ಸಿನಿಮಾ ಕೂಡ ಈ ಹಿಂದೆ ಜಪಾನ್ ಭಾಷೆಯಲ್ಲಿ ರಿಲೀಸ್ ಆಗಿತ್ತು. ನೂರು ಕೋಟಿಗೂ ಅಧಿಕ ಹಣವನ್ನು ಬಾಕ್ಸ್ ಆಫೀಸಿನಲ್ಲಿ ಲೂಟಿ ಮಾಡಿತ್ತು. ಆ ಸಿನಿಮಾ ಗೆಲುವು ಕಂಡ ಬೆನ್ನಲ್ಲೇ ಕೆಜಿಎಫ್ ಸಿನಿಮಾವನ್ನೂ ಜಪಾನ್ ಭಾಷೆಯಲ್ಲಿ ರಿಲೀಸ್ ಮಾಡಲಾಗಿದೆ. ಅದಕ್ಕೆ ಉತ್ತಮ ರೀತಿಯಲ್ಲೇ ಪ್ರತಿಕ್ರಿಯೆ ವ್ಯಕ್ತವಾಗಿದೆ.
‘ಕೆಜಿಎಫ್’ (KGF) ಸಿನಿಮಾದಲ್ಲಿ ಗಲಿಗಲಿ ಹಾಡಿಗೆ ಯಶ್ (Yash) ಜೊತೆ ಸೊಂಟ ಬಳುಕಿಸಿದ್ದ ನಟಿ ಮೌನಿ ರಾಯ್ (Mouni Roy) ಆರೋಗ್ಯದಲ್ಲಿ ಏರುಪೇರಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆರೋಗ್ಯದ ಬಗ್ಗೆ ನಟಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
ಬಾಲಿವುಡ್ (Bollywood) ಬ್ಯೂಟಿ ಮೌನಿ ರಾಯ್ ಅವರು ಅನಾರೋಗ್ಯದಿಂದ ಬಳುತ್ತಿದ್ದರು. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಟಿ ಚಿಕಿತ್ಸೆ ಪಡೆಯುತ್ತಿದ್ದರು. 9 ದಿನಗಳ ಚಿಕಿತ್ಸೆಯ ನಂತರ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಇದೀಗ ನಟಿ ಮನೆಗೆ ಹಿಂದಿರುಗಿದ್ದಾರೆ. ಇದನ್ನೂ ಓದಿ:ಸಿನಿಮಾಗೆ ಗುಡ್ ಬೈ, ರಾಜಕೀಯಕ್ಕೆ ಅಭಿಷೇಕ್ ಬಚ್ಚನ್ ಎಂಟ್ರಿ?
ಆಸ್ಪತ್ರೆಯಲ್ಲಿದ್ದ ಕೆಲ ಫೋಟೋಗಳನ್ನ ನಟಿ ಶೇರ್ ಮಾಡಿ, ಸಂಕಷ್ಟದ ಸಮಯದಲ್ಲಿ ಜೊತೆಯಲ್ಲಿದ್ದ ಪತಿ ಸೂರಜ್‌ಗೆ ಮೌನಿ ರಾಯ್ ಧನ್ಯವಾದಗಳನ್ನ ತಿಳಿಸಿದ್ದಾರೆ. ಇದೀಗ ಆರೋಗ್ಯವಾಗಿದ್ದೇನೆ, ಆರಾಮ ಆಗಿ ಮನೆಗೆ ವಾಪಸ್ ಆಗಿದ್ದೇನೆ. ಅಭಿಮಾನಿಗಳ ಹಾರೈಕೆಗೆ ಧನ್ಯವಾದಗಳು ಎಂದು ನಟಿ ಬರೆದುಕೊಂಡಿದ್ದಾರೆ. ಆದರೆ ಯಾವ ಕಾರಣಕ್ಕೆ ಅನಾರೋಗ್ಯ ಕಾಡಿತ್ತು ಎಂಬುದನ್ನ ನಟಿ ರಿವೀಲ್ ಮಾಡಿಲ್ಲ.
