Tag: ಕೆಜಿಎಫ್

  • ಭಾರೀ ಮಳೆಗೆ ಕೋಲಾರದಲ್ಲಿ ಭೂ ಕುಸಿತವಾಗಿ ಹೊಂಡ ನಿರ್ಮಾಣ

    ಭಾರೀ ಮಳೆಗೆ ಕೋಲಾರದಲ್ಲಿ ಭೂ ಕುಸಿತವಾಗಿ ಹೊಂಡ ನಿರ್ಮಾಣ

    ಕೋಲಾರ: ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಭೂ ಕುಸಿತ ಉಂಟಾಗಿ ಹೊಂಡವೇ ನಿರ್ಮಾಣವಾಗಿರುವ ಘಟನೆ ಕೋಲಾರದ ಕೆಜಿಎಫ್‍ನ ಉರಿಗಾಂ ಬಳಿಯಿರುವ ಮಂಜುನಾಥ ನಗರದಲ್ಲಿ ನಡೆದಿದೆ.

    ನಿನ್ನೆ ರಾತ್ರಿ ಬಿದ್ದ ಮಳೆಯಿಂದ ಸುಮಾರು 50 ರಿಂದ 70 ಅಡಿಗಳಷ್ಟು ಭೂಮಿ ಕುಸಿದು ಹೊಂಡ ನಿರ್ಮಾಣವಾಗಿದ್ದು, ಘಟನೆಯಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಭೂ ಕುಸಿತದಿಂದ ಉಂಟಾಗಿರುವ ಹೊಂಡವನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

    ಈ ಹಿಂದೆ ಕೆಜಿಎಫ್‍ನಲ್ಲಿ ಬಿಜಿಎಂಎಲ್ ಮೈನಿಂಗ್ ನೆಡದಿದ್ದು ಇದರ ಪರಿಣಾಮದಿಂದಲೇ ಭೂ ಕುಸಿತವಾಗಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಘಟನೆ ಸಂಭವಿಸಿದ್ದರೂ ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ. ಹೀಗಾಗಿ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.