ಕಳೆದ ವರ್ಷ ಅಂತ್ಯದಲ್ಲಿ ರಣ್‌ಬೀರ್ ಕಪೂರ್- ಆಲಿಯಾ ಭಟ್ (Alia Bhatt) ಅವರು ‘ಬ್ರಹ್ಮಾಸ್ತ್ರʼ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಮೌನಿ ಖಡಕ್ ವಿಲನ್ ಆಗಿ ನಟಿಸಿದ್ದರು. ನಟಿಯ ಅಭಿನಯಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು.
ಮಂಗಳೂರಿನ ಬೆಡಗಿ ಶ್ರೀನಿಧಿ ಶೆಟ್ಟಿ (Srinidhi Shetty) ಅವರು ಈಗ ತಮ್ಮ ಮದುವೆಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಗುಟ್ಟಾಗಿ ನಟಿ ಮದುವೆಯಾಗಿದ್ದಾರೆ (Wedding) ಎಂದು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಆಗಿದೆ. ಇತ್ತೀಚಿಗೆ ನಟಿ ಶೇರ್ ಮಾಡಿರುವ ಫೋಟೋ ಮದುವೆ ಸುದ್ದಿಗೆ ಮತ್ತಷ್ಟು ಪುಷ್ಟಿ ಕೊಟ್ಟಿದೆ. ಅಷ್ಟಕ್ಕೂ ಆಗಿದ್ದೇನು.? ಇಲ್ಲಿದೆ ಡಿಟೈಲ್ಸ್
ಮಾಡೆಲಿಂಗ್ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದ ಶ್ರೀನಿಧಿ ಶೆಟ್ಟಿ ಅವರು ಯಶ್‌ಗೆ (Yash) ನಾಯಕಿಯಾಗುವ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟರು. ಮೊದಲ ಸಿನಿಮಾದಲ್ಲೇ ತಮ್ಮ ಅಭಿನಯದ ಮೂಲಕ ಮನೆಮಾತಾದರು. ಕೆಜಿಎಫ್ 2ನಲ್ಲೂ (KGF 2) ನಟಿ ಮಿಂಚಿದ್ದರು. ಪ್ರಶಾಂತ್ ನೀಲ್ (PrashanthNeel) ನಿರ್ದೇಶನದ ಸಿನಿಮಾದಲ್ಲಿ ರೀನಾ ಪಾತ್ರಕ್ಕೆ ಜೀವ ತುಂಬಿದ್ದರು.
ಬಳಿಕ ಚಿಯಾನ್ ವಿಕ್ರಮ್ ಜೊತೆ ‘ಕೋಬ್ರಾ’ (Cobra) ಸಿನಿಮಾದಲ್ಲಿ ನಟಿಸಿದರು. ಸಿನಿಮಾ ಸದ್ದು ಮಾಡದೇ ಇದ್ದರು. ಕೆಜಿಎಫ್ (KGF) ಬ್ಯೂಟಿ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆದರು. ಈಗ ಹೊಸ ಸಿನಿಮಾ ಅವಕಾಶಗಳನ್ನ ನಟಿ ಗಮನ ವಹಿಸುತ್ತಿದ್ದಾರೆ. ಇತ್ತೀಚಿಗೆ ಕೆಜಿಎಫ್ 3 ಕೂಡ ಅನೌನ್ಸ್ ಮಾಡಲಾಗಿದೆ. ಇದನ್ನೂ ಓದಿ:ಪಿಎಂ ನರೇಂದ್ರ ಮೋದಿ- ಫ್ರೆಂಚ್ ಪ್ರೆಸಿಡೆಂಟ್ ಜೊತೆ ಮ್ಯಾಡಿ ಊಟ
ಈ ನಡುವೆ ನಟಿ ಶ್ರೀನಿಧಿ ತಮ್ಮ ಮದುವೆ ವಿಚಾರಕ್ಕೆ ಸಂಚಲನ ಮೂಡಿಸಿದ್ದಾರೆ. ಹೇಳದೇ ಕೇಳದೇ ನಟಿ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ನೆಟ್ಟಿಗರು ಬೇಸರ ಹೊರಹಾಕಿದ್ದಾರೆ. ಶ್ರೀನಿಧಿಗೆ ಈ ಮೊದಲೇ ಮದುವೆ ಆಗಿತ್ತಾ? ಅಥವಾ ಸದ್ದಿಲ್ಲದೇ ಮದುವೆ ಆಗಿಬಿಟ್ರಾ? ಒಂದು ಫೋಟೊ ಕೂಡ ಹೊರಗೆ ಬರಲಿಲ್ಲವಲ್ಲ ಅಂತೆಲ್ಲಾ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಆಕೆಯ ಹೊಸ ಇನ್ಸ್ಟಾಗ್ರಾಂ ಪೋಸ್ಟ್. ಆಕೆ ಹಂಚಿಕೊಂಡಿರುವ ಎರಡು ಫೋಟೊಗಳು ಇಂತಾದೊಂದು ಚರ್ಚೆಗೆ ಕಾರಣವಾಗಿದೆ. 4 ದಿನಗಳ ಹಿಂದೆ ಶ್ರೀನಿಧಿ ಶೆಟ್ಟಿ ಎರಡು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಹಳದಿ ಬಣ್ಣದ ಸೆಲ್ವಾರ್‌ನಲ್ಲಿ ಫೋನ್‌ನಲ್ಲಿ ಸೆಲ್ಫಿ ಹಿಡಿದುಕೊಂಡಿದ್ದಾರೆ. ಆದರೆ ಆ ಫೋಟೊಗಳಲ್ಲಿ ಆಕೆಯ ಬೈತಲೆಯಲ್ಲಿ ಸಿಂಧೂರ ಇಟ್ಟುಕೊಂಡಿದ್ದಾರೆ. ಸಾಮಾನ್ಯವಾಗಿ ಮದುವೆಯಾದ ಮಹಿಳೆಯರು ಮಾತ್ರ ಈ ರೀತಿ ಬೈತಲೆಯಲ್ಲಿ ಕುಂಕುಮ ಇಟ್ಟುಕೊಳ್ಳುತ್ತಾರೆ. ಅದೇ ಕಾರಣಕ್ಕೆ ಕೆಲವರು ಶ್ರೀನಿಧಿಗೆ ಮದುವೆ ಆಗಿಬಿಡ್ತಾ?ಎಂದು ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ.
ಅಂದಹಾಗೆ ಶ್ರೀನಿಧಿ ಶೆಟ್ಟಿಗೆ ಮದುವೆ ಆಗಿದೆ ಅನ್ನುವುದು ಸುಳ್ಳು. ಆದರೆ ಕೆಲ ಯುವತಿಯರು ಮದುವೆ ಆಗದಿದ್ದರೂ ಬೈತಲೆಗೆ ಕುಂಕುಮ ಇಟ್ಟುಕೊಳ್ಳುತ್ತಾರೆ. ಅದೇ ರೀತಿ ನಟಿ ಶ್ರೀನಿಧಿ ಶೆಟ್ಟಿ ಕೂಡ ಕುಂಕುಮ ಹಚ್ಚಿಕೊಂಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿ ಕ್ಲಾರಿಟಿ ಕೊಡುತ್ತಿದ್ದಾರೆ. ಒಟ್ನಲ್ಲಿ ಆಕೆಯ ಪೋಸ್ಟ್ ಕಾಮೆಂಟ್ ಬಾಕ್ಸ್‌ನಲ್ಲಿ ಈ ಬಗ್ಗೆ ಭಾರೀ ಚರ್ಚೆಯೇ ನಡೆಯುತ್ತಿದೆ. ಈ ಬಗ್ಗೆ ಶ್ರೀನಿಧಿ ಪ್ರತಿಕ್ರಿಯೆ ನೀಡುತ್ತಾರಾ? ಕಾದು ನೋಡಬೇಕಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ (KGF) ಸರಣಿ ಸಿನಿಮಾಗಳು ರಿಲೀಸ್ ಆಗಿ ಹಲವು ವರ್ಷಗಳೇ ಕಳೆದಿವೆ. ಆದರೂ, ಅದರ ಕ್ರೇಜ್ ಇನ್ನೂ ನಿಂತಿಲ್ಲ. ಕೆಜಿಎಫ್ 1 ಮತ್ತು ಕೆಜಿಎಫ್ 2 ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಕಮಾಯಿ ಮಾಡಿದವು. ಇದೀಗ ಈ ಎರಡೂ ಚಿತ್ರಗಳು ಜಪಾನ್ (Japan) ಭಾಷೆಗೆ ಡಬ್ ಆಗಿ ರಿಲೀಸ್ ಆಗುತ್ತಿವೆ.
ಕೆಜಿಎಫ್ 1 ಮತ್ತು ಕೆಜಿಎಫ್ 2 ಎರಡೂ ಸಿನಿಮಾಗಳನ್ನು ಈಗಾಗಲೇ ಜಪಾನ್ ಭಾಷೆಗೆ ಡಬ್ ಮಾಡಿದ್ದು, ಏಕಕಾಲಕ್ಕೆ ಎರಡೂ ಚಿತ್ರಗಳು ಜುಲೈ 14ರಂದು ಬಿಡುಗಡೆ (Release) ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಜಪಾನ್ ನಲ್ಲಿ ಏಕಕಾಲಕ್ಕೆ ಸರಣಿ ಚಿತ್ರಗಳು ಬಿಡುಗಡೆ ಆಗುತ್ತಿರುವುದು ವಿಶೇಷ. ಈಗಾಗಲೇ ಈ ಕುರಿತು ಜಪಾನ್ ನಲ್ಲಿ ಪ್ರಚಾರ ಕಾರ್ಯ ಕೂಡ ಶುರು ಮಾಡಲಾಗಿದೆ. ಕೆಜಿಎಫ್ 1 ಸಿನಿಮಾ 91 ಶೋಗಳು ಹಾಗೂ ಕೆಜಿಎಫ್ 2 ಸಿನಿಮಾದ 85 ಶೋಗಳು ಮುಂಗಡವಾಗಿ ಈಗಾಗಲೇ ಬುಕ್ ಆಗಿವೆ.
ಕೆಜಿಎಫ್ ಚಿತ್ರಗಳ ಮೂಲಕ ಪ್ಯಾನ್ ಇಂಡಿಯಾ ನೋಡುಗರನ್ನು ತಲುಪಿದ್ದರು ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಟ ಯಶ್ (Yash). ಕೆಜಿಎಫ್ 1 ಮಾಡಿದ ಮೋಡಿಯೇ ಕೆಜಿಎಫ್ 2 ಚಿತ್ರಕ್ಕೆ ಸಾಕಷ್ಟು ಪ್ಲಸ್ ಪಾಯಿಂಟ್ ಆಯಿತು. ಮೊದಲ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ತಂದುಕೊಟ್ಟ ಹಣದ ಎರಡರಷ್ಟು ಪಾರ್ಟ್ 2 ಮಾಡಿತು. ಹೀಗಾಗಿ ಎರಡೂ ಚಿತ್ರಗಳ ಮೂಲಕ ಕೇವಲ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಕನ್ನಡ ಚಿತ್ರಗಳಿಗೆ ಬೇಡಿಕೆ ಬಂತು. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ನಟಿ, ಡೆಲಿವರಿ ಆಗ್ತಿದ್ದಂತೆ ಶೂಟಿಂಗ್ ಹಾಜರಾದ ಮಮತಾ
ಆರ್.ಆರ್.ಆರ್ ಸಿನಿಮಾದ ನಂತರ ದಕ್ಷಿಣದ ಮತ್ತೊಂದು ಸಿನಿಮಾ ಜಪಾನ್ ಭಾಷೆಯಲ್ಲಿ ರಿಲೀಸ್ ಆಗುತ್ತಿರುವುದು ಗುರುತಿಸಬೇಕಾದ ಸಂಗತಿ. ಜುಲೈ 14 ರಂದು ರಿಲೀಸ್ ಆಗುತ್ತಿರುವ ಚಿತ್ರಕ್ಕಾಗಿ ಯಶ್ ಜಪಾನ್ ಭಾಷೆಯಲ್ಲೇ ವಿಡಿಯೋವೊಂದನ್ನು ಮಾಡಿ, ಸಿನಿಮಾ ನೋಡುವಂತೆ ಅಲ್ಲಿನ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಆರ್.ಆರ್.ಆರ್ ಸಿನಿಮಾ ಕೂಡ ಈ ಹಿಂದೆ ಜಪಾನ್ ಭಾಷೆಯಲ್ಲಿ ರಿಲೀಸ್ ಆಗಿತ್ತು. ನೂರು ಕೋಟಿಗೂ ಅಧಿಕ ಹಣವನ್ನು ಬಾಕ್ಸ್ ಆಫೀಸಿನಲ್ಲಿ ಲೂಟಿ ಮಾಡಿತ್ತು. ಆ ಸಿನಿಮಾ ಗೆಲುವು ಕಂಡ ಬೆನ್ನಲ್ಲೇ ಕೆಜಿಎಫ್ ಸಿನಿಮಾವನ್ನೂ ಜಪಾನ್ ಭಾಷೆಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಇದೀಗ ನಾಳೆ ಸಿನಿಮಾ ರಿಲೀಸ್ ಆಗುತ್ತಿದೆ.
ಕೆಜಿಎಫ್ (KGF) ಬ್ಯೂಟಿ ಮೌನಿ ರಾಯ್ (Mouni Roy) ಅವರು ಬಾಲಿವುಡ್ ರಂಗದಲ್ಲಿ ನಾಯಕಿ, ಐಟಂ ಡ್ಯಾನ್ಸ್ ಅಂತಾ ಬ್ಯುಸಿಯಾಗಿದ್ದಾರೆ. ಇದೀಗ ಸಿನಿಮಾ ವಿಚಾರದ ಬದಲು ವೈಯಕ್ತಿಕ ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ. ಪಾಸ್‌ಪೋರ್ಟ್ ಇಲ್ಲದೇ ವಿಮಾನ ನಿಲ್ದಾಣ ಪ್ರವೇಶಿಸಿದ ಮೌನಿಗೆ ಅಧಿಕಾರಿಗಳು ಮನೆಗೆ ಕಳುಹಿಸಿದ್ದಾರೆ. ಇದೀಗ ಅವರ ಸಾಮಾಜಿಕ ಜಾಲತಾಣ ತುಂಬೆಲ್ಲಾ ಸದ್ದು ಮಾಡುತ್ತಿದೆ.
ಯಶ್ (Yash) ಜೊತೆ ಗಲಿ ಗಲಿ ಮೇ ಸಾಂಗ್‌ನಲ್ಲಿ ಸೊಂಟ ಬಳುಕಿಸಿದ್ದ ನಾಗಿನ್ (Naagin) ಬ್ಯೂಟಿ ಮೌನಿ ರಾಯ್ ಅವರು ಅಕ್ಷಯ್ ಕುಮಾರ್ (Akshay Kumar) ನಟನೆಯ ಗೋಲ್ಡ್ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬೆಂಗಳೂರು (Bangalore) ಮೂಲದ ಉದ್ಯಮಿ ಸೂರಜ್ ಮದುವೆಯಾಗಿ ಖುಷಿಯಿಂದ ಸಂಸಾರ ಸಾಗಿಸುತ್ತಿದ್ದಾರೆ. ಆಗಾಗ ವೇಕೆಷನ್ ಅಂತಾ ದೂರದ ದೇಶಕ್ಕೆ ಹೋಗಿ ಬರುತ್ತಾರೆ.
ಜುಲೈ 12ರಂದು (ಇಂದು) ಮೌನಿ ರಾಯ್ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ ಅವರ ಫೋಟೋ ಮತ್ತು ವೀಡಿಯೋಗಾಗಿ ಪಾಪರಾಜಿಗಳು ಮುತ್ತಿಗೆ ಹಾಕುತ್ತಾರೆ. ಇತ್ತೀಚೆಗೆ ಅದೇ ರೀತಿ ಆಯಿತು. ಪಾಪರಾಜಿಗಳ ಕಡೆಗೆ ಕೈ ಬೀಸಿ, ನಂತರ ಅವರು ವಿಮಾನ ನಿಲ್ದಾಣ ಪ್ರವೇಶಿಸಲು ಮುಂದಾದರು. ಆಗ ಅಲ್ಲಿದ್ದ ಅಧಿಕಾರಿಯು ಪಾಸ್‌ಪೋರ್ಟ್ ತೋರಿಸುವಂತೆ ಸೂಚಿಸಿದ್ದಾರೆ. ಬ್ಯಾಗ್ ಪೂರ್ತಿ ಹುಡುಕಾಡಿದರೂ ಮೌನಿ ರಾಯ್‌ಗೆ ಪಾಸ್ ಪೋರ್ಟ್ ಸಿಕ್ಕಿಲ್ಲ. ಹಾಗಾಗಿ ಅವರಿಗೆ ವಿಮಾನ ನಿಲ್ದಾಣದಲ್ಲಿ ಪ್ರವೇಶ ನಿರ್ಬಂಧಿಸಲಾಯಿತು. ಬೇರೆ ಆಯ್ಕೆ ಇಲ್ಲದೇ ಮೌನಿ ರಾಯ್ ವಾಪಸ್ ಮನೆ ಕಡೆ ಹೊರಟರು. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್
ಈ ವಿಡಿಯೋ ವೈರಲ್ ಆದ ಬಳಿಕ ಮೌನಿ ರಾಯ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಶೂಟಿಂಗ್, ಟ್ರಿಪ್ ಅಂತಾ ಬ್ಯುಸಿಯಿರುವ ಈ ನಟಿ ಪಾಸ್‌ಪೋರ್ಟ್ ಇಟ್ಟುಕೊಳ್ಳುವುದನ್ನೇ ಮೌನಿ ರಾಯ್ ಮರೆತಿದ್ದಾರೆ ಎಂದು ಅನೇಕರು ಕಾಲೆಳೆದಿದ್ದಾರೆ.
ಕನ್ನಡದ ಕೆಜಿಎಫ್ ನಟಿ ರೂಪಾ ರಾಯಪ್ಪ (Roopa Rayappa) ದಿನಕಳೆದಂತೆ ಮತ್ತಷ್ಟು ಹಾಟ್ ಆಗ್ತಿದ್ದಾರೆ. ಕಳೆದ ಬಾರಿ ಟೈಲರ್ ಲುಕ್ ಸಖತ್ ಗ್ಲ್ಯಾಮರಸ್ ಆಗಿ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಸಂಚಲನ ಮೂಡಿಸಿದ್ರು. ಈಗ ಬಿಗ್ ಬಾಸ್ ಸಾನ್ಯ ಅಯ್ಯರ್‌ಗೆ(Saanya Iyer) ನಟಿ ರೂಪಾ ರಾಯಪ್ಪ ಟಕ್ಕರ್ ಕೊಡ್ತಿದ್ದಾರೆ. ಈಗ ಇಲ್ಲಿ ಮೈ ತೋರಿಸೋಕು ಕಾಂಪಿಟೇಶನ್ ಶುರುವಾಗಿದೆ. ಸಾನ್ಯರನ್ನೇ ಹಿಂದಿಕಿದ್ದಾರೆ ನಟಿ ರೂಪ ರಾಯಪ್ಪ. ಹೊಸ ಫೋಟೋಶೂಟ್‌ನಲ್ಲಿ ರೂಪಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಯಶ್ (Yash) ನಟನೆಯ ‘ಕೆಜಿಎಫ್’ (KGF) ಸಿನಿಮಾದಲ್ಲಿ ಡಿ ಗ್ಲಾಮ್ ಲುಕ್‌ನಲ್ಲಿ ರೂಪಾ ರಾಯಪ್ಪ ಅವರು ಶಾಂತಿ ಪಾತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಪುಟ್ಟ ಪಾತ್ರವಾಗಿದ್ದರು. ಶಾಂತಿ ರೋಲ್ ಅನ್ನ ಕೆಜಿಎಫ್ ಚಿತ್ರದ ಫ್ಯಾನ್ಸ್ ಇನ್ನೂ ನೆನಪಿಟ್ಟುಕೊಂಡಿದ್ದಾರೆ. ಚಿತ್ರದಲ್ಲಿ ಗ್ಲ್ಯಾಮರ್ ಇಲ್ಲದ ಪಾತ್ರದಲ್ಲಿ ನಟಿಸಿರೋ ರೂಪಾ ಇದೀಗ ಗ್ಲ್ಯಾಮರಸ್ ಆಗಿ ಹಾಟ್ & ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ.
ʼಕೆಜಿಎಫ್ʼ ಶಾಂತಿ ರೋಲ್‌ನಲ್ಲಿ ನೋಡಿದ್ದ ಅಭಿಮಾನಿಗಳಿಗೆ ಈಗೀನ ರೂಪಾ ಹಾಟ್ ಲುಕ್ ನೋಡಿ ಕಳೆದು ಹೋಗಿದ್ದಾರೆ. ಇವ್ರು ಅವರೇನಾ ಅಂತಾ ಕೇಳ್ತಿದ್ದಾರೆ. ಅಷ್ಟರ ಮಟ್ಟಿಗೆ ರೂಪಾ ರಾಯಪ್ಪ ಬದಲಾದ ಅವತಾರದಲ್ಲಿ ಕಾಣಿಸಿಕೊಂಡಿರೋದು ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ. ಕೆಲದಿನಗಳ ಹಿಂದೆ ಹಳದಿ ಬಣ್ಣದ ಬಿಕಿನಿ- ಶಾರ್ಟ್ ಸ್ಕರ್ಟ್ ಧರಿಸಿ, ಟೈಲರ್ ಲುಕ್‌ನಲ್ಲಿರೋ ಹಸಿಬಿಸಿ ಫೋಟೋಗಳನ್ನ ನಟಿ ಶೇರ್ ಮಾಡಿದ್ದರು. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈಗ ಸಾನ್ಯಗಿಂತ ಬೋಲ್ಡ್ ಆಗಿ ರೂಪಾ ಫೋಟೋಶೂಟ್ ಮಾಡಿಸಿ ಪಡ್ಡೆಹುಡುಗರ ಕನಸಿನ ರಾಣಿ ಸದ್ದು ಮಾಡ್ತಿದ್ದಾರೆ. ಸಾನ್ಯ ಅಯ್ಯರ್ ಅವರು ಉತ್ತಮ ಅವಕಾಶಕ್ಕಾಗಿ ಬಿಕಿನಿ ಧರಿಸಿ, ಬಾಲಿವುಡ್‌ನ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಕೈಯಲ್ಲಿ ಫೋಟೋಶೂಟ್ ಮಾಡಿಸಿದ್ದರು. ಈಗ ಸಾನ್ಯಗೆ ಟಕ್ಕರ್ ಕೊಟ್ಟು ಹಾಟ್ ಹಾಟ್ ಆಗಿ ‘ಕೆಜಿಎಫ್’ ಖ್ಯಾತಿಯ ರೂಪಾ ಫೋಟೋ ಕ್ಲಿಕ್ಕಿಸಿದ್ದಾರೆ.
ನೀಲಿ ಬಣ್ಣ ಶರ್ಟ್ – ಶಾಟ್ಸ್ ಧರಿಸಿ ಕೊಂಚ ಎದೆ ಕಾಣುವಂತೆ ಮಸ್ತ್ ಆಗಿ ಕ್ಯಾಮೆರಾ ಕಣ್ಣಿಗೆ ರೂಪಾ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಚಸ್ಮಾ ಕೂಡ ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ರೂಪಾ ರಾಯಪ್ಪ ಬಗೆ ಬಗೆಯ ಲುಕ್‌ನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಬಿಕಿನಿ ಧರಿಸಿ ಹಾಟ್ ಆಗಿ ಕಾಣಿಸಿಕೊಂಡ ‘ಬಿಗ್ ಬಾಸ್’ ಜಯಶ್ರೀ
ನಟಿ ರೂಪಾ ರಾಯಪ್ಪ ಅವರು ಸ್ಯಾಂಡಲ್‌ವುಡ್‌ನಲ್ಲಿ ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. ಸದ್ಯ ‘ದಿ ಜಡ್ಜ್‌ಮೆಂಟ್ʼ ಎಂಬ ಸಿನಿಮಾದಲ್ಲಿ ರವಿಚಂದ್ರನ್, ಧನ್ಯಾ ರಾಮ್‌ಕುಮಾರ್ ಮತ್ತು ದಿಗಂತ್ (Diganth) ಜೊತೆ ರೂಪಾ ರಾಯಪ್ಪ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದಿಷ್ಟು ಸಿನಿಮಾಗಳು ಮಾತುಕತೆ ಹಂತದಲ್ಲಿದೆ. ಯಶ್ ಸಿನಿಮಾದಲ್ಲಿ ನಟಿಸಿದ್ದ ನಟಿಗೆ ಲಕ್ ಬದಲಾಗಿದೆ. ಒಳ್ಳೆಯ ಪಾತ್ರಗಳು ಅವರನ್ನ ಅರಸಿ ಬರುತ್ತಿದೆ.